Home Blog Page 69

“ಅಂತಾರಾಷ್ಟಿಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ”

ದಿನಾಂಕ:26/06/2025 ರಂದು ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಬೆಂಗಳೂರು ನಗರ ಪೊಲೀಸ್ ವತಿಯಿಂದ “ಅಂತರರಾಷ್ಟಿçಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ” ಯನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವರಾದ ಡಾ:ಜಿ.ಪರಮೇಶ್ವರ ರವರು ಉದ್ಘಾಟಿಸಲಿದ್ದಾರೆ. ರಿಜ್ವಾನ್ ಅರ್ಷದ್, ಮಾನ್ಯ ಶಾಸಕರು, ಶಿವಾಜಿನಗರ ವಿಧಾನಸಭಾ ಕ್ಷೇತ್ರ ರವರು ಅಧ್ಯಕ್ಷತೆಯನ್ನು ವಹಿಸುತ್ತಾರೆ. ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕ ಎಂ.ಎ.ಸಲೀ0, ಐ.ಪಿ.ಎಸ್ ರವರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು, ಗಣ್ಯರು, ತಜ್ಞರು ಮತ್ತು ಹಲವಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.
ಅದೇ ದಿನ ಮಾನ್ಯ ಗೃಹ ಮಂತ್ರಿಗಳಿAದ ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಗೊಳಿಸುವ ಬಗ್ಗೆ ಪ್ರಾತ್ಯಕ್ಷಿಕ ಹಾಗೂ ಕ್ಯೂಆರ್ ಕೋಡ್ ಬಿಡುಗಡೆ ಮತ್ತು ಪ್ರತಿಜ್ಞೆ ವಿಧಿಯನ್ನು ಬೋಧಿಸಲಿದ್ದಾರೆ.

ರೆಬೆಲ್ ಶಾಸಕರ ಅಬ್ಬರ: ಸಿಎಂ ಮೇಲೆ ಹೈಕಮಾಂಡ್ ಪ್ರಹಾರ

ನವದೆಹಲಿ: ಸಿಎಂ ಸಿದ್ದರಾಮಯ್ಯ ಅವರ ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಮೊದಲ ದಿನ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರಪತಿ ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ, ಸಿಎಂ ಗೆ ಹೈಕಮಾಂಡ್ ಖಡಕ್ ಸೂಚನೆಗಳನ್ನು ನೀಡಿದ್ದಾರೆ,
ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೀತಾ ಬಂತು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಎಂಬ ಮಾತು ವಿಪಕ್ಷಗಳಿಂದ ಕೇಳಿಬರ್ತಿರುವ ಆರೋಪ, ಅದಕ್ಕೆ ಪುಷ್ಟಿ ನೀಡುವಂತೆ ಸ್ವಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ, ಇದರ ಬೆನ್ನಲ್ಲೇ ದೆಹಲಿ ತಲುಪಿರೋ ಸಿಎಂ ಸಿದ್ದರಾಮಯ್ಯ, ಅತೃಪ್ತ ಶಾಸಕರನ್ನು ಮನವೊಲಿಸುವ ಜೊತೆಗೆ ವಿಶೇಷ ಅನುದಾನ ತರುವ ಹೆಜ್ಜೆ ಇರಿಸಿದ್ದಾರೆ,
ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಕಳೀತಾ ಬಂದ್ರೂ ಇನ್ನು ಟೇಕಾಫ್ ಆಗ್ತಾನೇ ಇದೆ, ಸರ್ಕಾರದ ವಿರುದ್ಧ ಸ್ಪಪಕ್ಷೀಯ ಶಾಸಕರೇ ಸಿಡಿದೆದ್ದಿದ್ದಾರೆ, ಒಬ್ಬರಾದ ಮೇಲೆ ಒಬ್ಬರಂತೆ ಕ್ಷೇತ್ರಗಳಿಗೆ ಅನುದಾನಕ್ಕಾಗಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕ್ತಿದ್ದಾರೆ, ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿ ಮಾಡಿ ಚರ್ಚಿಸಿದ್ದಾರೆ, ಸರ್ಕಾರದ ಅಸಮಧಾನಿತರನ್ನು ಕರೆದು ಮಾತನಾಡುವಂತೆ ಸಿಎಂ ಗೆ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ,
ಪ್ಲಾನ್ ಬಿ ಸಿದ್ಧಪಡಿಸಿದ್ದಾರೆ ಸಿದ್ದರಾಮಯ್ಯ
ಮೂರ್ನಾಲ್ಕು ದಿನದಿಂದ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಿಸುತ್ತಿದೆ, ಒಂದು ಕಡೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ಬಂಡೆದ್ದಿದ್ದರೆ, ಇನ್ನೊಂದು ಕಡೆ ಸರ್ಕಾರದ ಹಗರಣಗಳನ್ನು ಸ್ವತಃ ಕೈ ಶಾಸಕರೇ ಬಯಲಿಗೆಳೆದು ಸಿದ್ದು ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ, ಸಿದ್ದರಾಮಯ್ಯ ಕರೆದು ಮಾತಾಡುತ್ತೇನೆ ಎಂದು ಹೇಳಿದ್ರೂ ಕೂಡ ಶಾಸಕರು ಬಾಯಿ ಮುಚ್ಚಿಲ್ಲ, ಎಲ್ಲ ಶಾಸಕರು ಒಮ್ಮಲೇ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ,
ಪರಿಸ್ಧಿತಿ ಹತೋಟಿಗೆ ಸಿಗದೇ ಮುನ್ನುಗ್ಗುತ್ತಿರುವಾಗ ಸಿಎಂ ಸಿದ್ದರಾಮಯ್ಯ ದಿಢೀರ್ ದಿಲ್ಲಿ ಫ್ಲೈಟ್ ಹತ್ತಿದ್ದಾರೆ, ಹೈಕಮಾಂಡ್ ಚಾಟಿ ಬೀಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅತೃಪ್ತ ಶಾಸಕರ ಮನವೊಲಿಕೆ ಗೆ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ
ಜುಲೈ ತಿಂಗಳಲ್ಲಿ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಸಿಎಂ ನಿರ್ಧರಿಸಿದ್ದಾರಂತೆ

ಕಿರು ಹೊತ್ತಿಗೆಗಳ ಬರವಣಿಗೆಗೆ ಆಹ್ವಾನ – ಲೇಖಕರಿಗೆ ವಿಶಿಷ್ಟ ಅವಕಾಶ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ತನ್ನ ಪ್ರಸ್ತುತ ಸಾಲಿನ ಯೋಜನೆಯಲ್ಲಿ ಬಂಜಾರ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ದಾಖಲಿಸಲು ಉದ್ದೇಶಿಸಿರುವ ಮಹತ್ವದ ಯೋಜನೆಯ ಭಾಗವಾಗಿ, ಕನಿಷ್ಠ 25 ಪುಟಗಳ 100 ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಕೃತಿಗಳನ್ನು ಪ್ರಕಟಣೆ ಮಾಡಲು ಬಂಜಾರ ಅಕಾಡೆಮಿ ನಿರ್ಧರಿಸಿದೆ.

ಆರಂಭಿಕ ಹಂತದಲ್ಲಿ,  ಆಯ್ಕೆ ಸಮಿತಿಯ ಶಿಫಾರಸ್ಸು ಮೇರೆಗೆ 50 ಕಿರು ಹೊತ್ತಿಗೆಗಳ ರಚನೆಗಾಗಿ ಲೇಖಕರನ್ನು ಆಯ್ಕೆ ಮಾಡಲಾಗುವುದು.

ಈ ಯೋಜನೆಯ ಅಡಿಯಲ್ಲಿ ಲೇಖಕರು ತಮ್ಮ ಕೃತಿಗಳನ್ನು ಈ ಕೆಳಗಿನ ಪ್ರಮುಖ ವಿಷಯಗಳಲ್ಲಿ ರಚಿಸಬಹುದು:

  • ಬಂಜಾರ ಕಲಾ ಪರಂಪರೆ.
  • ಬಂಜಾರ ಭಾಷೆ ಮತ್ತು ಸಾಹಿತ್ಯ ಮೌಖಿಕ ಸಾಹಿತ್ಯ.
  • ಬಂಜಾರ ಜನಜೀವನ ಮತ್ತು ಸಂಪ್ರದಾಯಗಳು, ಆಚರಣೆಗಳು, ಹಬ್ಬಗಳು ಇತರೆ.
  • ಬಂಜಾರ ಸಮುದಾಯದ ಹಿರಿಯ ಸಾಧಕರು, ಸಾಹಿತಿಗಳು, ಕಲಾವಿದರು ಹಾಗೂ ತಜ್ಞರು, ರಾಷ್ಟ್ರ-ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು.
  • ಬಂಜಾರ ಹೋರಾಟಗಾರರು ಮತ್ತು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಪ್ರಮುಖ ಮುಖಂಡರು.
  • ಬಂಜಾರ ಪ್ರಮುಖ ಶ್ರದ್ಧಾ ಕೇಂದ್ರಗಳು.
  • ಬಂಜಾರ ಐತಿಹಾಸಿಕ ತಾಣಗಳು.
  • ಬಂಜಾರ ಸಮಾಜಶಾಸ್ತ್ರ,
  • ಬಂಜಾರ ಶಿಕ್ಷಣ.
  • ಬಂಜಾರ ನೃತ್ಯ,
  • ಬಂಜಾರ ಸಂಗೀತ,
  • ಬಂಜಾರ ನಾಟಕಗಳು ಹಾಗೂ ಪ್ರಯೋಗಗಳು ಮೊದಲಾದ ಕ್ಷೇತ್ರಗಳು.

ಈ ಅಕಾಡೆಮಿಯ ಮಹತ್ವದ ಕೆಲಸದಲ್ಲಿ ಲೇಖಕರು ಕೈಜೋಡಿಸಿ ಭಾಗವಹಿಸಲು ಕೋರುತ್ತೇನೆ. ಆಸಕ್ತ ಬಂಜಾರ ಹಾಗೂ ಇತರೆ ಲೇಖಕರು ತಮ್ಮ ಕೃತಿಗಳ ಶೀರ್ಷಿಕೆಗಳ, ಸಾರಾಲೇಖ ಹಾಗೂ ಸ್ವವಿವರಗಳನ್ನು ದಿನಾಂಕ:19.07.2025 ರ ಒಳಗಾಗಿ ಬಂಜಾರ  ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕಚೇರಿಗೆ ನೊಂದಾಯಿಸಿಕೊಳ್ಳಲು ಅಥವಾ ಕಚೇರಿಗೆ ಖುದ್ದಾಗಿ ಅರ್ಚಿ ಸಲ್ಲಿಸಲು ಅಥವಾ ಅಂಚೆ, ಕೋರಿಯರ್‌ ಮೂಲಕ ಸ್ವವಿವರದೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ. ಯುವ ಬಂಜಾರ ಸಂಶೋಧಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಲೇಖಕರಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲಾಗುವುದು.

ವಿಳಾಸ: ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ , 1 ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002

ಹೆಚ್ಚಿನ ಮಾಹಿತಿಗಾಗಿ   :  080-29917745

ಜು.7 ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ವಿರುದ್ಧ ಅಸಮಾಧಾನಗೊಂಡಿರುವ ಮಹಾನಗರ ಪಾಲಿಕೆ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಜುಲೈ 7 ರಂದು ರಾಜ್ಯದ ಒಟ್ಟು 10 ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 70 ಸಾವಿರಕ್ಕೂ ಅಧಿಕ ಪಾಲಿಕೆ ನೌಕರರು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಇಲಾಖೆ ವಿರುದ್ಧ ಪ್ರತಿಭಟಿಸಲಿದ್ದಾರೆ, ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ ಈ ಪ್ರತಿಭಟನೆಗೆ ಕರೆ ನೀಡಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ,
ಮಹಾನಗರ ಪಾಲಿಕೆ ನೌಕರರ ಬೇಡಿಕೆಗಳೇನು?
ನಗರಾಭಿವೃದ್ಧಿ ಇಲಾಖೆಯ ಮುಂದೆ ಮಹಾನಗರ ಪಾಲಿಕೆ ನೌಕರರು ಕೆಲವು ಬೇಡಿಕೆಗಳನಿಟ್ಟಿದ್ದು, ಇಲಾಖೆ ಈವರೆಗೂ ಸ್ಪಂದಿಸಿಲ್ಲ, ಹೀಗಾಗಿ ಪ್ರತಿಭಟನೆಗೆ ಸಜ್ಜಾಗಿರುವ ಸಿಬ್ಬಂದಿಯ ಸದ್ಯದ ಬೇಡಿಕೆಗಳು ಈ ಕೆಳಗಿನಂತಿದೆ,
ಸರ್ಕಾರಿ ನೌಕರರಿಗೆ ನೀಡಲಾಗಿರುವ 7 ನೇ ವೇತನ ಆಯೋಗದ ಸೌಲಭ್ಯ ನೀಡಲು ಪಾಲಿಕೆಗಳ ಸಿಬ್ಬಂದಿಗೂ ಆರ್ಥಿಕ ಇಲಾಕೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು.
ವೇತನ ತಾರತಮ್ಯ ನಿವಾರಣೆ, ಸೇವಾ ಭದ್ರತೆ, ಖಾಲಿ ಹುದ್ದೆಗಳ ಭರ್ತಿ, ಆರೋಗ್ಯ ಸೌಲಭ್ಯಗಳು ಮತ್ತು ನಿವೃತ್ತಿ ನಂತರದ ಸೌಲಭ್ಯಗಳನ್ನು ಒದಗಿಸಬೇಕು,
ನೇಮಕಾತಿ ನಿಯಮಾವಳಿಗಲ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ,

ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ: ತುರ್ತು ಪರಿಸ್ಥಿತಿ ಕರಾಳತೆ ನೆನೆದು ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ: ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ ಎಂದು ಇಂದಿರಾ ಗಾಂಧಿ ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭ ನೆನಪಿಸಿಕೊಂಡು ಪ್ರಧಾನಿ ಮೋದಿ (PM Modi) ವಾಗ್ದಾಳಿ ನಡೆಸಿದ್ದಾರೆ  ದೇಶದಲ್ಲಿ ತುರ್ತು ಪರಿಸ್ಥಿತಿ (Emergency) ಹೇರಿ ಇಂದಿಗೆ 50 ವರ್ಷ. ಪ್ರಧಾನಿ ನರೇಂದ್ರ ಮೋದಿ ಆ ವರ್ಷಗಳಲ್ಲಿನ ತಮ್ಮ ಅನುಭವ ಮತ್ತು ನಾಯಕನಾಗಿ ಅವರನ್ನು ಹೇಗೆ ರೂಪಿಸಿತು ಎಂಬುದನ್ನು ವಿವರಿಸುವ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಸ್ತುತಪಡಿಸಿದ ‘ದಿ ಎಮರ್ಜೆನ್ಸಿ ಡೈರೀಸ್’ನಲ್ಲಿ ಉಲ್ಲೇಖವಾಗಿದೆ.

ಮೋದಿ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ ದಿನವನ್ನು ಸಂವಿಧಾನ ಹತ್ಯೆ ದಿವಸ್ ಎಂದು ಆಚರಿಸುತ್ತಾರೆ. ಈ ದಿನದಂದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗಿಡಲಾಯಿತು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ಅಳಿಸಿಹಾಕಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಬಂಧನದಲ್ಲಿ ಇರಿಸಿದಂತೆ ಇತ್ತು!

ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನಾವು ನಮಸ್ಕರಿಸುತ್ತೇವೆ! ಭಾರತದಾದ್ಯಂತ, ಎಲ್ಲಾ ಹಂತಗಳಿಂದ, ವೈವಿಧ್ಯಮಯ ಸಿದ್ಧಾಂತಗಳಿಂದ ಬಂದ ಜನರು ಇವರು, ಒಂದೇ ಗುರಿಯೊಂದಿಗೆ ಪರಸ್ಪರ ನಿಕಟವಾಗಿ ಕೆಲಸ ಮಾಡಿದರು. ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸುವುದು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಸಂರಕ್ಷಿಸುವುದು. ಆಗಿನ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮತ್ತು ಹೊಸ ಚುನಾವಣೆಗಳಿಗೆ ಕರೆ ನೀಡಬೇಕಾಗಿತ್ತು ಎಂದು ಖಚಿತಪಡಿಸಿದ್ದು ಅವರ ಸಾಮೂಹಿಕ ಹೋರಾಟ, ಆದರೆ ಅವರು ಅದನ್ನು ತೀವ್ರವಾಗಿ ಸೋತರು./

ನಮ್ಮ ಸಂವಿಧಾನದಲ್ಲಿನ ತತ್ವಗಳನ್ನು ಬಲಪಡಿಸುವ ಮತ್ತು ವಿಕಸಿತ ಭಾರತದ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ನಾವು ಪ್ರಗತಿಯ ಹೊಸ ಎತ್ತರವನ್ನು ಏರೋಣ ಮತ್ತು ಬಡವರು ಮತ್ತು ದೀನದಲಿತರ ಕನಸುಗಳನ್ನು ನನಸಾಗಿಸೋಣ.

ಮನಸೂರೆಗೊಂಡ ಗೋಪಾಲನ್ ಮಾಲ್ಸ್ ನಲ್ಲಿ “ನೆರೆಹೋರೆ ಪ್ರತಿಭೆ ಪ್ರದರ್ಶನ

ಬೆಂಗಳೂರು: ಗೋಪಾಲನ್ ಮಾಲ್ಸ್ “ನೆರೆಹೋರೆ ಪ್ರತಿಭೆ ಪ್ರದರ್ಶನ”ದ ಗ್ರ್ಯಾಂಡ್ ಫಿನಾಲೆಯನ್ನು ಸ್ಥಳೀಯ ಪ್ರತಿಭೆಗಳ ಅದ್ಭುತ ಪ್ರದರ್ಶನದೊಂದಿಗೆ ಆಚರಿಸಲಾಯಿತು.

ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ಮಾಲ್‌ನಲ್ಲಿ ಬೆಂಗಳೂರಿನ ವಸತಿ ಸಮುದಾಯಗಳ ಸ್ಥಳೀಯರ ಪ್ರದರ್ಶನ ಕಲೆಗಳ ಪ್ರತಿಭೆಯನ್ನು ಗುರುತಿಸುವಾ ಸಲುವಾಗಿ ಈ ಕಾರ್ಯಕ್ರಮವು ಆಚರಿಸಿತು. ಗ್ರ್ಯಾಂಡ್ ಫಿನಾಲೆಯಲ್ಲಿ  ನೃತ್ಯ, ಸಂಗೀತ, ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಒಳಗೊಂಡ ಡ್ಯಾಂಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಗೋಪಾಲನ್ ಎಂಟರ್‌ಪ್ರೈಸಸ್‌ನ ನಿರ್ದೇಶಕ ಸಿ. ಪ್ರಭಾಕರ್, “ಈ ಕಾರ್ಯಕ್ರಮವು ನಮ್ಮ ಸಮುದಾಯಗಳಲ್ಲಿನ ಅಸಾಧಾರಣ ಪ್ರತಿಭೆಯನ್ನು ಎತ್ತಿ ತೋರಿಸಿದೆ. ಇದು ಪ್ರತಿಭಾ ಪ್ರದರ್ಶನಕ್ಕಿಂತ ಹೆಚ್ಚಿನದು – ಇದು ನಮ್ಮ ಸಾಂಸ್ಕೃತಿಕ ಏಕತೆಯ ಆಚರಣೆಯಾಗಿದೆ. ಇದನ್ನು ಸ್ಫೂರ್ತಿ ಮತ್ತು ಸಂಪರ್ಕ ಸಾಧಿಸುವ ವಾರ್ಷಿಕ ಸಂಪ್ರದಾಯವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.

ಉಪಕ್ರಮವು ಮಕ್ಕಳಿಂದ ಹಿರಿಯ ನಾಗರಿಕರವರೆಗೆ 400 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ – ಶಾಸ್ತ್ರೀಯ/ಸಮಕಾಲೀನ ನೃತ್ಯ, ಗಾಯನ/ವಾದ್ಯ ಸಂಗೀತ, ಜಾನಪದ ಕಾರ್ಯಗಳು ಮತ್ತು ಸಮರ ಕಲೆಗಳಂತಹ ವಿಭಾಗಗಳಲ್ಲಿ ಪ್ರದರ್ಶನ ನೀಡಿದ್ದರು. 12 ಸಮುದಾಯಗಳಲ್ಲಿ ನಡೆದ ಪ್ರಾಥಮಿಕ ಸುತ್ತಿನಲ್ಲಿ 1,000 ಕ್ಕೂ ಹೆಚ್ಚು ಜನರು , 10,000+ ನಿವಾಸಿಗಳು ಭಾಗವಹಿಸಿದ್ದರು.

ನಟ ಕಾರ್ತಿಕ್ ವರ್ಣೇಕರ್,ಹಿರಿಯ ಭರತನಾಟ್ಯ ಕಲಾವಿದೆ ಪದ್ಮಶ್ರೀ ಪ್ರಸಾದ್ ಹೊಳ್ಳ , ವಿಧುಷಿ ಶೋಭಾ ಭಟ್ ಮತ್ತು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ತೀರ್ಪುಗಾರರಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರತಿಭೆ ಮತ್ತು ಸ್ಪೂರ್ತಿಯನ್ನು ಶ್ಲಾಘಿಸಿದರು.

ತುರ್ತು ಪರಿಸ್ಧಿತಯ ಕರಾಳ ದಿನಗಳ ಸ್ನರಣೆ- ದಿ ಎಮೆರ್ಜೆನ್ಸಿ ಡೈರೀಸ್ ಕೃತಿ ಬಿಡುಗಡೆ ಮಾಡಲಿರುವ ಅಮಿತ್ ಶಾ!
ನವದೆಹಲಿ: ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಧಿತಿಗೆ ಇಂದು 50 ವರ್ಷ, ಈ ದಿನವನ್ನು ದೇಶ ಕಂಡ ಕರಾಳ ಇತಿಹಾಸ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ತುರ್ತು ಪರಿಸ್ಧಿತಿ ಘೋಷಿಸಿ ಇಂದಿಗೆ 50 ವರ್ಷ ಆಗಿರುವ ಹಿನ್ನೆಲೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದಟ್ ಫೋಜ್ರ್ಡ್ ಎ ಲೀಡರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ,
1975 ರ ಜೂನ್ 25 ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಆಘಾತಕಾರಿ ತುರ್ತು ಪರಿಸ್ಧಿತಿಯನ್ನು ಘೋಷಣೆ ಮಾಡಿದ್ದರು, ಅದು ನಾಗರಿಕ ಸ್ವಾತಂತ್ರ್ಯಗಳನ್ನು ಸ್ಧಗಿತಗೊಳಿಸಲಾಯಿತು, ಪತ್ರಿಕಾ ಸೆನ್ಸಾರ್ ಮಾಡಲಾಯಿತು ಮತ್ತು ರಾಜಕೀಯ ವಿರೋಧಿಗಳನ್ನು ಸಾಮೂಹಿಕವಾಗಿ ಬಂಧಿಸಲಾಯಿತು, ಭಾರತವು ರಾತ್ರೋ ರಾತ್ರಿ ಪೊಲೀಸ್ ರಾಜ್ಯವಾಗಿ ರೂಪಾಂತರಗೊಂಡಿತು, ಭಯ ಮತ್ತು ಅನಿಶ್ಚಿತತೆಯಿಂದ ಆವೃತವಾಗಿತ್ತು,
ಈ ಪುಸ್ತಕದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವಿಶೇಷ ಮುನ್ನುಡಿಯಿದೆ, ಈ ಪುಸ್ತಕವು ಅಂದು ತುರ್ತು ಪರಿಸ್ದಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಹಾಘೂ ಯುವ ಆರ್‍ಎಸ್‍ಎಸ್ ಪ್ರಚಾರಕರಾಗಿದ್ದ ಪ್ರಧಾನಿ ನರೇಂದ್ರ ಮೋದಿ ವಹಿಸಿದ ಪ್ರಭಾವಶಾಲಿ ಪಾತ್ರವನ್ನು ತಿಳಿಸುತ್ತದೆ, ಈಶಾನ್ಯ ಭಾರತದಲ್ಲಿ ತುರ್ತು ಪರಿಸ್ಧಿತಿಗೆ ಆರ್‍ಎಸ್‍ಎಸ್ ನ ಪ್ರತಿರೋಧದ ಹೇಳಲಾಗದ ಕಥೆಯನ್ನು ವಿವರಿಸುತ್ತದೆ,

ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ-ಕೆಪಿಟಿಸಿಎಲ್ ನಿಂದ ಮಾಹಿತಿ

ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ-ಕೆಪಿಟಿಸಿಎಲ್ ನಿಂದ ಮಾಹಿತಿ
ಬೆಂಗಳೂರು; ಇಂದು ಮತ್ತು ನಾಳೆ ಜೂ.25 & ಜೂ.26 ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವ ಕಾರಣ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ,

ಜೂನ್ 25 ರ ಬುಧವಾರ
ಕೋರಮಂಗಲ ವಿಭಾಗದ 66/11 ಕೆವಿ ಆಸ್ಪಿನ್ ಟೌನ್ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ ಹೀಗಾಗಿ ಪಾಮ್ ಗ್ರೂವ್ ರೋಡ್, ಬಾಲಜಿ ಥಿಯೇಟರ್, ವಿಕ್ಟೋರಿಯಾ ಲೇಔಟ್, ವಿವೇಕನಗರ, ರಿಚ್ಮಂಡ್ ರೋಡ್, ಆಸ್ಟಿನ್ ಟೌನ್, ಆಂಜನೇಯ ಟೆಂಪಲ್ ಸ್ಟ್ರೀಟ್, ನೀಲಸಂದ್ರ, ರೋಸ್ ಗಾರ್ಡನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ,
ಇನ್ನು ಮತ್ತೊಂದೆಡೆ ಆಡುಗೋಡಿ & ಆಸ್ಟಿನ್ ಟೌನ್ ಉಪಕೇಂದ್ರದ ನಿರ್ವಹಣೆ ಕೂಡ ನಡೆಯಲಿದ್ದು ಆಡುಗೋಟಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ರಿಚ್ಮಂಡ್ ಸರ್ಕಲ್, ಜಾನ್ಸನ್ ಮಾರ್ಕೆಟ್, ನಾರೀಸ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ,
ಇನ್ನು ನಾಳೆ ಜೂನ್ 26 ರಂದು
ಬೆಂಗಳೂರು ಉತ್ತರ ವೃತ್ತದ 66/11ಕೆವಿ ಎಲ್‍ಆರ್ ಬಂಡೆ ಮತ್ತು ರಾಜನಕುಂಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ವಿದ್ಯುತ್ತ ಕಡಿತವಾಗಲಿದೆ, ಇದರಿಂದ ರಾಜನಕುಂಟೆ, ಹೊನ್ನೇನಹಳ್ಳಿ ಸಿಂಗನಾಯಕನಹಳ್ಳಿ ಕಾವೇರಿ ನಗರ, ಸುಲ್ತಾನ್ ಪಾಳ್ಯ, ಕೆ.ಜಿ. ಹಳ್ಳಿ, ಶಾಂಪುರ, ಕುಶಾಲನಗರ, ಮೋಡಿ ರಸ್ತೆ, ಸಕ್ಕರೆ ಮಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ,

ಫಸ್ಟ್ ಲವ್ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

ಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಇದೀಗ ಮತ್ತೊಂದು ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಧನುಷ್ ಜೊತೆ ನಟಿಸಿರುವ ಕುಬೇರ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಾಡಿಸಿದೆ. ಕೇವಲ ತಮಿಳಿನಲ್ಲಿ ಮಾತ್ರವಲ್ಲ, ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿ ಅಷ್ಟೂ ಕಡೆ ಗೆಲುವಿನ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಫಸ್ಟ್ ಲವ್ ಬಗ್ಗೆ ಮಾತಾಡಿದ್ದಾರೆ ರಶ್ಮಿಕಾ,

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದವರು ರಶ್ಮಿಕಾ, ಆ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದುಕೊಂಡೇ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಆ ಬಾಂಧವ್ಯ ತೀರಾ ದಿನ ಉಳಿಯಲಿಲ್ಲ. ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡು ಬೇರೆ ಚಿತ್ರರಂಗಕ್ಕೆ ಹಾರಿದ್ದರು ರಶ್ಮಿಕಾ. ಹಾಗಾಗಿ ಇವರ ಫಸ್ಟ್ ಲವ್ ಕಿರಿಕ್ ಪಾರ್ಟಿಯಿಂದ ಶುರುವಾಗಿತ್ತು ಎಂದೇ ನಂಬಲಾಗಿತ್ತು. ಅದು ಸುಳ್ಳು ಅಂದಿದ್ದಾರೆ ರಶ್ಮಿಕಾ ಮಂದಣ್ಣ.

ಫಸ್ಟ್ ಲವ್ ಬಗ್ಗೆ ಮಾತಾಡಿರುವ ರಶ್ಮಿಕಾ, ಶಾಲಾ ದಿನಗಳಲ್ಲೇ ಫಸ್ಟ್ ಲವ್ ಆಗಿತ್ತು. ಮೊದಲ ಪ್ರೇಮ ಪತ್ರವನ್ನು ಅಲ್ಲಿಯೇ ಸ್ವೀಕರಿಸಿದ್ದೆ ಎಂದಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಯಾವ ಕಾರನ್ನು ಖರೀದಿಸಿದೆ ಅಂತಾನೂ ಹೇಳಿದ್ದಾರೆ. ಈ ಮೂಲಕ ಫಸ್ಟ್ ಲವ್, ಫಸ್ಟ್ ಕಾರು ಬಗ್ಗೆ ಯಾವತ್ತಿಗೂ ಕ್ರೇಜ್ ಇರತ್ತೆ ಅಂತಾನೂ ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ಚರ್ಚೆ ಮಾಡಲು ಆಹ್ವಾನ ನೀಡಿದ ಚುನಾವಣಾ ಆಯೋಗ!

ನವದೆಹಲಿ: ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭ ಚುನಾವಣೆಯ ಕುರಿತು ಅಕ್ರಮ ನಡೆದಿರುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ್ ರಾಹುಲ್ ಗಾಂಧಿ ಗಂಭೀರ ಆರೋಪವನ್ನು ಮಾಡಿದ್ದರು, ಇದೀಗ ಅವರ ಆರೋಪಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಭಾರತದ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರನ್ನು ಚರ್ಚೆಗೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ,
ವರದಿಗಳ ಪ್ರಕಾರ ಜೂನ್ 12 ರಂದು ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಇಮೇಲ್ ಮೂಲಕ ಪತ್ರವನ್ನು ಕಳುಹಿಸಿದೆ, ಮಾತ್ರವಲ್ಲದೇ ಪತ್ರದ ಮೂಲಕ ಅವರ ನಿವಾಸಕ್ಕೂ ಕಳುಹಿಸಲಾಗಿದೆ,
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ರಾಹುಲ್ ಗಾಂಧಿ ಇತ್ತೀಚಿಗೆ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಎತ್ತಿದ್ದಾರೆ, ಅದರೆ ಈ ಆರೋಪಗಳನ್ನು ಇಸಿಐ ತಿರಸ್ಕರಿಸಿದೆ,