ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ

ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ ಮತ್ತು ಸಂಸ್ಕೃತ ಸಾಹಿತ್ಯ ಪ್ರಸಾರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರಾದ ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಎರಡು ದಿನಗಳ ಭವ್ಯ ಕಾರ್ಯಕ್ರಮವನ್ನು ಕೃಷ್ಣ ಭಕ್ತಿ ಪೀಠ, ಪೂರ್ಣಪ್ರಜ್ಞ ಸಂಶೋಧನಾ ಮಂದಿರ, ಅಖಿಲ ಭಾರತ ಮಾಧ್ವ ಮಹಾಮಂಡಲ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವಿಶ್ವೇಶತೀರ್ಥ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 17 ಮತ್ತು 18, 2026ರಂದು ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ದ್ವೈತ ವೇದಾಂತ, ಶಾಸ್ತ್ರ ಅಧ್ಯಯನ, ಸಂಶೋಧನೆ, ಗುರುಪರಂಪರೆ ಹಾಗೂ ಭಕ್ತಿ ಸಂಸ್ಕೃತಿಯ ಉಜ್ವಲ ಪರಂಪರೆಯನ್ನು ಸ್ಮರಿಸುವ ಈ ಕಾರ್ಯಕ್ರಮವು ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪೀಠಾಧಿಪತಿಗಳು, ವಿದ್ವಾಂಸರು, ಸಂಶೋಧಕರು ಹಾಗೂ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ

ಜೂನ್ 17ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವು ಶ್ರೀ ರಾಘವೇಂದ್ರ ಮಠದ ಪರಮಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ತಾತ್ಪರ್ಯಚಂದ್ರಿಕೆಯ “ನಿತ್ಯಾನಿತ್ಯ ವಸ್ತು ವಿವೇಕ” ವಿಷಯದ ವಾಕ್ಯಾರ್ಥಸಭೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಮಹೋಪಾಧ್ಯಾಯ ಎ. ಹರಿದಾಸ ಭಟ್ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಭಾರತೀಯ ತತ್ವಚಿಂತನೆ ಮತ್ತು ಸಂಶೋಧನಾ ಪರಿಷತ್ (ICPR), ನವದೆಹಲಿ ಸದಸ್ಯ ಕಾರ್ಯದರ್ಶಿ ಪ್ರೊ. ಸಚ್ಚಿದಾನಂದ ಮಿಶ್ರಾ ಭಾಗವಹಿಸಲಿದ್ದಾರೆ. ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ಅಧ್ಯಕ್ಷರಾದ ಪ್ರೊ. ಸಚ್ಚಿದಾನಂದ ಉಡುಪ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಪ್ರಥಮ ದಿನದ ಶಾಸ್ತ್ರಚಿಂತನ ಸತ್ರಗಳು

ಮಧ್ಯಾಹ್ನ 2.30 ಗಂಟೆಯಿಂದ ನಡೆಯುವ ದ್ವಿತೀಯ ಸತ್ರದಲ್ಲಿ ಪಾಂಡುರಂಗಿ ಕುಟುಂಬದ ತತ್ತ್ವವಾದ ಸೇವೆ, ಪ್ರೊ. ಕೆ.ಟಿ. ಪಾಂಡುರಂಗಿ ಅವರ ಕೃತಿಗಳು ಮತ್ತು ಗುರುರಾಜಾಚಾರ್ಯ ಪಾಂಡುರಂಗಿ ಅವರ ವಿದ್ವತ್ತಿನ ಕುರಿತು ವಿವಿಧ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಡಾ. ಶ್ರೀನಿಧಿ ವಸಿಷ್ಠ, ಪಂ. ಖೇಡಾ ವೇದವ್ಯಾಸಾಚಾರ್ಯ, ಡಾ. ವಾಮನಾಚಾರ್ಯ ಆಲೂರು, ಡಾ. ಜಿ. ಕೃಷ್ಣಪ್ರಸಾದ, ಡಾ. ಕೃಷ್ಣಾಚಾರ್ಯ ಉಪಾಧ್ಯಾಯ, ಡಾ. ಎಸ್.ಆರ್. ಪಾಂಡುರಂಗಿ ಹಾಗೂ ಶ್ರೀ ಶ್ರೀಪಾದ ಕೃಷ್ಣಮೂರ್ತಿ ಅವರು ವಿಚಾರ ಮಂಡನೆ ಮಾಡಲಿದ್ದಾರೆ.

ಸಂಜೆ 4.30 ರಿಂದ 6.30 ರವರೆಗೆ ನಡೆಯುವ ತೃತೀಯ ಸತ್ರದಲ್ಲಿ ಉತ್ತರಾದಿ ಮಠದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶ ನಡೆಯಲಿದೆ.

ಈ ಸತ್ರದಲ್ಲಿ:

  • ಪ್ರೊ. ಎ.ವಿ. ನಾಗಸಂಪಿಗೆ – ದ್ವೈತ ವೇದಾಂತ
  • ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ – ಪ್ರೊ. ಕೆ.ಟಿ. ಪಾಂಡುರಂಗಿ
  • ಪ್ರೊ. ಸಚ್ಚಿದಾನಂದ ಮಿಶ್ರಾ – ಶಾಸ್ತ್ರ ಅಧ್ಯಯನದ ಮಹತ್ವ

ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಹಲವಾರು ಮಹತ್ವದ ಗ್ರಂಥಗಳ ಬಿಡುಗಡೆ ನಡೆಯಲಿದೆ.

ಸಂಜೆ 6.30 ರಿಂದ 8.30 ರವರೆಗೆ ಖ್ಯಾತ ಭಕ್ತಿಗಾಯಕ ಶ್ರೀ ವೇಣುಗೋಪಾಲ ಖಟಾವ್ಕರ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದ್ವಿತೀಯ ದಿನದ ಕಾರ್ಯಕ್ರಮಗಳು

ಜೂನ್ 18ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ನಾಲ್ಕನೇ ಸತ್ರವು ಶ್ರೀ ಭಂಡಾರಕೇರಿ ಮಠದ ಪರಮಪೂಜ್ಯ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಆರಂಭಗೊಳ್ಳಲಿದೆ.

ಈ ಸತ್ರದಲ್ಲಿ ಪ್ರೊ. ಕೆ.ಟಿ. ಪಾಂಡುರಂಗಿ ಅವರ ವಿವಿಧ ಕೃತಿಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿದ್ದು,

  • ಉಪನಿಷತ್ತುಗಳು – ಪ್ರೊ. ನಾರಾಯಣಾಚಾರ್ಯ ಪೂಜಾರ್
  • ನ್ಯಾಯಾಮೃತ – ಡಾ. ಪ್ರತೋಷ್ ಎ.ಪಿ.
  • ತಾತ್ಪರ್ಯಚಂದ್ರಿಕಾ – ಡಾ. ಗುರುರಾಜಾಚಾರ್ಯ ಕಲ್ಕೂರ್
  • ಬ್ರಹ್ಮಸೂತ್ರಗಳು – ಡಾ. ಶ್ರೀಕಾಂತ ಬಯರಿ
  • ಪೂರ್ವಮೀಮಾಂಸಾ – ವಿದ್ವಾನ್ ಶ್ರೀವತ್ಸಾಚಾರ್ಯ
  • ದಶಪ್ರಕರಣಗಳು – ಡಾ. ಶ್ರೀನಿಧಿ ಪ್ಯಾಟಿ

ಅವರು ವಿಚಾರ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 2.30 ಗಂಟೆಗೆ ನಡೆಯುವ ಐದನೇ ಸತ್ರದಲ್ಲಿ ಕಾವ್ಯಶಾಸ್ತ್ರ, ವ್ಯುತ್ಪತ್ತಿವಾದ ವಿಮರ್ಶೆ ಹಾಗೂ ಪ್ರೊ. ಕೆ.ಟಿ. ಪಾಂಡುರಂಗಿ ಮತ್ತು ಗುರುರಾಜಾಚಾರ್ಯ ಪಾಂಡುರಂಗಿ ಅವರ ವಿದ್ವತ್ ಪರಂಪರೆಯ ಕುರಿತು ಉಪನ್ಯಾಸಗಳು ನಡೆಯಲಿವೆ.

ಈ ಸಂದರ್ಭದಲ್ಲಿ “ಆನಂದಮಕರಂದ” ವೆಬ್‌ಸೈಟ್‌ ಉದ್ಘಾಟನೆ ನೆರವೇರಲಿದೆ.

ಸಮಾರೋಪ ಸಮಾರಂಭ

ಸಂಜೆ 4.30 ರಿಂದ 6.30 ರವರೆಗೆ ನಡೆಯುವ ಆರನೇ ಸತ್ರವು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸೋಸಲೆ ವ್ಯಾಸರಾಜ ಮಠದ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ:

  • ಪ್ರೊ. ಶ್ರೀನಿವಾಸ ವರಖೇಡಿ, ಕುಲಪತಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ
  • ಡಾ. ವೆಂಕಟನರಸಿಂಹಾಚಾರ್ಯ ಗುಡೆಬೆಳ್ಳೂರು
  • ಪ್ರೊ. ಕುಟುಂಬ ಶಾಸ್ತ್ರಿ
  • ಡಾ. ಸತ್ಯನಾರಾಯಣಾಚಾರ್ಯ

ಅವರು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ ಪ್ರೊ. ರಾಮಕೃಷ್ಣ ಭಟ್ ಅವರಿಗೆ ವಿಶೇಷ ಸನ್ಮಾನ ನಡೆಯಲಿದ್ದು, ಹಲವು ಗ್ರಂಥಗಳ ಲೋಕಾರ್ಪಣೆಯೂ ನೆರವೇರಲಿದೆ.

ಸಂಜೆ 6.30 ರಿಂದ 8.30 ರವರೆಗೆ ಪ್ರಸಿದ್ಧ ಗಾಯಕ ಪಂಡಿತ ಜಯತೀರ್ಥ ಮೇವುಂಡಿ ಮತ್ತು ಬಳಗ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಶತಮಾನೋತ್ಸವದ ಮಹತ್ವ

ಪ್ರೊ. ಕೆ.ಟಿ. ಪಾಂಡುರಂಗಿ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಕುಲಪತಿಗಳಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಹಾಗೂ ದ್ವೈತ ವೇದಾಂತ ಕ್ಷೇತ್ರದ ಅಗ್ರಗಣ್ಯ ಸಂಶೋಧಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರು ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷರಾಗಿ, ಶಾಸ್ತ್ರಪಾರಂಗತರಾಗಿ ಮತ್ತು ಪೂಜ್ಯ  ಶ್ರೀ ಸತ್ಯಧ್ಯಾನ   ತೀರ್ಥ ಶ್ರೀಪಾದರ ಶಿಷ್ಯರಾಗಿ ಪ್ರಸಿದ್ಧರಾಗಿದ್ದರು.

ಈ ಶತಮಾನೋತ್ಸವವು ಅವರ ಅಪಾರ ಜ್ಞಾನಸೇವೆ, ಸಂಶೋಧನಾ ಸಾಧನೆ, ಧಾರ್ಮಿಕ-ಸಾಂಸ್ಕೃತಿಕ ಕೊಡುಗೆ ಹಾಗೂ ಮುಂದಿನ ಪೀಳಿಗೆಗೆ ನೀಡಿದ ಪ್ರೇರಣೆಯನ್ನು ಸ್ಮರಿಸುವ ಮಹತ್ವದ ರಾಷ್ಟ್ರೀಯ ಮಟ್ಟದ ಆಚರಣೆಯಾಗಿದೆ ಎಂದು ಆಯೋಜಕರಾದ ಪೂರ್ಣಪ್ರಜ್ಞಾ ಸಂಶೋಧನಾ ಮಂದಿರದ ನಿರ್ದೇಶಕರಾದ ಡಾ .ಆಚಾರ್ಯ ವೀರನಾರಾಯಣ ಪಾಂಡುರಂಗಿರವರು ತಿಳಿಸಿದ್ದಾರೆ .

Hot this week

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

Topics

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

ವಿದ್ಯುತ್ ಮಸೂದೆ ಕೈಬಿಡಲು ಆಗ್ರಹ: ಟಾಟಾ ಪವರ್‌ಗೆ ಸಮಾನಾಂತರ ವಿತರಣಾ ಪರವಾನಗಿ ನೀಡದಂತೆ ನಿರ್ಣಯ

ವಿದ್ಯುತ್ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ವಿದ್ಯುತ್ (ತಿದ್ದುಪಡಿ) ಮಸೂದೆ ಯನ್ನು ತೀವ್ರವಾಗಿ ವಿರೋಧಿಸಿರುವ *ಅಖಿಲ ಭಾರತ ವಿದ್ಯುತ್ ಇಂಜಿನಿಯರ್‌ಗಳ ಒಕ್ಕೂಟ (ಎಐಪಿಇಎಫ್), (All India Power Engineers Federation) ಈ ಮಸೂದೆಯನ್ನು  ತಕ್ಷಣವೇ...

Related Articles