Home Blog Page 89

ಯುದ್ಧಕ್ಕಾಗಿ ಮಗನ ಮದ್ವೆ ನಿಲ್ಲಿಸಿದ್ರಾ ನೆತಾನ್ಯಾಹು?

ಟೆಲ್‌ ಅವಿವ್‌: ಇರಾನ್‌ ಜೊತೆ ನಡೆತ್ತಿರುವ ಯುದ್ಧದ ಬಗ್ಗೆ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು(Benjamin Netanyahu) ಅಚ್ಚರಿಯ ಹೇಳಿಕೆಯೊಂದನ್ನು ನೀಡುವ ಮೂಲಕ ಇಸ್ರೇಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇರಾನ್‌ ಜೊತೆಗಿನ ಯುದ್ಧದ ಕಾರಣದಿಂದಾಗಿ ತಮ್ಮ ಮಗನ ಮದುವೆ ವಿಳಂಬ ಆಗುತ್ತಿದೆ. ಯುದ್ಧದ ಪರಿಣಾಮ ವೈಯಕ್ತಿಕ ಬದುಕಿನ ಮೇಲೂ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈನ್ನು ನೆತಾನ್ಯಾಹು ಹೇಳಿಕೆಗೆ ಇಸ್ರೇಲಿಗರು ಫುಲ್‌ ಗರಂ ಆಗಿದ್ದಾರೆ.

ಬೀರ್ ಶೆವಾದಲ್ಲಿನ ಕ್ಷಿಪಣಿಯಿಂದ ಹಾನಿಗೊಳಗಾದ ಸೊರೊಕಾ ಆಸ್ಪತ್ರೆಯ ಮುಂದೆ ಗಂಭೀರವಾಗಿ ಮಾತನಾಡಿದ ನೆತನ್ಯಾಹು, ಇಸ್ರೇಲ್‌ನ ಪ್ರಸ್ತುತ ಬಿಕ್ಕಟ್ಟನ್ನು ಎರಡನೇ ಮಹಾಯುದ್ಧದ ಬಾಂಬ್ ದಾಳಿಗೆ ಹೋಲಿಸಿದರು. ಇದೇ ವೇಳೆ ಅವರು ಯುದ್ಧಕ್ಕಾಗಿ ತಮ್ಮ ಪರಿವಾರ ಎಂತಹ ʻತ್ಯಾಗʼ ಮಾಡುತ್ತಿದೆ ಎಂಬುದನ್ನು ಜನರೆದುರು ಬಿಚ್ಚಡಲು ಮುಂದಾದರು. ಭದ್ರತಾ ಕಾಳಜಿಯಿಂದಾಗಿ ಎರಡನೇ ಬಾರಿಗೆ ತಮ್ಮ ಮಗ ಅವ್ನರ್ ಅವರ ವಿವಾಹವನ್ನು ಮರು ನಿಗದಿಪಡಿಸಿದ್ದನ್ನು ಪ್ರಧಾನಿ ತಮ್ಮ ಕುಟುಂಬವು ಮಾಡಿದ ತ್ಯಾಗಗಳಿಗೆ ಉದಾಹರಣೆಯಾಗಿ ತೋರಿಸಿದರು. ಈ ನಿರ್ಧಾರದಿಂದ ಮಗ ಅವ್ನರ್ ಮತ್ತು ಪತ್ನಿ ಸಾರಾ ನೆತನ್ಯಾಹು ಅವರ ಮೇಲೆಯೂ ತೀವ್ರ ಪರಿಣಾಮ ಬೀರಿದೆ ಎಂದು ತಮ್ಮ ಕುಟುಂಬಸ್ಥರ ಗುಣಗಾನಕ್ಕಿಳಿದಿದ್ದರು.

ಯುದ್ಧದಲ್ಲಿ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವವರ ಜೊತೆ ನಾವಿದ್ದೇವೆ. ಈ ಯುದ್ಧದಿಂದ ಇಸ್ರೇಲ್‌ನ ಪ್ರತಿಯೊಬ್ಬ ಪ್ರಜೆಯ ಮೇಲೂ ವೈಯಕ್ತಿಕ ಪರಿಣಾಮ ಬೀರಿದೆ. ಅದಕ್ಕೆ ನಾನೇನು ಹೊರತಾಗಿಲ್ಲ ಎಂದಿದ್ದಾರೆ. ಇರಾನ್‌ನ ಕ್ಷಿಪಣಿ ಸೊರೊಕಾ ಆಸ್ಪತ್ರೆ ಮೇಲೆ ಬಿದ್ದು ಅಪಾರ ಸಾವು-ನೋವು ಸಂಭವಿಸಿದೆ. ಈ ಪ್ರದೇಶಕ್ಕೆ ಭೇಟಿ ಕೊಟ್ಟ ನೆತಾನ್ಯಾಹು ಪರಿಶೀಲನೆ ನಡೆಸಿದ್ದಾರೆ. ಸಂಘರ್ಷದಲ್ಲಿ ಇಲ್ಲಿಯವರೆಗೆ ತನ್ನ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳುತ್ತದೆ.

ಇನ್ನು ನೆತಾನ್ಯಾಹು ಭಾಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಆಕ್ರೋಶ ಹೊರಹಾಕಿದ್ದಾರೆ. ನೆತಾನ್ಯಾಹು ವಾಸ್ತಾವಿಕ ಸಮಸ್ಯೆಯನ್ನು ಭಾವನಾತ್ಮಕವಾಗಿ ಮಾರ್ಪಾಟು ಮಾಡುತ್ತಿದ್ದಾರೆ. ಜನರ ದುಃಖಕ್ಕಿಂತ ತನ್ನದೇ ಆದ ಇಮೇಜ್‌ಗೆ ಆದ್ಯತೆ ನೀಡಿದ್ದಾರೆ. ಪ್ರಧಾನಿಗೆ ತಮ್ಮ ಮಗನ ಮದುವೆಯದ್ದೇ ಚಿಂತೆಯಾಗಿದೆ. ಅದೆಷ್ಟೋ ತಾಯಂದಿರ ಮಕ್ಕಳು ಯುದ್ಧದಲ್ಲಿ ಮಡಿದಿದ್ದಾರೆ. ಇನ್ನು ಕೆಲವರು ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ನೆತಾನ್ಯಾಹು ಈ ಹೇಳಿಕೆ ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಮೇಲ್ಸೇತುವೆ ಸಂಚಾರ ಬಂದ್

ಬೆಂಗಳೂರು: ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಬೆಂಗಳೂರು ಏರ್​ಪೋರ್ಟ್​  ಹಾಗೂ ಬೆಂಗಳೂರು ನಗರಕ್ಕೆ  ಸಂಪರ್ಕಿಸುವ ರಸ್ತೆ ಮಾರ್ಗ ಬಂದ್ ಆಗಲಿದೆ. ಇಂದಿನಿಂದ ಎರಡು ದಿನಗಳ ಕಾಲ ರಾತ್ರಿ 11.30 ರಿಂದ ಬೆಳಗ್ಗೆ 5 ಗಂಟೆಯವರೆಗೆ ಹೆಬ್ಬಾಳದ ಮೇಲ್ಸೇತುವೆ ಸಂಚಾರ ಬಂದ್ ಆಗಲಿದೆ. ಬದಲಿ ವ್ಯವಸ್ಥೆ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ  ನೀಡಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಬಿಬಿಎಂಪಿ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ನಗರದ ಕಡೆಗೆ ಬರುವ ಮಾರ್ಗದಲ್ಲಿ ಡಾಂಬರೀಕರಣ ಕೆಲಸ ನಡೆಯಲಿದೆ. ಈ ಹಿನ್ನೆಲೆ ಹೆಬ್ಬಾಳ ಫ್ಲೈಓವರ್​ ಬಂದ್ ಆಗಲಿದೆ. ಜೂನ್​ 20 ಹಾಗೂ 21ರ ರಾತ್ರಿ ವೇಳೆ 11:30ರಿಂ ಬೆಳಗಿನ ಜಾವ 5 ಗಂಟೆವರೆಗೂ ಸಂಚಾರ ನಿರ್ಬಂಧಿಸಲಾಗಿದೆ.

ಯಲಹಂಕ ಹಾಗೂ ಬೆಂಗಳೂರು ಏಪೋರ್ಟ್​ ರಸ್ತೆಗಳಲ್ಲಿ ಬರುವ ಪ್ರಯಾಣಿಕರು ಹೆಬ್ಬಾಳ ಮೇಲ್ಸೇತುವೆ ಕೆಳಗಿನ ಸರ್ವೀಸ್ ರಸ್ತೆ ಬಳಸಬಹುದಾಗಿದೆ. ಹೆಬ್ಬಾಳ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಬಳಿಕ ತುಮಕೂರು ಕಡೆ ಹೊರ ವರ್ತುಲ ರಸ್ತೆ ಮುಖಾಂತರ ಸಾಗಿ ಕುವೆಂಪು ಸರ್ಕಲ್‌ನಲ್ಲಿ ಎಡ ತಿರುವು ಪಡೆದುಕೊಳ್ಳಬೇಕು. ನ್ಯೂ ಬಿಇಎಲ್ ರಸ್ತೆ ಮೂಲಕ ಸಾಗಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಳಿಕ ಮೇಖ್ರಿ ಸರ್ಕಲ್ ತಲುಪಿ ಅಲ್ಲಿಂದ ಬೆಂಗಳೂರು ನಗರಕ್ಕೆ ತೆರಳಲು ಬದಲಿ ಮಾರ್ಗದ ಸೂಚನೆ ನೀಡಲಾಗಿದೆ.

ಸದ್ಯ ಏಪೋರ್ಟ್​ ರಸ್ತೆಗಳಲ್ಲಿ ಮೂರು ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೆರಡು ದಿನ ಹೆಬ್ಬಾಳ ರಸ್ತೆಯಲ್ಲಿ ಮೂಲಕ ಓಡಾಡುವವರಿಗೆ ಟ್ರಾಫಿಕ್ ತಲೆ ಬಿಸಿ ಮತ್ತಷ್ಟು ಹೆಚ್ಚಲಿದೆ. ವೀಕೆಂಡ್​ ಹಿನ್ನೆಲೆ ಹೆಚ್ಚು ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ಆಸ್ತಿ ನೋಂದಣಿಗೆ ಮತ್ತೆ ಸರ್ವರ್ ಡೌನ್ ಕಾಟ- ಸಬ್ ರಿಜಿಸ್ಟರ್ ಕಚೇರಿಗಳ ಎದುರು ಜನಾಕ್ರೋಶ!

ಬೆಂಗಳೂರು: ಕಾವೇರಿ ಸರ್ವರ್ ಡೌನ್ ಅದ ಹಿನ್ನಲೆ ರಾಜ್ಯದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಕಳೆದ ಒಂದು ವಾರದಿಂದ ಜನರು ಸಬ್ ರಿಜಿಸ್ಟರ್ ಆಫೀಸ್ ನ ಬಾಗಿಲು ಬಳಿ ಜನ ಕಾಯುವಂತಹ ಪರಿಸ್ಧಿತಿ ಬಂದಿದ್ದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ,
ಕಳೆದ ಜೂನ್ 13 ರಿಂದ ನಿರಂತರವಾಗಿ ಸರ್ವರ್ ಡೌನ್ ಆಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಶುಕ್ರವಾರದಿಂದ ನಿರಂತರವಾಗಿ ಸರ್ವರ್ ಸಮಸ್ಯೆ ಕಾಡುತ್ತಿದೆ, ಇದರಿಂದ ಜನರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ,
ದಸ್ತಾಮೇಜುಗಳ ನೋಂದಣಿಗೆ ಸಿಟಿಜನ್ ಲಾಗಿನ್ ನಲ್ಲಿ ದಾಖಲೆ ಅಪ್ ಲೋಟ್ ಮಾಡಲು ಇ-ಖಾತಾ ಅಥವಾ ಪಹಣಿ ಮಾಹಿತಿ ತೋರಿಸುತ್ತಿಲ್ಲ, ಇದಾದ ಮೇಲೆ ಮತ್ತೆ ದಾಖಲೆ ಪತ್ರ ಅಪ್ ಲೋಡ್ ಮಾಡುವಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ, ಒಂದು ವೇಳೆ ಹೇಗೋ ಅಪ್ ಲೋಡ್ ಮಾಡಿದಾಗ ಸಬ್ ರಿಜೆಸ್ಟ್ರಾರ್ ಲಾಗಿನ ನಲ್ಲಿ ತೋರಿಸುತ್ತಿಲ್ಲ ಎನ್ನಲಾಗಿದೆ,
ಅಷ್ಟೇ ಅಲ್ಲದೆ ಅನ್ ಲೈನ್ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಲು ಪೇಮೆಂಟ್ ಗೇಟ್ ವೇನಲ್ಲೂ ಸದಾಕಾಲ ಸರ್ವರ್ ಬ್ಯೂಸಿಯಿದೆ ಎಂದು ತೋರಿಸುತ್ತಿದೆ, ಜೊತೆಗೆ ಲಕ್ಷಾಂತರ ರೂಪಾಯಿ ಹಣ ಪಾವತಿಯ ವೇಳೆ ಕೂಡ ದಿಢೀರ್ ಸರ್ವರ್ ಡೌನ್ ಆಗಿ ಅತ್ತ ಬ್ಯಾಂಕ ಗೂ ವಾಪಸ್ ಆಗದೇ, ಇತ್ತ ಪಾವತಿ ಕೂಡ ಆಗದೆ, ಸತಾಯಿಸುತ್ತಿದೆ,
ಸದ್ಯ ಸಬ್ ರಿಜಿಸ್ಟ್ರರ್ ಆಫೀಸ್ ಮುಂದೆಯೇ ಜನರು ಸಾಲು ಗಟ್ಟಿ ನಿಂತಿದ್ದು, ಇತ್ತ ನೋಂದಣಿ ಮಾಡಲಾಗದೆ, ಅತ್ತ ಕೆಲಸ ಕೂಡ ಮಾಡಲಾಗದೆ ಸಿಟ್ಟಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ,

ಸರ್ಕಾರಿ ನೌಕರರ ಎರಡನೇ ಮತ್ತು ನಾಲ್ಕನೇ ಶನಿವಾರ ರೆಜೆ ರದ್ದು-ಇಂದಿನಿಂದಲೇ ಆದೇಶ ಜಾರಿ!

ನವದೆಹಲಿ: ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ಆದೇಶ ಜಾರಿಗೆ ಬಂದಿದ್ದು ರಾಷ್ಟ್ರಪತಿಯವರ ಅನುಮತಿ ಅಂಕಿತವೂ ದೊರೆತಿದೆ,
ಜೂ.14 ರಿಂದಲೇ ಈ ಆದೇಶ ಜಾರಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಇರುವುದಿಲ್ಲ,
2 ಮತ್ತು 4 ನೇ ಶನಿವಾರ ರಜಾ ದಿನದ ಆದೇಶವನ್ನು ಹಿಂಪಡೆದಿದ್ದು ಕೇಂದ್ರ ಸರ್ಕಾರ ರಾಜ್ಯಪತ್ರವನ್ನೂ ಸಹ ಹೊರಡಿಸಿದೆ,

“ಯೋಗವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು”

” ಯೋಗ ವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು “.
“ಯೋಗ” ಎಂದರೆ ಸೇರಿಸು, ಒಂದಾಗಿಸು, ಒಂದುಗೂಡಿಸು, ಕೇಂದ್ರೀಕರಿಸು, ಜೋಡಿಸು ಎಂದರ್ಥ.
ಮನಸ್ಸು ದೇಹ ಮತ್ತು ಉಸಿರನ್ನು ಪ್ರಜ್ಞಾಪೂರ್ವಕವಾಗಿ ಒಂದುಗೂಡಿಸುವುದೇ “ಯೋಗ”
“ಯೋಗ” ಅತ್ಯಂತ ಪ್ರಾಚೀನವಾದ ಹಾಗೂ ಪವಿತ್ರವಾದ ಕಲೆ ಮತ್ತು ವಿಜ್ಞಾನ. ಯೋಗದ ಬಗ್ಗೆ ಪುರಾಣಗಳಲ್ಲಿ, ವೇದೋಪನಿಷತ್ತುಗಳಲ್ಲಿ , ಹಾಗೂ ಭಗವದ್ಗೀತೆಯಲ್ಲಿಯೂ ಕೂಡ ಉಲ್ಲೇಖವಿದೆ.

ಯೋಗದ ಮೂಲಪುರುಷ “ಶಿವ” ಎಂಬ ಉಲ್ಲೇಖ ಗ್ರಂಥಗಳಲ್ಲಿವೆ.
” ಶ್ರೀ ಕೃಷ್ಣ” ಭಗವದ್ಗೀತೆಯಲ್ಲಿ – ಸಿದ್ಧಿ ಮತ್ತು ಆಸಿದ್ಧಿ ಗಳನ್ನು ಸಮಾನ ಮನಸ್ಸಿನಿಂದ ನೋಡುವುದೇ “ಯೋಗ” ಎಂದು ತಿಳಿಸಿದ್ದಾರೆ.
” ಪತಾಂಜಲಿ” ಮಹರ್ಷಿಗಳು ತಮ್ಮ ಯೋಗ ಸೂತ್ರದಲ್ಲಿ – ಚಿತ್ತದ ವೃತ್ತಿಗಳನ್ನು ನಿರೋಧಿಸುವುದೇ ಯೋಗವೆಂದು ಹೇಳಿದ್ದಾರೆ.

ಹೀಗೆ ಯೋಗವನ್ನು ಋಷಿ ಮುನಿಗಳು ತಮ್ಮ ಜೀವನದಲ್ಲಿ ಅನುಸರಿಸಿ ಮತ್ತು ಮುಂದುವರಿಸಿಕೊಂಡು ಬಂದು ವಿಶ್ವಕ್ಕೆ ಪರಿಚಯಿಸಿದ್ದಾರೆ, ಇದು ನಮಗೆ ಇಂದಿನ ಕಾಲಘಟ್ಟದಲ್ಲಿ ಸರ್ವ ಶ್ರೇಷ್ಠ ಕೊಡುಗೆಯಾಗಿದೆ . ಯೋಗ ಯಾವುದೇ ಒಬ್ಬ ವ್ಯಕ್ತಿಗೆ, ಸಮಾಜಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದದ್ದಲ್ಲ, ಇದು ಅನಂತ ಹಾಗೂ ಅಪರಿಮಿತವಾದದ್ದು.
” ಯೋಗ” ಎಂದರೆ ಸೇರಿಸುವ ಕುಡಿಸು ಜೋಡಿಸು ಒಂದಾಗಿಸು ಎಂಬ ಅರ್ಥಗಳಿವೆ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತಮ್ಮ ಉಸಿರನ್ನು ಪ್ರಕೃತಿಯೊಡನೆ ಸೇರಿಸುತ್ತಾ, ಒಂದಾಗಿಸುತ್ತ, ಪ್ರಾಣ ಶಕ್ತಿಯಾದ ಉಸಿರನ್ನು ಪರಸ್ಪರ ಒಂದುಗೂಡಿಸುತ್ತಾ, ಸದಾ ಕಾಲ ಪ್ರಾಣವಾಯು ವನ್ನು ಪರಸ್ಪರ ವಿನಿಯೋಗ ಮಾಡುತ್ತಾ ಒಂದು ರೀತಿಯ ಸರ್ವಶ್ರೇಷ್ಠವಾದ ಯೋಗಾಭ್ಯಾಸವನ್ನು ತನಗರಿವಿಲ್ಲದಂತೆ ಹುಟ್ಟಿನಿಂದ ಸಾಯುವವರೆಗೂ ಪ್ರಾಣಾಯಾಮಭ್ಯಾಸವನ್ನು ಮಾಡುತ್ತಾ, ತನ್ನ ಪ್ರತಿಯೊಂದು ನಿಲುಮೆಯ ಬಂಗಿಗಳಿಂದ ಆಸನಗಳನ್ನು ಮಾಡುತ್ತಾ, ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುತ್ತ ಬೆಳೆದು ಬಂದಿವೆ . ಅಂದರೆ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಬೆಳಕು, ಆಹಾರ ಮತ್ತು ಆಕಾಶ ಇತ್ಯಾದಿಗಳನ್ನು ಅನುಭವಿಸುತ್ತಾ, ಅನುಸರಿಸಿತ್ತ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಸ್ತಿತ್ವದಲ್ಲಿವೆ.
ಸಹಸ್ರಾರು ವರ್ಷಗಳಿಂದ “ಯೋಗ” ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ,
ಹಾಗೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡುವಲ್ಲಿ ಕಾರಣಿಭೂತವಾಗಿದೆ. ಯೋಗ ತನ್ನದೇ ಆದ ಶಾಖೆಗಳನ್ನು ಒಳಗೊಂಡಿದೆ ಅವುಗಳಲ್ಲಿ ಪ್ರಮುಖವಾದಂದರೆ :- ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ ಹಾಗೂ ರಾಜಯೋಗ ಇತ್ಯಾದಿಗಳು.
ಪತಂಜಲಿ ಮಹರ್ಷಿಯವರ ರಾಜಯೋಗದ ಪರಮ ಧ್ಯೇಯ :- ಅಷ್ಟ- ಅಂಗ-ಯೋಗ. ಇವರು ತಮ್ಮ ಯೋಗ ಸೂತ್ರಗಳಲ್ಲಿ, ಸಾಧನೆಯ 8 ಮೆಟ್ಟಿಲುಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಅಷ್ಟಾಂಗ ಯೋಗ :-
ಸಂಪೂರ್ಣ ಜೀವನಕ್ಕೆ ಬೇಕಾದ ಯಮ:- ಅಂದರೆ ಸಾಮಾಜಿಕ ನೀತಿ ನಿರ್ಬಂಧಗಳು, ನಿಯಮ:- ಸ್ವಯಂ ನಿರ್ಬಂಧಗಳ ಆಚರಣೆಗಳು, ಆಸನ – ಪ್ರಾಣಾಯಾಮ- ಪ್ರತ್ಯಹಾರ :- ಇವು ದೇಹದ ಭಂಗಿ, ಉಸಿರಿನ ನಿಯಂತ್ರಣ, ಮನೋ ನಿಗ್ರಹದಿಂದ ಹೊರಪ್ರಪಂಚದ ಪ್ರಜ್ಞೆಗಳಿಂದ ಅಂತರ್ಮುಖಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಧಾರಣ – ಧ್ಯಾನ ಮತ್ತು ಸಮಾಧಿ :- ಇಂದ್ರಿಯ ನಿಗ್ರಹ ಹೊಂದಿದ ಮನಸ್ಸು, ಅಂತರ್ಮುಖಿಯಾಗಿ ಏಕಾಗ್ರತೆಯಿಂದ ಪರಿಶುದ್ಧ ಪ್ರಜ್ಞೆಯೊಂದಿಗೆ ಅಷ್ಟಾಂಗ ಯೋಗದ ತುತ್ತ ತುದಿಯ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನುಭವಿಸುವುದು.
ಜೀವಾತ್ಮ ಮತ್ತು ಪರಮಾತ್ಮಗಳೆರಡು ಒಂದಾಗುವುದು…
ಹೀಗೆ ಯೋಗ ಭೂಮಿಯ ಮೇಲೆ ವಾಸಿಸುವ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಔಷಧಿಯಾಗಿದೆ.

ಅಂಬಿಕಾ ಸಿ
ಗಾಂಧಾರಿ ವಿದ್ಯೆ ಮತ್ತು ಯೋಗ ಶಿಕ್ಷಕಿ
( ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಯೋಗ ಶಿಕ್ಷಕಿ, ಚಿನ್ನದ ಪದಕ ವಿಜೇತರು, ಮತ್ತು 9 ತಿಂಗಳ ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರ ಮೂಲಕ ಪ್ರಪ್ರಥಮ ಬಾರಿಗೆ ಎರಡು ವಿಶ್ವ ದಾಖಲೆ ).

ಜು.1 ರಿಂದ ಮನೆ ಬಾಗಿಲಿಗೆ ಬರಲಿದೆ ಇ-ಖಾತಾ ಕರಡು ಪ್ರತಿ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ, ಜುಲೈ ನಿಂದ ಕರಡು ಇ-ಖಾತಾ ಪ್ರತಿಗಳನ್ನು ಮನೆ ಬಾಗಲಿಗೆ ತಲುಪಿಸುವ ಯೋಜನೆ ಶುರುವಾಗುತ್ತಿದೆ,
ಕಂದಾಯ ಸಚಿವರ ಕ್ಷೇತ್ರದಲ್ಲಿ 25,000 ಇ-ಖಾತಾಗಳು ಸಿದ್ಧವಾಗಿವೆ, ಅಭಿಯಾನವು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದೆ,
ಬೆಂಗಳೂರಿನ ಸುಮಾರು 25 ಲಕ್ಷ ಆಸ್ತಿಗಳಿದ್ದು, ಕೇವಲ ಐದು ಲಕ್ಷ ಜನರು ಮಾತ್ರ ಇ-ಖಾತಾ ಪಡೆದಿದ್ದಾರೆ, ಉಳಿದವರಿಗೂ ಇ-ಖಾತಾ ವಿತರಣೆ ಮಾಡಬೇಕಿದೆ, ಕರಡು ಇ ಖಾತಾ ಮನೆ ಬಾಗಿಲಿಗೆ ವಿತರಣೆ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ,
ಯೋಜನೆ ಮಹತ್ವದ ಅನುಷ್ಠಾನ ಕುರಿತು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸಚಿವರಾದ ಕೆಜಿ ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಮತ್ತು ಬೈರತಿ ಸುರೇಶ್ ಉಪಸ್ಧಿತರಿದ್ದು ಸಲಹೆಗಳನ್ನು ನೀಡಿದ್ದಾರೆ,

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗೆ ಅವಕಾಶ

ಬೆಂಗಳೂರು: ನಮ್ಮ ಹೆಮ್ಮೆಯ ರಾಜ್ಯದ ನಂದಿನಿ ಉತ್ಪನ್ನಗಳನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ ಮುಂದಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು ಬಿ.ಎಂ.ಆರ್.ಸಿ.ಎಲ್. ಒಪ್ಪಿದೆ.
ಃಒಖಅಐ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಅಮೂಲ್ ಸಂಸ್ಥೆಯ ಕಿಯೋಸ್ಕ÷್ಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಈ ಬಗ್ಗೆ ಗುಜರಾತ್ ಮಿಲ್ಕ್ ಫೆಡರೇಶನ್ ಜೊತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು. ರಾಜ್ಯದ ರೈತರ ಹೆಮ್ಮೆಯ ಕೆಎಂಎಫ್ ನಂದಿನಿಗೆ ಮಣೆ ಹಾಕಿರಲಿಲ್ಲ.
ಬಿ.ಎಂ.ಆರ್.ಸಿ.ಎಲ್. ನಿರ್ಧಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಪ್ರವೇಶಿಸಿ, ಬಿ.ಎಂ.ಆರ್.ಸಿ.ಎಲ್.ಗ್ಲೋಬಲ್ ಟೆಂಡರ್ ಕರೆದಿದ್ದÄಂಟು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿ.ಎಂ.ಆರ್.ಸಿ.ಎಲ್. ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಕೆಎಂಎಫ್ ಎಂಡಿ ಶಿವಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ 8 ಕಡೆ ನಂದಿನಿ ಮಳಿಗೆಗಳು ಓಪನ್ ಮಾಡಲು ಹಾಗೂ ಸರ್ಕಾರದ ನಿರ್ದೇಶನದಂತೆ 2 ಕಡೆಗಳಲ್ಲಿ ಮಾತ್ರ ಅಮೂಲ್‌ಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.
ಕೆಎAಎಫ್‌ನ ಶಿವಸ್ವಾಮಿ ಅವರು ಮಾತನಾಡಿ, ನಗರದ 20 ಮೆಟ್ರೋ ನಿಲ್ದಾಣದಲ್ಲಿ ರಿಯಾಯಿತಿ ದರದಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ಕೊಡ್ತೇವೆ. ಈ ಹಿಂದೆ 2020-22ರ ಅವಧಿಯಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ ತೆರೆಯಲು ಬಿ.ಎಂ.ಆರ್.ಸಿ.ಎಲ್. ಟೆಂಡರ್ ಕರೆದಿತ್ತು. ಆಗ ಕೆಎಂಎಫ್ ಈ ಟೆಂಡರ್‌ನಲ್ಲಿ ಭಾಗಿ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಕೂಡಾ ಇರಲಿವೆ ಎಂದು ತಿಳಿಸಿದ್ದಾರೆ.

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಂಪಾಕತ್ವದ ‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಂಪಾಕತ್ವದ
‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ
‘ಜನರ ಕಡೆಗೆ ವೈಚಾರಿಕ ನಡಿಗೆ’ ಮೂಲಕ ಕುವೆಂಪು ವಿಚಾರಾಂದೋಲನ

ರಾಷ್ಟಕವಿ ಕುವೆಂಪು ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳ ಕೇಂದ್ರ ಪ್ರಜ್ಞೆಯನ್ನು ಪ್ರಸಾರ ಮಾಡುವ ಅಗತ್ಯವಿದೆ. ಕುವೆಂಪು ಅವರು ಅಂದಿನ ದಿನಗಳಲ್ಲೇ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯಪರತೆ, ಒಕ್ಕೂಟ ಪದ್ಧತಿ ಪರವಾದ ಚಿಂತನಶೀಲತೆ, ಜಾತಿ ಮತ್ತು ಧರ್ಮ ತಾರತಮ್ಯ ವಿರೋಧಿ ವೈಚಾರಿಕತೆ, ಮೂಢನಂಬಿಕೆ ವಿರೋಧಿ ವೈಜ್ಞಾನಿಕತೆಯೇ ಮುಂತಾದ ಬರಹಗಳು ಇಂದಿನ ಸನ್ನಿವೇಶದಲ್ಲಿ ಜನರಿಗೆ ತಲುಪಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಕುವೆಂಪು ಅವರ ಕೆಲವು ಆಯ್ದ ಲೇಖನಗಳು ಮತ್ತು ಲೇಖನಗಳು ಮತ್ತು ಲೇಖನಗಳ ಆಯ್ದ ಭಾಗಗಳನ್ನು ಸಂಕಲಿಸಿ ‘ಕುವೆಂಪು ವಿಚಾರ ಕ್ರಾಂತಿ’ ಎಂಬ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಸಂಪಾದಕರಾಗಿ 25 ಪುಟಗಳ ಪ್ರಸ್ತಾವನೆ ಬರೆದು ಕುವೆಂಪು ಅವರ ಲೇಖನಗಳನ್ನು ವಿಶ್ಲೇಷಿಸಿದ್ದಾರೆ. ಈ ಪುಸ್ತಕವನ್ನು ‘ಜನ ಪ್ರಕಾಶನ’ವು ಪ್ರಕಟಿಸುತ್ತಿದ್ದು, ‘ಜನರ ಕಡೆಗೆ ವೈಚಾರಿಕ ನಡಿಗೆ’ ಎಂಬ ಘೋಷಣೆಯಡಿ 1 ಲಕ್ಷ ಪ್ರತಿಗಳನ್ನು ಮುದ್ರಿಸಿ ಮೊದಲಿಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು.
ನಂತರ ರಾಜ್ಯದಾದ್ಯಂತ ಬೇರೆ-ಬೇರೆ ಜಿಲ್ಲೆಗಳಲ್ಲೂ ಬಿಡುಗಡೆ ಮಾಡುವ ಮುಖಾಂತರ ವಿದ್ಯಾರ್ಥಿ-ಯುವಜನರನ್ನು ಒಳಗೊಂಡು ‘ಕುವೆಂಪು ವಿಚಾರಾಂದೋಲನ’ದ ಮೂಲಕ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಓದುಗರ ಕೈ ಸೇರುವಂತೆ ಯೋಜನೆ ರೂಪಿಸಲಾಗುತ್ತಿದೆ.
‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರು ಇದೇ ತಿಂಗಳ 25ರಂದು ಬುಧವಾರ ಸಾಯಂಕಾಲ 5:00 ಗಂಟೆಗೆ ಜನಾರ್ಪಣೆ ಮಾಡಲಿದ್ದಾರೆ. ಈ ಜನಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಅರಮನೆ ರಸ್ತೆಯ ಭಾರತ ಸ್ಕೌಟ್ ಅಂಡ್ ಗೈಡ್ಸ್ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಲಿದ್ದು ನಾಡೋಜಾ ಡಾ. ಹಂಪನಾ, ಜಸ್ಟಿಸ್ ನಾಗಮೋಹನದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿಚಿದಾನಂದಗೌಡ, ಅಳಿಯ ಡಾ. ಚಿದಾನಂದಗೌಡ ಮತ್ತು ಲೇಖಕ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮಕ್ಕೆ ಮುಂಚೆ 4 ಗಂಟೆಗೆ ಉಪಹಾರ ಮತ್ತು ಡಾ. ಶಮಿತಾ ಮಲ್ನಾಡ್ ತಂಡದಿ0ದ ಕುವೆಂಪು ಗೀತೆ ಗಾಯನವಿದೆ.

55 ನೇ ವಂಸತಕ್ಕೆ ಕಾಲಿಟ್ಟ ರಾಹುಲ್‌ ಗಾಂಧಿ; ಪ್ರಧಾನಿ ಮೋದಿ ಸೇರಿ ಹಲವರು ಟ್ವೀಟ್‌ ಮಾಡಿ ಶುಭಾಶಯ

ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಇಂದು 55 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಹಲವು ಗಣ್ಯರು ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಪ್ರಧಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ.

ಇಂದು ಮುಂಜಾನೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಉನ್ನತ ನಾಯಕರು ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ” ಎಂದು ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಕಾಂಗ್ರೆಸ್ ನಾಯಕನಿಗೆ ಶುಭಾಶಯಗಳನ್ನು ಕೋರಿದರು ಮತ್ತು ಅವರು ರಕ್ತಸಂಬಂಧದಿಂದಲ್ಲ, ಬದಲಾಗಿ ಚಿಂತನೆ, ದೃಷ್ಟಿಕೋನ ಮತ್ತು ಉದ್ದೇಶದಿಂದ ಬದ್ಧರಾಗಿದ್ದಾರೆ ಎಂದು ಹೇಳಿದರು. ನನ್ನ ಆದರ್ಶ ಸಹೋದರ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು – ರಕ್ತದಿಂದಲ್ಲ, ಬದಲಾಗಿ ಚಿಂತನೆ, ದೃಷ್ಟಿಕೋನ ಮತ್ತು ಉದ್ದೇಶದಿಂದ ಬದ್ಧರಾಗಿದ್ದೇವೆ. ನೀವು ದೃಢವಾಗಿ ನಿಂತು ಧೈರ್ಯದಿಂದ ಮುನ್ನಡೆಸುವುದನ್ನು ಮುಂದುವರಿಸಿ. ಉಜ್ವಲ ಭಾರತದತ್ತ ನಮ್ಮ ನಡಿಗೆಯಲ್ಲಿ, ಗೆಲುವು ನಮ್ಮದಾಗುತ್ತದೆ” ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏತನ್ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ ತಮ್ಮ ನಾಯಕನ ಜನ್ಮದಿನದಂದು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಯೋಜಿಸಿದೆ. ಈ ಉದ್ಯೋಗ ಮೇಳವು 100 ಕ್ಕೂ ಹೆಚ್ಚು ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಒಟ್ಟುಗೂಡಿಸುತ್ತದೆ, ಇದು ಜನರಿಗೆ 5000 ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುತ್ತದೆ. ಹಲವಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ

ನಾವು ಆಟಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ: ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಕರ್ನಾಟಕದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರದಿಂದ ನಿರ್ಬಂಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ಯಾರಿಸ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ವಾಪಸಾಗಿ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ಧಾರವು ಕರ್ನಾಟಕದ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.

ನಾವು ಆಟ ಆಡಲು ವಿದೇಶಕ್ಕೆ ಹೋಗುತ್ತಿಲ್ಲ. ರಾಜ್ಯದ ಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಳಿತಾದರೆ, ದೇಶಕ್ಕೂ ಒಳಿತು. ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ,” ಎಂದು ಖರ್ಗೆ ಒತ್ತಿ ಹೇಳಿದರು. ಅಮೆರಿಕಕ್ಕೆ ತೆರಳದಂತೆ ಕೇಂದ್ರ ಸರ್ಕಾರದಿಂದ ವಿನಾಕಾರಣ ನಿರ್ಬಂಧ ಹೇರಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ಬಾರಿಯ ಅಮೆರಿಕ ಭೇಟಿಯಲ್ಲಿ, ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು 35-40 ಸಾವಿರ ಕೋಟಿ ರೂಪಾಯಿಗಳ ಒಪ್ಪಂದಗಳನ್ನು ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮದ ಮೂಲಕ ಒಡಂಬಡಿಕೆಗೆ ತಂದಿದ್ದರು. ಇತ್ತೀಚೆಗೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸಂಬಂಧಿಸಿದಂತೆ 20 ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಕರ್ನಾಟಕವು ಎಲೆಕ್ಟ್ರಾನಿಕ್ಸ್ ಮತ್ತು ಏರೋಸ್ಪೇಸ್ ಹಬ್‌ ಆಗಿ ಮಾರ್ಪಟ್ಟಿದೆ. “ನವೋದ್ಯಮದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ. ಆದರೂ, ಈ ಬಾರಿಯ ಅಮೆರಿಕ ಪ್ರವಾಸದ ಪ್ರಸ್ತಾವವನ್ನು ಕೇಂದ್ರ ಯಾಕೆ ತಿರಸ್ಕರಿಸಿತು ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ,” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿದೇಶಿ ಪ್ರವಾಸಕ್ಕೆ ಮೊದಲಿಗೆ ನಿಯೋಗಕ್ಕೆ ಅನುಮತಿ ನೀಡದ ಕೇಂದ್ರ, ನಂತರ ಕೆಲವರಿಗೆ ಅನುಮತಿ ನೀಡಿತು. ಆದರೆ, ಖರ್ಗೆ ಅವರಿಗೆ ಅನುಮತಿ ನಿರಾಕರಿಸಿತು. “ಈ ಎಲ್ಲ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ನಿರ್ಧಾರ ಸರಿಯಲ್ಲ, ಇದರ ಬಗ್ಗೆ ಮುಂದೆ ಮಾತನಾಡುವೆ,” ಎಂದು ಖರ್ಗೆ ಎಚ್ಚರಿಕೆ ನೀಡಿದರು.