ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan – Maharaj Park) ಭಾನುವಾರ ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ, ಕೆ.ಆರ್.ಪುರಂ ಹಾಸನ ಕುಮಾರ್ (Hassan Kumar) ತಂಡದ ಕಲಾವಿದರಿಂದ ಎಸ್.ಪಿ.ಬಾಲಸುಬ್ರಹ್ಮಣ್ಯ (S.P.B) 80ನೇ ವರ್ಷ ಹುಟ್ಟುಹಬ್ಬ ಸ್ಮರಣಾರ್ಥ ನಡೆದ ಗಾಯನೋತ್ಸವ ಕಾರ್ಯಕ್ರಮವು ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ಗೊರೂರು ಅನಂತರಾಜು (Goruru) ಮಾತನಾಡಿ ಈ ಮಹಾರಾಜ ಪಾರ್ಕ್ ಹಾಸನದ ಹೃದಯ ಭಾಗದಲ್ಲಿದ್ದು ನಿವೃತ್ತರು ವಯಸ್ಕರಿಗೆ ತಂಪುತಾಣವಾಗಿದೆ. ಹಾಸನ ಜಿಲ್ಲಾ ಕ.ಸಾ.ಪ.ಸ್ಥಾಪಕ ಅಧ್ಯಕ್ಷರಾದ ಹೆಚ್.ಬಿ.ಜ್ವಾಲನಯ್ಯನವರು1968ರಲ್ಲಿ ಮಿತ್ರವೃಂದದ ಪ್ರಸಾರ ವಿಭಾಗ ಪ್ರಾರಂಭಿಸಿ ವಾರಕ್ಕೊಮ್ಮೆ ಸಂಜೆ ಮಹಾರಾಜ ಪಾರ್ಕಿನಲ್ಲಿ ಆಕಾಶವಾಣಿ ಮಾದರಿಯಲ್ಲಿ ಧ್ವನಿವರ್ಧಕಗಳ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಲ್ಲಿ ಬೆಳೆದ ಗಿಡಮರಗಳ ಪರಿಸರ, ಕಲ್ಲು ಹಾಸುಗಳ ವ್ಯವಸ್ಥೆ, ಇವತ್ತಿನ ಗಾಯಕರ ಹಾಡುಗಾರಿಕೆ ಕಾರ್ಯಕ್ರಮ ವೀಕ್ಷಿಸುತ್ತಿದ್ದರೆ ಡಾ. ರಾಜಕುಮಾರ್ ನಟನೆಯ ಕಣ್ತೆರದು ನೋಡು ಸಿನಿಮಾದಲ್ಲಿ ಪಾರ್ಕ ಒಂದರಲ್ಲಿ ಕುಳಿತು ರೇಡಿಯೋ ಹಾಡು ಕೇಳುವ ದೃಶ್ಯ ನೆನಪಾಗುತ್ತದೆ. ಗಾಯಕರ ಗಾಯನ ನಮಗೆ ಹಿಂದೆ ಗಣೇಶೋತ್ಸವಗಳಲ್ಲಿ ನಡೆಯುತ್ತಿದ್ದ ಆರ್ಕೆಸ್ಟç ನೆನಪಾಗುತ್ತವೆ ಎಂದು ಶ್ಲಾಘಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟದ, ಕೆ.ಆರ್.ಪುರಂ, ಹಾಸನ ಅಧ್ಯಕ್ಷರು ಶ್ರೀಮತಿ ಸತ್ಯವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಒಕ್ಕೂಟವು ಮುಂದೆ ಉಚಿತ ಕಣ್ಣು ತಪಾಸಣೆ, ರಕ್ತದಾನ ಶಿಬಿರ, ಪರಿಸರ ಜಾಗೃತಿ ಮೊದಲಾದಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದರು. ಖಜಾಂಚಿ ಹಾಗೂ ನಿವೃತ್ರ ಪ್ರಾಂಶುಪಾಲರು ಪ್ರೊ.ಎ.ಹೆಚ್. ಗಣೇಶ್ ಅಂಕಪುರ ಮಾತನಾಡಿ ಒಕ್ಕೂಟವು ಹಲವಾರು ಸಮಾಜಮುಖಿ ಚಿಂತನೆಗಳನ್ನು ಹೊಂದಿ ಈ ದಿಶೆಯಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದೆ0ದರು. ಉಪಾಧ್ಯಕ್ಷರು ರುದ್ರೇಗೌಡರು, ಸುಧಾಕರ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಶಶಿಕಲಾ ಸಂಘಟನಾ ಕಾರ್ಯದರ್ಶಿ, ಮಂಜುನಾಥ್ ಎಂಎಂಎಂ ಆಸ್ಪತ್ರೆ, ಸಹ ಕಾರ್ಯದರ್ಶಿ, ಅಶೋಕ್ ಕಾನೂನು ಸಲಹೆಗಾರರು, ವಿಜಯಕುಮಾರ್ ವಕ್ತಾರರು, ನಿರ್ದೇಶಕರು ದೇವರಾಜ್. ರಾಜೇಶ್, ಲೀಲಾವತಿ, ಮಂಜುಳ, ವೆಂಕಟೇಶ್, ಕಿರಣ್ ಕುಮಾರ್, ವೆಂಕಟೇಶ್ ಇ.ಟಿ. ಇವರು ಹಾಗೂ ಗಾಯಕರನ್ನು ಸನ್ಮಾನಿಸಲಾಯಿತು. ಹಾಸನ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರು ಗಾಯಕರು ಕುಮಾರ್, ಅಶ್ವಿನಿ ಮೆಡಿಕಲ್ ಹೆಚ್. ಗಂಗಾಧರ್, ಜಿ.ಆರ್.ಶ್ರೀಕಾಂತ್ ಗೊರೂರು, ಸುರೇಂದ್ರ ಕುನಿಗನಹಳ್ಳಿ, ಶ್ರೀಮತಿ ಅಂಜಲಿ, ಎಂ.ಎA.ಪಾಶಾ ಕೊಣನೂರು, ಗಂಗಾಧರ್ ಮಲ್ಲಿಪಟ್ಟಣ, ನಂಜಪ್ಪ ಪೊಲೀಸ್, ಅಣ್ಣಪ್ಪ ಸೋಮುವಾರಪೇಟೆ ಮೊದಲಾದ ಗಾಯಕರು ಹಾಡುಗಾರಿಕೆಯಲ್ಲಿ ರಂಜಿಸಿದರು. ಶ್ರೀಮತಿ ಶಶಿಕಲಾ, ಸಂಘಟನಾ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.

Hot this week

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

Topics

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

ವಿದ್ಯುತ್ ಮಸೂದೆ ಕೈಬಿಡಲು ಆಗ್ರಹ: ಟಾಟಾ ಪವರ್‌ಗೆ ಸಮಾನಾಂತರ ವಿತರಣಾ ಪರವಾನಗಿ ನೀಡದಂತೆ ನಿರ್ಣಯ

ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ವಿದ್ಯುತ್ (ತಿದ್ದುಪಡಿ) ಮಸೂದೆ ಯನ್ನು ತೀವ್ರವಾಗಿ ವಿರೋಧಿಸಿರುವ *ಅಖಿಲ ಭಾರತ ವಿದ್ಯುತ್ ಇಂಜಿನಿಯರ್‌ಗಳ ಒಕ್ಕೂಟ (ಎಐಪಿಇಎಫ್), (All India Power Engineers Federation) ಈ ಮಸೂದೆಯನ್ನು  ತಕ್ಷಣವೇ...

Related Articles