Home Blog Page 85

ತೋಟಗಾರಿಕೆ ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಜೂ.9: ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಹಾಗೂ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಸಹಾಯಧನ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರಿಗೆ ಅಡಿಕೆ ಸುಲಿಯುವ ಯಂತ್ರ, ದೋಟಿ, ಬ್ರಷ್ಕಟರ್, ಟಿಲ್ಲರ್, ಪವರ್ ವೀಡರ್, ಸ್ಪೆçöÊಯರ್, ರೋಟೋವೇಟರ್, ಡಿಗ್ಗರ್ ಹಾಗೂ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ/ಅತೀ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ.50ರಷ್ಟು ಹಾಗೂ ಸಾಮಾನ್ಯ, ಇತರೆ ವರ್ಗದ ರೈತರಿಗೆ ಶೇ. 40ರಷ್ಟು(ಗರಿಷ್ಠ 1.25 ಲಕ್ಷ ಅಥವಾ 5 ಯಂತ್ರೋಪಕರಣ ಮಾತ್ರ) ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ಹಾಗೂ ಉದ್ದಿಮೆದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್ ಬಂದಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡ ರೈತರಿಗೆ) ಜಂಟಿ ಖಾತೆಯಿದ್ದರೆ ಒಪ್ಪಿಗೆ ಪತ್ರ, ಖಾತೆದಾರರ ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ, ಮತ್ತಿತರೆ ದಾಖಲೆಗಳನ್ನು ಲಗತ್ತಿಸಿ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ ಅಥವಾ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.

ಸರ್ಕಾರದಿಂದ ನೀಡಲಾಗುವ ಗುರಿ ಮತ್ತು ಅನುದಾನದ ಆಧಾರದ ಮೇಲೆ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ತುಮಕೂರು-9686503500, ಗುಬ್ಬಿ-9535781963, ಸಿರಾ-9844042356, ಕುಣಿಗಲ್-9606570210, ತಿಪಟೂರು- 9845014293, ಚಿಕ್ಕನಾಯಕನಹಳ್ಳಿ-9686056705, ಮಧುಗಿರಿ-9916378199, ತುರುವೇಕೆರೆ-9448416334, ಕೊರಟಗೆರೆ-9448001644 ಹಾಗೂ ಪಾವಗಡ-9448448970ಯನ್ನು ಸಂಪರ್ಕಿಸಬಹುದೆAದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್ ಕೋರ್ಸಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಜೂ.9: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2025-26ನೇ ಸಾಲಿನ ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪದವೀಧರರಿಗೆ ಹಾಗೂ ರಂಗಭೂಮಿಯಲ್ಲಿ ಆಸಕ್ತಿ/ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಕರ್ನಾಟಕ ಹಾಗೂ ಭಾರತದ ಖ್ಯಾತ ರಂಗತಜ್ಞರು/ ಅತಿಥಿ ಉಪನ್ಯಾಸಕರಿಂದ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್ www.theatreschoolsanehalli.org ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 25ರೊಳಗೆ ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ, ಸಾಣೇಹಳ್ಳಿ–577597, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ. 9448398144 / 8861043553ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸಾಲ ಸೌಲಭ್ಯಕ್ಕಾಗಿ ಮರಾಠ ಸಮುದಾಯದವರಿಂದ ಆನ್‌ಲೈನ್ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಜೂ.9: ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಮರಾಠ ಮತ್ತು ಇದರ ಉಪಜಾತಿಗೆ ಸೇರಿದ ಜನರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಶ್ರೀ ಶಹಾಜಿರಾಜೇ ಸಮೃದ್ಧಿ, ಬೀಜಾವು-ಜಲಭಾಗ್ಯ(ಗಂಗಾಕಲ್ಯಾಣ ನೀರಾವರಿ ಯೋಜನೆ), ಅರಿವು ಶೈಕ್ಷಣಿಕ ಸಾಲ(ಹೊಸತು), ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ, ಮರಾಠ ಮಿಲ್ಟಿç ಹೋಟೆಲ್, ಸ್ವಯಂ ಉದ್ಯೋಗ ಸಾಲ( ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಸ್ವಾವಲಂಬಿ ಸಾರಥಿ ಹಾಗೂ ಸ್ವಾತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಜಾಲತಾಣ https://www.kaushalkar.com ಹಾಗೂ ಉಳಿದ ಯೋಜನೆಗಳ ಸೌಲಭ್ಯ ಪಡೆಯಲು ಸೇವಾಸಿಂಧು https://sevasindhu.karnataka.gov.in ಮೂಲಕ ಜುಲೈ 4ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್https://kmcdc.karnataka.gov.in ಅಥವಾ ನಿಗಮದ ಸಹಾಯವಾಣಿ 8867537799, 080-29903994 ಅಥವಾ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ವಾ.ಸಂಖ್ಯೆ 0816-2005008ನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸೌಲಭ್ಯ : ವಿಶ್ವಕರ್ಮ ಜನಾಂಗದವರಿ0ದ ಆನ್‌ಲೈನ್ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಜೂ.೯: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಕಲ್ಪಿಸಲು ಅರ್ಹ ವಿಶ್ವಕರ್ಮ ಸಮುದಾಯದವರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ, ಅರಿವು-ಶೈಕ್ಷಣಿಕ ನೇರಸಾಲ(ಹೊಸದು-ನವೀಕರಣ), ಗಂಗಾಕಲ್ಯಾಣ, ಸ್ವಯಂ ಉದ್ಯೋಗ ನೇರಸಾಲ(ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ, ವಿದೇಶಿ ವ್ಯಾಸಂಗ ಹಾಗೂ ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಜಾಲತಾಣ https://sevasindhu.karnataka.gov.in ಹಾಗೂ ಉಳಿದ ಯೋಜನೆಗಳ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಗ್ರಾಮ ಒನ್, ತುಮಕೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಜುಲೈ ೨ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್ https://kvcdcl.karnataka.gov.in ಅಥವಾ ನಿಗಮದ ಕೇಂದ್ರ ಕಚೇರಿಯ ದೂ.ಸ. ೦೮೦-೨೨೩೭೪೮೪೮/ ೭೮೯೯೮೯೯೦೩೯ ಅಥವಾ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ವಾ.ಸಂಖ್ಯೆ ೦೮೧೬-೨೦೦೫೦೦೮ನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ,  ನ್ಯಾಯ ಕೊಡಿ ಎಂದು- ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ*

*ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ,  ನ್ಯಾಯ ಕೊಡಿ ಎಂದು- ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ*

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಟಿ. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇಕಡ 50 ಮಿತಿಗೊಳಿಸಲು ಆದೇಶಿಸಿರುವ ಬಗ್ಗೆ ಮತ್ತು ಕಾಂತರಾಜು ಮತ್ತು ಜೆ.ಪಿ.ಹೆಗಡೆ ಆಯೋಗಗಳ ಮೀಸಲಾತಿ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸದಂತೆ ತಡೆಹಿಡಿದಿರುವ ಬಗ್ಗೆ.

 

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಡಾ||ಗಾ.ನಂ.ಶ್ರೀಕಂಠಯ್ಯ IFS(R), ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಎಂ.ಎ.ಆನಂದ್, ಸಂಘದ ಪ್ರಧಾನ ಕಾರ್ಯದರ್ಶಿ ಅಡಿಟರ್ ನಾಗರಾಜ್ ಯಲಚವಾಡಿ, ಕಡಬಗೆರೆ ಒಕ್ಕಲಿಗರ ಕ್ರೀಯಾ ಸಮಿತಿ ಅಧ್ಯಕ್ಷರಾದ ಕೆ.ಸಿ.ಶಿವರಾಮು, ಒಕ್ಕಲಿಗ ಸಮಾಜದ ಮುಖಂಡರಾದ ರಂಗನರಸಿಂಹಯ್ಯ, ಮೇಲುಕೋಟೆ ಶಿವರಾಜು, ಪಿ.ಎಂ.ಅಶೋಕ್ ರವರು ಭಾಗವಹಿಸಿದ್ದರು.

*ಡಾ||ಗಾ.ನಂ.ಶ್ರೀಕಂಠಯ್ಯ* ರವರು ಮಾತನಾಡಿ ರಾಜ್ಯ ಸರ್ಕಾರ ಮೀಸಲಾತಿ ಕುರಿತು 12ನೇ ತಾರೀಖು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಕಾಂತರಾಜು ವರದಿಯಂತೆ ಶೇಕಡ 76ರಷ್ಟು ಮೀಸಲಾತಿ ಕೊಡಲು ತೀರ್ಮಾನ ಮಾಡಲು ಹೋರಟಿದ್ದಾರೆ.

ಕೋರ್ಟ್ ನಲ್ಲಿ ಶೇಕಡ 50ರಷ್ಟು ಮಾತ್ರ ಮೀಸಲಾತಿ ಕೊಡಬೇಕು ಎಂದು ಆದೇಶ ನೀಡಿದ್ದಾರೆ ಸಚಿವ ಸಂಪುಟ ಕರೆದು ವ್ಯರ್ಥ, ಕಾಂತರಾಜು, ಜಯಪ್ರಕಾಶಹೆಗಡೆ ಕೊಟ್ಟ ವರದಿ ತಿರಸ್ಕಾರ ಮಾಡಿ.
ಕುರುಬ ಸಮುದಾಯಕ್ಕೆ ಶೇಕಡ ನೂರಷ್ಟು ಮೀಸಲಾತಿ ಕೊಟ್ಟ ಬೇರೆ ಜಾತಿಯವರಿಗೆ ಮಲತಾಯಿ ಧೋರಣಯನ್ನು ಸರ್ಕಾರ ಮಾಡಿದೆ.

ಕಾಂತರಾಜು ವರದಿ 2014ರಲ್ಲಿ ಸರ್ವೆ ಮಾಡಿತು ಇದೀಗ 11ವರ್ಷವಾಗಿದೆ ಅ ವರದಿಯಲ್ಲಿ ಸತ್ಯಂಶವಿಲ್ಲ ಅವೈಜ್ಞಾನಿಕವಾಗಿದೆ ಎಲ್ಲ ಸಮುದಾಯದವರು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾತಿಜನಗಣತಿ ಸಮೀಕ್ಷೆ ನಡೆಯುವುದರಿಂದ ಅದರ ಮೇಲೆ ಸಮಾಜ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವುದರಿಂದ ಅ ವರದಿ ಮೇಲೆ ಮೀಸಲಾತಿ ಕೊಡಿ ಸರ್ಕಾರಕ್ಕೆ ಮನವಿ ಮಾಡಿದರು.

*ಅಡಿಟರ್ ನಾಗರಾಜ್ ಯಲಚವಾಡಿ* ರವರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಕುರಿತು ಸತತ ಹೋರಾಟ ಮಾಡುತ್ತಿದ್ದೇವೆ.

ಕಾಂತರಾಜು ವರದಿಯನ್ನು ಪರಿಣಿತರಿಗೆ ಕೊಡಿ, ಬೇಡಜಂಗಮ 500ಜನ ಇದ್ದರು ಈಗ ನಾಲ್ಕು ಲಕ್ಷ ಜನ ಇದ್ದಾರೆ ಇದರ ಕುರಿತು ತನಿಖೆಯಾಗಬೇಕು.

ಎಲ್ಲ ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಅವರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳು ಕೆಲಸಗಳು ಸಿಗಬೇಕು.

Governor Thaawarchand Gehlot Participates in Shri Ram Katha Gnana Program

Bengaluru, : The Hon’ble Governor of Karnataka, Shri Thaawarchand Gehlot, participated in the auspicious commencement of the Shri Ram Katha Gnana program organized by the Shri Ram Parivar Durga Puja Committee in Bengaluru. The spiritual event was graced by the revered presence of Param Pujya Jagadguru Shri Rambhadracharya Ji.

Addressing the gathering, Governor Thaawarchand Gehlot lauded the Committee for organizing the Shri Ram Katha Jnan Yagna, calling it a noble initiative aimed at universal welfare and global peace. “When Jagadguru Shri Rambhadracharya narrates the Ram Katha, it transcends storytelling—it becomes a divine journey of devotion, purification, and cultural enrichment,” he said.

The Governor described Jagadguru Shri Rambhadracharya as a legendary saint, scholar, poet, spiritual leader, and social reformer who has made unparalleled contributions to the promotion of Sanatan Dharma, Sanskrit, Hindi literature, and Vedic knowledge. He praised the Jagadguru’s extraordinary accomplishments despite his visual disability, highlighting his sharp memory, linguistic proficiency, eloquence, and creativity. “His life is a true inspiration for all,” he remarked, noting the Jagadguru’s receipt of the Padma Vibhushan for his exemplary service to the nation and society.

Governor Thaawarchand Gehlot also acknowledged the Jagadguru’s role in advancing inclusive education through the establishment of Jagadguru Rambhadracharya Divyang University, the first university in India dedicated exclusively to higher education for students with disabilities.Describing the Ram Katha, the Governor said, “The discourse of Shri Rambhadracharya Maharaj interweaves classical depth, modern relevance, and profound spiritual energy. His interpretation of Shri Ramcharitmanas offers rich moral and social insights, blending Sanskrit shlokas, Hindi couplets, and local dialects, making each episode a deeply moving experience for devotees.”He emphasized that the Katha is not merely a religious ritual but a guiding light for humanity, fostering values of compassion, duty, and righteousness. “India’s ancient cultural heritage is rooted in the ideals of Vasudhaiva Kutumbakam and Sarve Bhavantu Sukhinah. Events like these serve as powerful instruments for spiritual awakening, cultural preservation, and global harmony,” he added.

The Governor concluded by stating that in today’s world, where there is a growing quest for inner peace and spiritual meaning, such programs serve as beacons of hope and universal well-being.

ವಕ್ಫ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮನ್ಸೂರ್ ಅಲಿ ಖಾನ್

ನವದೆಹಲಿ/ಬೆಂಗಳೂರು, ಏಪ್ರಿಲ್ 14,2025: ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಅನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಧ್ವನಿ ಮನ್ಸೂರ್ ಅಲಿ ಖಾನ್ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 

ಕಾನೂನು ಸವಾಲಿನ ಹಿಂದಿನ ಕಾರಣಗಳನ್ನು ವಿವರಿಸಿದ ಖಾನ್, “ಈ ಕಾನೂನು ಸುಧಾರಣೆಯಲ್ಲ – ಇದು ನಮ್ಮ ಜನರ ತಲೆಮಾರುಗಳು ನಂಬಿಕೆ, ಪ್ರೀತಿ ಮತ್ತು ತ್ಯಾಗದಿಂದ ನಿರ್ಮಿಸಿದ್ದನ್ನು ನಿಯಂತ್ರಿಸುವ ಪ್ರಯತ್ನವಾಗಿದೆ. ಇದು ಕೇವಲ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ್ದಲ್ಲ ಇದು ಘನತೆ, ಸ್ವಾಯತ್ತತೆ ಮತ್ತು ನಮ್ಮ ಸಮುದಾಯಕ್ಕೆ ನಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವ ಹಕ್ಕಿನ ಬಗ್ಗೆ ಎಂದು ಹೇಳಿದ್ದಾರೆ.

ಸಾಕಷ್ಟು ಸಮಾಲೋಚನೆಯಿಲ್ಲದೆ ಅಂಗೀಕರಿಸಲಾದ ಈ ತಿದ್ದುಪಡಿಯು ಶತಮಾನಗಳಷ್ಟು ಹಳೆಯದಾದ ಮಸೀದಿಗಳು, ದರ್ಗಾಗಳು ಮತ್ತು ಸಮುದಾಯ ಆಸ್ತಿಗಳನ್ನು ಏಕಪಕ್ಷೀಯವಾಗಿ “ವಕ್ಫ್ ಅಲ್ಲದ” ಎಂದು ಮರು ವರ್ಗೀಕರಿಸಲು ಸರ್ಕಾರ ನೇಮಿಸಿದ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇದು ನ್ಯಾಯಾಂಗದ ಮೇಲ್ವಿಚಾರಣೆಯನ್ನು ಬದಿಗಿಡುತ್ತದೆ, ಹೊಸ ಧಾರ್ಮಿಕ ದತ್ತಿಗಳನ್ನು ನಿರ್ಬಂಧಿಸುತ್ತದೆ ಮತ್ತು ವಕ್ಫ್ ಸ್ವತ್ತುಗಳನ್ನು ರಕ್ಷಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ನಮ್ಮ ಶಾಲೆಗಳು, ಆಸ್ಪತ್ರೆಗಳು ಮತ್ತು ಧಾರ್ಮಿಕ ಸ್ಥಳಗಳು ಯಾವಾಗಲೂ ಕಾಳಜಿ ಮತ್ತು ಸೇವೆಯ ಆಧಾರಸ್ತಂಭಗಳಾಗಿ ನಿಂತಿವೆ – ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲರಿಗೂ. ಈ ಕಾನೂನು ಅವರ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಒಮ್ಮೆ ಕಳೆದುಹೋದರೆ, ಈ ಸ್ಥಳಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬದಲಾಯಿಸಲಾಗದ ಹಾನಿಯನ್ನು ತಡೆಗಟ್ಟಲು ತಕ್ಷಣದ ನ್ಯಾಯಾಂಗ ಮಧ್ಯಪ್ರವೇಶದ ಅಗತ್ಯವನ್ನು ಅರ್ಜಿ ಒತ್ತಿಹೇಳುತ್ತದೆ. ಏಪ್ರಿಲ್ 16, 2025 ರಂದು ಸುಪ್ರೀಂ ಕೋರ್ಟ್ ಮುಂದೆ ಈಗಾಗಲೇ ಪಟ್ಟಿ ಮಾಡಲಾದ ಇತರ ಸಂಬಂಧಿತ ವಿಷಯಗಳ ಜೊತೆಗೆ ತನ್ನ ಪ್ರಕರಣವನ್ನು ಆಲಿಸಬೇಕೆಂದು ಖಾನ್ ವಿನಂತಿಸಿದ್ದಾರೆ. ತಮ್ಮ ಮನವಿಯ ಹಿಂದಿನ ಸ್ಫೂರ್ತಿಯನ್ನು ಪುನರುಚ್ಚರಿಸಿದ ಖಾನ್, “ಇದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಇದು ವಕ್ಫ್ ಸಂಸ್ಥೆಗಳು ಪ್ರತಿನಿಧಿಸುವ ಸೇವೆ ಮತ್ತು ಸ್ವಯಂ ಆಡಳಿತದ ಪರಂಪರೆಯನ್ನು ರಕ್ಷಿಸುವ ಬಗ್ಗೆ. ನಾವು ಬಯಸುವುದು ನ್ಯಾಯಸಮ್ಮತತೆ, ಸಂವಾದ ಮತ್ತು ನಮ್ಮ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಎಂದು ಹೇಳಿದ್ದಾರೆ.

ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ ಆರಂಭ

ನಗರದ ಕನಕಪುರ ಮುಖ್ಯರಸ್ತೆಯ ರಘುವನಹಳ್ಳಿ, ಉತ್ತರಹಳ್ಳಿ ಹೋಬಳಿಯಲ್ಲಿ ಶ್ರೀ ಸರ್ವ ದೇವ ಪರಮಜ್ಯೋತಿ ಧ್ಯಾನ ವಿಹಾರ ಎಂಬ ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರದ ಅದ್ಧೂರಿ ಉದ್ಘಾಟನೆಯು ಮೂರು ಪವಿತ್ರ ದಿನಗಳ ಕಾಲ ಭಕ್ತಿಯಿಂದ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ದಿವ್ಯ ಶಕ್ತಿಯಿಂದ ಆಚರಿಸಲಾಯಿತು.
ಈ ಸಂಭ್ರಮದಲ್ಲಿ ಕುಂಭಾಭಿಷೇಕ, ಪವಿತ್ರ ಪೂಜೆಗಳು, ಹೋಮಗಳು ಮತ್ತು ಶ್ರೀ ಸರ್ವ ದೇವ ಪರಮಜ್ಯೋತಿಯ ಪ್ರತಿಷ್ಠಾಪನೆ ನೆರವೇರಿತು. ಇದು ಎಲ್ಲ ದೇವತೆಗಳನ್ನು ಪ್ರತಿನಿಧಿಸುವ ದಿವ್ಯ ಬೆಳಕಿನ ರೂಪವಾಗಿದ್ದು, ಧರ್ಮ, ಜಾತಿ ಮತ್ತು ಪಂಥಗಳೆಲ್ಲವನ್ನೂ ಮೀರಿ ಜಗತ್ತಿನ ಎಲ್ಲಾ ತತ್ವಗಳನ್ನು ಒಗ್ಗೂಡಿಸುತ್ತದೆ. ಈ ಉತ್ಸವದ ಅಂತ್ಯಭಾಗದಲ್ಲಿ ಶ್ರೀ ಸರ್ವದೇವ ಪರಮಜ್ಯೋತಿಯ ಅದ್ಭುತ ಶೋಭಾಯಾತ್ರೆ ನಡೆಯಿತು, ಇದನ್ನು ಸಾವಿರಾರು ಭಕ್ತರು ಸಾಕ್ಷಿಯಾಗಿಸಿ ಸಂಭ್ರಮಿಸಿದರು.

ಈ ಮಹೋತ್ಸವದಲ್ಲಿ ಭಾಗವಹಿಸಿದ ಗಣ್ಯರು:  
ಡಾ. ಸಿ.ಎನ್. ಮಂಜುನಾಥ್ – ಸಂಸದರು, ಶ್ರೀಮತಿ ರೇವತಿ ಕಾಮತ್ – ಸಮಾಜಸೇವಕಿ , ಆನಂದ ಸುರಾಣಾ – ಮೈಕ್ರೋ ಲ್ಯಾಬ್ಸ್  , ಎಸ್. ರವಿ – ವಿಧಾನ ಪರಿಷತ್ ಸದಸ್ಯ, ಮಂತರ ಗೌಡ – ವಿಧಾನ ಸಭಾ ಸದಸ್ಯ, ಎಂ. ಕೃಷ್ಣಪ್ಪ – ವಿಧಾನ ಸಭಾ ಸದಸ್ಯ, ರಮೇಶ್ ಭಟ್ – ನಟ ಮತ್ತು ನಿರ್ದೇಶಕ ,  ಚರಣ್ ರಾಜ್ – ಪ್ರಸಿದ್ಧ ಸಂಗೀತ ನಿರ್ದೇಶಕ , ಶ್ರೀಮತಿ ಚಂದನಾ ಅನಂತಕೃಷ್ಣ – ನಟಿ .  ಶ್ರೀ ಸರ್ವದೇವ ಪರಮಜ್ಯೋತಿ ಧ್ಯಾನ ವಿಹಾರವು ಶ್ರದ್ಧಾಳುಗಳಿಗಾಗಿ ಶಾಂತಿ, ಪ್ರೀತಿ ಮತ್ತು ಆಂತರಿಕ ಪರಿವರ್ತನೆಯ ದಿವ್ಯಕೇಂದ್ರವಾಗಿ ಬೆಳಗುತ್ತಿದೆ.

ಭಾರತೀಯರ ಕೆಲಸದ ವೀಸಾ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿ ಭಾರೀ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಭಾರತ, ಪಾಕ್, ಬಾಂಗ್ಲಾದೇಶ, ನೈಜೀರಿಯಾ ಸೇರಿದಂತೆ ೧೪ ದೇಶಗಳ ನಾಗರಿಕರಿಗೆ ಕೆಲಸದ ವೀಸಾ (ಬ್ಲಾಕ್ ವರ್ಕ್ ವೀಸಾ) ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ೨೦೨೫ರ ಜೂನ್‌ವರೆಗೆ ಈ ನಿರ್ಧಾರವು ಜಾರಿಯಲ್ಲಿರಲಿದೆ ಎಂದು ವರದಿಗಳು ತಿಳಿಸಿದ್ದು, ಹೊರ ದೇಶದ ಕಾರ್ಮಿಕರಲ್ಲಿ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿದೆ.


ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಈ ನಿರ್ಧಾರವನ್ನು ಘೋಷಿಸಿರುವುದು. ಕಾರ್ಮಿಕ ನಿರ್ವಹಣಾ ವೇದಿಕೆಯಾದ `ಕಿವಾ’ದಿಂದ ಬ್ಲಾಕ್ ವೀಸಾ ಅರ್ಜಿ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಈ ವೀಸಾಗಳು ಕಂಪನಿಗಳಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ನೇಮಿಸಿಕೊಳ್ಳಲು ಸಹಾಯಕವಾಗಿದ್ದವು ಎನ್ನಲಾಗಿದೆ. ಆದರೆ, ಈಗ ೧೪ ದೇಶಗಳಿಂದ ಕಾರ್ಮಿಕರನ್ನು ತರಲು ಕಂಪನಿಗಳಿಗೆ ಸಾಧ್ಯವಾಗದಿರುವುದರಿಂದ, ವಿಶೇಷವಾಗಿ ನಿರ್ಮಾಣ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳು ಗಂಭೀರ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.
ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ಕಂಪನಿಗಳಿಗೆ ತಕ್ಕಮಟ್ಟಿನ ಸಮಸ್ಯೆಗಳು ಎದುರಾಗಿವೆ. ವಿಶೇಷವಾಗಿ, ಸೌದಿಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರ್ಮಾಣ ವಲಯಕ್ಕೆ ಈ ನಿರ್ಬಂಧವು ಕೂಡಾ ದೊಡ್ಡ ಹಿನ್ನಡೆಯಾಗಿದೆ ಎನ್ನಬಹುದು. ಈ ಕ್ರಮದ ಹಿಂದಿನ ನಿಖರ ಕಾರಣವನ್ನು ಸೌದಿ ಅರೇಬಿಯಾದ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಆದರೆ, ಇದು `ವಿಷನ್ ೨೦೩೦’ ಯೋಜನೆಯ ಭಾಗವಾಗಿ ಸ್ಥಳೀಯ ನಾಗರಿಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೈಗೊಂಡಿರಬಹುದು ಎಂದು ಕೆಲವರ ಅಭಿಪ್ರಾಯ. ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ಇತರ ಕ್ಷೇತ್ರಗಳಲ್ಲಿ ಸೌದಿ ನಾಗರಿಕರ ಭಾಗವಹಿಸುವಿಕೆ ಉತ್ತೇಜಿಸುವ ಗುರಿ ಈ ಯೋಜನೆ ಹೊಂದಿರಲಿದೆ. ಭಾರತೀಯ ಕಾರ್ಮಿಕರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಲ್ಫ್ ರಾಷ್ಟçಗಳಲ್ಲಿ ಉದ್ಯೋಗಕ್ಕಾಗಿ ಸೌದಿಯನ್ನೇ ಅವಲಂಬಿಸಿರುವ ಹಲವು ಭಾರತೀಯರಿಗೆ ಈ ನಿರ್ಬಂಧವು ಆರ್ಥಿಕ ಸಂಕಷ್ಟ ಉಂಟುಮಾಡಬಹುದು. ಭಾರತವು ಈ ನಿಟ್ಟಿನಲ್ಲಿ ಸೌದಿ ಅಧಿಕಾರಿಗಳೊಂದಿಗೆ ಸೂಕ್ತ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

“ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ

“ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ


ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜೂನ್ 12, ಗುರುವಾರ ಸಂಜೆ 7-00 ಗಂಟೆಗೆ ಕು|| ನಿರೀಕ್ಷಾ ಮಂಜುನಾಥ್ ರವರಿಂದ “ದಾಸ ವರ್ಷಿಣಿ” ಗಾಯನ ಕಾರ್ಯಕ್ರಮ. ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ: ಶ್ರೀ ಸರ್ವೋತ್ತಮ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು