Home Blog Page 56

Kathak RangamanchPravesh of Dainika S Shetty Mesmerizes Audience

SevaSadan, Malleshwaram, came alive with rhythm, devotion, and artistic grace as Dainika S Shetty presented her Kathak RangamanchPravesh – a significant milestone in an artiste’s journey – in front of an appreciative audience. A disciple of renowned Kathak dancers Guru SomashekarChudanath and SowmyaSomashekar from Niranthara School of Dance,Dainika offered a spellbinding performance that was a testament to years of rigorous training and artistic dedication.

The performance commenced with a vibrant Ganapathi Vandana, invoking the blessings of the remover of obstacles. This was followed by a soulful Devi Stuti, showcasing her deep emotive expression and technical finesse. A devotional MeeraBhajan highlighted her graceful abhinaya, touching the spiritual chord of the audience.

Dainika’s command over rhythm and technique was evident in the Teen TaalNritta composition, where her crisp footwork and precise pirouettes drew enthusiastic applause. A unique addition to the repertoire was the poignant Ghazal ‘AajJaane Ki Zid Na Karo’, presented with sensitivity and lyrical charm. She concluded with a vibrant Tarana, leaving the audience enthralled with her energy and poise.

The evening was further graced by the presence of eminent chief guests – Karnataka KalashreeNandini Mehta and Dr.Sushma B. V, who both lauded Dainika’s performance and encouraged her continued artistic journey.

The performance was elevated by a stellar team of musicians: Guru SomashekarChudanath on Padanth, Keerthan Holla on vocals, Gurumurthy Vaidya on Pakhawaj, Karthik Bhat on Tabla, ShruthiKamat on Sitar, and Sameer Rao on Flute – each contributing richly to the rangamanchpravesh success. The lighting design by Nagaraj and makeup by Nishanth added aesthetic brilliance, enhancing the visual experience.

The program was not just a performance but a celebration of tradition, talent, and dedication – marking a proud and promising beginning for a young artist who is undoubtedly on her path to excellence in the world of Kathak.

VK news Digital – Headlines

ಬೆಟ್ಟಹಲಸೂರು ಕ್ರಾಸ್, ಚಿಕ್ಕಜಾಲದಲ್ಲಿ ಮೆಟ್ರೋ ರೈಲುನಿಲ್ದಾಣ ಸ್ಥಾಪನೆಗೆ ತಮ್ಮೇಶ್ ಗೌಡ ಒತ್ತಾಯ

ಬೆಂಗಳೂರು: ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಸರ್ಕಾರ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕೆಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದ್ದು, ಈ ಭಾಗದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಆಗ್ರಹಿಸಿದ್ದಾರೆ.
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಬಳಿ ಮೆಟ್ರೋ ರೈಲ್ವ್ವೆ ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ತಮ್ಮೇಶ್ ಗೌಡರ ನೇತೃತ್ವದಲ್ಲಿ ಹುಣಸಮಾರನಹಳ್ಳಿ ಗ್ರಾಮದ ಬಳಿ ಮುಂದಿನ ಹೋರಾಟದ ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರತಿಷ್ಠಿತ ರಸ್ತೆ ಇದಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 40 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷಕ್ಕಿಂತ ಅಧಿಕ ಜನರು ವಾಸಿಸುತ್ತಿದ್ದಾರೆ. ದೇವನಹಳ್ಳಿ ಡಿ.ಸಿ.ಕಚೇರಿಗೆ ತೆರಳುವ ರಸ್ತೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಆಂಧ್ರÀ್ರಪ್ರದೇಶಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಹ ಈ ಮಾರ್ಗದಲ್ಲೇ ಇವೆ ಎಂದು ಗಮನ ಸೆಳೆದರು.
ಆನೇಕಲ್ ರಸ್ತೆ, ಕನಕಪುರ ರಸ್ತೆ, ಕೆ.ಆರ್.ಪುರ, ಹೊಸಕೋಟೆ ರಸ್ತೆ ಹೀಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿ ಒಂದು ಅಥವಾ ಎರಡು ಕಿ.ಮೀ.ಗೆ ಒಂದರಂತೆ ಮೆಟ್ರೋ ರೈಲು ನಿಲ್ದಾಣ ಸ್ಥಾಪಿಸಿರುವ ಬಿ.ಎಂ.ಆರ್.ಸಿ.ಎಲ್. ಆರಂಭದಲ್ಲಿ ಬೆಟ್ಟಹಲಸೂರು ಕ್ರಾಸ್ ನಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಸಕಲ ಸಿದ್ಧತೆ ನಡೆಸಿತ್ತು. ಅಲ್ಲದೆ, ನಿಲ್ದಾಣ ಸ್ಥಾಪನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರದ ಹಣವನ್ನು ಸಹ ಬಿಡುಗಡೆ ಮಾಡಿದೆ. ಆದರೆ ದಿಢೀರನೆ ಮೆಟ್ರೋ ನಿಲ್ದಾಣ ಸ್ಥಾಪನೆ ಯೋಜನೆ ಕೈಬಿಟ್ಟಿರುವುದರ ಹಿಂದೆ ಅದ್ಯಾವ ಹಿತಾಸಕ್ತಿ, ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ಬಹಿರಂಗವಾಗಬೇಕಿದೆ ಎಂದು ಅವರು ಆಗ್ರಹಿಸಿದರು.

ನಿಲ್ದಾಣ ಸ್ಥಾಪಿಸದಿದ್ದರೆ ಮೆಟ್ರೋ ಓಡಾಟಕ್ಕೆ ಬಿಡುವುದಿಲ್ಲ
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆಗಾಗಿ ಸರ್ಕಾರದ ಕಣ್ತೆರಸಲು ಇಂದು ಪೂರ್ವಭಾವಿ ಸಭೆ ಕರೆದಿದ್ದೇವೆ. ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಆಗದಿದ್ದರೆ, ಇಲ್ಲಿನ ಜನತೆಗೆ ಉಪಯೋಗವಾಗದ ಮೆಟ್ರೋ ರೈಲ್ವೆ ಅವಶ್ಯಕತೆ ಇದೆಯೇ ತಮ್ಮೇಶ್ ಗೌಡ ಎಂದು ಪ್ರಶ್ನಿಸಿದರು. ಜನೋಪಯೋಗಿ ಆಗದ ಮೆಟ್ರೋ ಯೋಜನೆಯೇ ಈ ಭಾಗಕ್ಕೆ ಬೇಡ ಎಂದು ಆಗ್ರಹಿಸಿದ್ದು, ಒಂದೊಮ್ಮೆ ಸ್ಥಳೀಯ ನಾಗರೀಕರ ಬೇಡಿಕೆಯನ್ನು ಧಿಕ್ಕರಿಸಿ ಸರ್ಕಾರ ಅಥವಾ ಬಿ.ಎಂ.ಆರ್.ಸಿ.ಎಲ್. ಮುಂದುವರೆದರೆ ಮೆಟ್ರೋ ರೈಲು ಓಡಾಟಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬ್ಯಾಟರಾಯನಪುರ ಕ್ಷೇತ್ರದ ಶಾಸಕರು ಹಾಗೂ ಕಂದಾಯ ಸಚಿವರು ಆಗಿರುವ ಕೃಷ್ಣಬೈರೇಗೌಡ ಅವರು ಈ ಕುರಿತಂತೆ ಕೆಲವು ರೈತ ಮುಖಂಡರು ಕೊಟ್ಟ ಮನವಿ ಪತ್ರಕ್ಕೆ ಸಹಿ ಹಾಕಿ ಕೊಟ್ಟಿರುವುದನ್ನು ಬಿಟ್ಟರೆ ಬೇರ ಯಾವ ಅಗತ್ಯ ಕ್ರಮ ಕೈಗೊಳ್ಳುವ ಗೋಜಿಗೆ ಹೋಗದಿರುವುದು ವಿಶಾದಕರ ಸಂಗತಿ ಎಂದು ಅವರು ಟೀಕಿಸಿದರು.
ಪತ್ರ ನೀಡುವುದ ಸಚಿವರ ಕೆಲಸವಲ್ಲ; ಬದಲಿಗೆ ಈ ಕುರಿತಂತೆ ಕ್ಷೇತ್ರದ ಜನತೆಯ ನೇತೃತ್ವ ವಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಮೆಟ್ರೋ ನಿಲ್ದಾಣ ಸ್ಥಾಪನೆ ಮಾಡಿಸಬೇಕಿರುವುದು ಅವರ ಕರ್ತವ್ಯ, ಆದರೆ ಸಚಿವರು ಇದ್ಯಾವುದನ್ನು ಮಾಡದೆ ಪತ್ರ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಬ್ಯಾಟರಾಯನಪುರ ಕ್ಷೇತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಿಲಾಗಿದ್ದು, ಕ್ಷೇತ್ರದ ಹದಿನೈದು ವರ್ಷಗಳ ಹಿಂದಿನ ಜನಸಾಂದ್ರತೆಗೂ ಈಗಿನ ಜನಸಾಂದ್ರತೆಗೂ ಅಜಗಜಾಂತರ ವ್ಯತ್ಯಾಸವಿದೆ. ಕ್ಷೇತ್ರದ ಭವಿಷ್ಯದ ಜನಸಾಂದ್ರತೆ ಮತ್ತು ಬೆಳವಣಿಗೆಯನ್ನು ಅರಿತು ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಮಾನ್ಯ ಕಂದಾಯ ಸಚಿವರ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದೊಡ್ಡಜಾಲ ಹನುಮಂತುಗೌಡ, ಕ.ರ.ವೇ.ರಾಜ್ಯ ಕಾರ್ಯದರ್ಶಿ ಸಾತನೂರು ಸುರೇಶ್ ಗೌಡ, ದಲಿತ ರೈತ ಸಂಘದ ರಾಜ್ಯಾಧ್ಯಕ್ಷ ಎಸ್.ಪಿ.ಮುನಿಯಪ್ಪ, ಮರಳುಕುಂಟೆ ನಾರಾಯಣಸ್ವಾಮಿ, ಹುಣಸಮಾರನಹಳ್ಳಿ ರಾಮು, ಹಸಿರೇ ಉಸಿರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಮುಖಂಡರು ಮಾತನಾಡಿ ಬೆಟ್ಟಹಲಸೂರು ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ರೈಲು ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಉಗ್ರ ಹೋರಾಟದ ಎಚ್ಚರಿಕೆ..
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ರೈಲು ನಿಲ್ದಾಣ ಸ್ಥಾಪನೆಗೆ ಒತ್ತಾಯಿಸಿ ಜುಲೈ 11ರಿಂದ ಪತ್ರ ಚಳವಳಿ ಆರಂಭಿಸಲಿದ್ದೇವೆ. ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಈ ಭಾಗದ ಸಹಸ್ರಾರು ಜನ ಮುಖ್ಯಮಂತ್ರಿಗಳಿಗೆ ಮೆಟ್ರೋ ನಿಲ್ದಾಣ ಸ್ಥಾಪನೆ ಕುರಿತಂತೆ ಪತ್ರ ಬರೆದು ರವಾನಿಸಲಿದ್ದಾರೆ. ಈ ಪತ್ರಗಳಿಗೆ ಸರ್ಕಾರದ ಸಕಾರಾತ್ಮಕ ಉತ್ತರಕ್ಕಾಗಿ ಒಂದು ವಾರದ ಗಡುವು ನೀಡಲಾಗುವುದು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಜುಲೈ 18ರಂದು ರಾಷ್ಟ್ರೀಯ ಹೆದ್ದಾರಿ, ತಡೆ, ಸಚಿವರ ಮನೆಗೆ ಮುತ್ತಿಗೆ ಸೇರಿದಂತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಹೋರಾಟವೆಂಬುದು ದೇಶದ ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕು, ನಮ್ಮ ಹೋರಾಟವನ್ನು ಹತ್ತಿಕ್ಕಲು ಈಗಾಗಲೇ ಹಲವು ಬಾರಿ ಈ ಭಾಗದ ಶಾಸಕರು ಪ್ರಯತ್ನಿಸಿದ್ದು, ಪೆÇೀಲೀಸರನ್ನು ಬಿಟ್ಟು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಬೆದರುವ ಅಥವಾ ಹೋರಾಟವನ್ನು ಕೈಬಿಡುವ ಪ್ರಮೇಯವೇ ಇಲ್ಲ ಎಂದು ಅವರು ತಿಳಿಸಿದರು.
ಆಚಾರ್ಯ ಬಡಾವಣೆ ನಿವಾಸಿಗಳ ಸಂಘದ ಶರಣಪ್ರಕಾಶ್, ಎಂ.ವಿ.ಸೋಲರೈಸರ್ ನ ದರ್ಶನ್, ಬೆಟ್ಟಹಲಸೂರು ಪ್ರಶಾಂತ್, ಪಿ.ಜಿ.ಓನರ್ಸ್ ಅಸೋಸಿಯೇಷನ್ ನ ಮಹೇಶ್, ವಿದ್ಯಾಸಾಗರ್ ವೆಲ್ಫೇರ್ ಅಸೋಸಿಯೇಷನ್ ನ ಕಿರಣ್, ಎಸ್ ಎಮ್ ಆರ್ ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘದ ಕಿರಣ್, ಮಹಾವೀರ ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘದ ಪ್ರಸನ್ನ ಸೇರಿದಂತೆ ಹಲವು ಸಂಘಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

 

ಜನರ ಮನಸ್ಸು ಉಲ್ಲಾಸಗೊಳಿಸುವಲ್ಲಿ ನಾಟಕಗಳ ಪಾತ್ರ ಪ್ರಮುಖ ಗೊರೂರು ಅನಂತರಾಜು

ಹಾಸನ : ಪೌರಾಣಿಕ ನಾಟಕ ಪ್ರದರ್ಶನದ ದುಬಾರಿ ವೆಚ್ಚವನ್ನು ಭರಿಸಲು ಕಲಾತಂಡಗಳೇ ಒಟ್ಟಾಗಿ ಒಂದು ತಂಡದ ನೇತೃತ್ವದಲ್ಲಿ ನಾಟಕೋತ್ಸವ ಏರ್ಪಡಿಸಿ ಕಲಾಪ್ರೇಮಿಗಳಿಗೆ ಮನರಂಜನೆ ಒದಗಿಸುತ್ತಿವೆ. ಮನೆಯಲ್ಲೇ ಕುಳಿತು ಜಡ್ಡು ಹಿಡಿದ ಜನರ ಮನಸ್ಸು ಉಲ್ಲಾಸಗೊಳಿಸುವ ದಿಶೆಯಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾಟಕಕಾರ ಗೊರೂರು ಅನಂತರಾಜು ಅಭಿಪ್ರಾಯಪಟ್ಟರು. ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನದ ಕಲಾಭವನದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಭಾನುವಾರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಪ್ರದರ್ಶಿಸಿದ ಹೇಮಾವತಿ ಸ್ವಯಂವರ ನಾಟಕದಲ್ಲಿ ಅವರು ಮಾತನಾಡಿ ಕುರುಕ್ಷೇತ್ರ, ರಾಮಾಯಣ ನಾಟಕಗಳೇ ಹೆಚ್ಚೆಚ್ಚು ಪ್ರದರ್ಶನಗೊಂಡು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿವೆ. ಕಲಾತಂಡಗಳು ಹೊಸ ಹೊಸ ನಾಟಕ ಕಲಿತು ಪ್ರದರ್ಶಿಸಬೇಕು. ಕಲಾವಿದರು ಹಲವು ಬಗೆಯ ಪಾತ್ರಗಳಲ್ಲಿ ಅಭಿನಯ ತೋರಬೇಕು. ಕಲಾವಿದ ಡಿ.ವಿ.ನಾಗಮೊಹನ್ ಹೊಸ ಪ್ರಯೋಗವಾಗಿ ಹೇಮಾವತಿ ಸ್ವಯಂವರ ನಾಟಕ ಏರ್ಪಡಿಸಿದ್ದಾರೆ.

ಇದೇ ರೀತಿ ಇನ್ನೂ ಹಲವು ಪೌರಾಣಿಕ ನಾಟಕಗಳ ಪ್ರದರ್ಶನ ಕಲಾಭವನದಲ್ಲಿ ನಡೆಯಲೆಂದು ಆಶಿಸಿದರು. ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಬಿದರೆ ರವಿ, ಖಜಾಂಚಿ ರಮೇಶ್ ಗೌಡಪ್ಪ, ಕಲಾವಿದರಾದ ಹೆಚ್.ಎಂ.ಪ್ರಭಾಕರ್, ಯರೇಹಳ್ಳಿ ಮಂಜೇಗೌಡ್ರು, ಗ್ಯಾರಂಟಿ ರಾಮಣ್ಣ, ಕರ‍್ಲೆ ಗೋವಿಂದೇಗೌಡ್ರು, ತಿಮ್ಮಣ್ಣ, ಗಣೇಶ್, ಭಾನುಶೇಖರ್, ಶಶಿ ಸಾಲಗಾಮೆ, ಶ್ರೀಕಂಠಪ್ಪ ಸಿ.ಎಂ. ಮಾಯಸಂದ್ರ ಟಿ.ನಾಗರಾಜ್, ವಕೀಲರು ತಿಮ್ಮೇಗೌಡ್ರು ಮೊದಲಾದವರು ಇದ್ದರು. ನಾಟಕ ನಿರ್ದೇಶಕÀರು ಡಿ.ಸಿ.ಪುಟ್ಟರಾಜು ಕುಟುಂಬವನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಅನ್ನಪೂರ್ಣೇಶ್ವರಿ ಕಲಾಸಂಘದ ಅಧ್ಯಕ್ಷರು ನಾಟಕೋತ್ಸವ ಆಯೋಜಕರು ಕಲಾವಿದ ಡಿ.ವಿ.ನಾಗಮೊಹನ್ ಕಾರ್ಯಕ್ರಮ ನಿರೂಪಿಸಿ ಕಲಾವಿದ ವೈಭವ್ ವೆಂಕಟೇಶ್ ಸ್ವಾಗತಿಸಿದರು. ಹಾಸನದಲ್ಲಿ ನೂತನವಾಗಿ ಪ್ರಯೋಗಗೊಂಡ ಶಿವಭಕ್ತ ಚಂಡಾಸುರನ ವಧೆ ಪ್ರೇಕ್ಷಕರ ಮನ ಸೆಳೆಯಿತು.

ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು: ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು?

ಬೆಂಗಳೂರು: ರಾಜ್ಯದಲ್ಲಿ ಹೃದಯಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರ ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ನಿತ್ಯ ಜೀವನದಲ್ಲಿ ಅನಿವಾರ್ಯ ಭಾಗವಾಗಿರುವ ಮೊಬೈಲ್ ಬಳಕೆಯೂ (Mobile Addiction) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ತಜ್ಞರ ವರದಿಯ ಮುಖ್ಯ ಅಂಶವಾಗಿದೆ.

ಕೊವಿಡ್-19 ಸಾಂಕ್ರಾಮಿಕದ ನಂತರ ಜನರಲ್ಲಿ ಮೊಬೈಲ್ ಬಳಕೆಯ ಗೀಳು ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ರೀಲ್ಸ್, ವ್ಲಾಗ್‌ಗಳು ಮತ್ತು ಇತರ ಡಿಜಿಟಲ್ ವಿಷಯಗಳ ವೀಕ್ಷಣೆಯು ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಆದರೆ, ಈ ಚಟುವಟಿಕೆಯಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ, ಹೃದಯದ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ತಜ್ಞರ ಪ್ರಕಾರ, ದೀರ್ಘಕಾಲ ಮೊಬೈಲ್‌ಗೆ ಅಂಟಿಕೊಂಡಿರುವುದರಿಂದ ಹೃದಯದ ಸ್ಪಂದನ ದರದಲ್ಲಿ (Heart Rate Variability) ಏರಿಳಿತವಾಗುತ್ತಿದ್ದು, ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಜನರು ದಿನನಿತ್ಯದ ಬೇಸರದಿಂದ ತಪ್ಪಿಸಿಕೊಳ್ಳಲು ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದಾರೆ. ಇದರಿಂದ ಊಟ, ನಿದ್ರೆ ಮತ್ತು ದೈಹಿಕ ಚಟುವಟಿಕೆಗಳಿಗೆ ಸಮಯವಿಲ್ಲದಂತಾಗಿ, ಒತ್ತಡದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ತಲೆನೋವು, ಸುಸ್ತು, ಮತ್ತು ಹೃದಯದಲ್ಲಿ ಭಾರದ ಭಾವನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಮೊಬೈಲ್‌ನಿಂದ ಹೊರಸೂಸುವ ವಿಕಿರಣವು (Radiation) ಹೃದಯದ ಮೇಲೆ ದೀರ್ಘಕಾಲಿಕ ಒತ್ತಡವನ್ನುಂಟುಮಾಡಿ, ಹೃದಯಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯು ಎಚ್ಚರಿಸಿದೆ,

ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಮೊಬೈಲ್ ಬಳಕೆಯನ್ನು ಸೀಮಿತಗೊಳಿಸುವಂತೆ ಸೂಚಿಸಿದ್ದಾರೆ. ರಾತ್ರಿಯ ವೇಳೆಯಲ್ಲಿ ಮೊಬೈಲ್‌ನಿಂದ ದೂರವಿರುವುದು, ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದು, ಮತ್ತು ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಇದಕ್ಕೆ ಪರಿಹಾರವಾಗಿದೆ. ಸಾಮಾಜಿಕ ಜಾಲತಾಣದ ರೀಲ್ಸ್‌ಗೆ ಒಡ್ಡಿಕೊಂಡು ಹೃದಯದ ಆರೋಗ್ಯವನ್ನು ಕಳೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ, ನಾನು ಕ್ಯಾಬಿನೇಟ್‌ ಸಚಿವೆ ಅಲ್ಲ; ಮತ್ತೆ ವಿವಾದ ಸೃಷ್ಟಿಸಿದ ಕಂಗನಾ

ಶಿಮ್ಲಾ: ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ  ಉಂಟಾಗಿದೆ. ಪ್ರವಾಹದಿಂದಾಗಿ ಈ ವರೆಗೆ 78 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಭಾನುವಾರ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪ್ರವಾಹ   ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್, ತಮ್ಮ ಬಳಿ ಸಂಪುಟ ಹುದ್ದೆಯೂ ಇಲ್ಲ, ವಿಪತ್ತು ಪರಿಹಾರಕ್ಕಾಗಿ ಹಣವೂ ಇಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಆದಾಗ್ಯೂ, ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.

ನನ್ನ ಬಳಿ ವಿಪತ್ತು ಪರಿಹಾರಕ್ಕಾಗಿ ಯಾವುದೇ ಹಣವಿಲ್ಲ ಅಥವಾ ಯಾವುದೇ ಸಂಪುಟ ಹುದ್ದೆಯನ್ನು ಹೊಂದಿಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ. ನಾವು ಬಹಳ ಸಣ್ಣವರು. ಆದರೆ, ಕೇಂದ್ರದಿಂದ ವಿಪತ್ತು ನಿಧಿಯನ್ನು ಪಡೆಯಲು ನಾನು ಸಹಾಯ ಮಾಡಬಹುದು” ಎಂದು ಮಂಡಿಯ ಸಂಸದೆ ಹೇಳಿದ್ದಾರೆ. ಕಂಗನಾ ಅವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸ್ವಪಕ್ಷದವರೇ ಕಂಗನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಮಂಡಿಯಲ್ಲಿ ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದರೂ ಸಂಸದೆ ಅದರ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ.‌ ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಕಂಗನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕಂಗನಾ ಮಂಡಿಯ ಪರಿಸ್ಥಿತಿಯ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕೂರ್‌, “ನನಗೆ ಗೊತ್ತಿಲ್ಲ, ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಾಳಜಿ ವಹಿಸುವವರಿಗಾಗಿ ನೆರವು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಳಜಿ ವಹಿಸದವರ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಠಾಕೂರ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, “ಸಂಸದ ಕಂಗನಾ ರನೌತ್ ಅವರಿಗೆ ಮಂಡಿಯ ಜನರ ಬಗ್ಗೆ ಕಾಳಜಿ ಇಲ್ಲ. ಇವು ನಮ್ಮ ಮಾತುಗಳಲ್ಲ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ ಎಂದು ಹೇಳಿದೆ. ಮಂಡಿಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಇದು ನಿವಾಸಿಗಳ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ದೇವೇಗೌಡರ ಕುಟುಂಬವನ್ನು ಹೊಗಳಿದ ರಾಜಣ್ಣ- ಕೈ ನಾಯಕರ ಕಕ್ಕಾಬಿಕ್ಕಿ!

ಹಾಸನ: ರಾಜಕೀಯ ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಸಚಿವ ರಾಜಣ್ಣ ದೊಡ್ಡಗೌಡ್ರ ಕುಟುಂಬವನ್ನು ವೇದಿಕೆ ಕಾರ್ಯಕ್ರಮದಲ್ಲಿ ಹಾಡಿಹೊಗಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ,
ಭಾನುವಾರ ಗೂಳಿಹೊನ್ನೇನಹಳ್ಳಿ ಗೇಟ್‍ನಲ್ಲಿ ನಿರ್ಮಾಣವಾಗಿರುವ ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೋಂಡು ಮಾತನಾಡಿದ ಕೆ ಎನ್ ರಾಜಣ್ಣ ದೇವೇಗೌಡರ ಶ್ರಮದಿಂದ ಹಾಸನ ಬೆಂಗಳೂರು ರೈಲ್ವೆ ಮಾರ್ಗ ಸೇರಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ, ಪುತ್ರ ರೇವಣ್ಣ ಕೂಡ ಅವರ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ನೀಡಿದ್ದಾರೆ,
ಎಚ್ ಡಿ ರೇವಣ್ಣ ಅವರು ಮಂತ್ರಿಯಾಗಿದ್ದಾಗ ಅಭಿವೃದ್ಧಿ ಎಂದರೆ ಹಾಸನ ಎನ್ನುವಂತೆ ಕೆಲಸ ಮಾಡುತ್ತಿದ್ದರು, ಇದ್ರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಹೇಳಿದರು,
ಸಚಿವ ರಾಜಣ್ಣ ಅವರ ಬದಲಾದ ಶೈಲಿ ಕಂಡು ವೇದಿಕೆಯಲ್ಲಿದ್ದ ಸಂಸದ ಶ್ರೇಯಸ್ ಪಟೇಲ್ ಸೇರಿ ಸ್ಧಳೀಯ ಕಾಂಗ್ರೆಸ್ ಮುಖಂಡರು ಮುಜುಗರಕ್ಕೀಡಾದ ಪ್ರಸಂಗ ಕೂಡ ನಡೆಯಿತು,

ಉಗ್ರರನ್ನು ಭಾರತಕ್ಕೆ ಒಪ್ಪಿಸಲು ಸಿದ್ಧ; ಪಾಕ್‌ ಮಾಜಿ ವಿದೇಶಾಂಗ ಸಚಿವನ ಅಚ್ಚರಿ ಹೇಳಿಕೆ

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿರುವ ಬೆನ್ನಲ್ಲೇ ಹಾಳಾಗಿರುವ ರಾಜತಾಂತ್ರಿಕತೆಯನ್ನು ಸರಿ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto) ಅವರು , ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ರಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಶುಕ್ರವಾರ ಕತಾರ್ ಮೂಲದ ಅಲ್ ಜಜೀರಾಗೆ ನೀಡಿದ ಸಂದರ್ಶನವೊಂದರಲ್ಲಿ ಭುಟ್ಟೋ ಈ ಮಾತನ್ನು ಹೇಳಿದ್ದಾರೆ. ನಾವು ಉಗ್ರರ ಹಸ್ತಾಂತರಕ್ಕೆ ಸಿದ್ದರಿದ್ದೇವೆ. ಭಾರತ ಈ ಕುರಿತು ಇಚ್ಛೆ ತೋರಿದರೆ, ನಾವೂ ಮುಂದಿನ ಪ್ರಕ್ರಿಯೆ ಕೈಗೊಳ್ಳಬಹುದು. ಲಷ್ಕರೆ ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಖಂಡಿತವಾಗಿಯೂ ನಾವು ಹಸ್ತಾಂತರಿಸುತ್ತೇವೆ ಎಂದು ಭುಟ್ಟೋ ಹೇಳಿದ್ದಾರೆ. ಪಾಕಿಸ್ತಾನದೊಂದಿಗಿನ ಸಮಗ್ರ ಸಂವಾದದ ಭಾಗವಾಗಿ, ಭಯೋತ್ಪಾದನೆಯು ನಾವು ಚರ್ಚಿಸುವ ವಿಷಯಗಳಲ್ಲಿ ಒಂದಾಗಿದೆ, ಪಾಕಿಸ್ತಾನವು ಈ ಯಾವುದೇ ವಿಷಯಗಳನ್ನು ವಿರೋಧಿಸುವುದಿಲ್ಲ ಎಂದು ನನಗೆ ಖಚಿತವಾಗಿದೆ” ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಹೇಳಿದರು. ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರ (ನ್ಯಾಕ್ಟಾ) ಪ್ರಕಾರ, ಎಲ್‌ಇಟಿ ಮತ್ತು ಜೆಇಎಂ ಎರಡನ್ನೂ ಪಾಕಿಸ್ತಾನ ನಿಷೇಧಿಸಿದೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪ್ರಸ್ತುತ ಭಯೋತ್ಪಾದನೆಗೆ ಹಣಕಾಸು ಒದಗಿಸಿದ್ದಕ್ಕಾಗಿ 33 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರೆ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮಸೂದ್ ಅಜರ್‌ನನ್ನು ನ್ಯಾಕ್ಟಾ ನಿಷೇಧಿಸಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮಸೂದ್ ಅಜರ್, 2001 ರ ಸಂಸತ್ತಿನ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆಯ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳಲ್ಲಿ ಭಾಗಿಯಾಗಿದ್ದಾನೆ. 1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ಕಂದಹಾರ್ ಅಪಹರಣ ಒತ್ತೆಯಾಳು ವಿನಿಮಯದ ಭಾಗವಾಗಿ ಅವನನ್ನು ಭಾರತೀಯ ಬಂಧನದಿಂದ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ನನ್ನು ನಿಷೇಧಿಸಿದ್ದರೂ, ಭಯೋತ್ಪಾದಕರು ಪಾಕಿಸ್ತಾನದೊಳಗೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ ಮತ್ತು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಯ ಬೆಂಬಲದೊಂದಿಗೆ ತಮ್ಮ ಸಂಘಟನೆಗಳನ್ನು ನಿರ್ಭಯವಾಗಿ ನಿರ್ವಹಿಸುತ್ತಿದ್ದಾರೆ. ಎಲ್‌ಇಟಿ ಮುಖ್ಯಸ್ಥನನ್ನು ಜೈಲಿನಲ್ಲಿಡಲಾಗಿದೆ ಎಂದು ಹೇಳಿದರೆ, ಜೆಇಎಂ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿದ್ದಾನೆ ಎಂದು ಭುಟ್ಟೋ ಹೇಳಿದ್ದಾರೆ.

ಆಯುಷ್ಮನ್ ಕಾರ್ಡ್ ಇದ್ರೂ ವೇಸ್ಟು- ಇಲ್ಲ ಟ್ರೀಟ್‍ಮೆಂಟ್!

ಬೆಂಗಳೂರು: ರಾಜ್ಯದಲ್ಲಿ ಆಯುಷ್ಮನ್ ವಯೋ ವಂದನಾ ಕಾರ್ಡ್ ಜಾರಿಯಾಗುವುದಕ್ಕೂ ಮುನ್ನವೇ 70 ವರ್ಷ ಮೇಲ್ಪಟ್ಟರಿಗೆ ಆರೋಗ್ಯೆ ಮಿಮೆಯ ಕಾರ್ಡ್ ವಿತರಿಸಲಗಿದ್ದು, ಇದೀಗ ಈ ಯೋಜನೆಯಡಿ ಚಿಕಿತ್ಸೆಗೆಂದು ಹೋದವರಿಗೆ ಚಿಕಿತ್ಸೆ ಸಿಗದ ಪರಿಣಾಕ ಜನ ಆತಂಕಕ್ಕೀಡಗಿದ್ದಾರೆ,
ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿತ್ತು, ಆದರೆ ಈ ಯೋಜನೆಯ ನಿಗದಿತ ಅನುದಾನದ ಖಚಿತತೆ ಇಲ್ಲದ ಕಾರಣ ರಾಜ್ಯ ಸರ್ಕಾರ ಇನ್ನು ಕೂಡ ಈ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ,
ಇನ್ನೊಂದಡೆ ಈ ಯೋಜನೆಯ ಕಾರ್ಡ್ ಅನ್ನು ವೃದ್ಧರಿಗೆ ವಿತರಿಸುತ್ತಿದ್ದು, ಈ ಹಿನ್ನಲೆ ಎಲ್ಲರೂ ಕೂಡ ಕಾರ್ಡ್ ಪಡೆಯುತ್ತಿದ್ದಾರೆ, ಅಲ್ಲದೇ ಸುಮಾರು 5 ಲಕ್ಷದ ವರೆಗೆ ಆರೋಗ್ಯ ಮಿಮೆ ಭರವಸೆ ಒದಗಿಸುವ ಆಯುಷ್ಮಾನ್ ವಯೋ ವಂದನಾ ಕಾರ್ಡ್ ಹಿಡಿದು ಆಸ್ಪತ್ರೆಗೆ ಹೋಗುತ್ತಿದ್ದಾರೆ,
ಈ ಯೋಜನೆ ಕೇಂದ್ರ ಸರ್ಕಾರ ಶೇ 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40 ರಷ್ಟು ವೆಚ್ಚ ಭರಿಸಬೇಕಾಗುತ್ತದೆ, ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ 68.98 ಕೋಟಿ ಅನುದಾನ ಅಗತ್ಯವಿದೆ, ಇದರಲ್ಲಿ ಶೇ 60 ರಷ್ಟು ಅನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ, 36.58 ಕೋಟಿ ರೂ ಅನುದಾನ ಪಡೆಯಲು ರಾಜ್ಯ ಅರ್ಹವಾಗಿದೆ, ಅನುದಾನದ ಸಮಸ್ಯೆಯಿಂದ ಯೋಜನೆ ಜಾರಿಯಾಗಿಲ್ಲ ಎಂದು ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ,

ಬೆಂಗಳೂರಲ್ಲಿ ಮತ್ತೆ ಲಾರಿ ಮುಷ್ಕರ

ಬೆಂಗಳೂರು: ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಲಾರಿ ಮುಷ್ಕರದ ಕಾವು ಜೋರಾಗಿದೆ. ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘವು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜುಲೈ 7ರಿಂದ ಬೆಳಗ್ಗೆ 9 ಗಂಟೆಯಿಂದ ಲಾರಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಿಂದ ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಳೆದ ಐದು ತಿಂಗಳಿಂದ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಣಿಕೆಗೆ ಸಂಬಂಧಿಸಿದಂತೆ ಸುಮಾರು 250 ಕೋಟಿ ರೂಪಾಯಿಗಳ ಬಾಕಿ ಹಣವನ್ನು ಬಿಡುಗಡೆ ಮಾಡದಿರುವುದೇ ಈ ಪ್ರತಿಭಟನೆಗೆ ಮುಖ್ಯ ಕಾರಣವಾಗಿದೆ. ಫೆಬ್ರವರಿಯಿಂದ ಮೇ ತಿಂಗಾಳವರೆಗಿನ ಸಾಗಾಣಿಕೆ ವೆಚ್ಚವನ್ನು ಸರ್ಕಾರ ಇನ್ನೂ ಪಾವತಿಸಿಲ್ಲ ಎಂದು ಸಂಘಟನೆ ಆರೋಪಿಸಿದೆ. ಐದು ತಿಂಗಳಾದರೂ ಬಾಕಿ ಮೊತ್ತ ಬಿಡುಗಡೆಯಾಗಿಲ್ಲ. ಇದರಿಂದ ಸಾಗಾಣಿಕೆದಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ,” ಎಂದು ಸಂಘದ ಮುಖಂಡರು ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಕುಟುಂಬಗಳಿಗೆ ಉಚಿತವಾಗಿ ಅಕ್ಕಿಯನ್ನು ಒದಗಿಸುತ್ತದೆ. ಆದರೆ, ಈಗ ಈ ಯೋಜನೆಯ ಅನುಷ್ಠಾನಕ್ಕೆ ಲಾರಿ ಮುಷ್ಕರದಿಂದ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ. “ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ನಮ್ಮ ಕೆಲಸಕ್ಕೆ ಸರಿಯಾದ ಸಂಭಾವನೆಯನ್ನು ಸರ್ಕಾರ ನೀಡಬೇಕು. ಈ ಮುಷ್ಕರದಿಂದ ಸಾಮಾನ್ಯ ಜನರಿಗೆ ಆಹಾರ ಧಾನ್ಯಗಳ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿಯ ಕೊರತೆ ಎದುರಾಗಬಹುದು. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸರಬರಾಜು ವಿಳಂಬದಿಂದ ತೊಂದರೆಯಾಗಿರುವ ಬಗ್ಗೆ ವರದಿಗಳಿವೆ.

ಗಣಿಗಾರಿಕೆ ಅಕ್ರಮಗಳ ತನಿಖೆಗೆ ಸಚಿವ ಸಂಪುಟ ಉಪಸಮಿತಿ ರಚನೆ

ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ, ಮುಖ್ಯವಾಗಿ ವಸೂಲಾತಿ ಆಯುಕ್ತರನ್ನು ನೇಮಕಾತಿ ಮಾಡುವ ಕುರಿತು ಹಾಗೂ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ತೀವ್ರಗತಿ ನ್ಯಾಯಾಲಯ ಸ್ಥಾಪಿಸುವ ಬಗ್ಗೆ  ಚರ್ಚಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.

ಉಪ ಸಮಿತಿಯ ಅಧ್ಯಕ್ಷರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ, ಸದಸ್ಯರುಗಳನ್ನಾಗಿ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಅರಣ್ಯ ಮತ್ತು ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ.

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977 ರ ನಿಯಮ 13 (5) ಪ್ರಕಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ)ಯು ಈ ಸಚಿವ ಸಂಪುಟ ಉಪಸಮಿತಿಗೆ ಅಗತ್ಯ ನೆರವು ನೀಡುವುದು. ಉಪಸಮಿತಿಯು ತನ್ನ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವುದು ಎಂದು ಸಚಿವ ಸಂಪುಟದ ಸರ್ಕಾರದ ಅಪರ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.