Home Blog Page 76

“ಯೋಗವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು”

” ಯೋಗ ವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು “.
“ಯೋಗ” ಎಂದರೆ ಸೇರಿಸು, ಒಂದಾಗಿಸು, ಒಂದುಗೂಡಿಸು, ಕೇಂದ್ರೀಕರಿಸು, ಜೋಡಿಸು ಎಂದರ್ಥ.
ಮನಸ್ಸು ದೇಹ ಮತ್ತು ಉಸಿರನ್ನು ಪ್ರಜ್ಞಾಪೂರ್ವಕವಾಗಿ ಒಂದುಗೂಡಿಸುವುದೇ “ಯೋಗ”
“ಯೋಗ” ಅತ್ಯಂತ ಪ್ರಾಚೀನವಾದ ಹಾಗೂ ಪವಿತ್ರವಾದ ಕಲೆ ಮತ್ತು ವಿಜ್ಞಾನ. ಯೋಗದ ಬಗ್ಗೆ ಪುರಾಣಗಳಲ್ಲಿ, ವೇದೋಪನಿಷತ್ತುಗಳಲ್ಲಿ , ಹಾಗೂ ಭಗವದ್ಗೀತೆಯಲ್ಲಿಯೂ ಕೂಡ ಉಲ್ಲೇಖವಿದೆ.

ಯೋಗದ ಮೂಲಪುರುಷ “ಶಿವ” ಎಂಬ ಉಲ್ಲೇಖ ಗ್ರಂಥಗಳಲ್ಲಿವೆ.
” ಶ್ರೀ ಕೃಷ್ಣ” ಭಗವದ್ಗೀತೆಯಲ್ಲಿ – ಸಿದ್ಧಿ ಮತ್ತು ಆಸಿದ್ಧಿ ಗಳನ್ನು ಸಮಾನ ಮನಸ್ಸಿನಿಂದ ನೋಡುವುದೇ “ಯೋಗ” ಎಂದು ತಿಳಿಸಿದ್ದಾರೆ.
” ಪತಾಂಜಲಿ” ಮಹರ್ಷಿಗಳು ತಮ್ಮ ಯೋಗ ಸೂತ್ರದಲ್ಲಿ – ಚಿತ್ತದ ವೃತ್ತಿಗಳನ್ನು ನಿರೋಧಿಸುವುದೇ ಯೋಗವೆಂದು ಹೇಳಿದ್ದಾರೆ.

ಹೀಗೆ ಯೋಗವನ್ನು ಋಷಿ ಮುನಿಗಳು ತಮ್ಮ ಜೀವನದಲ್ಲಿ ಅನುಸರಿಸಿ ಮತ್ತು ಮುಂದುವರಿಸಿಕೊಂಡು ಬಂದು ವಿಶ್ವಕ್ಕೆ ಪರಿಚಯಿಸಿದ್ದಾರೆ, ಇದು ನಮಗೆ ಇಂದಿನ ಕಾಲಘಟ್ಟದಲ್ಲಿ ಸರ್ವ ಶ್ರೇಷ್ಠ ಕೊಡುಗೆಯಾಗಿದೆ . ಯೋಗ ಯಾವುದೇ ಒಬ್ಬ ವ್ಯಕ್ತಿಗೆ, ಸಮಾಜಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದದ್ದಲ್ಲ, ಇದು ಅನಂತ ಹಾಗೂ ಅಪರಿಮಿತವಾದದ್ದು.
” ಯೋಗ” ಎಂದರೆ ಸೇರಿಸುವ ಕುಡಿಸು ಜೋಡಿಸು ಒಂದಾಗಿಸು ಎಂಬ ಅರ್ಥಗಳಿವೆ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತಮ್ಮ ಉಸಿರನ್ನು ಪ್ರಕೃತಿಯೊಡನೆ ಸೇರಿಸುತ್ತಾ, ಒಂದಾಗಿಸುತ್ತ, ಪ್ರಾಣ ಶಕ್ತಿಯಾದ ಉಸಿರನ್ನು ಪರಸ್ಪರ ಒಂದುಗೂಡಿಸುತ್ತಾ, ಸದಾ ಕಾಲ ಪ್ರಾಣವಾಯು ವನ್ನು ಪರಸ್ಪರ ವಿನಿಯೋಗ ಮಾಡುತ್ತಾ ಒಂದು ರೀತಿಯ ಸರ್ವಶ್ರೇಷ್ಠವಾದ ಯೋಗಾಭ್ಯಾಸವನ್ನು ತನಗರಿವಿಲ್ಲದಂತೆ ಹುಟ್ಟಿನಿಂದ ಸಾಯುವವರೆಗೂ ಪ್ರಾಣಾಯಾಮಭ್ಯಾಸವನ್ನು ಮಾಡುತ್ತಾ, ತನ್ನ ಪ್ರತಿಯೊಂದು ನಿಲುಮೆಯ ಬಂಗಿಗಳಿಂದ ಆಸನಗಳನ್ನು ಮಾಡುತ್ತಾ, ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುತ್ತ ಬೆಳೆದು ಬಂದಿವೆ . ಅಂದರೆ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಬೆಳಕು, ಆಹಾರ ಮತ್ತು ಆಕಾಶ ಇತ್ಯಾದಿಗಳನ್ನು ಅನುಭವಿಸುತ್ತಾ, ಅನುಸರಿಸಿತ್ತ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಸ್ತಿತ್ವದಲ್ಲಿವೆ.
ಸಹಸ್ರಾರು ವರ್ಷಗಳಿಂದ “ಯೋಗ” ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ,
ಹಾಗೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡುವಲ್ಲಿ ಕಾರಣಿಭೂತವಾಗಿದೆ. ಯೋಗ ತನ್ನದೇ ಆದ ಶಾಖೆಗಳನ್ನು ಒಳಗೊಂಡಿದೆ ಅವುಗಳಲ್ಲಿ ಪ್ರಮುಖವಾದಂದರೆ :- ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ ಹಾಗೂ ರಾಜಯೋಗ ಇತ್ಯಾದಿಗಳು.
ಪತಂಜಲಿ ಮಹರ್ಷಿಯವರ ರಾಜಯೋಗದ ಪರಮ ಧ್ಯೇಯ :- ಅಷ್ಟ- ಅಂಗ-ಯೋಗ. ಇವರು ತಮ್ಮ ಯೋಗ ಸೂತ್ರಗಳಲ್ಲಿ, ಸಾಧನೆಯ 8 ಮೆಟ್ಟಿಲುಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಅಷ್ಟಾಂಗ ಯೋಗ :-
ಸಂಪೂರ್ಣ ಜೀವನಕ್ಕೆ ಬೇಕಾದ ಯಮ:- ಅಂದರೆ ಸಾಮಾಜಿಕ ನೀತಿ ನಿರ್ಬಂಧಗಳು, ನಿಯಮ:- ಸ್ವಯಂ ನಿರ್ಬಂಧಗಳ ಆಚರಣೆಗಳು, ಆಸನ – ಪ್ರಾಣಾಯಾಮ- ಪ್ರತ್ಯಹಾರ :- ಇವು ದೇಹದ ಭಂಗಿ, ಉಸಿರಿನ ನಿಯಂತ್ರಣ, ಮನೋ ನಿಗ್ರಹದಿಂದ ಹೊರಪ್ರಪಂಚದ ಪ್ರಜ್ಞೆಗಳಿಂದ ಅಂತರ್ಮುಖಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಧಾರಣ – ಧ್ಯಾನ ಮತ್ತು ಸಮಾಧಿ :- ಇಂದ್ರಿಯ ನಿಗ್ರಹ ಹೊಂದಿದ ಮನಸ್ಸು, ಅಂತರ್ಮುಖಿಯಾಗಿ ಏಕಾಗ್ರತೆಯಿಂದ ಪರಿಶುದ್ಧ ಪ್ರಜ್ಞೆಯೊಂದಿಗೆ ಅಷ್ಟಾಂಗ ಯೋಗದ ತುತ್ತ ತುದಿಯ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನುಭವಿಸುವುದು.
ಜೀವಾತ್ಮ ಮತ್ತು ಪರಮಾತ್ಮಗಳೆರಡು ಒಂದಾಗುವುದು…
ಹೀಗೆ ಯೋಗ ಭೂಮಿಯ ಮೇಲೆ ವಾಸಿಸುವ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಔಷಧಿಯಾಗಿದೆ.

ಅಂಬಿಕಾ ಸಿ
ಗಾಂಧಾರಿ ವಿದ್ಯೆ ಮತ್ತು ಯೋಗ ಶಿಕ್ಷಕಿ
( ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಯೋಗ ಶಿಕ್ಷಕಿ, ಚಿನ್ನದ ಪದಕ ವಿಜೇತರು, ಮತ್ತು 9 ತಿಂಗಳ ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರ ಮೂಲಕ ಪ್ರಪ್ರಥಮ ಬಾರಿಗೆ ಎರಡು ವಿಶ್ವ ದಾಖಲೆ ).

ಜು.1 ರಿಂದ ಮನೆ ಬಾಗಿಲಿಗೆ ಬರಲಿದೆ ಇ-ಖಾತಾ ಕರಡು ಪ್ರತಿ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ, ಜುಲೈ ನಿಂದ ಕರಡು ಇ-ಖಾತಾ ಪ್ರತಿಗಳನ್ನು ಮನೆ ಬಾಗಲಿಗೆ ತಲುಪಿಸುವ ಯೋಜನೆ ಶುರುವಾಗುತ್ತಿದೆ,
ಕಂದಾಯ ಸಚಿವರ ಕ್ಷೇತ್ರದಲ್ಲಿ 25,000 ಇ-ಖಾತಾಗಳು ಸಿದ್ಧವಾಗಿವೆ, ಅಭಿಯಾನವು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದೆ,
ಬೆಂಗಳೂರಿನ ಸುಮಾರು 25 ಲಕ್ಷ ಆಸ್ತಿಗಳಿದ್ದು, ಕೇವಲ ಐದು ಲಕ್ಷ ಜನರು ಮಾತ್ರ ಇ-ಖಾತಾ ಪಡೆದಿದ್ದಾರೆ, ಉಳಿದವರಿಗೂ ಇ-ಖಾತಾ ವಿತರಣೆ ಮಾಡಬೇಕಿದೆ, ಕರಡು ಇ ಖಾತಾ ಮನೆ ಬಾಗಿಲಿಗೆ ವಿತರಣೆ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ,
ಯೋಜನೆ ಮಹತ್ವದ ಅನುಷ್ಠಾನ ಕುರಿತು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸಚಿವರಾದ ಕೆಜಿ ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಮತ್ತು ಬೈರತಿ ಸುರೇಶ್ ಉಪಸ್ಧಿತರಿದ್ದು ಸಲಹೆಗಳನ್ನು ನೀಡಿದ್ದಾರೆ,

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗೆ ಅವಕಾಶ

ಬೆಂಗಳೂರು: ನಮ್ಮ ಹೆಮ್ಮೆಯ ರಾಜ್ಯದ ನಂದಿನಿ ಉತ್ಪನ್ನಗಳನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ ಮುಂದಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು ಬಿ.ಎಂ.ಆರ್.ಸಿ.ಎಲ್. ಒಪ್ಪಿದೆ.
ಃಒಖಅಐ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಅಮೂಲ್ ಸಂಸ್ಥೆಯ ಕಿಯೋಸ್ಕ÷್ಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಈ ಬಗ್ಗೆ ಗುಜರಾತ್ ಮಿಲ್ಕ್ ಫೆಡರೇಶನ್ ಜೊತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು. ರಾಜ್ಯದ ರೈತರ ಹೆಮ್ಮೆಯ ಕೆಎಂಎಫ್ ನಂದಿನಿಗೆ ಮಣೆ ಹಾಕಿರಲಿಲ್ಲ.
ಬಿ.ಎಂ.ಆರ್.ಸಿ.ಎಲ್. ನಿರ್ಧಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಪ್ರವೇಶಿಸಿ, ಬಿ.ಎಂ.ಆರ್.ಸಿ.ಎಲ್.ಗ್ಲೋಬಲ್ ಟೆಂಡರ್ ಕರೆದಿದ್ದÄಂಟು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿ.ಎಂ.ಆರ್.ಸಿ.ಎಲ್. ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಕೆಎಂಎಫ್ ಎಂಡಿ ಶಿವಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ 8 ಕಡೆ ನಂದಿನಿ ಮಳಿಗೆಗಳು ಓಪನ್ ಮಾಡಲು ಹಾಗೂ ಸರ್ಕಾರದ ನಿರ್ದೇಶನದಂತೆ 2 ಕಡೆಗಳಲ್ಲಿ ಮಾತ್ರ ಅಮೂಲ್‌ಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.
ಕೆಎAಎಫ್‌ನ ಶಿವಸ್ವಾಮಿ ಅವರು ಮಾತನಾಡಿ, ನಗರದ 20 ಮೆಟ್ರೋ ನಿಲ್ದಾಣದಲ್ಲಿ ರಿಯಾಯಿತಿ ದರದಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ಕೊಡ್ತೇವೆ. ಈ ಹಿಂದೆ 2020-22ರ ಅವಧಿಯಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ ತೆರೆಯಲು ಬಿ.ಎಂ.ಆರ್.ಸಿ.ಎಲ್. ಟೆಂಡರ್ ಕರೆದಿತ್ತು. ಆಗ ಕೆಎಂಎಫ್ ಈ ಟೆಂಡರ್‌ನಲ್ಲಿ ಭಾಗಿ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಕೂಡಾ ಇರಲಿವೆ ಎಂದು ತಿಳಿಸಿದ್ದಾರೆ.

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಂಪಾಕತ್ವದ ‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಂಪಾಕತ್ವದ
‘ಕುವೆಂಪು ವಿಚಾರ ಕ್ರಾಂತಿ’ ಪುಸ್ತಕ ಜನಾರ್ಪಣೆ
‘ಜನರ ಕಡೆಗೆ ವೈಚಾರಿಕ ನಡಿಗೆ’ ಮೂಲಕ ಕುವೆಂಪು ವಿಚಾರಾಂದೋಲನ

ರಾಷ್ಟಕವಿ ಕುವೆಂಪು ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳ ಕೇಂದ್ರ ಪ್ರಜ್ಞೆಯನ್ನು ಪ್ರಸಾರ ಮಾಡುವ ಅಗತ್ಯವಿದೆ. ಕುವೆಂಪು ಅವರು ಅಂದಿನ ದಿನಗಳಲ್ಲೇ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯಪರತೆ, ಒಕ್ಕೂಟ ಪದ್ಧತಿ ಪರವಾದ ಚಿಂತನಶೀಲತೆ, ಜಾತಿ ಮತ್ತು ಧರ್ಮ ತಾರತಮ್ಯ ವಿರೋಧಿ ವೈಚಾರಿಕತೆ, ಮೂಢನಂಬಿಕೆ ವಿರೋಧಿ ವೈಜ್ಞಾನಿಕತೆಯೇ ಮುಂತಾದ ಬರಹಗಳು ಇಂದಿನ ಸನ್ನಿವೇಶದಲ್ಲಿ ಜನರಿಗೆ ತಲುಪಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಕುವೆಂಪು ಅವರ ಕೆಲವು ಆಯ್ದ ಲೇಖನಗಳು ಮತ್ತು ಲೇಖನಗಳು ಮತ್ತು ಲೇಖನಗಳ ಆಯ್ದ ಭಾಗಗಳನ್ನು ಸಂಕಲಿಸಿ ‘ಕುವೆಂಪು ವಿಚಾರ ಕ್ರಾಂತಿ’ ಎಂಬ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಸಂಪಾದಕರಾಗಿ 25 ಪುಟಗಳ ಪ್ರಸ್ತಾವನೆ ಬರೆದು ಕುವೆಂಪು ಅವರ ಲೇಖನಗಳನ್ನು ವಿಶ್ಲೇಷಿಸಿದ್ದಾರೆ. ಈ ಪುಸ್ತಕವನ್ನು ‘ಜನ ಪ್ರಕಾಶನ’ವು ಪ್ರಕಟಿಸುತ್ತಿದ್ದು, ‘ಜನರ ಕಡೆಗೆ ವೈಚಾರಿಕ ನಡಿಗೆ’ ಎಂಬ ಘೋಷಣೆಯಡಿ 1 ಲಕ್ಷ ಪ್ರತಿಗಳನ್ನು ಮುದ್ರಿಸಿ ಮೊದಲಿಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು.
ನಂತರ ರಾಜ್ಯದಾದ್ಯಂತ ಬೇರೆ-ಬೇರೆ ಜಿಲ್ಲೆಗಳಲ್ಲೂ ಬಿಡುಗಡೆ ಮಾಡುವ ಮುಖಾಂತರ ವಿದ್ಯಾರ್ಥಿ-ಯುವಜನರನ್ನು ಒಳಗೊಂಡು ‘ಕುವೆಂಪು ವಿಚಾರಾಂದೋಲನ’ದ ಮೂಲಕ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಓದುಗರ ಕೈ ಸೇರುವಂತೆ ಯೋಜನೆ ರೂಪಿಸಲಾಗುತ್ತಿದೆ.
‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರು ಇದೇ ತಿಂಗಳ 25ರಂದು ಬುಧವಾರ ಸಾಯಂಕಾಲ 5:00 ಗಂಟೆಗೆ ಜನಾರ್ಪಣೆ ಮಾಡಲಿದ್ದಾರೆ. ಈ ಜನಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಅರಮನೆ ರಸ್ತೆಯ ಭಾರತ ಸ್ಕೌಟ್ ಅಂಡ್ ಗೈಡ್ಸ್ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಲಿದ್ದು ನಾಡೋಜಾ ಡಾ. ಹಂಪನಾ, ಜಸ್ಟಿಸ್ ನಾಗಮೋಹನದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿಚಿದಾನಂದಗೌಡ, ಅಳಿಯ ಡಾ. ಚಿದಾನಂದಗೌಡ ಮತ್ತು ಲೇಖಕ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮಕ್ಕೆ ಮುಂಚೆ 4 ಗಂಟೆಗೆ ಉಪಹಾರ ಮತ್ತು ಡಾ. ಶಮಿತಾ ಮಲ್ನಾಡ್ ತಂಡದಿ0ದ ಕುವೆಂಪು ಗೀತೆ ಗಾಯನವಿದೆ.

55 ನೇ ವಂಸತಕ್ಕೆ ಕಾಲಿಟ್ಟ ರಾಹುಲ್‌ ಗಾಂಧಿ; ಪ್ರಧಾನಿ ಮೋದಿ ಸೇರಿ ಹಲವರು ಟ್ವೀಟ್‌ ಮಾಡಿ ಶುಭಾಶಯ

ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಇಂದು 55 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಹಲವು ಗಣ್ಯರು ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಪ್ರಧಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ.

ಇಂದು ಮುಂಜಾನೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಉನ್ನತ ನಾಯಕರು ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ” ಎಂದು ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಕಾಂಗ್ರೆಸ್ ನಾಯಕನಿಗೆ ಶುಭಾಶಯಗಳನ್ನು ಕೋರಿದರು ಮತ್ತು ಅವರು ರಕ್ತಸಂಬಂಧದಿಂದಲ್ಲ, ಬದಲಾಗಿ ಚಿಂತನೆ, ದೃಷ್ಟಿಕೋನ ಮತ್ತು ಉದ್ದೇಶದಿಂದ ಬದ್ಧರಾಗಿದ್ದಾರೆ ಎಂದು ಹೇಳಿದರು. ನನ್ನ ಆದರ್ಶ ಸಹೋದರ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು – ರಕ್ತದಿಂದಲ್ಲ, ಬದಲಾಗಿ ಚಿಂತನೆ, ದೃಷ್ಟಿಕೋನ ಮತ್ತು ಉದ್ದೇಶದಿಂದ ಬದ್ಧರಾಗಿದ್ದೇವೆ. ನೀವು ದೃಢವಾಗಿ ನಿಂತು ಧೈರ್ಯದಿಂದ ಮುನ್ನಡೆಸುವುದನ್ನು ಮುಂದುವರಿಸಿ. ಉಜ್ವಲ ಭಾರತದತ್ತ ನಮ್ಮ ನಡಿಗೆಯಲ್ಲಿ, ಗೆಲುವು ನಮ್ಮದಾಗುತ್ತದೆ” ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏತನ್ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ ತಮ್ಮ ನಾಯಕನ ಜನ್ಮದಿನದಂದು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಯೋಜಿಸಿದೆ. ಈ ಉದ್ಯೋಗ ಮೇಳವು 100 ಕ್ಕೂ ಹೆಚ್ಚು ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಒಟ್ಟುಗೂಡಿಸುತ್ತದೆ, ಇದು ಜನರಿಗೆ 5000 ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುತ್ತದೆ. ಹಲವಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ

ನಾವು ಆಟಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ: ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಕರ್ನಾಟಕದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರದಿಂದ ನಿರ್ಬಂಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ಯಾರಿಸ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ವಾಪಸಾಗಿ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ಧಾರವು ಕರ್ನಾಟಕದ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.

ನಾವು ಆಟ ಆಡಲು ವಿದೇಶಕ್ಕೆ ಹೋಗುತ್ತಿಲ್ಲ. ರಾಜ್ಯದ ಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಳಿತಾದರೆ, ದೇಶಕ್ಕೂ ಒಳಿತು. ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ,” ಎಂದು ಖರ್ಗೆ ಒತ್ತಿ ಹೇಳಿದರು. ಅಮೆರಿಕಕ್ಕೆ ತೆರಳದಂತೆ ಕೇಂದ್ರ ಸರ್ಕಾರದಿಂದ ವಿನಾಕಾರಣ ನಿರ್ಬಂಧ ಹೇರಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ಬಾರಿಯ ಅಮೆರಿಕ ಭೇಟಿಯಲ್ಲಿ, ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು 35-40 ಸಾವಿರ ಕೋಟಿ ರೂಪಾಯಿಗಳ ಒಪ್ಪಂದಗಳನ್ನು ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮದ ಮೂಲಕ ಒಡಂಬಡಿಕೆಗೆ ತಂದಿದ್ದರು. ಇತ್ತೀಚೆಗೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸಂಬಂಧಿಸಿದಂತೆ 20 ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಕರ್ನಾಟಕವು ಎಲೆಕ್ಟ್ರಾನಿಕ್ಸ್ ಮತ್ತು ಏರೋಸ್ಪೇಸ್ ಹಬ್‌ ಆಗಿ ಮಾರ್ಪಟ್ಟಿದೆ. “ನವೋದ್ಯಮದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ. ಆದರೂ, ಈ ಬಾರಿಯ ಅಮೆರಿಕ ಪ್ರವಾಸದ ಪ್ರಸ್ತಾವವನ್ನು ಕೇಂದ್ರ ಯಾಕೆ ತಿರಸ್ಕರಿಸಿತು ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ,” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿದೇಶಿ ಪ್ರವಾಸಕ್ಕೆ ಮೊದಲಿಗೆ ನಿಯೋಗಕ್ಕೆ ಅನುಮತಿ ನೀಡದ ಕೇಂದ್ರ, ನಂತರ ಕೆಲವರಿಗೆ ಅನುಮತಿ ನೀಡಿತು. ಆದರೆ, ಖರ್ಗೆ ಅವರಿಗೆ ಅನುಮತಿ ನಿರಾಕರಿಸಿತು. “ಈ ಎಲ್ಲ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ನಿರ್ಧಾರ ಸರಿಯಲ್ಲ, ಇದರ ಬಗ್ಗೆ ಮುಂದೆ ಮಾತನಾಡುವೆ,” ಎಂದು ಖರ್ಗೆ ಎಚ್ಚರಿಕೆ ನೀಡಿದರು.

ನೀಟ್ ಪರೀಕ್ಷೆಯಲ್ಲಿ 107 ನೇ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿಯ ಅಂಕಪಟ್ಟಿಯೇ ನಕಲಿ!

ಉಡುಪಿ: ಪರೀಕ್ಷೆಗಳ ನಕಲಿ ಅಂಕಪಟ್ಟಿಯ ಭೂತ ಇದೀಗ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯಲ್ಲೂ ದೊಡ್ಡ ಸದ್ದು ಮಾಡಿದ್ದು, ನಕಲಿ ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ಜಾಲ ಸದ್ದಿಲ್ಲದೇ ಕಾರ್ಯನಿರ್ವಹಣೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ,
ಉಡುಪಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ನೀಟ್ ನಲ್ಲಿ ದೇಶದಲ್ಲಿಯೇ 107 ನೇ ರ್ಯಾಂಕ್ ಎಂದು ಬಿಂಬಿಸಿದ್ದ ವಿದ್ಯಾರ್ಥಿಯ ನಿಜವಾದ ರ್ಯಾಂಕ್ 17,62,258 ಎಂದು ಗೊತ್ತಾಗಿದೆ,
ನಕಲಿ ಅಂಕಪಟ್ಟಿಯಲ್ಲಿ ಅಷ್ಟೊಂದು ಅಚ್ಚುಕಟ್ಟಾಗಿ ಅಂಕಿ ಸಂಖ್ಯೆಗಳನ್ನು ತ್ತಿದ್ದಲಾಗಿದ್ದು, ಆತನ ಪೋಷಕರು ನಕಲಿ ಅಂಕಪಟ್ಟಿಯನ್ನೇ ಕಾಲೇಜಿನ ಮೂಲಕ ಪ್ರಚಾರ ತಂತ್ರಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ,
ಇತ್ತೀಚೆಗಷ್ಟೇ 2025 ನೀಟ್ ಫಲಿತಾಂಶ ಪ್ರಕಟಗೊಂಡಿತ್ತು, ಅದರಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು 200 ಬ್ಯಾಂಕ್ ನೊಳಗೆ ಸಾಧನೆ ಮಾಡಿದ್ದರು, ಇದರ ಮಧ್ಯೆ ವಿದ್ಯಾರ್ಥಿಯೊಬ್ಬನ ಪರವಾಗಿ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಧಾನ ಎಂದು ಹೇಳಲಾಗಿತ್ತು, ಈತನ ಸಾಧನೆ ಬಗ್ಗೆ ಇತರ ವಿದ್ಯಾರ್ಥಿಗಳಿಗೆ ಸಂಶಯ ಬಂದು ಪರಿಶೀಲಿಸಿದಾಗ ಅದು ನಕಲಿ ಅಂಕಪಟ್ಟಿ ಎಂಬುದು ಗೊತ್ತಾಗಿದೆ,
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಅಂಕಪಟ್ಟಿ ದಂಧೆಯ ಜಾಲವನ್ನು ಬೇಧಿಸಬೇಕು, ಅಲ್ಲದೆ ಸಮಗ್ರ ತನಿಖೆಗೆ ಆಗ್ರಹ ಕೇಳಿಬಂದಿದೆ,

ಇರಾನ್‌ನಿಂದ 110 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್

ನವದೆಹಲಿ: ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ತಡರಾತ್ರಿ ನವದೆಹಲಿಗೆ ಬಂದಿಳಿಯಿತು. ಈ ಸ್ಥಳಾಂತರ ಕಾರ್ಯಾಚರಣೆಗೆ ಭಾರತ ‘ಆಪರೇಷನ್ ಸಿಂಧು’ ಎಂದು ಹೆಸರಿಟ್ಟಿದೆ.

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ 110 ಮಂದಿ ಇರಾನ್ ಗಡಿ ದಾಟಿ ನೆರೆಯ ಅರ್ಮೇನಿಯಾ ದೇಶಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳನ್ನು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಸ್ವದೇಶಕ್ಕೆ ಕರೆತರಲಾಗುತ್ತಿದೆ

ವಿದ್ಯಾರ್ಥಿಗಳ ಸ್ಥಳಾಂತರಿಸುತ್ತಿರುವ ಕಾರ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ತಿಳಿಸಿದೆ. ಉಳಿದ ವಿದ್ಯಾರ್ಥಿಗಳನ್ನೂ ಶೀಘ್ರದಲ್ಲೇ ಸ್ಥಳಾಂತರಿಸುವ ಭರವಸೆ ಇದೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ನಿಂದ ಸ್ವದೇಶಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು:

ಇರಾನ್‌ನಿಂದ ಆಗಮಿಸಿದ ವಿದ್ಯಾರ್ಥಿಗಳ ಪೈಕಿ ಹಲವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದರು. ಈ ಪೈಕಿ ಓರ್ವ ವಿದ್ಯಾರ್ಥಿ, “ನಮ್ಮ ದೇಶಕ್ಕೆ ಮರಳಿರುವುದು ತುಂಬಾ ಹರ್ಷ ತಂದಿದೆ. ಇರಾನ್ ನಲ್ಲಿ ನಾವಿದ್ದ ಉರ್ಮಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿರಲಿಲ್ಲ . ಆದರೆ ಇತರ ಸ್ಥಳಗಳಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಭಾರತ ಸರ್ಕಾರದ ಸಹಾಯದಿಂದಾಗಿ ನಾವು ಮನೆಗೆ ಮರಳಿದ್ದೇವೆ” ಎಂದರು.

ಮತ್ತೋರ್ವ ವಿದ್ಯಾರ್ಥಿ ಮಾತನಾಡಿ, “ನಾನು ಉರ್ಮಿಯಾ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ನಾವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹತ್ತಿರದಿಂದ ನೋಡಿದ್ದೇವೆ. ನಮಗೆ ಭಯವಾಗುತ್ತಿತ್ತು. ಇದೀಗ ಭಾರತಕ್ಕೆ ಮರಳಿರುವುದಕ್ಕೆ ಖುಷಿಯಾಗಿದೆ. ಭಾರತ ಸರ್ಕಾರ ಅದರಲ್ಲೂ ವಿಶೇಷವಾಗಿ ವಿದೇಶಾಂಗ ಸಚಿವಾಲಯಕ್ಕೆ ನಾನು ತುಂಬಾ ಕೃತಜ್ಞ. ನಮ್ಮ ಪೋಷಕರು ಕೂಡಾ ನನ್ನ ಬಗ್ಗೆ ಚಿಂತಿತರಾಗಿದ್ದರು. ಆದರೆ ಈಗ ಅವರ ದುಗುಡ ದೂರವಾಗಿದೆ” ಎಂದು ಹೇಳಿದರು.

ವಿದ್ಯಾರ್ಥಿ ಯಾಸಿರ್ ಗಫರ್ ಮಾತನಾಡಿ, “ನಾವು ಕ್ಷಿಪಣಿಗಳು ಹಾದುಹೋಗುವುದನ್ನು ಮತ್ತು ರಾತ್ರಿಯಲ್ಲಿ ದೊಡ್ಡ ಶಬ್ದಗಳನ್ನು ಕೇಳುತ್ತಿದ್ದೆವು. ಇದೀಗ ಸ್ವದೇಶಕ್ಕೆ ತಲುಪಿರುವುದು ಸಂತೋಷ ತಂದಿದೆ. ನಾನು ನನ್ನ ಕನಸುಗಳನ್ನು ಬಿಟ್ಟಿಲ್ಲ. ಪರಿಸ್ಥಿತಿ ತಿಳಿಯಾದಾಗ ಮತ್ತೆ ಇರಾನ್‌ಗೆ ಹೋಗುತ್ತೇವೆ” ಎಂದು ತಿಳಿಸಿದರು.

ಭಾರತೀಯ ರಾಯಭಾರ ಕಚೇರಿ ನಮಗಾಗಿ ಎಲ್ಲವನ್ನೂ ಸಿದ್ಧಪಡಿಸಿತ್ತು. ನಮಗೆ ಯಾವುದೇ ಸಮಸ್ಯೆಯಾಗಲಿಲ್ಲ. ನಾವು ಮೂರು ದಿನಗಳಿಂದ ಪ್ರಯಾಣಿಸುತ್ತಿದ್ದೇವೆ. ಆದ್ದರಿಂದ ಸ್ವಲ್ಪ ದಣಿದಿದ್ದೇವೆ. ನಾವು ಹೊರಡುವಾಗ ಉರ್ಮಿಯಾದಲ್ಲಿ ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿರಲಿಲ್ಲ. ಆದರೆ, ನಮ್ಮ ವಸತಿ ನಿಲಯದ ಕಿಟಕಿಗಳಿಂದ ನಾವು ಕ್ಷಿಪಣಿಗಳನ್ನು ನೋಡುತ್ತಿದ್ದೆವು” ಎಂದು ವಿದ್ಯಾರ್ಥಿನಿ ಮರಿಯಮ್ ರೋಜ್ ಹೇಳಿದರು

ವಿದ್ಯಾರ್ಥಿನಿಯೊಬ್ಬರ ತಾಯಿ ಮಾತನಾಡಿ, “ನನ್ನ ಮಗಳು ಮನೆಗೆ ಮರಳಿದ್ದಕ್ಕೆ ನನಗೆ ಭಾರೀ ಸಂತೋಷವಾಗಿದೆ. ಆದಷ್ಟು ಬೇಗ ಎಲ್ಲರ ಮಕ್ಕಳೂ ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲಿ. ಭಾರತ ಸರ್ಕಾರ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದೆ. ನಮ್ಮ ಮಕ್ಕಳು ಎಲ್ಲಿಯೂ ಯಾವುದೇ ತೊಂದರೆ ಎದುರಿಸಲಿಲ್ಲ” ಎಂದು ನಿರಾಳರಾದರು.

B.PAC/B.CLIP 18 member delegation safely boarded the flight to return to Bengaluru

Eighteen delegates from B.PAC/B.CLIP were on a 7 day study tour (June 7-13) hosted by Israel’s Ministry of Foreign Affairs focused on civic leadership, policymaking and sustainability.

The scheduled departure of the delegation on June 13, 2025 from Tel Aviv to Bengaluru was disrupted because of airport closure in Israel. Upon receipt of this information and assessment of the situation, B.PAC   has been working with the Israel Consulate, Government of Karnataka (GoK) and Ministry of External Affairs, Government of India (GoI) for supporting the safe return of delegates. The officials of Indian High Commission in Israel were immediately contacted   to support the delegation locally.

Ms. Orli Weitzman, The Consul General of South India who accompanied the delegation extended full support to B.PAC/B.CLIP delegation to ensure their security and safety during their extended stay in Tel Aviv.

We are pleased to inform you that the team has boarded the flight from Jordan and will be reaching Bengaluru tomorrow.

B.PAC is deeply thankful to the Israeli Consulate, The Indian High Commission in Israel, the Indian Embassy in Jordan for ensuring safety and security of our team at all times and safe boarding of flight.

B.PAC is also extremely thankful to the GOK and the MEA for all its coordination efforts in this matter.

Contact:

sharath@bpac.in | -91-9886196640

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ಕಂಗನಾ ರನೌತ್ ರಾಯಭಾರಿ!

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರನ್ನು ನವದೆಹಲಿ 2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಘೋಷಿಸಿದೆ,
ಈ ಹೊಸ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಕಂಗನಾ, ಭಾರತದ ಪ್ಯಾರಾ ಅಥ್ಲೀಟ್‍ಗಳು ಪ್ರತಿದಿನ ಅದ್ಭುತ ಸಾಧನೆಗಳ ಇತಿಹಾಸವನ್ನು ಪುನಃ ಬರೆಯುತ್ತಿದ್ದಾರೆ, ಅವರನ್ನು ಬೆಂಬಲಿಸಲು ಮತ್ತು ಅವರ ಅದ್ಬುತ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ, ಪ್ಯಾರಾ ಕ್ರೀಡೆ ಕೇವಲ ಸ್ಪರ್ಧೆಯ ಬಗ್ಗೆ ಅಲ್ಲ, ಇದು ಧೈರ್ಯವನ್ನು ತೋರಿಸುತ್ತದೆ, ಮತ್ತು ನಮ್ಮ ಚಾಂಪಿಯನ್ ಗಳ ಹಿಂದೆ ನಿಲ್ಲಲು ನನಗೆ ತುಂಬಾ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ,
ಕಂಗನಾ ರನೌತ್ ಅವರ ಧ್ವನಿಯ ಪ್ಯಾರಾ ಕ್ರೀಡೆಗಳೊಂದಿಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಿಕೆಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ದೇಶಾದ್ಯಂತ ಮುಂದಿನ ಪೀಳಿಗೆಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಸ್ಫೋರ್ತಿ ನೀಡುತ್ತದೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಹೇಳಿದೆ,