Home Blog Page 73

ಯೋಗ, ಸಂಗೀತ, ಧ್ಯಾನದ ಮೂಲಕ ಆತ್ಮಸಾಕ್ಷಾತ್ಕಾರ

ಬೆಂಗಳೂರು, ಜೂ.21: ಅಂತರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಲೈಫ್‌ ಎಟರ್ನಲ್‌ ಟ್ರಸ್ಟ್‌ ವತಿಯಿಂದ ಸಹಜ ಯೋಗ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಆಯುಷ್ ರಾಜ್ಯ ಸಚಿವರಾದ ಪ್ರತಾಪ ರಾವ್ ಜಾಧವ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು. ಯೋಗವು ಕೇವಲ ವ್ಯಾಯಾಮವಲ್ಲ, ಇದು ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ದಾರಿ. ಇದು ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ವಸುದೈವ ಕುಟುಂಬಕಂ ತತ್ವವನ್ನು ಸಾರಿ ಹೇಳುತ್ತದೆ. ಭಾರತವು ಜಾಗತಿಕವಾಗಿ  ಅಭಿವೃದ್ಧಿಯನ್ನು ಕಾಣುತ್ತಿದ್ದು, ಅದರಲ್ಲಿ ಯೋಗ ಕೂಡ ಪ್ರಮುಖವಾಗಿ ಖ್ಯಾತಿಯನ್ನು ಪಡೆದಿದೆ ಎಂದರು.

ಲೈಫ್ ಎಟರ್ನಲ್ ಟ್ರಸ್ಟ್‌ನ ಚೇರ್‌ಮೆನ್ ಡಾ. ಮನೋಜ್ ಕುಮಾರ್ ‌ಮಾತನಾಡಿ, ಸಹಜ ಯೋಗವು ಆತ್ಮ ಸಾಕ್ಷಾತ್ಕಾರಕ್ಕಾಗಿ ದೈವಿಕ ಮಾರ್ಗವನ್ನು ಸೂಚಿಸುತ್ತದೆ. ಇಂದಿನ ಕಾರ್ಯಕ್ರಮವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಆಂತರಿಕ ಪರಿವರ್ತನೆಗೆ ಮಾರ್ಗದರ್ಶಿಯಾಗಿತ್ತು ಎಂದರು.

ವಿಶ್ವ ಸಂಗೀತ ದಿನದ ಪ್ರಯುಕ್ತ 20ಕ್ಕೂ ಹೆಚ್ಚು ದೇಶಗಳ 200 ಕಲಾವಿದರು 100ಕ್ಕೂ ಹೆಚ್ಚು ಸಂಗೀತ ವಾದ್ಯಗಳೊಂದಿಗೆ ಸಂಗೀತವನ್ನು ಪ್ರಸ್ತುತಪಡಿಸಿದರು. ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಂಗೀತಗಾರರು, ಗಾಯಕರು ಮತ್ತು ಭರತನಾಟ್ಯ ನೃತ್ಯಗಾರರನ್ನು ಒಳಗೊಂಡ “ವಂದೇ ಮಾತರಂ” ಸಾಂಸ್ಕೃತಿಕ ಪ್ರದರ್ಶನವನ್ನು ನೀಡಿದರು. ಅದಾಗ್ಯೂ ಯೋಗ, ಸಂಗೀತ ಮತ್ತು ‍ಧ್ಯಾನ ಸಮ್ಮಿಲನವುಳ್ಳ ಅದ್ಭುತ ಪ್ರದರ್ಶನ ನೀಡಿದ ಸಹಜ ಯೋಗ ಹಾಗೂ ಸಮರ್ಥನಂ ಟ್ರಸ್ಟ್‌ ಫಾರ್‌ ದಿ ಡಿಸೇಬಲ್ಡ್‌ ಸಂಸ್ಥೆಗೆ  ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್‌ ನಿಂದ ಎಕ್ಸೆಲೆನ್ಸ್‌ ಸರ್ಟಿಫಿಕೇಟ್‌ ನೀಡಲಾಯಿತು.    

ಅಂತರಾಷ್ಟ್ರೀಯ ಖ್ಯಾತಿಯ ಧನ್ವಂತರಿ ಯೋಗ ತಂಡದ ನೇತೃತ್ವದಲ್ಲಿ ಯೋಗ ಕಾರ್ಯಗಾರವು ನಡೆಯಿತು. ಈ ಸಂದರ್ಭದಲ್ಲಿ ನಟಿ ನಮ್ರತಾ ಗೌಡ,  ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಿಇಒ (ಲಂಡನ್ ಯುಕೆ) ಸಂತೋಷ್ ಶುಕ್ಲ, ಡಾ, ರಾಜೀವ್‌, ಕಲ್ಪನಾ, ಸುದರ್ಶನ್‌ ಶರ್ಮಾ, ನಿಖಿಲ್‌ ಗೌಡ, ಉಷಾ ಅಯ್ಯರ್‌, ಪುನೀತ್‌ ಶ್ರೀಧರ್‌ , ಆರ್‌. ಚೇತನ್‌, ಡಾ. ಮಹಾಂತೇಶ್‌, ಡಾ. ಮಧು ಟೇಮ್ಲೆ, ತಿಥಿ ಬಳ್ಳಾ ಸೇರಿದಂತೆ ಇನ್ನೂ ಹಲವು ಗಣ್ಯರು ಮತ್ತು ಸಹಜ ಯೋಗ ಲೈಫ್ ಎಟರ್ನಲ್ ಟ್ರಸ್ಟ್‌ನ ಹಲವಾರು ಟ್ರಸ್ಟಿಗಳು ಪಾಲ್ಗೊಂಡಿದ್ದರು. 

ಡಾ.C.N. ಅಶ್ವಥ್ ನಾರಾಯಣ್ – ರಾಜ್ಯಪಾಲ ಗೆಹ್ಲೋಟ್ ಭೇಟಿ

ಮಾಜಿ ಡಿಸಿಎಂ ಡಾ ಅಶ್ವಥ್ ನಾರಾಯಣ್ ಸಿ.ಎನ್.  ಅವರು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.

*ಕಾವ್ಯವನ್ನೇ ಜೀವನವಾಗಿಸಿಕೊಂಡವರು ಬೇಂದ್ರೆ*

ಬೆಂಗಳೂರು: ಕಾವ್ಯವನ್ನೇ ಜೀವನದ ಉದ್ದೇಶವಾಗಿಸಿಕೊಂಡು, ಕಾವ್ಯವನ್ನೇ ಜೀವಿಸಿದ ಕವಿ ದ.ರಾ. ಬೇಂದ್ರೆ ಎಂದು ಕವಿ, ಕಾದಂಬರಿಕಾರ ಡಾ. ಜಿ. ಬಿ. ಹರೀಶ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ವತಿಯಿಂದ ಶೇಷಾದ್ರಿಪುರಂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನಾಕುತಂತಿ ಷಷ್ಟಿಪೂರ್ತಿ ಸರಣಿಯ ‘ನಾದ-5’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತು- ಕೃತಿಯ ಕುರಿತು 21ನೇ ಶತಮಾನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಬೇಂದ್ರೆಯವರ ಕವನ ‘ಮಾತು ಕೃತಿ’ ಇದೇ ಕುರಿತಾಗಿದೆ. ಕೃತಿ ಎಂದಕೂಡಲೆ ಕಾರ್ಯ, ಕೆಲಸ ಎಂಬರ್ಥದಲ್ಲಿ ಮಾತ್ರ ನೋಡುವವರಿದ್ದಾರೆ. ಆದರೆ ಕಾವ್ಯವನ್ನು ಬರೆಯುವುದನ್ನೇ ಕೃತಿ ಎಂದೂ ಹೇಳಲಾಗುತ್ತದೆ. ಕೃತಿ (ಆ್ಯಕ್ಟ್) ಎಂದರೆ ಮಾರ್ಕ್ಸ್‌ವಾದಿಗಳು, ಸಮಾಜವಾದಿಗಳು ಬರೆದ ಆ್ಯಕ್ಟಿವಿಸಂನ ಬರೆಹಗಳಲ್ಲ. ಮಾತು ಕೃತಿಯಾಗಬೇಕು ಎಂದರೆ ಆ ಮಾತಿನಲ್ಲಿ ವೇದದ (ಶೃತಿಯ) ಸಾರವಿರಬೇಕು. ಆ್ಯಕ್ಟಿವಿಸಂ ಹಾಗೂ ಆ್ಯಕ್ಟ್‌ ನಡುವೆ ಅಗಾಧ ವ್ಯತ್ಯಾಸವಿದೆ ಎಂದರು.
ಮಾನವನು‌ ದೇವನಾಗದೆ ಬೇರೆ ಮಾರ್ಗವಿಲ್ಲ ಎಂದು ಬೇಂದ್ರೆ ಅನೇಕ ಕವನಗಳ ಮೂಲಕ‌ ಹೇಳುತ್ತಾರೆ. ಮಂಗನಿಂದ ಮಾನವ ಎನ್ನುವುದು ಹೇಗೆ ನಿಜವೋ, ಅರವಿಂದರು ಹೇಳಿದಂತೆ ಮಾನವನಿಂದ ದೇವನಾಗುವುದೂ ಅಷ್ಟೇ ಸತ್ಯ. ಆದರೆ ಮಾನವನು ದೇವಮಾರ್ಗದಲ್ಲಿ ಹೋಗಲು ಅಡ್ಡಿಯಾಗಿ ಲಂಕೇಶ್, ತೇಜಸ್ವಿ, ಬರಗೂರು ರಾಮಚಂದ್ರಪ್ಪ ಅವರಂಥವರಿದ್ದಾರೆ. ಹಾಗಾಗಿ ಕಾವ್ಯದ ದೃಷ್ಟಿಯಿಂದ ಇವರೆಲ್ಲರನ್ನೂ ಅಸುರರು ಎನ್ನಬಹುದು. ಆಧುನಿಕ, ಆಧುನಿಕೋತ್ತರ ಎನ್ನುತ್ತ ಅಸುರತನವನ್ನೇ ಮೆರೆಸುವ ಕೆಲಸವೇ ಕನ್ನಡದಲ್ಲಿ ಆಗುತ್ತಿದೆ ಎಂದು ವಿಷಾದಿಸಿದರು.
ಇಂದಿನ ದಿನಗಳಲ್ಲಿ ಕಾವ್ಯವನ್ನು ಸಂಜೆ ಉದ್ಯೋಗ ಮಾಡಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಮನೆಗೆ ಬಂದು‌ಚಹಾ ಕುಡಿದು ಕಾವ್ಯ ಬರೆಯುವವರಿದ್ದಾರೆ. ಆದರೆ ಕಾವ್ಯವನ್ನೇ ಜೀವನ ಮಾಡಿಕೊಂಡವರು ಕಡಿಮೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ರಮ್ಯಾ ವಸಿಷ್ಟ ಅವರ ಮಂದ್ರ ಕಲ್ಚರಲ್ ಫೌಂಡೇಷನ್‌ ವತಿಯಿಂದ ಬೇಂದ್ರೆ ಗಾಯನ ನಡೆಯಿತು. ಸಂಜೀವ್ ಅಗಸ್ತ್ಯ, ಮಂಜುನಾಥ್, ಸತೀಶ್ ಈ ಸಂಚಿಕೆಯ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಅಭಾಸಾಪ ಪ್ರಾಂತ ಸಹ ಖಜಾಂಚಿ ಭ.ರಾ. ವಿಜಯಕುಮಾರ್ ಉಪಸ್ಥಿತರಿದ್ದರು.

ಪರೀಕ್ಷಾ ಫಲಿತಾಂಶದ ಜೊತೆ ಸಾಮಾಜಿಕ ಜೀವನದ ಫಲಿತಾಂಶವೂ ಮುಖ್ಯವಾಗಲಿ: ಕೆ.ವಿ.ಪ್ರಭಾಕರ್

ಮಲೆಮಹದೇಶ್ವರ ಬೆಟ್ಟ / ಬೆಂಗಳೂರು ಜೂನ್ 21 (ಕರ್ನಾಟಕ ವಾರ್ತೆ):

ಕಲಿಯುವ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನದ ದಾಹ ಮತ್ತು ಕಲಿಕೆಯ ಹಂಬಲ ಜ್ವರದಂತೆ ಕಾಡಬೇಕು. ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ. ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರೂ ಬೆರೆತ ಮಿಶ್ರಣ. ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲಾ ಮಕ್ಕಳಿಗೂ ಎಲ್ಲಾ ಪೋಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ತಿಳಿಸಿದರು.

ಇವತ್ತು ಶಿಕ್ಷಣ ವ್ಯವಸ್ಥೆ ಹೇಗಾಗಿದೆ, ಎಷ್ಟು ದುಬಾರಿ ಆಗಿದೆ ಎಂದರೆ, ಪೋಷಕರು ಸದಾ ಮಕ್ಕಳ ಶಿಕ್ಷಣದ ಬಗ್ಗೆಯೇ ಯೋಚಿಸುವಂತಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಪೋಷಕರು ತಮ್ಮ ಅಗತ್ಯ ಮತ್ತು ಅನುಕೂಲಗಳ ಜೊತೆ ರಾಜಿ ಮಾಡಿಕೊಳ್ಳುತ್ತಾರೆ.ಪೋಷಕರ ಈ ತಪಸ್ಸಿಗೆ ಸಾರ್ಥಕತೆ ಬರುವುದು ಅವರ ಮಕ್ಕಳು ಸಾಧನೆ ಮಾಡಿದಾಗ, ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಕಣ್ಣಲ್ಲಿ ಕಾಣುವ ಪೋಷಕರಿಗೆ ಇದಕ್ಕಿಂತ ದೊಡ್ಡ ಸಮಾಧಾನ ಬೇರೆ ಇರುವುದಿಲ್ಲ. ಜೊತೆಗೆ ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ. ಆರ್ಥಿಕ ಹೊರೆ ಕಡಿಮೆ ಇದ್ದಾಗ ಸಹಜವಾಗಿ ಪೋಷಕರ ಆರೋಗ್ಯ ಮತ್ತು ಮನೆಯ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದಾಟಿದ ನಿಮ್ಮಗಳ ಮೇಲೆ ಪೋಷಕರನ್ನು ಖುಷಿಯಾಗಿಡುವ ಜವಾಬ್ದಾರಿ ಇರುತ್ತದೆ. ನಿಮ್ಮ ಪರಿಶ್ರಮ ಮತ್ತು ಜ್ಞಾನದಾಹ ಹಾಗೂ ಕಲಿಕೆಯ ಹಸಿವು ಹೆಚ್ಚಾಗಬೇಕು. ಈ ದಾಹ ಮತ್ತು ಹಸಿವು ನಿಮಗೆ ಜ್ವರದಂತೆ ಕಾಡಬೇಕು.

ಇಲ್ಲಿ ಪ್ರತಿಭಾ ಸ್ವೀಕಾರಕ್ಕೆ ಬಂದಿರುವ ಮಕ್ಕಳ ಜೊತೆ ಎರಡು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಒಂದು, ನಮ್ಮ ಎಲ್ಲಾ ಸಾಧನೆಗಳಿಗೂ ನಾವು ಬದುಕುತ್ತಿರುವ ಸಮಾಜದ ಕೊಡುಗೆ ಇರುತ್ತದೆ.  ಸಮಾಜ ಎಂದರೆ ಶರೀರ ಇದ್ದ ಹಾಗೆ. ನಾವು ಈ ಶರೀರದೊಳಗೆ ಬದುಕುತ್ತಿದ್ದೇವೆ. ನಾವು ಇರುವ ಶರೀರವನ್ನು ಕಟ್ಟುಮಸ್ತಾಗಿ, ಆರೋಗ್ಯಕರವಾಗಿ, ಆನಂದಮಯವಾಗಿ ಇಟ್ಟುಕೊಳ್ಳುವುದೇ ನಮ್ಮ ಪ್ರತಿಭೆಗೆ, ನಮ್ಮ ಸಾಧನೆಗೆ ಸಿಗುವ ನಿಜವಾದ ಪುರಸ್ಕಾರ ಎಂದು ಭಾವಿಸುತ್ತೇನೆ.

ಎರಡು, ಇಂದು ಸಮಾಜದಲ್ಲಿ ಭ್ರಷ್ಟಾಚಾರ ಇರುವುದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ದುಬಾರಿ ಆಗಿರುವುದೇ ಕಾರಣ ಆಗಿದೆ. ಮಕ್ಕಳ ಓದಿನ ಖರ್ಚು, ಹಿರಿಯರ ಆಸ್ಪತ್ರೆ ಖರ್ಚು ನಮ್ಮ ನಿದ್ದೆಗೆಡಿಸುತ್ತದೆ. ಸಮಾಜದಲ್ಲಿ ಇದು ಬದಲಾಗಬೇಕು. ಈ ಬದಲಾವಣೆಗೆ ಪೂರಕವಾಗಿ ನೀವುಗಳು ವಿದ್ಯಾರ್ಥಿ ಜೀವನದಿಂದಲೇ ಯೋಚಿಸಬೇಕು. ನಾವು ಬದುಕುತ್ತಿರುವ ಸಮಾಜವೆಂಬ ಈ ಶರೀರ ಇನ್ನಷ್ಟು ಆನಂದವಾಗಿರಲು, ಇನ್ನಷ್ಟು ಆರೋಗ್ಯಕರವಾಗಿರಲು ನಾವೇನು ಮಾಡಬೇಕು ಎನ್ನುವ ದಿಕ್ಕಿನಲ್ಲಿ ಸದಾ ಚಿಂತನಾಶೀಲರಾಗಿರಬೇಕು. ಈ ಚಿಂತನಶೀಲತೆ ನಮ್ಮ ಜ್ಞಾನ ದಾಹ ಮತ್ತು ವಿವೇಕದ ಹಸಿವನ್ನು ಹೆಚ್ಚಿಸುತ್ತದೆ.

ಈ ಎರಡು ಸಂಗತಿಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳುವುಕ್ಕಾಗಿ ಮತ್ತು ಪೋಷಕರನ್ನು ವೃದ್ದಾಶ್ರಮಗಳಿಗೆ ಕಳುಹಿಸದಂತೆ ನಾವು ಜವಾಬ್ದಾರರಾಗಬೇಕು ಎನ್ನುವ ನನ್ನ ಕೋರಿಕೆಗಳನ್ನು ನಿಮ್ಮ ಮುಂದೆ ಇಡಲು ನಾನು ಇಲ್ಲಿಗೆ ಬಂದಿದ್ದೇನೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸತತ ಐದನೇ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕಾಗಿ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳನ್ನೂ ನಾನು ಅಭಿನಂದಿಸುತ್ತೇನೆ ಎಂದರು.

ಜುಲೈ 1 ಕ್ಕೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ವೃತ್ತಿ ಮತ್ತು ಬದುಕಿನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಜುಲೈ 1 ಕ್ಕೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನ ಮತ್ತು ತಾಲ್ಲೂಕು ಪತ್ರಕರ್ತರ ಭವನದ ನಿರ್ಮಾಣಕ್ಕೂ ಸರ್ಕಾರದ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ಕಾಲೇಜು ಪ್ರಾಂಶುಪಾಲರ ನೇಮಕಾತಿ ಪ್ರಕಟ

ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರ ನೇಮಕಾತಿ ಪ್ರಕಟ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ನಿಯಮಗಳಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಜೂನ್ 18 ರಂದು ಕಾಲೇಜು ಶಿಕ್ಷಣ ಇಲಾಖೆಯ ವೆಬ್‍ಸೈಟ್ https://dce.karnataka.gov.in ನಲ್ಲಿ ಪ್ರಕಟಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ನಿಯಮಗಳಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿತ್ತು.

ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳು ವಿದ್ಯಾರ್ಹತೆ, ಮೀಸಲಾತಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ದಾಖಲೆಗಳನ್ನು ಪ್ರಾಂಶುಪಾಲರ ನೇಮಕಾತಿ ವಿಶೇಷ ನಿಯಮಗಳು, 2020ರ ನಿಯಮ 3(1)ರಲ್ಲಿ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯನ್ವಯ ಪರಿಶೀಲಿಸಿ, ಶೈಕ್ಷಣಿಕವಾಗಿ ಅರ್ಹರಾಗಿರುವ ಹಾಗೂ ಅನರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್ https://dce.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.

ಸಂಬಂಧಪಟ್ಟ ಅಭ್ಯರ್ಥಿಗಳು ಸದರಿ ಪಟ್ಟಿಗಳಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಇ-ಮೇಲ್ ವಿಳಾಸ  dceprincipals@gmail.com  ಮೂಲಕ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಸರ್ಕಾರವು ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮೂಲಕ ನಡೆಸಲಿರುವ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟ್ರ ಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯ ವೇತನ ಸಂಶೋಧನ ಸಹಾಯಕರ (ಜೆಆರ್‍ಎಫ್) ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ನೀಡಲು ನಿರ್ಧರಿಸಲಾಗಿದೆ.

ಆಸಕ್ತರು 2025 ನೇ ಜೂನ್ 30 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ 0821-2515944 ಕ್ಕೆ ಸಂಪರ್ಕಿಸಬಹುದೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ Prof.  ನವೀನ್‍ಕುಮಾರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KPSC : ಮೋಟಾರು ವಾಹನ ನಿರೀಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯ

ಕೆ.ಪಿ.ಎಸ್.ಸಿ : ಮೋಟಾರು ವಾಹನ ನಿರೀಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯ
ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು-06 ಹೈದ್ರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಜೂನ್ 25 ರಂದು ನಡೆಯಲಿರುವ ಕನ್ನಡ ಭಾಶಾ ಪರೀಕ್ಷೆ ಮತ್ತು ಜೂನ್ 26 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಆಯೋಗದ ವೆಬ್‍ಸೈಟ್  http://kpsc.kar.nic.in ನಲ್ಲಿ ಜೂನ್ 20 ರಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ವಿಶಾಲ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Online Common Entrance Exam Of Agniveer Recruitment Under Agnipath Scheme

Online Common Entrance Exam (CEE) of Agniveer Recruitment under Agnipath Scheme as well as permanent categories is scheduled from 30 June 2025. The schedule of examination has been uploaded on https://joinindianarmy.nic.in/. Volunteer male & female candidates from all district Karnataka, Kerala and UTs of Lakshdweep and Mahe who had applied for the same are eligible for the examination for trades including Agniveer General Duty, Agniveer Technical, Agniveer Tradesman 10th pass, Agniveer Tradesman 8th pass, Agniveer General Duty Women Military Police, Soldier Technical Nursing Assistant, Havildar Education, Havildar Surveyor Auto Cartographer and Junior Commissioned Officer (Religious Teacher).

Candidates are requested visit JIA website to download their admit card well in time and correctly identify their examination centres, date and slot of examination centre and prepare accordingly. Indian Army wishes all the candidates all the very best for the examination.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆತಿಥ್ಯ ಕ್ಷೇತ್ರದ ಐ.ಎಚ್.ಎಂ ಮತ್ತು ಎಫ್.ಸಿ.ಐ ಸಂಸ್ಥೆಗಳ ಮೂಲಕ ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ  ಇಲಾಖೆಯಿಂದ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿ ಪಡೆಯಲಿಚ್ಚಿಸುವವರು ಕನಿಷ್ಠ 20 ರಿಂದ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರತ್ಸಾಹಧನದೊಂದಿಗೆ ಉಚಿತ ತರಬೇತಿ ನೀಡಲಾಗುವುದು. ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಆಸಕ್ತರು ತರಬೇತಿ ಅರ್ಜಿಗಳನ್ನು ಆಯಾ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆಯ ಕಛೇರಿಗಳಲ್ಲಿ ಅಥವಾ ಇಲಾಖೆಯ ವೆಬ್ ಸೈಟ್:  www.karnatakatourism.org  ಅಥವಾ ಸೇವಾ ಸಿಂಧು portal ಮೂಲಕ https://sevasindhu.karnataka.gov.in   ಹಾಗೂ ಬಾಪೂಜಿ ಸೇವಾ ಕೇಂದ್ರ ಜಾಲತಾಣ www.bsk.karnataka.gov.in  ಮೂಲಕವೂ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಐ.ಎಚ್.ಎಂ. ದೂರವಾಣಿ ಸಂಖ್ಯೆ: 080-22262690 ಹಾಗೂ ಎಫ್.ಸಿ.ಐ. ದೂರವಾಣಿ ಸಂಖ್ಯೆ: 0821-2445388 ಗೆ ಅಥವಾ ಜಿಲ್ಲಾ ಉಪ/ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಆನೇಕಲ್ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Let’s Embrace Yoga to Build a Healthy, Peaceful and Balanced World – Gehlot

The practice of yoga guides us towards non-violence, compassion, and peace-values that are essential for sustainable development and the preservation of our planet. Embracing yoga to realize the vision of ‘One Earth, One Health’ is the need of the hour,” said Thaawarchand Gehlot, Hon’ble Governor of Karnataka.

He was addressing a large gathering at the 11th International Yoga Day 2025 celebration organized by the Department of AYUSH in front of the Vidhana Soudha, Bengaluru.


Calling yoga an invaluable gift of India’s ancient tradition, the Governor said, Yoga is a bridge between body and soul, thought and action, discipline and fulfillment. It fosters self-restraint, balance, and sensitivity towards nature. Rooted in India’s cultural ethos, yoga has served humanity’s health and well-being for millennia.

Highlighting yoga’s unifying spirit, the Governor remarked, “Yoga harmonizes the body, mind, and emotions. It is a timeless contribution by our sages and seers and stands today as a beacon of hope for global well-being. The world has acknowledged and embraced its transformative power.”

As the world greets the sunrise on the longest day of the year, June 21, we awaken the inner light within us through yoga. It helps us transition from stress to balance, anxiety to peace, and disorder to holistic health, he added.

The theme for this year’s International Yoga Day, “Yoga for One Earth, One Health,” emphasizes the interconnectedness of all life forms and the environment. “Yoga is the most effective and simplest path to realize this interconnectedness,” said the Governor.

Pointing to current global challenges such as climate change, mental stress, lifestyle diseases, and ecological imbalance, the Governor said that yoga not only strengthens individual health but also deepens our relationship with nature. “One Health” represents the integrated well-being of humans, animals, plants, and the planet.

Concluding his address, the Governor urged citizens: Let us incorporate yoga into our daily lives and collectively strive to build a healthier, more peaceful, and balanced world.

The event was graced by several dignitaries, including Legislative Council Chairman Shri Basavaraj S. Horatti, Health Minister Shri Dinesh Gundu Rao, actors Anirudh and Kishan, actress Saniya Iyer, MLC T.A. Saravana, and others.