Home Blog Page 77

ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯ (10 Hour Workday For Labourers) ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ (Karnataka Government) ಚಿಂತನೆ ನಡೆಸಿದೆ.

ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ.

ಈಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ.

ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚಾ ಹಂತದಲ್ಲಿದ್ದು ಈ ಸಂಬಂಧ ರಾಜ್ಯ ಸರ್ಕಾರ ವಿಕಾಸ ಸೌಧದಲ್ಲಿ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳು ಸದಸ್ಯರು ಭಾಗಿಯಾಗಿದ್ದಾರೆ.

ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಸಂಘದಿಂದಲೂ ಪ್ರಸ್ತಾವನೆ ಬಂದಿದೆ. ನಿತ್ಯ 10 ಗಂಟೆ ಕೆಲಸ ಮಾಡಿದರೆ ಶನಿವಾರ ಭಾನುವಾರ ಎರಡು ದಿನದ ರಜೆ ನೀಡಲಾಗುತ್ತದೆ,

ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಕೆಲ ದಿನಗಳ ಹಿಂದೆ ನಡೆಸಿದ ಸಂಪುಟ ಸಭೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸುವ ತಿದ್ದುಪಡಿ ಮಸೂದೆಗೆ  ಅನುಮೋದನೆ ನೀಡಿತ್ತು

ಅಕ್ಷಯ ವಿಪ್ರ ಮಹಾಸಭಾಗೆ ನೂತನ ಪಧಾಧಿಕಾರಿಗಳ ಆಯ್ಕೆ

ಬೆಂಗಳೂರು: *ಅಕ್ಷಯ ವಿಪ್ರ ಮಹಾಸಭಾಗೆ ನೂತನ ಪಧಾಧಿಕಾರಿಗಳ ಆಯ್ಕೆ ಆಗಿದ್ದು, ಕೆಳಕಂಡವರು ನೇಮಕ ಗೊಂಡಿರುವರು.

ಅಧ್ಯಕ್ಷರಾಗಿ ಎನ್. ಕೆ. ರಾಮಾಚಂದ್ರ ರಾವ್ ಹಾಗು ಗೌರವಾಧ್ಯಕ್ಷರಾಗಿ ಡಾ, ಎನ್. ಕೀರ್ತಿರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2025-28ನೇ ಸಾಲಿಗೆ ನೆಡೆದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ 45ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು,
ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕೆಳಕಂಡ ನೂತನ ಪಧಾಧಿಕಾರಿಗಳ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎನ್. ಕೆ. ರಾಮಾಚಂದ್ರ ರಾವ್ ಹಾಗು ಗೌರವಾಧ್ಯಕ್ಷರಾಗಿ ಡಾ, ಎನ್. ಕೀರ್ತಿರಾಜ್, ಉಪಾಧ್ಯಕ್ಷರಾಗಿ ಡಾ, ಕೆ. ರಘುನಾಥರಾವ್, ಡಾ, ಕಿರಣ್. ಎಸ್. ಮೂರ್ತಿ, ಕೆ. ಆನಂದರಾವ್, ಲಕ್ಷ್ಮೀಶ ಸತ್ಯವಾರ ಮತ್ತು ವಿ. ಶ್ರೀಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಾಘವೇಂದ್ರ ರಾವ್, ಕಾರ್ಯದರ್ಶಿಯಾಗಿ ಎನ್. ಎಸ್. ಸುಧೀಂದ್ರ ರಾವ್, ಜಂಟಿಕಾರ್ಯದರ್ಶಿಯಾಗಿ ಎನ್. ಪಿ. ಮಂಜುನಾಥ್, ಟಿ. ಎನ್. ಶಾಂತಕುಮಾರ್, ಎಲ್. ಜಗನಾಥ್, ಆರ್.ಶ್ರೀನಿವಾಸ, ಮಹೇಶ್ ಕುಮಾರ್, ಖಜಾಂಚಿಯಾಗಿ ಎನ್. ರಾಘವೇಂದ್ರ ರಾವ್, ಅಂತರೀಕಾ ಲೆಕ್ಕ ಪರಿಶೋಧಕರಾಗಿ ಎನ್. ಜೆ. ಮಣಿಕುಮಾರ್, ಕಾನೂನು ಸಲಹೆಗಾರರಾಗಿ ಎ. ವಿಜಯಕುಮಾರ್ ಭಟ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಧಾಕೃಷ್ಣ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ: ಡಿಸಿಎಂ ಹೇಳಿದ್ದೇನು?

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ: ಡಿಸಿಎಂ ಹೇಳಿದ್ದೇನು?
ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಜನಪ್ರಿಯ ಡೈರಿ ಕಂಪನಿ ಅಮುಲ್ ಮಳಿಗೆ ತೆರೆಯಲು ಬಿಎಂಆರ್‍ಸಿಎಲ್ ಒಪ್ಪಂದ ಮಾಡಿಕೊಂಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ, ಇದೀಗ ಈ ಸಂಬಂಧ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದು, ನಂದಿನಿಗೆ ಅನ್ಯಾಯ ಆಗೋಕೆ ಬಿಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ,
ಬೆಂಗಳೂರಲ್ಲಿ ಮಾತನಾಡಿದ ಅವರು ಗ್ಲೋಬಲ್ ಟೆಂಡರ್ ಮೂಲಕ ಬಿಎಂಆರ್‍ಸಿಎಲ್ ಅಮುಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಬಗ್ಗೆ ಪರಮಾರ್ಶೆ ಮಾಡಾಲಾಗಿದೆ, ಟೆಂಡರ್ ನಲ್ಲಿ ನಂದಿನಿ ಭಾಗವಹಿಸಿರಲಿಲ್ಲ, ಇದೀಗ ಈ ವಿಚಾರ ಗಮನಕ್ಕೆ ಬಂದಿದ್ದು 10 ಮೆಟ್ರೋ ನಿಲ್ದಾಣಗಳ ಪೈಕಿ 8 ರಲ್ಲಿ ನಂದಿನಿ ಮಳಿಗೆಗೆ, ಹಾಗೆ ಈಗಾಗ್ಲೇ ಉಳಿದ 2 ಕಡೆ ಮಾತ್ರ ಓಪನ್ ಮಾಡಲಾಗಿರುವ ಅಮುಲ್ ಸಂಸ್ಧೆಯ ಅಂಗಡಿಗೆ ಅವಕಾಶ ಮಾಡಿಕೊಟ್ಟಿರೋದಾಗಿ ಹೇಳಿದ್ದಾರೆ,
ನಂದಿನಿ ಇದ್ದರೂ ಅಮುಲ್ ಜೊತೆ ಒಪ್ಪಂದ ಯಾಕೆ ಎಂಬ ಪ್ರಶ್ರೆಯನ್ನು ಜನ ಎತ್ತಿದ್ದಾರೆ, ಅಧಿಕಾರಿಗಳ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರೋದಾಗಿ ಡಿಕೆಶಿ ಹೇಳಿದ್ದಾರೆ,
ಬಿಎಂಆರ್‍ಸಿಎಲ್ ನಡೆ ವಿರದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು

ಕನ್ನಡ ಪರ ಸಂಘಟನೆಯ ಮುಖಂಡರಿಗೆ ನೋಟಿಸ್

ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿರುವ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ,
ಕನ್ನಡದ ಹುಟ್ಟಿನ ಬಗ್ಗೆ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕ ಬೆನ್ನಲ್ಲೇ ಇದೀಗ ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ,
ನಟ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ವಿರೋಧಿಸಿ ಪ್ರತಿಭಟನೆ ಮಾಡುವ ಹಾಗಿದ್ದರೆ ನ್ಯಾಯಾಲಯ ತಿಳಿಸಿರುವಂತೆ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು, ಒಂದು ವೇಳೆ ನಿಯಮ ಮೀರಿ ಥಗ್ ಲೈಫ್ ಸಿನಿಮಾ ಬಿಡುಗಡೆ ಆಗಿರುವ ಚಿತ್ರಮಂದಿರ ಬಳಿ ಪ್ರತಿಭಟನೆ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಪೊಲೀಸರು ತಿಳಿಸಿದ್ದಾರೆ,
ಪೊಲೀಸರ ನೋಟಿಸ್ ವಿರುದ್ಧ ಕನ್ನಡ ಪರ ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ನಮ್ಮ ರಾಜ್ಯ ಸರ್ಕಾರವೇ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು, ಅದರೆ ಈಗ ಹೀಗ್ಯಾಕೆ ಮಾಡಿದ್ದಾರೋ ಗೊತ್ತಿಲ್ಲ, ಆ ಸಿನಿಮಾ ನೋಡಲು ನಮ್ಮ ಜನ ಕೂಡ ಹೋಗಲ್ಲ ಎನ್ನುವ ನಂಬಿಕೆ ಇದೆ ಎಂದಿದ್ದಾರೆ,

ನಾಳೆ ಕಾವೇರಿ ನೀರು ಬಂದ್!

ಗುರುವಾರ (ಜೂನ್ 19, 2025) ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ (ಜೂನ್ 20, 2025) ಬೆಳಗ್ಗೆ 6 ಗಂಟೆವರೆಗೆ, ಅಂದರೆ ಸತತ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಈ ತಾತ್ಕಾಲಿಕ ಸ್ಥಗಿತದ ಹಿಂದಿನ ಕಾರಣ ಕಾವೇರಿ 5ನೇ ಹಂತದ ಕೊಳವೆ ಮಾರ್ಗ ಜೋಡಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳಾಗಿವೆ. ಈ ಕಾಮಗಾರಿಯು ಭವಿಷ್ಯದಲ್ಲಿ ನಗರಕ್ಕೆ ಸ್ಥಿರವಾದ ಮತ್ತು ಉತ್ತಮ ಪ್ರಮಾಣದ ನೀರು ಸರಬರಾಜಿಗೆ ಸಹಕಾರಿಯಾಗಲಿದೆ.

ಕಾವೇರಿ ನೀರು ಸ್ಥಗಿತದ ಕಾರಣ

ಬೆಂಗಳೂರು ಜಲಮಂಡಳಿ (BWSSB) ಪ್ರಕಾರ, ಕಾವೇರಿ 5ನೇ ಹಂತದ ಕೊಳವೆ ಮಾರ್ಗದ ಜೋಡಣೆ ಕಾಮಗಾರಿಯು ಈ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಕಾಮಗಾರಿಯು ನಗರದ ಜನಸಂಖ್ಯೆಯ ಹೆಚ್ಚಳ ಮತ್ತು ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿದೆ. ಈ ಯೋಜನೆಯು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜಾಗಲಿದೆ, ಇದರಿಂದ ನೀರಿನ ಕೊರತೆ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಈ 24 ಗಂಟೆಗಳ ಸ್ಥಗಿತದಿಂದ ಬೆಂಗಳೂರಿನ ಬಹುತೇಕ ಎಲ್ಲ ಪ್ರದೇಶಗಳು ಪರಿಣಾಮ ಬೀರಲಿವೆ. ಬಾಗಲೂರು, ಹೆಬ್ಬಾಳ, ಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ಕೆಂಗೇರಿ ಸೇರಿದಂತೆ ನಗರದ ಪೂರ್ವ, ದಕ್ಷಿಣ, ಪಶ್ಚಿಮ, ಮತ್ತು ಉತ್ತರ ಭಾಗಗಳು ಈ ಸ್ಥಗಿತದಿಂದ ಬಾಧಿತವಾಗಲಿವೆ. ಆದ್ದರಿಂದ, ಈ ಪ್ರದೇಶಗಳ ಜನರು ಮುಂಗಡವಾಗಿ ಅಗತ್ಯವಿರುವ ನೀರನ್ನು ಸಂಗ್ರಹಿಸಿಕೊಳ್ಳುವುದು ಅತೀ ಮುಖ್ಯ.

ಈ ತಾತ್ಕಾಲಿಕ ಸ್ಥಗಿತವು ಒಂದು ದಿನದ ಕಾಮಗಾರಿಗೆ ಸೀಮಿತವಾಗಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ನೀರಿನ ಸರಬರಾಜು ಪುನರಾರಂಭವಾಗುವ ನಿರೀಕ್ಷೆಯಿದೆ. ಆದರೆ, ಕಾಮಗಾರಿಯ ಸಂಕೀರ್ಣತೆಯ ಆಧಾರದ ಮೇಲೆ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ವಿಳಂಬವಾಗಬಹುದು ಎಂದು BWSSB ಎಚ್ಚರಿಕೆ ನೀಡಿದೆ.

ಕಾವೇರಿ 5ನೇ ಹಂತದ ಕೊಳವೆ ಮಾರ್ಗ ಜೋಡಣೆ ಕಾಮಗಾರಿಯು ಯಶಸ್ವಿಯಾದರೆ, ಬೆಂಗಳೂರಿನ ನೀರಿನ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಸಿಗಬಹುದು. ಈ ಯೋಜನೆಯು ನಗರದ ವಿವಿಧ ಭಾಗಗಳಿಗೆ ಸ್ಥಿರವಾದ ನೀರಿನ ಪೂರೈಕೆಯನ್ನು ಖಾತ್ರಿಪಡಿಸಲಿದ್ದು, ಜನಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ನೀರಿನ ಬೇಡಿಕೆಯನ್ನು ಪೂರೈಸಲು ಸಹಾಯಕವಾಗಲಿದೆ

ಶ್ಯಾನುಭೋಗ್ ಸಹೋದರಿಯರಿಂದ “ದಾಸ ಶೃತಿ” ಗಾಯನ ಕಾರ್ಯಕ್ರಮ

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜೂನ್ 19, ಗುರುವಾರ ಸಂಜೆ 7-00ಕ್ಕೆ ಶ್ಯಾನಭೋಗ್ ಸಹೋದರಿಯರಿಂದ “ದಾಸ ಶೃತಿ”. ಗಾಯನ ಮತ್ತು ಹಾರ್ಮೋನಿಯಂ : ಕು|| ಶ್ರೀರಕ್ಷಾ ಶ್ಯಾನಭೇಗ್ ಹಾಗೂ ಗಾಯನ ಮತ್ತು ತಬಲಾ : ಕು|| ಶ್ರೀರಶ್ಮಿ ಶ್ಯಾನುಭೋಗ್. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ 6ನೇ ಹಂತ ಬನಶಂಕರಿ, ಬೆಂಗಳೂರು

ಅಪಾಯಕಾರಿ ಹಂತಕ್ಕೆ ತಲುಪಿದ ಇರಾನ್ – ಇಸ್ರೇಲ್ ನಡುವಿನ ಯುದ್ಧ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಯಾಗಿದ್ದು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಸ್ರೇಲ್‌ ಬೆಂಬಲಕ್ಕೆ ನಿಂತಿರುವ ಟ್ರಂಪ್‌ ಶರಣಾಗುವಂತೆ ಧಮ್ಕಿ ಹಾಕಿದ್ದಾರೆ. ಆದ್ರೆ ಅಮೆರಿಕ ಬೆದರಿಕೆಗೂ ಜಗ್ಗದ ಇರಾನ್‌ನ ಸರ್ವೋಚ್ಛ ನಾಯಕ (Iran’s Supreme Leader Ali Khamenei) ʻಯುದ್ಧ ಶುರುವಾಗಿದೆʼ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ನಮಿ ಹೆಸರಿನಲ್ಲಿ, ಯುದ್ಧ ಪ್ರಾರಂಭವಾಗುತ್ತದೆ. ಅಲಿ ತನ್ನ ಜುಲ್ಫಿಕರ್‌ನೊಂದಿಗೆ ಖಮೇನಿಗೆ ಹಿಂತಿರುಗುತ್ತಾನೆ. ಹೈದರ್‌ ಹೆಸರಿನಲ್ಲಿ ಯುದ್ಧ ಶುರುವಾಗುತ್ತೆ, ಜಿಯೋನಿಸ್ಟ್‌ (ಯಹೂದಿಗಳು) ಗಳಿಗೆ ಯಾವುದೇ ಕರುಣೆ ತೋರಲ್ಲ.  ಎಂದು ಅಯತೊಲ್ಲಾ ಅಲಿ ಖಮೇನಿ ಅವರ ಅನುವಾದ ಪೋಸ್ಟ್‌ ಸೂಚಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಅಲಿ ಖಮೇನಿ ಶರಣಾಗಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ನೇರವಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಖಮೇನಿ ಅವರ ಈ ಪೋಸ್ಟ್‌ ಬಂದಿದೆ.

ಟ್ರಂಪ್‌ ಹೇಳಿದ್ದೇನು? ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ವ್ಯಕ್ತಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಅವನನ್ನು ನಾವು ಹತ್ಯೆ ಮಾಡಲು ಹೋಗುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ. ನಾವು ಈಗ ಇರಾನ್ ಆಕಾಶದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇವೆ. ಇರಾನ್ ಉತ್ತಮ ಸ್ಕೈ ಟ್ರ್ಯಾಕರ್‌ಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಹೊಂದಿತ್ತು. ಆದರೆ ಅಮೇರಿಕ ನಿರ್ಮಿತ ಸಾಮಾಗ್ರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಮೆರಿಕ ತಯಾರಿಸಿದಂತೆ ಯಾರೂ ಉತ್ತಮವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಿದ್ದರು.

ನಟಿ ಸಮಂತಾಗೆ ಮುಂಬೈ ರಸ್ತೆಯಲ್ಲಿ ಕಿರುಕುಳ

ಮುಂಬೈ: ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರಿಗೆ ಮುಂಬೈನ ರಸ್ತೆಯಲ್ಲಿ ಪಾಪರಾಜಿಗಳಿಂದ ಕಿರುಕುಳವಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್‌ನಿಂದ ಹೊರಬಂದ ಸಮಂತಾ ಅವರ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಲು ಪಾಪರಾಜಿಗಳು ಮುಗಿಬಿದ್ದಿದ್ದು, ಇದಕ್ಕೆ ಸಿಟ್ಟಿಗೆದ್ದ ಸಮಂತಾ, “ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ಕೂಗಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ನೆಟ್ಟಿಗರು ಪಾಪರಾಜಿಗಳ ವರ್ತನೆಯನ್ನು ಖಂಡಿಸಿ, ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡುವಂತೆ ಕೋರಿದ್ದಾರೆ. ಸಮಂತಾ ರುತ್ ಪ್ರಭು ಅವರು ಮುಂಬೈನಲ್ಲಿ ಜಿಮ್‌ನಿಂದ ವರ್ಕೌಟ್ ಮುಗಿಸಿ ಹೊರಬಂದಾಗ ಈ ಘಟನೆ ನಡೆದಿದೆ. ತಮ್ಮ ಕಾರು ಇನ್ನೂ ಆಗಮಿಸದಿರುವಾಗ, ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ನಿಂತಿದ್ದ ಸಮಂತಾ ಕಿರಿಕಿರಿಯಾಗಿದ್ದ ರೀತಿಯಲ್ಲಿ ಕಾಣಿಸಿದ್ದಾರೆ. ಈ ಸಂದರ್ಭದಲ್ಲಿ, ಪಾಪರಾಜಿಗಳ ಗುಂಪು ಅವರನ್ನು ಸುತ್ತುವರಿದು ಫೋಟೋ ಮತ್ತು ವಿಡಿಯೋ ತೆಗೆಯಲು ಆರಂಭಿಸಿದ್ದಾರೆ. ಸಮಂತಾ, “ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ” ಎಂದು ಕೇಳಿಕೊಂಡರೂ, ಪಾಪರಾಜಿಗಳು ಕೇಳದೆ ಚಿತ್ರೀಕರಣ ಮುಂದುವರಿಸಿದ್ದಾರೆ. ಈ ವರ್ತನೆಯನ್ನು ನೆಟ್ಟಿಗರು ಕಿರುಕುಳ ಎಂದು ಬಣ್ಣಿಸಿದ್ದಾರೆ. ವೈರಲ್ ವಿಡಿಯೋ ಕುರಿತು ಕಾಮೆಂಟ್ ಮಾಡಿರುವ ನೆಟ್ಟಿಗರು, ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರ, “ಸೆಲೆಬ್ರಿಟಿಗಳೂ ಮನುಷ್ಯರು, ಅವರಿಗೂ ಖಾಸಗಿ ಕ್ಷಣಗಳು ಬೇಕು” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಪಾಪರಾಜಿಗಳ ಈ ರೀತಿಯ ವರ್ತನೆ ಸಂಪೂರ್ಣ ತಪ್ಪು” ಎಂದು ಖಂಡಿಸಿದ್ದಾರೆ. ಸಾಮಾನ್ಯವಾಗಿ, ಸೆಲೆಬ್ರಿಟಿಗಳು ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡುತ್ತಾರಾದರೂ, ಸಮಂತಾ ಈ ಸಂದರ್ಭದಲ್ಲಿ ಒತ್ತಡದಲ್ಲಿದ್ದಂತೆ ಕಾಣಿಸಿದ್ದು, ಅವರ ಕೋಪಕ್ಕೆ ಕಾರಣವಾಗಿದೆ ಎಂದು ಭಾವಿಸಲಾಗಿದೆ

ಸಿಎಂ ನಿವಾಸದ ಬಳಿ ಧರೆಗುರುಳಿದ ಮರ- ಎರಡು ವಾಹನ ಜಖಂ

ಬೆಂಗಳೂರಿನ ಸಿಎಂ ನಿವಾಸದ ಬಳಿಯೇ ಬೃಹತ್ ಮರವೊಂದು ಧರೆಗುರುಳಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ,
ಸಿಎಂ ನಿವಾಸದ ಬಳಿಯೇ ಮರ ಧರೆಗುರುಳಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಇನೋವಾ ಹಾಗೂ ಟಿಟಿ ವಾಹನ ಜಖಂ ಆಗಿದೆ, ಅದೃಷ್ಟವಾಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,
ಸದ್ಯ ಬೃಹತ್ ಮರವನ್ನು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಹಿನ್ನಲೆ ಶಿವಾನಂದ ಬಳಿಯೇ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ, ಇನ್ನು ಮರ ಬಿದ್ದ ಪರಿಣಾಮ ಕಾರಿನ ಗಾಜು, ಹಾಗೂ ಕಾರಿನ ಮೇಲ್ಭಾಗ ಹಾನಿಯಾಗಿದೆ,

ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ. 175 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ 9 ಲಕ್ಷ ನಗದು ವಶ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪರ‍್ಯಾದುದಾರರು ದಿನಾಂಕ:23/05/2025 ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪರ‍್ಯಾದುದಾರರು ಹಾಗೂ ಪರ‍್ಯಾದುದಾರರ ಪತ್ನಿಯವರು ದಿನಾಂಕ:21/05/2025 ರಂದು ಚಿಕ್ಕಮಗಳೂರಿಗೆ ಹೋಗಿರುತ್ತಾರೆ. ದಿ. 22ರ ತಡರಾತ್ರಿ ಮನೆಗೆ ಬಂದು ನೋಡಲಾಗಿ, ಕೊಠಡಿಯ ಬೀರುವಿನಲ್ಲಿದ್ದ 24,00,000 ನಗದು, 175 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಕಳುವಾಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಠಾಣಾ ಸರಹದ್ದಿನಲ್ಲಿರುವ ರಿಂಗ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ಪ್ರಶ್ನಿಸಲಾಗಿ, ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಮತ್ತು ಅವರ ಮತ್ತಿಬ್ಬರ ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಆರೋಪಿಗಳಿಬ್ಬರ ಮಾಹಿತಿಯ ಮೇರೆಗೆ ದಿನಾಂಕ:02/06/2025 ರಂದು 175 ಗ್ರಾಂ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಹಾಗೂ 4,00,000/- ನಗದು, ಕೃತ್ಯಕ್ಕೆ ಉಪಯೋಗಿಸಿದ ಎರಡು ರಾಡ್ ಹಾಗೂ ದ್ವಿ-ಚಕ್ರ ವಾಹನ ಸಹ ವಶಪಡಿಸಿಕೊಳ್ಳಲಾಯಿತು.

ತನಿಖೆಯನ್ನು ಮುಂದುವರೆಸಿ, ಆರೋಪಿಗಳ ಸಹಚರರಿಬ್ಬರ ಪೈಕಿ ಓರ್ವ ಆರೋಪಿಯನ್ನು ಜಯನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ, ಕೇಂದ್ರ ಕಾರಾಗೃಹದಲ್ಲಿರುವ ಬಗ್ಗೆ ಮಾಹಿತಿಯನ್ನು ಪಡೆದು, ಆತನನ್ನು ದಿನಾಂಕ:09/06/2025 ರಂದು 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.

ದಿನಾಂಕ:12/06/2025 ರಂದು ಆರೋಪಿಯಿಂದ ಕಳವು ಮಾಡಿದ್ದ ಹಣದ ಪೈಕಿ 5,00,000/- ನಗದನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಪತ್ತೆಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.

ಈ ಪ್ರಕರಣದ ಮೂವರು ಆರೋಪಿಗಳಿಂದ ಒಟ್ಟು 175 ಗ್ರಾಂ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಹಾಗೂ ₹ 9,00,000/- ನಗದು, ಕೃತ್ಯಕ್ಕೆ ಉಪಯೋಗಿಸಿದ ಎರಡು ರಾಡ್ ಹಾಗೂ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 25,00,000/-(ಇಪ್ಪತ್ತೆöÊದು ಲಕ್ಷ ರೂಪಾಯಿ).

ಈ ಪ್ರಕರಣದ ಮೂವರು ಆರೋಪಿಗಳಿಂದ 1) ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯ-01 ಕನ್ನ ಕಳವು ಪ್ರಕರಣ, 2) ಹನುಮಂತನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭ ಜಗಲಾಸರ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ವಿ.ವಿ.ಪುರಂ ಉಪ-ವಿಭಾಗದ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮೀದ್ ಬಾಷಾ ರವರ ನೇತೃತ್ವದಲ್ಲಿ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ.ಗಿರೀಶ್ ನಾಯ್ಕ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.