ಇಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರ ಗ್ರಾಮದಲ್ಲಿ ನೂತನ ಸಂಗಮ ಕೋಲ್ಡ್ರಿಂಕ್ಸ ಘಟಕವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿ, ಮಾಲಕರಾದ ಶ್ರೀ ಗಂಗಾಧರ ಬಾಣದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಬೆಂಗಳೂರು, ಜುಲೈ 11, (ಕರ್ನಾಟಕ ವಾರ್ತೆ): ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರಿನ ಜಾರಿ ವಿಭಾಗದ ಅಧಿಕಾರಿಗಳು ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೋಂದಣಿ ರಹಿತ ಅಡಿಕೆ ವ್ಯಾಪಾರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಮತ್ತು ಮಂಗಳೂರುಗಳಲ್ಲಿ ಜಿಎಸ್‍ಟಿ ನೋಂದಣಿ ಪಡೆಯದೇ ಅಡಿಕೆ ವ್ಯಾಪಾರ ನಡೆಸಿ ತೆರಿಗೆ ವಂಚನೆ ಮಾಡುತ್ತಿದ್ದ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಿ ಅವರ ಗೋಡೌನುಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆಯ ಮಾಹಿತಿ ಸಂಗ್ರಹಿಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಾರಿ, ದಕ್ಷಿಣ ವಲಯ ವಿಭಾಗದ ಅಪರ ಆಯುಕ್ತರಾದ ಚಂದ್ರಶೇಖರ್ ನಾಯಕ್ ರವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೆಳೆದ ಅಡಿಕೆಯನ್ನು ತೆರಿಗೆ ವಂಚನೆ ಮಾಡಿ ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ಸುಮಾರು 1.5ಕೋಟಿಯಷ್ಟು ತೆರಿಗೆ ವಂಚನೆ ಪತ್ತೆಯಾಗಿದ್ದು ಲೆಕ್ಕ ಪುಸ್ತಕಗಳ ಪರಿಶೀಲನೆ ಮುಂದುವರೆದಿದೆ ಎಂದು ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ) ಚಂದ್ರಶೇಖರ್ ನಾಯಕ ಎಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಸಂವಿಧಾನ ಪರಿಚ್ಛೇದ 243-ಜೆಡ್.ಎ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಪೌರ ಸಭೆಗಳಗ ಅಧಿನಿಯ 1964 ಪ್ರಕರಣ 17 ಮತ್ತು 19ರ ಅನ್ವಯ ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರ್‍ಗಳ ಚುನಾವಣೆ) ನಿಯಮಗಳು, 1977ನಿಯಮ 3(1)ಅನ್ವಯ ಕೋಲಾರದ ವೇಮಗಲ್ ಕುರುಗಲ್, ಚಿಕ್ಕಮಗಳೂರಿನ ಅಜ್ಜಂಪುರ, ದಕ್ಷಿಣ ಕನ್ನಡದ ಕಡಬ, ಹಾವೇರಿಯ ರಟ್ಟಿಹಳ್ಳಿ ಹಾಗೂ ಕಲಬುರಗಿಯ ಕಾಳಗಿ 05 ಪಟ್ಟಣ ಪಂಚಾಯತಿಗಳಿಗೆ ಸಾರ್ವತ್ರಿಕ ಚುಣಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಬೆಳಗಾವಿಯ ಉಗಾರಖುರ್ದ ಪುರಸಭೆ ವಾರ್ಡ್ ಸಂ. 15, ವಿಜಯಪುರದ ನಿಡಗುಂದಿ ಪಟ್ಟಣ ಪಂಚಾಯತಿ ವಾರ್ಡು ಸಂ 05 ಹಾಗೂ ರಾಯಚೂರಿನ ಸಿರವಾರ ಪಟ್ಟಣ ಪಂಚಾಯತಿ ವಾರ್ಡ್ ಸಂ 12ರ ವಾರ್ಡುಗಳಿಗೆ ಉಪ ಚುನಾವಣೆಯನ್ನುನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಜುಲೈ 29, 2025 ಮಂಗಳವಾರ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 05, 2025 ಮಂಗಳವಾರ, ನಾಮಪತ್ರ ಪರಿಶೀಲನೆ ಆಗಸ್ಟ್ 06, 2025 ಬುಧವಾರ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಆಗಸ್ಟ್ 08, ಶುಕ್ರವಾರ, ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನಾಂಕ ಆಗಸ್ಟ್ 17, 2025 ಭಾನುವಾರ, ಮತದಾನದ ಸಮಯ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಮರು ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನಾಂಕ ಆಗಸ್ಟ್ 19, 2025 ಮಂಗಳವಾರ, ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ದಿನಾಂಕ ಆಗಸ್ಟ್ 20, 2025 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಆಗಸ್ಟ್ 20, 2025 ಬುಧವಾರದಂದು ಚುನಾವಣೆ ಮುಕ್ತಾಯವಾಗಲಿದೆ.
ಸದಾಚಾರ ಸಂಹಿತೆಯು ದಿನಾಂಕ: 29/07/2025 ರಿಂದ ದಿನಾಂಕ: 20/08/2025 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.
ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ ಹೊರಡಿಸತಕ್ಕದ್ದು. ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡ್ ಸಂಖ್ಯೆ ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಕಚೇರಿ ಮತ್ತು ಇನ್ನಿತರ ಮುಖ್ಯ ಸ್ಥಳಗಳಲ್ಲಿಯೂ ಸಹಾ ಪ್ರದರ್ಶಿಸತಕ್ಕದ್ದು ಹಾಗೂ ಅಂದೇ ಇ-ಮೇಲ್ ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೂ ಕಳುಹಿಸುವುದು.
ಅಧಿಸೂಚನೆಯ ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು, ಅದೇ ದಿನದಂದು ಪ್ರಪತ್ರ-1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರಕಟಿಸುವಂತೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.
ವಿಶೇಷ ಸೂಚನೆ:
ಈಗಾಗಲೇ ನೀಡಿರುವ ನಿರ್ದೇಶನಗಳಂತೆ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡುವುದು ಮತ್ತು ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ, ಸುತ್ತೋಲೆ ಹಾಗೂ ನಿರ್ದೇಶನ ಪತ್ರಗಳ ಪ್ರತಿಗಳನ್ನು ನೀಡುವುದು.
ಘೋಷಣಾ ಪತ್ರ / ಪ್ರಮಾಣ ಪತ್ರ: ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು, ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನೆಲೆ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕತ ನಮೂನೆಯಲ್ಲಿ ಘೋಷಣಾ ಪತ್ರ / ಪ್ರಮಾಣ ಪತ್ರ (Affidavit) ಸಲ್ಲಿಸಬೇಕಾಗಿರುತ್ತದೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‍ಇಸಿ 10 ಎಂಐಎಸ್‍ಸಿ 2016, ದಿನಾಂಕ:29/06/2016 ಮತ್ತು ತಿದ್ದುಪಡಿ ದಿನಾಂಕ:06/07/2016 ರಂತೆ ಕ್ರಮವಹಿಸುವುದು. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 12 ಶಾಸನ 2019. ಬೆಂಗಳೂರು, ದಿನಾಂಕ: 27/04/2020 ರಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 22ಕ್ಕೆ ಮತ್ತು ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ, 1976ರ ಪ್ರಕರಣ 14ಕ್ಕೆ ತಿದ್ದುಪಡಿ ಮಾಡಲಾಗಿದ್ದು, “ಅರ್ಹ ಮತದಾರನು, ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಚಿಸದಿರುವ ಸಂದರ್ಭದಲ್ಲಿ ಆತನು “None of the above (NOTA)” (ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತಚಲಾಯಿಸಲು” ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 28 ಇಯುಬಿ 2018, ದಿನಾಂಕ: 01/06/2018 ರಂತೆ ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳುವುದು. ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.
ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯು ನಗರ ಸಭೆಗೆ ವೆಚ್ಚ ಮಿತಿ 2.00 ಲಕ್ಷ ರೂ, ಪುರ ಸಭೆಗೆ 1.50 ಲಕ್ಷ ರೂ ಹಾಗೂ ಪಟ್ಟಣ ಪಂಚಾಯತಿಗೆ 1.00 ಲಕ್ಷ ರೂ ನಿಗಧಿಪಡಿಸಲಾಗಿದೆ.
ಭಾವಚಿತ್ರವಿರುವ ಮತಪತ್ರ : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವುದರಿಂದ, ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿಗಳನ್ನು ತೋರಿಸಲಾಗುತ್ತದೆ. ಆದರೂ ಸಹ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಘೋಷಣಾ ಪತ್ರ / ಪ್ರಮಾಣ ಪತ್ರ : ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು. ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕøತ ನಮೂನೆಯಲ್ಲಿ ಘೋಷಣಾ ಪತ್ರ/ ಪ್ರಮಾಣ ಪತ್ರ (Affidavit) ಸಲ್ಲಿಸಬೇಕಾಗಿರುತ್ತದೆ.
ಚುನಾವಣಾ ಅಧಿಸೂಚನೆ : ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ, ಚುನಾವಣಾ ಅಧಿಸೂಚನೆಯನ್ನು ಹೊರಡಿಸುವರು. ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಸದಸ್ಯ ಸ್ಥಾನಗಳ ಉಪ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಪ್ರಾಣಿ ಸಂಸ್ಥಾನದ (ZSI) ವಿಜ್ಞಾನಿಗಳಿಂದ ಪಶ್ಚಿಮ ಘಟ್ಟಗಳ ಕಾಡಿನಿಂದ ಜೀವಂತ ಪಳೆಯುಳಿಕೆ (Living Fossil) ಖ್ಯಾತಿಯ ಮುಳ್ಳು ಬಾಲದ ಮರ ಇಲಿ (Platacanthomys lasiurus) ಪತ್ತೆ
ಭಾರತೀಯ ಪ್ರಾಣಿ ಸಂಸ್ಥಾನದ (ZSI) ವಿಜ್ಞಾನಿಗಳು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಜೀವಂತ ಪಳೆಯುಳಿಕೆ (Living Fossil) ಖ್ಯಾತಿಯ ಮಲಬಾರ್ ಮುಳ್ಳು ಬಾಲದ ಮರ ಇಲಿಯ (Platacanthomys lasiurus) ವೈಜ್ಞಾನಿಕ ವಿಕಸನದ ಇತಿಹಾಸವನ್ನು (Evolutionary History) ವಿವರಿಸುವ ಸಲುವಾಗಿ ಇದೇ ಪ್ರಪ್ರಥಮ ಬಾರಿಗೆ ಜೈವಿಕ ತಂತ್ರಜ್ಞಾನದ ಸಹಯೋಗದಿಂದ DNA ಬಾರ್ಕೋಡ್ ಗಳನ್ನೂ (Barcode) ರಚಿಸಲಾಗಿದೆ.
ಈ ಅಧ್ಯಯನವು ಪ್ರಾಣಿಯ ಉನ್ನತ ಮಟ್ಟದ ವರ್ಗಿಕರಣ ಶಸ್ತ್ರದ (Taxonomy) ಸ್ಪಷ್ಟತೆ ಒದಗಿಸುವಲ್ಲಿ ಸಹಾಯ ಮಾಡಿದೆ. ಇದು ಭಾರತೀಯ ಜೀವಶಾಸ್ತ್ರೀಯ ಸಮೀಕ್ಷೆಯ ವಿವಿಧ ಪ್ರಾದೇಶಿಕ ಕೇಂದ್ರಗಳ ವಿಜ್ಞಾನಿಗಳ ಸಹಯೋಗದ ಪ್ರಯತ್ನವಾಗಿದೆ. ಈ ಮಹತ್ವದ ಆವಿಷ್ಕಾರವನ್ನು ZSI, ಪಶ್ಚಿಮ ಪ್ರಾದೇಶಿಕ ಕೇಂದ್ರ (ಪುಣೆ) ನ ಡಾ. ಎಸ್. ಎಸ್. ತಾಳ್ಮಲೆ, ಡಾ. ಕೆ.ಪಿ. ದಿನೇಶ್ ಮತ್ತು ಶ್ರೀಮತಿ ಎ. ಶಬ್ನಂ; ZSI ಪಶ್ಚಿಮ ಘಟ್ಟ ಪ್ರಾದೇಶಿಕ ಕೇಂದ್ರ (ಕೋಝಿಕೋಡ್) ನ ಡಾ. ಜಾಫರ್ ಪಲೋಟ್ ಮತ್ತು ZSI ದಕ್ಷಿಣ ಪ್ರಾದೇಶಿಕ ಕೇಂದ್ರ (ಚೆನ್ನೈ) ನ ಡಾ. ಕೆ. ಎ. ಸುಬ್ರಹ್ಮಣಿಯನ್ ಅವರು ಸಂಯುಕ್ತವಾಗಿ ಕೈಗೊಂಡಿದ್ದಾರೆ.
ಈ ಸಂಶೋಧನೆಗಳು ಅಂತರರಾಷ್ಟ್ರೀಯ ಖ್ಯಾತಿಯ ಸಮೀಕ್ಷಿತ ಪೀರ್-ರಿವ್ಯೂ ಜರ್ನಲ್ “Journal of Animal Diversity” (ಲೊರೆಸ್ತಾನ್ ವಿಶ್ವವಿದ್ಯಾಲಯ, ಇರಾನ್) ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ವೈಜ್ಞಾನಿಕವಾಗಿ ಪ್ಲಾಟಾಕ್ಯಾಂಥಮಿಸ್ ಲಾಸಿಯೂರಸ್ (Platacanthomys lasiurus) ಎಂದು ಕರೆಯಲಾಗುವ ಮಲಬಾರ್ ಮುಳ್ಳು ಬಾಲದ ಮರ ಇಲಿ ಮೊದಲ ಬಾರಿ 1859ರಲ್ಲಿ ವಿವರಿಸಲ್ಪಟ್ಟಿದ್ದರೂ, ಪ್ರಜಾತಿಯ ಉದ್ಭವ ಮತ್ತು ವೈಜ್ಞಾನಿಕ ವಿಕಸನದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ DNA ಬಾರ್ಕೋಡ್ ಗಳನ್ನೂ ಸೃಜಿಸಲು ಸುಮಾರು 166 ವರ್ಷಗಳ ಕಾಲ ಕಾಯಬೇಕಾಯಿತು ಎಂದು ಡಾ. ದಿನೇಶ್ ತಿಳಿಸಿದ್ದಾರೆ.
ವಿಕಸನದ ಇತಿಹಾಸ (Evolutionary History) ಹಾಗು ಆಣ್ವಿಕ ತಂತ್ರಜ್ಞಾನದ, (Molecular Dating) ಅಧ್ಯಯನಗಳ ಪ್ರಕಾರ, ಪ್ರಸ್ತುತ ಮಲಬಾರ್ ಮುಳ್ಳು ಬಾಲದ ಮರ ಇಲಿಯ (Platacanthomys) ಯ ಪೂರ್ವಜರು ಇಓಸಿನ್ (Eocene) ಯುಗದಲ್ಲಿ (ಕ್ರಿಸ್ತಪೂರ್ವ 56 ರಿಂದ 33.9 ಮಿಲಿಯನ್ ವರ್ಷಗಳ ಹಿಂದೆ) ವಿಕಾಸನಗೊಂಡಿರಬಹುದು ಎಂದು ಸೂಚಿಸುತ್ತದೆ. ಪ್ಲಾಟಾಕ್ಯಾಂಥಮಿಸ್ ಎಂಬ ಪ್ರಜಾತಿ ಗೊಂಡ್ವಾನಾ ಖಂಡದ ಉಳಿದಿರುವ ಜೀವಂತ ಅವಶೇಷವಾಗಿದ್ದು (Living Fossil), ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಬಾಹ್ಯ ರೂಪವಿಜ್ಞಾನ (external morphological changes) ಬದಲಾವಣೆಯಿಲ್ಲದೆ ಉಳಿದಿರುವ ಸಾಧ್ಯತೆ ಇದೆ.
ಇದೆ ರೀತಿಯ ರೂಪ ಹೊಂದಿರುವ ಚೀನಾದ ಪುಟ್ಟ ಮುಳ್ಳು ಡಾರ್ಮೌಸ್ ಇಲಿ (Typhlomys) ಚೀನಾ ಮತ್ತು ವಿಯೆಟ್ನಾಮ್‌ನಲ್ಲಿರುವ ಹಲವು ಪ್ರದೇಶಗಳಿಂದ ಕಂಡು ಬರುತದೆ. ಚೀನಾದ ಪುಟ್ಟ ಡಾರ್ಮೌಸ್ ಇಲಿಯ ಪೂರ್ವಜರು ಮೈಒಸಿನ್ (Miocene) ಯುಗದಲ್ಲಿ (ಕ್ರಿ.ಪೂ. 23 ರಿಂದ 5.3 ಮಿಲಿಯನ್ ವರ್ಷಗಳ ಹಿಂದೆ) ವಿಕಸನಗೊಂಡಿವೆ. ಮಲಬಾರ್ ಮುಳ್ಳು ಬಾಲದ ಮರ ಇಲಿಯ ಅವಶೇಷ ಪ್ರಭೇದಗಳೆಂಬ ಮಾಹಿತಿಯು ಸಾರ್ವಜನಿಕರಲ್ಲಿ ಹೆಚ್ಚಿನ ಸಂರಕ್ಷಣಾ ಮೌಲ್ಯವನ್ನು ಸೇರಿಸಲಿದೆ. ಮುಂದಿನ ದಿನಗಳ್ಲಲಿ ಮಯೋಸೀನ್ (Miocene) ಮೂಲದ ಬಗ್ಗೆ ಆಣ್ವಿಕ ಡೇಟಿಂಗ್ (Molecular Dating) ಮಾಹಿತಿಯು ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ಹೆಚ್ಚಿನ ಸಂಶೋಧನಾ ಪ್ರಶ್ನೆಯನ್ನು ಹುಟ್ಟುಹಾಕಲಿದೆ ಎಂದು ಪ್ರಸ್ತುತ ಅಧ್ಯಯನ ತಂಡ ಹೇಳುತ್ತದೆ.
ಪ್ರಸ್ತುತ ಪ್ಲಾಟಾಕ್ಯಾಂಥಮಿಸ್ ವಂಶವೃಕ್ಷ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿರುವ ಆಶ್ರಯ ಸ್ಥಳಗಳಲ್ಲಿ ಉಳಿದಿರುವ ಒಂದು ಪುರಾತನ ಅವಶೇಷವಾಗಿರಬಹುದು (Evolutionarily Important Lineage), ಇದರ ಪೂರ್ವಜರು ಭೂಗರ್ಭದ ಇತಿಹಾಸದಲ್ಲಿ ಸಂಭವಿಸಿದ ಹಲವಾರು ಭೂಗತಘಟನೆಗಳಿಂದ ಅಳಿದುಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ವಂಶವೃಕ್ಷದ ಪ್ರಕಾರ ಪ್ಲಾಟಾಕ್ಯಾಂಥಮಿಸ್ (Platacanthomys) ಮತ್ತು ಟೈಫ್ಲೋಮಿಸ್ (Typhlomys) ಎಂಬ ಈ ಎರಡು ತಳಿಗಳು (genera) ಏಕವಂಶೀಯ (monophyletic) ಅಲ್ಲವೆಂಬುದರಿಂದ, ಅವುಗಳನ್ನು ವಿಭಿನ್ನ ಕುಟುಂಬಗಳಾಗಿ ವರ್ಗೀಕರಿಸುವುದು ಶಾಸ್ತ್ರೀಯವಾಗಿ ಸೂಕ್ತವೆಂದು ಈ ಅಧ್ಯಯನದಲ್ಲಿ ಸೂಚಿಸಲಾಗಿದೆ.
ಪಶ್ಚಿಮ ಘಟ್ಟಗಳ ಸಣ್ಣ ಸಸ್ತನಿಗಳ ಸಮೀಕ್ಷೆಯ ವೇಳೆಯಲ್ಲಿ ಸಮೀಕ್ಷಾ ತಂಡವು ಕೇರಳದ ಸುರ್ಯಮುಡಿಯಲ್ಲಿ ಮಲಬಾರ್ ಮುಳ್ಳು ಬಾಲದ ಮರ ಇಲಿಯನ್ನು ಕಂಡು ಹಿಡಿದಿದೆ. ಅನಂತರದ ಅಣುವಿಜ್ಞಾನ ಅಧ್ಯಯನಗಳ (DNA Barcode Technology) ನಂತರ, ಮಾದರಿ ಸಂಗ್ರಹವನ್ನು ಮುಂದಿನ ಅಧ್ಯಯನಗಳಿಗಾಗಿ ಭಾರತೀಯ ಪ್ರಾಣಿ ಸಂಸ್ಥಾನದ (ZSI) ಪಶ್ಚಿಮ ಪ್ರಾದೇಶಿಕ ಕೇಂದ್ರ (WRC), ಪುಣೆದಲ್ಲಿನ ರಾಷ್ಟ್ರೀಯ ಜೀವಶಾಸ್ತ್ರೀಯ ಸಂಗ್ರಹಾಲಯ ದಲ್ಲಿ (National Zoological Collections) ಸಂಗ್ರಹಿಸಿಡಲಾಗಿದೆ.
“ಕ್ಷಿಪ್ರ ಹವಾಮಾನ ಬದಲಾವಣೆಯ ಮಧ್ಯೆ ಪ್ಲಾಟಕಾಂಥೋಮಿಸ್‌ನಂತಹ ಐತಿಹಾಸಿಕವಾಗಿ ವಿವರಿಸಲಾದ ನಿಗೂಢ ಪ್ರಭೇದಗಳ ಕುರಿತು ಹೊಸ ವೈಜ್ಞಾನಿಕ ಸಂಶೋಧನೆ ಅತ್ಯಗತ್ಯ. ಸಂರಕ್ಷಣಾ ತಂತ್ರಗಳನ್ನು ತಿಳಿಸಲು ಮತ್ತು ಪ್ರಭೇದಗಳ ದೀರ್ಘಕಾಲೀನ ಉಳಿವನ್ನು ಖಚಿತಪಡಿಸಿಕೊಳ್ಳಲು ಸಮಗ್ರ ವಿಧಾನಗಳು ಪ್ರಮುಖವಾಗಿವೆ” ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆಯ ನಿರ್ದೇಶಕಿ ಡಾ. ಧೃತಿ ಬ್ಯಾನರ್ಜಿ (Dr. Dhriti Banerjee) ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಲಬಾರ್ ಮುಳ್ಳು ಬಾಲದ ಮರ ಇಲಿಗೆ ಆವಾಸಸ್ಥಾನದ ಅವನತಿಯೇ (Habitat Fragmentation) ಪ್ರಮುಖ ಬೆದರಿಕೆ ಎಂದು ಸಂಶೋಧನಾ ತಂಡದ ನಾಯಕ ಲೇಖಕ ಡಾ. ಎಸ್. ಎಸ್. ತಲ್ಮಲೆ (Dr. S.S. Talmale) ಹೇಳಿದ್ದಾರೆ. ಈ ಪ್ರಭೇದವು 50 ಮೀಟರ್ ನಿಂದ 2270 ಮೀಟರ್ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಕಂಡುಬರುತಿದ್ದು, ಐಯುಸಿಎನ್ ಕೆಂಪು ಪಟ್ಟಿಯಲ್ಲಿ (IUCN Redlist for Threantened List) ದುರ್ಬಲ (Vulnerable) ಎಂದು ಪಟ್ಟಿ ಮಾಡಲಾಗಿದೆ. ಇದನ್ನು ಭಾರತಿಯ ವನ್ಯಜೀವಿ (ರಕ್ಷಣೆ) ತಿದ್ದುಪಡಿ ಕಾಯ್ದೆ, 2022 ರ ಪಟ್ಟಿಯಲ್ಲಿ ಷೆಡ್ಯೂಲ್ II (Schedule II) ರ ಅಡಿಯಲ್ಲಿ ಸಂರಕ್ಷಿಸಲಾಗಿದೆ, ಇದು ಉದ್ದೇಶಿತ ಆವಾಸಸ್ಥಾನ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳುತ್ತದೆ.
“ಈ ಅಧ್ಯಯನವು ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿ ಪ್ರಾಣಿಗಳ ಪ್ರಾಚೀನ ವಂಶಾವಳಿಗಳ (Evolutionary Lineages) ಅಸ್ತಿತ್ವವನ್ನು ಬಹಿರಂಗಪಡಿಸುತ್ತದೆ, ಗೊಂಡ್ವಾನ ಸೂಪರ್ ಖಂಡದ (Gondwana Super Continent) ವಿಘಟನೆಯ ಸಮಯದಲ್ಲಿ ಉಷ್ಣವಲಯದ ನಿರಾಶ್ರಿತ ಜೀವಿಯಾಗಿ (Relict Refuge Species) ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ” ಎಂದು ಅಧ್ಯಯನಗಳ ಸಹ-ಲೇಖಕ ಡಾ. ಕೆ.ಎ. ಸುಬ್ರಮಣಿಯನ್ (Dr. K.A. Subramaniyan) ಹೇಳುತ್ತಾರೆ.
ಮಲಬಾರ್ ಮುಳ್ಳು ಬಾಲದ ಮರ ಇಲಿ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿ (Endemic species) ಕಂಡುಬರುವ ಅಪರೂಪದ ಇಲಿ ಎಂದು ಸಹ-ಲೇಖಕರಾದ ಡಾ. ಎಂ.ಜೆ. ಪಲೋಟ್ (Dr. Md. Jafer Palot) ತಿಳಿಸಿದ್ದಾರೆ.
“ಡಿಎನ್‌ಎ ಬಾರ್‌ಕೋಡಿಂಗ್ (DNA Barcoding) ಮತ್ತು ಫೈಲೋಜೆನೆಟಿಕ್ಸ್‌ನಂತಹ (Phylogenetics) ಆಣ್ವಿಕ ಸಾಧನಗಳು (Molecular Tools) ಮಲಬಾರ್ ಮುಳ್ಳು ಬಾಲದ ಮರ ಇಲಿಯ ವಿಕಸನದ ಇತಿಹಾಸವನ್ನು (Evolutinary History) ಬಹಿರಂಗಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತದೆ ಎಂದು ಡಾ. ಕೆ. ಪಿ. ದಿನೇಶ್ ಒತ್ತಿ ಹೇಳಿದರು.
ಡಾ. ಕೆ.ಪಿ. ದಿನೇಶ್ ಅವರು ಕರ್ನಾಟಕದ ಚಿಕ್ಕಮಗಳೂರಿನ ಕಬ್ಬಿನಹಳ್ಳಿಯ ಕಾಫಿ ಬೆಳೆಯುವ ಸಮುದಾಯಗಳಿಂದ ಬಂದವರಾಗಿದ್ದು, ಡಿಎನ್‌ಎ ಬಾರ್‌ಕೋಡಿಂಗ್ (DNA Barcoding), ಮಾಲಿಕ್ಯುಲರ್ ಫೈಲೋಜೆನೆಟಿಕ್ಸ್ (Molecular Phylogenetics) ಮತ್ತು ಡಿಎನ್‌ಎ ಮೆಟಾಬಾರ್‌ಕೋಡಿಂಗ್ (DNA Metabarcoding) ನಂತಹ ಅಣುಕೋಶ ಸಾಧನಗಳ (Molecular Biotechnology) ಮೇಲೆ ವ್ಯಾಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
Original publication is available at:
https://jad.lu.ac.ir/article_725040.html
High-resolution image of Platacanthomys lasiurus and the published article are attached.
For media inquiries, please contact the co-authors at the email address or Phone Numbers.
Dr. S. S. Talmale, E-mail: shyamtalmale@gmail.com; 9284653321
Dr. K.A. Subramanian, subbuka.zsi@gmail.com; 9088039540
Dr. M.J. Palot, palot.zsi@gmail.com; 9447470439
Dr. K.P. Dinesh, E-mail: kpdinesh.zsi2@gmail.com; 9916970365
VK NEWS DIGITAL :
ಉಗ್ರರ ನಂಟು: ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್‌ಐ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮ್ಮದ್ ತಾಯಿ ಅನೀಸ್ ಫಾತೀಮಾ ಮೂವರ ಸೆರೆ
ಗೊರೂರು ಅನಂತರಾಜು, ಹಾಸನ. ಕುಶಾಲನಗರದ ಶ್ರೀ ಚೌಡೇಶ್ವರಿ ಮಹಿಳಾ ಸಂಘದವರು ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಏರ್ಪಡಿಸುತ್ತಾ ಬಂದು ಕಳೆದ ಮೂರು ವರ್ಷಗಳಿಂದ ನಾವು ಭಾಗಿಯಾಗುತ್ತಾ ಬಂದಿದ್ದೇವೆ. ಈ ಬಾರಿಯ ಪ್ರವಾಸ ಹುಣಸೂರು ಹೆಗ್ಗಡದೇವನಕೋಟೆ ಕಡೆಗೆ ಏರ್ಪಾಡಾಗಿತ್ತು. ಅವು ನಮಗೆ ಹೊಸ ಸ್ಥಳಗಳು. ಮಿನಿ ಬಸ್ಸು ಮಾಡಿದ್ದರು. ಕುಶಾಲನಗರವನ್ನು ಬೆ.6ಕ್ಕೆ ಬಿಟ್ಟು ಮದ್ಯೆ ಪಿರಿಯಾಪಟ್ಟಣದಲ್ಲಿ ಕಾಫಿ ಟೀ ಕುಡಿದು ಅಲ್ಲಿಂದ ನಾವು ಗದ್ದಿಗೆ ತಲುಪಿದಾಗ ಎಂಟಾಗಿತ್ತು.
ಹುಣಸೂರು ತಾಲ್ಲೂಕಿನ ಗದ್ದಿಗೆ ಶ್ರೀ ಗುರು ಕೆಂಡಗಣ್ಣ ಸ್ವಾಮಿಗಳ ನಿರ್ವಿಕಲ್ಪ ಸಮಾಧಿ ಹೊಂದಿದ ಪ್ರವಾಸಿ ತಾಣ. ಬಸ್ ನಿಲ್ದಾಣ ಸನಿಹದಲ್ಲಿಯೇ ಇರುವ ದೇವಾಲಯ ವಿಶಾಲವಾದ ಗುಡಿ ಗೋಪುರ ವಿನ್ಯಾಸದಿಂದ ಆಕರ್ಷಣೀಯವಾಗಿದೆ. ನಾವು ಹೋದ ದಿನ ಶ್ರೀ ಕೆಂಡಗಣ್ಣೇಶ್ವರ ಹಾಗೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಸಿದ್ಧತೆ ನಡೆದಿತ್ತು. ನಾವು ಮಠದಲ್ಲಿ ನೀಡಿದ ದಾಸೋಹ ಉಪ್ಪಿಟ್ಟು ಸೇವಿಸಿ ಗದ್ದಿಗೆ ವೀಕ್ಷಿಸಿದೆವು. ಸ್ಥಳ ಪರಿಚಯ ಬಗ್ಗೆ ತಿಳಿಯಲು ಒಬ್ಬರಲ್ಲಿ ವಿಚಾರಿಸಿದೆ. ಅವರು ಪ್ರೊ.ಎಂ.ಎಸ್. ವೀಠಶೆಟ್ಟಿ ರಚಿತ ಶ್ರೀಗುರು ಕೆಂಡಗಣ್ಣಸ್ವಾಮಿಗಳ ಬದುಕು ಮತ್ತು ಆಧ್ಯಾತ್ಮಿಕ ಸಾಧನೆ ಪುಸ್ತಕ ಕೊಟ್ಟು ಓದಿಕೊಳ್ಳಿ ಎಂದರು.
ಶ್ರೀ ಕೆಂಡಗಣ್ಣೇಶ್ವರ ಶಿವಯೋಗಿಗಳು ಎರಡು ಶತಮಾನ ಹಿಂದೆ ಜೀವಿಸಿದ್ದು ನಿರಾಭಾರಿ ಜಂಗಮರಾಗಿ ಕಾಡುಮೇಡು ನಾಡುಗಳಲ್ಲಿ ಸಂಚರಿಸುತ್ತ ಇತ್ತ ಬಂದು ಕೊನೆಗೆ ಹುಣಸೂರು ಹೆಚ್.ಡಿ.ಕೋಟೆ ಗಡಿ ಕುಟ್ಟವಾಡಿಯ ತೊರೆಯ ಬಲದಂಡೆಯಲ್ಲಿ ತಪಗೈದು ನಿರ್ವಿಕಲ್ಪ ಸಮಾಧಿಯಲ್ಲಿ ನೆಲೆಕಂಡರೆAದು ತಿಳಿಯುತ್ತದೆ. ಗುರುಗಳ ಸಮಾಧಿ ಕೆಂಡಗಣ್ಣಸ್ವಾಮಿ ಗದ್ದಿಗೆ ಎಂದು ಹೆಸರಾಗಿದೆ. ನಂಜನಗೂಡು, ಟಿ.ನರಸೀಪುರ, ಕೊಳ್ಳೆಗಾಲ, ಗುಂಡ್ಲುಪೇಟೆ, ಚಾಮರಾಜನಗರ, ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ, ಯಳಂದೂರು ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕೆಂಡಗಣ್ಣ, ಕೆಂಡಗಣ್ಣಪ್ಪ, ಕೆಂಡಗಣ್ಣಮ್ಮ, ಕೆಂಡಗಣ್ಣಿ, ಕೆಂಡಗಣ್ಣಯ್ಯ, ಚಿಕ್ಕಕೆಂಡ, ದೊಡ್ಡಕೆಂಡ ಎಂಬ ಹೆಸರಿನ ಜನರು ಸಾಕಷ್ಟಿದ್ದಾರೆ. ಶಿಗ್ಗಾವಿಯ ರಾಜವಂಶದಲ್ಲಿ ಹುಟ್ಟಿದ ಇವರು ಮೈಸೂರು ಒಡೆಯರಿಂದ ರಾಜಪೂಜಿತರಾಗಿ ತಮ್ಮ ವೈರಾಗ್ಯ ಅವಧೂತ ವ್ಯಕ್ತಿತ್ವದಿಂದ ಜನಸಮುದಾಯವನ್ನು ಪ್ರಭಾವಿಸಿದ್ದಾರೆ. ಶ್ರೀಶೈಲ ರಾಜೇಂದ್ರ ಕಾಶಮ್ಮ ರಾಜದಂಪತಿಗಳ ಮಕ್ಕಳಲ್ಲಿ ಶ್ರೀ ಕೆಂಡಗಣ್ಣೇಶರೇ ಹಿರಿಯರು. ಇವರ ಅವಳಿ ಸೋದರ ವೀರರಾಜ. ನಂತರ 2 ವರ್ಷಕ್ಕೆ ಲಿಂಗರಾಜು, ಶಾಂತಮಲ್ಲಿಕಾರ್ಜುನರು ಅವಳಿ ಜವಳಿಯಾಗಿ ಜನಿಸಿದ ರಾಜಪುತ್ರರು. ನೆರೆರಾಜ್ಯದ ಸಂಚಿನಿAದ 2ನೇ ಬಾರಿ ಶಿಗ್ಗಾವಿ ಮೇಲೆ ದಾಳಿಯಿಟ್ಟ ವೇಳೆ ಇವರ ವಯಸ್ಸು ಹತ್ತು. ಪ್ರಜೆಗಳು ಇವರನ್ನು ಸುರಕ್ಷಿತ ಸ್ಥಳದಲ್ಲಿಟ್ಟು ರಕ್ಷಿಸಿದರು. ಸೋದರ ವೀರರಾಜ ರಾಜರಾಣಿಯರು ರಣರಂಗದಲ್ಲಿ ಮಡಿದರು. ಶತ್ರುಗಳು ಅರಮನೆಗೆ ಬೆಂಕಿ ಹಚ್ಚಿ ಕಿರಿಯ ಸಹೋದರಿಬ್ಬರೂ ಅಗ್ನಿಗಾಹುತಿಯಾಗಿ ರಾಜ್ಯ ಶತ್ರುವಶವಾಯಿತು. ಅಸಹಾಯಕರಾಗಿ ಇದನ್ನೆಲ್ಲ ಕಂಡು ಕೆಂಡಗಣ್ಣಯ್ಯನವರ ಮನ ಕದಡಿದ ಕೊಳದ ನೀರಿನಂತಾಯಿತು. ತಮ್ಮ ಕುಲಗುರು ಬಂಕಾಪುರದ ಅರಳೆಲೆ ಹಿರಿಯಮಠದ ರುದ್ರಮುನಿ ಶಿವಾಚಾರ್ಯಸ್ವಾಮಿಗಳ ಸನ್ನಿಧಿಗೆ ಧಾವಿಸಿ ತಮ್ಮ ದುಸ್ಥಿತಿಯನ್ನೆಲ್ಲ ನಿವೇದಿಸಿ ನಂತರ ಶಿಗ್ಗಾವಿ ತೊರೆದು ಶಿರಾಳಕೊಪ್ಪ, ಶಿಕಾರಿಪುರ, ಉಡುತಡಿ, ಬಳ್ಳಿಗಾವಿ, ಸಾಗರ ಮೂಲಕ ಹೊನ್ನಾಳಿ ಕಲ್ಲುಮಠಕ್ಕೆ ಬಂದು ನಂತರ ನ್ಯಾಮತಿ, ಚಿಕ್ಕನಾಯಕನಹಳ್ಳಿ, ಹುಳಿಯೂರು ಮೂಲಕ ಗುಬ್ಬಿ, ಸಿದ್ಧಗಂಗೆ ತಲುಪಿ ವಿಶ್ರಮಿಸಿ ಮುಂದೆ ಸಿದ್ದರಬೆಟ್ಟದಲ್ಲಿ ಕೆಲದಿನ ಮಂತ್ರಯೋಗ ನಿರತರಾಗಿ ಅಲ್ಲಿಂದ ಶಿವಗಂಗೆಗೆ ನಡೆದು ತಪಸ್ಸನ್ನಾಚರಿಸಿ ಬೆಂಗಳೂರಿಗೆ ಬರಲು ವರ್ಷವಾಯಿತಂತೆ! ಅಲ್ಲಿನ ಬೇಲಿಮಠದ ಕೆಂಪನAಜಸ್ವಾಮಿಗಳು ಇವರನ್ನು ಬರಮಾಡಿಕೊಂಡು ಅಲ್ಲಿ ನಾಲ್ಕು ವರ್ಷ ಇದ್ದು ವಿರಕ್ತಾಶ್ರಮ ಸ್ವೀಕರಿಸಿದರು. ರೇವಣಸಿದ್ದರ ಬೆಟ್ಟ ನಂತರ ಸಿಂಗಾನಲ್ಲೂರಿಗೆ ಬರುತ್ತಾರೆ. ದೊಡ್ಡಿಂದುವಾಡಿ ಸಮೀಪದ ಕನಕನೇರಿಯಲ್ಲಿ ನೆ¯ಸಿ ಸ್ಥಳೀಯರ ಬೆಂಬಲದಿAದ ಒಂದು ಮಠವನ್ನು ಕಟ್ಟಿಸಿದ್ದಾಗಿ ಕೃತಿಯಲ್ಲಿ ಹೇಳಿದೆ.
ಬಸವಾಪಟ್ಟಣದ ತೊಟ್ಟಿಮನೆ ಬಿ.ಸಿ.ಸಿದ್ದಬಸಪ್ಪಶೆಟ್ಟರು ಗದ್ದಿಗೆ ಪರಿಸರದ ಭಕ್ತಾದಿಗಳ ಸಹಕಾರದೊಂದಿಗೆ ಶ್ರೀ ಗದ್ದಿಗೆ ಕ್ಷೇತ್ರದಲ್ಲಿ ಶ್ರೀ ಕೆಂಡಗಣ್ಣೇಶ್ವರಸ್ವಾಮಿ, ಶ್ರೀ ಮಹದೇಶ್ವರಸ್ವಾಮಿ ದೇವಾಲಯಗಳ ಪುನರ್ ನಿರ್ಮಾಣ ಗೋಪುರಗಳ ಕಳಸ ಪ್ರತಿಷ್ಠಾಪನೆ ಮಾಡಿದ್ದಾಗಿ ಕೃತಿಯಲ್ಲಿ ತಿಳಿಸಿದೆ. ಶ್ರೀ ಕೆಂಡಗಣ್ಣಸ್ವಾಮಿಯ ಗದ್ದಿಗೆಯಲ್ಲಿ ಪ್ರತಿ ಹುಣ್ಣಿಮೆ, ಅಮಾವಾಸ್ಯೆಗೆ ಶ್ರಾವಣಮಾಸ, ಕಾರ್ತೀಕ ಮಾಸದಲ್ಲಿ ವಿಶೇಷ ಪೂಜಾಕಾ ಗಳು ಜರಗುತ್ತವೆ. ಪ್ರತಿ ಫಾಲ್ಗುಣ ಮಾಸದ ಶುಕ್ಲಪಕ್ಷದಲ್ಲಿ ಶ್ರೀಸ್ವಾಮಿಯ ರಥೋತ್ಸವವು ವಿಜೃಂಭಣೆಯಿ0ದ ಜರುಗುವುದು. ಭಕ್ತರು ಬಂದಾಗ ಅವರಿಗೆ ಉಳಿದುಕೊಳ್ಳಲು ಗದ್ದಿಗೆಯಲ್ಲಿ ಸಿದ್ಧಬಸಪ್ಪನವರು ಯಾತ್ರಾನಿವಾಸ ನಿರ್ಮಿಸಿ ಕೆಂಡಗಣ್ಣ ಸ್ವಾಮಿಗೆ ಚಿನ್ನದ ಮುಖವಾಡ ಮಾಡಿಸಿರುವುದಾಗಿ ಕೃತಿಯಲ್ಲಿ ಹೇಳಿದೆ. ಒಳಾಂಗಣದಲ್ಲಿ ಒಂದು ರಂಗಮAಟಪವಿದ್ದು ಪ್ರೇಕ್ಷಕರು ಕುಳಿತು ನೋಡಲು ವಿಸ್ತಾರ ಜಾಗವಿದೆ. ಅಲ್ಲಿ ಎರಡು ಮರಗಳು ವಿಶೇಷವಾಗಿ ಗೋಚರಿಸಿದವು. ಜಾತ್ರೆಗೆ ದಕ್ಷಯಜ್ಞ ನಾಟಕವಿರುವುದು ತಿಳಿಯಿತು. ಮುಂದೆ ನಾವು ಚಿಕ್ಕದೇವಿರಮ್ಮನ ಬೆಟ್ಟಕ್ಕೆ ಪ್ರಯಣಿಸಿದೆವು. ಬೆಟ್ಟಕ್ಕೆ ವಾಹನಗಳು ಹೋಗಲು ರಸ್ತೆ ನಿರ್ಮಿಸಿದ್ದಾರೆ. ಕಾಲಭೈರವೇಶ್ವರ ಸನ್ನಿಧಿಯಲ್ಲಿ ಸಂಘದ ಮಹಿಳೆಯರು ಹಾಡು ಹೇಳಿ ಆನಂದಿಸಿದರು. ಬೆಟ್ಟದ ಮೇಲಿಂದ ಕೆಳಗಿನ ಬಯಲು ಪ್ರದೇಶ ಸುಂದರವಾಗಿ ಕಾಣಿಸಿತು. ದೂರದಲ್ಲಿ ಡ್ಯಾಂ ಜಲಾಶಯ ಗೋಚರಿಸಿತು. ಅಲ್ಲಿಗೆ ಹೋಗೋಣ ಅದೊಂದು ಡ್ಯಾಂ ಇರಬೇಕು ಎಂದೆ. ಸಮಯ 12 ಗಂಟೆ. ಊಟಕ್ಕೆ ಇನ್ನೂ ವೇಳೆ ಇತ್ತು. ಡ್ಯಾಂ ನೋಡಿಕೊಂಡು ಆಮೇಲೆ ಊಟದ ಸ್ಥಳಕ್ಕೆ ಬನ್ನಿ ಎಂದು ಸಂಘಟಕರು ತಮ್ಮ ಕಾರಿನಲ್ಲಿ ಊಟದ ಏರ್ಪಾಡು ನೋಡಲು ಹೋದರು.
ಆ ಡ್ಯಾಂ ಕಪಿಲಾ ನದಿಯ ಉಪನದಿ ನುಗು ನದಿಗೆ ಹೆಗ್ಗಡದೇವನಕೋಟೆ ತಾ. ಬೀರವಾಳ ಹಳ್ಳಿ ಬಳಿ ನಿರ್ಮಿಸಿರುವ 2,020 ಅಡಿ ಉದ್ದದ ಅಣೆಕಟ್ಟೆ. ಆದರೆ ನಮಗೆ ಡ್ಯಾಂ ನೋಡಲು ಬಿಡಲಿಲ್ಲ. ನಿರಾಶರಾಗಿ ಹಿಂತಿರುಗಿ ಊಟದ ಸ್ಥಳಕ್ಕೆ ಬಂದವು. ನಾನ್ ವೆಜ್ ಊಟ ತಯಾರಾಗಿತ್ತು. ಅಂದಿನ ನಮ್ಮ ಪ್ರವಾಸದಲ್ಲಿ ಕಬಿನಿ ಬ್ಯಾಕ್ ವಾಟರ್ ಕೂಡ ಒಂದು. ನಾನು 2007ರಲ್ಲಿ ಕಾವೇರಿ ನದಿಯ ದಡದಲ್ಲಿ ಎಂಬ ಪುಸ್ತಕ ಪ್ರಕಟಿಸಿದ್ದು, ಇದು ಕಾವೇರಿ ಮತ್ತು ಅದರ ಉಪನದಿಗಳು, ಕಾವೇರಿ ನದಿ ಪ್ರವಹಿಸುವೆಡೆಗಳಲ್ಲಿ ಮನಮೋಹಕ ಜಲಪಾತಗಳು, ಭಕ್ತಿತಾಣದ ತೀರ್ಥಕ್ಷೇತ್ರಗಳು, ಅಣೆಕಟ್ಟುಗಳು ಇತ್ಯಾದಿ ಮಾಹಿತಿಗಳ ಸಂಗ್ರಹ ಕೃತಿ. ಕಾವೇರಿ ಉಪನದಿ ಕಪಿಲಾ ಕೇರಳ ರಾಜ್ಯದ ಪಶ್ಚಿಮ ಘಟ್ಟಗಳ ವೈನಾಡಿನಲ್ಲಿ ಉಗಮಿಸಿ ಕೇರಳ ರಾಜ್ಯದಲ್ಲಿ 12 ಕಿ.ಮಿ. ಹರಿದು ಹೆಗ್ಗಡದೇವನ ಕೋಟೆ ತಾಲ್ಲೂಕಿನ ನೈಋತ್ಯದಲ್ಲಿ ಕರ್ನಾಟಕ ಪ್ರವೇಶಿಸುತ್ತದೆ. ನಾವು ಊಟ ಮಾಡಿ ಹಿನ್ನೀರು ಪ್ರದೇಶ ಹರಸಿ ಸುಮಾರು ದೂರ ಪ್ರಯಣಿಸಿದೆವು. ದಾರಿಯಲ್ಲಿ ಅನೇಕ ಊರುಗಳು ಸಿಕ್ಕವು. ದಾರಿ ಉದ್ದಕ್ಕೂ ಕೇಳಿಕೊಂಡು ಅಂತೂ ಬ್ಯಾಕ್ ವಾಟರ್ ತಲುಪಿದೆವು. ಅಲ್ಲಿ ಹರಿಗೋಲು ಇತ್ತು ನಡೆಸುವವರು ಇರಲಿಲ್ಲ.
ಅಲ್ಲಿ ಹಿನ್ನೀರಿಗೆ ಇಳಿಜಾರಿನ ಸೋಪಾನಕಟ್ಟೆ ಇತ್ತಾಗಿ ಮಹಿಳೆಯರು ಅಲ್ಲಿ ಇಳಿದು ಕೈಕಾಲು ಮುಖ ತೊಳೆದುಕೊಂಡರು. ಅಲ್ಲೊಂದು ಮಹದೇಶ್ವರ ದೇವಸ್ಥಾನವಿತ್ತು. ಕಪಿಲಾ ನದಿಗೆ ಹೆಗ್ಗಡದೇವನಕೋಟೆ ತಾ. ಬಿದರಹಳ್ಳಿ, ಬೀಚನಹಳ್ಳಿ ಬಳಿ 1976ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. ಕಪಿನಿ, ಕಬಿನಿ ಎಂದು ಕರೆಯುವ ಈ ನದಿಯ ಜಲಾಶಯಕ್ಕೆ 17 ಮೈಲಿಯ ಎಡದಂಡೆ 126 ಮೈಲಿಯ ಬಲದಂಡೆ ನಾಲೆ ಜೋಡಿಸಲಾಗಿದೆ. ನಾವು ವಾಪಸ್ಸು ಬರುವಾಗ ಕಬಿನಿ ಜಲಾಶಯ ಮಾರ್ಗವೇ ಬಂದೆವು. ಆದರೆ ನೋಡಲು ಇಳಿಯಲಿಲ್ಲ. ಅಲ್ಲಿಯೇ ಒಂದು ಕಡೆ ಕಾಫಿ ಕುಡಿದು ಮತ್ತೆ ಕುಶಾಲನಗರಕ್ಕೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆ ಆಗಿತ್ತು.
ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಮಾಜಿ ಸಭಾಪತಿ ಎನ್. ತಿಪ್ಪಣ್ಣ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ತಿಪ್ಪಣ್ಣ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗವಹಿಸಿದ್ದರು. ಇಳಿ ವಯಸ್ಸಿನಲ್ಲೂ ತಮ್ಮ ಕೆಲಸಗಳಿಂದಲೇ ಜನರ ಮನಗೆದ್ದಿದ್ದ ಇವರು, 30 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿ ನಂತರ ರಾಜ್ಯ ವಕೀಲರ ಸಂಘದ ಅಧ್ಯಕ್ಷರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಸಭಾಪತಿಯಾಗಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ತಿಪ್ಪಣ್ಣ ಅವರಿಗೆ 2022 ರಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು ಎಂದು ಅವರು ತಿಳಿಸಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದ ಗುರುಪೂರ್ಣಿಮಾ ಮಹೋತ್ಸವದಲ್ಲಿ 1000ಕ್ಕೂ ಅಧಿಕ ಹಿಂದೂಗಳಿಂದ ಧರ್ಮರಕ್ಷಣೆಗಾಗಿ ಮಹಾಸಂಕಲ್ಪ!
ಬೆಂಗಳೂರು : ಇಂದು ಸದ್ಯ ಹಿಂದೂಗಳ ಮೇಲೆ ಮತ್ತು ಭಾರತದ ಮೇಲೆ ಆಗುತ್ತಿರುವ ಆಘಾತಗಳನ್ನು ಗಮನಿಸಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಜನಸಂಖ್ಯಾ ಜಿಹಾದ್ ಇವೆಲ್ಲವುಗಳಿಂದ ಭವಿಷ್ಯದಲ್ಲಿ ಹಿಂದೂ ಸಮಾಜ ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇಂದು ಸಮಾಜ ಕೇವಲ ಸಕಾಮ ಭಕ್ತಿಯನ್ನು ಮಾಡುತ್ತಿದೆ, ಆದರೆ ಇಂದು ಎಲ್ಲಾ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರಂತೆ ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ನಾವು ಬಾಹ್ಯ ಶತ್ರುಗಳನ್ನ ಸುಲಭವಾಗಿ ಎದುರಿಸಬಹುದು ಆದರೆ ಆಂತರಿಕ ಶತ್ರುಗಳನ್ನ ಎದುರಿಸುವುದು ತುಂಬಾ ಕಠಿಣ. ಆದರೆ ಈ ಕಾರ್ಯವನ್ನು ಹಿಂದೂ ಸಂಘಟನೆಗಳಾದ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಬಜರಂಗದಳ ಈ ಸಂಘಟನೆಗಳು ಎದುರಿಸುತ್ತವೆ. ಈ ಎಲ್ಲ ಸಂಘಟನೆಗಳಿಗೆ ಮಾರ್ಗದರ್ಶನ ಪ್ರೇರಣೆ ಗುರುವಿನ ಸ್ಥಾನದಲ್ಲಿದ್ದು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸರ್ವ ಶ್ರೇಷ್ಠವಾದಂತಹ ಸನಾತನ ಸಂಸ್ಥೆಯ ಜೊತೆಗೆ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಘಟನೆಗಳು ಕಾರ್ಯವನ್ನು ಮಾಡಿದರೆ ಬಹುಬೇಗ ಹಿಂದೂ ರಾಷ್ಟ್ರವನ್ನು ಸಾಕಾರ ಮಾಡಬಹುದು ಎಂದು ಶ್ರೀರಾಮ ಸೇನೆಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್ ಇವರು ಕರೆ ನೀಡಿದರು. ಅವರು 10 ಜುಲೈ 2025, ಗುರುವಾರದಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಇವರೂ ಸೇರಿದಂತೆ ಸನಾತನ ಸಂಸ್ಥೆಯ ಸಂತರಾದ ಶ್ರೀ. ಪೂಜ್ಯನೀಯ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ,ಭಾ ಜ ಪ ಮುಖಂಡರಾದ ಶ್ರೀ. ಉಮೇಶ್ ಶೆಟ್ಟಿ, ಎಮ್ ಎಲ್ ಶಿವಕುಮಾರ್ ಸೇರಿದಂತೆ 1000ಕ್ಕೂ ಅಧಿಕ ಮಂದಿ ರಾಷ್ಟ್ರನಿಷ್ಠರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಗೋರಕ್ಷಣೆಯನ್ನು ಮಾಡುವ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಶ್ರೀ ಪುನೀತ್ ಕೆರೆಹಳ್ಳಿ ಇವರಿಗೆ ಸತ್ಕಾರ ಮಾಡಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ಮಾತನಾಡುತ್ತ ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆಯಿರುವುದರಿಂದ ಪ್ರಭು ಶ್ರೀರಾಮನಂತೆ ಆದರ್ಶ ಸಂಘಟನೆ ನಿರ್ಮಿಸಲು ಕಟಿಬದ್ಧರಾಗೋಣ ಎಂದರು.
ಶ್ರೀ. ಗುರು ಪ್ರಸಾದ್ ಗೌಡ ಇವರು ಮುಂದುವರೆಸಿ ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ ಘಟನೆಗಳು ಬೆಳಕಿಗೆ ಬಂದಿವೆ, ಇತ್ತೀಚೆಗೆ ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಅನೇಕ ಹಿಂದೂಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತಾಂಧರು ಗಲಭೆಗಳನ್ನು ನಡೆಸಿದರು. ಇದರಲ್ಲಿ ಪೊಲೀಸರ ಮೇಲೂ ಆಕ್ರಮಣ ಮಾಡಲಾಯಿತು, ಹಾಗೆಯೇ ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಡಲಾಯಿತು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ಒಟ್ಟಾರೆ ಅಂಶವೇನೆಂದರೆ, ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ದೇಶ’ ಕೇಳಿ ಗುಂಡು ಹಾರಿಸದೆ, ‘ಧರ್ಮ’ ಕೇಳಿ ಗುಂಡು ಹಾರಿಸಿದರು. ಇನ್ನು ನಮ್ಮ ಮುಂದೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದಂತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಿಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.
ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುಪೂರ್ಣಿಮಾ ಮಹೋತ್ಸವ:
ಕರ್ನಾಟಕ ರಾಜ್ಯ ಸರ್ಕಾರದ 2025-26ರ ಆಯವ್ಯಯ ಭಾಷಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ವಂಚಿತ ಅಲ್ಪಸಂಖ್ಯಾತ ವರ್ಗದ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು, ಬುದ್ದಿಸ್ಟ್, ಜೈನರು ಮತ್ತು ಪಾರ್ಸಿಗಳು) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮತ್ತು ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯ ಅನುಷ್ಠಾನಕ್ಕಾಗಿ 2025-26ನೇ ಆರ್ಥಿಕ ವರ್ಷದಲ್ಲಿ ರೂ. 5.05 ಕೋಟಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದ್ದರು.
ಅಲ್ಪಸಂಖ್ಯಾತ ವರ್ಗದ ಉಚಿತ ಉನ್ನತ ಶಿಕ್ಷಣ ಯೋಜನೆಯ ಅನುಷ್ಠಾನ ಕಾರ್ಯಕ್ರಮವು ಇತ್ತೀಚೆಗೆ ಬೆಂಗಳೂರಿನ ವಸಂತ ನಗರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮುಖ್ಯ ಆಡಳಿತ ಕಛೇರಿ ಆಜಾದ್ ಭವನದಲ್ಲಿ ಜರುಗಿತು. ಕರ್ನಾಟಕ ಸರ್ಕಾರದ ಸನ್ಮಾನ್ಯ ವಸತಿ ಸಚಿವರಾದ ಶ್ರೀ ಬಿ.ಜಡ್. ಜಮೀರ್ ಅಹ್ಮದ್ ಖಾನ್‌ರವರ ಸಮ್ಮುಖದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶಕರಾದ ಶ್ರೀ ಜಿಲಾನಿ ಹೆಚ್. ಮೊಕಾಶಿರವರು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವರಾದ ಡಾ. ನವೀನ್ ಕುಮಾರ್ ರವರು ಪರಸ್ಪರ ತಿಳುವಳಿಕೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿದರು. ಈ ಸಂದರ್ಭದಲ್ಲಿ ಕರಾಮುವಿಯ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ರವರು ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಫಾಹಿಮ್‌ರವರು ಹಾಗೂ ಕರಾಮುವಿ ಹಣಕಾಸು ಅಧಿಕಾರಿಗಳು, ಕುಲಸಚಿವರು (ಪರೀಕ್ಷಾಂಗ), ಡೀನ್ (ಶೈಕ್ಷಣಿಕ) ಮತ್ತು ಡೀನ್ (ಅಧ್ಯಯನ ಕೇಂದ್ರ) ಬೆಂಗಳೂರಿನ 07 ಮತ್ತು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಪ್ರಾದೇಶಿಕ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರುಗಳು, ಅಧಿಕಾರಿ ವರ್ಗ, ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗ ಸಿಬ್ಬಂದಿಗಳು ಹಾಜರಿದ್ದರು.
ಬೆಂಗಳೂರಿನ ಮಲ್ಲೇಶ್ವರ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮ ಸಂಭ್ರಮ
ಈ ಒಡಂಬಡಿಕೆ ಪ್ರಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳಿಗೆ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಕೋರ್ಸುಗಳ ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಕರಾಮುವಿಗೆ ನೇರವಾಗಿ ಪಾವತಿಸುತ್ತದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಉಚಿತವಾಗಿ ಉನ್ನತ ಶಿಕ್ಷಣ ಒದಗಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲ ಮಾಡಿದೆ. ಆದ್ದರಿಂದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಜಾರಿಗೊಳಿಸಿ ಅನುದಾನ ಬಿಡುಗಡೆ ಮಾಡಿರುವ ಗೌರವಾನ್ವಿತ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಸತಿ ಸಚಿವರು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಎಂದು ಕರಾಮುವಿ ಬೆಂಗಳೂರು ಪ್ರಾದೇಶಿಕ ಕೇಂದ್ರ-01ರ ನಿರ್ದೇಶಕರಾದ ಶ್ರೀ ರೋಹಿತ್ ಹೆಚ್.ಎಸ್. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಖೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲಯಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-2660 3664 ಹಾಗೂ 98806-26439/90195-26439 ಅನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರಿನಲ್ಲಿ ನಡೆದ ಜಿಡಿಎಸ್ ಸಮ್ಮೇಳನದಲ್ಲಿ ಗ್ರಾಮೀಣ ಡಾಕ್ ಸೇವಕರೊಂದಿಗೆ ಕೇಂದ್ರ ಸಂವಹನ ಮತ್ತು ಡಿಒಎನ್‌ಇಆರ್ (DoNER) ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ರವರು ಸಂವಾದ ನಡೆಸಿದರು.
ಬೆಂಗಳೂರು : ಭಾರತ ಅಂಚೆ ಇಲಾಖೆಯು ಇಂದು ಗ್ರಾಮೀಣ ಡಾಕ್ ಸೇವಕರ (ಜಿಡಿಎಸ್) ಶ್ಲಾಘನೀಯ ಕೊಡುಗೆಗಳನ್ನು ಆಚರಿಸಿತು, ವಿಶೇಷವಾಗಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಸೇವೆಗಳಿಗೆ ಅಸಾಧಾರಣ ಕೊಡುಗೆ ನೀಡಿದ ಹದಿನೈದು (15) ಅತ್ಯುತ್ತಮ ಜೆಡಿಎಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು, “ಡಾಕ್ ಸೇವಾ, ಜನ ಸೇವಾ ಮನೋಭಾವವನ್ನು ಬಲಪಡಿಸಿತು. ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ (ಡಿಒಎನ್‌ಇಆರ್) ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ರವರು ಬೆಂಗಳೂರಿನಲ್ಲಿ ನಡೆದ ‘ಜಿಡಿಎಸ್ ಸಮ್ಮೇಳನ’ದಲ್ಲಿ ಕರ್ನಾಟಕದಾದ್ಯಂತ 800 ಕ್ಕೂ ಹೆಚ್ಚು ಜಿಡಿಎಸ್‌ಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದರು.
ಬೆಂಗಳೂರಿನ ಮಲ್ಲೇಶ್ವರ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮಾ ಸಂಭ್ರಮ
ಶ್ರೀ ಸಿಂಧ್ಯಾ ತಮ್ಮ ಭಾಷಣದಲ್ಲಿ, ಗ್ರಾಮೀಣ ಸಮುದಾಯಗಳ ಜೀವನದಲ್ಲಿ ಜೆಡಿಎನ್‌ಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಅವರು ಅಂಚೆ ವ್ಯವಸ್ಥೆಯ ವಿಶ್ವಾಸಾರ್ಹ ಮುಖ ಎಂದು ಬಣ್ಣಿಸಿದರು ಏಕೆಂದರೆ ಅವರು ಪ್ರತಿಯೊಂದು ಹಳ್ಳಿಯಲ್ಲೂ ಪರಿಚಿತ ವ್ಯಕ್ತಿಗಳಾಗಿದ್ದು, ಅವರು ಸೇವೆ ಸಲ್ಲಿಸುವ ಸಮುದಾಯಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದಾರೆ. ಈ ವಿಶ್ವಾಸದ ಸಂಬಂಧವು ಇಲಾಖೆಯ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ ಎಂದು ಅವರು ಒತ್ತಿ ಹೇಳಿದರು.
ಜಿಡಿಎಸ್‌ಗಳ ಪಾತ್ರವು ಅಂಚೆ ವಿತರಣೆಯನ್ನು ಮೀರಿ ಬ್ಯಾಂಕಿಂಗ್, ವಿಮೆ ಮತ್ತು ಇತರ ನಾಗರಿಕ-ಕೇಂದ್ರಿತ ಸೇವೆಗಳನ್ನು ಒಳಗೊಂಡಂತೆ ಹೇಗೆ ವಿಕಸನಗೊಂಡಿದೆ ಎಂಬುದನ್ನು ಗಮನಿಸಿದ ಸಚಿವರು, ಅಂಚೆ ವ್ಯವಸ್ಥೆಯ ರೂಪಾಂತರವನ್ನು ಒಪ್ಪಿಕೊಂಡರು. ದೇಶಾದ್ಯಂತ 1.64 ಲಕ್ಷ ಸೇವಾ ಕೇಂದ್ರಗಳನ್ನು ಒಳಗೊಂಡಿರುವ ಇಂಡಿಯಾ ಪೋಸ್ಟ್‌ನ ವಿಶಾಲ ಜಾಲದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಮತ್ತು ಗ್ರಾಮೀಣ ಸಮುದಾಯಗಳಿಗೆ ಬಹು-ಕ್ರಿಯಾತ್ಮಕ ಕೇಂದ್ರವಾಗಿ ಕಾರ್ಯನಿರ್ವಹಿಸುವ ಅದರ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು.
ಭವಿಷ್ಯದತ್ತ ದೃಷ್ಟಿ ಹಾಯಿಸುವ ಶ್ರೀ ಸಿಂಧ್ಯಾರವರು, ಇಂಡಿಯಾ ಪೋಸ್ಟ್ ಅನ್ನು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಮತ್ತು ನಾಗರಿಕ ಸೇವಾ ಸಂಸ್ಥೆಯಾಗಿ ಇರಿಸುವ ದೃಷ್ಟಿಕೋನವನ್ನು ರೂಪಿಸಿದರು. ವ್ಯಾಪಕ ಶ್ರೇಣಿಯ ಸೇವೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಯೊಂದು ಅಂಚೆ ಕಚೇರಿಯು ಗ್ರಾಮೀಣ ನಾಗರಿಕರಿಗೆ ‘ಜಗತ್ತಿಗೆ ಕಿಟಕಿ”ಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಅಂಚೆ ಕಚೇರಿಗಳನ್ನು ಸಾಮಾನ್ಯ ಮನುಷ್ಯನ ದೈನಂದಿನ ಅಗತ್ಯಗಳನ್ನು ಪೂರೈಸುವ ರೋಮಾಂಚಕ ಸೇವಾ ಕೇಂದ್ರಗಳಾಗಿ ಪರಿವರ್ತಿಸುವುದು ತಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಹಣಕಾಸು ಸುಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ಸಚಿವರು ಸ್ಪಷ್ಟ ಕಾರ್ಯತಂತ್ರವನ್ನು ಸಹ ವಿವರಿಸಿದರು. ವೆಚ್ಚ ಮತ್ತು ಆದಾಯ ರಚನೆಗಳ ಹೊಂದಾಣಿಕೆಗೆ ಅವರು ಕರೆ ನೀಡಿದರು ಮತ್ತು ಅಂಚೆ ಕುಟುಂಬದ ಎಲ್ಲಾ ಸದಸ್ಯರು ಸಮರ್ಪಣೆ, ಉತ್ಸಾಹ ಮತ್ತು ಹುರುಪಿನಿಂದ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಸಮಗ್ರ ನಾಗರಿಕ ಸೇವೆಗಳನ್ನು ಒದಗಿಸುವಲ್ಲಿ ಭಾರತ ಅಂಚೆಯ ಸಾಮರ್ಥ್ಯ ಮತ್ತು ಬದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅಂಚೆ ಮತ್ತು ಪಾರ್ನೆಲ್ ಕಾರ್ಯಾಚರಣೆಗಳಲ್ಲಿ ಕರ್ನಾಟಕ ಅಂಚೆ ವೃತ್ತದ ಅಸಾಧಾರಣ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಅವರು, ಇದು ದೇಶದ ಉಳಿದ ಭಾಗಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಕೆ. ಪ್ರಕಾಶ್ ವಹಿಸಿದ್ದರು ಮತ್ತು ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಕೌಲ್ ಮತ್ತು ಅಂಚೆ ಸೇವೆಗಳ ಮಂಡಳಿಯ ಸದಸ್ಯೆ (ಸಿಬ್ಬಂದಿ) ಶ್ರೀಮತಿ ಮಂಜು ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಮ್ಮೇಳನದ ಮೂಲಕ, ಗ್ರಾಮೀಣ ಡಾಕ್ ಸೇವಕರ ಪ್ರಯತ್ನಗಳನ್ನು ಗುರುತಿಸುವ ಮತ್ತು ಕೊನೆಯ ಹಂತದ ಸೇವಾ ವಿತರಣೆಯಲ್ಲಿ ಅವರ ಪಾತ್ರವನ್ನು ಹೆಚ್ಚಿಸುವ ತನ್ನ ಬದ್ಧತೆಯನ್ನು ಇಲಾಖೆ ಪುನರುಚ್ಚರಿಸಿತು.
ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾದರು.
ಬೆಂಗಳೂರಿನ ಮಲ್ಲೇಶ್ವರ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮಾ ಸಂಭ್ರಮ
ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಂಶಿ ಅವರಿಗೆ ಮುಖ್ಯಮಂತ್ರಿಗಳು ಶುಭ ಕೋರಿದರು. ಈ ಸಮಯದಲ್ಲಿ ಸಚಿವರಾದ ಬಿ.ಎಸ್. ಸುರೇಶ್ (ಬೈರತಿ) ಅವರು ಉಪಸ್ಥಿತರಿದ್ದರು.