Home Blog Page 88

ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್‌ರವರಿಗೆ ಪ್ರಶಸ್ತಿ

ಬೆಂಗಳೂರು:
ಬೆಂಗಳೂರಿನ ಸುಮ್ಮನಹಳ್ಳಿ ಜಂಕ್ಷನ್ ಹತ್ತಿರವಿರುವ ಡಾ.ಬಾಬು ಜಗಜೀವನ್‌ರಾಮ್ ಸಂಶೋಧನಾ ಸಂಸ್ಥೆಯಲ್ಲಿ ಜೂನ್.22ರಂದು (ಇಂದು) ಭಾನುವಾರ ಮಧ್ಯಾಹ್ನ 2 ಗಂಟೆಗೆ ಡಾ. ಬಾಬು ಜಗಜೀವನ್‌ರಾಮ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಹೆಚ್.ಡಿ.ದೇವೇಗೌಡ ಅಭಿನಂದನಾ ಸಮಿತಿ, ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಸನ್ಯಾನ್ಮ ಶ್ರೀಹೆಚ್.ಡಿ.ದೇವೇಗೌಡರ ಅಭಿನಂದನಾ ಸಮಾರಂಭದಲ್ಲಿ ಶ್ರೀ.ಹೆಚ್.ಡಿ.ದೇವೇಗೌಡ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಲ್ಲಿ ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯಲ್ಲಿ ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ, ಮಾಜಿ ವಿಧಾನಪರಿಷತ್ ಸದಸ್ಯರಾದ ದೊಡ್ಡ ರಂಗೇಗೌಡ, ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ಹಲವು ಹಲವು ರಂಗಗಳಲ್ಲಿ ಸಾಧನೆ ಮಾಡಿದ 90ಕ್ಕೂ ಹೆಚ್ಚು ಸಾಧಕರನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.

ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದಕರ್ನಾಟಕ ಶಾಸ್ತ್ರೀಯ ಸಂಗೀತ 

ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಜೂನ್ 22, ಭಾನುವಾರ ಸಂಜೆ 5-30ಕ್ಕೆ “ಕರ್ನಾಟಕ ಶಾಸ್ತ್ರೀಯ ಸಂಗೀತ”.
ಗಾಯನ : ವಿದುಷಿ ಶ್ರೀಮತಿ ಶರಣ್ಯಾ ನಂದನ್,
ಪಿಟೀಲು : ಕು|| ಹೃಷಿತಾ ಕೇದಗೆ,
ಮೃದಂಗ : ವಿದ್ವಾನ್ ಶ್ರೀ ಅಪ್ರಮೇಯ.
ಸ್ಥಳ : #48, ಮೊದಲನೇ ಮಹಡಿ,’ಸುಮಧ್ವ ಧಾಮ’, 6ನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061

ಯೋಗಾಭ್ಯಾಸ ಮಾಡಿ ಆರೋಗ್ಯಕರ, ಶಾಂತಿಯುತ, ಸಮತೋಲಿತ ಜಗತ್ತನ್ನು ಸೃಷ್ಟಿಸೋಣ: ರಾಜ್ಯಪಾಲರು

ಬೆಂಗಳೂರು 21.06.2025: “ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ, ಇವು ಭೂಮಿಯ ಸುಸ್ಥಿರ ಅಭಿವೃದ್ಧಿ ಮತ್ತು ರಕ್ಷಣೆಗೆ ಅತ್ಯಗತ್ಯ. ಆದ್ದರಿಂದ, “ಒಂದು ಭೂಮಿ, ಒಂದು ಆರೋಗ್ಯ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯೋಗವನ್ನು ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯವಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.


“ಆಯುಷ್ ಇಲಾಖೆಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ  ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ” ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಯೋಗವು ನಮ್ಮನ್ನು ಸಂಯಮ, ಸಮತೋಲನ ಮತ್ತು ಪ್ರಕೃತಿಯ ಕಡೆಗೆ ಸಂವೇದನಾಶೀಲರನ್ನಾಗಿ ಮಾಡುತ್ತದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ” ಎಂದು ತಿಳಿಸಿದರು.

“ಯೋಗವು ಎಲ್ಲರನ್ನೂ ಒಗ್ಗೂಡಿಸುವ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮೂಲ ಮನೋಭಾವವನ್ನು ಹೊಂದಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಒಂದು ಉತ್ತಮ ಮಾರ್ಗವಾಗಿದೆ. ಇದು ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ಮಾನವೀಯತೆಗೆ ಭರವಸೆಯ ಕಿರಣವಾಗಿದೆ. ಇಡೀ ಜಗತ್ತು ಯೋಗದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಮತ್ತು ಅದನ್ನು ಅಳವಡಿಸಿಕೊಂಡಿದೆ” ಎಂದು ಹೇಳಿದರು.

“ಜೂನ್ 21 ರಂದು, ಇಡೀ ಜಗತ್ತು ಅತ್ಯಂತ ದೀರ್ಘವಾದ ದಿನದ ಸೂರ್ಯೋದಯವನ್ನು ಸ್ವಾಗತಿಸುತ್ತಿರುವಾಗ, ನಾವು ಯೋಗದ ಮೂಲಕ ನಮ್ಮೊಳಗಿನ ಸೂರ್ಯನನ್ನು ಜಾಗೃತಗೊಳಿಸುತ್ತೇವೆ ಮತ್ತು ಒತ್ತಡದಿಂದ ಸಮತೋಲನಕ್ಕೆ, ಆತಂಕದಿಂದ ಮನಸ್ಸಿನ ಸ್ಥಿರತೆಗೆ ಮತ್ತು ಅಸಮತೋಲಿತ ಜೀವನದಿಂದ ಪರಿಪೂರ್ಣ ಆರೋಗ್ಯಕ್ಕೆ ನಮ್ಮನ್ನು ಕರೆದೊಯ್ಯುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ. 11ನೇ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ “ಒಂದು ಭೂಮಿಗೆ ಯೋಗ, ಒಂದು ಆರೋಗ್ಯ”. “ಒಂದು ಭೂಮಿ, ಒಂದು ಆರೋಗ್ಯ” ಎಂಬ ಕಲ್ಪನೆಯು ಎಲ್ಲಾ ಜೀವಿಗಳು, ಪರಿಸರ ಮತ್ತು ಪ್ರಕೃತಿ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ಭಾವನೆಯನ್ನು ಅರಿತುಕೊಳ್ಳಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಯೋಗವಾಗಿದೆ ” ಎಂದು ತಿಳಿಸಿದರು.

ಇಂದು ಜಗತ್ತು ಹವಾಮಾನ ಬದಲಾವಣೆ, ಮಾನಸಿಕ ಒತ್ತಡ, ಜೀವನಶೈಲಿ ರೋಗಗಳು ಮತ್ತು ಪರಿಸರ ಅಸಮತೋಲನದಿಂದ ಬಳಲುತ್ತಿರುವಾಗ, ಯೋಗವು ಒಬ್ಬರ ಆರೋಗ್ಯವನ್ನು ಬಲಪಡಿಸುವುದಲ್ಲದೆ, ಭೂಮಿಯೊಂದಿಗಿನ ನಮ್ಮ ಸಂಪರ್ಕವನ್ನು ಗಾಢವಾಗಿಸುತ್ತದೆ. “ಒಂದು ಆರೋಗ್ಯ” ಎಂದರೆ ಮಾನವರ ಯೋಗಕ್ಷೇಮ ಮಾತ್ರವಲ್ಲದೆ ಎಲ್ಲಾ ಪ್ರಾಣಿ, ಸಸ್ಯ ಮತ್ತು ಪರಿಸರದ ರಕ್ಷಣೆಯೂ ಆಗಿದೆ. ನಾವೆಲ್ಲರೂ ಒಟ್ಟಾಗಿ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ ಮತ್ತು ಆರೋಗ್ಯಕರ, ಶಾಂತಿಯುತ ಮತ್ತು ಸಮತೋಲಿತ ಜಗತ್ತನ್ನು ಸೃಷ್ಟಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ನ ಸಭಾಪತಿ ಶ್ರೀ ಬಸವರಾಜ್ ಎಸ್ ಹೊರಟ್ಟಿ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಟರಾದ ಅನಿರುದ್, ಕಿಶನ್, ನಟಿ ಸಾನಿಯಾ ಅಯ್ಯರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳು ದೇವರ ಸಮಾನ, ಅವರಲ್ಲಿ ಜಾತಿ, ಮತ, ಪಂಥ ಭೇದವಿರುವುದಿಲ್ಲ- ಬಿ.ವೈ.ವಿಜಯೇಂದ್ರ

ಬೆಂಗಳೂರು :ಜಯನಗರದ ಶ್ರೀ ಚಂದ್ರಗುಪ್ತ ಮೌರ್ಯ(ಶಾಲಿನಿ ಆಟದ)ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ 13ನೇ ವರ್ಷದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿಯರಿಗೆ ಉಚಿತವಾಗಿ 2ಲಕ್ಷ ನೋಟ್ ಪುಸ್ತಕಗಳ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಅನಾಥ ಆಶ್ರಮದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ.

ಶಾಸಕರು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರರವರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು, ರಕ್ಷಾ ಫೌಂಡೇಷನ್ ಸಂಸ್ಥಾಪಕರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ಶಾಸಕರಾದ ಉದಯ್ ಗರುಡಾಚಾರ್ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟ ವಸಿಷ್ಟ ಸಿಂಹರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನೋಟ್ ಪುಸ್ತಕ, ಲ್ಯಾಪ್ ಟಾಪ್ ಗಳನ್ನು ವಿತರಿಸಿದರು.

ಬಿ.ವೈ.ವಿಜಯೇಂದ್ರರವರು ಮಾತನಾಡಿ ರಕ್ಷಾ ಫೌಂಡೇಷನ್ ಸ್ಥಾಪಕರಾದ ಶಾಸಕರಾದ ರಾಮಮೂರ್ತಿರವರ ನೇತೃತ್ವದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹ ಸಹಕಾರ ನೀಡುತ್ತಿದ್ದಾರೆ, 11ನೇ ವಿಶ್ವ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಇಂದು. ಭಾರತದ ಯೋಗ ವಿಶ್ವಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂತು. ಮಕ್ಕಳು ದೇವರ ಸಮಾನ, ಅವರ ಮನಸ್ಸಿನಲ್ಲಿ ಯಾವ ಕೆಟ್ಟ ಚಿಂತನೆಯು ಇರುವುದಿಲ್ಲ, ಜಾತಿ ಮತ ಪಂಥ ಭೇದವಿರುವುದಿಲ್ಲ.

ಸಾಧನೆ ಇಲ್ಲದೇ ಹೋದರೆ ಸಾವಿಗೆ ಅರ್ಥವಿಲ್ಲ, ಹುಟ್ಟಿದ ಮೇಲೆ ಸಾಧನೆ ಮಾಡಿ ನಿಲ್ಲಬೇಕು ಎಂದು ಹೇಳಿದರು. ಆರ್.ಅಶೋಕ್ ರವರು ಮಾತನಾಡಿ ಪ್ರತಿ ವರ್ಷ ಅಪರೂಪದ ಕಾರ್ಯಕ್ರಮವನ್ನು ರಕ್ಷಾ ಫೌಂಡೇಷನ್ ಮಾಡುತ್ತಿದೆ, ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದಾರೆ. ಗುರುಗಳು ಪಾಠ ಮಾಡುತ್ತಾರೆ, ತಂದೆ, ತಾಯಿ ಹೇಳಿಕೊಡುತ್ತಾರೆ ಅದರೆ ನಾವೆ ಪರೀಕ್ಷೆ ಬರೆಯಬೇಕು ಯಾರು ನಿಮಗೆ ಸಹಕಾರ ನೀಡುವುದಿಲ್ಲ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದರೆ ಜೀವನದಲ್ಲಿ ಉತ್ತಮ ಅಂಕಗಳಿಸಿ, ಸಾಧನೆ ಮಾಡಬಹುದು ಎಂದು ಹೇಳಿದರು

ಶಾಸಕರಾದ ಸಿ.ಕೆ.ರಾಮಮೂರ್ತಿರವರು ಮಾತನಾಡಿ ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ, ಮಾನ್ಯತೆ ಸಿಗುತ್ತದೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ವಿದ್ಯಾವಂತರಾಗಬೇಕು, ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ. ಶ್ರೀಮಂತ ಕುಟುಂಬದ ಮಕ್ಕಳಿಗೆ ಎಲ್ಲವು ಸಿಗುತ್ತದೆ ಅದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂದು ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ ಮತ್ತು ಉನ್ನತ ವ್ಯಾಸಂಗದ ಅನುಕೂಲಕ್ಕೆ ಲ್ಯಾಪ್ ಟಾಪ್ , ವಿದ್ಯಾರ್ಥಿ ವೇತನ ನೀಡುತ್ತಾ ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.

ಬಿಟ್ಸ್ ಗುರು ತಂಡ ಸಂಗೀತ ಕಾರ್ಯಕ್ರಮ ಮತ್ತು ಪುಟ್ಟರಾಜುರವರ ಜಾದು ಪ್ರದರ್ಶನ ಏರ್ಪಡಿಸಲಾಗಿತ್ತು. ಜಯದೇವ ಆಸ್ಪತ್ರೆಗೆ 2ಲಕ್ಷ ರೂಪಾಯಿ ದೇಣಿಗೆಯನ್ನು ಜಯದೇವ ಆಸ್ಪತ್ರೆ ನಿರ್ದೇಶಕರಾದ ರವೀಂದ್ರನಾಥ್ ರವರಿಗೆ ನೀಡಲಾಯಿತು. ಮಾಜಿ ಪಾಲಿಕೆ ಸದಸ್ಯಕೆ.ಉಮೇಶ್ ಶೆಟ್ಟಿ, ಸೋಮಶೇಖರ್, ಗೋವಿಂದನಾಯ್ಡು,ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ, ಚಂದ್ರಶೇಖರ ರಾಜು, ಬಿಜೆಪಿ ಮುಖಂಡ ತಮ್ಮೇಶ್ ಗೌಡ, ಲಕ್ಷಿಕಾಂತ್, ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ನರೇಶ್ ರವರು ಭಾಗವಹಿಸಿದ್ದರು.

VKNEWS DIGITAL :
ಪತ್ರಿಕಾ ದಿನಾಚರಣೆ – ಒಂದು ವಿಸ್ತೃತ ಚರ್ಚೆ – ದೃಶ್ಯಾವಳಿ ವೀಕ್ಷಿಸಲು ಕ್ಲಿಕ್ ಮಾಡಿ

ಯೋಗದಿಂದ ಸದೃಢ ಆರೋಗ್ಯ ನಿರ್ಮಾಣ: ಡಾ. ಜಾವಿದ ಜಮಾದಾರ

ವಿಜಯಪುರ- ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿ ಯೋಗಕ್ಕಿದೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗನ್ನು ನಿಯಂತ್ರಿಸಬಹುದು ಎಂದು ರಾಷ್ಟ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ ಜಮಾದಾರ ಅಭಿಪ್ರಾಯಪಟ್ಟರು.

ನಗರದ ವಿಶ್ವವಿಖ್ಯಾತ ಗೋಲಗುಮ್ಮಜ ಆವರಣದಲ್ಲಿ ಕೇಂದ್ರ ಸಂಸ್ಕೃತಿ ಮಂತ್ರಾಲಯ, ಭಾರತೀಯ ಪುರಾತತ್ವ ಇಲಾಖೆ, ನವದೆಹಲಿ, ಹಾಗೂ ಭಾರತೀಯ ಪುರಾತತ್ವ ಸಂರಕ್ಷಣೆ ಧಾರವಾಡ ವಲಯ ಇವರ ಸಂಯುಕ್ತ ಆಶ್ರಯದಲ್ಲಿ 11ನೇ ಅಂತರರಾಷ್ಟಿಯ ಯೋಗ ದಿನಾಚರಣೆಯನ್ನು ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಂಘಟಿಸಲಾಗಿತ್ತು.

ಯೋಗವು ಇಂದು ಅನಿವಾರ್ಯವಾಗಿ ಒತ್ತಡದ ಬದುಕಿಗೆ ನೆಮ್ಮದಿ ಜೀವನ ನಡೆಸಲು ಯೋಗವು ಒಂದು ದಿವ್ಯ ರೀತಿಯ ಔಷಧ. ಯೋಗವನ್ನು ನಿತ್ಯವು ಮಾಡುವುದರಿಂದ ಆರೋಗ್ಯಕರ ಸದೃಢ ಮನಸ್ಸು ಸಂಪಾದಿಸಲು ಸಾಧ್ಯ. ಪಾಚೀಮಾತ್ಯ ರಾಷ್ಟçಗಳಲ್ಲಿ ಯೋಗ ಮತ್ತು ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ನಮ್ಮ ದೇಶದಲ್ಲಿಯೂ ಯೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಪ್ರವರ್ದಮಾನಕ್ಕೆ ಬರುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ ಮೌಲ್ಯ ಗಳಿಸಿಕೊಳ್ಳದೆ ಇದ್ದಲ್ಲಿ ವಿದ್ಯೆಗೆ ಯಾವುದೇ ಗೌರವ ಸಿಗುವದಿಲ್ಲ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಯೋಗ ಕಲಿಯುವದರಿಂದ ಉತ್ತಮ ಆರೋಗ್ಯ ಸಾಧ್ಯ ಕಲಿಕೆ ಜೊತೆಗೆ ವಿದ್ಯಾರ್ಥಿಗಳು ಪಠ್ಯೆತರ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕೆಂದರು. ಸದೃಢ ವ್ಯಕ್ತಿ, ಸದೃಢ ಸಮಾಜ, ಸದೃಢ ರಾಷ್ಟç ಪರಿಕಲ್ಪನೆಯೊಂದಿಗೆ ಆರೋಗ್ಯವಂತ ಜೀವನಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಕಾರ್ಯವಾಗಬೇಕೆಂದರು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸಂರಕ್ಷಣೆ ಸಹಾಯಕ ಅಧಿಕಾರಿ ಎಂ.ವಿ. ವಿಜಯಕುಮಾರ ಮಾತನಾಡಿ ರಾಷ್ಟದ 189 ಐತಿಹಾಸಿಕ ಪಾರಂಪರಿಕ ಸ್ಥಳಗಳಲ್ಲಿ ಹಾಗೂ ಧಾರವಾಡ ವಲಯದ ಬದಾಮಿ, ಪಟ್ಟದಕಲ್ಲು, ಐಹೊಳ್ಳೆ, ಗೋಲಗುಮ್ಮಜದಲ್ಲಿ ಅಂತರರಾಷ್ಟಿಯ 11ನೇ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ. ನಮ್ಮ ಪಾರಂಪರಿಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜೊತೆಗೆ ಯುವ ಸಮುದಾಯದಲ್ಲಿ ಯೋಗದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಮಾರಂಭದ ಅದ್ಯಕ್ಷತೆಯನ್ನು ವಹಿಸಿ ಉಪ ಅಧೀಕ್ಷಕ ಪುರಾತತ್ವ ಅಭಿಯಂತರರು ಭಾರತೀಯ ಪುರಾತತ್ವ ಸಂರಕ್ಷಣಾ ಧಾರವಾಡ ವಲಯ ಎನ್.ಬಿ.ಡಿ. ಕೆಂಪೇಗೌಡ ಮಾತನಾಡಿ ಯೋಗ, ಕ್ಷೇಮ ಮತ್ತು ಪರಿಸರ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಹಾಗೂ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೊಗ್ಯವನ್ನು ಹೆಚ್ಚಿಸಲು ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಒಂದುಗೂಡಿಸಿ ಈ ಯೋಗವು ಹೆಚ್ಚಿನ ನಮ್ಯತೆ, ಶಕ್ತಿ ಸಮತೋಲನ ಮತ್ತು ಒತ್ತಡ ಸೇರಿದಂತೆ ವ್ಯಾಪಕ ಶ್ರೇಣಿಯ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿ ನಾವು ಯೋಗಕ್ಕೆ ಶರಣಾಗಬೇಕು. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ. ಅಂತಹ ಒತ್ತಡದಿಂದ ಮುಕ್ತರಾಗಲು ಯೋಗ ಒಂದೇ ಮಾರ್ಗ ಎಂದರು.

ಯೋಗ ಗುರುಗಳಾದ ಸುರೇಶ ಬಿ. ಆನಂದಿ ಅವರು ಯೋಗದ ವಿವಿಧ ಆಯಾಮಗಳ ತರಬೇತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಇವರ ಸಂಭಾಷಣೆಯ ನೇರ ಪ್ರಸಾರವನ್ನು ಪರದೆಯ ಮೇಲೆ ಬಿತ್ತರಿಸಲಾಗಿತ್ತು. ಕುಮಾರಿ ಶಿಫಾ ಯೋಗದ ಮಹತ್ವ ಕುರಿತು ಉಪನ್ಯಾಸ ನೀಡಿದರು. ನಗರದ 20 ಕಾಲೇಜುಗಳಿಂದ ಅಪಾರ ಸಂಖ್ಯೆಯ ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಹಾಗೂ ವಿಶ್ವವಿಖ್ಯಾತ ಗೋಲಗುಮ್ಮಜ ವಿಕ್ಷಣೆಯನ್ನು 11ನೇ ಯೋಗ ದಿನಾಚರಣೆಯ ಅಂಗವಾಗಿ ಉಚಿತ ಪ್ರವೇಶ ಇಡಲಾಗಿದೆ. ಅನೇಕ ಪ್ರವಾಸಿಗರು ಇದರ ಲಾಭವನ್ನು ಪಡೆದರು.
ಕಾರ್ಯಕ್ರಮದ ಮೊದಲಿಗೆ ಸುರೇಶ ಬಿರಾದಾರ ಸ್ವಾಗತಿಸಿದರು ಅಮರದೀಪ ವಂದಿಸಿದರು. ಪ್ರೊ. ರಾಜು ಕಪಾಳೆ ನಿರೂಪಿಸಿದರು.

ಅಭಾಸಾಪ- ನಾಕುತಂತಿ ಷಷ್ಟಿಪೂರ್ತಿ ನಾದ-೫ ವಿಶೇಷ ವ್ಯಾಖ್ಯಾನ ಕಾರ್ಯಕ್ರಮ

ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂಬುದನ್ನು ಕನ್ನಡಿಗರು ಎಲ್ಲೆಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ೧೯೬೪ರಲ್ಲಿ  ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿದ “ನಾಕುತಂತಿ” ಕೃತಿಗೆ ೧೯೭೪ರಲ್ಲಿ ಜ್ಞಾನಪೀಠ ಲಭಿಸಿದೆ ಎನ್ನುವುದು ತಿಳಿದ ವಿಚಾರವೆ. ಈ ಕೃತಿ ರಚನೆಯಾಗಿ ಅರವತ್ತು ವರ್ಷಗಳಾಗಿದ್ದು, ಜ್ಞಾನಪೀಠ ಪುರಸ್ಕೃತಗೊಂಡು ಐವತ್ತು ವರ್ಷ ತುಂಬುತ್ತಿದೆ. ಈ ನೆನಪಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮಹಾನಗರ ಘಟಕದ ವತಿಯಿಂದ ‘ನಾಕುತಂತಿ ಷಷ್ಟಿಪೂರ್ತಿ’ ಸಂಭ್ರಮಾಚರಣೆಯನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದೆ. ಹೆಸರಾಂತ ಇತಿಹಾಸಕಾರರೂ ವಿಮರ್ಶಕರೂ ಆದ ಡಾ. ಜಿ. ಬಿ. ಹರೀಶರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ೧೨ ತಿಂಗಳು ಬೆಂಗಳೂರಿನ ವಿವಿಧೆಡೆಗಳಲ್ಲಿ ಒಂದೊಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

ಡಾ.ಜಿ.ಬಿ.ಹರೀಶ ರವರು ನಾಕುತಂತಿಯ ಆಯ್ದ ಕವನಗಳ ಪರಿಚಯ ಹಾಗೂ ವಿಶ್ಲೇಷಣೆಯನ್ನು ನಡೆಸಿಕೊಡುತ್ತಾರೆ. ಪ್ರಮುಖವಾಗಿ ನಾಕುತಂತಿ ಸಾಹಿತ್ಯದಲ್ಲಿ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಅಧ್ಯಾತ್ಮದ ಹಿನ್ನೆಲೆ ಪರಿಚಯವನ್ನು ಈ ಸರಣಿಯ ಮುಖಾಂತರ ಮಾಡಲಾಗುತ್ತದೆ. ಇದು ಸಾಹಿತ್ಯಾಭ್ಯಾಸಿಗಳಿಗೆ ಕವನಗಳ ಒಳಗನ್ನು ತೆರೆದಿಟ್ಟು ಕಾವ್ಯಪ್ರಪಂಚಕ್ಕೆ ಆತ್ಮವಿಶ್ವಾಸದ ಪ್ರವೇಶಕ್ಕೆ ಅನುವಾಗುತ್ತದೆ. ಜತೆಗೆ ಇಂದಿನ ಪೀಳಿಗೆಗೆ ಬೇಂದ್ರೆಯವರ ಕಾವ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮ ಪರಿಚಯಿಸುವ ಸದುದ್ದೇಶವನ್ನು ಹೊಂದಿದೆ.

ಈ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ದಿನಾಂಕ ೨೧ ಜೂನ್‌ ೨೦೨೫, ಶನಿವಾರದಂದು ಸಂಜೆ ೪:೩೦ ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಶೇಷಾದ್ರಿಪುರಂ ಕಾಲೇಜುನಲ್ಲಿ (ಮೇನ್‌ ಕಾಲೇಜ್‌) ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ ಅವರು ನಾಕುತಂತಿ ಕವನದ ವಿಶೇಷ ವ್ಯಾಖ್ಯಾನವನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಾಸ್ಯ ಬರಹಗಾರರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌, ಬೆಂಗಳೂರು ಮಹಾನಗರದ ಅಧ್ಯಕ್ಷರಾದ ಎಂ.ಎಸ್‌. ನರಸಿಂಹಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಸುಗಮ ಸಂಗೀತ ಗಾಯಕಿ ರಮ್ಯ ವಸಿಷ್ಠ ಅವರು ಬೇಂದ್ರೆ ಗೀತಗಾಯನವನ್ನು ನಡೆಸಿಕೊದಲಿದ್ದಾರೆ.

ತಮ್ಮ ಘನತೆವೆತ್ತ ಮಾಧ್ಯಮದಲ್ಲಿ ಕಾರ್ಯಕ್ರಮದ ಕುರಿತು ಸುದ್ದಿ, ಕಾರ್ಯಕ್ರಮದ ದಿನ ಇಂದಿನ ಕಾರ್ಯಕ್ರಮ ವಿಭಾಗದಲ್ಲಿ ವಿವರವನ್ನು ಪ್ರಕಟಿಸಬೇಕು ಹಾಗೂ ಕಾರ್ಯಕ್ರಮದಂದು ತಮ್ಮ ಪ್ರತಿನಿಧಿಯನ್ನು ಕಳಿಸುವ ಮೂಲಕ ವರದಿ ಪ್ರಕಟಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.

ದಿನಾಂಕ: 21 ಜೂನ್‌ ‌2025, ಶನಿವಾರ

ಸಮಯ: ಸಂಜೆ ೪:೩೦ ಗಂಟೆ

ಸ್ಥಳ ಶೇಷಾದ್ರಿಪುರಂ ಕಾಲೇಜು (ಮೇನ್‌), ಶೇಷಾದ್ರಿಪುರ, ಬೆಂಗಳೂರು – 560020

ಸುಭುದೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ, 5000 ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ

ಜಯನಗರ: ರಕ್ಷಾ ಫೌಂಡೇಷನ್ 13ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಕಾರ್ಯಕ್ರಮ ಮತ್ತು ಧರ್ಮಗುರುಗಳಿಂದ ಆಶೀರ್ವಚನ ಏರ್ಪಡಿಸಲಾಗಿತ್ತು.
ಚಂದ್ರಗುಪ್ತಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಸುಪ್ರಿಂಕೋರ್ಟ್ ನ್ಯಾಯಧೀಶರಾದ ಅರವಿಂದ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕರು ರಕ್ಷಾ ಫೌಂಡೇಸನ್ ಸಂಸ್ಥಾಪಕರಾದ ಸಿ.ಕೆ.ರಾಮಮೂರ್ತಿ, ಶಾಸಕರಾದ ಸತೀಶ್ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನರಾಮಮೂರ್ತಿ ಚಾಲನೆ ನೀಡಿದರು.

ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಶ್ರೀ ಲಲಿತಾ ಸಹಸ್ರನಾಮ ಕಾರ್ಯಕ್ರಮವನ್ನು ಯಶ್ವಸಿಯಾಗಿ ಅಚರಿಸಿಕೊಂಡು ಬರುತ್ತಿದ್ದು, ಇದು ಶ್ರೇಷ್ಠವಾದ ಕಾರ್ಯ. ಶ್ರೀ ಲಲಿತಾ ತಾಯಿಯಿಂದ ಎಲ್ಲರಿಗೂ ಆಶೀರ್ವಾದ, ಕೃಪೆ ಎಲ್ಲರಿಗೂ ಸಿಗಬೇಕು. ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠವಾದದ್ದು. ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. ಸನಾತನ ಹಿಂದೂ ಪರಂಪರೆಯಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ, ಪೂಜೆ ಮಾಡುವ ಹಕ್ಕು ನೀಡಲಾಗಿದೆ ಎಂದರು. ವೇದಗಳಲ್ಲಿ ಶ್ರೀಲಲಿತಾ ಸಹಸ್ರನಾಮ ವಿಶೇಷತೆ, ಮಹಿಮೆ, ಉಪಾಸನೆ ಕುರಿತು ತಿಳಿಸಲಾಗಿದೆ. ಲಲಿತಾ ಎಂದರೆ ಸರಳ, ಮಕ್ಕಳಿಗೆ ತಾಯಿಯ ಅನುಗ್ರಹ, ತನ್ಮೂಲಕ ಸಮಸ್ತ ಲೋಕಕ್ಕೆ ಮಾತೃಸ್ವರೂಪಿಣಿಯಾದ ಶ್ರೀ ಲಲಿತಾದೇವಿಯ ಸಹಸ್ರನಾಮದಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.

ನ್ಯಾಯಧೀಶರಾದ ಅರವಿಂದ್ ಕುಮಾರ್ ಮಾತನಾಡಿ, ರಕ್ಷಾ ಫೌಂಡೇಷನ್ ಶಿಸ್ತುಬದ್ದ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಲಲಿತಾ ಸಹಸ್ರನಾಮ ಲಲಿತಾಂಬೆ ಪೂಜೆ ಮಾಡುವುದರಿಂದ ಸಂಕಷ್ಟಗಳು ನಿವಾರಣೆ ಯಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿದೆ ಎಂದು ಹೇಳಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ರೈತ ಮತ್ತು ಸೈನಿಕ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ. ದೇಶ, ರಾಜ್ಯ ಸುಭೀಕ್ಷೆಯಾಗಿರಬೇಕು ಮತ್ತು ನಾಡಿನ ಸಮಸ್ತ ಜನರು ಸುಖ, ಶಾಂತಿ ನೆಮ್ಮದ್ದಿಯಿಂದ ಬಾಳಬೇಕು ಎಂಬ ಸದಾಶಯದಿಂದ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೇಳೆಯಾಗಲಿ. ಬಂದ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಬಾಳಿನಲ್ಲಿ ಬೆಳಕು ಮೂಡಲಿ ಎಂದು ಹೇಳಿದರು.
ಚಲನಚಿತ್ರ ನಟಿ ಮಾಳವಿಕ ಅವಿನಾಶ್, ತಿರುಪತಿ ದೇವಸ್ಥಾನದ ಸದಸ್ಯರಾದ ನರೇಶ್, ಮಾಜಿ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ಮಾಲತಿ ಸೋಮಶೇಖರ್,ಜಲ್ಲಿ ರಮೇಶ್ ,ಧನರಾಜ್, ಗೋವಿಂದನಾಯ್ಡು, ಚಂದ್ರಶೇಖರರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ ಮತ್ತಿತರರು ಭಾಗವಹಿಸಿದ್ದರು.

ವಿಮಾನದಲ್ಲಿ ಮಹಿಳೆ ರಂಪಾಟ!

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರು ವೃದ್ಧನೊಂದಿಗೆ ಜಗಳವಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ, ಬೆಂಗಳೂರಿನ ಆ ಮಹಿಳೆಯನ್ನು ಕೆಳಗಿಳಿಸಲಾಗಿದೆ ಎಂದು ಘಟನೆಯ ಬಗ್ಗೆ ಮಾಹಿತಿ ಇಲ್ಲದ ಜನರು ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಬರೆದಿದ್ದರು,
ಸೀಟ್ ನಂಬರ್ 11,,,,, ಗಾಗಿ ಕಿತ್ತಾಡಿದ್ದರು ಎನ್ನಲಾಗಿತ್ತು!
ಮಹಿಳೆಯ ಕಿರಿಕ್ ಬಗ್ಗೆ ಮೊದ ಮೊದಲು ಹಬ್ಬಿದ್ದ ಸುಳ್ಳು ಸುದ್ ಇದೇ ನೋಡಿ, ಅಹಮಾದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದಾಗ 11,,,,,, ಸೀಟ್ ನಲ್ಲಿ ಕುಳಿತಿದ್ದ ರಮೇಶ್ ಎಂಬಾತ ಬದುಕಿಬಂದಿದ್ದ, ಅದನ್ನು ಕಂಡ ಮಹಿಳೆಯೊಬ್ಬರು ವಿಮಾನದಲ್ಲಿ 11,,,, ಸೀಟ್ ಗಾಗಿ ಕಿತ್ತಾಡಿದ್ದರು, ಎಂದು ಸುದ್ದಿ ಹಬ್ಬಿಸಲಾಯ್ತು, ಆದರೆ ಅದೆಲ್ಲಾ ಸುಳ್ಳು.

ಲಗೇಜ್ ಇಡಲು ನಡೆದ ಗಲಾಟೆ ಎನ್ನಲಾಗಿತ್ತು,
ಯಲಹಂಕ ಮೂಲಕ ವ್ಯಾಸ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ ಪ್ಲೈಟ್ ನಲ್ಲಿ ಬೋರ್ಡಿಂಗ್ ಆಗಿ ಲಗೇಜ್ ಅನ್ನು ಬೇರೆಯವರ ಸೀಟ್ ಬಳಿ ಬಿಟ್ಟಿದ್ದರು, ಲಗೇಜ್ ಬಗ್ಗೆ ಪ್ರಶ್ನಿಸಿದಕ್ಕೆ ವಿಮಾನ ಸಿಬ್ಬಂದಿ ಜೊತೆ ಮಹಿಳೆ ಅನುಚಿತವಾಗಿ ನಡೆದುಕೊಂಡಿದ್ದಾಳೆ ಎನ್ನಲಾಗಿತ್ತು ಇದೂ ಕೂಡ ಸುಳ್ಳು,

ಇದು ಜಾದೂಗಾರ ಮಾಡಿದ ಕೆಲಸಕ್ಕೆ ನಡೆದ ಗಲಾಟೆ
ಮಹಿಳೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಒಬ್ಬ ಜಾದೂಗಾರ ಪರಿವಾಳ ಮೂಲಕ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ,
ಅದರೆ ಆತನ ಹತ್ತಿರದಲ್ಲಿ ಕುಳಿತಿದ್ದ ಮಹಿಳೆ ಪಾರಿವಾಳ ಕಂಡು ಕೆರಳಿ ಜಾದೂಗಾರನ ಜೊತೆ ಜಗಳ ಮಾಡಿದ್ದಾಳೆ, ಪರಿಸ್ಧಿತಿ ಕೈಮೀರುತ್ತಿದೆ ಎಮದು ತಿಳಿಯುತ್ತಿದ್ದಂತೆಯೇ ವಿಮಾನ ಮಧ್ಯಪ್ರವೇಶಿಸಿ ವಿಮಾನ ಪ್ರೋಟೋಕಾಲ್ ಗಳನ್ನು ಅನುಸರಿಸಿ, ಸಹ ಪ್ರಯಾಣಿಕರನ್ನು ಗೌರವಿಸಿ ಎಂದು ಹೇಳಿದ ಮೇಲೆ ಆಗ ಎಲ್ಲರೂ ಸಮ್ಮನಾಗಿದ್ದಾರೆ,
ವಿಶೇಷ ಎಂದರೆ ಈ ವಿಡಿಯೋವನ್ನು 5 ದಿನಗಳ ಹಿಂದೆಯೇ ನಾಗಪುರದ ವಿಮಾನ ಹಾರಾಟ ತರಬೇತಿ ಕೇಂದ್ರ ಹಂಚಿಕೊಂಡಿದೆ, ಪಾರಿವಾಳದ ಮಾಜಿಕ್ ಮಾಡಲು ಹೋಗಿ ವ್ಯಕ್ತಿ ಮಾಡಿದ ಕೆಲಸಕ್ಕೆ ಮಹಿಳೆ ಸಿಟ್ಟಿಗೆದ್ದು, ರಂಪ ಮಾಡಿದ್ದಾಳೆ, ಆದರೆ ಘಟನೆಯ ಅಸಲಿಯತ್ತನ್ನೇ ತಿರುಚಿ ಮಹಿಳೆ ಗಲಾಟೆ ಮಾಡಿದ್ದನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲ ಹಂಚಿಕೊಳ್ಳಲಾಗಿದೆ,

ಆಡಿಯೋ ನಿಜ, ಲೀಕ್ ಮಾಡಿದ್ದು ತಪ್ಪೆಂದು ಜಮೀರ್ ಆಪ್ತ

ಬೆಂಗಳೂರು: ರಾಜ್ಯ ಸರ್ಕಾರದ ಬುಡಕ್ಕೆ ಈಗ ಮತ್ತೊಂದು ಭ್ರಷ್ಟಾಚಾರ ಬಾಂಬ್ ಬಿದ್ದಿದೆ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದವರಿಗೆಷ್ಟೇ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾದ್ಯಕ್ಷ, ಆಳಂದ ಶಾಸಕ ಬಿ ಆರ್ ಪಾಟೀಲ್ ತಮ್ಮದೇ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೊವೊಂದು ವೈರಲ್ ಆಗಿದೆ,
ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಘರಾಜ್ ಖಾನ್ ಮೊಬೈಲ್ ಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವ ಪಾಟೀಲ್ ಹಣೆ ಪಡೆದು ಯಾವ ಗ್ರಾಮಕ್ಕೆ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ? ಎಂಬ ಮಾಹಿತಿ ಪಡೆದುಕೊಂಡಿದ್ದಾರೆ, ಅಲ್ಲದೇ ಈ ಮಾಹಿತಿಯನ್ನು ನಾನು ಬಹಿರಂಗಪಡಿಸಿದ್ರೆ ಸರ್ಕಾರವೇ ಅಲುಗಾಡುತ್ತೆ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ,

ಆಡಿಯೋ ಸತ್ಯ ಎಂಬ ಸರ್ಘರಾಜ್ ಖಾನ್
ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪ ಸತ್ಯ ಎಂದು ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಘರಾಜ್ ಖಾನ್ ಹೇಳಿದ್ದಾರೆ, ಆಡಿಯೋ ಬಹಿರಂಗವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಖಾನ್, ಪ್ರಕರಣದ ಬಗ್ಗೆ ಸಚಿವ ಜಮೀರ್ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ,
ದೂರವಾಣಿಯಲ್ಲಿ ಮಾತನಾಡಿದ್ದನ್ನು ಸೋರಿಕೆ ಮಾಡಿದ್ದು ತಪ್ಪ, ಜನಪ್ರತಿನಿಧಿ ಎಂಬ ಕಾರಣಕ್ಕೆ ಮಾತನಾಡಿದ್ದೇನೆ, ಅವರೇ ಕರೆ ಮಾಡಿ ಆಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ ಎಂದು ಸರ್ಘರಾಜ್ ಖಾನ್ ಕಿಡಿಕಾರಿದ್ದಾರೆ, ಆ ಮೂಲಕ ವೈರಲ್ ಆಗಿರುವ ಆಡಿಯೋ ಅಸಲಿ ಎಂದು ಒಪ್ಪಿಕೊಂಡಂತಾಗಿದೆ,
ಹಣ ತೆಗೆದುಕೊಂಡು ಮನೆ ಹಂಚಿಕೆ ಮಾಡಿದ್ದರೆ ತಿಳಿಸಿ ಅಂಥವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಆಡಿಯೋದಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ, ನನ್ನದು ಐಪೋನ್, ಇದರಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳಲು ಆಗುವುದಿಲ್ಲ, ಅವರೇ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದು ತಪ್ಪು ಸಚಿವ ಜಮೀರ್ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸರ್ಘರಾಜ್ ಖಾನ್ ತಿಳಿಸಿದ್ದಾರೆ,
ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ, ಈ ಎಲ್ಲಾ ಬೆಳವಣಿಗೆಗೆಳ ಬೆನ್ನಲ್ಲೇ ಇದೀಗ ವೈರಲ್ ಆಗಿರುವ ಆಡಿಯೊ ನಿಜ ಎಂದು ಸರ್ಘರಾಜ್ ಖಾನ್ ಒಪ್ಪಿಕೊಂಡಂತಾಗಿದೆ,

ಲೀಡ್ಸ್​ನಲ್ಲಿ ಭಾರತ​ ಗೆದ್ದಿದ್ದೆಷ್ಟು? ಇಲ್ಲಿ ಯಾರು ಬಲಿಷ್ಠ​?

ಭಾರತ-ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಇಂದು ಶುರುವಾಗಲಿದೆ. ಇದರೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2025-2027ರ ಋತು ಕೂಡಾ ಪ್ರಾರಂಭವಾಗುತ್ತದೆ. ಉಭಯ ತಂಡಗಳ ನಡುವಿನ ಮಹತ್ವದ ಹಣಾಹಣಿಗೆ ಲೀಡ್ಸ್‌ನ ಹೆಡಿಂಗ್ಲಿ ಮೈದಾನ ಆತಿಥ್ಯ ವಹಿಸಿದೆ.

ಭಾರತ ಕೊನೆಯ ಬಾರಿಗೆ 2007ರಲ್ಲಿ ರಾಹುಲ್​ ದ್ರಾವಿಡ್​ ನಾಯಕತ್ವದಲ್ಲಿ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಜಯಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಗಿಲ್​ ನಾಯಕತ್ವದಲ್ಲಿ ಟೆಸ್ಟ್ ಸರಣಿ ಗೆಲ್ಲಲು ತವಕಿಸುತ್ತಿದೆ.

ಲೀಡ್ಸ್​ ಮೈದಾನದಲ್ಲಿ ಉಭಯ​ ತಂಡಗಳ ದಾಖಲೆ ಹೇಗಿದೆ?. ಇಲ್ಲಿ ಇದುವರೆಗೂ ಆಡಿರುವ ​ಪಂದ್ಯಗಳೆಷ್ಟು? ಯಾರು ಹೆಚ್ಚು ಗೆಲುವು ಸಾಧಿಸಿದ್ದಾರೆ? ಎಂಬುದನ್ನು ಈಗ ತಿಳಿಯೋಣ.

ಹೆಡಿಂಗ್ಲೆ ಮೈದಾನದ ಇತಿಹಾಸ: ಹೆಡಿಂಗ್ಲೆ ಮೈದಾನದಲ್ಲಿ ಇದುವರೆಗೂ 81 ಟೆಸ್ಟ್​ ಪಂದ್ಯಗಳು ನಡೆದಿವೆ. ಮೊಟ್ಟಮೊದಲ ಪಂದ್ಯ 1899ರಲ್ಲಿ ನಡೆದಿತ್ತು. ಅಂದಿನಿಂದಲೂ ಈ ಮೈದಾನ ಕೆಲವು ಅದ್ಭುತ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ

, ಇಲ್ಲಿ ಇಂಗ್ಲೆಂಡ್ 37 ಪಂದ್ಯಗಳನ್ನು ಗೆದ್ದರೆ, ಪ್ರವಾಸಿ ತಂಡಗಳು ಕೇವಲ 25 ಪಂದ್ಯಗಳನ್ನು ಗೆದ್ದಿವೆ. ಟಾಸ್ ಗೆದ್ದಿರುವ ತಂಡಗಳೇ ಹೆಚ್ಚು ಗೆಲುವು ಸಾಧಿಸಿರುವ ದಾಖಲೆಗಳಿವೆ. ಹಾಗಾಗಿ, ಟಾಸ್​ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡಗಳು 29 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಚೇಸಿಂಗ್​ ತಂಡಗಳು 37 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.

ಲೀಡ್ಸ್‌ನಲ್ಲಿ ಭಾರತದ ಸೋಲು-ಗೆಲುವg: ಭಾರತ 1952ರಲ್ಲಿ ಲೀಡ್ಸ್‌ನಲ್ಲಿ​ ಮೊದಲ ಟೆಸ್ಟ್​ ಪಂದ್ಯ ಆಡಿತ್ತು. ಆದರೆ ಈ ಪಂದ್ಯದಲ್ಲಿ 7 ವಿಕೆಟ್​ಗಳ ಸೋಲು ಕಂಡಿತ್ತು. 1986ರಲ್ಲಿ ಕಪಿಲ್​ ದೇವ್​ ಮತ್ತು 2002ರಲ್ಲಿ ಸೌರವ್​ ಗಂಗೂಲಿ ನಾಯಕತ್ವದಲ್ಲಿ ಮಾತ್ರ ಗೆದ್ದಿದೆ. ಕೊನೆಯದಾಗಿ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೆಸ್ಟ್​ ಪಂದ್ಯವನ್ನಾಡಿ 76 ರನ್​ಗಳಿಂದ ಸೋಲುಂಡಿತ್ತು.

ಇಂಗ್ಲೆಂಡ್​ ದಾಖಲೆ: ಇಂಗ್ಲೆಂಡ್​ ಇಲ್ಲಿ ಭಾರತದ ವಿರುದ್ಧ ಒಟ್ಟು 4 ಬಾರಿ (1952, 1959, 1967 ಮತ್ತು 2021) ಗೆದ್ದಿದೆ. ಉಭಯ ತಂಡಗಳ ನಡುವೆ 1979ರಲ್ಲಿ ನಡೆದ ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು