Home Blog Page 55

ಹಾಡುಗಳೇ ಮೇಲುಗೈ ಹೇಮಾವತಿ ಸ್ವಯಂವರ ನಾಟಕ

ನಾಟಕ ವಿಮರ್ಶೆ


ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಏರ್ಪಡಿಸಿರುವ ಪೌರಾಣಿಕ ನಾಟಕೋತ್ಸವದಲ್ಲಿ ಭಾನುವಾರ ಡಿ.ಸಿ.ಪುಟ್ಟರಾಜು ನಿರ್ದೇಶನದಲ್ಲಿ ಹೇಮಾವತಿ ಸ್ವಯಂವರ ನಾಟಕ ಪ್ರದರ್ಶಿತವಾಯಿತು. ಇದು ಹಾಸನದಲ್ಲಿ ಹೊಸ ಪ್ರಯೋಗವೆಂದು ಪ್ರೇಕ್ಷಕರು ಕುತೂಹಲದಿಂದಲೇ ನಾಟಕ ವೀಕ್ಷಿಸಿದರು. ನಾನು ಕೂಡ ಕಡೆಯವರೆಗೂ ಕುಳಿತು ನಾಟಕ ವೀಕ್ಷಿಸಿದೆ. ನಾಟಕದಲ್ಲಿ ಮಹಾಭಾರತದಲ್ಲಿ ಇಲ್ಲದ ಪ್ರಸಂಗಗಳು ಇದ್ದು ಇದೊಂದು ಕಾಲ್ಪನಿಕ ನಾಟಕವಾಗಿತ್ತು. ಪಿತೃ ತರ್ಪಣ ಹಬ್ಬಕ್ಕೆ ಆಹ್ವಾನಿಸಲು ಧರ್ಮರಾಯನ ಅಣತಿಯಂತೆ ಭೀಮ ಹಸ್ತಿನಾವತಿಗೆ ಅರ್ಜುನ ದ್ವಾರಕೆಗೆ ಪ್ರಯಣಿಸುವ ಪ್ರಸಂಗ ಮತ್ತು ಕಾಶಿರಾಜ ತನ್ನ ಮಗಳು ಹೇಮಾವತಿಯ ಸ್ವಯಂವರ ಏರ್ಪಡಿಸಿ ಅಲ್ಲಿ ಭೀಮನಿಗೆ ಹೇಮಾವತಿ ಹಾರ ಹಾಕುವ ಪ್ರಸಂಗ ನಾಟಕದ ಕೇಂದ್ರಬಿ0ದುಗಳು. ನಾಟಕದ ನಿರ್ದೇಶಕರು ಪುಟ್ಟರಾಜು ತಿಳಿಸಿದಂತೆ ಈ ನಾಟಕವು ಕೆ.ಆರ್. ಪೇಟೆ ತಾಲ್ಲೂಕು ಮುರುಕನಹಳ್ಳಿ ಸಂಜೀವಯ್ಯನವರಿAದ ರಚಿಸಲ್ಪಟ್ಟು ಹಲವಾರು ವರ್ಷಗಳಿಂದ ತುಮಕೂರು ಆ ಕಡೆ ತುಂಬಾ ಪ್ರದರ್ಶನ ಕಂಡಿದೆಯ0ತೆ. ಸ್ವತ: ನಾನೇ ಹಲವಾರು ತಂಡಗಳಿಗೆ ಈ ನಾಟಕ ಕಲಿಸಿದ್ದೇನೆ ಎಂದರು. ಧರ್ಮರಾಯನು ಪಿತೃತರ್ಪಣ ಹಬ್ಬ ಪ್ರಾರಂಭಿಸಿದನು ಎಂಬ ನಂಬಿಕೆಯಲ್ಲಿ ಹೊಸ ಕಥೆ ರೂಪು ತೆಳೆದಿರಬಹುದು. ಕರ‍್ಲೆ ಗೊವಿಂದೇಗೌಡ್ರು ಇದಕ್ಕೊಂದು ಉಪಕಥೆ ಹೇಳಿದರು. ಹಿಂದೆ ಯಾವುದೋ ಒಂದು ಹಳ್ಳಿಯಲ್ಲಿ ಪಿತೃಪಕ್ಷ ಹಬ್ಬಕ್ಕೆ ನಾಟಕ ಕಲಿಯಲು ಮೇಷ್ಟçನ್ನು ಕರೆಸಿದರಂತೆ. ಕುರುಕ್ಷೇತ್ರ, ರಾಮಾಯಣ ನಾಟಕ ಆಡಿ ಆಡಿ ಎಲ್ಲಾ ಪಾತ್ರಗಳ ಆಳ ಅಗಲ ಬಲ್ಲವರಾಗಿದ್ದ ಕಲಾವಿದರು ಯಾವುದಾದರೂ ಹೊಸ ನಾಟಕ ಕಲಿಸಿ ಮೇಷ್ಟೆ ಎಂದರ0ತೆ. ಆಯ್ತತ್ರಪ್ಪ, ಒಂದು ತಿಂಗಳು ಟೈಂ ಕೊಡಿ ನಾನು ಹೊಸ ನಾಟಕ ರ‍್ಕೊಂಡು ಬರ್ತಿನಿ. ಆದರೆ ನೀವು ಕಲಾವಿದರು ಆ ಪಾತ್ರ ಏಕೆ, ಈ ಪಾತ್ರ ಚಿಕ್ಕದು, ನನಗೆ ದುರ್ಯೋಧನ ಪಾತ್ರವೇ ಬೇಕು, ಕೃಷ್ಣ ನನಗೆ ಮೀಸಲಿರಲಿ ಎಂದೆಲ್ಲಾ ಕೇಳಬಾರದು. ನಾನು ಕೊಟ್ಟ ಪಾತ್ರವನ್ನು ಅಭಿನಯಿಸಬೇಕು ಎಂದು ಈ ಚಂಡಾಸುರ ಕಥೆ ಹೇಳಿದರಂತೆ.

ಕಥೆಯ ತಲೆಬುಡ ತಿಳಿಯದೆ ಪಾತ್ರದಾರಿಗಳು ತಲೆ ಅಲ್ಲಾಡಿಸಿ ಒಪ್ಪಿಕೊಂಡರ0ತೆ. ಒಬ್ಬ ವಿಮರ್ಶಕ ನಾಟಕದಲ್ಲಿ ಸತ್ತವನು ಮತ್ತೇ ಎದ್ದು ಬರುತ್ತಾನೆ ಎಂದಮೇಲೆ ನಾಟಕವೇ ಸುಳ್ಳು ಎಂದನ0ತೆ. ಇರಲಿ ಇಲ್ಲಿ ಹೇಮಾವತಿ ಸ್ವಯಂವರದಲ್ಲಿ ಸುಮಾರು 35 ದೃಶ್ಯಗಳು ಆಷಾಡದ ಮಳೆಯಲ್ಲಿ ಹೇಮಾವತಿ ಹೊಳೆಯ ನೀರು ಸರಸರನೆ ಹರಿದಂತೆ ಹಾಡುಗಳಲ್ಲೇ ಸಾಗಿ ಸಂಭಾಷಣೆ ನಗಣ್ಯವಾಗಿದೆ. ಹಸ್ತಿನಾವತಿಗೆ ಬರುವ ಭೀಮನನ್ನು ದುರ್ಯೋಧನನ ರಾಜಸಭೆಯಲ್ಲಿ ಅವಮಾನಿಸುವ ದೃಶ್ಯಕಲ್ಪನೆ ಕುರುಕ್ಷೇತ್ರ ನಾಟಕದ ಶ್ರೀಕೃಷ್ಣ ಸಂಧಾನ ನೆನಪಿಸುತ್ತದೆ. ಅರ್ಜುನನ ಆಹ್ವಾನಕ್ಕೆ ಆಗಮಿಸಿ ಶ್ರೀಕೃಷ್ಣ ಬಲರಾಮರು ಧರ್ಮರಾಯನ ಪಿತೃತರ್ಪಣದಲ್ಲಿ ಪಾಲ್ಗೊಳ್ಳುವುದು ನಮ್ಮ ಹಿರೀಕರು ಎಡೆ ಇಟ್ಟು ಆಚರಿಸುವ ಪಿತೃಪಕ್ಷ ಹಬ್ಬದ ಸಂಪ್ರದಾಯ ನೆನಪಿಸುತ್ತದೆ. ಇನ್ನೂ ಹೇಮಾವತಿ ಸ್ವಯಂವರದಲ್ಲಿ ದುರ್ಯೋಧನ ದುಶ್ಯಾಸನ ಶಕುನಿ ವಿಧುರ ಒಂದು ಕಡೆಯಿಂದ ಭೀಮ ಅರ್ಜುನರು ಪಾಂಡವರ ಕಡೆಯಿಂದ ಜರಾಸಂಧ ಶಿಶುಪಾಲ ದಂತವಕ್ರ, ಶ್ರೀಕೃಷ್ಣ ಬಲರಾಮರು ಭಾಗವಹಿಸಿ ಕಾಶಿರಾಜನ ಆಸ್ಥಾನಕ್ಕೆ ಮಗ ಹೇಮಕಾಂತನು ತಂಗಿ ಹೇಮಾವತಿಯನ್ನು ಕರೆತರುವ ಸನ್ನಿವೇಶದಲ್ಲಿ ಬಹುತೇಕ ನಾಟಕದ ಮುಖ್ಯ ಪಾತ್ರಗಳು ಬಂದು ರೋಷಾವೇಶದ ಆರ್ಭಟವೇ ಮೆರೆಯುತ್ತದೆ.

ಹೇಮಾವತಿ ಭೀಮನನ್ನು ವರಿಸಿ ಅವರಿಬ್ಬರು ಅರಮನೆಯಲ್ಲಿ ಮಲಗಿರಲು ಜರಾಸಂಧ ಶಿಶುಪಾಲರು ಹೇಮಾವತಿಯನ್ನು ಹೊತ್ತೊಯ್ಯುವ ಪ್ರಯತ್ನವನ್ನು ಭೀಮನಿಂದಲೂ ತಡೆಯಲಾಗದೆ ಹೇಮಕಾಂತ ಓಡಿಸುತ್ತಾನೆ. ದುರ್ಯೋಧನನಿಗೆ ಮಾತು ಕೊಟ್ಟು ಚಂಡಾಸುರ ಹೇಮಾವತಿಯನ್ನು ಅಪಹರಿಸುವುದು ಸೀತಾಪಹರಣ ನೆನಪಿಸುತ್ತದೆ. ಚಂಡಾಸುರನ ಮಗಳು ಕಳಶಮುಖಿಯ ರಕ್ಷಣೆಯಲ್ಲಿ ಹೇಮಾವತಿಯನ್ನು ಇರಿಸಿ ಆಂಜನೇಯ ಅವಳೊಂದಿಗೆ ಹೋರಾಡುವ ದೃಶ್ಯದಲ್ಲಿ ಮೀಸೆ ತೆಗೆಯದ ಕಲಾವಿದರು ಹಾಸ್ಯ ಪ್ರದರ್ಶಿಸುವಲ್ಲಿ ದೃಶ್ಯ ಗಾಂಭಿರ್ಯಕ್ಕೆ ಧಕ್ಕೆಯಾಗುತ್ತದೆ. ಚಂಡಾಸುರನ ಮಕ್ಕಳು ಸತ್ತ ಸುದ್ಧಿ ಕೇಳಿ ಕೆರಳಿದ ಶಿವಭಕ್ತ ಚಂಡಾಸುರ ವರಕೊಟ್ಟ ಶಿವನನ್ನೆ ಹೀಗೆಳೆದು ಕಡೆಗೆ ಶ್ರೀಕೃಷ್ಣ ಶಿವನ ಸಮ್ಮುಖದಲ್ಲೇ ಅಂಜನೇಯನಿ0ದ ಚಂಡಾಸುರನ ವಧೆಯಾಗುವಲ್ಲಿಗೆ ನಾಟಕ ಅಂತ್ಯವಾಗುತ್ತದೆ.

ನಾಟಕದಲ್ಲಿ ದೈತ್ಯ ಪಾತ್ರಗಳಾಗಿ ದುರ್ಯೋಧನ (ಹೇಮಂತ್‌ಕುಮಾರ್), ಚಂಡಾಸುರ (ನಿರಂಜನ್) ಭೀಮ (ಸತೀಶ್ ಕಬ್ಬತ್ತಿ) ಜರಾಸಂಧ (ಭಾನುಪ್ರಕಾಶ್) ದಂತವಕ್ರ (ತಿಮ್ಮಣ್ಣ) ಶಿಶುಪಾಲ (ಶಂಕರ್ ಎಂ.ಜಿ) ದುಶ್ಯಾಸನ (ಕುಮಾರ್ ಕೆಂಚಟ್ಟಹಳ್ಳಿ) ಕನಕಾಕ್ಷ (ರಾಜಶೇಖರ್) ಆರ್ಭಟವೇ ಜೋರಾಗಿ ಗದೆಗಳು ತಿರುಗುತ್ತವೆ. ಧರ್ಮರಾಯನು (ರಮೇಶ್) ಕತ್ತಿ ಹಿಡಿಯುತ್ತಾನೆ. ಶ್ರೀಕೃಷ್ಣನ ಪಾತ್ರದಲ್ಲಿ ನಿಂಗರಾಜ್, ಆಂಜನೇಯ-ವೈಭವ್ ವೆಂಕಟೇಶ್, ಹೇಮಕಾಂತ-ಗಣೇಶ್ ಟೈಲರ್, ಧರ್ಮರಾಯ-ರಮೇಶ್, ಅರ್ಜುನ-ಅಶೋಕ ಟೈಲರ್, ಕರ್ಣ-ಸೋಮೇಗೌಡ, ಶಕುನಿ-ಮಂಜುನಾಥ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಾರದನ ಪಾತ್ರಕ್ಕೆ ಹಾಡುಗಳೇ ಪ್ರಧಾನವಾಗಿ (ಆನಂದ)ಮೂರ್ತಿ ಮುನ್ನೆಡೆಸುತ್ತಾರೆ. ಈಶ್ವರನ ಪಾತ್ರದಾರಿ ರವಿ ಕೆ. ಭಾವೋದ್ರೇಕಕ್ಕೆ ಒಳಗಾಗಿ ಕುಸಿದು ಬೀಳುತ್ತಾರೆ. ನಾಟಕದ ಪೋಷಕ ಪಾತ್ರಗಳು ಭೀಷ್ಮ (ನಂಜಪ್ಪ) ವಿಧುರ (ಮೂರ್ತಿ). ಸ್ತಿç ಪಾತ್ರಗಳನ್ನು ಇಬ್ಬರೇ ಕಲಾವಿದೆಯರು ಲಕ್ಷಿö್ಮ ಶ್ರೀಧರ್, ಭಾರತಿ ನಿಭಾಯಿಸುತ್ತಾರೆ. ಸೂತ್ರದಾರಿ ಪಾತ್ರದಲ್ಲಿ 7 ವರ್ಷದ ಬಾಲೆ ಪಿ.ಕೋಮಲ (ನಿರ್ದೇಶಕರ ಮಗಳು) ವಯಸ್ಸಿನ ಕಾರಣ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರಳು. ಪಾತ್ರದಾರಿಗಳಲ್ಲಿ ರಂಗತಾಲೀಮಿನ ಕೊರತೆಯು ಸಂಭಾಷಣೆಗಳಲ್ಲಿ ತೊಡಕು ಗೋಚರಿಸುತ್ತದೆ. ಪಳಗಿದ ಕಲಾವಿದರು ಸರಿ.

ಹರ‍್ಮೋನಿಯಂ ಮಾಸ್ಟರ್ ಹಾಡು ಕಲಿಸುತ್ತಾರೆ ಓಕೆ. ಆದರೆ ಪ್ರಾಕ್ಟೀಸ್‌ನಲ್ಲಿ ಪರಸ್ಪರ ಸಂಭಾಷಣೆಗೆ ಪಾತ್ರದಾರಿಗಳು ಒಟ್ಟಾಗಿ ಬಾಗಿಯಾಗದೆ ದೃಶ್ಯಕಲ್ಪನೆ ತಿಳಿಯದೆ ಇದ್ದಲ್ಲಿ ರಂಗದ ಮೇಲೆ ಗಲಿಬಿಲಿಯಾಗುವುದು ಸಹಜವೇ. ಇನ್ನೂ ಹೇಮಾವತಿ ಮಲಗಿರಲು ಆಕೆಯ ಮುಂದೆಯೇ ಕಾಶಿರಾಜ (ರವಿ ಕೆ.ಎಸ್.) ರಾಣಿಯರ ಸರಸ ಸಲ್ಲಾಪದ ಹಾಡು ನೃತ್ಯ ಬೇಕಿರಲಿಲ್ಲ. ಪಾತ್ರದಾರಿಗಳಿಗೆ ಕೆಲವು ಪಾತ್ರಗಳು ಒಪ್ಪುವಂತಿರಲಿಲ್ಲ. ಹೀಗೆ ಹಲವು ಲೋಪದೋಷಗಳ ನಡುವೆಯೂ ಹೊಸ ಪ್ರಯೋಗವನ್ನು ರ‍್ವಾಗಿಲ್ಲ ಎಂದರು ಪ್ರೇಕ್ಷಕರು.
ಆರು ದಿನಗಳ ನಾಟಕೋತ್ಸವದಲ್ಲಿ ಮೂರು ಕುರುಕ್ಷೇತ್ರ ಎರಡು ರಾಮಾಯಣಗಳು ಇದ್ದು ಮೊದಲ ದಿನ ನಾನು ನೋಡಿದ ರಾಮಾಯಣದ ರಾಮಾಂಜನೇಯ ಸಮಾಗಮದಲ್ಲಿ ಅಂಜನೇಯ ಪಾತ್ರದಲ್ಲಿ ಪಿರುಮೇನಹಳ್ಳಿ ಮಲ್ಲೇಶಗೌಡರ ಹಾಡು, ಸೋಮವಾರ ಪ್ರದರ್ಶಿತ ಕುರುಕ್ಷೇತ್ರ ನಾಟಕದ ಗಂಗಾತೀರ ದೃಶ್ಯದಲ್ಲಿ ಕರ್ಣನ ಪಾತ್ರದಲ್ಲಿ ಅಶೋಕ ತೇಜೂರು, ಕುಂತಿ -ಲಕ್ಷಿö್ಮ ಶ್ರೀಧರ್ ಇವರ ನಡುವಣ ಸಂಭಾಷಣೆ ಮತ್ತು ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾದವು.
ಗೊರೂರು ಅನಂತರಾಜು, ಹಾಸನ.
ಮೊ:9449462879

 

VK News Digital – Today’s Headlines

ಇಂದು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ   ಸಿಎಂ 

ಬೆಂಗಳೂರು: ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ   ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.  ಸೋಮವಾರ ತಲೆಸುತ್ತು ಕಾಣಿಸಿಕೊಂಡಿದ್ದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ   ಹೋಗಿದ್ದರು, ಯಾವುದೇ ಸಭೆ, ಕಾರ್ಯಕ್ರಮಗಳು ನಿಗದಿಯಾಗಿಲ್ಲ.

ದಾಸವಾಣಿ ಕಾರ್ಯಕ್ರಮ

ಬೆಂಗಳೂರು : ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜುಲೈ 10, ಗುರುವಾರ ಸಂಜೆ 5-15ಕ್ಕೆ ದಾಸವಾಣಿ ಕಾರ್ಯಕ್ರಮ. ಗಾಯನ : ಕು|| ಮನಸ್ವಿ ಕಶ್ಯಪ್ ಮತ್ತು ಕು|| ವರ್ಣಶ್ರೀ ಮುರೂರ್. ಕೀ-ಬೋರ್ಡ್ : ವಿದ್ವಾನ್ ಶ್ರೀ ಜಯರಾಮಾಚಾರ್, ತಬಲಾ : ಶ್ರೀ ಸತ್ಯಪ್ರಮೋದ ಇವರಿಂದ ಏರ್ಪಡಿಸಲಾಗಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸ್ಥಳ :
ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು41
TODAY’S HEADLINES :

ಅಖಿಲ ಭಾರತ ಮಟ್ಟದ ಮುಷ್ಕರಕ್ಕೆ ಬೆಂಬಲ

ಕೇಂದ್ರ ಸರ್ಕಾರದ ನೌಕರ-ವಿರೋಧಿ, ಕಾರ್ಮಿಕ-ವಿರೋಧಿ ಮತ್ತು ಜನ-ವಿರೋಧಿ ನೀತಿಗಳ ವಿರುದ್ದ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದಿನಾಂಕ: 09.07.2025ರಂದು ಅಖಿಲ ಭಾರತ ಮಟ್ಟದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರದಲ್ಲಿ , ಕೇಂದ್ರ ಸರ್ಕಾರಿ ನೌಕರರ ಸಂಘಟನೆ, ದೇಶದ ಇತರೆ ರಾಜ್ಯಗಳ ರಾಜ್ಯ ಸರ್ಕಾರಿ ನೌಕರ ಸಂಘಟನೆಗಳ,  ದೇಶದ ವಿಮಾ ನೌಕರರ ಸಂಘಟನೆಗಳು, ಬ್ಯಾಂಕ್‌ ನೌಕರರ ಸಂಘಟನೆಗಳು, ರಕ್ಷಣಾ ವಲಯದ ನೌಕರ ಸಂಘಟನೆಗಳು, ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಸಂಘಟನೆಗಳು, ಸೇವಾ ಸಂಘಟನೆಗಳು, ಬಿಸಿಯೂಟ ನೌಕರರ ಸಂಘಟನೆ, ಆಶಾ ಕಾರ್ಯಕರ್ತೆಯರ ಸಂಘಟನೆ, ಅಂಗನವಾಡಿ ನೌಕರರ ಸಂಘಟನೆ, ಸಂಘಟಿತ & ಅಸಂಘಟಿತ ವಲಯದ ಕಾರ್ಮಿಕರು ಇತ್ಯಾದಿ ವಲಯದ ನೌಕರರು ಭಾಗವಹಿಸುತ್ತಿದ್ದಾರೆ.

ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಸಹ ಸದರಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಷೇರುಪೇಟೆ ಆಧಾರಿತ & NPS ಪಿಂಚಣಿ ಪದ್ದತಿ/ UPS ಪದ್ದತಿ/ PFRDA ಕಾಯಿದೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ದತಿಯನ್ನು(OPS) ಮರುಸ್ಥಾಪಿಸುವಂತೆ ಆಗ್ರಹಿಸಿ,  ಖಾಲಿ ಹುದ್ದೆ ಭರ್ತಿ ಮಾಡುವುದು, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಕೈಬಿಡುವುದು ಸೇರಿದಂತೆ ಸರ್ಕಾರಿ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ.

ದಿನಾಂಕ: 09.07.2025ರಂದು ರಾಜ್ಯ ಸರ್ಕಾರಿ ನೌಕರರು ಒಂದು ದಿನದ ಸಾಂದರ್ಭಿಕ ರಜೆ ಹಾಕಿ ತಮ್ಮ ತಮ್ಮ ಜಿಲ್ಲೆಗಳ ಕೇಂದ್ರ ಸ್ಥಾನದಲ್ಲಿ  ಇತರೆ ಸಂಘಟನೆಗಳು ಹಾಗೂ ದುಡಿಯುವ ಜನತೆ ನಡೆಸುವ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸುವುದರ ಮೂಲಕ ಬೆಂಬಲ ವ್ಯಕ್ತಪಡಿಸಿ  ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಲಾಗಿದೆ.

ಪ್ರಮುಖ ಬೇಡಿಕೆಗಳು:

1)            NPS/ UPS/ PFRDA ಕಾಯ್ದೆಯನ್ನು ರದ್ದುಗೊಳಿಸಿ, ನಿಶ್ಚಿತ ಹಳೆಯ ಪಿಂಚಣಿ (OPS) ಅನ್ನು ಮರುಸ್ಥಾಪಿಸುವುದು.

2)            ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು. ಇನ್ನು ಮುಂದೆ  ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು.

3)          ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ, ಪದೋನ್ನತಿ ನೀಡಲು ಕ್ರಮ ಕೈಗೊಳ್ಳುವುದು.

4)            ಶಿಕ್ಷಕರ ಹುದ್ದೆ ಭರ್ತಿ, ವರ್ಗಾವಣೆ,  ಸಿ &ಆರ್  ಪರಿಷ್ಕರಣೆ, ಸಮಸ್ಯೆಗಳನ್ನು ಬಗೆಹರಿಸಿ,  ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ  ಸರ್ಕಾರಿ ಶಾಲೆಗಳನ್ನು ಉಳಿಸುವುದು.

5)            ಆಡಳಿತ ಸುಧಾರಣೆ ಆಯೋಗ-2 ರ ನೌಕರ ವಿರೋಧಿ ಶಿಫಾರಸ್ಸುಗಳನ್ನು ಹಿಂಪಡೆಯುವುದು ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸುವುದು.

6)            ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸುವುದು ಹಾಗೂ ನೇರ ನೇಮಕಾತಿಯಲ್ಲಿ ಇವರುಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದು.

7)            ಬಡ್ತಿ ಮೀಸಲಾತಿ ಕಾಯಿದೆ ಸಂಪೂರ್ಣ ಅನುಷ್ಟಾನಗೊಂಡು ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡುವುದು

8)            ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟುವುದು.

9)            ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬ್ಬಂದಿಗೆ  OPS  ಸೌಲಭ್ಯ ಜಾರಿಗೊಳಿಸುವುದು.

 10)       ಕಾರ್ಮಿಕ-ವಿರೋಧಿ 4 ಲೇಬರ್‌ ಕೋಡ್‌ ಕಾಯ್ದೆಗಳನ್ನು ಹಿಂಪಡೆಯುವುದು.

11)          ಲಾಕ್ ಡೌನ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ 18 ತಿಂಗಳ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು.

 12)          ಯಾವುದೇ ವಿಚಾರಣೆ ಇಲ್ಲದೆ, ಅಧಿಕಾರಿ/ನೌಕರರನ್ನು ಸೇವೆಯಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ  ಸಂವಿಧಾನದ ವಿಧಿ 310, 311(2) a b& c ಅನ್ನು ರದ್ದುಗೊಳಿಸುವುದು : ಹೊಸ 3 ಅಪರಾಧ  ಕಾಯಿದೆಗಳನ್ನು ರದ್ದುಗೊಳಿಸುವುದು.

 13)          ನಿಯಮಾನುಸಾರ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡುವುದು.

14)       ಪ್ರಸ್ತಾಪಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ʼಸಿʼ ಮತ್ತು ʼಡಿʼ ಗುಂಪಿನ ನೌಕರರಿಗೆ ಪ್ರಸ್ತುತ  ನೀಡುತ್ತಿರುವ ವೈದ್ಯಕೀಯ ಭತ್ಯೆಯನ್ನು ಮುಂದುವರೆಸುವುದು.

 15)          ಪಿಂಚಣಿದಾರರಿಗೂ ಕೂಡಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಹಾಗೂ ಮಾಸಿಕ ರೂ.500/- ವೈದ್ಯಕೀಯ ಭತ್ಯೆ ನೀಡುವುದು.

 16)        ಇತರೆ ರಾಜ್ಯ ಸರ್ಕಾರಗಳು ಜಾರಿ ಮಾಡಿರುವಂತೆ ನಿವೃತ್ತರ ಕಮ್ಯುಟೇಷನ್‌ ಪಿಂಚಣಿ ಅವಧಿಯನ್ನು15 ವರ್ಷದಿಂದ 11 ವರ್ಷಕ್ಕೆ ಇಳಿಸುವುದು.

 17)          ನಿವೃತ್ತರ ಪಿಂಚಣಿಯ ಪರಿಷ್ಕರಣೆ ಮತ್ತು ತುಟ್ಟಿ ಭತ್ಯೆ ಪರಿಷ್ಕರಣೆಯನ್ನು ರದ್ದುಪಡಿಸುವ  ಕೇಂದ್ರ ಹಣಕಾಸು ಕಾಯ್ದೆ 2025ರ ಭಾಗ 4ನ್ನು  ರದ್ದತಿ ಮಾಡಿ ಪಿಂಚಣಿದಾರರ ಹಕ್ಕುಗಳನ್ನು ರಕ್ಷಣೆ ಮಾಡುವುದು.

18)          ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವುದು. 

19)    ಸಂವಿಧಾನದಲ್ಲಿರುವ ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿಯುವುದು; ಎಲ್ಲ ರೀತಿಯ ಮತೀಯವಾದಗಳನ್ನು  ಹಿಮ್ಮೆಟ್ಟಿಸುವುದು.

VK News Digital : Today Headlines

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಸರ್ಕಾರವು ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮೂಲಕ ನಡೆಸಲಿರುವ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಕೆ-ಸೆಟ್ ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟ್ರಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯ ವೇತನ ಸಂಶೋಧನಾ ಸಹಾಯಕರ (ಜೆಆರ್ಎಫ್) ಪರೀಕ್ಷೆಗಳಿಗೆ ೪೫ ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ಆಯೋಜಿಸಲಾಗಿದೆ.

ಆಸಕ್ತರು 2025 ರ ಜುಲೈ 11 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ 0821-2515944 / 9964760090 ಸಂಪರ್ಕಿಸಬಹುದೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್‍ಗೆ ಅವಕಾಶ

ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್ ಅವಕಾಶ ಕಲ್ಪಿಸಿದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

ಬರವಣಿಗೆಯಲ್ಲಿ ಪರಿಣತಿ ಹೊಂದಿರುವ, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2022-23 ಹಾಗೂ 2023-24 ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ತಿಳಿಸಿದ್ದಾರೆ.

ಒಟ್ಟು 24 ಅಭ್ಯರ್ಥಿಗಳಿಗೆ ಇಂಟರ್ನ್‍ಶಿಪ್ ಅವಕಾಶ ಒದಗಿಸಲಾಗುವುದು. ಅದರ ವಿವರ ಹೀಗಿದೆ:
ಮಹಿಳಾ ಆಯವ್ಯಯದಡಿ 10 ಮಹಿಳೆಯರು, ಪರಿಶಿಷ್ಟ ಜಾತಿ ಉಪಯೋಜನೆಯಡಿ 10 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 4 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇಂಟರ್ನ್‍ಶಿಪ್ ಅವಕಾಶ ಕಲ್ಪಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಎರಡು ತಂಡಗಳಲ್ಲಿ ಎರಡು ತಿಂಗಳ ಇಂಟನ್ರ್ಷಿಪ್ಗೆ ಅವಕಾಶ ಕಲ್ಪಿಸಲಾಗುವುದು. ಇಂಟರ್ನ್‍ಶಿಪ್‍ಗೆ ಸಂಸ್ಥೆ ಹಾಗೂ ಸ್ಥಳವನ್ನು ಅಕಾಡೆಮಿಯೇ ನಿಗದಿ ಪಡಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಮಾಸಿಕ 20,000/- ರೂ. ಸ್ಟೈಪಂಡ್ ನೀಡಲಾಗುವುದು.

ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://forms.gle/UgNqDcFs1v6akyAD9 ರಲ್ಲಿ ಅರ್ಜಿ ಸಲ್ಲಿಸುವುದು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯ ಸಮಿತಿಯದ್ದೇ ಅಗಿರುತ್ತದೆ.
ಅರ್ಜಿ ಸಲ್ಲಿಸಲು 2025 ರ ಜುಲೈ 25 ಕೊನೆಯ ದಿನವಾಗಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಶ್ರೀಮತಿ ಸಹನಾ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಸರ್ಕಾರವು ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮೂಲಕ ನಡೆಸಲಿರುವ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಕೆ-ಸೆಟ್ ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟ್ರಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯ ವೇತನ ಸಂಶೋಧನಾ ಸಹಾಯಕರ (ಜೆಆರ್ಎಫ್) ಪರೀಕ್ಷೆಗಳಿಗೆ ೪೫ ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ಆಯೋಜಿಸಲಾಗಿದೆ.

ಆಸಕ್ತರು 2025 ರ ಜುಲೈ 11 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ 0821-2515944 / 9964760090 ಸಂಪರ್ಕಿಸಬಹುದೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಮಾರ್ಗದರ್ಶಿ

ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಜುಲೈ ಆವೃತ್ತಿಗೆ ಪ್ರವೇಶಾತಿ ಆರಂಭ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿಗೆ ಜುಲೈ ಆವೃತ್ತಿಗೆ ಪ್ರವೇಶಾತಿ ಆರಂಭಿಸಲಾಗಿದ್ದು, ಜುಲೈ 01 ರಿಂದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.

ಸ್ನಾತಕ / ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ, ಬಿ.ಕಾಂ, ಬಿ.ಎಸ್.ಡಬ್ಲೂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ-(ಜನರಲ್ ಮತ್ತು ಐ.ಟಿ), ಬಿ.ಎಲ್.ಐ.ಎಸ್ಸಿ, ಎಂ.ಎ, ಎಂ.ಸಿ.ಜೆ, ಎಂ.ಎಸ್.ಡಬ್ಲ್ಯೂ, ಎಂ.ಕಾಂ, ಎಂ.ಎಲ್.ಐ.ಎಸ್ಸಿ, ಎಂ.ಸಿ.ಎ, ಎಂ.ಎಸ್ಸಿ, ಎಂ.ಬಿ.ಎ., ಪಿ.ಜಿ. ಸರ್ಟಿಫಿಕೇಟ್ ಪ್ರೋಗ್ರಾಮ್ಸ್, ಡಿಪ್ಲೋಮಾ ಪ್ರೋಗ್ರಾಮ್ಸ್, ಸರ್ಟಿಫಿಕೇಟ್ ಪ್ರೋಗ್ರಾಮ್ಸ್‍ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಕರಾಮುವಿಯು ಮಲ್ಲೇಶ್ವರಂನ  ಪ್ರಾದೇಶಿಕ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ.

ಕರಾಮುವಿಯ ಅಧಿಕೃತ ವೆಬ್‍ಸೈಟ್ www.ksoumysuru.ac.in ನಲ್ಲಿ  KSOU Admission Portal ಮೂಲಕ ನಿಗದಿಪಡಿಸಿರುವ ಪದವಿಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.

ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ,  ಆಟೋ / ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ, ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಎನ್.ಡಬ್ಯ್ಲೂಕೆ.ಆರ್.ಟಿ.ಸಿ, ಕೆ.ಕೆ.ಆರ್.ಟಿಸಿ ನೌಕರರುಗಳಿಗೆ ಶೇಕಡ 10 ರಷ್ಟು ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ.

ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಮೃತರಾದ ಪೋಷಕರ ಮಕ್ಕಳಿಗೆ, ತೃತೀಯ ಲಿಂಗದ (Transgender) ವಿದ್ಯಾರ್ಥಿಗಳಿಗೆ, ದೃಷ್ಠಿ ಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂ.ಬಿ.ಎ. ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.   ಎಸ್.ಸಿ./ಎಸ್.ಟಿ./ ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಎಸ್.ಎಸ್.ಪಿ ಮುಖಾಂತರ ವಿದ್ಯಾರ್ಥಿವೇತನ ಸೌಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶಶಿಕಲಾ ಜೆ, ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯ ರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03. ಹಾಗೂ ಕಛೇರಿ ದೂರವಾಣಿ ಸಂಖ್ಯೆ: 080-23448811, 9741197921, 9483517160, 7760848564, 9620395584, 8553064767 ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಮಾರ್ಗದರ್ಶಿ

TODAY’S ENGAGEMENTS Tuesday 8-7-2025

1.ಆಯುಷ್ ಇಲಾಖೆ ವತಿಯಿಂದ ನಿರ್ಮಿಸಿರುವ ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡದ ಉದ್ಘಾಟನಾ ಸಮಾರಂಭ:

ಸಮಾರಂಭ ಉದ್ಘಾಟನೆ:
ಡಿ.ಕೆ.ಶಿವಕುಮಾರ್
ಸನ್ಮಾನ್ಯ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಗೌರವಾನ್ವಿತ ಅತಿಥಿಗಳು:
ಶ್ರೀಮತಿ ನಿರ್ಮಲಾ ಸೀತಾರಾಮನ್
ಮಾನ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು, ಭಾರತ ಸರ್ಕಾರ

ಮುಖ್ಯ ಅತಿಥಿಗಳು:
ಕು.ಶೋಭಾ ಕರಂದ್ಲಾಜೆ
ಮಾನ್ಯ ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವರು, ಭಾರತ ಸರ್ಕಾರ

ಕಟ್ಟಡ ಉದ್ಘಾಟನೆ:
ದಿನೇಶ್ ಗುಂಡೂರಾವ್
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ

ಅಧ್ಯಕ್ಷತೆ:
ಪ್ರಿಯಕೃಷ್ಣ
ಮಾನ್ಯ ಶಾಸಕರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ

ದಿನಾಂಕ: 08-07-2025, ಮಂಗಳವಾರ

ಸಮಯ: ಬೆಳಿಗ್ಗೆ 11.00 ಗಂಟೆಗೆ

ಸ್ಥಳ : ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯ, ಕೆ.ಹೆಚ್.ಬಿ.ಕಾಲೋನಿ ಬಸ್ ನಿಲ್ದಾಣದ ಪಕ್ಕ, ಕೇಂದ್ರ ಕಾರ್ಯಗಾರ ಆವರಣ, ಮಾಗಡಿ ರಸ್ತೆ, ಬೆಂಗಳೂರು-79

2.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ವಿಸ್ತರಣಾ ನಿರ್ದೇಶನಾಲಯ, ದೂರ ಶಿಕ್ಷಣ ಘಟಕ ವತಿಯಿಂದ “ಕೃಷಿಯಲ್ಲಿ ದೂರ ಶಿಕ್ಷಣ” ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ:

ಉದ್ಘಾಟನೆ:
ಡಾ.ಎಸ್.ವಿ.ಸುರೇಶ
ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಮುಖ್ಯ ಅತಿಥಿ:
ಡಾ.ಕೆ.ಸಿ.ನಾರಾಯಣಸ್ವಾಮಿ
ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಅಧ್ಯಕ್ಷತೆ:
ಡಾ.ವೈ.ಎನ್.ಶಿವಲಿಂಗಯ್ಯ
ವಿಸ್ತರಣಾ ನಿರ್ದೇಶಕರು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ದಿನಾಂಕ: 08-07-2025, ಮಂಗಳವಾರ

ಸಮಯ: ಮಧ್ಯಾಹ್ನ 2.00 ಗಂಟೆಗೆ

ಸ್ಥಳ : ನಾರ್ತ್ ಬ್ಲಾಕ್ ಸಭಾಂಗಣ, ಜಿ.ಕೆ.ವಿ.ಕೆ, ಬೆಂಗಳೂರು.

“ಅಲ್ಪ ಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಯೋಜನೆ”.                

ಕರ್ನಾಟಕ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಉನ್ನತ ಶಿಕ್ಷಣ ವಂಚಿತರಾದ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ “ಉಚಿತ ಉನ್ನತ ಶಿಕ್ಷಣ ಯೋಜನೆ” ಜಾರಿಗೊಳಿಸಿದೆ. ಇದರ ಪ್ರಕಾರ 2025-26 ನೇ ಸಾಲಿನಿಂದ ಕರಾಮುವಿಯ ಯುಜಿಸಿ ಅನುಮೋದಿತ ಸ್ನಾತಕ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗಾಗಿ ಶೈಕ್ಷಣಿಕ ಅರ್ಹತೆ, ಆದಾಯ ಮತ್ತು ಜಾತಿ, ವರ್ಗ ಪ್ರಮಾಣ ಪತ್ರ ಹಾಗೂ ಇತರೆ ಮಾರ್ಗಸೂಚಿಗಳ ಅನ್ವಯ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು https”//minorityksouportal.com/ ಮೂಲಕ ಜುಲೈ 01, 2025 ರಿಂದ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು, ಆಗಸ್ಟ್ 20, 2025 ಅಂತಿಮ ದಿನಾಂಕವಾಗಿರುತ್ತದೆ. ಕರಾಮುವಿಯಲ್ಲಿ ಪ್ರವೇಶಾತಿ ಹೊಂದಿದ ಅರ್ಹ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಪರವಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಶೈಕ್ಷಣಿಕ ಕೋರ್ಸ್ನ ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಪಾವತಿಸುತ್ತದೆ. ಆದ್ದರಿಂದ ಅಲ್ಪಸಂಖ್ಯಾತ ವರ್ಗದ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ದಿಸ್ಟ್, ಜೈನ್ ಮತ್ತು ಪಾರ್ಸಿ) ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಉಚಿತ ಉನ್ನತ ಶಿಕ್ಷಣ ಯೋಜನೆಯ” ಪ್ರಯೋಜನ ಪಡೆದು ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಕರಾಮುವಿ ಬೆಂಗಳೂರು-01, ಬಾಪೂಜಿನಗರ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಶ್ರೀ ರೋಹಿತ್ ಹೆಚ್.ಎಸ್. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

ಹೆಚ್ಚಿನ ವಿವರಗಳಿಗೆ

ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್‌ ಬಸ್‌ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26,

ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805-26439/90195-26439 ಅನ್ನು ಸಂಪರ್ಕಿಸಬಹುದಾಗಿದೆ.