Home Blog Page 74

ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗಾ ದಿನಾಚರಣೆ

ಬೆಂಗಳೂರು: ಯೋಗ ಕೇವಲ ಶಾರೀರಿಕ ಮಾತ್ರವಲ್ಲದೆ ಆರೋಗ್ಯ,ಜ್ನಾನಕ್ಕೋ ಒಳ್ಳೆಯ ಮದ್ದುಗಿದ್ದು, ನಿತ್ಯ ಎಲ್ಲರು ಅಭ್ಯಾಸ ಮಾಡಬೇಕು ಎಂದು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆಲಂಪಲ್ಲಿ ವಿಷ್ಣು ಭರತ್ ತಿಳಿಸಿದರು.

ಅಂತರಾಷ್ರ್ಟ್ರಿಯ ಯೋಗ ದಿನಾಚರಣೆ ಹಿನ್ನೆಲೆ

ಕನಕಪುರ ರಸ್ತೆಯ ಸೋಮನಹಳ್ಳಿಯ ಎಪಿಎಸ್ ಶಿಕ್ಷಣದ  ಅಂಗ ಸಂಸ್ಥೆಯಾಗಿರುವ ಅನಂತ ಜ್ಙಾನ ಗಂಗೋತ್ರಿ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನ ಆಚರಣೆಯಲ್ಲಿ ಮಾತನಾಡಿದ ಅವರು,  ಸಂಸ್ಥೆಯ ನೂರಾರು ಮಕ್ಕಳು ಯೊಗದಿನಾಚರಣೆಯಲ್ಲಿ ಭಾಗವಹಿಸಿದ್ರು, ಚಿಕ್ಕವರಿದ್ದಾಗಲೇ ಮಕ್ಕಳು ಯೋಗ ಅಭ್ಯಾಸ ಮಾಡಬೇಕು, ಯಾವುದೆ ರೋಗಗಳು ಬರುವುದಿಲ್ಲ, ಯೋಗದಿಂದ ಮಾನಸಿಕವಾಗಿ ಶಕ್ತರಾಗಲು ಸಾದ್ಯವಾಗುತ್ತದೆ, ನಿತ್ಯ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು‌.

  • ಜೂನ್ 21 ವಿಶೇಷ ದಿನವಾಗಿದೆ. ಸೂರ್ಯ ಪ್ರಕಾಶಮಾನವಾಗಿ ಬೆಳಗುತ್ತಾನೆ. ಪ್ರತಿನಿತ್ಯ ಇರುವುದಕ್ಕಿಂತ ಇವತ್ತು ಬಹಳ ಉದ್ದದ ದಿನವಾಗಿದೆ, ಹಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ಅಂತರಾಷ್ಡ್ರೀಯ ಯೋಗ ದಿನ ಆಚರಣೆ ಮಾಡಿದ್ಧಾರೆ. ಇ ದಿನ ವೈಜಾಗ್ ನಲ್ಲಿ ಲಕ್ಷಾಂತರ ಜನ ಯೋಗದಲ್ಲಿ ಭಾಗಿಯಾಗಿದ್ಧಾರೆ. ಯೋಗ ಮಾಡುವವರಿಗೆ ಯಾವುದೇ ಆರೋಗ್ಯ ವಿಮೆ ಬೇಕಾಗಿಲ್ಲ. ಜೀವನದ ಉದ್ದಕ್ಕೂ ಸಂತೋಷವಾಗಿ ಇರಬಹುದು ಎಂದು ತಿಳಿಸಿದರು.

ಎಪಿಎಸ್ ಕಾಲೇಜಿನ ಯೋಗ ಶಿಕ್ಷಕಿ ಧನಲಕ್ಷ್ಮಿ ಸಿಪಿ  ಮಾತನಾಡಿ, ಯೋಗ ದಿನಾಚಾರಣೆ ಮಾಡುವ ಉದ್ದೇಶ ಇಂದು ವಿಶೇಷವಾಗಿ ಸೂರ್ಯ ಪ್ರಕಾಶ ಮಾನವಾಗಿ ಬೆಳಗುತ್ತಾನೆ. ಲ್ಯಾಟಿಟ್ಯಡ್ ಮತ್ತು ಲಾಂಗಿಟ್ಯೂಡ್ ಹೆಚ್ಚು ಇರುತ್ತದೆ. ಒಂದು ಭೂಮಿ ಒಂದು ಆರೋಗ್ಯ ಎಂಬ ಕಲ್ಪನೆಯ ಅಡಿಯಲ್ಲಿ ಯೋಗ ಮಾಡಲಾಗುತ್ತದೆ. ಇದನ್ನು ಮೋದೀಜಿ  ಜಾರಿಗೆ ತಂದಿದ್ದಾರೆ, ಯೊಗದಿಂದ ಹತ್ತು ಹಲವು ಪ್ರಯೋಜನಗಳಿವೆ ಮಕ್ಕಳು ನಿತ್ಯ ಯೋಗ ಮಾಡುವುದರಿಂದ ಆರೋಗ್ಯದ ಜೊತೆಗೆ ಮಾನಸಿಕವಾಗಿ  ಸದ್ರುಡವಾಗುತ್ತದೆ ಎಂದರು.

ಬೆಂಗಳೂರಿನ ಎನ್ ಆರ್ ಕಾಲೋನಿಯ ಎಪಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಾಧ್ಯಾಪಕರು, ಶಿಕ್ಷಕರು,ವಿದ್ಯಾಥಿರ್ಇಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗಭ್ಯಾಸ ಮಾಡಿದರು. ಅದ ಪಿಯುಸಿ,ಡಿಗ್ರಿ,ಪಾಲಿಟೆಕ್ನಿಕ್ ನ ಪ್ರಾಚಾರ್ಯರು, ಎಪಿಎಸ್ ಗ್ರಾಮೀಣ ಶಾಲೆಯ ಹೆಡ್ ಮಾಸ್ಟರ್  ಸೆರಿದಂತೆ , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಯೋಗ ಗುರುಗಳಾದ  ಶಂಕರ್ ಹಾಗು ಧನಲಕ್ಷ್ಮಿ ಅವರ ಸಹಯೋಗದಲ್ಲಿ ನೂರಾರು ಮಕ್ಕಳಿಗೆ ಯೋಗ ಬಗ್ಗೆ ತಿಳಿಸುವ ಜೊತೆಗೆ ಕೆಲವು ಯೋಗದ ಆಸನಗಳನ್ನು ನೇರವಾಗಿ  ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ಪ್ರಕಾಶ್ ಎ, ಯೋಗ ಗುರು ಶಂಕರ್, ಉಪ ಪ್ರಾಚಾರ್ಯರಾದ ಪ್ರೊ.ಸಮೀರಣ್ಣ ಸಿಪಿ, ಪಿಇ ವಿಭಾಗದ ನಿರ್ದೇಶಕರಾದ ಡಾ.ಶ್ರೀಧರ್ ಬಿಡಿ, ಡಾ.ಡಿಜಿ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶ್ರೀ ವರಸಿದ್ಧಿ ವಿನಾಯಕ ದೇವಾಲಯದ 37ನೇ ವಾರ್ಷಿಕೋತ್ಸವ – ಷಣ್ ನಾರಿಕೇಳ ಗಣಹೋಮ 

ಬೆಂಗಳೂರು : ನಾಗರಬಾವಿಯ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ 37ನೇ ವಾರ್ಷಿಕೋತ್ಸವ ಪ್ರಯುಕ್ತ ಜೂನ್ 23, ಸೋಮವಾರ ಬೆಳಗ್ಗೆ 6-30 ರಿಂದ 12ರ ವರೆಗೆ : ರುದ್ರಾಭಿಷೇಕ, ಷಣ್ ನಾರಿಕೇಳ ಗಣಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ. ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಎಂ.ಕೆ. ನರಸಿಂಹ ಮತ್ತು ಸಂಗಡಿಗರಿಂದ “ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ” ಏರ್ಪಡಿಸಿದ್ದಾರೆ..
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯದ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಬಾಣಸವಾಡಿ ಮಿಲಿಟರಿ ಗ್ಯಾರಿಸನ್ 2025 ರ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ

ಬಾಣಸವಾಡಿ ಮಿಲಿಟರಿ ಗ್ಯಾರಿಸನ್ 2025 ರ ಅಂತರರಾಷ್ಟ್ರೀಯ ಯೋಗ ದಿನವನ್ನು ಹುರುಪು ಮತ್ತು ಏಕತೆಯೊಂದಿಗೆ ಆಚರಿಸುತ್ತದೆ.

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಫೌಂಡೇಶನ್ ಸಹಯೋಗದೊಂದಿಗೆ ಬಾಣಸವಾಡಿ ಮಿಲಿಟರಿ ಗ್ಯಾರಿಸನ್‌ನಲ್ಲಿರುವ ಗೂರ್ಖಾ ಉಭಯಚರಗಳು 2025 ರ ಅಂತರರಾಷ್ಟ್ರೀಯ ಯೋಗ ದಿನವನ್ನು ಅಸಾಧಾರಣ ಉತ್ಸಾಹ ಮತ್ತು ಮಿಲಿಟರಿ ನಿಖರತೆಯೊಂದಿಗೆ ಆಚರಿಸಿದರು. “ಯೋಗದ ಮೂಲಕ ಒಂದು ಭೂಮಿ, ಒಂದು ಆರೋಗ್ಯ” ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ಹೊಂದಿಕೊಂಡ ಈ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಕುಟುಂಬಗಳು ಭಾಗವಹಿಸಿದ್ದು, ಸಮಗ್ರ ಯೋಗಕ್ಷೇಮಕ್ಕೆ ಗ್ಯಾರಿಸನ್‌ನ ಬದ್ಧತೆಯನ್ನು ಒತ್ತಿಹೇಳುತ್ತದೆ.

ಮುಂಜಾನೆ, ಬೋಧಕರಾದ ಶ್ರೀ ಯೋಗೇಶ್ ಪಾಂಡೆ ಮತ್ತು ಶ್ರೀಮತಿ ತನ್ಮಯೀ ದೇಸಾಯಿ ಅವರ ತಜ್ಞ ಮಾರ್ಗದರ್ಶನದಲ್ಲಿ ಸೈನಿಕರು ಮತ್ತು ಕುಟುಂಬಗಳು ಏಕಕಾಲದಲ್ಲಿ ಆಸನಗಳನ್ನು ಪ್ರದರ್ಶಿಸಿದಾಗ ಪರೇಡ್ ಮೈದಾನವು ಜೀವಂತವಾಯಿತು. ಈ ಅಧಿವೇಶನವು ಫಿಟ್‌ನೆಸ್, ಸ್ಪಷ್ಟತೆ ಮತ್ತು ಆಂತರಿಕ ಸಮತೋಲನದ ಮೌಲ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿತ್ತು – ಕಾರ್ಯಾಚರಣೆಯ ಸಿದ್ಧತೆ ಮತ್ತು ವೈಯಕ್ತಿಕ ಸ್ಥಿತಿಸ್ಥಾಪಕತ್ವದ ಆಧಾರಸ್ತಂಭಗಳು.

ಈ ಕಾರ್ಯಕ್ರಮವು ದೈಹಿಕ ಸಹಿಷ್ಣುತೆ, ಭಾವನಾತ್ಮಕ ಶಕ್ತಿ ಮತ್ತು ಮಾನಸಿಕ ಗಮನವನ್ನು ಹೆಚ್ಚಿಸುವಲ್ಲಿ ಯೋಗದ ಅವಿಭಾಜ್ಯ ಪಾತ್ರವನ್ನು ಒತ್ತಿಹೇಳಿತು, ಸೈನಿಕರ ನೀತಿಯೊಂದಿಗೆ ಸರಾಗವಾಗಿ ಬೆರೆಯುತ್ತದೆ. ಗ್ಯಾರಿಸನ್ ಕಮಾಂಡರ್ ಮತ್ತು ಬೋಧಕರ ನಡುವೆ ‘ಭೀಕರ ಗೂರ್ಖಾ’ ಸ್ಮರಣಿಕೆ ಮತ್ತು ‘ದಿ ಗುರುದೇವ್ – ಲೈಫ್ ಆಫ್ ಶ್ರೀ ಶ್ರೀ ರವಿಶಂಕರ್’ ಪುಸ್ತಕದ ಸಾಂಕೇತಿಕ ವಿನಿಮಯದೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು, ಜೊತೆಗೆ ದೈನಂದಿನ ಜೀವನದಲ್ಲಿ ಯೋಗವನ್ನು ಸಂಯೋಜಿಸುವ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು.

ಸಂತಸದಿಂದಿರುವುದು ಕೂಡ ಯೋಗ: ಯೋಗ ಗುರೂಜಿ ಕೆ. ಎ. ಶಂಕರ್

ಬೆಂಗಳೂರು, ಜೂ, 21; ಯೋಗ ಆಸನವಷ್ಟೇ ಅಲ್ಲದೇ ಬದುಕಿನಲ್ಲಿ ಸಂತಸದಿಂದ, ಸಮಾಧಾನದಿಂದ ಇರುವುದು ಕೂಡ ಒಂದು ಬಗೆಯ ಯೋಗ ಎಂದು ಯೋಗ ಗುರುಜಿ ಕೆ. ಎ. ಶಂಕರ್ ಹೇಳಿದ್ದಾರೆ.
ಎಪಿಎಸ್ ಶಿಕ್ಷಣ ಸಂಸ್ಥೆಗಳಿಂದ ಸೋಮನಹಳ್ಳಿಯ ಅನಂತ ಜ್ಙಾನ ಗ್ನಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಯೋಗದ ಮಹತ್ವ ಅರಿತು, ಪ್ರತಿನಿತ್ಯ ಯೋಗಾಸನ ಮಾಡಬೇಕು. ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಲಿದೆ ಎಂದರು.


ಎಪಿಎಸ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ವಿಶ್ಣು ಭರತ್ ಆಲಂಪಲ್ಲಿ ಮಾತನಾಡಿ, ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಯೋಗದಂತಹ ಸಾಂಪ್ರದಾಯಿಕ ಅಭ್ಯಾಸಗಳಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಯೋಗ ದಿನದ ಆಚರಣೆಯಿಂದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪೋಷಿಸಲಿವೆ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನ ನಡೆಸಲು ಅಗತ್ಯವಿರುವ ಸಾಧನಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಟ್ರಸ್ಟಿ ಎ. ರಾಮಪ್ರಸಾದ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಜಿಲ್ಲಾ ಮಾನವ  ಹಾಗೂ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ವರದಿ ತಯಾರಿಸಲು ಉಪ ಸಮಿತಿ ರಚನೆ

 ಬೆಂಗಳೂರು ನಗರ ಜಿಲ್ಲೆ, ಜೂನ್ 21 (ಕರ್ನಾಟಕ ವಾರ್ತೆ) : ಜಿಲ್ಲೆಯ ವಿವಿಧ ವಲಯಗಳಲ್ಲಿ ಉಂಟಾದ ಬದಲಾವಣೆಗಳು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ನಿವಾರಣೆ ಕ್ರಮಗಳ ಬಗ್ಗೆ ಹಾಗೂ ಯಶೋಗಾಥೆಗಳನ್ನು ಒಳಗೊಂಡಂತೆ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025“ಯನ್ನು ಹಾಗೂ ಜಿಲ್ಲಾ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031”  ವರದಿಯನ್ನು ಜಿಲ್ಲಾ ಯೋಜನಾ ಸಮಿತಿ ಮೂಲಕ ತಯಾರಿಸಬೇಕಾಗಿರುವುದರಿಂದ ಜಿಲ್ಲಾ ಮಟ್ಟದ ಕೃಷಿ ಮತ್ತು ಪೂರಕ ಚಟುವಟಿಕೆಗಳು, ನೀರಾವರಿ ಕ್ಷೇತ್ರ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಆರೋಗ್ಯ, ಪೌಷ್ಠಿಕತೆ, ಕುಡಿಯುವ ನೀರು ಹಾಗೂ ನೈರ್ಮಲ್ಯ, ಸಮಾಜಿಕ ಅಭಿವೃದ‍್ಧಿ, ಮೂಲಸೌಕರ್ಯ, ಸಂಸ್ಕೃತಿ ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ನಗರಾಭಿವೃದ್ಧಿ, ಅಧಿಕಾರ ವಿಕೇಂದ್ರಿಕರಣ ಮತ್ತು ಸಾಂಸ್ಥಿಕ ಬಲವರ್ಧನೆ ಹಾಗೂ ಸಾರ್ವಜನಿಕ ಸೇವೆಗಳ  ವಲಯವಾರು ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸದಸ್ಯ ಇಲಾಖೆಗಳು ನಿಕರವಾದ ಮಾಹಿತಿಯ ವರದಿಯನ್ನು ತಯಾರಿಸಬೇಕೆಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಲಯವಾರು ಉಪಸಮಿತಿಗಳ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                

ರಾಷ್ಟ್ರೀಯ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ

 ಬೆಂಗಳೂರು ನಗರ ಜಿಲ್ಲೆ, ಜೂನ್ 21, (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ   2025ನೇ ಸಾಲಿನ  ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ  ಆನ್‍ ಲೈನ್‍  ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 ಆಸಕ್ತ ಮಕ್ಕಳು 2025ರ ಜುಲೈ 31ಕ್ಕೆ 05 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿರಬೇಕು. ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಕ್ರೀಡೆ, ಸಮಾಜ ಸೇವೆ, ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ, ಸಂಸ್ಕೃತಿ ಮತ್ತು ನೂತನ ಅವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ ಬೆಂಗಳೂರು ನಗರ ಜಿಲ್ಲೆಯ ಮಕ್ಕಳು ವೆಬ್‍ ಸೈಟ್‍ https://awards.gov.in  ನಲ್ಲಿ ಜುಲೈ 31ರೊಳಗೆ ಅರ್ಜಿ ಸಲ್ಲಿಸಬಹುದು.

 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಕೇಂದ್ರ, ಮಕ್ಕಳ ಪಾಲನಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್.ಮರೀಗೌಡ ರಸ್ತೆ, ಕಿದ್ವಾಯಿ ಆಸ್ಪತ್ರೆ ಹಿಂಭಾಗ, ಬೆಂಗಳೂರು-560 029 ಅಥವಾ ದೂರವಾಣಿ ಸಂಖ್ಯೆ : 080-29919017 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ತಿ   ಆಬಾ ಅಭಿಯಾನ ಶಿಬಿರ

ಬೆಂಗಳೂರು ನಗರ ಜಿಲ್ಲೆ, ಜೂನ್ 21, (ಕರ್ನಾಟಕ ವಾರ್ತೆ) : ಸಮಾಜ ಕಲ್ಯಾಣ ಇಲಾಖೆ ವತಿಯಿಂದ  ಬೆಂಗಳೂರು ನಗರ ಜಿಲ್ಲೆಯ ಮೀನುಕುಂಟೆ ಗ್ರಾಮ ಪಂಚಾಯಿತಿಯ  ಚನ್ನಹಳ್ಳಿ ಗ್ರಾಮ, ಸರ್ಕಾರಿ ಪ್ರಾಥಮಿಕ ಶಾಲೆ, ಚನ್ನಹಳ್ಳಿ ಇಲ್ಲಿ “Dharti Aaba Abhiyan-Awareness and Benefit Saturation Camps” ರಡಿಯಲ್ಲಿ ಜಾಗೃತಿ  ಮತ್ತು ಪ್ರಯೋಜನೆಗಳ ಕುರಿತು ಜುಲೈ 15ರವರೆಗೆ ಶಿಬಿರಗಳನ್ನು  ಆಯೋಜಿಸಲಾಗಿದೆ. ಬುಡಕಟ್ಟು ಸಮುದಾಯದವರು  ಈ ಶಿಬಿರದ ಸೌಲಭ್ಯಗಳನ್ನು ಸದುಪಯೋಗ  ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರು (ಗ್ರೇಡ್‍-1), ಸಮಾಜ ಕಲ್ಯಾಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕ, ಯಲಹಂಕ  ಬೆಂಗಳೂರು ಉತ್ತರ ತಾಲ್ಲೂಕು-560 065 ಅಥವಾ ದೂರವಾಣಿ ಸಂಖ್ಯೆ 080-28461351 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ  ತಾಲ್ಲೂಕು, ಸಮಾಜ ಕಲ್ಯಾಣ ಇಲಾಖೆಯ  ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ, ಜೂನ್ 21, (ಕರ್ನಾಟಕ ವಾರ್ತೆ) : ಸಮಾಜ ಕಲ್ಯಾಣ ಇಲಾಖೆ ವತಿಯಿಂದ   ಪರಿಶಿಷ್ಟ ಜಾತಿ ಜಾಗೂ ಪರಿಶಿಷ್ಟ  ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ   ಪ್ರವಾಸೋದ್ಯಮ ಇಲಾಖೆಯಿಂದ  ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

 ತರಬೇತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆತಿಥ್ಯ  ಕ್ಷೇತ್ರದ ಐ.ಎಚ್. ಎಂ ಮತ್ತು ಎಫ್‍.ಸಿ.ಐ  ಸಂಸ್ಥೆಗಳ ಮೂಲಕ ಬೆಂಗಳೂರು  ಹಾಗೂ ಮೈಸೂರು ಜಿಲ್ಲೆಗಳಲ್ಲಿ  ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ 20 ರಿಂದ 45 ವರ್ಷದೊಳಗಿರುವ ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರೋತ್ಸಾಹಧನದೊಂದಿಗೆ ಉಚಿತ ತರಬೇತಿ  ನೀಡಲಾಗುವುದು.

 ಆಸಕ್ತರು ತರಬೇತಿ ಪಡೆಯಲು ಅರ್ಜಿಗಳನ್ನು ಆಯಾ ಜಿಲ್ಲೆಯ ಉಪ / ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಖೆಯ ಕಛೇರಿಗಳಲ್ಲಿ ಅಥವಾ ಇಲಾಖೆಯ ವೆಬ್‍ ಸೈಟ್‍ www.karnatakatourism.org ಸೇವಾ ಸಿಂಧು ಪ್ರೋರ್ಟಲ್‍ sevasindhu.karnataka.gov.in ಹಾಗೂ ಬಾಪೂಜಿ ಸೇವಾ ಕೇಂದ್ರ bsk.karnataka.gov.in ನಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರ ಕಛೇರಿ (ಗ್ರೇಡ್‍-1) ಸಮಾಜ ಕಲ್ಯಾಣ ಇಲಾಖೆ, ಟಿ.ಎ.ಪಿ.ಸಿ.ಎಂ.ಎಸ್‍ ಬಿಲ್ಡಿಂಗ್‍, ಬಸ್ಟಾಂಡ್‍  ಹಿಂಭಾಗ, ಆನೇಕಲ್‍, ಬೆಂಗಳೂರು-562106 ಅಥವಾ ದೂರವಾಣಿ ಸಂಖ್ಯೆ : ಐ.ಎಚ್.ಎಂ : 080-22262690, ಎಫ್‍.ಸಿ.ಐ: 0821-2445388 ಗೆ ಸಂಪರ್ಕಿಸಬಹುದು ಎಂದು ಆನೇಕಲ್‍  ತಾಲ್ಲೂಕು,  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಧರ್ತಿ  ಆಬಾ ಅಭಿಯಾನ ಶಿಬಿರ

ಬೆಂಗಳೂರು ನಗರ ಜಿಲ್ಲೆ, ಜೂನ್ 21, (ಕರ್ನಾಟಕ ವಾರ್ತೆ) : ಸಮಾಜ ಕಲ್ಯಾಣ ಇಲಾಖೆ ವತಿಯಿಂದ  ಬೆಂಗಳೂರು ನಗರ ಜಿಲ್ಲೆಯ ನೆಲಗುಳಿ ಗ್ರಾಮ ಪಂಚಾಯಿತಿಯ ನಾಗನಾಯಕನಹಳ್ಳಿ ಗ್ರಾಮದಲ್ಲಿ ಜೂನ್ 19 ರಿಂದ ಜುಲೈ 10 ರವರೆಗೆ “Dharti Aaba Abhiyan-Awareness and Benefit Saturation Camps” ರಡಿಯಲ್ಲಿ   ಜಾಗೃತಿ ಮತ್ತು ಪ್ರಯೋಜನೆಗಳ ಕುರಿತು ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಸಮುದಾಯದವರು ಈ ಶಿಬಿರದ ಸೌಲಭ್ಯವನ್ನು ಸದುಪಯೋಗ  ಪಡೆದುಕೊಳ್ಳಬಹುದು.

 ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರು (ಗ್ರೇಡ್ -1) ಸಮಾಜ ಕಲ್ಯಾಣ  ಇಲಾಖೆ, ಎಸ್.ಕರಿಯಪ್ಪ ಮೈನ್ ರೋಡ್, ಬೆಂಗಳೂರು ದಕ್ಷಿಣ  ತಾಲ್ಲೂಕು, ಬನಶಂಕರಿ, ಬೆಂಗಳೂರು-560070 ಅಥವಾ ದೂರವಾಣಿ ಸಂಖ್ಯೆ : 080-26711096 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ದಕ್ಷಿಣ  ತಾಲ್ಲೂಕು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅವಧಿ ವಿಸ್ತರಣೆ 

ಬೆಂಗಳೂರು ನಗರ ಜಿಲ್ಲೆ, ಜೂನ್ 21, (ಕರ್ನಾಟಕ ವಾರ್ತೆ) : ಮೈಸೂರಿನ ಜೆ.ಎಸ್.ಎಸ್‍ ವಿಶೇಷಚೇತನರ ಪಾಲಿಟೆಕ್ನಿಕ್‍  ವತಿಯಿಂದ  2025-26ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ) ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್‍ 23 ರವರಗೆ  ವಿಸ್ತರಿಸಲಾಗಿದೆ.

ಅನುದಾನಿತ ಕೋರ್ಸುಗಳಾದ  ಆರ್ಕಿಟೆಕ್ಚರ್ ಅಸಿಸ್ಟೆಂಟ್‌ಷಿಪ್,  ಕಮರ್ಷಿಯಲ್ ಪ್ರಾಕ್ಟಿಸ್,  ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಮತ್ತು ಅನುದಾನ ರಹಿತ ಕೋರ್ಸುಗಳಾದ  ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್,  ಕಂಪ್ಯೂಟರ್ ಅಪ್ಲಿಕೇಷನ್ಸ್ (ಫಾರ್ ವಿಜ್ಯುವಲಿ ಇಂಪೇರ್ಡ್‍), ಅಪಾರೇಲ್ ಡಿಸೈನ್ & ಫ್ಯಾಬ್ರಿಕೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ & ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದು.

ಅರ್ಜಿಗಳನ್ನು  ಜೆ.ಎಸ್‍.ಎಸ್‍ ವಿಶೇಷಚೇತನರ ಪಾಲಿಟೆಕ್ನಿಕ್‍, ಜೆ.ಎಸ್‍.ಎಸ್‍ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯ, ಮೈಸೂರು -570 006 ಇಲ್ಲಿಗೆ  (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100/- ಹಾಗೂ SC/ST/C-I ವರ್ಗದವರಿಗೆ ರೂ. 50/-) ನಗದು ಅಥವಾ ಡಿಡಿ ಮೂಲಕ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು ಅಥವಾ ವೆಬ್ ಸೈಟ್ www.jsspda.org ಮೂಲಕ download ಮಾಡಿಕೊಳ್ಳಬಹುದು.

 ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: www.jsspda.org ಅಥವಾ ಮೊಬೈಲ್‍ ಸಂಖ್ಯೆ : 98446 44937 ಗೆ ಸಂಪರ್ಕಿಸಬಹುದು ಎಂದು  ಮೈಸೂರಿನ ಜೆ.ಎಸ್‍.ಎಸ್‍ ವಿಶೇಷಚೇತನರ ಪಾಲಿಟೆಕ್ನಿಕ್‍ ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್  ಕೋರ್ಸಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 21, (ಕರ್ನಾಟಕ ವಾರ್ತೆ) : ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡ 2025-26ನೇ ಸಾಲಿನ “ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್”  ಕೋರ್ಸಿಗೆ DME / DTDM / BE (Mech /Indl.Engg. & Manufacturing / Indl.& Production, Automobile Engg.) ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪಿಜಿ/ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು ಮೊ.ಸಂ: 9141629584/ 9880217473/ 8310987353 ವೆಬ್‍ಸೈಟ್ :https://gttc.karnataka.gov.in ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 21,   (ಕರ್ನಾಟಕ ವಾರ್ತೆ) : ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ ಯಿಂದ ಅನುಮೋದನೆಗೊಂಡು ವಿಟಿಯು ಗೆ ಸಂಯೋಜಿತಗೊಂಡಿರುವ “ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್” ಕೋರ್ಸಿಗೆ BE in Mechanical Engg./ Auto Mobile Engg. Automation & Robotics Engg./ Indl&Production Engg/Tool  Engineering/Mechatronics Engg. ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪಿಜಿ/ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು ಮೊ.ಸಂ: 9141629584 / 9880217473/ 8310987353 ಹಾಗೂ ವೆಬ್‍ಸೈಟ್: https://gttc.karnataka.gov.in ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ONLINE COMMON ENTRANCE EXAM (CEE) OF AGNIVEER RECRUITMENT UNDER AGNIPATH SCHEME

Bengaluru, June 21 (Karnataka Information): Online Common Entrance Exam (CEE) of Agniveer Recruitment under Agnipath Scheme as well as permanent categories is scheduled from 30 June 2025. The schedule of examination has been uploaded on https://joinindianarmy.nic.in/. Volunteer male & female candidates from all district Karnataka, Kerala and UTs of Lakshdweep and Mahe who had applied for the same are eligible for the examination for trades including Agniveer General Duty, Agniveer Technical, Agniveer Tradesman 10th pass, Agniveer Tradesman 8th pass, Agniveer General Duty Women Military Police, Soldier Technical Nursing Assistant, Havildar Education, Havildar Surveyor Auto Cartographer and Junior Commissioned Officer (Religious Teacher).

Candidates are requested visit JIA website to download their admit card well in time and correctly identify their examination centres, date and slot of examination centre and prepare accordingly. Indian Army wishes all the candidates all the very best for the examination.

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿಯ ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ

ಬೆಂಗಳೂರು, ಜೂನ್ 21 (ಕರ್ನಾಟಕ ವಾರ್ತೆ): ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ ಮತ್ತು ಶಾಶ್ವತ ವರ್ಗಗಳ ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) 2025 ರ ಜೂನ್ 30 ರಂದು ನಿಗದಿಯಾಗಿದೆ.

ಪರೀಕ್ಷೆಯ ವೇಳಾಪಟ್ಟಿಯನ್ನು ವೆಬ್‍ಸೈಟ್ https://joinindianarmy.nic.in/  ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪ ಮತ್ತು ನಗರ ಎಲ್ಲಾ ಜಿಲ್ಲೆಗಳ ಸ್ವಯಂಸೇವಕ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವವರು ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‍ಮನ್ ಗೆ  10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಅಗ್ನಿವೀರ್ ಟ್ರೇಡ್ಸ್‍ಮನ್ ಗೆ 8 ತರಗತಿಯಲ್ಲಿ ಉತ್ತೀರ್ಣರಾಗಿರುವವರು ಅರ್ಹರಾಗಿರುತ್ತಾರೆ. ಅಗ್ನಿವೀರ್ ಜನರಲ್ ಡ್ಯೂಟಿ ವುಮೆನ್ ಮಿಲಿಟರಿ ಪೆÇಲೀಸ್, ಸೋಲ್ಜರ್ ಟೆಕ್ನಿಕಲ್ ನಸಿರ್ಂಗ್ ಅಸಿಸ್ಟೆಂಟ್, ಹವಲ್ದಾರ್ ಶಿಕ್ಷಣ, ಹವಲ್ದಾರ್ ಸರ್ವೇಯರ್, ಆಟೋ ಕಾರ್ಟೋಗ್ರಾಫರ್ ಮತ್ತು ಜೂನಿಯರ್ ಕಮಿಷನರ್ ಆಫೀಸರ್ (ಧಾರ್ಮಿಕ ಶಿಕ್ಷಕ) ಸೇರಿದಂತೆ ಟ್ರೇಡ್‍ಗಳ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್‌ರವರಿಗೆ ಪ್ರಶಸ್ತಿ

ಬೆಂಗಳೂರು:
ಬೆಂಗಳೂರಿನ ಸುಮ್ಮನಹಳ್ಳಿ ಜಂಕ್ಷನ್ ಹತ್ತಿರವಿರುವ ಡಾ.ಬಾಬು ಜಗಜೀವನ್‌ರಾಮ್ ಸಂಶೋಧನಾ ಸಂಸ್ಥೆಯಲ್ಲಿ ಜೂನ್.22ರಂದು (ಇಂದು) ಭಾನುವಾರ ಮಧ್ಯಾಹ್ನ 2 ಗಂಟೆಗೆ ಡಾ. ಬಾಬು ಜಗಜೀವನ್‌ರಾಮ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಹೆಚ್.ಡಿ.ದೇವೇಗೌಡ ಅಭಿನಂದನಾ ಸಮಿತಿ, ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಸನ್ಯಾನ್ಮ ಶ್ರೀಹೆಚ್.ಡಿ.ದೇವೇಗೌಡರ ಅಭಿನಂದನಾ ಸಮಾರಂಭದಲ್ಲಿ ಶ್ರೀ.ಹೆಚ್.ಡಿ.ದೇವೇಗೌಡ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಲ್ಲಿ ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯಲ್ಲಿ ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ, ಮಾಜಿ ವಿಧಾನಪರಿಷತ್ ಸದಸ್ಯರಾದ ದೊಡ್ಡ ರಂಗೇಗೌಡ, ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ಹಲವು ಹಲವು ರಂಗಗಳಲ್ಲಿ ಸಾಧನೆ ಮಾಡಿದ 90ಕ್ಕೂ ಹೆಚ್ಚು ಸಾಧಕರನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.

ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದಕರ್ನಾಟಕ ಶಾಸ್ತ್ರೀಯ ಸಂಗೀತ 

ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಜೂನ್ 22, ಭಾನುವಾರ ಸಂಜೆ 5-30ಕ್ಕೆ “ಕರ್ನಾಟಕ ಶಾಸ್ತ್ರೀಯ ಸಂಗೀತ”.
ಗಾಯನ : ವಿದುಷಿ ಶ್ರೀಮತಿ ಶರಣ್ಯಾ ನಂದನ್,
ಪಿಟೀಲು : ಕು|| ಹೃಷಿತಾ ಕೇದಗೆ,
ಮೃದಂಗ : ವಿದ್ವಾನ್ ಶ್ರೀ ಅಪ್ರಮೇಯ.
ಸ್ಥಳ : #48, ಮೊದಲನೇ ಮಹಡಿ,’ಸುಮಧ್ವ ಧಾಮ’, 6ನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061

ಯೋಗಾಭ್ಯಾಸ ಮಾಡಿ ಆರೋಗ್ಯಕರ, ಶಾಂತಿಯುತ, ಸಮತೋಲಿತ ಜಗತ್ತನ್ನು ಸೃಷ್ಟಿಸೋಣ: ರಾಜ್ಯಪಾಲರು

ಬೆಂಗಳೂರು 21.06.2025: “ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ, ಇವು ಭೂಮಿಯ ಸುಸ್ಥಿರ ಅಭಿವೃದ್ಧಿ ಮತ್ತು ರಕ್ಷಣೆಗೆ ಅತ್ಯಗತ್ಯ. ಆದ್ದರಿಂದ, “ಒಂದು ಭೂಮಿ, ಒಂದು ಆರೋಗ್ಯ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯೋಗವನ್ನು ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯವಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.


“ಆಯುಷ್ ಇಲಾಖೆಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ  ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ” ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಯೋಗವು ನಮ್ಮನ್ನು ಸಂಯಮ, ಸಮತೋಲನ ಮತ್ತು ಪ್ರಕೃತಿಯ ಕಡೆಗೆ ಸಂವೇದನಾಶೀಲರನ್ನಾಗಿ ಮಾಡುತ್ತದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ” ಎಂದು ತಿಳಿಸಿದರು.

“ಯೋಗವು ಎಲ್ಲರನ್ನೂ ಒಗ್ಗೂಡಿಸುವ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮೂಲ ಮನೋಭಾವವನ್ನು ಹೊಂದಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಒಂದು ಉತ್ತಮ ಮಾರ್ಗವಾಗಿದೆ. ಇದು ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ಮಾನವೀಯತೆಗೆ ಭರವಸೆಯ ಕಿರಣವಾಗಿದೆ. ಇಡೀ ಜಗತ್ತು ಯೋಗದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಮತ್ತು ಅದನ್ನು ಅಳವಡಿಸಿಕೊಂಡಿದೆ” ಎಂದು ಹೇಳಿದರು.

“ಜೂನ್ 21 ರಂದು, ಇಡೀ ಜಗತ್ತು ಅತ್ಯಂತ ದೀರ್ಘವಾದ ದಿನದ ಸೂರ್ಯೋದಯವನ್ನು ಸ್ವಾಗತಿಸುತ್ತಿರುವಾಗ, ನಾವು ಯೋಗದ ಮೂಲಕ ನಮ್ಮೊಳಗಿನ ಸೂರ್ಯನನ್ನು ಜಾಗೃತಗೊಳಿಸುತ್ತೇವೆ ಮತ್ತು ಒತ್ತಡದಿಂದ ಸಮತೋಲನಕ್ಕೆ, ಆತಂಕದಿಂದ ಮನಸ್ಸಿನ ಸ್ಥಿರತೆಗೆ ಮತ್ತು ಅಸಮತೋಲಿತ ಜೀವನದಿಂದ ಪರಿಪೂರ್ಣ ಆರೋಗ್ಯಕ್ಕೆ ನಮ್ಮನ್ನು ಕರೆದೊಯ್ಯುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ. 11ನೇ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ “ಒಂದು ಭೂಮಿಗೆ ಯೋಗ, ಒಂದು ಆರೋಗ್ಯ”. “ಒಂದು ಭೂಮಿ, ಒಂದು ಆರೋಗ್ಯ” ಎಂಬ ಕಲ್ಪನೆಯು ಎಲ್ಲಾ ಜೀವಿಗಳು, ಪರಿಸರ ಮತ್ತು ಪ್ರಕೃತಿ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ಭಾವನೆಯನ್ನು ಅರಿತುಕೊಳ್ಳಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಯೋಗವಾಗಿದೆ ” ಎಂದು ತಿಳಿಸಿದರು.

ಇಂದು ಜಗತ್ತು ಹವಾಮಾನ ಬದಲಾವಣೆ, ಮಾನಸಿಕ ಒತ್ತಡ, ಜೀವನಶೈಲಿ ರೋಗಗಳು ಮತ್ತು ಪರಿಸರ ಅಸಮತೋಲನದಿಂದ ಬಳಲುತ್ತಿರುವಾಗ, ಯೋಗವು ಒಬ್ಬರ ಆರೋಗ್ಯವನ್ನು ಬಲಪಡಿಸುವುದಲ್ಲದೆ, ಭೂಮಿಯೊಂದಿಗಿನ ನಮ್ಮ ಸಂಪರ್ಕವನ್ನು ಗಾಢವಾಗಿಸುತ್ತದೆ. “ಒಂದು ಆರೋಗ್ಯ” ಎಂದರೆ ಮಾನವರ ಯೋಗಕ್ಷೇಮ ಮಾತ್ರವಲ್ಲದೆ ಎಲ್ಲಾ ಪ್ರಾಣಿ, ಸಸ್ಯ ಮತ್ತು ಪರಿಸರದ ರಕ್ಷಣೆಯೂ ಆಗಿದೆ. ನಾವೆಲ್ಲರೂ ಒಟ್ಟಾಗಿ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ ಮತ್ತು ಆರೋಗ್ಯಕರ, ಶಾಂತಿಯುತ ಮತ್ತು ಸಮತೋಲಿತ ಜಗತ್ತನ್ನು ಸೃಷ್ಟಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ನ ಸಭಾಪತಿ ಶ್ರೀ ಬಸವರಾಜ್ ಎಸ್ ಹೊರಟ್ಟಿ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಟರಾದ ಅನಿರುದ್, ಕಿಶನ್, ನಟಿ ಸಾನಿಯಾ ಅಯ್ಯರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳು ದೇವರ ಸಮಾನ, ಅವರಲ್ಲಿ ಜಾತಿ, ಮತ, ಪಂಥ ಭೇದವಿರುವುದಿಲ್ಲ- ಬಿ.ವೈ.ವಿಜಯೇಂದ್ರ

ಬೆಂಗಳೂರು :ಜಯನಗರದ ಶ್ರೀ ಚಂದ್ರಗುಪ್ತ ಮೌರ್ಯ(ಶಾಲಿನಿ ಆಟದ)ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ 13ನೇ ವರ್ಷದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿಯರಿಗೆ ಉಚಿತವಾಗಿ 2ಲಕ್ಷ ನೋಟ್ ಪುಸ್ತಕಗಳ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಅನಾಥ ಆಶ್ರಮದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ.

ಶಾಸಕರು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರರವರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು, ರಕ್ಷಾ ಫೌಂಡೇಷನ್ ಸಂಸ್ಥಾಪಕರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ಶಾಸಕರಾದ ಉದಯ್ ಗರುಡಾಚಾರ್ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟ ವಸಿಷ್ಟ ಸಿಂಹರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನೋಟ್ ಪುಸ್ತಕ, ಲ್ಯಾಪ್ ಟಾಪ್ ಗಳನ್ನು ವಿತರಿಸಿದರು.

ಬಿ.ವೈ.ವಿಜಯೇಂದ್ರರವರು ಮಾತನಾಡಿ ರಕ್ಷಾ ಫೌಂಡೇಷನ್ ಸ್ಥಾಪಕರಾದ ಶಾಸಕರಾದ ರಾಮಮೂರ್ತಿರವರ ನೇತೃತ್ವದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹ ಸಹಕಾರ ನೀಡುತ್ತಿದ್ದಾರೆ, 11ನೇ ವಿಶ್ವ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಇಂದು. ಭಾರತದ ಯೋಗ ವಿಶ್ವಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂತು. ಮಕ್ಕಳು ದೇವರ ಸಮಾನ, ಅವರ ಮನಸ್ಸಿನಲ್ಲಿ ಯಾವ ಕೆಟ್ಟ ಚಿಂತನೆಯು ಇರುವುದಿಲ್ಲ, ಜಾತಿ ಮತ ಪಂಥ ಭೇದವಿರುವುದಿಲ್ಲ.

ಸಾಧನೆ ಇಲ್ಲದೇ ಹೋದರೆ ಸಾವಿಗೆ ಅರ್ಥವಿಲ್ಲ, ಹುಟ್ಟಿದ ಮೇಲೆ ಸಾಧನೆ ಮಾಡಿ ನಿಲ್ಲಬೇಕು ಎಂದು ಹೇಳಿದರು. ಆರ್.ಅಶೋಕ್ ರವರು ಮಾತನಾಡಿ ಪ್ರತಿ ವರ್ಷ ಅಪರೂಪದ ಕಾರ್ಯಕ್ರಮವನ್ನು ರಕ್ಷಾ ಫೌಂಡೇಷನ್ ಮಾಡುತ್ತಿದೆ, ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದಾರೆ. ಗುರುಗಳು ಪಾಠ ಮಾಡುತ್ತಾರೆ, ತಂದೆ, ತಾಯಿ ಹೇಳಿಕೊಡುತ್ತಾರೆ ಅದರೆ ನಾವೆ ಪರೀಕ್ಷೆ ಬರೆಯಬೇಕು ಯಾರು ನಿಮಗೆ ಸಹಕಾರ ನೀಡುವುದಿಲ್ಲ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದರೆ ಜೀವನದಲ್ಲಿ ಉತ್ತಮ ಅಂಕಗಳಿಸಿ, ಸಾಧನೆ ಮಾಡಬಹುದು ಎಂದು ಹೇಳಿದರು

ಶಾಸಕರಾದ ಸಿ.ಕೆ.ರಾಮಮೂರ್ತಿರವರು ಮಾತನಾಡಿ ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ, ಮಾನ್ಯತೆ ಸಿಗುತ್ತದೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ವಿದ್ಯಾವಂತರಾಗಬೇಕು, ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ. ಶ್ರೀಮಂತ ಕುಟುಂಬದ ಮಕ್ಕಳಿಗೆ ಎಲ್ಲವು ಸಿಗುತ್ತದೆ ಅದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂದು ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ ಮತ್ತು ಉನ್ನತ ವ್ಯಾಸಂಗದ ಅನುಕೂಲಕ್ಕೆ ಲ್ಯಾಪ್ ಟಾಪ್ , ವಿದ್ಯಾರ್ಥಿ ವೇತನ ನೀಡುತ್ತಾ ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.

ಬಿಟ್ಸ್ ಗುರು ತಂಡ ಸಂಗೀತ ಕಾರ್ಯಕ್ರಮ ಮತ್ತು ಪುಟ್ಟರಾಜುರವರ ಜಾದು ಪ್ರದರ್ಶನ ಏರ್ಪಡಿಸಲಾಗಿತ್ತು. ಜಯದೇವ ಆಸ್ಪತ್ರೆಗೆ 2ಲಕ್ಷ ರೂಪಾಯಿ ದೇಣಿಗೆಯನ್ನು ಜಯದೇವ ಆಸ್ಪತ್ರೆ ನಿರ್ದೇಶಕರಾದ ರವೀಂದ್ರನಾಥ್ ರವರಿಗೆ ನೀಡಲಾಯಿತು. ಮಾಜಿ ಪಾಲಿಕೆ ಸದಸ್ಯಕೆ.ಉಮೇಶ್ ಶೆಟ್ಟಿ, ಸೋಮಶೇಖರ್, ಗೋವಿಂದನಾಯ್ಡು,ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ, ಚಂದ್ರಶೇಖರ ರಾಜು, ಬಿಜೆಪಿ ಮುಖಂಡ ತಮ್ಮೇಶ್ ಗೌಡ, ಲಕ್ಷಿಕಾಂತ್, ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ನರೇಶ್ ರವರು ಭಾಗವಹಿಸಿದ್ದರು.

VKNEWS DIGITAL :
ಪತ್ರಿಕಾ ದಿನಾಚರಣೆ – ಒಂದು ವಿಸ್ತೃತ ಚರ್ಚೆ – ದೃಶ್ಯಾವಳಿ ವೀಕ್ಷಿಸಲು ಕ್ಲಿಕ್ ಮಾಡಿ