Home Blog Page 68

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 26.06.2025 THURSDAY.ಗುರುವಾರ

ಸಂವತ್ಸರ:ವಿಶ್ವಾವಸು
SAMVATSARA : VISHWAVASU.
ಆಯಣ:ಉತ್ತರಾಯಣ
AYANA: ಉತ್ತರಯನ್
ಋತು:ಗ್ರೀಷ್ಮ
RUTHU: GREESHMA.
ಮಾಸ: ಆಷಾಡ
MAASA: ASHADHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ಪ್ರತಿಫತ್
TITHI: PRATIPAT.
ಶ್ರದ್ದಾತಿಥಿ: ಉತ್ತರಾಧಿಮಠಕ್ಕೆ ಪ್ರತಿಫತ್ ಮತ್ತು ದ್ವಿತೀಯ,ರಾಯರ ಮಠ, ಶ್ರೀಪಾದರಾಜ ಮಠ ಮತ್ತು ವ್ಯಾಸರಾಜಮಠಕ್ಕೆ ಪ್ರತಿಫತ್
SHRADDHA TITHI:
FOR SMUM – ” PRATIPAT & DVITIYA “.*FOR SRSM , SPRM And SVM – ” PRATIPAT
ವಾಸರ: ಬ್ರುವಾಸ್ಪತಿವಾಸರ
VAASARA: BRUVASPATIVAASARA
ನಕ್ಷತ್ರ: ಆರಾದ್ರ
NAKSHATRA: ARDRA.
ಯೋಗ: ಧ್ರುವ
YOGA: DHRUVA.
ಕರಣ: ಬವ
KARANA: BAVA.
ಸೂರ್ಯೋದಯ(Sunrise): 05:56
ಸೂರ್ಯಸ್ತ(Sunset): 07:04
ರಾಹುಕಾಲ(RAHU KAALA) : 01:30PM To 03:00PM.
ದಿನವಿಶೇಷ(SPECIAL EVENT’S)
26.06.2025
ಇಷ್ಟಿ, ಚಂದ್ರ ದರ್ಶನ, ಅರಳಿಕಟ್ಟೆ ಆಚಾರ್ಯರ ಗುರುಪರ್ವ (ಹತ್ತಿಬೆಳಗಲ್).

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 27.06.2025 FRIDAY.ಶುಕ್ರವಾರ

ಸಂವತ್ಸರ:ವಿಶ್ವಾವಸು
SAMVATSARA : VISHWAVASU.
ಆಯಣ:ಉತ್ತರಾಯಣ
AYANA: ಉತ್ತರಯನ್
ಋತು:ಗ್ರೀಷ್ಮ
RUTHU: GREESHMA.
ಮಾಸ: ಆಷಾಡ
MAASA: ASHADHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ಬಿದಿಗೆ
TITHI: BIDIGE.
ಶ್ರದ್ದಾತಿಥಿ: ಬಿದಿಗೆ/ತದಿಗೆ
BIDIGE/TADIGE
ವಾಸರ: ಭಾರ್ಗವವಾಸರ
VAASARA: BHARGAVAVASARA
ನಕ್ಷತ್ರ: ಪುನರ್ವಸು
NAKSHATRA: PUNARVASU.
ಯೋಗ: ವ್ಯಾಘಾತ
YOGA: VYAGHATA.
ಕರಣ: ಕೌಲವ
KARANA: KOWLAVA.
ಸೂರ್ಯೋದಯ(Sunrise): 05:56
ಸೂರ್ಯಸ್ತ(Sunset): 07:04
ರಾಹುಕಾಲ(RAHU KAALA) : 01:30PM To 03:00PM.
ದಿನವಿಶೇಷ(SPECIAL EVENT’S)
27.06.2025
ಮೊದಲ ಆಷಾಡ ಶುಕ್ರವಾರ ಲಕ್ಷ್ಮಿ ಪೂಜೆ,ಜಗನ್ನಾಥ್ ರಥ ಯಾತ್ರೆ

ಸಿಎಂ ಕಂಟ್ರೋಲ್ ಕಳೆದುಕೊಂಡಿಲ್ಲ-ಡಿಕೆಶಿ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಆ ರೀತಿ ಯಾವುದೇ ಮಾತು ನಾನು ಕೇಳಿಲ್ಲ ಅವರು ಕಂಟ್ರೋಲ್ ಕಳೆದುಕೊಂಡಿಲ್ಲ ಎಂದಿದ್ದಾರೆ,

ನಮಗೆ ಹೈಕಮಾಂಡ್ ಇದೆ
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮಗೆ ಹೈಕಮಾಂಡ್ ಇದ್ದು, ಎಲ್ಲವನ್ನೂ ನೋಡಿಳ್ಳುತ್ತದೆ, ನಾನು ಎಲ್ಲರ ಜೊತೆ ಮಾತನಾಡುತ್ತೇನೆ, ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇಲ್ಲ, ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿಲ್ಲ, ಮಾಧ್ಯಮದವರೇ ಸುಮ್ಮನೆ ಸುದ್ದಿ ಹರಡಿಸುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ,
ಬಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಪಕ್ಷದ ಅಧ್ಯಕ್ಷ ಹಾಗಾಗಿ ಅವರ ಜೊತೆ ಮಾತನಾಡಬೇಕಿತ್ತು, ಅವರ ಹೇಳಿಕೆಯ ಬಗ್ಗೆ ಕೇಳಬೇಕಿತ್ತು, ಅದಕ್ಕಾಗಿ ಫೋನ್ ಮಾಡಿ ಕರೆಸಿದ್ದೆ, ಅವರು ಎಲ್ಲಾ ವಿಚಾರವನ್ನು ಹೇಳಿದ್ದಾರೆ, ನಾನು ಸಿಎಂ ಹಾಗೂ ಜಮೀರ್ ಜೊತೆ ಮಾತನಾಡಲಿದ್ದೇನೆ, ಸದ್ಯದಲ್ಲಿ ನಮ್ಮ ಪಕ್ಷದ ನಾಯಕರು ಬರುತ್ತಾರೆ, ಅವರು ಎಲ್ಲರ ಜೊತೆ ಮಾತನಾಡುತ್ತಾರೆ ಎಂದಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಕನ್ನಡಿಗನಿಗೆ ಪಟ್ಟ ಕಟ್ಟುತ್ತಾ ಬಿಜೆಪಿ

ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಜುಲೈ ಮೊದಲ ವಾರದಲ್ಲಿ ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕಮಲ ಪಾಳಯದಲ್ಲಿ ಭಾರೀ ಕುತೂಹಲ ಮೂಡಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹಲವು ಪ್ರಮುಖ ನಾಯಕರ ಹೆಸರುಗಳು ಚರ್ಚೆಯಲ್ಲಿದ್ದು, ಅವುಗಳಲ್ಲಿ ಕರ್ನಾಟಕದ ಒಬ್ಬ ಹಿರಿಯ ರಾಜಕಾರಣಿಯ ಹೆಸರು ಕೇಳಿಬರುತ್ತಿದೆ. ಕರ್ನಾಟಕದಿಂದ ಒಬ್ಬ ಕನ್ನಡಿಗನಿಗೆ ಈ ಉನ್ನತ ಸ್ಥಾನ ಒಲಿಯುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ನಾಯಕನಿಗೆ ಈ ಪಟ್ಟವನ್ನು ನೀಡಲು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕನ್ನಡಿಗ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನೊಬ್ಬನನ್ನು ಆಯ್ಕೆ ಮಾಡುವ ಕುರಿತು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಸವಾಲಿನ ಕಗ್ಗಂಟಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆಗೆ ತೀವ್ರ ಕಸರತ್ತು ನಡೆಯುತ್ತಿದೆ. ಈ ರೇಸ್‌ನಲ್ಲಿ ಹಲವು ಪ್ರಭಾವಿ ನಾಯಕರ ಹೆಸರುಗಳು ಕೇಳಿಬಂದಿವೆ. ಇದರ ಜೊತೆಗೆ, ಆರ್‌ಎಸ್‌ಎಸ್‌ನ ಪಾತ್ರವೂ ಈ ಆಯ್ಕೆಯಲ್ಲಿ ನಿರ್ಣಾಯಕವಾಗಿದೆ. ಬಿಜೆಪಿಯ ಈ ಪ್ರಮುಖ ಆಯ್ಕೆಗೆ ಆರ್‌ಎಸ್‌ಎಸ್‌ನ ಸಲಹೆ ಮತ್ತು ಸಮ್ಮತಿಯನ್ನು ಪಡೆಯಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ 11 ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಜೋಶಿ ಅವರು ಆರ್‌ಎಸ್‌ಎಸ್‌ನ ಹಿನ್ನೆಲೆಯಿಂದ ಬಂದವರಾಗಿದ್ದು, ಸಂಘ ಪರಿವಾರದಲ್ಲಿ ತಮ್ಮನ್ನು ತಾವು ಗಾಢವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದು, ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆರ್‌ಎಸ್‌ಎಸ್‌ನೊಂದಿಗೆ ಅವರ ಹತ್ತಿರದ ಸಂಬಂಧವು ಈ ಸ್ಥಾನಕ್ಕೆ ಅವರನ್ನು ಪ್ರಬಲ ಆಕಾಂಕ್ಷಿಯಾಗಿಸಿದೆ. ಜುಲೈ 7ರಂದು ನೂತನ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.

ಬಿ.ಆರ್ ಪಾಟೀಲ್- ರಾಜು ಕಾಗೆಗೆ C.M. ಸಿದ್ದರಾಮಯ್ಯ ಕ್ಲಾಸ್!

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ನವದೆಹಲಿಯಿಂದ ಹಿಂದಿರುಗಿದ ತಕ್ಷಣ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಶಾಸಕ ರಾಜು ಕಾಗೆ ಅವರೊಂದಿಗೆ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಪಾಟೀಲ್, ವಸತಿ ಯೋಜನೆಗಳ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಲಂಚ ನೀಡಬೇಕಾಗುತ್ತದೆ ಎಂದು ಆರೋಪಿಸಿದ್ದರು, ಈ ಆರೋಪವನ್ನು ಕಾಗೆ ಕೂಡ ಬೆಂಬಲಿಸಿದ್ದರು.

ಸಿದ್ದರಾಮಯ್ಯ ಅವರು ಮೂವರು ನಾಯಕರಿಗೆ ಸಾರ್ವಜನಿಕವಾಗಿ ಮಾತನಾಡುವ ಮೊದಲು ತಮ್ಮೊಂದಿಗೆ ಚರ್ಚಿಸಬೇಕು ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದರು, ಈ ವೇಳೆ ಪಕ್ಷ ಮತ್ತು ಸರ್ಕಾರಕ್ಕಾದ ಡ್ಯಾಮೇಜ್ ನಿಯಂತ್ರಿಸಲು ಸಿದ್ದರಾಮಯ್ಯ ಅವರಿಗೆ ಸೂಚಿಸಲಾಯಿತು. ಈ ವಿಷಯ ಸ್ಫೋಟಗೊಳ್ಳುವ ಮೊದಲೇ ಈ ವಿಷಯವನ್ನು ಪರಿಹರಿಸಬೇಕಿತ್ತು ಎಂದು ಖರ್ಗೆ ಅಭಿಪ್ರಾಯಪಟ್ಟರು ಎಂದು ಹೇಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು, ಅಂದರೆ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಂದಿರುವ ಹುದ್ದೆಯನ್ನು ಬದಲಾಯಿಸಬೇಕೆಂದು ಸಿದ್ದರಾಮಯ್ಯ ಬಯಸಿದ್ದರೂ, ಪಕ್ಷದ ಹೈಕಮಾಂಡ್ ಈ ಹಂತದಲ್ಲಿ ಬದಲಿಸುವ ಮನಸ್ಥಿತಿಯಲ್ಲಿಲ್ಲ ಎಂದು ಮೂಲಗಳು ತಿಳಿಸಿವೆ.

ಲಿಂಗಾಯತ ಪ್ರಭಾವಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆಯಿಂದ ಬದಲಾಯಿಸುವ ಸಾಧ್ಯತೆ ಇರುವುದರಿಂದ, ಕಾಂಗ್ರೆಸ್ ಸ್ವಲ್ಪ ಸಮಯ ಕಾಯಲಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ, ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದ ವೀರಶೈವ ಲಿಂಗಾಯತ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ, ಎಸ್‌ಟಿ ನಾಯಕ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ.. ಹೈಕಮಾಂಡ್ ಈ ಹುದ್ದೆಗೆ ಮತ್ತೊಬ್ಬ ವೀರಶೈವ ಲಿಂಗಾಯತ ಮತ್ತು ಮುದ್ದೇಬಿಹಾಳದಿಂದ ಆರು ಬಾರಿ ಶಾಸಕರಾಗಿರುವ ಸಿ.ಎಸ್. ನಾಡಗೌಡ ಅವರನ್ನೂ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ

ಪ್ರತಿದಿನ ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳು ಅತ್ಯಗತ್ಯ. ಜಾಗತಿಕ ಮಾರುಕಟ್ಟೆಯಲ್ಲಿ ಈ ಇಂಧನಗಳಿಗೆ ಭಾರೀ ಬೇಡಿಕೆಯಿದ್ದು, ಕಚ್ಚಾತೈಲವನ್ನು ಸಂಸ್ಕರಿಸಿ ತಯಾರಿಸಲಾಗುವ ಈ ಇಂಧನಗಳು ಕಾರ್ಖಾನೆಗಳು, ಲಘು ಮತ್ತು ಭಾರಿ ವಾಹನಗಳು, ಹಾಗೂ ವೈಯಕ್ತಿಕ ವಾಹನಗಳಿಗೆ ಪ್ರಮುಖ ಶಕ್ತಿಯ ಮೂಲವಾಗಿವೆ.

ಇಂದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂಧನ ದರದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ 1 ರೂಪಾಯಿ 8 ಪೈಸೆ ಇಳಿಕೆಯಾಗಿದ್ದು, ಇದು ವಾಹನ ಸವಾರರಿಗೆ ಸಿಹಿ ಸುದ್ದಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂಧನ ದರ ಸ್ಥಿರವಾಗಿದ್ದು, ಪೆಟ್ರೋಲ್ ರೂ. 102.92 ಮತ್ತು ಡೀಸೆಲ್ ರೂ. 90.99 ಆಗಿದೆ. ಇತರ ಜಿಲ್ಲೆಗಳಲ್ಲಿ ಕೆಲವು ಪೈಸೆಗಳ ಏರಿಳಿತ ಕಂಡುಬಂದಿದೆ. ಉದಾಹರಣೆಗೆ, ಬಾಗಲಕೋಟೆಯಲ್ಲಿ ಪೆಟ್ರೋಲ್ ದರ 13 ಪೈಸೆ ಏರಿಕೆಯಾಗಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ 49 ಪೈಸೆ ಇಳಿಕೆಯಾಗಿದೆ.

ಕರ್ನಾಟಕದಲ್ಲಿ ಇಂಧನ ದರದಲ್ಲಿ ಇಂದು ಕೆಲವು ಜಿಲ್ಲೆಗಳಲ್ಲಿ ಇಳಿಕೆಯಾಗಿದ್ದು, ಬೆಳಗಾವಿಯಂತಹ ಕೆಲವು ಪ್ರದೇಶಗಳಲ್ಲಿ ವಾಹನ ಸವಾರರಿಗೆ ಸಂತಸ ತಂದಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಏರಿಕೆಯೂ ಕಂಡುಬಂದಿದೆ

ಇಸ್ರೇಲ್ – ಇರಾನ್ ಸಂಘರ್ಷ : ಶಾಂತಿ ಸ್ಥಾಪನೆಯೊಂದೇ ನಮಗಿರುವ ಮಾರ್ಗ

ಡಾ. ವಿಷ್ಣು ಭರತ್ ಅಲಂಪಳ್ಳಿ

ಜಗತ್ತು ಸಂಘರ್ಷಗಳಿಂದ ನಡುಗುತ್ತಿದೆ. ಇರಾನ್ – ಇಸ್ರೇಲ್ (Iran-Israel war) ಸಂಘರ್ಷ ಇದಕ್ಕೆ ಜ್ವಲಂತ ಉದಾಹರಣೆ. ಇರಾನ್ ಮೇಲೆ ದೊಡ್ಡಣ್ಣ ಅಮೆರಿಕ ನಡೆಸುತ್ತಿರುವ ದಾಳಿ ಆತಂಕಕಾರಿ. ರಷ್ಯಾ-ಉಕ್ರೇನ್ (Russia – Ukraine War) ಯುದ್ಧವೂ ಸಹ ಮನುಕುಲವನ್ನು ಕಲಕುತ್ತಿದೆ. ಈ ಬೆಳವಣಿಗೆಗಳಿಂದ ಜಗತ್ತು ಸಾಕಷ್ಟು ಚಿಂತಿತವಾಗಿದೆ. ಅಶಾಂತಿ ಹಿಂದೆಂದಿಗಿಂತಲೂ ಜೋರಾಗಿ ಪ್ರತಿಧ್ವನಿಸುತ್ತದೆ: ಕೆಲವರ ಅಧಿಕಾರ ದಾಹಕ್ಕಾಗಿ ಮುಗ್ಧ ನಾಗರಿಕರು ಅತ್ಯಧಿಕ ಬೆಲೆ ತೆರುತ್ತಿದ್ದಾರೆ. ಇಡೀ ನಗರಗಳು ಕುಸಿಯುತ್ತವೆ. ಮಕ್ಕಳ ಮನಸ್ಸು ಜರ್ಝರಿತಾಗಿದೆ. ಸಂಘರ್ಷದಿಂದ ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ. ಇರಾನ್ – ಇಸ್ರೇಲ್ ಸಂಘರ್ಷದಿಂದ ಮನುಕುಲ ನಲುಗುತ್ತದೆ. ತೈಲ ರಫ್ತು ಬಂದ್ ಆದರೆ ತೊಂದರೆ ಎದುರಿಸುವುದು ಮನುಷ್ಯರು. ಅದು ಭಾರತವೇ ಆಗಿರಬಹುದು, ಬೇರೆ ದೇಶಗಳೇ ಆಗಿರಬಹುದು.
ಎರಡು ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಅಮೆರಿಕ ಮೂಗು ತೂರಿಸಿರುವ ಬೆಳವಣಿಗೆಯ ನಡುವೆಯೂ ನಾನು ಕನಸು ಕಾಣಲು ಧೈರ್ಯ ಮಾಡುತ್ತೇನೆ. ಏಕೆಂದರೆ ಶಾಂತಿ ಭ್ರಮೆಯಲ್ಲ. ಆದರೆ ಒಂದು ಉದ್ದೇಶವಾಗಿರುವ ಪ್ರಪಂಚದ ಬಗ್ಗೆ ನಾನು ಕನಸು ಕಾಣುತ್ತೇನೆ. ಭರವಸೆ ಇರುವುದು ದ್ವೇಷದಲ್ಲಿ ಅಲ್ಲ. ಶಾಂತಿಯಲ್ಲಿ. ರಾಜತಾಂತ್ರಿಕತೆ ಎಂಬುದು ವಿನಾಶಕ್ಕಿಂತ ಬಲವಾಗಿರುತ್ತದೆ.
ನಾವು ನೋಡುತ್ತಿರುವುದು ಕೇವಲ ಯುದ್ಧವಲ್ಲ. ಇದು ಮಾನವೀಯತೆಯ ಕುಸಿತ. ರಾಜಕೀಯ ಮತ್ತು ಮಿಲಿಟರಿ ಗಣ್ಯರ ಅಹಂ-ಚಾಲಿತ ಕಾರ್ಯಸೂಚಿಗಳು ಇಡೀ ಭೂ ಗ್ರಹವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಸಂಘರ್ಷದ ನಿರ್ಧಾರಗಳನ್ನು ಹವಾನಿಯಂತ್ರಣ ಕೊಠಡಿಗಳು ಮತ್ತು ಯುದ್ಧ ಕೊಠಡಿಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ ಅವುಗಳ ಪರಿಣಾಮಗಳು ಮನೆಗಳು, ಆಸ್ಪತ್ರೆಗಳು, ಶಾಲೆಗಳು, ಮಾನವ ನಿರ್ಮಿತ ಮೂಲ ಸೌಕರ್ಯ, ಪ್ರಕೃತಿ, ಪರಿಸರದ ಮೇಲಾಗುತ್ತದೆ.  
ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯು.ಎನ್.ಎಚ್.ಸಿ.ಆರ್.) ಪ್ರಕಾರ, 2025 ರ ಹೊತ್ತಿಗೆ ವಿಶ್ವದಾದ್ಯಂತ 117 ದಶಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ಅದು ಯುದ್ಧ, ಕಿರುಕುಳ ಮತ್ತು ಅಸ್ಥಿರತೆಯಿಂದ ಹೊರಹಾಕಲ್ಪಟ್ಟ ಜಪಾನ್ನ ಜನಸಂಖ್ಯೆಗಿಂತ ಹೆಚ್ಚು.
ಏತನ್ಮಧ್ಯೆ, 2024 ರಲ್ಲಿ ಜಾಗತಿಕ ಮಿಲಿಟರಿ ವೆಚ್ಚವು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಎಸ್.ಐ.ಪಿ.ಆರ್.ಐ ಪ್ರಕಾರ 2.44 ಟ್ರಿಲಿಯನ್ ಡಾಲರ್ (ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ) ಎಂಬುದು ವಿಶೇಷ. ಅದರಲ್ಲಿ ಶೇ 10 ರಷ್ಟು ಹವಾಮಾನ ಬದಲಾವಣೆge, ಸಾರ್ವತ್ರಿಕ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಅಥವಾ ಹಸಿವನ್ನು ನಿರ್ಮೂಲನೆ ಮಾಡಲು ಬಳಸಿದ್ದರೆ ಎಷ್ಟೊಂದು ಬದಲಾವಣೆ ತರಬಹುದಿತ್ತು.
ಹಿಂದೂ ತತ್ವಶಾಸ್ತ್ರದಲ್ಲಿ ಮಾರ್ಗದರ್ಶನವನ್ನು ಕಂಡುಕೊಳ್ಳುವ ವ್ಯಕ್ತಿಯಾಗಿ, ನಾನು ಮಾನವ ಜೀವನವನ್ನು ಪವಿತ್ರವೆಂದು ನೋಡುತ್ತೇನೆ. ಜೈವಿಕವಾಗಿ ಮಾತ್ರವಲ್ಲ, ಆಧ್ಯಾತ್ಮಿಕವಾಗಿಯೂ. ಮನುಷ್ಯನಾಗಿ ಜನಿಸುವುದು ಅಸಂಖ್ಯಾತ ಪುನರ್ಜನ್ಮದ ಚಕ್ರಗಳ ಪರಿಣಾಮವಾಗಿದೆ. ವಿಕಸನಗೊಳ್ಳುವುದು ಅಪರೂಪದ ಮತ್ತು ಅಮೂಲ್ಯವಾದ ಅವಕಾಶ ಎಂದು ಧರ್ಮಗ್ರಂಥಗಳು ನಮಗೆ ಕಲಿಸುತ್ತವೆ. ಯುದ್ಧ ಮತ್ತು ದ್ವೇಷದ ಮೂಲಕ ಈ ಅವಕಾಶವನ್ನು ವ್ಯರ್ಥ ಮಾಡುವುದು ಕೇವಲ ದುರಂತವಲ್ಲ, ಅದು ಆಧ್ಯಾತ್ಮಿಕ ಕುಸಿತವಾಗಿದೆ.
ನಾವು ಒಪ್ಪಿಕೊಳ್ಳಲೇಬೇಕಾದ ಒಂದು ಬೆಳ್ಳಿ ರೇಖೆ ಇದೆ: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲುಗಡೆ. ರಾಜತಾಂತ್ರಿಕತೆ, ಸಾರ್ವಜನಿಕ ಒತ್ತಡ ಅಥವಾ ಭೌಗೋಳಿಕ ರಾಜಕೀಯ ಅಗತ್ಯದಿಂದ ಮಧ್ಯಸ್ಥಿಕೆ ವಹಿಸಲ್ಪಟ್ಟಿದ್ದರೂ, ಈ ಉಲ್ಬಣವು ಪರಮಾಣು ದುರಂತವಾಗಬಹುದಾದ ಅಪಾಯವನ್ನು ತಪ್ಪಿಸಿತು. ಇದು ಉಲ್ಬಣಗೊಂಡಿದ್ದರೆ, ಪರಿಣಾಮಗಳು ಉಪಖಂಡವನ್ನು ಮೀರಿ ವಿಸ್ತರಿಸುತ್ತಿದ್ದವು. ಕೆಲವು ತಜ್ಞರು ಮೂರನೇ ಮಹಾಯುದ್ಧ ಆಗಬಹುದೆಂದು ಕಳವಳ ವ್ಯಕ್ತಪಡಿಸಿದ್ದರು. ವಿಶಾಲ ಸಂಘರ್ಷಕ್ಕೆ ಜಗತ್ತನ್ನು ಎಳೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದ್ದರು. ಪ್ರತೀಕಾರಕ್ಕಿಂತ ತಡೆಗಟ್ಟುವಿಕೆಗೆ ಆದ್ಯತೆ ನೀಡಲು ಈ ನಿಕಟ ಕರೆ ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸಬೇಕು.
ವಿಶ್ವಸಂಸ್ಥೆ ಎಲ್ಲಿದೆ?:
ನಾವು ಇದನ್ನೂ ಕೇಳಿಕೊಳ್ಳಬೇಕು: ಸಂಘರ್ಷ ಪ್ರಾರಂಭವಾಗುವ ಮೊದಲು ಅದನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆ ಏಕೆ ಹೆಚ್ಚು ಸಕ್ರಿಯವಾಗಿಲ್ಲ?. ಅಂತರರಾಷ್ಟ್ರೀಯ ನ್ಯಾಯಾಲಯ, ಶಾಂತಿಪಾಲನಾ ಕಾರ್ಯಾಚರಣೆಗಳು ಮತ್ತು ಸಂಘರ್ಷ ತಡೆಗಟ್ಟುವ ಘಟಕಗಂತಹ ಕಾರ್ಯವಿಧಾನಗಳನ್ನು ಹೊಂದಿದ್ದರೂ, ಪ್ರಮುಖ ಶಕ್ತಿಗಳ ನಡುವಿನ ರಾಜಕೀಯ ಗ್ರಿಡ್ಲಾಕ್ ಹೆಚ್ಚಾಗಿ ಈ ಪ್ರಯತ್ನಗಳನ್ನು ತಟಸ್ಥಗೊಳಿಸುತ್ತದೆ. ಸುಮಾರು 6.5 ಶತಕೋಟಿ ಡಾಲರ್ ಮೌಲ್ಯದ ಯುಎನ್ ಶಾಂತಿಪಾಲನಾ ಬಜೆಟ್ ಒಂದೇ ದೇಶದ ಮಿಲಿಟರಿ ಬಜೆಟ್ಗಿಂತ ಕುಬ್ಜವಾಗಿದೆ.
ಈ ಅಸಮತೋಲನ ನಿವಾರಿಸಲು ಜಗತ್ತು ಗಮನ ನೀಡಬೇಕು. ನಾವು ನಿಜವಾಗಿಯೂ ಶಾಂತಿಯುತ ಜಗತ್ತನ್ನು ನಿರ್ಮಿಸಲು ನಾವು ಅಂತರರಾಷ್ಟ್ರೀಯ ಕಾನೂನನ್ನು ಬಲಪಡಿಸಬೇಕು ಮತ್ತು ಅದನ್ನು ಉಲ್ಲಂಘಿಸುವ ರಾಷ್ಟ್ರಗಳಿಗೆ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು.
* ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಬದಲು, ನಾವು ಸುಸ್ಥಿರ ನಗರಗಳನ್ನು ನಿರ್ಮಿಸಬೇಕು.
* ಕ್ಷಿಪಣಿಗಳನ್ನು ಉಡಾಯಿಸುವ ಬದಲು, ನಾವು ಶುದ್ಧ ಇಂಧನಕ್ಕಾಗಿ ಉಪಕ್ರಮಗಳನ್ನು ಪ್ರಾರಂಭಿಸಬೇಕು.
* ಪ್ರಚಾರದ ಮೂಲಕ ದ್ವೇಷವನ್ನು ಹೆಚ್ಚಿಸುವ ಬದಲು, ನಾವು ಶಿಕ್ಷಣದ ಮೂಲಕ ಸಹಾನುಭೂತಿಯನ್ನು ಹೆಚ್ಚಿಸಲು ಆದ್ಯತೆ ನೀಡಬೇಕು.
ಶಿಕ್ಷಣ ಮತ್ತು ಆರ್ಥಿಕ ಅವಕಾಶವು ಆಮೂಲಾಗ್ರ ಮತ್ತು ಹಿಂಸಾಚಾರಕ್ಕೆ ಅತ್ಯಂತ ಶಕ್ತಿಶಾಲಿ ನಿರೋಧಕಗಳಾಗಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ನನ್ನ ಧ್ವನಿ ಎಷ್ಟೇ ಚಿಕ್ಕದಾಗಿದ್ದರೂ, ನಾನು ಧ್ವನಿ ಎತ್ತುರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮುನ್ನಡೆಯುವುದನ್ನು ಬಯಸುತ್ತೇನೆ. ಅಧಿಕಾರದ ವೇದಿಕೆಯಿಂದಲ್ಲ, ಆದರೆ ತತ್ವದ ವೇದಿಕೆಯಿಂದ. ಇದೀಗ ಶಾಂತಿಗಾಗಿ ಸ್ವಯಂಸೇವಕರು ಮುಂದಾಗಬೇಕು. ಅಂತರ ಸಾಂಸ್ಕೃತಿಕ ಮತ್ತು ಅಂತರ ಧರ್ಮ ಸಂವಾದವನ್ನು ಉತ್ತೇಜಿಸಬೇಕು. ಯುದ್ಧದ ನಿಜವಾದ ಬೆಲೆ ಮತ್ತು ಜೀವನದ ಮೌಲ್ಯದ ಬಗ್ಗೆ ಇತರರಿಗೆ ಶಿಕ್ಷಣ ನೀಡಬೇಕಾಗಿದೆ. ನಿಷ್ಕ್ರಿಯ ವೀಕ್ಷಕರಾಗಿರುವುದಕ್ಕಿಂತ ಸಕ್ರಿಯ ಶಾಂತಿ ನಿರ್ಮಾಣಕಾರರಾಗಿ ಬದಲಾಗೋಣ.
ಶಾಂತಿಯು ಯುದ್ಧಗಳ ನಡುವಿನ ವಿರಾಮವಲ್ಲ, ಬದಲಾಗಿ ಶಾಶ್ವತ ಅಡಿಪಾಯವಾಗಿರುವ ಜಗತ್ತನ್ನು ನಿರ್ಮಿಸುವುದು ನಮ್ಮ ಮಕ್ಕಳ ಮತ್ತು ಭವಿಷ್ಯದ ಪೀಳಿಗೆಯ ಜವಾಬ್ದಾರಿಯಾಗಿದೆ. ದ್ವೇಷವನ್ನು ಬದಲಾಯಿಸುವ ಸಹಾನುಭೂತಿ ಮತ್ತು ಭಯವನ್ನು ಬದಲಾಯಿಸುವ ತಿಳುವಳಿಕೆ ಇರುವ ಜಗತ್ತನ್ನು ಒಟ್ಟಿಗೆ ರಚಿಸಲು ಕೈ ಮತ್ತು ಹೃದಯಗಳನ್ನು ಸೇರಿಸೋಣ.

ಸಿ.ಎ ಡಾ. ವಿಷ್ಣು ಭರತ್ ಅಲಂಪಳ್ಳಿ
9880701701

ಪ್ರಖ್ಯಾತ ನೃತ್ಯ ವಿದುಷಿ ಉಷಾ ಬಸಪ್ಪ ಅವರಿಗೆ ಗೌರವಾರ್ಪಣೆ 

29ರಂದು ನೃತ್ಯಾಭಿವಂದನೆ

#  ಪ್ರಖ್ಯಾತ ನೃತ್ಯ ವಿದುಷಿ ಉಷಾ ಬಸಪ್ಪ ಅವರಿಗೆ ಗೌರವಾರ್ಪಣೆ ಸಂಭ್ರಮ ಸಂಸ್ಥೆ ಆಯೋಜನೆ

ಬೆಂಗಳೂರು : ಹಿರಿಯ ನೃತ್ಯ ವಿದುಷಿ ಉಷಾ ಬಸಪ್ಪ ಅವರಿಗೆ ನಗರದ ಸಂಭ್ರಮ ಸಂಸ್ಥೆ ಜೂನ್ 29ರಂದು ನೃತ್ಯಾಭಿವಂದನೆ ಕಾರ್ಯಕ್ರಮದ ಮೂಲಕ ಗೌರವ ಸಮರ್ಪಣೆ ಮಾಡಲಿದೆ.  ಅಂದು ಸಂಜೆ 4 ಗಂಟೆಗೆ ನಗರದ ಜೆಸಿ ರಸ್ತೆಯ ನಯನ ಸಭಾಂಗಣ ಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಶ್ರೀ ಕೆ.ಎ. ದಯಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾತ. ಚಿಕ್ಕಣ್ಣ, ಸಂಗೀತ ವಿದುಷಿ ಕೆ. ಎಂ. ಕುಸುಮ, ಹಿರಿಯ ಮೃದಂಗ ವಿದ್ವಾಂಸ ಎಸ್. ವಿ. ಗಿರಿಧರ ಆಗಮಿಸಲಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಅವರು ಉಷಾ ಬಸಪ್ಪ ಅವರಿಗೆ ಅಭಿನಂದನೆಗಳನ್ನು ಸಮರ್ಪಿಸಲಿದ್ದಾರೆ.
ನಂತರ ವಿವಿಧ ಸಂಘ ಸಂಸ್ಥೆಗಳ ಕಲಾವಿದರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಕಲಾಸಕ್ತರು ಭಾಗವಹಿಸಬೇಕು ಎಂದು ಸಂಭ್ರಮ ಸಂಸ್ಥೆ ವಿನಂತಿಸಿದೆ.

ಜೂನ್ 27ರಿಂದ 29ರವರೆಗೆ ಅರಮನೆ ಮೈದಾನದಲ್ಲಿ ಪೋಟೋ ಟುಡೇ   ವಸ್ತು ಪ್ರದರ್ಶನ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇನ್ ಟ್ರಾಕ್ಟನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಸಹಯೋಗದಲ್ಲಿ ಜೂನ್ 27ರಿಂದ 29ರವರಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪೋಟೋ ಟುಡೇ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಇದರ ಕುರಿತು ಮಾಧ್ಯಮಗೋಷ್ಟಿ.

ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಕೃಷ್ಣಪ್ಪ, ಕರ್ನಾಟಕಪೋಟ್ ಆಂಡ್ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷರಾದ  ಬೆಂಜಮಿನ್, ಕಾರ್ಯದರ್ಶಿ ಜಗದೀಶ್, ಕರ್ನಾಟಕ ಪತ್ರಿಕಾ ಛಾಯಗ್ರಾಹಕರ ಸಂಘದ ಅಧ್ಯಕ್ಷ ವಿಶ್ವೇಶ್ವರಪ್ಪರವರು ಭಾಗವಹಿಸಿದ್ದರು.

ಕೃಷ್ಣಪ್ಪರವರು ಮಾತನಾಡಿ 25ವರ್ಷ ಸಂಭ್ರಮಾಚರಣೆ ಅಚರಿಸಲಾಗುತ್ತಿದೆ.ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ. ವಿಡಿಯೊ ಕ್ಯಾಮರ ಮತ್ತು ಕ್ಯಾಮರಗಳ ಕುರಿತು ಮಾಹಿತಿ ಮತ್ತು ಕ್ಯಾಮರ ಸಮಗ್ರ ಮಾಹಿತಿ ನೀಡಲಾಗುತ್ತದೆ.  ಕ್ಯಾಮರಗಳ ಮಹತ್ವ ಮತ್ತು ಅದನ್ನ ಬಳಕೆ ಮಾಡುವ ಕುರಿತು ಕ್ಯಾಮರ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಗುವುದು. 250ಕ್ಕೂ ಮಳಿಗೆಗಳು ಇರುತ್ತದೆ.

ಸಾರ್ವಜನಿಕರು ಮತ್ತು ವಿಡಿಯೊ ಮತ್ತು ಕ್ಯಾಮರ ಬಳಕೆದಾರರು ಮತ್ತು ವಿಡಿಯೊ, ಕ್ಯಾಮರದಲ್ಲಿ ಉದ್ಯಮದಲ್ಲಿ ಇರುವ ಮತ್ತು ವಿಡಿಯೊಗ್ರಾಫರ್, ಪೋಟೋಗ್ರಾಫರ್ ಗಳು ಇದರ ಅವಕಾಶ ಪಡೆಯಬಹುದು. ಕ್ಯಾಮರದಲ್ಲಿ ದಿನದಿಂದ ಹೊಸ ತಂತ್ರಜ್ಞಾನ ಬರುತ್ತಿದೆ ಹಾಗೂ ಕ್ಯಾಮರದಲ್ಲಿ ಅದ್ಬುತ ಬದಲಾವಣೆ ಬರುತ್ತಿದೆ ಇದರ ಮಾಹಿತಿ ಪಡೆಯಬಹುದು.

ರಾಜ್ಯ ಸಚಿವರಾದ ಸಂತೋಷ್ ಲಾಡ್ ರವರು, ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ  ಅಬ್ಬಯ್ಯಪ್ರಸಾದರವರು  ಉದ್ಘಾಟನೆ ಕಾರ್ಯಕ್ರಮ ಮತ್ತು ಪತ್ರಿಕಾ ಛಾಯಗ್ರಾಹಕರು, ಛಾಯಗ್ರಾಹಕರು ಮತ್ತು ಮಹಿಳಾ ಛಾಯಗ್ರಾಹಕರು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ-2025 ಉತ್ತಮ ನೌಕರ ಪ್ರಶಸ್ತಿ ಸಾಯಿಶಂಕರ್ ಆಯ್ಕೆ

ನಾಡಪ್ರಭು ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಬಿಬಿಎಂಪಿ ವತಿಯಿಂದ ಉತ್ತಮ ನೌಕರ ನಾಡಪ್ರಭು ಕೆಂಪಪೇಗೌಡ ಪ್ರಶಸ್ತಿ-2025ರ ಸಾಲಿನಲ್ಲಿ ಬಿಬಿಎಂಪಿ ಕಂದಾಯ ಮೌಲ್ಯಮಾಪಕರಾದ ಸಾಯಿಶಂಕರ್ ರವರಿಗೆ ಲಭಿಸಿದೆ.

ಸಾಯಿಶಂಕರ್ ರವರು ಕಳೆದ ಮೂವತ್ತು ಹೆಚ್ಚು ವರ್ಷಗಳಿಂದ ಬಿಬಿಎಂಪಿ ಕಂದಾಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಬಿಎಂಪಿ ಕನ್ನಡ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಪರಿಷತ್ ನಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರ ಜೊತೆಯಲ್ಲಿ ಸಂಘಟನೆ, ಹೋರಾಟಗಳಲ್ಲಿ ಸಾಯಿಶಂಕರ್ ಸದಾ ಜೊತೆಯಲ್ಲಿ ಅಪ್ತ ಮಿತ್ರರಂತೆ ನಿಂತಿದ್ದಾರೆ.

ಅಪಾರ ದೈವ ಭಕ್ತ ಸಾಯಿಶಂಕರ್ ರವರು ಬಿಬಿಎಂಪಿ ಕೇಂದ್ರ ಕಛೇರಿ ನೌಕರರ ಭವನ ಎದುರು ಇರುವ ಆಂಜನೇಯ, ಗಣೇಶ ದೇವರುಗಳಿಗೆ ನಿತ್ಯಾ ಅಭಿಷೇಕ, ಪೂಜೆ ಮಾಡಿ ನಂತರ ಬಿಬಿಎಂಪಿ ಕರ್ತವ್ಯಕ್ಕೆ ತೆರಳುತ್ತಾರೆ.

2025ನೇ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಉತ್ತಮ ನೌಕರ ಪ್ರಶಸ್ತಿ ಲಭಿಸಿರುವುದಕ್ಕೆ ಸಂಘವು ಹೃತ್ವೂರ್ವಕವಾಗಿ ಅಭನಂದಿಸುತ್ತಿದೆ.