Home Blog Page 72

ಬಂಜಾರ ಕಲೆ, ಸಾಹಿತ್ಯ -ಸಂಸ್ಕೃತಿ ಹಾಗೂ ಶಿಕ್ಷಣ ಜಾಗೃತಿ ಅಭಿಯಾನ

ʻʻಬಂಜಾರ ಅಕಾಡೆಮಿ ನಡೆ ತಾಂಡಗಳ ಕಡೆ 2025-26ʼʼ ಬಂಜಾರ ಕಲೆ, ಸಾಹಿತ್ಯ -ಸಂಸ್ಕೃತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನವನ್ನು ಲೋಕನಾಯ್ಕನ ತಾಂಡ, ಮರಳವಾಡಿ ಹೋ|| ಹಾರೋಹಳ್ಳಿ ತಾ|| ರಾಮನಗರ ಜಿಲ್ಲೆಯಲ್ಲಿ ಸಮಾರಂಭವನ್ನು ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್‌ ಗೋವಿಂದಸ್ವಾಮಿ ಉದ್ಘಾಟಿಸಿ ಮತನಾಡಿದರು. ಸಮಾರಂಭದಲ್ಲಿ ಡಾ.ಎಂ.ನಾಗರಜ ನಾಯ್ಕ, ಡಾ.ಶಿವಣ್ಣ ನಾಯ್ಕ, ಶ್ರೀಮತಿ ಅನಸೂಯಮ್ಮ ಎಂ, ಶ್ರೀ ರಮೇಶ್‌ ನಾಯ್ಕ, ಶ್ರೀ ಶ್ಯಾಮರಾಜ್‌ ನಾಯ್ಕ ಸ್ವಾಮೀಜಿ, ಶ್ರೀ ಮರಿಯಪ್ಪ ನಾಯ್ಕ, ಶ್ರೀ ಗಿರಿಶ್‌ ನಾಯ್ಕ್ ಉಪಸ್ಥಿತರಿದ್ದರು.

ಡಾ. ಎ.ಆರ್‌ ಗೋವಿಂದಸ್ವಾಮಿ ಅವರು ಮಾತನಾಡಿ ಬಂಜಾರ ಭಾಷೆ  ಕನ್ನಡ ಭಾಷೆಯಷ್ಟೇ ಹಿಂದಿನ ಅಳಿಮೆಯನ್ನು ಹೊಂದಿದ್ದು ಭಾಷೆಯಲ್ಲಿ ಸಾಹಿತ್ಯ ರಚನೆಯು ಅಗತ್ಯವಾಗಿದೆ. ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಗೆ ಬಂಜಾರ ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯವಿದೆ. ಅಕಾಡೆಮಿಗೆ ತಮ್ಮ ಮಾನವ ಸಂಪನ್ಮೂಲವನ್ನು ಅಕಾಡೆಮಿ ಜೊತೆಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇಂದು ಬಂಜಾರರ ಸಮಗ್ರ ಅಭಿವೃದ್ಧಿಗೆ ಅಕಾಡೆಮಿ ಸಾಹಿತ್ಯ, ಸಂಸ್ಕೃತಿ ಸಮಾಜಿಕ ಶಿಕ್ಷಣ ಇತರೆ ಅಭಿವೃದ್ಧಿಗೆ ಅಕಾಡೆಮಿಯು ಸರ್ವಾಂಗಣವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಅಕಾಡೆಮಿಯು ಒಂದು ಅತ್ಯೂತ್ತಮವಾದ ಸಂಸ್ಥೆಯಾಗಿದ್ದು ಇದಕ್ಕೆ ಬಂಜಾರರೆಲ್ಲರಿಗೂ ನನ್ನ ಸಂಸ್ಥೆಯೆಂದು ಪರಿಭಾವಿಸಿ ಸಹಕಾರ ನೀಡಿದರೆ ಅಕಾಡೆಮಿ ಅತ್ಯುತ್ತಮವಾಗಿ ಕೆಲಸಮಾಡಲು ಅನುಕೂಲವಾಗುವುದು. ಎಲ್ಲಾ ಜಿಲ್ಲಾ ವಲಯಗಳಲ್ಲಿ ಇದೇ ರೀತಿ ನಾವು ಜಾಗೃತಿ ಕಾರ್ಯಕ್ರಮಗಳು, ಬಂಜಾರ ಸಂಸ್ಕೃತಿ ಕೋಶ, ಬಂಜಾರರ ಪ್ರಮುಖರ ಸಾಮಾಜಿಕ ಸ್ವಾತಂತ್ರ್ಯ ಹೋರಾಟ ಚಿಂತಕರ 70ಕ್ಕೂ ಹೆಚ್ಚು ಕೃತಿಗಳನ್ನು ಈ ವರ್ಷ ರಚನೆ ಮಾಡುತ್ತಿದ್ದೆವೆ,  ಸಾಕ್ಷ್ಯಾಚಿತ್ರ ಮಾಡುತ್ತಿದ್ದೆವೆ, ತರಬೇತಿ ಮಾಡುತ್ತಿದ್ದೆವೆ, ಸಮೇಳನ ಮಾಡುತ್ತಿದ್ದೆವೆ, ಅಂತರ್ರಾಷ್ಟ್ರೀಯ ಮಟ್ಟದ ಒಂದು ಸಮ್ಮೇಳನಕ್ಕೆ ವಿದೇಶಿ ಬಂಜಾರರಿಂದ ಮೌಖಿಕವಾಗಿ ಒಂದು ಬೇಡಿಕೆ ಬಂದಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಂತರಾಷ್ಟ್ರೀಯ ಬಂಜಾರ ಸಾಹಿತ್ಯ,ಸಂಸ್ಕೃತಿ, ಕಲಾ  ಮಹಾ ಸಮ್ಮೇಳನವನ್ನು ನಡೆಸುವ ಅಲೋಚನೆ ಅಕಾಡೆಮಿಗೆ ಇದೆ.   ನಮಗೆ ಈ ವರ್ಷ ಹೆಚ್ಚಿನ ಬಜೆಟ್‌ ನ ಅಗತ್ಯವಿದೆ  ಇತರೆ ಅಕಾಡೆಮಿಗಳಿಗೆ ಕೊಟ್ಟಿರುವ ಹಾಗೆ ನಮಗೂ ಕನಿಷ್ಠ 5 ಕೋಟಿಗಿಂತ ಹೆಚ್ಚಿನ ಬಜೆಟ್‌ನ್ನು ಆರಂಭದಲ್ಲಿ ಕೊಟ್ಟರೆ ಅಕಾಡೆಮಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯ. ಹೀಗಾಗಲೆ ಸರ್ಕಾರ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದರು. ಹೀಗಾಗಲೆ ಎಲ್ಲಾ ಕಡೆ ಸಾಹಿತ್ಯ ಸಮ್ಮೇಳನ , ತರಬೇತಿ ಶಿಬಿರಗಳು ಕಾರ್ಯಗಾರಗಳನ್ನು  ಯಶಸ್ವಿಯಾಗಿ ನಡೆಸಿದ್ದೇವೆ.

ಪ್ರೋ. ಶಿವಣ್ಣ ನಾಯಕ್‌ ಅವರು ಅಕಾಡೆಮಿ ನಮ್ಮಂತಹ ಕುಕ್ಕುಗ್ರಾಮದಲ್ಲೂ ಬಂದು ಈ ರೀತಿಯ ಒಂದು ಮಹನ್ನೊತವಾದಂತಹ ನಮ್ಮ ಹಳ್ಳಿ ಗಾಡಿನ ಜನರನ್ನ ಸಾಹಿತ್ಯ, ಸಾಂಸ್ಕೃತಿಕ ಪ್ರಬುದ್ದತೆ ಬೆಳೆಸುವುದಕ್ಕೆ ಜಾಗೃತಿ ಅರಿವು, ತರಬೇತಿ ಕಾರ್ಯಕ್ರಮಗಳನ್ನು ನಡೆಡಸುತ್ತಿರುವುದು ಅಗತ್ಯವಾದ ಕೆಲಸ ಅಕಾಡೆಮಿ ಮಾಡುತ್ತಿರುವ ಕೆಲಸ ಹೆಮ್ಮೆ ಎನಿಸಿದೆ.

ಜೂ25ರದು ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ

ಜಾನಪದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮತ್ತು ನಗರದ ಜನತೆಗೆ ಜಾನಪದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ.

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಜೂನ್ 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಆಯೋಜಿಸಿದ್ದಾರೆ ಇದರ ಕುರಿತು ಮಾಧ್ಯಮಗೋಷ್ಟಿ.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಜಾನಪದ ಎಸ್.ಬಾಲಾಜಿ, ಜಿಲ್ಲಾಧ್ಯಕ್ಷ ಡಾ. ರಿಯಾಜ್ ಪಾಷ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ರ.ನರಸಿಂಹಮೂರ್ತಿರವರು, ಪದಾಧಿಕಾರಿಗಳಾದ ಅಶ್ವಥ್ ನಾರಾಯಣ, ಕೇಶವರಾಜ್, ಆನಿತಾ, ವಾಣಿ, ಮುರಳೀಧರ, ರಾಮಾಂಜನೇಯ, ಕಣ್ಣಯ್ಯ ಭಾಗವಹಿಸಿದ್ದರು.

ಜಾನಪದ ಎಸ್.ಬಾಲಾಜಿರವರು ಮಾತನಾಡಿ ಜಾನಪದ ಕಲೆ. ಪರಂಪರೆ ನಗರದ ಪ್ರದೇಶದ ಜನರಿಗೆ ತಿಳಿಸಲು 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜ, ರಾಜ್ಯ ಧ್ವಜ ಮತ್ತು ಪರಿಷತ್ತಿನ ಧ್ವಜರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿವಿಧ ಕಲಾ ತಂಡಗಳ ಪ್ರದರ್ಶನ, ನಂತರ ಉದ್ಘಾಟನೆ, ‘ಸೋಬಾನ” ಸ್ಮರಣ ಸಂಚಿಕೆ ಬಿಡುಗಡೆ, ಪ್ರಶಸ್ತಿ ಪ್ರಧಾನ ಹಾಗೂ ಜಾನಪದ ಗೋಷ್ಟಿ, ಮಹಿಳಾ ಜಾನಪದ ಗೋಷ್ಟಿ, ಬಹಿರಂಗ ಅಧಿವೇಶನ, ಕೃತಿ ಬಿಡುಗಡೆ ಸಮಾರೋಪ ಸಮಾರಂಭ ಬೆಳಗ್ಗೆಯಿಂದ ಸಂಜೆಯವರಗೆ ನಡೆಯಲಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 100 ಯುವಕ ಯುವತಿಯರಿಗೆ ರಾಜ್ಯ ಯುವ ಸಿರಿ ಪ್ರಶಸ್ತಿ, 60ವಿದ್ವಾಂಸರಿಗೆ,
ಜೀ.ಶಂ.ಪ, ನಾಡೋಜ ಎಸ್ ಕೆ ಕರೀಂಖಾನ್, ಮಧುರಚೆನ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಜಾನಪದ ಸಮ್ಮೇಳನ ನಾಡಿನ ಹೆಸರಾಂತ ಮಠದ ಪೀಠಾಧಿಪತಿಗಳು, ಸಚಿವರು, ಶಾಸಕರು, ಸಾಹಿತಿಗಳು ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಿಯಾಜ್ ಪಾಷರವರು ಮಾತನಾಡಿ ಬೆಂಗಳೂರು ನಗರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ.
ಮೊಬೈಲ್ ಸಂಸ್ಕೃತಿಯಿಂದ ಹೊರ ಬರಬೇಕು, ಜಾನಪದ ಕಲೆಯ ಕುರಿತು ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿಯೂ ಸಹ ಜಾನಪದ ಕುರಿತು ತಿಳಿಯಬೇಕು ಮತ್ತು ಜಾನಪದ ಕಲಾವಿದರಿಗೆ ಅವಕಾಶ ಸಿಗಬೇಕು ಎಂದು ಜಾನಪದ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ರ.ನರಸಿಂಹಮೂರ್ತಿರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಪರಿಷತ್ ಘಟಕದ ವತಿಯಿಂದ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ, ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ರವರು ಭಾಗವಹಿಸಲಿದ್ದಾರೆ.

ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಅರಿಯಬೇಕಾದರೆ ಜಾನಪದ ಕಲೆಯ ಬಗ್ಗೆ ತಿಳಿಯಬೇಕು ಮತ್ತು ಜಾನಪದ ಕಲೆ ಉಳಿದರೆ ನಾಡಿನ ಇತಿಹಾಸ ಉಳಿಯುತ್ತದೆ ಅದ್ದರಿಂದ ಜಾನಪದ ಸಮ್ಮೇಳನ ಮತ್ತು ಜಾನಪದ ಕುರಿತು ಕೃತಿ ಬಿಡುಗಡೆ ಕಾರ್ಯಕ್ರಮವಿದೆ. ಸಚಿವರು, ಶಾಸಕರು, ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶ್ಯಾಮಪ್ರಸಾದ ಮುಖರ್ಜಿ, ಜೋಷಿಯವರ ಹೋರಾಟ ಪ್ರೇರಣಾದಾಯಕ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

 

ಶಿಕಾರಿಪುರ: ಶ್ಯಾಮಪ್ರಸಾದ ಮುಖರ್ಜಿ ಮತ್ತು ಕರ್ನಾಟಕ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಜಗನ್ನಾಥ ರಾವ್ ಜೋಷಿಯವರು ನಮಗೆ ಪ್ರೇರಣಾದಾಯಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಿಕಾರಿಪುರ ಮಂಡಲದಲ್ಲಿ ಈ ದಿನ ನಡೆದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಸ್ಮøತಿ ದಿನ ಹಾಗೂ ಜಗನ್ನಾಥ ಜೋಷಿಯವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1951 ರಲ್ಲಿ ಜನಸಂಘದ ಸ್ಥಾಪನೆಯಲ್ಲಿ ಇವರು ಸಹ ಪ್ರಮುಖರು. ಮುಖರ್ಜಿಯವರು ದೇಶಕ್ಕಾಗಿ ಹೋರಾಡಿದ ನಾಯಕರು. ಕರ್ನಾಟಕ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಜೋಷಿಯವರು ಸಹ ದೇಶಕ್ಕಾಗಿ ಸಮರ್ಪಿಸಿಕೊಂಡವರು. ಈ ಇಬ್ಬರು ಮಹಾನ್ ಚೇತನಗಳಿಗೆ ಈ ದಿನ ಗೌರವ ಸಲ್ಲಿಸುವ ವಿಶೇಷ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತ ಮುಂದಿನ ದಿನಗಳಲ್ಲಿ ಇವರ ಹೋರಾಟಗಳು ನಮಗೆ ಪ್ರೇರಣಾದಾಯಕ ಎಂದು ತಿಳಿಸಿದರು.


ತಾಲ್ಲೂಕಿನ ಬಿಜೆಪಿಯ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಸಂಘಟನೆಯ ಹಿರಿಯರಾದ ಕೆ.ಎಸ್. ಗುರುಮೂರ್ತಿ, ಟಿ.ರಾಮನಾಯ್ಕ, ವಸಂತ ಗೌಡ, ಚೆನ್ನವೀರಪ್ಪ, ಶಿವಪ್ಪ ಬಿಎಸ್‍ಎನ್‍ಎಲ್, ಗಿರೀಶ್ ಧಾರವಾಡ, ಸುಧೀರ ಮಾರವಳ್ಳಿ, ಯುವ ಮೋರ್ಚಾದ ಅಧ್ಯಕ್ಷ ವೀರಣ್ಣ ಗೌಡ, ಬೆಣ್ಣೆ ಪ್ರವೀಣ್ ಉಪಸ್ಥಿತರಿದ್ದರು.

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ – ವಿಜಯೇಂದ್ರ

 

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಬಿ.ಆರ್.ಪಾಟೀಲ್ ಗಂಭೀರವಾದ ರಾಜ್ಯದ ಪರಿಸ್ಥಿತಿ ಬಗ್ಗೆ ಬೆಳಕು ಚಲ್ಲಿದ್ದಾರೆ . ಬಡವರಿಗೆ ಮನೆಗಳನ್ನು ಕೊಡಬೇಕಿತ್ತು ಅಲ್ಲಿಯೂ ಸಹ ಭ್ರಷ್ಟಾಚಾರ ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ . ಹಿರಿಯ ನಾಯಕರಾದ ಬಿ.ಆರ್ ಪಾಟೀಲ್ ರವರನ್ನ ಆಡಳಿತ ಪಕ್ಷದ ನಾಯಕರು ಬೆದರಿಸುವ ಕೆಲಸ ಮಾಡುತ್ತಿದ್ದಾರೆ .ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರಿಗೆ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಸರ್ಕಾರದಿಂದ ಬಡವರಿಗೆ ಯಾವುದೇ ಅನುಕೂಲ ಇಲ್ಲ. ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಅನೇಕ ಬಡವರಪರ ಯೋಜನೆ ನೀಡಿದ್ರು ಎಲ್ಲಾ ಯೋಜನೆ ಮರೆತಿದ್ದಾರೆ. ಭ್ರಷ್ಟಾಚಾರ ಭ್ರಷ್ಟಾಚಾರ ಭ್ರಷ್ಟಾಚಾರ ಬಿಟ್ರೆ ಈ ಸರ್ಕಾರದಲ್ಲಿ ಯಾವುದೇ ಯೋಜನೆ ಇಲ್ಲ . ಎಲ್ಲೊಒಂದು ಕಡೆ ಸ್ಟೇಟ್ ಸ್ಪಾನ್ಸರ್ ಕರೆಪ್ಷನ್ ರಾಜ್ಯ ಸರ್ಕಾರವೇ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತಿದೆ . ಈ ಎಲ್ಲಾವನ್ನ ಬಿ.ಆರ್ ಪಾಟೀಲ್ ಹೇಳಿಕೆಯಿಂದ ಗೊತ್ತಾಗುತ್ತಿದೆ. ನಾವು ಕೂಡ ಬಿಜೆಪಿ ಪಕ್ಷ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು

ಹಿಮಾಚಲ ಪ್ರದೇಶ, ಪ. ಬಂಗಾಳ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ, ತೆಲಂಗಾಣ ರಾಜ್ಯಗಳ ಸಂಸ್ಥಾಪನಾ ದಿನಾಚರಣೆ

ಬೆಂಗಳೂರು 22.06.2025: ರಾಜಭವನದಲ್ಲಿ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ತೆಲಂಗಾಣ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ, ತೆಲಂಗಾಣ ರಾಜ್ಯಗಳ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ, ತೆಲಂಗಾಣ ರಾಜ್ಯಗಳ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ವರ್ಣರಂಜಿತ ಮತ್ತು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಅದ್ಭುತವಾಗಿ ಪ್ರದರ್ಶನ ನೀಡಿದ ಎಲ್ಲಾ ಕಲಾವಿದರಿಗೆ ಅಭಿನಂದಿಸಿದರು. “ಈ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ತಂಡಗಳು ನೀಡಿದ ಪ್ರದರ್ಶನಗಳು ಅತ್ಯಂತ ಶ್ಲಾಘನೀಯ. ಈ ಪ್ರದರ್ಶನಗಳು ಭಾಷೆ ಬೇರೆಯಾಗಿರಬಹುದು, ನೃತ್ಯ ಮತ್ತು ಸಂಗೀತದ ಶೈಲಿ ಬೇರೆಯಾಗಿರಬಹುದು, ಆದರೆ ಭಾವನೆ ಒಂದೇ, ಸಮರ್ಪಣೆ, ಸಾಮರಸ್ಯ ಮತ್ತು ದೇಶಭಕ್ತಿ ಎಂಬ ಭಾವನೆಯನ್ನು ನಮಗೆ ಮೂಡಿಸಿದವು” ಎಂದರು.

“ಭಾರತದ ಪ್ರತಿಯೊಂದು ರಾಜ್ಯವು ಅದರ ಗುಣಲಕ್ಷಣಗಳು ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ವಿಶಿಷ್ಟವಾಗಿದೆ. ರಾಜ್ಯಗಳ ಈ ಗುಣಲಕ್ಷಣಗಳು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ಭಾರತದ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಆಚರಣೆಗಳ ಪರಿಕಲ್ಪನೆ ಮತ್ತು ಉದ್ದೇಶಗಳಲ್ಲಿ ಸಮಾನತೆ ಮತ್ತು ಸಾಮರಸ್ಯವು ಗೋಚರಿಸುತ್ತದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಿದ್ಧಾಂತದಿಂದ ಪ್ರೇರಿತವಾದ ಇಂತಹ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಭಾವನೆಯನ್ನು ಹೆಚ್ಚಿಸುತ್ತಿವೆ” ಎಂದು ಹೇಳಿದರು.

“ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯೇ ನಮ್ಮನ್ನು ಅನನ್ಯರನ್ನಾಗಿಸುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್‌ನಿಂದ ಕಾಮರೂಪದವರೆಗೆ ವೈವಿಧ್ಯಮಯ ಬಣ್ಣಗಳ ಸಂಸ್ಕೃತಿಗಳು ಒಂದೇ ಧ್ವಜದಡಿಯಲ್ಲಿ ಒಗ್ಗೂಡಿ ನಿಂತಿರುವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ. ದೇಶದ ಎಲ್ಲಾ ರಾಜ್ಯಗಳ ಸಂಸ್ಥಾಪನ ದಿನಾಚರಣೆಯನ್ನು ಎಲ್ಲಾ ರಾಜಭವನಗಳಲ್ಲಿ ಆಚರಿಸುವಂತಹ ಪರಿಕಲ್ಪನೆಯನ್ನು ಜಾರಿಗೆ ತಂದಿರುವ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಗೌರವಾನ್ವಿತ ಕೇಂದ್ರ ಗೃಹ ಸಚಿವರು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರ ಸ್ಫೂರ್ತಿಯೊಂದಿಗೆ, ಪ್ರತಿ ರಾಜ್ಯದ ಸಂಸ್ಥಾಪನಾ ದಿನವನ್ನು ಇತರ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತಿದೆ, ಇದರಿಂದಾಗಿ ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ” ಎಂದು ತಿಳಿಸಿದರು.

“ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಭಾಷೆ, ವೇಷಭೂಷಣಗಳು, ಸಂಗೀತ, ಕಲೆ, ಆಹಾರ ಮತ್ತು ಜೀವನಶೈಲಿಯನ್ನು ಹೊಂದಿದೆ ಮತ್ತು ಇವೆಲ್ಲವೂ ಒಟ್ಟಾಗಿ ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದೆ. ರಾಜ್ಯ ಸಂಸ್ಥಾಪನಾ ದಿನವು ನಮ್ಮ ರಾಜ್ಯವು ಇಂದು ಉತ್ತಮ ಆಡಳಿತ ಮತ್ತು ಪ್ರಗತಿಪರವಾಗಲು ಕಾರಣವಾದ ಹೋರಾಟ, ದೃಢನಿಶ್ಚಯ ಮತ್ತು ನಾಯಕತ್ವವನ್ನು ನೆನಪಿಸುತ್ತದೆ. ಈ ದಿನವು ನಮ್ಮ ಪೂರ್ವಜರ ಕೊಡುಗೆಯನ್ನು ನೆನಪಿಸುತ್ತದೆ, ಅವರು ರಾಜ್ಯದ ಸೃಷ್ಟಿ ಮತ್ತು ಅಭಿವೃದ್ಧಿಗೆ ಅವಿಶ್ರಾಂತವಾಗಿ ಶ್ರಮಿಸಿದರು. ಇಂದು, ನಾವು ವಿವಿಧ ರಾಜ್ಯಗಳ ಸಂಸ್ಥಾಪನಾ ದಿನವನ್ನು ಒಟ್ಟಾಗಿ ಆಚರಿಸುತ್ತಿರುವಾಗ, ಅದು ಭಾರತೀಯ ಒಕ್ಕೂಟದ ಶಕ್ತಿ ಮತ್ತು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯವನ್ನು ಸಂಕೇತಿಸುತ್ತದೆ, ಅಲ್ಲಿ ವಿವಿಧತೆಯಲ್ಲಿ ಏಕತೆ ಒಂದು ಆದರ್ಶ ಮಾತ್ರವಲ್ಲದೆ ಪ್ರಾಯೋಗಿಕ ವಾಸ್ತವವೂ ಆಗಿದೆ” ಎಂದು ಹೇಳಿದರು.

“ಪ್ರತಿಯೊಂದು ರಾಜ್ಯವು ಭಾರತದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ, ಕೆಲವು ಕೃಷಿಯಲ್ಲಿ, ಕೆಲವು ಕೈಗಾರಿಕಾ ಅಭಿವೃದ್ಧಿಯಲ್ಲಿ, ಕೆಲವು ಶಿಕ್ಷಣ ಮತ್ತು ತಾಂತ್ರಿಕ ಸಂಶೋಧನೆಯಲ್ಲಿ, ಮತ್ತು ಕೆಲವು ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಮೂಲಕ ದೇಶಕ್ಕೆ ಜಾಗತಿಕ ಗುರುತನ್ನು ನೀಡಿವೆ. ನಮ್ಮ ರಾಜ್ಯಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಸಾಮಾಜಿಕ ನ್ಯಾಯ, ಪರಿಸರ ಸಮತೋಲನ ಮತ್ತು ತಾಂತ್ರಿಕ ನಾವೀನ್ಯತೆಗಳ ಮೂಲಕ ಆದರ್ಶ ರಾಜ್ಯವನ್ನು ಸೃಷ್ಟಿಸಲು ನಾವು ಪ್ರತಿಜ್ಞೆ ಮಾಡಬೇಕು. ಈ ಸಂದರ್ಭವು ನಮ್ಮ ಹೊಸ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಬೇಕು. ನಮ್ಮ ಯುವಕರು ತಮ್ಮ ರಾಜ್ಯದ ಇತಿಹಾಸ ಮತ್ತು ಅದರ ಸಾಧನೆಗಳನ್ನು ತಿಳಿದುಕೊಂಡಾಗ ಮಾತ್ರ ಅವರು ಅದರ ಅಭಿವೃದ್ಧಿಯಲ್ಲಿ ಪಾಲುದಾರರಾಗುತ್ತಾರೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯಕ್ಕೆ ಬದ್ಧರಾಗುವುದು ಮತ್ತು ಕೊಡುಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ರಾಜ್ಯಪಾಲರು ಕರೆ ನೀಡಿದರು.

ವಿಮಾನ ದುರಂತ ಪ್ರಕರಣ: ಕೊಂಗ್‌ಬ್ರೈಲತ್‌ಪಂ ನಗಂಥೋಯ್ ಶರ್ಮಾ ಶವ ಮಣಿಪುರದತ್ತ, ಲಕ್ಷಾಂತರ ಜನರ ಗೌರವ ಅಂತಿಮ ನಮನ…

ಇಂಫಾಲ: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಂI ೧೭೧ ಅಪಘಾತದಲ್ಲಿ ಬಲಿಯಾದ ಕೊಂಗ್‌ಬ್ರೈಲತ್‌ಪಂ ನಗಂಥೋಯ್ ಶರ್ಮಾ ಅವರಿಗೆ ಗೌರವ ಸಲ್ಲಿಸಲು ಮಣಿಪುರದ ರಸ್ತೆಗಳಲ್ಲಿ ಸಾವಿರಾರು ಜನರು ಸಾಲಾಗಿ ನಿಂತು ಏಕತೆ ಪ್ರದರ್ಶಿಸಿ ಅಂತಿಮ ನಮನ ಸಲ್ಲಿಸಿದರು.

ಅವರ ಪಾರ್ಥಿವ ಶರೀರವನ್ನು ಭಾನುವಾರ ಇಂಫಾಲಕ್ಕೆ ತರಲಾಯಿತು, ಇದು ರಾಜ್ಯಕ್ಕೆ ಭಾವನಾತ್ಮಕ ಕ್ಷಣವಾಗಿದೆ.
ಇಂಫಾಲ್ ವಿಮಾನ ನಿಲ್ದಾಣದ ವಾತಾವರಣವು ದುಃಖದಿಂದ ತುಂಬಿತ್ತು, ಏಕೆಂದರೆ ತಂಡವು ಶರ್ಮಾ ಅವರ ಅವಶೇಷಗಳನ್ನು ಆಳವಾದ ಗೌರವ ಮತ್ತು ಗೌರವದಿಂದ ಸ್ವೀಕರಿಸಿತು.

ಫೇಸ್‌ಬುಕ್‌ನಲ್ಲಿ ಹೃದಯಸ್ಪರ್ಶಿ ಪೋಸ್ಟ್ನಲ್ಲಿ, ವಿಮಾನ ನಿಲ್ದಾಣವು ಆ ಕ್ಷಣವನ್ನು ಹೀಗೆ ವಿವರಿಸಿದೆ: “ಅವರನ್ನು ಕೇವಲ ಸಹೋದ್ಯೋಗಿಯಾಗಿ ಅಲ್ಲ, ದುಃಖಿತ ಕುಟುಂಬವಾಗಿ ಸ್ವೀಕರಿಸಲಾಯಿತು – ಮೌನ ಮತ್ತು ಗೌರವದಿಂದ ಒಗ್ಗೂಡಲಾಯಿತು. ಬಾಗಿದ ತಲೆಗಳು ಮತ್ತು ಭಾರವಾದ ಹೃದಯಗಳೊಂದಿಗೆ, ಅವರನ್ನು ಮೃದುವಾಗಿ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಹಸ್ತಾಂತರಿಸಲಾಯಿತು, ಅವರ ಉಪಸ್ಥಿತಿಯು ಅವರು ಹೊಂದಿರುವ ಪ್ರೀತಿ ಮತ್ತು ಅವರ ಅನುಪಸ್ಥಿತಿಯು ಬಿಟ್ಟುಹೋಗಿರುವ ಶೂನ್ಯತೆಯನ್ನು ಹೇಳುತ್ತದೆ.”
ಡಿಎನ್‌ಎ ಗುರುತಿಸುವಿಕೆಗಾಗಿ ಅಹಮದಾಬಾದ್‌ಗೆ ಪ್ರಯಾಣಿಸಿದ್ದ ಶರ್ಮಾ ಅವರ ತಂದೆ ಮತ್ತು ಅಕ್ಕನೊಂದಿಗೆ ಶವಗಳನ್ನು ಇಂಡಿಗೋ ವಿಮಾನದಲ್ಲಿ ಇಂಫಾಲ್‌ಗೆ ಸಾಗಿಸಲಾಯಿತು.

ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಮುರುಡೇಶ್ವರ : ವಿಶ್ವ ಪ್ರಸಿದ್ಧ ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ 22 ಜೂನ್ ರಿಂದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ಮಂದಿರ ಮಹಾಸಂಘ ಮತ್ತು ಅನೇಕ ಹಿಂದೂ ಸಂಘಟನೆಗಳು ಸೇರಿ ಡಿಸೆಂಬರ್ 2022 ರಲ್ಲಿ ದೇವಸ್ಥಾನ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ನೀಡಲಾಗಿತ್ತು, ಇದಕ್ಕೆ ಸ್ಪಂದಿಸಿ ಆಡಳಿತ ಮಂಡಳಿಯು ಇದೀಗ ವಸ್ತ್ರಸಂಹಿತೆ ಜಾರಿಗೆ ತಂದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಇದರಿಂದ ಪ್ರೇರಣೆ ಪಡೆದು ರಾಜ್ಯದ ಎಲ್ಲ ದೇವಾಲಯಗಲ್ಲಿಯೂ ವಸ್ತ್ರ ಸಂಹಿತೆ ಜಾರಿಗೊಳಿಸಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಹಿಂದೂ ಜನಜಾಗೃತಿ ಸಮಿತಿಯು ಆಡಳಿತ ಮಂಡಳಿಗೆ ನೀಡಿದ ಮನವಿಯಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಮುರುಡೇಶ್ವರ ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸಾಂಪ್ರದಾಯಿಕ ಉಡುಪು ಕಡ್ಡಾಯ ಮಾಡಬೇಕು. ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಬರುವಾಗ ದೇವಾಲಯದ ವಾತಾವರಣವೂ ಅಷ್ಟೇ ಪವಿತ್ರ ಮತ್ತು ಸೂಕ್ತವಾಗಿರಬೇಕು. ಪಾಶ್ಚಾತ್ಯ ಉಡುಪು ಅಥವಾ ತುಂಡು ಉಡುಪು ಧರಿಸಿ ದೇವಸ್ಥಾನಕ್ಕೆ ಬರುವವರಿಗೆ ಪ್ರವೇಶ ನೀಡಬಾರದು. ಭಾರತೀಯ ಸಂಪ್ರದಾಯಿಕ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು, ವಸ್ತ್ರ ಸಂಹಿತೆಗೆ ಜಾರಿಗೆ ಬಂದ ನಂತರ ದೇವಾಲಯದ ಅಂಗಳದಲ್ಲಿ ಇದರ ಬಗ್ಗೆ ಮಾಹಿತಿ ನೀಡುವ ಫಲಕವನ್ನೂ ಅಳವಡಿಸಬೇಕು ಎಂದು ಆಗ್ರಹಿಸಲಾಗಿತ್ತು. ಎಲ್ಲ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಿದರ ಫಲವಾಗಿ ಇಂದು ಈ ವಿಜಯ ಸಿಕ್ಕಿದೆ.
 ಈ  ಹಿಂದೆ ಸಮಿತಿಯು ಮಾಡಿದ ಮನವಿಯ ನಂತರ ವಿಶ್ವ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಶೃಂಗೇರಿ ಶಾರದಾಂಬೆ ದೇವಸ್ಥಾನ ಸೇರಿದಂತೆ ರಾಜ್ಯದ 250ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

ವಿವಿಎಸ್ ಲಕ್ಷ್ಮಣ್ ನನ್ನ ಜೊತೆ ಮಾತನಾಡಲಿಲ್ಲ’: 2023ರ ಘಟನೆ ಎತ್ತಿದ ಮಾಜಿ ನಾಯಕ ಸೌರವ್ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 2003 ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಒಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2003 ರ ಏಕದಿನ ವಿಶ್ವಕಪ್ ತಂಡದಿ0ದ ತನ್ನನ್ನು ಕೈಬಿಟ್ಟ ನಂತರ ಮಾಜಿ ತಂಡದ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಮೂರು ತಿಂಗಳ ಕಾಲ ತನ್ನೊಂದಿಗೆ ಮಾತನಾಡಲಿಲ್ಲ, ಏಕೆಂದರೆ, ದಿನೇಶ್ ಮೊಂಗಿಯಾ ಅವರನ್ನು ಬದಲಾಯಿಸಿದರು ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ, ಆಗಿನ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆ, ಎಲ್ಲಾ ಐದು ಆಯ್ಕೆದಾರರು ಲಕ್ಷ್ಮಣ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಬಯಸಿದ್ದರು, ಆದರೆ ಗಂಗೂಲಿ ಮತ್ತು ಮುಖ್ಯ ತರಬೇತುದಾರ ಜಾನ್ ರೈಟ್ ಬೇರೆ ಯೋಜನೆಗಳನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ.
“2003 ರ ಏಕದಿನ ವಿಶ್ವಕಪ್ ಆಯ್ಕೆ ಸಭೆಯ ಮೊದಲು, ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ಆಡುತ್ತಿದ್ದಾಗ ನಮ್ಮ ನಡುವೆ ದೊಡ್ಡ ವಾಗ್ವಾದ ನಡೆಯಿತು. ನಾಯಕ ಮತ್ತು ತರಬೇತುದಾರರಿಂದ ಬಂದ ಮಾಹಿತಿ ಪ್ರಕಾರ, 14 ಸದಸ್ಯರ ತಂಡವನ್ನು ಆಯ್ಕೆ ಮಾಡಿ ಅದರ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಕೇಳಿದೆವು. ಕಾನ್ಫರೆನ್ಸ್ ಕರೆಯ ಸಮಯದಲ್ಲಿ, ಗಂಗೂಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರು. ನಾವು ವಿವಿಎಸ್ ಲಕ್ಷ್ಮಣ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಿದ್ದೇವೆ. ಗಂಗೂಲಿ ತುಂಬಾ ಬುದ್ಧಿವಂತರಾಗಿದ್ದರು. ಅವರು ಅದ್ಭುತ ನಾಯಕರಾಗಿದ್ದರು, ಅವರು ‘ನಮಗೆ ಆಲ್‌ರೌಂಡರ್ ಬೇಕು’ ಎಂದು ಹೇಳಿದರು” ಎಂದು ಪಾಕಿಸ್ತಾನದ ಮಾಜಿ ನಾಯಕ ರಶಿತ್ ಲತೀಫ್‌ಗೆ ಮೋರೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದರು.

ಮಾಜಿ ಸಿಎಂ ಜಗನ್ ಕಾರಿಗೆ ಸಿಕ್ಕಿ ವೃದ್ಧನ ಸಾವು ಪ್ರಕರಣ : ಕಾರು ಚಾಲಕ ಪೊಲೀಸ್ ವಶಕ್ಕೆ

ಹೈದರಾಬಾದ್: ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ರ‍್ಯಾಲಿ ಒಂದರಲ್ಲಿ ಘಟಿಸಿದ ದುರಂತದಲ್ಲಿ 65 ರ ಪ್ರಾಯದ ವೃದ್ಧ ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಈ ವಿಷಯಕ್ಕೆ ಸಂಬ0ಧಿಸಿದ0ತೆ ಮಾಜಿ ಸಿ.ಎಂ. ಜಗನ್ ವಿರುದ್ಧ ಈಗಾಗಲೇ ಎಫ್‌ಐಆರ್ ಕೂಡಾ ದಾಖಲಾಗಿದೆ. ಕಾರು ಚಾಲಕ ರಮಣ ರೆಡ್ಡಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು,ಕಾರಿನ ಮಾಲೀಕ ಕೃಷ್ಣ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ.
ಇದೇ ದಿನಾಂಕ ತಿಂಗಳ 18 ರಂದು ಪಲ್ನಾಡು ಜಿಲ್ಲೆಯ ಸತ್ತೇನಹಳ್ಳಿಯಲ್ಲಿ ಜಗನ್ ಅವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಇದೇ ವೇಳೆ 65 ವರ್ಷದ ಸಂಗಯ್ಯ ಎಂಬ ವೃದ್ಧ ಅಸುನೀಗಿದ್ದಾರೆ. ಪ್ರಕರಣಕ್ಕೆ ಸಂಬ0ಧಿಸಿದ0ತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರು ಚಾಲಕ ರಮಣ ರೆಡ್ಡಿಯನ್ನು ಎ1 ಆರೋಪಿಯಾಗಿ, ಜಗನ್ ಮೋಹನ್ ರೆಡ್ಡಿಯನ್ನು ಎ2 ಆರೋಪಿಯಾಗಿ ಮತ್ತು ಕಾರ್ ಮಾಲಿಕ ಕೃಷ್ಣನನ್ನು 3ನೇ ಆರೋಪಿಯಾಗಿ ಪರಿಗಣಿಸಲಾಗಿದೆ. ರಮಣ ರೆಡ್ಡಿಯನ್ನು ಬಂಧಿಸಲಾಗಿದೆ.
ಸಂಗಯ್ಯನ ಸಾವಿನ ಘಟನೆಗೆ ಸಂಬAಧಿಸಿದAತೆ, ಕಾರ್ಯಕರ್ತರು ಮತ್ತು ಸಾರ್ವಜನಿಕರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರ‍್ಯಾಲಿಗಳಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಆಯೋಜಕರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿರುವರು.

ಹಿಂದೂ ಜನಜಾಗೃತಿ ಸಮಿತಿಯಿಂದ ”ಶೌರ್ಯ ಪ್ರಶಿಕ್ಷಣ ಶಿಬಿರ ” ಸಂಪನ್ನ

ಬೆಂಗಳೂರು:  ಹಿಂದೂ ಯುವಕ – ಯುವತಿಯರಲ್ಲಿ ಶೌರ್ಯ ಮತ್ತು ಪರಾಕ್ರಮ ಜಾಗೃತಿ ಮೂಡಿಸಲು ಅವರಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸಲು ಶೌರ್ಯ ಪ್ರಶಿಕ್ಷಣ ಶಿಬಿರವನ್ನು ದಾಸರಹಳ್ಳಿಯಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಯುವಕ ಯುವತಿಯರಿಗೆ ಸ್ವರಕ್ಷಣೆಯೊಂದಿಗೆ, ರಾಷ್ಟ್ರರಕ್ಷಣೆ ಹಾಗೂ ಧರ್ಮರಕ್ಷಣೆಗಾಗಿ ಲಾಠಿ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕ  ಶರತ್ ಕುಮಾರ್ ಭಾಗವಹಿಸಿದ್ದರು.
ಶರತ್ ಕುಮಾರ್ ಶಿಬಿರಾರ್ಥಿಗಳೊಂದಿಗೆ ಮಾತನಾಡುತ್ತ ಯಾವ ಮನುಷ್ಯ ಇತಿಹಾಸ ಮರೆಯುವುದಿಲ್ಲವೋ ಅವರೇ ಇತಿಹಾಸ ನಿರ್ಮಿಸಬಲ್ಲರು. ಹಾಗೆಯೇ ಯಾರು ಇತಿಹಾಸ ಮರೆಯುತ್ತಾರೋ ಅವರಿಂದ ಖಂಡಿತ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಇತಿಹಾಸ ಎಷ್ಟು ಜ್ವಾಜಲ್ಯಮಾನ, ಪರಾಕ್ರಮ ಮತ್ತು ಆದರ್ಶವಾಗಿದೆ ಎಂದರೆ ಜಗತ್ತಿನ ಇತರ ಯಾವುದೇ ಧರ್ಮಕ್ಕೆ ಅಥವಾ ಯಾವುದೇ ದೇಶಕ್ಕೆ ಇಂತಹ ಇತಿಹಾಸ ಪರಂಪರೆ ಲಭಿಸಿಲ್ಲ. ಅನೇಕ ಆಕ್ರಮಣಕಾರರು ಬಂದರು ಆದರೆ ನಮ್ಮ ಶೂರ ವೀರ ಹಿಂದೂ ರಾಜ-ರಾಣಿಯರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು. ಕರುನಾಡ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಕೊನೆಯುಸಿರಿರುವ ತನಕ ಕಿತ್ತೂರಿನ ರಕ್ಷಣೆಗಾಗಿ ಸೆಣೆಸಾಟ ನಡೆಸಿದರು, ಸಾಮಾನ್ಯ ಜನರ ಪಡೆಯನ್ನು ಕಟ್ಟಿ ಅಸಾಮಾನ್ಯ ಪರಾಕ್ರಮ ತೋರಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ನಮ್ಮ ಕರುನಾಡಿನ ಸ್ತ್ರೀರತ್ನ ಕಿತ್ತೂರಿನ ರಾಣಿ ಚೆನ್ನಮ್ಮ, ಭಾರತಮಾತೆಯ ಕಿರೀಟವಾದ ಕಾಶ್ಮೀರದ ರಕ್ಷಣೆಗಾಗಿ ಜನರಲ್ ಕಾರ್ಯಪ್ಪ ಅವರು ಯಾವ ರೀತಿ ಹೋರಾಡಿದರು ಮತ್ತು ಇಂದು ನಮ್ಮ ಸೈನಿಕರು ರಾಷ್ಟ್ರ ರಕ್ಷಣೆಗೆ ತಮ್ಮ ರಕ್ತ ಕೊಟ್ಟಾದರೂ ಹೊರಡುತ್ತಾರೆ ಎಂದರು.
ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಯುವಕ ಯುವತಿಯರಿಗೆ ಶೌರ್ಯ ಪ್ರಶಿಕ್ಷಣ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವಕ – ಯುವತಿಯರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇಂದು ಯಾವುದೇ ವ್ಯಕ್ತಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ, ದೇಶ ವಿರೋಧಿ ಶಕ್ತಿ, ದೇವಸ್ಥಾನಗಳ ಹಾನಿ, ದೇವತೆಗಳ ವಿಡಂಬನೆ, ನಕ್ಸಲ್ ವಾದಿಗಳ ವಿರುದ್ಧ ಹೋರಾಟ ಮಾಡಬೇಕಾದರೆ ಮೊದಲು ಅವನು ಧೈರ್ಯವಂತನಾಗಿರಬೇಕು , ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಕ್ಷಮನಾಗಿರಬೇಕು. ಈ ಭವ್ಯ ಭಾರತದಲ್ಲಿ ಜನ್ಮ ಸಿಗುವುದೇ ದುರ್ಲಭವಾಗಿದೆ, ಯುವಕ- ಯುವತಿಯರು ತಮ್ಮ ಯೌವನ ಅವಸ್ಥೆಯಲ್ಲಿ ರಾಷ್ಟ್ರಕ್ಕಾಗಿ ಏನಾದರೂ ಮಾಡಲೇಬೇಕು. ಯುವ ಶಕ್ತಿಯ ಮೇಲೆ ಸ್ವಾಮಿ ವಿವೇಕಾನಂದರು ಬಹಳ ವಿಶ್ವಾಸ ಇಟ್ಟಿದ್ದರು. ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಇಂದಿನ ಯುವಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸದೃಢವಾಗಿಸುವ ಜೊತೆಗೆ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಕಾರ್ಯವು ಇಂತಹ ತರಬೇತಿ ಶಿಬಿರಗಳಿಂದ ಸಾಧ್ಯವಾಗುತ್ತದೆ