Home Blog Page 57

11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು 5 ವರ್ಷದೊಳಗೆ 493 ಕೋಟಿ ರೂ. ಬಿಡುಗಡೆ

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸುವÀ ಗುರಿ ಹೊಂದಿದ್ದು, 5 ವರ್ಷಗಳವರೆಗೆ ಇದಕ್ಕೆ ಒಟ್ಟು 493 ಕೋಟಿರೂ. ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೆಪೆಕ್ ಕೃಷಿ ಇಲಾಖೆ ಅಧೀನದಲ್ಲಿರುವ ಒಂದು ಪ್ರತಿಷ್ಠಿತ ಅಂಗ ಸಂಸ್ಥೆಯಾಗಿದ್ದು, ಕೃಷಿಕರು, ಕೃಷಿಕರ ಮಕ್ಕಳನ್ನು, ಜನ ಸಾಮಾನ್ಯರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸುವುದು ಇದರ ಗುರಿಯಾಗಿದೆ ಎಂದರು.

ಪಿ.ಎಂ.ಎಫ್.ಎಂ.ಇ. ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು ಅಸಂಘಟಿತ ವಲಯದಲ್ಲಿರುವ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪೆÇ್ರೀತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯು ವೈಯಕ್ತಿಕ ಆಹಾರ ಸಂಸ್ಕರಣಾ ಉದ್ಯಮಿಗಳು ಮತ್ತು ರೈತರ ಗುಂಪುಗಳು /ಎಫ್.ಪಿ.ಒ ಗಳಿಗೆ ಶೇ. 35 ರಷ್ಟು (60:40, ಅನುಪಾತ) ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ರಾಜ್ಯದ ಫಲಾನುಭವಿಗಳಿಗೆ ಹೆಚ್ಚು ಆಕರ್ಷಕವಾಗಿಸಲು ಕರ್ನಾಟಕ ಸರ್ಕಾರವು ಶೇ.15 ರಷ್ಟು ಹೆಚ್ಚುವರಿ ಟಾಪ್ ಅಪ್ ಸಬ್ಸಿಡಿಯನ್ನು ಒದಗಿಸಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,698 ಅರ್ಜಿಗಳಿಗೆ ಸಾಲ ಮಂಜೂರಾಗಿರುತ್ತದೆ. ಇದಕ್ಕೆ ಒಟ್ಟು ರೂ. 785.48 ಕೋಟಿಯಷ್ಟು ಬಂಡವಾಳ ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿರುತ್ತದೆ. 162.50 ಕೋಟಿ ರೂಪಾಯಿಗಳ ಸಹಾಯಧನವನ್ನು (60:40 ಅನುಪಾತದೊಂದಿಗೆ ಶೇ.35 ರಷ್ಟು) 4,489 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಮತ್ತು ಹೆಚ್ಚುವರಿ ಶೇ.15 ರಷ್ಟು ಟಾಪ್ ಅಪ್ ಸಬ್ಸಿಡಿಯನ್ನು 59.48 ರೂಪಾಯಿಗಳನ್ನು 3770 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಈ ಯೋಜನೆಯಡಿಯಲ್ಲಿ ಪ್ರಮುಖವಾಗಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರÀಸ್ಡ್ ಆಯಿಲ್, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕೋಳಿ ಮತ್ತು ಸಮುದ್ರ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಘಟಕಗಳ ಸ್ಥಾಪನೆಗಾಗಿ ಸಾಲವನ್ನು ಮಂಜೂರು ಮಾಡಲಾಗಿದೆ.

ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವ-ಸಹಾಯ ಸಂಘದ 11825 ಸದಸ್ಯರಿಗೆ 46.58 ಕೋಟಿಯಷ್ಟು ಬೀಜ ಬಂಡವಾಳದ ಬೆಂಬಲವನ್ನು ಸಣ್ಣ ಉಪಕರಣಗಳನ್ನು ಖರೀದಿಸಲು ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಬಿಡುಗಡೆ ಮಾಡಲಾಗಿದೆ. 5 ಬ್ರ್ಯಾಂಡಿಂಗ್ ಮಾರ್ಕೆಟಿಂಗ್ ಪ್ರಸ್ತಾವನೆಗಳಾದ ಕರ್ನಾಟಕ ರಾಜ್ಯ ದ್ವಿದಳಧಾನ್ಯಗಳ ಅಭಿವೃದ್ಧಿ ಮಂಡಳಿಯಿಂದ ಸಲ್ಲಿಸಲಾದ (ಬ್ರ್ಯಾಂಡ್-1) ‘BHIMA’ ಪಲ್ಸಸ್ ಬ್ರ್ಯಾಂಡ್,  ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಾವಯವ ಕೃಷಿಕರ ಸಹಕಾರ ಒಕ್ಕೂಟದಿಂದ (ಬ್ರಾಂಡ್-2) ‘SEEMI’ ಬ್ರಾಂಡ್,  ಕಾಫಿ ಬೋರ್ಡನ (ಬ್ರಾಂಡ್-3) ಇಂಡಿಯಾಕಾಫಿ ಬ್ರಾಂಡ್, (ಬ್ರಾಂಡ್-4) K.O.F.C “ಸಫಲ್” ಬ್ರಾಂಡ್, ನೆಲಸಿರಿ ಫಾರ್ಮ ಪೆÇ್ರೀಡ್ಯೂಸ್ ಕಂಪನಿ ಸಲ್ಲಿಸಿದ (ಬ್ರಾಂಡ್-5) ನೆಲಸಿರಿ ಬ್ರ್ಯಾಂಡ್ ಗಳನ್ನು ಕರ್ನಾಟಕಕ್ಕೆ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಅನುಮೋದಿಸಿದೆ.

ಪಿ.ಎಂ.ಎಫ್.ಎಂ.ಇ. ಯೋಜನೆಯಡಿಯಲ್ಲಿ ರೂ. 12.79 ಕೋಟಿ ಯೋಜನಾ ವೆಚ್ಚದೊಂದಿಗೆ  ಮಂಡ್ಯ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡದಲ್ಲಿ 4 ಸಾಮಾನ್ಯ ಮೂಲಭೂತ ಸೌಕರ್ಯಗಳ ಘಟಕಗಳನ್ನು ಸ್ಥಾಪಿಸಲಾಗಿದೆ. 14 ಇನ್ಕ್ಯುಬೇಶನ್ ಕೇಂದ್ರಗಳನ್ನು ಕೃಷಿ / ತೋಟಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಇನ್ಕ್ಯುಬೇಶನ್ ಕೇಂದ್ರಗಳನ್ನು ಆಹಾರ ಸಂಸ್ಕರಣಾ ಮಂತ್ರಾಲಯವು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಿದೆ ಎಂದರು.
ರಾಜ್ಯದ ವಿಜಯಪುರ ಮತ್ತು ಕುಷ್ಟಗಿಯಲ್ಲಿ ಹಾಗೂ ಬೀದರ್‍ನ ಹುಮನಾಬಾದ್ ನಲ್ಲಿ ದ್ರಾಕ್ಷಿ, ದಾಳಿಂಬೆ, ನಿಂಬೆ ತೋಟಗಾರಿಕೆ ಸಂಸ್ಕರಣೆ ಹಾಗೂ ರಫ್ತಿನ ಅನುಕೂಲಕ್ಕೋಸ್ಕರ ಸಮಗ್ರ ಶೀತಲ ಸರಪಳಿ ಘಟಕಗಳು ಕಾರ್ಯಾಚರಣೆಯಲ್ಲಿವೆÉ. ವಿಜಯಪುರದಲ್ಲಿ ರೈತರು ಸಂಸ್ಕರಿಸಿದ ಒಣ ದ್ರಾಕ್ಷಿ ಹಾಗೂ ಇತರೇ ಕೃಷಿ / ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಸುಮಾರು 4000 ಮೆಟ್ರಿಕ್ ಟನ್ ಸಾರ್ಮಥ್ಯದ ಶೀತಲಗೃಹ ಕಾರ್ಯಾಚರಣೆಯಲ್ಲಿದ್ದು, ಹುಬ್ಬಳ್ಳಿಯ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 6,000 ಮೆಟ್ರಿಕ್ ಟನ್ ಸಾರ್ಮಥ್ಯದ ಗೋದಾಮು ಕಾರ್ಯಚರಣೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ:
ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇ. 60 ರಷ್ಟು ಬಿತ್ತನೆಯಾಗಿದ್ದು, ಈವರೆಗೆ 80 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಆಗಸ್ಟ್‍ನಲ್ಲಿ ಕೆಲವು ಕಡೆ ಬಿತ್ತನೆಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ್, ಕೆಪೆಕ್ ಅಧ್ಯಕ್ಷರಾದ ಹರೀಶ್ ಉಪಸ್ಥಿತರಿದ್ದರು.
VKNEWS DIGITAL :
ಪತ್ರಿಕಾ ದಿನಾಚರಣೆ – ಒಂದು ವಿಸ್ತೃತ ಚರ್ಚೆ – ದೃಶ್ಯಾವಳಿ ವೀಕ್ಷಿಸಲು ಕ್ಲಿಕ್ ಮಾಡಿ

18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನ: ಅಮೆರಿಕದ ಸ್ಯಾನ್‌ಹೋಸೆ ನಗರದಲ್ಲಿ ಅದ್ಧೂರಿ ಚಾಲನೆ

ಸ್ಯಾನ್‌ಹೋಸೆ, ಅಮೆರಿಕ, ಜುಲೈ 5 : ಅಮೆರಿಕದ ಸ್ಯಾನ್‌ಹೋಸೆ ನಗರದ ಮೆಕನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ (ಜು.3-5) 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರಕಿತು.

ಸಪ್ತ ಸಾಗರದಾಚೆ ಕನ್ನಡ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಮಹಾಸಮ್ಮೇಳನವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ದಿವ್ಯ ಆಶೀರ್ವಾದದೊಂದಿಗೆ ಉದ್ಘಾಟಿಸಿದರು.

ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಹಬ್ಬವಾಗಿ ರೂಪುಗೊಂಡಿರುವ ಈ ಕಾರ್ಯಕ್ರಮವು ವಿಶ್ವದ ವಿವಿಧೆಡೆ ನೆಲೆಸಿರುವ ಒಕ್ಕಲಿಗ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸಿರುವ ಅಪೂರ್ವ ಸನ್ನಿವೇಶವಾಗಿದೆ.

ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ, ಸಂಸದರಾದ ಡಾ. ಕೆ. ಸುಧಾಕರ್, ಶಾಸಕರಾದ ಸಿ.ಎಸ್. ಪುಟ್ಟರಾಜು, ಎಸ್.ಟಿ. ಸೋಮಶೇಖರ್, ಸತೀಶ್ ರೆಡ್ಡಿ, ಗುಬ್ಬಿ ಶ್ರೀನಿವಾಸ್ ಹಾಗೂ ಒಕ್ಕಲಿಗ ಸಮುದಾಯದ  ಮುಖಂಡರಾದ ಸಚ್ಚಿದಾನಂದ, ಒಕ್ಕಲಿಗ ಪರಿಷತ್ ಆಫ್ ಅಮೆರಿಕ ಅಧ್ಯಕ್ಷರಾದ ಧನಂಜಯ್ ಕೆಂಗಯ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಕಳೆ ತಂದಿದ್ದಾರೆ.

ಸಾಂಸ್ಕೃತಿಕ ವೈಭವ
ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಉತ್ಸವವನ್ನು ಇಲ್ಲಿ ಜಗತ್ತಿಗೆ ತೋರಿಸಿದ್ದಾರೆ. ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ ಭೂಷಣಗಳ ಪ್ರದರ್ಶನಗಳು ಸ್ಯಾನ್‌ಹೋಸೆ ರಸ್ತೆಗಳಲ್ಲಿ ಜಾತ್ರಾ ಉತ್ಸವದ ಅನುಭವವನ್ನು ನೀಡಿದವು.

ಸಾಂಸ್ಕೃತಿಕ, ಕಲಾ ಪ್ರದರ್ಶನಗಳ ಜೊತೆಗೆ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಶಿಷ್ಟ ಭೋಜನ ವ್ಯವಸ್ಥೆ, ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು, ಮಹಿಳಾ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಕ್ಕಲಿಗ ಸಮುದಾಯದ ಬಲವರ್ಧನೆಗೆ ಪರಸ್ಪರ ಸಹಕಾರಕ್ಕೆ ನಾಂದಿಯಾಗಿವೆ.

ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳಿಂದ ಸಾವಿರಾರು ಕುಟುಂಬಗಳು ಭಾಗವಹಿಸಿದ್ದ ಈ ಸಮ್ಮೇಳನ, ವಿದೇಶಿ ನೆಲದಲ್ಲಿ ಸಮುದಾಯದ ಹೆಗ್ಗಳಿಕೆಯನ್ನು ಅನಾವರಣಗೊಳಿಸಿದೆ. “ಒಕ್ಕಲಿಗ ಸಮಾಜ – ಜಗತ್ತಿನ ಮೂಲೆಮೂಲೆಗೂ ತಲುಪಿದೆ” ಎಂಬುದನ್ನು ಸಮರ್ಥವಾಗಿ ಸಾರುತ್ತಿದೆ.

ಒಕ್ಕಲುತನ ಮಾಡುವ ಒಕ್ಕಲಿಗರು ಇಂದು ತಮ್ಮ ಜ್ಞಾನ, ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ಜ್ಞಾನ ಭಂಡಾರದಿಂದಲೇ ಅಮೆರಿಕ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆಸಿದ್ದಾರೆ. ತಂತ್ರಜ್ಞಾನ ಹುದ್ದೆಗಳು, ಉದ್ಯಮ, ವ್ಯವಹಾರ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ತಾವು ನೆಲೆಸಿರುವ ದೇಶ ಮತ್ತು ತಾಯ್ನಾಡು ಭಾರತಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ. ತಮ್ಮ ಊರಿನಿಂದ ಸಾವಿರಾರು ಕಿ.ಮೀ ದೂರದ ಊರಿಗೆ ಬಂದಿದ್ದರೂ ಸಮುದಾಯ ಮತ್ತು ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಗೌರವಯನ್ನು ಉಳಿಸಿ ಬೆಳೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದು ಸಾಮಾನ್ಯ ಸಮ್ಮೇಳನವಲ್ಲ. ಸಮುದಾಯ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಕೊಡುಗೆ ನೀಡುವ ವಿಶೇಷ ಸಂದರ್ಭವಾಗಿದೆ.

-ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧಿಪತಿ, ಆದಿಚುಂಚನಗಿರಿ ಮಠ

ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ವ್ಯಾಪಾರ ಉದ್ಯಮ ಸ್ಥಾಪನೆ, ವಿಸ್ತರಣೆ, ಸ್ಟಾರ್ಟಪ್ ಐಡಿಯಾಗಳು, ನೆಟ್ವರ್ಕಿಂಗ್, ಅಮೆರಿಕದಲ್ಲಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಲು ಈ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕದಲ್ಲಿ ನೆಲೆಸಿರುವವರು, ಕರ್ನಾಟಕ ಸೇರಿದಂತೆ ಜಗತ್ತಿನ ನಾನಾ ಭಾಗಗಳಿಂದ ಆಗಮಿಸಿರುವವರು ಇದರ ಸಂಪೂರ್ಣ ಪ್ರಯೋಜನ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುವ ಸಂಪೂರ್ಮ ವಿಶ್ವಾಸವಿದೆ.

-ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕರು

ಈ ಸಮ್ಮೇಳನದಲ್ಲಿ ಭಾಗವಹಿಸಿ ನನಗೆ ಅತ್ಯಂತ ಸಂತೋಷವಾಯಿತು. ಅಮೆರಿಕದಲ್ಲಿ ಒಕ್ಕಲಿಗ ಸಮುದಾಯದವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ನಮ್ಮ ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ಉದ್ಯಮ ಅವಕಾಶಗಳು, ಬೆಳವಣಿಗೆ ಕುರಿತು ಚರ್ಚಿಸುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಸಮುದಾಯವಾಗಲಿ ಒಗ್ಗಟ್ಟಿನಿಂದ ಯಾವ ರೀತಿ ಅಭಿವೃದ್ಧಿ ಕಾಣಬಹುದು ಎನ್ನುವುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ.

-ಸಿ.ಎಸ್. ಪುಟ್ಟರಾಜು, ಶಾಸಕರು

ಅಮೆರಿಕದಲ್ಲಿ ಒಕ್ಕಲಿಗರ ಸಮ್ಮೇಳನ ಆಯೋಜನೆಯೇ ಒಂದು ಹೆಮ್ಮೆಯ ಸಂಗತಿ. ಮೂಲತಃ ಕೃಷಿಕರಾಗಿರುವ ಒಕ್ಕಲಿಗ ಸಮುದಾಯದವರು ಇಂದು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ. ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರು ಒಂದೆಡೆ ಸೇರುವುದರಿಂದ ಬೆಳವಣಿಗೆಗೆ ಇನ್ನಷ್ಟು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಮ್ಮೇಳನವನ್ನು ಮತ್ತಷ್ಟು ವಿಸ್ತಾರಗೊಳಿಸುವ ಉದ್ದೇಶವಿದೆ.

-ಧನಂಜಯ್, ಅಧ್ಯಕ್ಷರು, ವಿಶ್ವ ಒಕ್ಕಲಿಗ ಪರಿಷತ್ ಆಫ್ ಅಮೆರಿಕ

VEE KAY NEWS DIGITAL

ರಾಜ್ಯ ಬಿಜೆಪಿ ಮತ್ತೆ ಪುಟಿದೇಳುತ್ತಾ?- ಒಂದು ವಿಶ್ಲೇಷಣೆ :

ದೃಶ್ಯಾವಳಿ ವೀಕ್ಷಿಸಲು ಇದನ್ನು ಕ್ಲಿಕ್ ಮಾಡಿ

ಡಾ.ಬಾಬು ಜಗಜೀವನ ರಾಂ  ಆಡಳಿತ ವೈಖರಿ ನಮಗೆ ಸ್ಫೂರ್ತಿದಾಯಕ –ಸಿದ್ದರಾಮಯ್ಯ

ಬೆಂಗಳೂರು, ಜುಲೈ 06 (ಕರ್ನಾಟಕ ವಾರ್ತೆ) : ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರು ಉತ್ತಮ ಆಡಳಿತಗಾರರಾಗಿದ್ದರು. ಅವರ ಆಡಳಿತÀ ವೈಖರಿಯು ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನ ರಾಂ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಡಾ.ಬಾಬು ಜಗಜೀವನ ರಾಂ ಅವರು ಸ್ವಾತಂತ್ರ ಹೋರಾಟಗಾರರಲ್ಲದೆ ಸಮಾಜ ಸೇವಕರು ಆಗಿದ್ದರು. ನಾಡು ಕಂಡ ಅಪರೂಪದ ನಾಯಕ. ಅವರ ಬದುಕು ನಮಗೆ ಪ್ರೇರಣೆಯಾಗಬೇಕು ಎಂದರು. ಅವರು ನಮಗೆಲ್ಲರಿಗೂ ಮಾರ್ಗದರ್ಶರಕರಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತಿಳಿಸಿದರು.
ದೀನದಲಿತರು, ಹಿಂದುಳಿದವರು, ಕಾರ್ಮಿಕರು, ಅಲ್ಪಸಂಖ್ಯಾತರಿಗೆ ನಾಯಕರಾಗಿದ್ದರು. ಮಾನವೀಯ ಮೌಲ್ಯ ಹೊಂದಿದ್ದ ಅವರು  ಸಮಾಜ ಸುಧಾರಕರಾಗಿದ್ದರು.  ಉತ್ತಮ ಆಡಳಿತಗಾರರಾಗಿದ್ದರಲ್ಲದೆ ಎಲ್ಲರಿಗೂ ಆದರ್ಶಪ್ರಾಯವಾಗಿದ್ದರು ಎಂದು ತಿಳಿಸಿದರು.
ದೇಶದ ಹಸಿರು ಕ್ರಾಂತಿಯ ಹರಿಕಾರರಾಗಿ  ದೇಶದಲ್ಲಿ ಆಹಾರ ಸ್ವಾವಲಂಬನೆಯನ್ನು  ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೃಷಿಯನ್ನು ಆಧುನೀಕರಿಸಲು ಅವರು ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ, ನಗರಾಭಿವೃದ್ಧಿ ಮತ್ತು  ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್,  ಸಮಾಜ ಕಲ್ಯಾಣ ಇಲಾಖೆಯ  ಮಾಜಿ ಸಚಿವ ಹೆಚ್. ಆಂಜನೇಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಸೇರಿದಂತೆ ಹಿರಿಯ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

VEE KAY NEWS DIGITAL

ರಾಜ್ಯ ಬಿಜೆಪಿ ಮತ್ತೆ ಪುಟಿದೇಳುತ್ತಾ?- ಒಂದು ವಿಶ್ಲೇಷಣೆ :

ದೃಶ್ಯಾವಳಿ ವೀಕ್ಷಿಸಲು ಇದನ್ನು ಕ್ಲಿಕ್ ಮಾಡಿ

ಅಗಾಧ ಸವಾಲುಗಳ ನಡುವೆ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!

ತಾಯಿಯ ಜೀವ ಆಪತ್ತಿನಲ್ಲಿದ್ದಾಗ ವೈದ್ಯರ ಕಾಳಜಿ ಮತ್ತು ಯೋಜಿತ ಚಿಕಿತ್ಸೆಯಿಂದ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿಯೊಬ್ಬರು ಮೂರನೇ ತಿಂಗಳ ಅವಧಿಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ತಮಗೆ ʼಪ್ಲಾಸೆಂಟಾ ಪರ್‌ಕ್ರಿಯೆಟಾ (Placenta Percreta) ಸಮಸ್ಯೆಯಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಗೆ ಕೇವಲ 28 ವಾರಗಳಿಗೆ ಸಿಸೇರಿಯನ್‌ ಮಾಡಲು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ರೋಗಿಯು ಮತ್ತೊಬ್ಬ ತಜ್ಞರ ಸಲಹೆಯನ್ನು ಪಡೆಯಲು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಹಿಳಾ ತಜ್ಞರಾದ ಡಾ. ನಿಶಾ ಬುಚಾಡೆ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ವೈದ್ಯರು ಗರ್ಭಿಣಿಯನ್ನು ಪರೀಕ್ಷಿಸಿದಾಗ ಮಹಿಳೆಯು ತೀವ್ರ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು, ಹೀಮೋಗ್ಲೋಬಿನ್‌ ಮಟ್ಟ 8 g/dL ಇರುವುದು ಗೊತ್ತಾಗಿದೆ. ಅದಲ್ಲದೆ ಭ್ರೂಣವು FGR  ಅಂದರೆ ಗರ್ಭಾವಸ್ಥೆಯ ಅವಧಿಯಲ್ಲಿ ಮಗು ನಿರೀಕ್ಷೆಗಿಂತ ಚಿಕ್ಕದಾಗಿರುವುದು ಕೂಡ ಗಮನಕ್ಕೆ ಬಂದಿದೆ.
ಡಾ ನಿಶಾ ಬುಚಾಡೆ ಅವರು ಕೂಡಲೇ ಅಗತ್ಯ ಚಿಕಿತ್ಸೆಯನ್ನು ನೀಡಲು ಮುಂದಾದರು. ಮೊದಲು ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು  ಕಬ್ಬಿಣಾಂಶ ಪೂರೈಕೆ ಮತ್ತು ಭ್ರೂಣದ ಬೆಳವಣಿಗೆಗೆ ಪೂರಕವಾದ ಔಷಧಗಳನ್ನು ನೀಡಲಾರಂಭಿಸಿದರು. ಆರು ವಾರಗಳಲ್ಲಿ ಗರ್ಭಿಣಿಯ ಹಿಮೋಗ್ಲೋಬಿನ್ 11.4 g/dL ಗೆ ಏರಿಕೆ ಕಂಡಿತು ಮತ್ತು ಭ್ರೂಣದ ಬೆಳವಣಿಗೆಯು ಕೂಡ ಗಣನೀಯವಾಗಿ ಸುಧಾರಿಸಿತು. ಮಗುವಿನ ತೂಕ ಹೆಚ್ಚಾಗಿದ್ದು, 2  ಕೆ.ಜಿ. ತಲುಪಿತು ಎಂದು ತಜ್ಞೆ ನಿಶಾ ಬುಚಾಡೆ ತಿಳಿಸಿದರು.
ಗರ್ಭಿಣಿಗೆ 36 ವಾರಗಳ ಕಾಲ ಸೂಕ್ತ ಚಿಕಿತ್ಸೆಯನ್ನು ನೀಡಿ ನಂತರ ಯೋಜಿತವಾಗಿ ಸಿಸೇರಿಯನ್‌ ಮಾಡಲು ನಿರ್ಧರಿಸಲಾಯಿತು.  ಆದರೆ ಆ ವೇಳೆಗೆ ಮಹಿಳೆಗೆ ಮಧುಮೇಹ’ (gestational diabetes) ಇರುವುದು ಪತ್ತೆಯಾಯಿತು. ಇದರಿಂದಾಗಿ ಮಹಿಳೆಯ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಯಿತು. ಅದನ್ನು ಇನ್ಸುಲಿನ್‌ ಚಿಕಿತ್ಸೆಯ ಮೂಲಕ ನಿಯಂತ್ರಣಕ್ಕೆ ತರಲಾಯಿತು ಎಂದು ತಜ್ಞರು ಹೇಳಿದರು.
ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ‘ಪ್ಲಾಸೆಂಟಾ ಪರ್‌ಕ್ರಿಟಾ’ ಇರುವುದು ದೃಢವಾಗಿದೆ. ಇದೊಂದು ‘ಪ್ಲಾಸೆಂಟಾ ಅಕ್ರೀಟಾ ಸ್ಪೆಕ್ಟ್ರಮ್ ಡಿಸಾರ್ಡರ್‌  ಹಾಗೂ ತೀವ್ರತೆಯಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಜರಾಯು ಗರ್ಭಾಶಯದ ಗೋಡೆಯ/ಮೆಲ್ಭಾಗದ ಮೂಲಕ ಮೂತ್ರಕೋಶಕ್ಕೂ ಹರಡುತ್ತದೆ. ಜರಾಯು ಗರ್ಭಾಶಯದ ಕೆಳಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿ, ಮೂತ್ರಕೋಶ ಮತ್ತು ಸುತ್ತಮುತ್ತಲಿನ ಸ್ನಾಯುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನು ಕತ್ತರಿಸಲು ಪ್ರಯತ್ನಿಸಿದರೆ ರಕ್ತಸ್ರಾವವಾಗತೊಡಗುತ್ತದೆ. ಹೀಗಾಗಿ ಸಿಸೇರಿಯನ್‌ ಮಾಡುವ ವೇಳೆ ಶಸ್ತ್ರಚಿಕಿತ್ಸಾ ತಂಡದ ಸಹಾಯದ ಮೂಲಕ ಜರಾಯುವನ್ನು ಬೇರ್ಪಡಿಸಲು ಪ್ರಾರಂಭಿಸಲಾಯಿತು. ಜರಾಯುವಿನ ಒಂದು ಭಾಗವು ಬೇರ್ಪಡಲು ಪ್ರಾರಂಭಿಸಿದಾಗ ತಕ್ಷಣವೇ ನಿರ್ಧರಿಸಿ ಮಗುವನ್ನು ಹೊರತೆಗೆದು ಮಕ್ಕಳ ವೈದ್ಯಕೀಯ ತಂಡಕ್ಕೆ ನೀಡಲಾಯಿತು. ರಕ್ತಸ್ರಾವವನ್ನು ನಿಯಂತ್ರಿಸಲು ಕ್ಲಾಂಪ್ ಮಾಡಿ, ರಕ್ತಸ್ರಾವವನ್ನು ತಡೆಯಲು ಯೋಜಿತ ಗರ್ಭಕೋಶ ತೆಗೆಯುವ (hysterectomy) ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಯಿತು ಎಂದು ನಿಶಾ ಅವರು ಹೇಳಿದರು.
ಇಂತಹ ತೀವ್ರ ಸಂದರ್ಭದಲ್ಲಿ ನಮ್ಮ ಶಸ್ತ್ರಚಿಕಿತ್ಸಾ ತಂಡವು ಮೂತ್ರಕೋಶ ಅಥವಾ ಇತರ ಯಾವುದೇ ಅಂಗಗಳಿಗೆ ಹಾನಿಯಾಗದಂತೆ ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡಿದೆ. ಒಂದು ತಿಂಗಳ ಕಾಲ ಈ ಶಸ್ತ್ರಚಿಕಿತ್ಸೆಯ ಕುರಿತು ವೈದ್ಯರ ತಂಡವು ಚರ್ಚೆಯನ್ನು ಕೈಗೊಂಡಿದ್ದು, ಅತ್ಯಂತ ಯಶಸ್ವಿಯಾಗಿ ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿದ್ದೇವೆ ಎಂದು ಬುಚಾಡೆ ಅವರು ಸಂತಸ ವ್ಯಕ್ತಪಡಿಸಿದರು.
ಶಸ್ತ್ರಚಿಕಿತ್ಸೆಯ ಬಳಿಕ ತಾಯಿಯನ್ನು ‘ಹೈ ಡಿಪೆಂಡೆನ್ಸಿ ಯೂನಿಟ್’ನಲ್ಲಿ (High Dependency Unit – HDU) ನಿಗಾದಲ್ಲಿ ಇರಿಸಲಾಯಿತು ಮತ್ತು ಮೂರನೇ ದಿನವೇ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಮಹಿಳೆಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದರು.
ಪ್ಲಾಸೆಂಟಾ ಪರ್ಕ್ರಿಟಾ ಎಂದರೇನು ?
ಪ್ಲಾಸೆಂಟಾ ಪರ್ಕ್ರಿಟಾ  ಎಂಬುದು ಪ್ರಸೂತಿಯ ವೇಳೆ ಎದುರಾಗುವ ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲೊಂದು. ಇದು ಸಾಮಾನ್ಯವಾಗಿ ಸಿಸೇರಿಯನ್ ಗೆ  ಒಳಗಾದ ಮಹಿಳೆಯರಲ್ಲಿ ಕಂಡುಬರುತ್ತದೆ. ಸೂಕ್ತ ಸಮಯದಲ್ಲಿ ಪತ್ತೆಹಚ್ಚದಿದ್ದರೆ ಮತ್ತು ಯೋಜಿತವಾಗಿ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳದಿದ್ದರೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಬಹು ವಿರಳ ಘಟನೆಯನ್ನು ಅತ್ಯಂತ ಯಶಸ್ವಿಯಾಗಿ ಎದುರುಸಿರುವುದು ವೈದ್ಯರ ಕಾರ್ಯಬದ್ಧತೆಯನ್ನು ತೋರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651.

ಭಾರತ ಜಾಗತಿಕ ನಾಯಕನಾಗಬೇಕಾದರೆ ‘ಆರೋಗ್ಯಕರ ಭಾರತ-ಬಲಿಷ್ಠ ಭಾರತ’ ಎಂಬ ಮಂತ್ರ ಅಳವಡಿಸಿಕೊಳ್ಳಬೇಕು

ಬೆಂಗಳೂರು 06.07.2025: “ಆರೋಗ್ಯವಂತ ನಾಗರಿಕರು, ಬಲಿಷ್ಠ ಆರೋಗ್ಯಕರ ರಾಷ್ಟ್ರದ ಅಡಿಪಾಯ. ನಾವು ದೇಶವನ್ನು ಸ್ವಾವಲಂಬಿ, ನವೀನ ಮತ್ತು ಜಾಗತಿಕ ನಾಯಕತ್ವದಲ್ಲಿ ನಾಯಕನನ್ನಾಗಿ ಮಾಡಲು ಬಯಸಿದರೆ, ನಾವು “ಆರೋಗ್ಯಕರ ಭಾರತ – ಬಲಿಷ್ಠ ಭಾರತ” ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಆರೋಗ್ಯ ಸಂಕಲ್ಪ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಆರೋಗ್ಯ ಸಂಕಲ್ಪದಡಿ ಆಯೋಜಿಸಿದ್ದ “ವೈದ್ಯರ ಸಮ್ಮೇಳನ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಭಾರತದ ವೈದ್ಯಕೀಯ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದು. ಚರಕ, ಸುಶ್ರುತ ಮತ್ತು ಧನ್ವಂತರಿಯಂತಹ ಮಹಾನ್ ಋಷಿಗಳು ವೈದ್ಯಕೀಯವನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳೆರಡರಿಂದಲೂ ನೋಡಿದರು. ಇಂದು ನಮ್ಮಲ್ಲಿ ಆಯುರ್ವೇದ, ಯೋಗ, ಸಿದ್ಧ, ಯುನಾನಿ, ಹೋಮಿಯೋಪತಿ ಮತ್ತು ಅಲೋಪತಿಯಂತಹ ಬಹು ಆಯಾಮದ ವ್ಯವಸ್ಥೆಗಳಿದ್ದು, ಇವು ಒಟ್ಟಾಗಿ “ಸಮಗ್ರ ಆರೋಗ್ಯ ರಕ್ಷಣೆ” ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿವೆ” ಎಂದರು.

“ಇಂದು ನಾವು ವೈದ್ಯಕೀಯ ತಂತ್ರಜ್ಞಾನ, ಜಿಪಿಎಸ್ ಆಧಾರಿತ ರೋಗನಿರ್ಣಯ, ಟೆಲಿಮೆಡಿಸಿನ್, ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳು ಮತ್ತು ಎಚ್‌ಎಸ್‌ಬಿಸಿ ಕ್ಷೇತ್ರದಲ್ಲಿ ಮುಂದುವರಿಯಬೇಕಾಗಿದೆ. ವೈದ್ಯಕೀಯ ಸಂಶೋಧನೆಯಲ್ಲಿ ನಾವೀನ್ಯತೆ ಇರಬೇಕು. ವೈದ್ಯರು ವೈಜ್ಞಾನಿಕ ದೃಷ್ಟಿಕೋನದಿಂದ ಯೋಚಿಸಬೇಕು. ಆಗ ಮಾತ್ರ ನಾವು ಕ್ಯಾನ್ಸರ್, ಹೃದ್ರೋಗ, ಖಿನ್ನತೆ ಮತ್ತು ಪ್ರತಿಜೀವಕಗಳು ಮುಂತಾದ ಜಾಗತಿಕ ರೋಗಗಳ ಬೆದರಿಕೆಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಜಾಗತಿಕ ಆರೋಗ್ಯ ಬಿಕ್ಕಟ್ಟು, ಜೀವನಶೈಲಿ ಕಾಯಿಲೆಗಳು ಮತ್ತು ಮಾನಸಿಕ ಒತ್ತಡಗಳು ಸಮಾಜವನ್ನು ತೊಂದರೆಗೊಳಿಸಿರುವ ಇಂದಿನ ಯುಗದಲ್ಲಿ, “ಆರೋಗ್ಯ ಸಂಕಲ್ಪ” ಒಂದು ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ. “ಆರೋಗ್ಯ ಸಂಕಲ್ಪ” ಎಂಬುದು ಒಂದು ಸಾಮೂಹಿಕ ಆಂದೋಲನ, ಒಂದು ನಿರ್ದೇಶನ, ಒಂದು ಕಲ್ಪನೆ ಮತ್ತು ನಾವು ಆರೋಗ್ಯವಾಗಿರಬೇಕು, ನಮ್ಮ ಕುಟುಂಬವನ್ನು ಆರೋಗ್ಯವಾಗಿಡಬೇಕು ಮತ್ತು ನಮ್ಮ ಸಮುದಾಯವನ್ನು ಆರೋಗ್ಯವಾಗಿಡಲು ಸಹಾಯ ಮಾಡಬೇಕು ಎಂಬ ಸಂಕಲ್ಪವಾಗಿದೆ. ಈ ಉಪಕ್ರಮವು ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನಗೊಳಿಸುವತ್ತ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ” ಎಂದು ತಿಳಿಸಿದರು.

“ಆರೋಗ್ಯ ಸಂಕಲ್ಪ”ವು ಅಲೋಪತಿ, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಹೋಮಿಯೋಪತಿಯನ್ನು ಸಂಯೋಜಿಸುವ ಮೂಲಕ ಪರಿಹಾರಗಳನ್ನು ಒದಗಿಸುವ ಸಕಾರಾತ್ಮಕ ಪ್ರಯತ್ನವಾಗಿದೆ. “ಆರೋಗ್ಯ ಸಂಕಲ್ಪ” ಸಾರ್ವಜನಿಕ ಜಾಗೃತಿ, ಸಮಗ್ರ ವೈದ್ಯಕೀಯ ವ್ಯವಸ್ಥೆ, ಯುವಶಕ್ತಿಯ ಭಾಗವಹಿಸುವಿಕೆ, ವ್ಯಸನ ನಿವಾರಣೆ, ಮಾನಸಿಕ ಆರೋಗ್ಯ ಮತ್ತು ತಾಯಿ ಮತ್ತು ಮಕ್ಕಳ ಆರೋಗ್ಯ ಮತ್ತು ನಿಯಮಿತ ಯೋಗ ತರಬೇತಿ ಮತ್ತು ಧ್ಯಾನ ಅವಧಿಗಳ ಮೂಲಕ ಜನರನ್ನು ಸ್ವಾವಲಂಬಿ ಆರೋಗ್ಯದ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ. ಇದರಿಂದಾಗಿ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲಾಗುತ್ತಿದೆ. ಈ ವೇದಿಕೆಯು ಆರೋಗ್ಯ ಸೇವೆಗಳ ಪ್ರಗತಿಯನ್ನು ಪ್ರತಿಬಿಂಬಿಸಲು ಮತ್ತು ಮುಂಬರುವ ಪೀಳಿಗೆಗೆ ಆರೋಗ್ಯಕರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವೈದ್ಯಕೀಯ ಕ್ಷೇತ್ರದ ವಿವಿಧ ವ್ಯವಸ್ಥೆಗಳ ವಿದ್ವಾಂಸರು, ನೀತಿ ನಿರೂಪಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಪ್ರಮುಖ ಕೆಲಸವನ್ನು ಮಾಡುತ್ತಿದೆ” ಎಂದು ಶ್ಲಾಘಿಸಿದರು.

“ಸ್ವಾಮಿ ವಿವೇಕಾನಂದರು, “ಸೇವೆಯೇ ಧರ್ಮ” ಎಂದು ಹೇಳಿದ್ದರು. ಈ ಭಾವನೆ ವೈದ್ಯಕೀಯ ಸೇವೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸಾಂಕ್ರಾಮಿಕ ಸಮಯದಲ್ಲಿ, ವೈದ್ಯರು ತಮ್ಮ ಕುಟುಂಬಗಳು, ತಮ್ಮದೇ ಆದ ಸುರಕ್ಷತೆ ಮತ್ತು ಸೌಕರ್ಯಗಳಿಗಿಂತ ಮೇಲೇರಿ ವೈದ್ಯರಾಗಿ ತಮ್ಮ ಕರ್ತವ್ಯವನ್ನು ಪೂರೈಸಿದ್ದನ್ನು ನಾವು ನೋಡಿದ್ದೇವೆ. “ವೈದ್ಯೋ ನಾರಾಯಣೋ ಹರಿಃ” ಎಂಬ ಚಿಂತನೆಯು ರೋಗಿಗಳಿಗೆ ಸೇವೆ ಸಲ್ಲಿಸುವಾಗ, ವೈದ್ಯರು ಸ್ವತಃ ದೇವರಂತೆ ವರ್ತಿಸುತ್ತಾರೆ ಎಂದು ಹೇಳುತ್ತದೆ. ಅವರು ಜೀವಗಳನ್ನು ಉಳಿಸಲು ಕೆಲಸ ಮಾಡುತ್ತಾರೆ. ಆಯುರ್ವೇದ ಮತ್ತು ಹೋಮಿಯೋಪತಿಯನ್ನು ಇನ್ನೂ ‘ಪರ್ಯಾಯ ಔಷಧ’ ಎಂದು ನೋಡಲಾಗುತ್ತದೆ. ಇವು ನಮ್ಮ ಪ್ರಾಚೀನ ಪರಂಪರೆಯಾಗಿದ್ದು, ಇವುಗಳನ್ನು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸಬೇಕಾಗಿದೆ” ಎಂದು ಹೇಳಿದರು.

“ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಆದರೆ ಹಲವು ಸವಾಲುಗಳೂ ಇವೆ. ನೀತಿ ನಿರೂಪಕರು ಆರೋಗ್ಯ ಸೇವೆಗಳನ್ನು ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡುವ ನೀತಿಗಳನ್ನು ರೂಪಿಸಬೇಕು. ವೈದ್ಯರ ಶಿಕ್ಷಣ ಮತ್ತು ತರಬೇತಿಯಲ್ಲಿ ಗುಣಮಟ್ಟ ಮತ್ತು ಸಹಾನುಭೂತಿ ಎರಡನ್ನೂ ಸೇರಿಸಬೇಕು ಮತ್ತು ನೈತಿಕ, ಸೂಕ್ಷ್ಮ ವೈದ್ಯಕೀಯ ಸಂಸ್ಕೃತಿಯನ್ನು ಸೃಷ್ಟಿಸಬೇಕು. ವೈದ್ಯಕೀಯ ವ್ಯವಸ್ಥೆಯಲ್ಲಿ ನೈತಿಕತೆ ಮತ್ತು ಸೂಕ್ಷ್ಮತೆಗೆ ಆದ್ಯತೆ ನೀಡಬೇಕು. ವೈದ್ಯರು ಗ್ರಾಮೀಣ ಭಾರತವನ್ನು ನಿಮ್ಮ ಸೇವೆಯ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕು. ನೀವು ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯವನ್ನು ಸಂಯೋಜಿಸಿ ಭಾರತೀಯ ವೈದ್ಯಕೀಯ ಮಾದರಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಬಹುದು. ಧಾರ್ಮಿಕ ಚಟುವಟಿಕೆಗಳ ಜೊತೆಗೆ, ಇಂದು ಆರೋಗ್ಯ, ಶಿಕ್ಷಣ ಮತ್ತು ಸಮಾಜದ ಭದ್ರತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿಯೂ ಸಕ್ರಿಯ ಪಾತ್ರ ವಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ತನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ” ಎಂದು ತಿಳಿಸಿದರು.

“2047 ರಲ್ಲಿ 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತೇವೆ, ಆಗ ನಮ್ಮ ಭಾರತವು ಆರೋಗ್ಯಕರ ಭಾರತ, ಸ್ವಾವಲಂಬಿ ಭಾರತ ಮತ್ತು ಸಮೃದ್ಧ ಭಾರತವಾಗಿರಬೇಕು. ಇದರಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯ. ಈ ಸಮ್ಮೇಳನದ ಉದ್ದೇಶವು ನಾವೆಲ್ಲರೂ ಒಟ್ಟಾಗಿ ಭಾರತವನ್ನು “ಆರೋಗ್ಯಕರ ರಾಷ್ಟ್ರ, ಸಮರ್ಥ ರಾಷ್ಟ”ವನ್ನಾಗಿ ಮಾಡುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ  ತಿಪ್ಪೇಸ್ವಾಮಿ, ಡಾ.ಹೇಮಂತ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

VKNews Digital – Headlines : 6-7-2025

 

ಶ್ರೀ ರಾಮಕೃಷ್ಣ ಸಂಗೀತ ಸೌರಭ — ರಾಮಕೃಷ್ಣ ಮಠದಿಂದ ಸಂಗೀತೋತ್ಸವ

ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ವತಿಯಿಂದ ಮೂರು ದಿನಗಳ ಸಂಗೀತೋತ್ಸವ “ಶ್ರೀ ರಾಮಕೃಷ್ಣ ಸಂಗೀತ ಸೌರಭ”ವನ್ನು ಇದೇ ಜುಲೈ 11 ರಿಂದ 13 ರವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಮಠದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:

ಶುಕ್ರವಾರ, ಜುಲೈ 11 –

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಪಂಡಿತ್ ವೆಂಕಟೇಶ್ ಕುಮಾರ
ತಬಲಾ: ಪಂಡಿತ್ ರಘುನಾಥ್ ನಾಕೋಡ್
ಹಾರ್ಮೋನಿಯಮ್: ಪಂಡಿತ್ ವ್ಯಾಸಮೂರ್ತಿ ಕಟ್ಟಿ

ಇಂದಿನ ಪ್ರಮುಖ ಸುದ್ದಿ : ಇದನ್ನೂ ಓದಿ: 

ಭಾರತ ಜಾಗತಿಕ ನಾಯಕನಾಗಬೇಕಾದರೆ ‘ಆರೋಗ್ಯಕರ ಭಾರತ-ಬಲಿಷ್ಠ ಭಾರತ’ ಎಂಬ ಮಂತ್ರ ಅಳವಡಿಸಿಕೊಳ್ಳಬೇಕು

ಶನಿವಾರ, ಜುಲೈ 12 –

ಕರ್ನಾಟಕ ವೀಣಾ ವಾದನ
ವೀಣಾ: ವಿದ್ವಾನ್ ಡಿ. ಬಾಲಕೃಷ್ಣ
ಬಾನ್ಸುರಿ: ವಿದ್ವಾನ್ ವಿ. ವಂಶೀಧರ್
ಮೃದಂಗ: ವಿದ್ವಾನ್ ಬಿ. ಎಸ್. ಪ್ರಶಾಂತ್
ಘಟಂ: ವಿದ್ವಾನ್ ಶಮಿತ್ ಗೌಡ

ಭಾನುವಾರ, ಜುಲೈ 13 –

ಗಾಯನ ಮತ್ತು ವಾದ್ಯ ಕಛೇರಿ
ಗಾಯನ: ಕುಮಾರ್ ಮೋದಕ್ ಮತ್ತು ವೃಂದ
ತಬಲಾ ಸೊಲೋ: ಕುಮಾರ್ ಪ್ರದ್ಯುಮ್ನ ಕರ್ಪೂರ್
ವೀಣಾ ವಾದನ: ಕುಮಾರ್ ಚಿನ್ಮಯ್ ಮತ್ತು ವೃಂದ
ಮೃದಂಗ: ವಿದ್ವಾನ್ ಸತ್ಯಕುಮಾರ್
ಕಾರ್ಯಕ್ರಮ ಸ್ಥಳ: ರಾಮಕೃಷ್ಣ ಮಠ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು.
ಪ್ರವೇಶ ಉಚಿತ – ಎಲ್ಲರಿಗೂ ಸ್ವಾಗತ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 26613429 / 26612710
VK News  DIGITAL headlines

*ಮುಖ್ಯಮಂತ್ರಿ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ*

ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಅಗ್ರಿಮೆಂಟ್‌ ಆಗಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಒಪ್ಪಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯನವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್‌ಪಾಸ್‌ ನೀಡುವುದು ಗ್ಯಾರಂಟಿಯಾಗಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್‌ನ ಶಾಸಕರು ರಾಜಾರೋಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಿದ್ದರಾಮಯ್ಯನವರಿಗೆ ಬೋರ್ಡಿಂಗ್‌ ಪಾಸ್‌ ಇದ್ದಂತೆ ಎಂದರು.

ಸರ್ಕಾರ ಎರಡೂವರೆ ವರ್ಷಗಳಲ್ಲಿ ಟೇಕಾಫ್‌ ಆಗಿಲ್ಲ. ಶಾಸಕರೆಲ್ಲರೂ ತಿರುಗುಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಪರವಾಗಿ ಇಲ್ಲ ಎಂಬುದು ಸುರ್ಜೇವಾಲಾ ಅವರ ಸಭೆಯಿಂದ ಗೊತ್ತಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೇಂದ್ರಕ್ಕೆ ಹೋಗುವುದು ಗ್ಯಾರಂಟಿಯಾಗಿದೆ. ಇನ್ನೆರಡು ವರ್ಷವೂ ಇದೇ ರೀತಿ ಅತಂತ್ರದಲ್ಲೇ ಸರ್ಕಾರ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಹಲವಾರು ಬಾರಿ ತಪ್ಪಿದೆ. ಆದರೆ ಈಗ ಅವರಿಗೂ ಅವಕಾಶ ಬರಬಹುದು ಎಂದರು.

ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಪಾಪರ್‌ ಸರ್ಕಾರ ಎಂದು ಒಪ್ಪಿಕೊಂಡಿದ್ದಾರೆ. ಈ ಸರ್ಕಾರದಿಂದ ಜನರ ಕೈಗೆ ಚಿಪ್ಪು ಸಿಗಲಿದೆ. ಸಿಎಂ ಬದಲಾವಣೆಯ ಗಲಾಟೆಯ ನಡುವೆ ಸಚಿವರು ಸ್ಥಾನ ಕಳೆದುಕೊಂಡು ತಿರುಗಿ ಬೀಳಲಿದ್ದಾರೆ. ಸಚಿವ ರಾಜಣ್ಣ ಹೇಳಿದಂತೆಯೇ, ಅಧಿಕಾರದ ಪ್ರಳಯ ಆಗಲಿದೆ ಎಂದರು.

ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಕೋವಿಡ್‌ ಲಸಿಕೆ ಇದಕ್ಕೆ ಕಾರಣವಲ್ಲ ಎಂದು ತಜ್ಞರು ಹೇಳಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕಿದೆ. ಅಲ್ಲದೆ ಹಾಸನದಲ್ಲಿ ಕಾಫಿ ಬೆಳೆಗೆ ಹಾನಿಯಾಗಿದೆ. ಇದಕ್ಕಾಗಿ ಹಾಸನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಇಂದಿನ ಪ್ರಮುಖ ಸುದ್ದಿ : ಇದನ್ನೂ ಓದಿ:

ಜೀವನದಲ್ಲಿ ಕ್ರೀಡಾ ಮನೋಭಾವ ಅಳವಡಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡೋಣ” ರಾಜ್ಯಪಾಲರ ಕರೆ*

ಪ್ರೇಕ್ಷಕರ ಮನಸೂರೆಗೊಂಡ ವಿದುಷಿ ದಿವ್ಯಾ ಗಿರಿಧರ್ ಗಾಯನ

  • *ಪ್ರೇಕ್ಷಕರ* *ಮನಸೂರೆಗೊಂಡ*
    *ವಿದುಷಿ* *ದಿವ್ಯಾ ಗಿರಿಧರ್* *ಗಾಯನ*
    ಬೆಂಗಳೂರು : ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರ ಆದೇಶಾನುಸಾರ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರಥಮ ಏಕಾದಶಿ (ಜುಲೈ 6) ಪ್ರಯುಕ್ತ ಏರ್ಪಡಿಸಿದ್ದ “ನಾದಬ್ರಹ್ಮ ವಿಠಲೋತ್ಸವ” ಎಂಬ ಶೀರ್ಷಿಕೆಯಲ್ಲಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಹಾಡಿದ ಪ್ರತಿಯೊಂದು ಹಾಡುಗಳೂ ಕಿಕ್ಕಿರಿದು ತುಂಬಿದ್ದ ದಾಸಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿತು.

ಇವರ ಗಾಯನಕ್ಕೆ ವಿದ್ವಾನ್ ಚಿದಂಬರ ಜೋಶಿ (ಹಾರ್ಮೋನಿಯಂ), ವಿದ್ವಾನ್ ಪ್ರಮೋದ್ ಗಬ್ಬೂರ್ (ತಬಲಾ) ಮತ್ತು ವಿದ್ವಾನ್ ವೆಂಕಟೇಶ್ ಪರೋಹಿತ್ (ತಾಳ) ಸಾಥ್ ನೀಡಿದರು.

ಪುರಿ ಜಗನ್ನಾಥನ ವಿಗ್ರಹದ ರೋಚಕ ಸಂಗತಿ. ನಿಮಗೆ ತಿಳಿದಿದೆಯೇ?

ಒಮ್ಮೆ ಪುರಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಇಂದ್ರದ್ಯುಮ್ನ ಎಂಬ ರಾಜನು

ನೀರಿನಲ್ಲಿ ತೇಲಿಬಂದ ಅಂಜೂರ ಹಣ್ಣಿನ ಮರದ ದಿಮ್ಮಿಯನ್ನು ನೋಡುತ್ತಾನೆ.

ಆದೇ ದಿನ ರಾತ್ರಿ ಸ್ವತಃ ಶ್ರೀ_ವಿಷ್ಣುವೇ ಅವನ ಕನಸಿನಲ್ಲಿ ಬಂದು *ಆ ಮರದಲ್ಲಿ ತನ್ನ ವಿಗ್ರಹವನ್ನು ಮಾಡಿ ಪ್ರತಿಸ್ಥಾಪಿಸು* ವಂತೆ ಆದೇಶಿಸುತ್ತಾನೆ.

ಅಜ್ಞಾನುಸಾರ ರಾಜ ಆ ಸಮಯದಲ್ಲಿ ಇದ್ದಂತಹ ಪ್ರಖ್ಯಾತ ಶಿಲ್ಪಿಗಳನ್ನು ಕರೆಸುತ್ತಾನೆ.
ಆದರೆ ಅಂಜೂರದ ಮರದಿಂದ ವಿಗ್ರಹವನ್ನು ನಿರ್ಮಿಸಲು ಸಾಧ್ಯವಿಲ್ಲ
ಇದು ನಮ್ಮಿಂದಾಗದ ಕೆಲಸ ಎಂದು ಬಂದಂತಹ ಶಿಲ್ಪಿಗಳು ಹೇಳುತ್ತಾರೆ.

ಚಿಂತಾಕ್ರಾಂತನಾದ ಇಂದ್ರದ್ಯುಮ್ನನ ಎದುರು ವಿಷ್ಣುವಿನ ಕೋರಿಕೆಯಂತೆ ಓರ್ವ ವೃದ್ಧನ ವೇಷದಲ್ಲಿ ಬಂದ ದೇವಶಿಲ್ಪಿ
ಶ್ರೀ ವಿರಾಟ್ ವಿಶ್ವಕರ್ಮ,
ಕೆಲವು ಷರತ್ತುಗಳನ್ನು ಮುಂದಿಟ್ಟು ವಿಗ್ರಹ ನಿರ್ಮಿಸಿಕೊಡುವುದಾಗಿ ಹೇಳುತ್ತಾನೆ.

ಷರತ್ತುಗಳು:

*ಹೇಳಿದ ಅವಧಿಯೊಳಗೆ ನಿರ್ಮಾಣ ಕಾರ್ಯ ಮುಗಿಸಿ ತಾನೇ ಹೊರ ಬರುವವರೆಗೂ ದೇವಸ್ಥಾನದ ಬಾಗಿಲು ಮುಚ್ಚಿರಬೇಕು.*

*ಹೇಳಿದ ಅವಧಿ ಮುಗಿಯುವುದರೊಳಗೆ ಯಾರೂ ಸಹ ತಾವಿರುವ ದೇವಸ್ಥಾನದ ಬಾಗಿಲನ್ನು ತೆರೆಯಕೂಡದು.*

*ಒಂದೊಮ್ಮೆ ಬಾಗಿಲನ್ನು ತೆರೆಯುವ ಕಾರ್ಯಕ್ಕೆ ಯಾರಾದರೂ ಪ್ರಯತ್ನ ಪಟ್ಟರೆ ನಿರ್ಮಾಣ ಕಾರ್ಯ ನಿಲ್ಲಿಸಲಾಗುವುದು.*

ಷರತ್ತುಗಳಿಗೆ ಒಪ್ಪಿದ ರಾಜ.

ದೇವಳದ ಬಾಗಿಲನ್ನು ಮುಚ್ಚಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಲಾಯಿತು…

ದಿನಗಳು ಉರುಳಿದವು,
ಇಂದ್ರದ್ಯುಮ್ನ ಮತ್ತು ಅವನ ರಾಣಿಗೆ
*ದೇವಸ್ಥಾನದ ಬಳಿ ಯಾವುದೇ ಶಬ್ದ ಕೇಳಿ ಬರುತ್ತಿಲ್ಲ* ಎನ್ನುವ ಕಳವಳ ಪ್ರಾರಂಭವಾಯಿತು.

ಪ್ರಸಿದ್ಧ ಶಿಲ್ಪಿಗಳೆಲ್ಲರೂ ತಮ್ಮಿಂದಾಗದ ಕೆಲಸ ಎಂದು ಕೈ ಚೆಲ್ಲಿದಾಗ,
ಓರ್ವ ವೃದ್ಧ ತಾವಾಗಿಯೇ ಬಂದು ಅಂಜೂರದ ಹಣ್ಣಿನ ಮರದಲ್ಲಿ ವಿಗ್ರಹ ನಿರ್ಮಿಸುವುದಾಗಿ ಹೇಳಿ ಒಳಗೆ ಹೋಗಿದ್ದಾರೆಂದರೆ
ಅವರು ಸಾಮಾನ್ಯ ವ್ಯಕ್ತಿಯಂತೂ ಆಗಿರಲು ಸಾಧ್ಯವಿಲ್ಲ ಎನ್ನುವ ಕೂತುಹಲ ಒಂದು ಕಡೆಯಾದರೆ,
ನಿರ್ಮಾಣಕ್ಕೆ ಯೋಗ್ಯವಲ್ಲದ ಮರದಿಂದ ಸುಂದರವಾದ ವಿಗ್ರಹವನ್ನು ಹೇಗೆ ನಿರ್ಮಿಸುತ್ತಿರಬಹುದು ಎನ್ನುವ ಕೂತುಹಲ ಇನ್ನೊಂದು ಕಡೆ…

ಅವಧಿಗೂ ಮುನ್ನ
ಒಂದು ದಿನ ರಾಣಿಯ ತಡೆಯಲಾಗದ ಕೂತುಹಲಮತ್ತು ನಿರೀಕ್ಷೆಗಳಿಂದ ದೇವಸ್ಥಾನದ ಬಾಗಿಲನ್ನು ತೆರೆದೇ ಬಿಡುತ್ತಾಳೆ.
ಅಪೂರ್ಣ ವಿಗ್ರಹದ ಎದುರೇ ನಿಂತಿದ್ದ ವೃದ್ಧ ವೇಷದಲ್ಲಿದ್ದ ದೇವಶಿಲ್ಪಿಯು ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತಾನೆ…!!!.

ರಾಣಿಯ ಈ ನಡೆಯಿಂದ ವಿಚಲಿತನಾದ
ರಾಜಾ ಇಂದ್ರದ್ಯುಮ್ನ ಮತ್ತೊಮ್ಮೆ ವಿಷ್ಣುವಿನ ಮೊರೆ ಹೋಗುತ್ತಾನೆ…

ಆ ದಿನ ರಾತ್ರಿ, ರಾಜನ ಕನಸಿನಲ್ಲಿ ಬಂದ ವಿಷ್ಣು,
*ಇದು ನನ್ನ ವಿರಾಟ್ ರೂಪ ಈಗ ಇರುವಂತೆಯೇ ವಿಗ್ರಹವನ್ನು ಪ್ರತಿಷ್ಠಾಪಿಸು* ಎಂದು ಹೇಳುತ್ತಾನೆ…!!!.

ರಾಜ ಶ್ರಿ ವಿಷ್ಣುವಿನ ಅಣತಿಯಂತೆಯೇ ವಿಗ್ರಹವನ್ನು ಪುರಿಯಲ್ಲಿ ಪ್ರತಿಷ್ಠಾಪಿಸುತ್ತಾನೆ.

ಆ ವಿಗ್ರಹದ ರೂಪವೇ ನಾವಿಂದು ನೋಡುತ್ತಿರುವ *ಪುರಿ ಜಗನ್ನಾಥ.*

_*ಓಂ ನಮೋ ಭಗವತೇ ಜಗನ್ನಾಥಾಯ.*_
🙏🙏

ಜೀವನದಲ್ಲಿ ಕ್ರೀಡಾ ಮನೋಭಾವ ಅಳವಡಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡೋಣ” ರಾಜ್ಯಪಾಲರ ಕರೆ*

*ಬೆಂಗಳೂರು 03.07,2025:* “ಪ್ರಾಚೀನ ಕಾಲದಿಂದಲೂ ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿಯ ನಾಡಗಿರುವ ಕರ್ನಾಟಕ ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲೂ ಹೊಸ ಗುರುತನ್ನು ಮೂಡಿಸುತ್ತಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ವರ್ಲ್ಡ್ ಪ್ರೀಮಿಯರ್ 10 ಕೆ ರನ್, ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು “ಲೋಕೋಪಕಾರ ಪ್ರಶಸ್ತಿ (ಫಿಲಾಂಥರೋಪಿ ಅವಾರ್ಡ್)” ವಿತರಣಾ ಸಮಾಂರಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Today s news headlines

“ಕರ್ನಾಟಕ ರಾಜ್ಯದ ಬೆಂಗಳೂರು ನಗರವು ಐಟಿ ಮತ್ತು ನಾವೀನ್ಯತೆಯ ರಾಜಧಾನಿಯಾಗಿ ಹಾಗೂ ಕ್ರೀಡಾ ರಾಜಧಾನಿಯಾಗಿ ಮಾರ್ಪಡುತ್ತಿದೆ. ಇದು ಸಾಧನೆ, ಸಮರ್ಪಣೆ ಮತ್ತು ದೂರದೃಷ್ಟಿಯ ಫಲಿತಾಂಶವಾಗಿದೆ” ಎಂದರು.

“ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳು ಬೆಂಗಳೂರು ನಗರವು ಫಿಟ್‌ನೆಸ್, ಭಾಗವಹಿಸುವಿಕೆ ಮತ್ತು ಸಾಮೂಹಿಕ ಶಕ್ತಿಯನ್ನು ಒಳಗೊಂಡ ಕ್ರೀಡಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸಿವೆ. ಟಿಸಿಎಸ್ ವರ್ಲ್ಡ್ 10 ಕೆ, ಇಂದು ಇದು ಕೇವಲ ಸ್ಪರ್ಧೆಯಲ್ಲ, ಬೆಂಗಳೂರಿನ ಗುರುತಾಗಿದೆ. ಈ ನಗರವು ಓಡುತ್ತದೆ, ಎಚ್ಚರಗೊಳ್ಳುತ್ತದೆ ಮತ್ತು ಜೀವನವನ್ನು ಪೂರ್ಣವಾಗಿ ನಡೆಸುತ್ತದೆ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸುವ ಒಂದು ಗುರುತಾಗಿದೆ” ಎಂದು ತಿಳಿಸಿದರು.

“ಏಪ್ರಿಲ್ 27, 2025 ರಂದು, ಟಿಸಿಎಸ್ 10ಕೆ ಬೆಂಗಳೂರಿನ 17 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 37 ದೇಶಗಳನ್ನು ಪ್ರತಿನಿಧಿಸುವ 27,000 ಕ್ಕೂ ಹೆಚ್ಚು ಓಟಗಾರರು ಓಟದಲ್ಲಿ ಭಾಗವಹಿಸಿದ್ದರು. ಈ ಓಟವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಜನಾಂಗಗಳಲ್ಲಿ ಒಂದೆಂದು ಪರಿಗಣಿಸಲು ಪ್ರಾರಂಭಿಸಿದೆ, ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಅಂತರರಾಷ್ಟ್ರೀಯ ಕ್ರೀಡಾಕೂಟವು ಒಂದು ವಿಶಿಷ್ಟ ದತ್ತಿ ಮಾದರಿಯನ್ನು ಸಹ ಪ್ರಸ್ತುತಪಡಿಸುತ್ತಿದೆ” ಎಂದು ಹೇಳಿದರು.

“ಈ ಬಾರಿ, 3.83 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಲಾಗಿದ್ದು, ಇದರ ಮೂಲಕ ಅನೇಕ ಸರ್ಕಾರೇತರ ಸಂಸ್ಥೆಗಳು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲಾಗುತ್ತಿದೆ. ಅತ್ಯಂತ ಸಂತೋಷದಾಯಕ ವಿಷಯವೆಂದರೆ ನಮ್ಮ ಯುವಕರು ಏಕಾಂಗಿಯಾಗಿ 28 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಲೋಕೋಪಕಾರ ಪ್ರಶಸ್ತಿಗಳು ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ಇದು ಬೆಂಗಳೂರಿನಲ್ಲಿ ಸಮಾಜಕ್ಕೆ ನೀಡುವ ಶಕ್ತಿ, ಏಕತೆ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇದು ಜನರನ್ನು ಸಂಪರ್ಕಿಸುತ್ತದೆ, ಅವರನ್ನು ಒಟ್ಟಿಗೆ ತರುತ್ತದೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಅವರನ್ನು ಪ್ರೇರೇಪಿಸುತ್ತದೆ” ಎಂದು ತಿಳಿಸಿದರು.

“ಸಮಾಜದ ಆರೋಗ್ಯ ಮತ್ತು ಸಾಮೂಹಿಕ ಉನ್ನತಿಯಲ್ಲಿ ಕಾರ್ಪೊರೇಟ್ ಜಗತ್ತು ಮತ್ತು ಸಾಮಾಜಿಕ ಸಂಸ್ಥೆಗಳು ಎಷ್ಟು ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಇಂತಹ ಘಟನೆಗಳು ನಮಗೆ ನೆನಪಿಸುತ್ತವೆ. ಈ ಕಾರ್ಯಕ್ರಮದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಮಹಾನ್ ವ್ಯಕ್ತಿಗಳನ್ನು ಸನ್ಮಾನಿಸಲಾಗಿದೆ. ಅವರಿಗೆ ಅಭಿನಂದಿಸುತ್ತಾ, ಅವರು ಈ ರೀತಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದನ್ನು ಮುಂದುವರೆಸಲಿ” ಎಂದು ಹಾರೈಸುತ್ತೇನೆಂದರು.

“ಕರ್ನಾಟಕ ಸರ್ಕಾರವು ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳಿಗೆ ಅಡಿಪಾಯ ಹಾಕಿದೆ. ಯುವ ಆಟಗಾರರಿಗೆ ವೈಜ್ಞಾನಿಕ ತರಬೇತಿ ನೀಡಲು ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್‌ನಂತಹ ಪ್ರಯೋಗಗಳು ಅನೇಕ ಪ್ರತಿಭೆಗಳಿಗೆ ರೆಕ್ಕೆಗಳನ್ನು ನೀಡಿವೆ. ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ನೀತಿಯು ಜನರು ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಪ್ರೋತ್ಸಾಹಿಸುತ್ತಿದೆ. ರಾಜ್ಯವು ಅಮೃತ್ ಕ್ರೀಡಾ ದತ್ತು ಯೋಜನೆಯಂತಹ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಪ್ರತಿಭೆಯ ಆಧಾರದ ಮೇಲೆ ಯುವ ಆಟಗಾರರಿಗೆ ವಿಶೇಷ ನೆರವು ನೀಡಲಾಗುತ್ತದೆ. ಇದರೊಂದಿಗೆ, ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾದಂತಹ ರಾಷ್ಟ್ರೀಯ ಯೋಜನೆಗಳನ್ನು ಸಹ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.” ಎಂದು ಅವರು ಹೇಳಿದರು.

“ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಕ್ರೀಡಾ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಧರಿಸಬಹುದಾದ ಸಾಧನಗಳು, ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು AI ಆಧಾರಿತ ತರಬೇತಿ ಪರಿಕರಗಳ ಬಳಕೆಯೊಂದಿಗೆ ಆಟಗಾರರು ತಮ್ಮ ಫಿಟ್‌ನೆಸ್ ಮತ್ತು ಕಾರ್ಯತಂತ್ರವನ್ನು ನಿರಂತರವಾಗಿ ಸುಧಾರಿಸುತ್ತಿದ್ದಾರೆ. ರಾಜ್ಯದ ಅನೇಕ ನವೋದ್ಯಮಗಳು ಸಹ ಈ ದಿಕ್ಕಿನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿವೆ. ಭಾರತ ಸರ್ಕಾರವು ಹೊಸ ರಾಷ್ಟ್ರೀಯ ಕ್ರೀಡಾ ನೀತಿ 2025 ಅನ್ನು ರೂಪಿಸಿದೆ, ಇದು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ ಮತ್ತು 2047 ರ ವೇಳೆಗೆ ಭಾರತವು ಪ್ರಮುಖ ಕ್ರೀಡಾ ರಾಷ್ಟ್ರವಾಗಲು ಮತ್ತು ವಿಶ್ವದ ಅಗ್ರ 5 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಲು ಪರಿವರ್ತನಾ ಮಾರ್ಗವನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ. ಈ ಹೊಸ ಕ್ರೀಡಾ ನೀತಿಯು ದೇಶಾದ್ಯಂತ ಕ್ರೀಡಾ ಮೂಲಸೌಕರ್ಯಗಳ ಒಟ್ಟಾರೆ ಅಭಿವೃದ್ಧಿ ಮತ್ತು ಆಟಗಾರರ ಕಾರ್ಯಕ್ಷಮತೆಗೆ ನಿರ್ದೇಶನ ನೀಡುತ್ತದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುನಿಲ್ ದೇಶಪಾಂಡೆ, ಶ್ರೀ ವಿವೇಕ್ ಸಿಂಗ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.