ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವತಿಯಿಂದ 2026ನೇ ನವೆಂಬರ್ 21ರ ಶನಿವಾರ ‘ಗ್ರಾಹಕ ಸಂವಾದ ಸಭೆ’ಯನ್ನು (Customer Interaction Meeting) ಆಯೋಜಿಸಲಾಗಿದೆ.
ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂನ ಎಲ್ಲಾ ಕಾರ್ಯ ಮತ್ತು ಪಾಲನಾ (O&M) ಉಪವಿಭಾಗಗಳಲ್ಲಿ ಈ ಸಭೆಯು ನಡೆಯಲಿದ್ದು, ನವೆಂಬರ್ 21ರಂದು ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 5:30 ರವರೆಗೆ ಸಭೆಯನ್ನು ನಿಗದಿಪಡಿಸಲಾಗಿದೆ.
ಈ ಸಭೆಯಲ್ಲಿ ಗ್ರಾಹಕರು ನೇರವಾಗಿ ಪಾಲ್ಗೊಂಡು, ತಮ್ಮ ವಿದ್ಯುತ್ ಸಂಬಂಧಿತ ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಬೆಸ್ಕಾಂ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚಿಸುವ ಮೂಲಕ ಸ್ಥಳದಲ್ಲೇ ಪರಿಹರಿಸಿಕೊಳ್ಳಬಹುದು.
ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಸಂವಾದ ಸಭೆಯಲ್ಲಿ ಪಾಲ್ಗೊಂಡು ಸಭೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನುವಾರುಗಳಿಗೆ ರೋಗ ತಡೆ ಲಸಿಕೆ ಸಮರ್ಪಕವಾಗಿ ತಲುಪಿಸಿ: ಸಚಿವ ಪುಟ್ಟರಂಗಶೆಟ್ಟಿ

