Home Blog Page 58

ಲಯನ್ಸ್ ಇಂಟರ್ ನ್ಯಾಷನಲ್ 317 A ಕ್ಕೆ ನೂತನ ಜಿಲ್ಲಾ ಗವರ್ನರ್ ಆಗಿ ಲಯನ್ ಮೋಹನ್ ಆಯ್ಕೆ

ಬೆಂಗಳೂರು ಲಯನ್ಸ್ ಇಂಟರ್ನೆಷನಲ್ 317 A ಕ್ಕೆ 2025-26 ನೇ ಸಾಲಿಗೆ ನೂತನ ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡಿರುವ ಲಯನ್ ಜಿ ಮೋಹನ್ ರವರು ಕ್ಲಬ್ ಕಚೇರಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಪ್ರಥಮ ಮಹಿಳೆ ಲಯನ್ ಶಾರದಾ ಮೋಹನ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಅಶೋಕ್ ಕುಲಕರ್ಣಿ, ಜಿಲ್ಲಾ ಸಂಪುಟ ಖಜಾಂಚಿ ಲಯನ್ ಡಾ. ನಾಗೇಶ ರಾವ್, ಜಿಎಂಟಿ ಸಂಯೋಜಕರು ಲಯನ್ ರಾಘವೇಂದ್ರ ಎಸ್., ಜಿಎಲ್‌ಟಿ ಸಂಯೋಜಕರು ಲಯನ್ ರಾಜನ್ ಟಿಎಸ್, ಜಿ ಎಸ್ ಟಿ
ಸಂಯೋಜಕರು ಲಯನ್ ಕೆ ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಕಾವೇರಿ ಸಂಸ್ಥಾಪಕ ಅಧ್ಯಕ್ಷರು ಹಾಗೂ ಡಿ ಸಿ ಹಂಗರ್ ಲಯನ್ ಡಾ. ಜಿ. ಎಸ್. ಚೌಧರಿ ನಾಯ್ಡು, ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷ ಗುರು ಗಂಗಾಧರ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ಮತ್ತು ಕ್ಯಾಬಿನೆಟ್ ಸದಸ್ಯರುಗಳು ಅವರನ್ನು ಅಭಿನಂದಿಸಿ ಶುಭ ಕೋರಿದರು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25ನೇ ಘಟಿಕೋತ್ಸವ: ಪಡೆದ ಜ್ಞಾನವನ್ನು ದೇಶದ ಸೇವೆಗೆ ಮುಡಿಪಿಡಿ,  ರಾಜ್ಯಪಾಲ ಗೆಹಲೋಟ್

ಬೆಳಗಾವಿ / ಬೆಂಗಳೂರು, ಜುಲೈ 04 (ಕರ್ನಾಟಕ ವಾರ್ತೆ) :

ಸವಾಲುಗಳು ಬರುತ್ತವೆ, ವೈಫಲ್ಯಗಳು ಇರುತ್ತವೆ, ಆದರೆ ಪ್ರತಿಯೊಂದು ವೈಫಲ್ಯವು ಒಂದು ಪಾಠ ಮತ್ತು ಪ್ರತಿಯೊಂದು ಹೋರಾಟವು ಒಂದು ಅವಕಾಶ ಎಂಬುದನ್ನು ನೆನಪಿಡಿ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳುತ್ತಿದ್ದರು – ಕನಸು ನೀವು ಮಲಗಿರುವಾಗ ಕಾಣುವುದಲ್ಲ; ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ.. ಎಂದು. ಅದರಂತೆ ಕನಸು ಕಾಣಿರಿ, ದೊಡ್ಡ ಕನಸು ಕಾಣಿರಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಕನಸು ಕಾಣಿರಿ ಮತ್ತು ಅವುಗಳನ್ನು ನನಸಾಗಿಸಲು ಪ್ರತಿಜ್ಞೆ ಮಾಡಿ ಎಂದರು.

ಭಾರತದ ಮಹಾನ್ ಎಂಜಿನಿಯರ್ ಮತ್ತು ರಾಷ್ಟ್ರ ನಿರ್ಮಾಪಕ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಉನ್ನತ ತಾಂತ್ರಿಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳೇ, ಸರ್ ವಿಶ್ವೇಶ್ವರಯ್ಯನವರು ತಾಂತ್ರಿಕ ಶ್ರೇಷ್ಠತೆಯ ಸಾರಾಂಶ ಮತ್ತು ದೃಷ್ಟಿಕೋನ, ನಾವೀನ್ಯತೆ ಮತ್ತು ದೇಶಭಕ್ತಿಯ ಸಾಕಾರವಾಗಿದ್ದರು. ಜ್ಞಾನವು ಉದ್ಯೋಗ ಪಡೆಯಲು ಕೇವಲ ಒಂದು ಸಾಧನವಲ್ಲ, ಸಮಾಜ ಮತ್ತು ರಾಷ್ಟ್ರವನ್ನು ಸುಧಾರಿಸುವ ಜವಾಬ್ದಾರಿಯೂ ಆಗಿದೆ ಎಂಬ ಸಿದ್ಧಾಂತದ ಸಾಕಾರ ರೂಪವಾಗಿದ್ದರು. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗ ಎಂದು ಕರೆಯಲ್ಪಡುವ ಯುಗವನ್ನು ಪ್ರವೇಶಿಸಿದ್ದೇವೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್, ರೊಬೊಟಿಕ್ಸ್ ಮತ್ತು ಶುದ್ಧ ಇಂಧನದಂತಹ ತಂತ್ರಜ್ಞಾನಗಳು ಇಡೀ ಜಗತ್ತನ್ನು ಜಾಗತಿಕ ಹಳ್ಳಿಯಾಗಿ ಪರಿವರ್ತಿಸಿವೆ. ಈ ಬದಲಾವಣೆಯ ನಡುವೆ, ನಿಮ್ಮಂತಹ ಯುವಕರ ಪಾತ್ರ ಅತ್ಯಂತ ಮುಖ್ಯವಾಗುತ್ತದೆ ಎಂದು ಹೇಳಿದರು.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಯೋಜನೆಗಳ ಜೊತೆಗೆ ನಿಮ್ಮ ನಾವೀನ್ಯತೆಗಳು, ನಿಮ್ಮ ಚಿಂತನೆ ಮತ್ತು ನಿಮ್ಮ ಕೆಲಸದ ಸಂಸ್ಕøತಿ ಬಹಳ ಮುಖ್ಯ. ಭಾರತವು ಸ್ಟಾರ್ಟ್‍ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ದೇಶದಲ್ಲಿ ಸಾವಿರಾರು ಸ್ಟಾರ್ಟ್‍ಅಪ್‍ಗಳು ಹೊರಹೊಮ್ಮುತ್ತಿದ್ದು, ನಿಮ್ಮಂತಹ ತಾಂತ್ರಿಕ ವಿದ್ಯಾರ್ಥಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತ ಎದುರಿಸುತ್ತಿರುವ ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಸವಾಲುಗಳು ನಿಮ್ಮ ನಾವೀನ್ಯತೆಗೆ ಕಾಯುತ್ತಿವೆ. ಗ್ರಾಮೀಣ ನೀರಾವರಿ, ಹಸಿರು ಇಂಧನ, ನಗರ ಸಾರಿಗೆ, ಆರೋಗ್ಯ ರಕ್ಷಣೆ, ನೀರಿನ ನಿರ್ವಹಣೆ, ಸೈಬರ್ ಭದ್ರತೆ – ಈ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಸಾಮಥ್ರ್ಯವಿದೆ ಎಂದು ತಿಳಿಸಿದರು.

ಪ್ರಸ್ತುತ ಜಗತ್ತಿನಲ್ಲಿ, ಹೊಸ ಆವಿμÁ್ಕರಗಳು ಮತ್ತು ಹೊಸ ತಂತ್ರಜ್ಞಾನಗಳು ಪ್ರತಿದಿನ ಹೊರಹೊಮ್ಮುತ್ತಿವೆ. ಆದ್ದರಿಂದ, ವಿದ್ಯಾರ್ಥಿಗಳು ಜೀವನಪಯರ್ಂತ ವಿದ್ಯಾರ್ಥಿಯಾಗಿ ಕೆಲಸ ಮಾಡಬೇಕು. ಇಂದಿನ ಹೊಸ ತಂತ್ರಜ್ಞಾನವು ನಾಳೆ ಹಳೆಯದಾಗುತ್ತದೆ. ಆದ್ದರಿಂದ ಕುತೂಹಲ ಮತ್ತು ನಾವೀನ್ಯತೆಯ ಹಸಿವನ್ನು ಕಾಪಾಡಿಕೊಳ್ಳಿ. ಕರ್ನಾಟಕ ತಾಂತ್ರಿಕ ಶಿಕ್ಷಣದ ಕೇಂದ್ರವಾಗಿದೆ ಮತ್ತು ಬೆಂಗಳೂರು ಇಂದು ವಿಶ್ವದ ತಂತ್ರಜ್ಞಾನ ಕೇಂದ್ರವಾಗಿದೆ. ಈ ರಾಜ್ಯವು ಐಟಿ ಮತ್ತು ಬಿಟಿ ಮತ್ತು ಸ್ಟಾರ್ಟ್‍ಅಪ್‍ಗಳು ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ದೇಶ ಮತ್ತು ಪ್ರಪಂಚದಲ್ಲಿ ತನ್ನ ಛಾಪು ಮೂಡಿಸಿದೆ. ಈಗ ಈ ಸಂಪ್ರದಾಯವನ್ನು ಮತ್ತಷ್ಟು ಕೊಂಡೊಯ್ದು ಭಾರತವನ್ನು ತಾಂತ್ರಿಕ ಸೂಪರ್‍ಪವರ್ ಮಾಡುವಲ್ಲಿ ಕೊಡುಗೆ ನೀಡುವುದು ಯುವಜನತೆಯ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.

ನಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಮುಂದೆ ಸಾಗಲು, ಕಲಿಯಲು, ಸೃಷ್ಟಿಸಲು ಮತ್ತು ನಮ್ಮ ರಾಜ್ಯ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡಲು ಬಳಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.
ಘಟಿಕೋತ್ಸವದಲ್ಲಿ ಪ್ರಾಧ್ಯಾಪಕ ಅಜಯ್ ಕುಮಾರ್ ಸೂದ್, ಕುಲಪತಿ ಪೆÇ್ರಫೆಸರ್ ಎಸ್.ವಿದ್ಯಾಶಂಕರ್, ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ದೇವನಹಳ್ಳಿ, ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರುಗಳ ಜೊತೆ ಚರ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ದೇವನಹಳ್ಳಿ, ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರುಗಳ ಜೊತೆ ಚರ್ಚೆ ನಡೆಸಿದರು.

ಅವರು ಇಂದು ವಿಧಾನಸೌಧ ಸಭಾಂಗಣದಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತಂತೆ ನಡೆಸಿದ ಸಭೆಯಲ್ಲಿ  ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಳ್ಳುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದಾರೆ.
ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಅಂತಿಮ ನೋಟಿಫಿಕೇಶನ್ ಅಗಿರುವ ಕಾರಣ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಈ ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶನ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಕುರಿತು ನಿನ್ನೆ ಪೂರ್ವಭಾವಿ ಸಭೆ ನಡೆಸಿದ್ದೇವೆ. ಇಂದೇ ಸರ್ಕಾರದ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. 10 ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗುವುದು ಎಂದರು.

ನಾವು ಪ್ರಜಾಪ್ರಭುತ್ವದಲ್ಲಿ ಮತ್ತು ಸಂವಾದದಲ್ಲಿ ನಂಬಿಕೆಯಿರುವವರು. ಪ್ರತಿಭಟನೆಗೆ ಯಾವುದೇ ಅಡ್ಡಿಪಡಿಸಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಿಲ್ಲ. ನಾನೂ ರೈತ ಸಂಘದಲ್ಲಿದ್ದವನು ಎಂದು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಭೈರತಿ ಸುರೇಶ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೆÇನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಚಿತ್ರನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣ

ಬೆಂಗಳೂರು : ಸೋದೆ ಶ್ರೀ ವಾದಿರಾಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ಪ್ರಥಮ ಏಕಾದಶಿ ಪ್ರಯುಕ್ತ ಜುಲೈ 6, ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ “ತಪ್ತಮುದ್ರಾಧಾರಣೆ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಭಕ್ತಾದಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಠದ ಪ್ರಕಟಣೆ ತಿಳಿಸಿದೆ. ಸ್ಥಳ : ಶ್ರೀ ಕೃಷ್ಣ ವಾದಿರಾಜ ಮಂದಿರ, ರಾಯರಾಯ ಕಲ್ಯಾಣ ಮಂಟಪದ ಆವರಣ, ಪಂಪ ಮಹಾಕವಿ ರಸ್ತೆ, ಶಂಕರಪುರ, ಬೆಂಗಳೂರು-560004

ಮಂಡ್ಯದಲ್ಲಿ ಕಾವೇರಿ ನದಿಗೆ ಹಾರಿದ ಕಾನೂನು ವಿದ್ಯಾರ್ಥಿನಿ!

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಕಾವೇರಿ ನದಿಗೆ ಹಾರಿದ್ದ ಕಾನೂನು ವಿದ್ಯಾರ್ಥಿನಿ ಪವಾಡ ಸದೃಶದಂತೆ ಪಾರಾಗಿ ಬಳಿಕ ರಕ್ಷಿಸಲ್ಪಟ್ಟ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ,
ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರಾ(19) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುತಿ, ಆಕೆ ಗುರುವಾರ ಸಂಜೆ ಕಾವೇರಿ ನದಿಗೆ ಹಾರಿದ್ದು ಸುಮಾರು ಐದು ಕಿ.ಮೀ ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿ ಬಳಿಕ ನದಿ ಮಧ್ಯೆ ಇದ್ದ ಮರಕ್ಕೆ ಸಿಕ್ಕಿಹಾಕಿಕೊಂಡಿದ್ದಳು, ರಾತ್ರಿಯಿಡೀ ಮರದ ಮೇಲೆಯೇ ಕಳೆದಿದ್ದಳು.
ಶುಕ್ರವಾರ ಸಹಾಯಕ್ಕಾಗಿ ಆಕೆ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ, ಆಗ ನದಿಯ ಆಸುಪಾಸಿನಲ್ಲಿದ್ದ ರೈತರು ಯುವತಿಯನ್ನು ನದಿ ಮಧ್ಯೆ ಗಮನಿಸಿದ್ದಾರೆ, ತಕ್ಷಣ ಅರಕೆರೆ ಠಾಣೆ ಸಬ್ ಇನ್ಸೆಪ್ಕ್ಟರ್ ಎನ್ ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ದಳ ಸ್ಧಳಕ್ಕಾಗಮಿಸಿ ಪವಿತ್ರಾಳನ್ನು ರಕ್ಷಿಸಿ ಆಕೆಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ,

ಸಮಸ್ಯೆಗಳಿರುವುದು ನಿಜ ಎಂದ ಬಿ.ವೈ.ವಿಜಯೇಂದ್ರ

ಸಮಸ್ಯೆಗಳಿರುವುದು ನಿಜ ಎಂದ ಬಿ.ವೈ.ವಿಜಯೇಂದ್ರ
ಬೆಂಗಳೂರು: ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ, ಅದನ್ನು ಹಿರಿಯರೂ ನಮ್ಮ ಮಾರ್ಗದರ್ಶಕರಾಗಿರುವ ಪ್ರಲ್ಹಾದ್ ಜೋಷಿಯವರು ಬಗೆಹರಿಸಲಿದ್ದಾರೆ ಎಂದು ಬಿ ವೈ ವಿಜಯೇಂದ್ರ ಹೇಳಿದರು, ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಕ್ಷದ ಅಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದು ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂದರು,
ನಾನೂ ಕೂಡಾ ಹಿಂದಿನ ಸಭೆಯಲ್ಲಿ ಅವರಿಗೆ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲು ಮನವಿ ಮಾಡಿದ್ದೆ, ಜೆಲ್ಲೆಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಸಹ ನಾವು ಚರ್ಚಿಸಲಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು,

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ-ಬೆಳ್ಳಿಗಳೆರಡೂ ಇಳಿಕೆ, ಇಲ್ಲಿದೆ ದರಪಟ್ಟಿ

ಬೆಂಗಳೂರು: ಕಳೆದ ಮೂರು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆಯಾಗಿವೆ. ಆಭರಣ ಚಿನ್ನ (22 ಕ್ಯಾರಟ್) ಬೆಲೆ ಗ್ರಾಮ್‌ಗೆ 55 ರೂ. ಕಡಿಮೆಯಾಗಿ 9,050 ರೂ.ಗೆ ತಲುಪಿದೆ. ಅಪರಂಜಿ ಚಿನ್ನ (24 ಕ್ಯಾರಟ್) ಬೆಲೆ ಗ್ರಾಮ್‌ಗೆ 60 ರೂ. ಇಳಿಕೆಯಾಗಿ 9,873 ರೂ.ಗೆ ಇದೆ. ಬೆಳ್ಳಿ ಬೆಲೆ ಗ್ರಾಮ್‌ಗೆ 1 ರೂ. ಕಡಿಮೆಯಾಗಿ 110 ರೂ.ಗೆ ಇಳಿದಿದೆ. ವಿದೇಶದ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಡಿಮೆಯಾಗಿವೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ವಿಭಾಗ

ಬೆಲೆ (ರೂ.)

22 ಕ್ಯಾರಟ್ ಚಿನ್ನ (10 ಗ್ರಾಮ್)

90,500

24 ಕ್ಯಾರಟ್ ಚಿನ್ನ (10 ಗ್ರಾಮ್)

98,730

ಬೆಳ್ಳಿ (10 ಗ್ರಾಮ್)

1,100

ಬೆಳ್ಳಿ (100 ಗ್ರಾಮ್)

11,100

ಈ ದರಗಳು ಪ್ರಮುಖ ಆಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿಯಾಗಿದ್ದು, ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಹೆಚ್ಚುವರಿಯಾಗಿ ವಿಧಿಸಲ್ಪಡಬಹುದು. ಖರೀದಿಯ ಮೊದಲು ಸ್ಥಳೀಯ ಆಭರಣದಂಗಡಿಗಳಲ್ಲಿ ದರವನ್ನು ಖಚಿತಪಡಿಸಿಕೊಳ್ಳಿ

ಭಾರತ ಟ್ರಿನಿಡಾಡ್ ಸ್ನೇಹ ವೃದ್ಧಿಸಲಿ- ಗಂಗಾಜಲ ಉಡುಗೊರೆಯಾಗಿ ಕೊಟ್ಟ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸದಲ್ಲಿದ್ದು ಈಗ ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದಾರೆ, ಅಲ್ಲಿ ಅವರು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾರೆ, ಮಾತ್ರವಲ್ಲದೆ ಅಲ್ಲಿನ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಮಹಾ ಕುಂಭದಿಂದ ಸಂಗಮ ಮತ್ತು ಸರಯೂ ನದಿಯ ಪವಿತ್ರ ಜಲ ಮತ್ತು ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ,
ಕಮಲಾ-ಬಿಸ್ಸೆಸ್ಸರ್ ಅವರ ಪೂರ್ವಜರು ಬಿಹಾರದ ಬಕ್ಸಾರ್ ನಲ್ಲಿ ವಾಸಿಸುತ್ತಿದ್ದರು, ಕಮಲಾ ಜಿ ಸ್ವತಃ ಅಲ್ಲಿಗೆ ಭೇಟಿ ನೀಡಿದ್ದಾರೆ, ಜನರು ಅವರನ್ನು ಬಿಹಾರದ ಮಗಳು ಎಂದು ಕರೆಯುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು,
ಈ ವರ್ಷದ ಆರಂಭದಲ್ಲಿ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆಯಾದ ಮಹಾಕುಂಭ ನಡೆದಿದ್ದು ನಿಮಗೆಲ್ಲರಿಗೂ ತಿಳಿದಿದೆ, ಮಹಾಕುಂಭದ ನೀರನ್ನು ನನ್ನೊಂದಿಗೆ ಕೊಂಡೆಯ್ಯುವ ಗೌರವ ನನಗಿದೆ, ಸರಯು ನದಿ ಮತ್ತು ಮಹಾಕುಂಭದ ಪವಿತ್ರ ನೀರನ್ನು ಇಲ್ಲಿನ ಗಂಗಾ ಧಾರಾಕ್ಕೆ ಅರ್ಪಿಸುವಂತೆ ಕಮಲಾ ಜಿ ಅವರನ್ನು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು,

ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವತೆ ಚಾಮುಂಡಿ

ಮೂಸೂರು: ಎರಡನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತಸಾಗರ ಹರಿದು ಬಂದಿದ್ದು ಬೆಳ್ಳಂಬೆಳಗ್ಗೆಯೇ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು, ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳು ಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡಿಯನ್ನು ಕಣ್ತುಂಬಿಕೊಂಡಿದ್ದಾರೆ,
ಚಾಮುಂಡಿ ಬೆಟ್ಟಕ್ಕೆ ಗುರುವಾರ ಮಧ್ಯಾಹ್ನದಿಂದಲೇ ಮೂರು ದಿನಗಳ ಕಾಲ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಆಷಾಢ ಶುಕ್ರಮವಾರದಂದು ಎಲ್ಲಾ ಭಕ್ತಾಧಿಗಳಿಗೆ ಉಚಿತ ಸಾರಿಗೆ ಬಸ್ ವ್ಯವಸ್ಧೆ ಕಲ್ಪಿಸಲಾಗಿತ್ತು, ಕಳೆದ ವಾರ ಮೆಟ್ಟಿಲುಗಳು ಮೂಲಕವೇ 60 ರಿಂದ 70 ಸಾವಿರ ಜನರು ಒಮ್ಮೆಲೆ ಬಂದ ಕಾರಣ ಸಾಕಷ್ಟು ಗೊಂದಲಗಳಾಗಿತ್ತು, ಈ ಹಿನ್ನೆಲೆಯಲ್ಲಿ ಮೆಟ್ಟಿಲು ಮೂಲಕ ಬೆಟ್ಟ ಹತ್ತಿ ಬಂದರೆ ನೇರ ದರ್ಶನ ವ್ಯವಸ್ಧೆ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ,

ಹೆಸರಾಂತ ರಂಗನಟ ಸಿ.ಎ.ರಾಮಚಂದ್ರರಾವ್

ಬೆಂಗಳೂರಿನ ರಂಗಭೂಮಿಯಲ್ಲಿ ನಿರಂತರ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರರಾವ್ ನನಗೆ ಪರಿಚಿತರೇನಲ್ಲ. ಅವರು ಒಂದು ತಿಂಗಳ ಹಿಂದೆ ನಾನು ಮಾಯಸಂದ್ರದ ನಟರು ಟಿ.ನಾಗರಾಜ್ ಬಗೆಗೆ ಬರೆದಿದ್ದ ಕಲಾ ಪರಿಚಯ ಓದಿದ್ದ ಅವರು ಮೆಚ್ಚುಗೆಯ ಮಾತನಾಡಿದರು. ಭಾನುವಾರ ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎಂದು ಕರಪತ್ರ ವ್ಯಾಟ್ಸಪ್ ಮಾಡಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದ್ದೆ. ಅದಾಗಿ ಇಂದು ಪೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು ತಂಡದಿAದ ಸಂಪೂರ್ಣ ರಾಮಾಯಣ ನಾಟಕ ಇದೆ ಬನ್ನಿ ಎಂದರು. ಕಲಾವಿದ ಡಿ.ವಿ.ನಾಗಮೋಹನ್ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದಿAದ ಜುಲೈ 4 ರಿಂದ 9ವರೆಗೆ ಹಮ್ಮಿಕೊಂಡಿರುವ ಆರು ದಿನಗಳ ನಾಟಕೋತ್ಸವದಲ್ಲಿ ಇವರ ತಂಡದ ನಾಟಕವಿದೆ. ಅವರ ನಟನೆಯ ಕೆಲವು ವಿಡಿಯೋ ಕಳಿಸಿದರು. ಪೌರಾಣಿಕ ರಂಗಭೂಮಿಯಲ್ಲಿ ತುಂಬಾ ಕೆಲಸ ಮಾಡಿರುವುದು ಅವರು ಕಳಿಸಿದ ಮಾಹಿತಿಯಿಂದ ತಿಳಿದುಬಂತು.
ಇವರು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ ಅಂಚೆ ಚಿಕ್ಕಯನ ಪಾಳ್ಯದ ಶ್ರೀ ಅಪ್ಪುರಾವ್ ಹಾಗೂ ಶ್ರೀಮತಿ ಬೈನಾಬಾಯಿ ಇವರ ಐದನೇ ಸುಪುತ್ರರಾಗಿ ಜನಿಸಿ 12 ವರ್ಷ ಬಾಲಕನಿದ್ದಾಗಲೇ ಗುಬ್ಬಿ ಕಂಪನಿಯ ಹೆಸರಾಂತ ಸಂಗೀತ ನಿರ್ದೇಶಕರಾದ ವಿರುಪಸಂದ್ರ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ ಪೌರಾಣಿಕ ನಾಟಕದಲ್ಲಿ ಬಾಲ ಭೋಜನ ಪಾತ್ರದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು. ತದನಂತರ ಅದೇ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಶ್ರೀಕೃಷ್ಣ ಗಾರುಡಿ ನಾಟಕದಲ್ಲಿ ಮೋಹಿನಿ ಪಾತ್ರದಲ್ಲಿ ಅಭಿನಯಿಸಿ ಪಾಂಡು ವಿಜಯ ನಾಟಕದಲ್ಲಿ ಅರ್ಜುನ ಪಾತ್ರ ಹತ್ತು ಬಾರಿ ಮಾಡಿದ್ದಾರೆ.

ಅಂದಿನ ಕಾಲಕ್ಕೆ ಸುತ್ತಮುತ್ತಲ ಹಳ್ಳಿಗಾಡಿನ ಜನರ ಮನಸೂರೆಗೊಂಡ ನಾಟಕ ಇದು. ಕುರುಕ್ಷೇತ್ರದಲ್ಲಿ ನಾಟಕದಲ್ಲಿ ಶ್ರೀಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಕರ್ಣ, ಅಭಿಮನ್ಯು ಈ ಒಂದೊAದು ಪಾತ್ರವನ್ನು ಹಲವು ಬಾರಿ ಮಾಡಿದ್ದಾರೆ. ರಾಮಾಯಣದಲ್ಲಿ ದಶರಥ, ಶ್ರೀರಾಮ, ಆಂಜನೇಯ, ರಾವಣ, ಭರತ ಇಷ್ಟು ಪಾತ್ರಗಳನ್ನು ಸಹ ಹಲವು ಬಾರಿ ಮಾಡಿದ್ದಾರೆ. ರಾಜ ವಿಕ್ರಮ ನಾಟಕದಲ್ಲಿ ವಿಕ್ರಮ, ಶನೇಶ್ವರನ ಪಾತ್ರಗಳನ್ನು, ದಾನ ಶೂರ ವೀರ ಕರ್ಣ ನಾಟಕದಲ್ಲಿ ಭೀಮನ ಪಾತ್ರ ಮಾಡಿದ್ದಾರೆ. 1985ರಲ್ಲಿ ಮಾರುತಿ ಕಲಾ ಬಳಗ, ಎಲೆಕ್ಟಾçನಿಕ್ ಸಿಟಿ ಎಂಬ ಸಂಘ ಸ್ಥಾಪಿಸಿ, ಈ ಸಂಘದಿ0ದ ಕಳೆದ 25 ವರ್ಷಗಳಿಂದ ಅನೇಕ ನಾಟಕಗಳನ್ನು ಕರ್ನಾಟಕದ್ಯಾಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಿ ಜನಮನ ಸೆಳದಿದ್ದಾರೆ. ತಮ್ಮ ಮಾರುತಿ ಕಲಾಬಳಗದಲ್ಲಿ ಸಾವಿರಾರು ಕರ್ನಾಟಕದ ಎಲ್ಲಾ ಜಿಲ್ಲೆಯ ಕಲಾವಿದರಿಗೂ ನಟಿಸಲು ಅವಕಾಶ ಕಲ್ಪಿಸಿದ್ದಾರೆ. ನಲ್ಲಾತಂಗ ಎಂಬ ನಾಟಕದಲ್ಲಿ ರಾಮಸಿಂಹ, ವಂಗರಾಜ, ನಲರಾಜ ವಿಜಯಸಿಂಗ, ಶ್ರೀ ಶನೇಶ್ವರನ ಪಾತ್ರಗಳನ್ನು ಒಂದೊAದು 25 ಬಾರಿ ಅಭಿನಯಿಸಿದ್ದಾರೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2007ರಿಂದ ಈವರೆಗೆ 150 ನಾಟಕಗಳನ್ನು ಪ್ರದರ್ಶಿಸಿದ್ದಾರೆ. ತುಮಕೂರು ಗುಬ್ಬಿ ವೀರಣ್ಣ ರಂಗಮAದಿರದಲ್ಲಿ 50 ಪ್ರದರ್ಶನಗಳಾಗಿವೆ. ಪ್ರಚಂಡ ರಾವಣ ನಾಟಕದಲ್ಲಿ ರಾವಣ, ಆಂಜನೇಯ ಪಾತ್ರಗಳಲ್ಲಿ ಅನೇಕ ಬಾರಿ ನಟಿಸಿದ್ದಾರೆ. ಸುಭದ್ರ ಕಲ್ಯಾಣ ನಾಟಕದಲ್ಲಿ ಅರ್ಜುನ ಪಾತ್ರದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ.

ಇದೇ ರವೀಂದ್ರ ಕಲಾಕ್ಷೇತ್ರದಲ್ಲಿ ತಾ. 3-2-2025ರಂದು ಭಾರತದ ಎರಡು ಮಹಾಕಾವ್ಯ ರಾಮಾಯಣ ಮಹಾಭಾರತ ಆಧರಿಸಿ ಹೆಸರಾಂತ ರಂಗ ಕಲಾವಿದರು ರಂಗಶ್ರೀ ರಂಗಸ್ವಾಮಿ ಅವರ ಪರಿಕಲ್ಪನೆಯಲ್ಲಿ ಹೆಸರಾಂತ ರಂಗಕರ್ಮಿ ಎಸ್.ಎಲ್.ಎನ್.ಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಯುಗೇ ಯುಗೇ ಪೌರಾಣಿಕ ನಾಟಕವು ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.

ಈ ನಾಟಕದಲ್ಲಿ ತ್ರೇತ ದ್ವಾಪರ ಯುಗಗಳ ರಾವಣ ದುರ್ಯೋಧನ ಒಂದೇ ವೇದಿಕೆಯಲ್ಲಿ ಬರುವ ಈ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಬೆಂಗಳೂರಿನ ಪುರಭವನದಲ್ಲಿ 2013ರಲ್ಲಿ ಸತತ 108 ಗಂಟೆಗಳ ಕಾಲ ಪ್ರದರ್ಶಿತ ಸಮಗ್ರ ಮಹಾಭಾರತ ಪೌರಾಣಿಕ ನಾಟಕದಲ್ಲಿ ಬಬ್ರುವಾಹನ ಪಾತ್ರ ನಿರ್ವಹಿಸಿದ್ದಾರೆ. ಇವರಿಗೆ ಹಲವಾರು ಕಲಾವಿದರು ಸಂಘ ಸಂಸ್ಥೆಗಳು ಹಲವು ಬಿರುದುಗಳೊಂದಿಗೆ ಸನ್ಮಾನಿಸಿವೆ. ಈವರೆಗೆ 250 ನಾಟಕಗಳನ್ನು ಶ್ರೀ ಮಾರುತಿ ಕಲಾ ಬಳಗದಿಂದ ಪ್ರದರ್ಶನ ಕೊಟ್ಟಿದ್ದಾರೆ.

ತುಮಕೂರು ಸಿದ್ಧಗಂಗಮಠದಲ್ಲಿ ಬಿಕಾಂ ಪದವಿ ಮಾಡಿರುವ ಇವರು ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯಲ್ಲಿ ಸನ್ ವೇರ್ ಗ್ರೂಪ್ ಆಫ್ ಕಂಪನೀಸ್ ಎಚ್.ಆರ್. ಮೇನೇಜರ್ ಆಗಿ 16 ವರ್ಷ ಸೇವೆ ಸಲ್ಲಿಸಿ ಈಗ ಜೆಡಿಎಸ್ ಪಕ್ಷದ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ. ನಾನು ರೈತ ಕುಟುಂಬದಿAದ ಬಂದು ಈಗಲೂ ಹಳ್ಳಿಗೆ ಹೋಗಿ ಕೃಷಿ ಕೆಲಸ ಮಾಡುತ್ತೇನೆ, ನನ್ನ ಜೀವಿತ ಕಾಲದಲ್ಲಿ ಇನ್ನೂ 250 ನಾಟಕಗಳನ್ನು ಅಭಿನಯಿಸುವ ಅಭಿಲಾಷೆ ಇದೆ ಎನ್ನುತ್ತಾರೆ,

ಗೊರೂರು ಅನಂತರಾಜು, ಹಾಸನ.
ಮೊ: 9449462879.