ಕರ್ನಾಟಕ ರಾಜ್ಯ ಸಚಿವ ಸಂಪುಟವು ಹಾಲಿನ ದರವನ್ನು ಲೀಟರ್ ಗೆ 8 ರೂ. ಹೆಚ್ಚಿಸಬೇಕೆಂದೂ(the price of milk should be increased by ₹8 per litre), ಹಾಗೆ ಬಸ್ಸಿನ ದರವನ್ನು ಸಹ ಹೆಚ್ಚಿಸಬೇಕೆಂದೂ ಚರ್ಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಜನ ಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಬಾಡಿಗೆ ದರ, ಶಿಕ್ಷಣ ಮತ್ತು ಆರೋಗ್ಯ ದರದಲ್ಲಿ ಹೆಚ್ಚಳ ಇತ್ಯಾದಿಗಳಿಂದ ಹೈರಾಣಾಗಿದ್ದಾರೆ. ಅಂತಹ ಸಂದರ್ಭದಲ್ಲಿ ಪುನ: ಹಾಲು ಮತ್ತು ಬಸ್ ದರ ಹೆಚ್ಚಿಸಿದಲ್ಲಿ ಜನರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ.
ಆದ್ದರಿಂದ ಅಗತ್ಯ ವಸ್ತುಗಳ ದರ ಹೆಚ್ಚಿಸುವುದನ್ನು ಕೈ ಬಿಡಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ.

