Home Blog Page 75

ಯೋಗದಿಂದ ಸದೃಢ ಆರೋಗ್ಯ ನಿರ್ಮಾಣ: ಡಾ. ಜಾವಿದ ಜಮಾದಾರ

ವಿಜಯಪುರ- ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿ ಯೋಗಕ್ಕಿದೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗನ್ನು ನಿಯಂತ್ರಿಸಬಹುದು ಎಂದು ರಾಷ್ಟ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ ಜಮಾದಾರ ಅಭಿಪ್ರಾಯಪಟ್ಟರು.

ನಗರದ ವಿಶ್ವವಿಖ್ಯಾತ ಗೋಲಗುಮ್ಮಜ ಆವರಣದಲ್ಲಿ ಕೇಂದ್ರ ಸಂಸ್ಕೃತಿ ಮಂತ್ರಾಲಯ, ಭಾರತೀಯ ಪುರಾತತ್ವ ಇಲಾಖೆ, ನವದೆಹಲಿ, ಹಾಗೂ ಭಾರತೀಯ ಪುರಾತತ್ವ ಸಂರಕ್ಷಣೆ ಧಾರವಾಡ ವಲಯ ಇವರ ಸಂಯುಕ್ತ ಆಶ್ರಯದಲ್ಲಿ 11ನೇ ಅಂತರರಾಷ್ಟಿಯ ಯೋಗ ದಿನಾಚರಣೆಯನ್ನು ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಂಘಟಿಸಲಾಗಿತ್ತು.

ಯೋಗವು ಇಂದು ಅನಿವಾರ್ಯವಾಗಿ ಒತ್ತಡದ ಬದುಕಿಗೆ ನೆಮ್ಮದಿ ಜೀವನ ನಡೆಸಲು ಯೋಗವು ಒಂದು ದಿವ್ಯ ರೀತಿಯ ಔಷಧ. ಯೋಗವನ್ನು ನಿತ್ಯವು ಮಾಡುವುದರಿಂದ ಆರೋಗ್ಯಕರ ಸದೃಢ ಮನಸ್ಸು ಸಂಪಾದಿಸಲು ಸಾಧ್ಯ. ಪಾಚೀಮಾತ್ಯ ರಾಷ್ಟçಗಳಲ್ಲಿ ಯೋಗ ಮತ್ತು ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ನಮ್ಮ ದೇಶದಲ್ಲಿಯೂ ಯೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಪ್ರವರ್ದಮಾನಕ್ಕೆ ಬರುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ ಮೌಲ್ಯ ಗಳಿಸಿಕೊಳ್ಳದೆ ಇದ್ದಲ್ಲಿ ವಿದ್ಯೆಗೆ ಯಾವುದೇ ಗೌರವ ಸಿಗುವದಿಲ್ಲ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಯೋಗ ಕಲಿಯುವದರಿಂದ ಉತ್ತಮ ಆರೋಗ್ಯ ಸಾಧ್ಯ ಕಲಿಕೆ ಜೊತೆಗೆ ವಿದ್ಯಾರ್ಥಿಗಳು ಪಠ್ಯೆತರ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕೆಂದರು. ಸದೃಢ ವ್ಯಕ್ತಿ, ಸದೃಢ ಸಮಾಜ, ಸದೃಢ ರಾಷ್ಟç ಪರಿಕಲ್ಪನೆಯೊಂದಿಗೆ ಆರೋಗ್ಯವಂತ ಜೀವನಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಕಾರ್ಯವಾಗಬೇಕೆಂದರು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸಂರಕ್ಷಣೆ ಸಹಾಯಕ ಅಧಿಕಾರಿ ಎಂ.ವಿ. ವಿಜಯಕುಮಾರ ಮಾತನಾಡಿ ರಾಷ್ಟದ 189 ಐತಿಹಾಸಿಕ ಪಾರಂಪರಿಕ ಸ್ಥಳಗಳಲ್ಲಿ ಹಾಗೂ ಧಾರವಾಡ ವಲಯದ ಬದಾಮಿ, ಪಟ್ಟದಕಲ್ಲು, ಐಹೊಳ್ಳೆ, ಗೋಲಗುಮ್ಮಜದಲ್ಲಿ ಅಂತರರಾಷ್ಟಿಯ 11ನೇ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ. ನಮ್ಮ ಪಾರಂಪರಿಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜೊತೆಗೆ ಯುವ ಸಮುದಾಯದಲ್ಲಿ ಯೋಗದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಮಾರಂಭದ ಅದ್ಯಕ್ಷತೆಯನ್ನು ವಹಿಸಿ ಉಪ ಅಧೀಕ್ಷಕ ಪುರಾತತ್ವ ಅಭಿಯಂತರರು ಭಾರತೀಯ ಪುರಾತತ್ವ ಸಂರಕ್ಷಣಾ ಧಾರವಾಡ ವಲಯ ಎನ್.ಬಿ.ಡಿ. ಕೆಂಪೇಗೌಡ ಮಾತನಾಡಿ ಯೋಗ, ಕ್ಷೇಮ ಮತ್ತು ಪರಿಸರ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಹಾಗೂ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೊಗ್ಯವನ್ನು ಹೆಚ್ಚಿಸಲು ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಒಂದುಗೂಡಿಸಿ ಈ ಯೋಗವು ಹೆಚ್ಚಿನ ನಮ್ಯತೆ, ಶಕ್ತಿ ಸಮತೋಲನ ಮತ್ತು ಒತ್ತಡ ಸೇರಿದಂತೆ ವ್ಯಾಪಕ ಶ್ರೇಣಿಯ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿ ನಾವು ಯೋಗಕ್ಕೆ ಶರಣಾಗಬೇಕು. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ. ಅಂತಹ ಒತ್ತಡದಿಂದ ಮುಕ್ತರಾಗಲು ಯೋಗ ಒಂದೇ ಮಾರ್ಗ ಎಂದರು.

ಯೋಗ ಗುರುಗಳಾದ ಸುರೇಶ ಬಿ. ಆನಂದಿ ಅವರು ಯೋಗದ ವಿವಿಧ ಆಯಾಮಗಳ ತರಬೇತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಇವರ ಸಂಭಾಷಣೆಯ ನೇರ ಪ್ರಸಾರವನ್ನು ಪರದೆಯ ಮೇಲೆ ಬಿತ್ತರಿಸಲಾಗಿತ್ತು. ಕುಮಾರಿ ಶಿಫಾ ಯೋಗದ ಮಹತ್ವ ಕುರಿತು ಉಪನ್ಯಾಸ ನೀಡಿದರು. ನಗರದ 20 ಕಾಲೇಜುಗಳಿಂದ ಅಪಾರ ಸಂಖ್ಯೆಯ ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಹಾಗೂ ವಿಶ್ವವಿಖ್ಯಾತ ಗೋಲಗುಮ್ಮಜ ವಿಕ್ಷಣೆಯನ್ನು 11ನೇ ಯೋಗ ದಿನಾಚರಣೆಯ ಅಂಗವಾಗಿ ಉಚಿತ ಪ್ರವೇಶ ಇಡಲಾಗಿದೆ. ಅನೇಕ ಪ್ರವಾಸಿಗರು ಇದರ ಲಾಭವನ್ನು ಪಡೆದರು.
ಕಾರ್ಯಕ್ರಮದ ಮೊದಲಿಗೆ ಸುರೇಶ ಬಿರಾದಾರ ಸ್ವಾಗತಿಸಿದರು ಅಮರದೀಪ ವಂದಿಸಿದರು. ಪ್ರೊ. ರಾಜು ಕಪಾಳೆ ನಿರೂಪಿಸಿದರು.

ಅಭಾಸಾಪ- ನಾಕುತಂತಿ ಷಷ್ಟಿಪೂರ್ತಿ ನಾದ-೫ ವಿಶೇಷ ವ್ಯಾಖ್ಯಾನ ಕಾರ್ಯಕ್ರಮ

ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂಬುದನ್ನು ಕನ್ನಡಿಗರು ಎಲ್ಲೆಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ೧೯೬೪ರಲ್ಲಿ  ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿದ “ನಾಕುತಂತಿ” ಕೃತಿಗೆ ೧೯೭೪ರಲ್ಲಿ ಜ್ಞಾನಪೀಠ ಲಭಿಸಿದೆ ಎನ್ನುವುದು ತಿಳಿದ ವಿಚಾರವೆ. ಈ ಕೃತಿ ರಚನೆಯಾಗಿ ಅರವತ್ತು ವರ್ಷಗಳಾಗಿದ್ದು, ಜ್ಞಾನಪೀಠ ಪುರಸ್ಕೃತಗೊಂಡು ಐವತ್ತು ವರ್ಷ ತುಂಬುತ್ತಿದೆ. ಈ ನೆನಪಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮಹಾನಗರ ಘಟಕದ ವತಿಯಿಂದ ‘ನಾಕುತಂತಿ ಷಷ್ಟಿಪೂರ್ತಿ’ ಸಂಭ್ರಮಾಚರಣೆಯನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದೆ. ಹೆಸರಾಂತ ಇತಿಹಾಸಕಾರರೂ ವಿಮರ್ಶಕರೂ ಆದ ಡಾ. ಜಿ. ಬಿ. ಹರೀಶರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ೧೨ ತಿಂಗಳು ಬೆಂಗಳೂರಿನ ವಿವಿಧೆಡೆಗಳಲ್ಲಿ ಒಂದೊಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

ಡಾ.ಜಿ.ಬಿ.ಹರೀಶ ರವರು ನಾಕುತಂತಿಯ ಆಯ್ದ ಕವನಗಳ ಪರಿಚಯ ಹಾಗೂ ವಿಶ್ಲೇಷಣೆಯನ್ನು ನಡೆಸಿಕೊಡುತ್ತಾರೆ. ಪ್ರಮುಖವಾಗಿ ನಾಕುತಂತಿ ಸಾಹಿತ್ಯದಲ್ಲಿ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಅಧ್ಯಾತ್ಮದ ಹಿನ್ನೆಲೆ ಪರಿಚಯವನ್ನು ಈ ಸರಣಿಯ ಮುಖಾಂತರ ಮಾಡಲಾಗುತ್ತದೆ. ಇದು ಸಾಹಿತ್ಯಾಭ್ಯಾಸಿಗಳಿಗೆ ಕವನಗಳ ಒಳಗನ್ನು ತೆರೆದಿಟ್ಟು ಕಾವ್ಯಪ್ರಪಂಚಕ್ಕೆ ಆತ್ಮವಿಶ್ವಾಸದ ಪ್ರವೇಶಕ್ಕೆ ಅನುವಾಗುತ್ತದೆ. ಜತೆಗೆ ಇಂದಿನ ಪೀಳಿಗೆಗೆ ಬೇಂದ್ರೆಯವರ ಕಾವ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮ ಪರಿಚಯಿಸುವ ಸದುದ್ದೇಶವನ್ನು ಹೊಂದಿದೆ.

ಈ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ದಿನಾಂಕ ೨೧ ಜೂನ್‌ ೨೦೨೫, ಶನಿವಾರದಂದು ಸಂಜೆ ೪:೩೦ ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಶೇಷಾದ್ರಿಪುರಂ ಕಾಲೇಜುನಲ್ಲಿ (ಮೇನ್‌ ಕಾಲೇಜ್‌) ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ ಅವರು ನಾಕುತಂತಿ ಕವನದ ವಿಶೇಷ ವ್ಯಾಖ್ಯಾನವನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಾಸ್ಯ ಬರಹಗಾರರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌, ಬೆಂಗಳೂರು ಮಹಾನಗರದ ಅಧ್ಯಕ್ಷರಾದ ಎಂ.ಎಸ್‌. ನರಸಿಂಹಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಸುಗಮ ಸಂಗೀತ ಗಾಯಕಿ ರಮ್ಯ ವಸಿಷ್ಠ ಅವರು ಬೇಂದ್ರೆ ಗೀತಗಾಯನವನ್ನು ನಡೆಸಿಕೊದಲಿದ್ದಾರೆ.

ತಮ್ಮ ಘನತೆವೆತ್ತ ಮಾಧ್ಯಮದಲ್ಲಿ ಕಾರ್ಯಕ್ರಮದ ಕುರಿತು ಸುದ್ದಿ, ಕಾರ್ಯಕ್ರಮದ ದಿನ ಇಂದಿನ ಕಾರ್ಯಕ್ರಮ ವಿಭಾಗದಲ್ಲಿ ವಿವರವನ್ನು ಪ್ರಕಟಿಸಬೇಕು ಹಾಗೂ ಕಾರ್ಯಕ್ರಮದಂದು ತಮ್ಮ ಪ್ರತಿನಿಧಿಯನ್ನು ಕಳಿಸುವ ಮೂಲಕ ವರದಿ ಪ್ರಕಟಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.

ದಿನಾಂಕ: 21 ಜೂನ್‌ ‌2025, ಶನಿವಾರ

ಸಮಯ: ಸಂಜೆ ೪:೩೦ ಗಂಟೆ

ಸ್ಥಳ ಶೇಷಾದ್ರಿಪುರಂ ಕಾಲೇಜು (ಮೇನ್‌), ಶೇಷಾದ್ರಿಪುರ, ಬೆಂಗಳೂರು – 560020

ಸುಭುದೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ, 5000 ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ

ಜಯನಗರ: ರಕ್ಷಾ ಫೌಂಡೇಷನ್ 13ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಕಾರ್ಯಕ್ರಮ ಮತ್ತು ಧರ್ಮಗುರುಗಳಿಂದ ಆಶೀರ್ವಚನ ಏರ್ಪಡಿಸಲಾಗಿತ್ತು.
ಚಂದ್ರಗುಪ್ತಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಸುಪ್ರಿಂಕೋರ್ಟ್ ನ್ಯಾಯಧೀಶರಾದ ಅರವಿಂದ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕರು ರಕ್ಷಾ ಫೌಂಡೇಸನ್ ಸಂಸ್ಥಾಪಕರಾದ ಸಿ.ಕೆ.ರಾಮಮೂರ್ತಿ, ಶಾಸಕರಾದ ಸತೀಶ್ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನರಾಮಮೂರ್ತಿ ಚಾಲನೆ ನೀಡಿದರು.

ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಶ್ರೀ ಲಲಿತಾ ಸಹಸ್ರನಾಮ ಕಾರ್ಯಕ್ರಮವನ್ನು ಯಶ್ವಸಿಯಾಗಿ ಅಚರಿಸಿಕೊಂಡು ಬರುತ್ತಿದ್ದು, ಇದು ಶ್ರೇಷ್ಠವಾದ ಕಾರ್ಯ. ಶ್ರೀ ಲಲಿತಾ ತಾಯಿಯಿಂದ ಎಲ್ಲರಿಗೂ ಆಶೀರ್ವಾದ, ಕೃಪೆ ಎಲ್ಲರಿಗೂ ಸಿಗಬೇಕು. ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠವಾದದ್ದು. ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. ಸನಾತನ ಹಿಂದೂ ಪರಂಪರೆಯಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ, ಪೂಜೆ ಮಾಡುವ ಹಕ್ಕು ನೀಡಲಾಗಿದೆ ಎಂದರು. ವೇದಗಳಲ್ಲಿ ಶ್ರೀಲಲಿತಾ ಸಹಸ್ರನಾಮ ವಿಶೇಷತೆ, ಮಹಿಮೆ, ಉಪಾಸನೆ ಕುರಿತು ತಿಳಿಸಲಾಗಿದೆ. ಲಲಿತಾ ಎಂದರೆ ಸರಳ, ಮಕ್ಕಳಿಗೆ ತಾಯಿಯ ಅನುಗ್ರಹ, ತನ್ಮೂಲಕ ಸಮಸ್ತ ಲೋಕಕ್ಕೆ ಮಾತೃಸ್ವರೂಪಿಣಿಯಾದ ಶ್ರೀ ಲಲಿತಾದೇವಿಯ ಸಹಸ್ರನಾಮದಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.

ನ್ಯಾಯಧೀಶರಾದ ಅರವಿಂದ್ ಕುಮಾರ್ ಮಾತನಾಡಿ, ರಕ್ಷಾ ಫೌಂಡೇಷನ್ ಶಿಸ್ತುಬದ್ದ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಲಲಿತಾ ಸಹಸ್ರನಾಮ ಲಲಿತಾಂಬೆ ಪೂಜೆ ಮಾಡುವುದರಿಂದ ಸಂಕಷ್ಟಗಳು ನಿವಾರಣೆ ಯಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿದೆ ಎಂದು ಹೇಳಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ರೈತ ಮತ್ತು ಸೈನಿಕ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ. ದೇಶ, ರಾಜ್ಯ ಸುಭೀಕ್ಷೆಯಾಗಿರಬೇಕು ಮತ್ತು ನಾಡಿನ ಸಮಸ್ತ ಜನರು ಸುಖ, ಶಾಂತಿ ನೆಮ್ಮದ್ದಿಯಿಂದ ಬಾಳಬೇಕು ಎಂಬ ಸದಾಶಯದಿಂದ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೇಳೆಯಾಗಲಿ. ಬಂದ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಬಾಳಿನಲ್ಲಿ ಬೆಳಕು ಮೂಡಲಿ ಎಂದು ಹೇಳಿದರು.
ಚಲನಚಿತ್ರ ನಟಿ ಮಾಳವಿಕ ಅವಿನಾಶ್, ತಿರುಪತಿ ದೇವಸ್ಥಾನದ ಸದಸ್ಯರಾದ ನರೇಶ್, ಮಾಜಿ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ಮಾಲತಿ ಸೋಮಶೇಖರ್,ಜಲ್ಲಿ ರಮೇಶ್ ,ಧನರಾಜ್, ಗೋವಿಂದನಾಯ್ಡು, ಚಂದ್ರಶೇಖರರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ ಮತ್ತಿತರರು ಭಾಗವಹಿಸಿದ್ದರು.

ವಿಮಾನದಲ್ಲಿ ಮಹಿಳೆ ರಂಪಾಟ!

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರು ವೃದ್ಧನೊಂದಿಗೆ ಜಗಳವಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ, ಬೆಂಗಳೂರಿನ ಆ ಮಹಿಳೆಯನ್ನು ಕೆಳಗಿಳಿಸಲಾಗಿದೆ ಎಂದು ಘಟನೆಯ ಬಗ್ಗೆ ಮಾಹಿತಿ ಇಲ್ಲದ ಜನರು ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಬರೆದಿದ್ದರು,
ಸೀಟ್ ನಂಬರ್ 11,,,,, ಗಾಗಿ ಕಿತ್ತಾಡಿದ್ದರು ಎನ್ನಲಾಗಿತ್ತು!
ಮಹಿಳೆಯ ಕಿರಿಕ್ ಬಗ್ಗೆ ಮೊದ ಮೊದಲು ಹಬ್ಬಿದ್ದ ಸುಳ್ಳು ಸುದ್ ಇದೇ ನೋಡಿ, ಅಹಮಾದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದಾಗ 11,,,,,, ಸೀಟ್ ನಲ್ಲಿ ಕುಳಿತಿದ್ದ ರಮೇಶ್ ಎಂಬಾತ ಬದುಕಿಬಂದಿದ್ದ, ಅದನ್ನು ಕಂಡ ಮಹಿಳೆಯೊಬ್ಬರು ವಿಮಾನದಲ್ಲಿ 11,,,, ಸೀಟ್ ಗಾಗಿ ಕಿತ್ತಾಡಿದ್ದರು, ಎಂದು ಸುದ್ದಿ ಹಬ್ಬಿಸಲಾಯ್ತು, ಆದರೆ ಅದೆಲ್ಲಾ ಸುಳ್ಳು.

ಲಗೇಜ್ ಇಡಲು ನಡೆದ ಗಲಾಟೆ ಎನ್ನಲಾಗಿತ್ತು,
ಯಲಹಂಕ ಮೂಲಕ ವ್ಯಾಸ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ ಪ್ಲೈಟ್ ನಲ್ಲಿ ಬೋರ್ಡಿಂಗ್ ಆಗಿ ಲಗೇಜ್ ಅನ್ನು ಬೇರೆಯವರ ಸೀಟ್ ಬಳಿ ಬಿಟ್ಟಿದ್ದರು, ಲಗೇಜ್ ಬಗ್ಗೆ ಪ್ರಶ್ನಿಸಿದಕ್ಕೆ ವಿಮಾನ ಸಿಬ್ಬಂದಿ ಜೊತೆ ಮಹಿಳೆ ಅನುಚಿತವಾಗಿ ನಡೆದುಕೊಂಡಿದ್ದಾಳೆ ಎನ್ನಲಾಗಿತ್ತು ಇದೂ ಕೂಡ ಸುಳ್ಳು,

ಇದು ಜಾದೂಗಾರ ಮಾಡಿದ ಕೆಲಸಕ್ಕೆ ನಡೆದ ಗಲಾಟೆ
ಮಹಿಳೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಒಬ್ಬ ಜಾದೂಗಾರ ಪರಿವಾಳ ಮೂಲಕ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ,
ಅದರೆ ಆತನ ಹತ್ತಿರದಲ್ಲಿ ಕುಳಿತಿದ್ದ ಮಹಿಳೆ ಪಾರಿವಾಳ ಕಂಡು ಕೆರಳಿ ಜಾದೂಗಾರನ ಜೊತೆ ಜಗಳ ಮಾಡಿದ್ದಾಳೆ, ಪರಿಸ್ಧಿತಿ ಕೈಮೀರುತ್ತಿದೆ ಎಮದು ತಿಳಿಯುತ್ತಿದ್ದಂತೆಯೇ ವಿಮಾನ ಮಧ್ಯಪ್ರವೇಶಿಸಿ ವಿಮಾನ ಪ್ರೋಟೋಕಾಲ್ ಗಳನ್ನು ಅನುಸರಿಸಿ, ಸಹ ಪ್ರಯಾಣಿಕರನ್ನು ಗೌರವಿಸಿ ಎಂದು ಹೇಳಿದ ಮೇಲೆ ಆಗ ಎಲ್ಲರೂ ಸಮ್ಮನಾಗಿದ್ದಾರೆ,
ವಿಶೇಷ ಎಂದರೆ ಈ ವಿಡಿಯೋವನ್ನು 5 ದಿನಗಳ ಹಿಂದೆಯೇ ನಾಗಪುರದ ವಿಮಾನ ಹಾರಾಟ ತರಬೇತಿ ಕೇಂದ್ರ ಹಂಚಿಕೊಂಡಿದೆ, ಪಾರಿವಾಳದ ಮಾಜಿಕ್ ಮಾಡಲು ಹೋಗಿ ವ್ಯಕ್ತಿ ಮಾಡಿದ ಕೆಲಸಕ್ಕೆ ಮಹಿಳೆ ಸಿಟ್ಟಿಗೆದ್ದು, ರಂಪ ಮಾಡಿದ್ದಾಳೆ, ಆದರೆ ಘಟನೆಯ ಅಸಲಿಯತ್ತನ್ನೇ ತಿರುಚಿ ಮಹಿಳೆ ಗಲಾಟೆ ಮಾಡಿದ್ದನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲ ಹಂಚಿಕೊಳ್ಳಲಾಗಿದೆ,

ಆಡಿಯೋ ನಿಜ, ಲೀಕ್ ಮಾಡಿದ್ದು ತಪ್ಪೆಂದು ಜಮೀರ್ ಆಪ್ತ

ಬೆಂಗಳೂರು: ರಾಜ್ಯ ಸರ್ಕಾರದ ಬುಡಕ್ಕೆ ಈಗ ಮತ್ತೊಂದು ಭ್ರಷ್ಟಾಚಾರ ಬಾಂಬ್ ಬಿದ್ದಿದೆ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದವರಿಗೆಷ್ಟೇ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾದ್ಯಕ್ಷ, ಆಳಂದ ಶಾಸಕ ಬಿ ಆರ್ ಪಾಟೀಲ್ ತಮ್ಮದೇ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೊವೊಂದು ವೈರಲ್ ಆಗಿದೆ,
ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಘರಾಜ್ ಖಾನ್ ಮೊಬೈಲ್ ಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವ ಪಾಟೀಲ್ ಹಣೆ ಪಡೆದು ಯಾವ ಗ್ರಾಮಕ್ಕೆ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ? ಎಂಬ ಮಾಹಿತಿ ಪಡೆದುಕೊಂಡಿದ್ದಾರೆ, ಅಲ್ಲದೇ ಈ ಮಾಹಿತಿಯನ್ನು ನಾನು ಬಹಿರಂಗಪಡಿಸಿದ್ರೆ ಸರ್ಕಾರವೇ ಅಲುಗಾಡುತ್ತೆ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ,

ಆಡಿಯೋ ಸತ್ಯ ಎಂಬ ಸರ್ಘರಾಜ್ ಖಾನ್
ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪ ಸತ್ಯ ಎಂದು ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಘರಾಜ್ ಖಾನ್ ಹೇಳಿದ್ದಾರೆ, ಆಡಿಯೋ ಬಹಿರಂಗವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಖಾನ್, ಪ್ರಕರಣದ ಬಗ್ಗೆ ಸಚಿವ ಜಮೀರ್ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ,
ದೂರವಾಣಿಯಲ್ಲಿ ಮಾತನಾಡಿದ್ದನ್ನು ಸೋರಿಕೆ ಮಾಡಿದ್ದು ತಪ್ಪ, ಜನಪ್ರತಿನಿಧಿ ಎಂಬ ಕಾರಣಕ್ಕೆ ಮಾತನಾಡಿದ್ದೇನೆ, ಅವರೇ ಕರೆ ಮಾಡಿ ಆಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ ಎಂದು ಸರ್ಘರಾಜ್ ಖಾನ್ ಕಿಡಿಕಾರಿದ್ದಾರೆ, ಆ ಮೂಲಕ ವೈರಲ್ ಆಗಿರುವ ಆಡಿಯೋ ಅಸಲಿ ಎಂದು ಒಪ್ಪಿಕೊಂಡಂತಾಗಿದೆ,
ಹಣ ತೆಗೆದುಕೊಂಡು ಮನೆ ಹಂಚಿಕೆ ಮಾಡಿದ್ದರೆ ತಿಳಿಸಿ ಅಂಥವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಆಡಿಯೋದಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ, ನನ್ನದು ಐಪೋನ್, ಇದರಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳಲು ಆಗುವುದಿಲ್ಲ, ಅವರೇ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದು ತಪ್ಪು ಸಚಿವ ಜಮೀರ್ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸರ್ಘರಾಜ್ ಖಾನ್ ತಿಳಿಸಿದ್ದಾರೆ,
ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ, ಈ ಎಲ್ಲಾ ಬೆಳವಣಿಗೆಗೆಳ ಬೆನ್ನಲ್ಲೇ ಇದೀಗ ವೈರಲ್ ಆಗಿರುವ ಆಡಿಯೊ ನಿಜ ಎಂದು ಸರ್ಘರಾಜ್ ಖಾನ್ ಒಪ್ಪಿಕೊಂಡಂತಾಗಿದೆ,

ಲೀಡ್ಸ್​ನಲ್ಲಿ ಭಾರತ​ ಗೆದ್ದಿದ್ದೆಷ್ಟು? ಇಲ್ಲಿ ಯಾರು ಬಲಿಷ್ಠ​?

ಭಾರತ-ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಇಂದು ಶುರುವಾಗಲಿದೆ. ಇದರೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2025-2027ರ ಋತು ಕೂಡಾ ಪ್ರಾರಂಭವಾಗುತ್ತದೆ. ಉಭಯ ತಂಡಗಳ ನಡುವಿನ ಮಹತ್ವದ ಹಣಾಹಣಿಗೆ ಲೀಡ್ಸ್‌ನ ಹೆಡಿಂಗ್ಲಿ ಮೈದಾನ ಆತಿಥ್ಯ ವಹಿಸಿದೆ.

ಭಾರತ ಕೊನೆಯ ಬಾರಿಗೆ 2007ರಲ್ಲಿ ರಾಹುಲ್​ ದ್ರಾವಿಡ್​ ನಾಯಕತ್ವದಲ್ಲಿ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಜಯಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಗಿಲ್​ ನಾಯಕತ್ವದಲ್ಲಿ ಟೆಸ್ಟ್ ಸರಣಿ ಗೆಲ್ಲಲು ತವಕಿಸುತ್ತಿದೆ.

ಲೀಡ್ಸ್​ ಮೈದಾನದಲ್ಲಿ ಉಭಯ​ ತಂಡಗಳ ದಾಖಲೆ ಹೇಗಿದೆ?. ಇಲ್ಲಿ ಇದುವರೆಗೂ ಆಡಿರುವ ​ಪಂದ್ಯಗಳೆಷ್ಟು? ಯಾರು ಹೆಚ್ಚು ಗೆಲುವು ಸಾಧಿಸಿದ್ದಾರೆ? ಎಂಬುದನ್ನು ಈಗ ತಿಳಿಯೋಣ.

ಹೆಡಿಂಗ್ಲೆ ಮೈದಾನದ ಇತಿಹಾಸ: ಹೆಡಿಂಗ್ಲೆ ಮೈದಾನದಲ್ಲಿ ಇದುವರೆಗೂ 81 ಟೆಸ್ಟ್​ ಪಂದ್ಯಗಳು ನಡೆದಿವೆ. ಮೊಟ್ಟಮೊದಲ ಪಂದ್ಯ 1899ರಲ್ಲಿ ನಡೆದಿತ್ತು. ಅಂದಿನಿಂದಲೂ ಈ ಮೈದಾನ ಕೆಲವು ಅದ್ಭುತ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ

, ಇಲ್ಲಿ ಇಂಗ್ಲೆಂಡ್ 37 ಪಂದ್ಯಗಳನ್ನು ಗೆದ್ದರೆ, ಪ್ರವಾಸಿ ತಂಡಗಳು ಕೇವಲ 25 ಪಂದ್ಯಗಳನ್ನು ಗೆದ್ದಿವೆ. ಟಾಸ್ ಗೆದ್ದಿರುವ ತಂಡಗಳೇ ಹೆಚ್ಚು ಗೆಲುವು ಸಾಧಿಸಿರುವ ದಾಖಲೆಗಳಿವೆ. ಹಾಗಾಗಿ, ಟಾಸ್​ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡಗಳು 29 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಚೇಸಿಂಗ್​ ತಂಡಗಳು 37 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.

ಲೀಡ್ಸ್‌ನಲ್ಲಿ ಭಾರತದ ಸೋಲು-ಗೆಲುವg: ಭಾರತ 1952ರಲ್ಲಿ ಲೀಡ್ಸ್‌ನಲ್ಲಿ​ ಮೊದಲ ಟೆಸ್ಟ್​ ಪಂದ್ಯ ಆಡಿತ್ತು. ಆದರೆ ಈ ಪಂದ್ಯದಲ್ಲಿ 7 ವಿಕೆಟ್​ಗಳ ಸೋಲು ಕಂಡಿತ್ತು. 1986ರಲ್ಲಿ ಕಪಿಲ್​ ದೇವ್​ ಮತ್ತು 2002ರಲ್ಲಿ ಸೌರವ್​ ಗಂಗೂಲಿ ನಾಯಕತ್ವದಲ್ಲಿ ಮಾತ್ರ ಗೆದ್ದಿದೆ. ಕೊನೆಯದಾಗಿ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೆಸ್ಟ್​ ಪಂದ್ಯವನ್ನಾಡಿ 76 ರನ್​ಗಳಿಂದ ಸೋಲುಂಡಿತ್ತು.

ಇಂಗ್ಲೆಂಡ್​ ದಾಖಲೆ: ಇಂಗ್ಲೆಂಡ್​ ಇಲ್ಲಿ ಭಾರತದ ವಿರುದ್ಧ ಒಟ್ಟು 4 ಬಾರಿ (1952, 1959, 1967 ಮತ್ತು 2021) ಗೆದ್ದಿದೆ. ಉಭಯ ತಂಡಗಳ ನಡುವೆ 1979ರಲ್ಲಿ ನಡೆದ ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು

ಯುದ್ಧಕ್ಕಾಗಿ ಮಗನ ಮದ್ವೆ ನಿಲ್ಲಿಸಿದ್ರಾ ನೆತಾನ್ಯಾಹು?

ಟೆಲ್‌ ಅವಿವ್‌: ಇರಾನ್‌ ಜೊತೆ ನಡೆತ್ತಿರುವ ಯುದ್ಧದ ಬಗ್ಗೆ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು(Benjamin Netanyahu) ಅಚ್ಚರಿಯ ಹೇಳಿಕೆಯೊಂದನ್ನು ನೀಡುವ ಮೂಲಕ ಇಸ್ರೇಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇರಾನ್‌ ಜೊತೆಗಿನ ಯುದ್ಧದ ಕಾರಣದಿಂದಾಗಿ ತಮ್ಮ ಮಗನ ಮದುವೆ ವಿಳಂಬ ಆಗುತ್ತಿದೆ. ಯುದ್ಧದ ಪರಿಣಾಮ ವೈಯಕ್ತಿಕ ಬದುಕಿನ ಮೇಲೂ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈನ್ನು ನೆತಾನ್ಯಾಹು ಹೇಳಿಕೆಗೆ ಇಸ್ರೇಲಿಗರು ಫುಲ್‌ ಗರಂ ಆಗಿದ್ದಾರೆ.

ಬೀರ್ ಶೆವಾದಲ್ಲಿನ ಕ್ಷಿಪಣಿಯಿಂದ ಹಾನಿಗೊಳಗಾದ ಸೊರೊಕಾ ಆಸ್ಪತ್ರೆಯ ಮುಂದೆ ಗಂಭೀರವಾಗಿ ಮಾತನಾಡಿದ ನೆತನ್ಯಾಹು, ಇಸ್ರೇಲ್‌ನ ಪ್ರಸ್ತುತ ಬಿಕ್ಕಟ್ಟನ್ನು ಎರಡನೇ ಮಹಾಯುದ್ಧದ ಬಾಂಬ್ ದಾಳಿಗೆ ಹೋಲಿಸಿದರು. ಇದೇ ವೇಳೆ ಅವರು ಯುದ್ಧಕ್ಕಾಗಿ ತಮ್ಮ ಪರಿವಾರ ಎಂತಹ ʻತ್ಯಾಗʼ ಮಾಡುತ್ತಿದೆ ಎಂಬುದನ್ನು ಜನರೆದುರು ಬಿಚ್ಚಡಲು ಮುಂದಾದರು. ಭದ್ರತಾ ಕಾಳಜಿಯಿಂದಾಗಿ ಎರಡನೇ ಬಾರಿಗೆ ತಮ್ಮ ಮಗ ಅವ್ನರ್ ಅವರ ವಿವಾಹವನ್ನು ಮರು ನಿಗದಿಪಡಿಸಿದ್ದನ್ನು ಪ್ರಧಾನಿ ತಮ್ಮ ಕುಟುಂಬವು ಮಾಡಿದ ತ್ಯಾಗಗಳಿಗೆ ಉದಾಹರಣೆಯಾಗಿ ತೋರಿಸಿದರು. ಈ ನಿರ್ಧಾರದಿಂದ ಮಗ ಅವ್ನರ್ ಮತ್ತು ಪತ್ನಿ ಸಾರಾ ನೆತನ್ಯಾಹು ಅವರ ಮೇಲೆಯೂ ತೀವ್ರ ಪರಿಣಾಮ ಬೀರಿದೆ ಎಂದು ತಮ್ಮ ಕುಟುಂಬಸ್ಥರ ಗುಣಗಾನಕ್ಕಿಳಿದಿದ್ದರು.

ಯುದ್ಧದಲ್ಲಿ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವವರ ಜೊತೆ ನಾವಿದ್ದೇವೆ. ಈ ಯುದ್ಧದಿಂದ ಇಸ್ರೇಲ್‌ನ ಪ್ರತಿಯೊಬ್ಬ ಪ್ರಜೆಯ ಮೇಲೂ ವೈಯಕ್ತಿಕ ಪರಿಣಾಮ ಬೀರಿದೆ. ಅದಕ್ಕೆ ನಾನೇನು ಹೊರತಾಗಿಲ್ಲ ಎಂದಿದ್ದಾರೆ. ಇರಾನ್‌ನ ಕ್ಷಿಪಣಿ ಸೊರೊಕಾ ಆಸ್ಪತ್ರೆ ಮೇಲೆ ಬಿದ್ದು ಅಪಾರ ಸಾವು-ನೋವು ಸಂಭವಿಸಿದೆ. ಈ ಪ್ರದೇಶಕ್ಕೆ ಭೇಟಿ ಕೊಟ್ಟ ನೆತಾನ್ಯಾಹು ಪರಿಶೀಲನೆ ನಡೆಸಿದ್ದಾರೆ. ಸಂಘರ್ಷದಲ್ಲಿ ಇಲ್ಲಿಯವರೆಗೆ ತನ್ನ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳುತ್ತದೆ.

ಇನ್ನು ನೆತಾನ್ಯಾಹು ಭಾಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಆಕ್ರೋಶ ಹೊರಹಾಕಿದ್ದಾರೆ. ನೆತಾನ್ಯಾಹು ವಾಸ್ತಾವಿಕ ಸಮಸ್ಯೆಯನ್ನು ಭಾವನಾತ್ಮಕವಾಗಿ ಮಾರ್ಪಾಟು ಮಾಡುತ್ತಿದ್ದಾರೆ. ಜನರ ದುಃಖಕ್ಕಿಂತ ತನ್ನದೇ ಆದ ಇಮೇಜ್‌ಗೆ ಆದ್ಯತೆ ನೀಡಿದ್ದಾರೆ. ಪ್ರಧಾನಿಗೆ ತಮ್ಮ ಮಗನ ಮದುವೆಯದ್ದೇ ಚಿಂತೆಯಾಗಿದೆ. ಅದೆಷ್ಟೋ ತಾಯಂದಿರ ಮಕ್ಕಳು ಯುದ್ಧದಲ್ಲಿ ಮಡಿದಿದ್ದಾರೆ. ಇನ್ನು ಕೆಲವರು ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ನೆತಾನ್ಯಾಹು ಈ ಹೇಳಿಕೆ ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಮೇಲ್ಸೇತುವೆ ಸಂಚಾರ ಬಂದ್

ಬೆಂಗಳೂರು: ಹೆಬ್ಬಾಳ ಫ್ಲೈಓವರ್  ಮೇಲೆ ರಸ್ತೆ ಕಾಮಗಾರಿ ಹಿನ್ನೆಲೆ ಬೆಂಗಳೂರು ಏರ್​ಪೋರ್ಟ್​  ಹಾಗೂ ಬೆಂಗಳೂರು ನಗರಕ್ಕೆ  ಸಂಪರ್ಕಿಸುವ ರಸ್ತೆ ಮಾರ್ಗ ಬಂದ್ ಆಗಲಿದೆ. ಇಂದಿನಿಂದ ಎರಡು ದಿನಗಳ ಕಾಲ ರಾತ್ರಿ 11.30 ರಿಂದ ಬೆಳಗ್ಗೆ 5 ಗಂಟೆಯವರೆಗೆ ಹೆಬ್ಬಾಳದ ಮೇಲ್ಸೇತುವೆ ಸಂಚಾರ ಬಂದ್ ಆಗಲಿದೆ. ಬದಲಿ ವ್ಯವಸ್ಥೆ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ  ನೀಡಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಬಿಬಿಎಂಪಿ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ನಗರದ ಕಡೆಗೆ ಬರುವ ಮಾರ್ಗದಲ್ಲಿ ಡಾಂಬರೀಕರಣ ಕೆಲಸ ನಡೆಯಲಿದೆ. ಈ ಹಿನ್ನೆಲೆ ಹೆಬ್ಬಾಳ ಫ್ಲೈಓವರ್​ ಬಂದ್ ಆಗಲಿದೆ. ಜೂನ್​ 20 ಹಾಗೂ 21ರ ರಾತ್ರಿ ವೇಳೆ 11:30ರಿಂ ಬೆಳಗಿನ ಜಾವ 5 ಗಂಟೆವರೆಗೂ ಸಂಚಾರ ನಿರ್ಬಂಧಿಸಲಾಗಿದೆ.

ಯಲಹಂಕ ಹಾಗೂ ಬೆಂಗಳೂರು ಏಪೋರ್ಟ್​ ರಸ್ತೆಗಳಲ್ಲಿ ಬರುವ ಪ್ರಯಾಣಿಕರು ಹೆಬ್ಬಾಳ ಮೇಲ್ಸೇತುವೆ ಕೆಳಗಿನ ಸರ್ವೀಸ್ ರಸ್ತೆ ಬಳಸಬಹುದಾಗಿದೆ. ಹೆಬ್ಬಾಳ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಬಳಿಕ ತುಮಕೂರು ಕಡೆ ಹೊರ ವರ್ತುಲ ರಸ್ತೆ ಮುಖಾಂತರ ಸಾಗಿ ಕುವೆಂಪು ಸರ್ಕಲ್‌ನಲ್ಲಿ ಎಡ ತಿರುವು ಪಡೆದುಕೊಳ್ಳಬೇಕು. ನ್ಯೂ ಬಿಇಎಲ್ ರಸ್ತೆ ಮೂಲಕ ಸಾಗಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಳಿಕ ಮೇಖ್ರಿ ಸರ್ಕಲ್ ತಲುಪಿ ಅಲ್ಲಿಂದ ಬೆಂಗಳೂರು ನಗರಕ್ಕೆ ತೆರಳಲು ಬದಲಿ ಮಾರ್ಗದ ಸೂಚನೆ ನೀಡಲಾಗಿದೆ.

ಸದ್ಯ ಏಪೋರ್ಟ್​ ರಸ್ತೆಗಳಲ್ಲಿ ಮೂರು ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೆರಡು ದಿನ ಹೆಬ್ಬಾಳ ರಸ್ತೆಯಲ್ಲಿ ಮೂಲಕ ಓಡಾಡುವವರಿಗೆ ಟ್ರಾಫಿಕ್ ತಲೆ ಬಿಸಿ ಮತ್ತಷ್ಟು ಹೆಚ್ಚಲಿದೆ. ವೀಕೆಂಡ್​ ಹಿನ್ನೆಲೆ ಹೆಚ್ಚು ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ಆಸ್ತಿ ನೋಂದಣಿಗೆ ಮತ್ತೆ ಸರ್ವರ್ ಡೌನ್ ಕಾಟ- ಸಬ್ ರಿಜಿಸ್ಟರ್ ಕಚೇರಿಗಳ ಎದುರು ಜನಾಕ್ರೋಶ!

ಬೆಂಗಳೂರು: ಕಾವೇರಿ ಸರ್ವರ್ ಡೌನ್ ಅದ ಹಿನ್ನಲೆ ರಾಜ್ಯದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಕಳೆದ ಒಂದು ವಾರದಿಂದ ಜನರು ಸಬ್ ರಿಜಿಸ್ಟರ್ ಆಫೀಸ್ ನ ಬಾಗಿಲು ಬಳಿ ಜನ ಕಾಯುವಂತಹ ಪರಿಸ್ಧಿತಿ ಬಂದಿದ್ದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ,
ಕಳೆದ ಜೂನ್ 13 ರಿಂದ ನಿರಂತರವಾಗಿ ಸರ್ವರ್ ಡೌನ್ ಆಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಶುಕ್ರವಾರದಿಂದ ನಿರಂತರವಾಗಿ ಸರ್ವರ್ ಸಮಸ್ಯೆ ಕಾಡುತ್ತಿದೆ, ಇದರಿಂದ ಜನರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ,
ದಸ್ತಾಮೇಜುಗಳ ನೋಂದಣಿಗೆ ಸಿಟಿಜನ್ ಲಾಗಿನ್ ನಲ್ಲಿ ದಾಖಲೆ ಅಪ್ ಲೋಟ್ ಮಾಡಲು ಇ-ಖಾತಾ ಅಥವಾ ಪಹಣಿ ಮಾಹಿತಿ ತೋರಿಸುತ್ತಿಲ್ಲ, ಇದಾದ ಮೇಲೆ ಮತ್ತೆ ದಾಖಲೆ ಪತ್ರ ಅಪ್ ಲೋಡ್ ಮಾಡುವಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ, ಒಂದು ವೇಳೆ ಹೇಗೋ ಅಪ್ ಲೋಡ್ ಮಾಡಿದಾಗ ಸಬ್ ರಿಜೆಸ್ಟ್ರಾರ್ ಲಾಗಿನ ನಲ್ಲಿ ತೋರಿಸುತ್ತಿಲ್ಲ ಎನ್ನಲಾಗಿದೆ,
ಅಷ್ಟೇ ಅಲ್ಲದೆ ಅನ್ ಲೈನ್ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಲು ಪೇಮೆಂಟ್ ಗೇಟ್ ವೇನಲ್ಲೂ ಸದಾಕಾಲ ಸರ್ವರ್ ಬ್ಯೂಸಿಯಿದೆ ಎಂದು ತೋರಿಸುತ್ತಿದೆ, ಜೊತೆಗೆ ಲಕ್ಷಾಂತರ ರೂಪಾಯಿ ಹಣ ಪಾವತಿಯ ವೇಳೆ ಕೂಡ ದಿಢೀರ್ ಸರ್ವರ್ ಡೌನ್ ಆಗಿ ಅತ್ತ ಬ್ಯಾಂಕ ಗೂ ವಾಪಸ್ ಆಗದೇ, ಇತ್ತ ಪಾವತಿ ಕೂಡ ಆಗದೆ, ಸತಾಯಿಸುತ್ತಿದೆ,
ಸದ್ಯ ಸಬ್ ರಿಜಿಸ್ಟ್ರರ್ ಆಫೀಸ್ ಮುಂದೆಯೇ ಜನರು ಸಾಲು ಗಟ್ಟಿ ನಿಂತಿದ್ದು, ಇತ್ತ ನೋಂದಣಿ ಮಾಡಲಾಗದೆ, ಅತ್ತ ಕೆಲಸ ಕೂಡ ಮಾಡಲಾಗದೆ ಸಿಟ್ಟಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ,

ಸರ್ಕಾರಿ ನೌಕರರ ಎರಡನೇ ಮತ್ತು ನಾಲ್ಕನೇ ಶನಿವಾರ ರೆಜೆ ರದ್ದು-ಇಂದಿನಿಂದಲೇ ಆದೇಶ ಜಾರಿ!

ನವದೆಹಲಿ: ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ಆದೇಶ ಜಾರಿಗೆ ಬಂದಿದ್ದು ರಾಷ್ಟ್ರಪತಿಯವರ ಅನುಮತಿ ಅಂಕಿತವೂ ದೊರೆತಿದೆ,
ಜೂ.14 ರಿಂದಲೇ ಈ ಆದೇಶ ಜಾರಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಇರುವುದಿಲ್ಲ,
2 ಮತ್ತು 4 ನೇ ಶನಿವಾರ ರಜಾ ದಿನದ ಆದೇಶವನ್ನು ಹಿಂಪಡೆದಿದ್ದು ಕೇಂದ್ರ ಸರ್ಕಾರ ರಾಜ್ಯಪತ್ರವನ್ನೂ ಸಹ ಹೊರಡಿಸಿದೆ,