ಗ್ರಾಮೀಣ ಅಂಚೆ ಸೇವೆಗಳ ಬೆನ್ನೆಲುಬಾದ ಗ್ರಾಮೀಣ ಡಾಕ್ ಸೇವಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಜ್ಯೋತಿರಾದಿತ್ಯ ಎಂ.ಸಿಂಧ್ಯಾ ಅವರು ತಿಳಿಸಿದರು.
ಸರ್.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‍ನಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರಿನ ಅಂಚೆ ಕಚೇರಿಯ ಜಿಡಿಎಸ್ ಸಿಬ್ಬಂದಿಗಳೊಂದಿಗೆ ಸಂವಾದ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕರ್ನಾಟಕ ಅಂಚೆ ವೃತ್ತದ ಅತ್ಯುತ್ತಮ ಸೇವಾ ಪ್ರದರ್ಶನ ನೀಡಿರುವ 15 ಗ್ರಾಮೀಣ ಡಾಕ್ ಸೇವಕರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ಡಾಕ್ ಸೇವಕರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಯು “ಡಾಕ್ ಸೇವಾ, ಜನ ಸೇವಾ” ಎಂಬ ಮನೋಭಾವವನ್ನು ಬಲಪಡಿಸುತ್ತದೆ ಎಂದರು.
ಅಂಚೆ ಸೇವಕರು ಚೀಲದಲ್ಲಿ ಅಕ್ಷರವನ್ನು ಮಾತ್ರ ಕೊಂಡೊಯ್ಯವುದಿಲ್ಲ, ಜನರ ವಿಶ್ವಾಸವನ್ನು ಹೊಂದಿರುತ್ತಾರೆ. ದೇಶದ ಪ್ರತೀ ಕುಟುಂಬವೂ ತಮ್ಮ ಸೇವೆಯನ್ನು ನೆನೆಯುತ್ತದೆ. ನಮ್ಮ ಹಳ್ಳಿಯಲ್ಲಿರುವ ಪ್ರತಿಯೊಂದು ಅಂಚೆ ಕಚೇರಿಯು ಮಾಲ್ ಇದ್ದಂತೆ. ನಾವು ನಮ್ಮ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಬೇಕು. ಹೊಸತನ್ನು ಬಯಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಡಾಕ್ ಸೇವಕರು ಅಂಚೆ ಇಲಾಖೆಯ ಪ್ರಮುಖ ಭಾಗವಾಗಿದ್ದು, ನಿಮ್ಮೊಂದಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ನಿಮ್ಮ ಬದ್ಧತೆಯ ಸೇವೆಯನ್ನು ನಾವು ಬಯಸುತ್ತೇವೆ ಎಂದರು.
ಇಂದು ಗುರು ಪೂರ್ಣಿಮೆಯ ದಿನವಾಗಿದ್ದು, ಭಾವನಾತ್ಮಕ ಕ್ಷಣವಾಗಿದೆ. ನಮ್ಮ ತಾಯಿ-ತಂದೆ ಗುರುಗಳಾದರೆ, ನಮ್ಮ ಜೀವನದಲ್ಲಿ ಗೆಲುವಿನ ಹೆಜ್ಜೆ ಮೂಡಿಸುವ ಪ್ರತಿಯೊಬ್ಬರು ಗುರುಗಳ ಸ್ಥಾನ ತುಂಬುತ್ತಾರೆ ಎಂದರು.
ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ “ತಪ್ತಮುದ್ರಾಧಾರಣೆ”
ರಾಜ್ಯದ ಅಂಚೆ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶ್ಲಾಘಿಸುತ್ತಾ, ಡಾಕ್ ಸೇವೆ ಅಂದರೆ ಜನಸೇವೆ ಎಂದು ಪ್ರತಿಪಾದಿಸಿದರು. ಕರ್ನಾಟಕದ ಅಂಚೆ ಸೇವೆ ವಾರ್ಷಿಕವಾಗಿ ಸುಮಾರು 200 ಕೋಟಿಗೂ ಹೆಚ್ಚು ಪಾರ್ಸೆಲ್ ಹಾಗೂ ಅಂಚೆ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ದೇಶದಲ್ಲೇ ಅಂಚೆ ಇಲಾಖೆಯನ್ನು ಲಾಭ ತರುವ ಇಲಾಖೆಯಾನ್ನಾಗಿ ಪರಿವರ್ತಿಸಲಾಗುವುದು. ವಿಶ್ವದಲ್ಲೇ ಭಾರತದ ಅಂಚೆ ಇಲಾಖೆ ಅತ್ಯುನ್ನತ ಸ್ಥಾನದಲ್ಲಿದ್ದು, ವಿಶ್ವದಲ್ಲಿಯೇ ಹಳ್ಳಿಗಳಲ್ಲಿಯೂ ಸೇವೆ ಸಲ್ಲಿಸುವ ಏಕೈಕ ಇಲಾಖೆ ಅಂಚೆ ಇಲಾಖೆ. ಅಂಚೆ ಇಲಾಖೆಯಿಂದಾಗಿ ದೇಶದ ಪ್ರತಿಯೊಂದು ತಾಯಂದಿರ ಪಿಂಚಣಿ ಯೋಜನೆಯನ್ನು ಪಡೆಯುವಂತಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಡೆದ ಸಂವಾದದಲ್ಲಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಡಾಕ್ ಸೇವಕರೊಂದಿಗೆ ಸಚಿವರು ಸಂವಾದ ನಡೆಸಿದರು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 15 ಗ್ರಾಮೀಣ ಡಾಕ್ ಸೇವಕರನ್ನು ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಕೌಲ್, ಅಂಚೆ ಸೇವೆಗಳ ಮಂಡಳಿಯ ಸದಸ್ಯೆ ಶ್ರೀಮತಿ ಮಂಜು ಕುಮಾರ್, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು, ಡಾಕ್ ಸೇವಕರು ಉಪಸ್ಥಿತರಿದ್ದರು.
ಬೆಂಗಳೂರು, ಜುಲೈ 10 (ಕರ್ನಾಟಕ ವಾರ್ತೆ): ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪತ್ರಕರ್ತರಿಗೆ “ಕನ್ನಡ ಸಾಹಿತ್ಯ” ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು ಆಗಸ್ಟ್ 3ನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯಿರುವ 20 ರಿಂದ 40 ವರ್ಷ ವಯಸ್ಸುಳ್ಳ ಈಗಾಗಲೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು ಹಾಗೂ ಆಸಕ್ತಿಯುಳ್ಳವರು ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು 2025 ರ ಜುಲೈ 25 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣ https://sahithyaacademy.karnataka.gov.in ನ ಮೂಲಕ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ .ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಡ್ಲಘಟ್ಟ : ತಾಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗ್ರಾಮದಲ್ಲಿ ಶ್ರೀ ಮಹೇಶ್ವರ ದೇವಿಯ 35 ನೇ ವಾರ್ಷಿಕೊತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು. ಬೆಳ್ಳೂಟಿ ಗ್ರಾಮದ ನೂರಾರು ಮಹಿಳೆಯರಿಂದ ಭಕ್ತಾದಿಗಳಿಂದ ತುಪ್ಪದ ದೀಪಗಳಿಂದ ಆರತಿ ಬೆಳಗಿದರು.
ದೇಶದ ಬೆನ್ನುಲುಬಾಗಿರುವ ರೈತರಿಗಾಗಿ ಉತ್ತಮ ಮಳೆಯಾಗಿ, ಬೆಳೆಗಾಗಿ ಬೆಂಬಲ ಬೆಲೆ ಸಿಗಬೇಕೆಂದು ವಿಶೇಷ ಪೂಜೆ ಮಾಡಲಾಯಿತು.
ನಾಡಿನ ಜನೆತೆಯ ಆರೋಗ್ಯ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಗ್ರಾಮ ದೇವತೆ ಮಹೇಶ್ವರಮ್ಮ ಹಾಗೂ ಮುನೇಶ್ವರಪ್ಪ ಸ್ವಾಮಿಗೆ ಬೆಳ್ಳೂಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಬೆಂಗಳೂರು, ಜುಲೈ 9 : ಜನೌಷಧಿ ಕೇಂದ್ರಗಳ ಸ್ಥಗಿತ ಕುರಿತು ಹೈಕೋರ್ಟ್ ನೀಡಿದ ಮಧ್ಯಂತರ ತಡೆ ಆದೇಶವನ್ನು ಸ್ವಾಗತಿಸುತ್ತೇನೆ. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳ ಸ್ಥಗಿತದ ಬಗ್ಗೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ. ಈ ಕುರಿತು ಬಿಜೆಪಿಯಿಂದ ಹೋರಾಟ ಮಾಡಲಾಗಿತ್ತು. ಖಾಸಗಿ ಮೆಡಿಕಲ್ ಫಾರ್ಮಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತು. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ಇನ್ನಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜನರಿಗೆ ಏನು ಬೇಕೆಂದು ಅರಿತು ಕೆಲಸ ಮಾಡಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 260-270 ಔಷಧಿಗಳನ್ನು ನೀಡಬೇಕಾಗುತ್ತದೆ. ಆದರೆ ಅಷ್ಟೊಂದು ಔಷಧಿ ಇಲ್ಲ. ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇತ್ತೀಚೆಗೆ ಹಾಸನ ಆಸ್ಪತ್ರೆಗೆ ಹೋದಾಗ ಒಬ್ಬರೇ ಹೃದ್ರೋಗ ತಜ್ಞ ವೈದ್ಯರು ಇರುವುದು ಕಂಡುಬಂತು. ಹೃದಯ ಸಂಬಂಧಿ ರೋಗದ ತುರ್ತು ಪರಿಸ್ಥಿತಿಯಲ್ಲಿ ಅವರು ಇಂಜೆಕ್ಷನ್ ಕೊಟ್ಟು ಬೆಂಗಳೂರಿಗೆ ಕಳಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿದರೆ ಬಹಳ ಸಮಸ್ಯೆಯಾಗುತ್ತದೆ ಎಂದರು.
ಜೈಲಿನಲ್ಲೇ ಭಯೋತ್ಪಾದಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಗೃಹ ಇಲಾಖೆ ಸತ್ತೇಹೋಗಿದೆ. ರಾಜ್ಯ ಸರ್ಕಾರ ಕೂಡಲೇ ಬಾಂಗ್ಲಾ ಹಾಗೂ ಪಾಕ್ ಪ್ರಜೆಗಳನ್ನು ಹೊರಕ್ಕೆ ಕಳಿಸಬೇಕು. ಇದಕ್ಕಾಗಿ ವಿಶೇಷ ಪಡೆ ರಚಿಸಬೇಕು. ಇಲ್ಲೂ ವೋಟ್ ಬ್ಯಾಂಕ್ ರಾಜಕೀಯ ಮಾಡಬಾರದು. ಕೈದಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ಕ್ರಮ ವಹಿಸಬೇಕು. ಜೈಲಿನಲ್ಲಿ ಮೊಬೈಲ್ ಬಳಕೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ರಂಭಾಪುರಿ ಜಗದ್ಗುರುಗಳು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಲಕ್ಷಾಂತರ ಭಕ್ತರು ಬರುವಾಗ ಅವರ ಅಭಿಪ್ರಾಯವನ್ನು ಹೇಳಿರುತ್ತಾರೆ. ಅದನ್ನೇ ಸ್ವಾಮೀಜಿ ಹೇಳಿರುತ್ತಾರೆ. ಸರ್ಕಾರ ಗ್ಯಾರಂಟಿಗಳನ್ನು ಪ್ರತಿ ದಿನ ಕೊಡುತ್ತಿದೆ. ಆದರೆ ಅಕ್ಕಿ ಸಾಗಣೆಗೆ ಹಣವಿಲ್ಲದೆ, ಲಾರಿ ಮುಷ್ಕರ ನಡೆದಿದೆ. ಎಲ್ಲ ಬಾಕಿ ಬಿಲ್ ಇಟ್ಟುಕೊಂಡು ಗ್ಯಾರಂಟಿ ಕೊಟ್ಟರೆ ಪ್ರಯೋಜನವಿಲ್ಲ. ಉಚಿತ ಬಸ್ ನೀಡಿದ್ದರೂ, ಶಾಲಾ ಮಕ್ಕಳು ನಡೆದುಕೊಂಡು ಹೋಗಬೇಕಾಗಿದೆ. ಜನರಿಗೆ ಸ್ವಾವಲಂಬಿ ಜೀವನ ನೀಡಿ ಎಂದು ಸ್ವಾಮೀಜಿ ಹೇಳಿದ್ದಾರೆ ಎಂದರು.
ಬಿಕೆ.ಹರಿಪ್ರಸಾದ್ ತುಳಿತಕ್ಕೊಳಗಾದ ಜನಾಂಗಕ್ಕೆ ಅಪಮಾನ ಮಾಡಿದ್ದಾರೆ. ಬಿಜೆಪಿಯಲ್ಲಿ ವಂಶಪಾರಂಪರ್ಯವಾಗಿ ಅಧ್ಯಕ್ಷರನ್ನು ಘೋಷಣೆ ಮಾಡುವ ಕ್ರಮವಿಲ್ಲ. ಕಾಂಗ್ರೆಸ್‌ನಲ್ಲಿ ಚುನಾವಣೆ ನಡೆಯುವುದಿಲ್ಲ. ಆದರೆ ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿದೆ ಎಂದರು.
ಬೆಂಗಳೂರು : ಭರತನಾಟ್ಯ ಕಲೆಗೆ ಅಪಾರವಾದ ವೈಶಿಷ್ಟ ಮತ್ತು ಪರಂಪರೆ ಇದೆ. ಕಾಲಕ್ಕೆ ತಕ್ಕಂತೆ ಹಲವಾರು ಮಹನೀಯರು ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕಲೆಯೂ ಪ್ರತಿಯೊಬ್ಬರನ್ನೂ ಭಕ್ತಿ ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ.
ಗುರು ಡಾ. ಸತ್ಯನಾರಾಯಣರಾಜು ಇವರು ತಮ್ಮ 60ನೇ ವರ್ಷದ ಸಾರ್ಥಕ ನೃತ್ಯ ಬದುಕಿನ ಪಯಣವನ್ನು “ಷಷ್ಠಿ ವರ್ಣ ಚಕ್ರ” ಎಂಬ ಶೀರ್ಷಿಕೆಯ ಅಡಿಯಲ್ಲಿ 60 ಬಾರಿ ವರ್ಣವನ್ನು ವಿವಿಧ ನೃತ್ಯ ಶಾಲೆಯಲ್ಲಿ ಪ್ರದರ್ಶಿಸಲು ಇಚ್ಚಿಸಿರುತ್ತಾರೆ. ಗುರುವಿನ ಮೇಲಿನ ಆಪಾರ ಭಕ್ತಿಯಿಂದ ಪ್ರತಿ ಕಾರ್ಯಕ್ರಮವನ್ನು ತಮ್ಮ ಗುರುಗಳಾದ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪೃರಸ್ಕೃತರು ಆದ ಗುರು ಶ್ರೀಮತಿ ನರ್ಮದಾರವರಿಗೆ ಮೀಸಲಿಟ್ಟಿದ್ದಾರೆ. ಇವರ 18ನೇ ವರ್ಣ ಪ್ರಸ್ತುತಿಯನ್ನು ಅರಿಶಿನಕುಂಟೆಯ “ಶ್ರೀ ಗಣೇಶ ನೃತ್ಯಾಲಯದ ” ಕಲಾ ನಿರ್ದೇಶಕರಾದ ಶ್ರೀಮತಿ ಭಾವನಾ ಗಣೇಶ ಮತ್ತು ಶ್ರೀ ಎಂ ಡಿ ಗಣೇಶ್ ನೃತ್ಯ ದಂಪತಿಗಳು ಆಯೋಜಿಸಿದ್ದರು. ನಟ್ಟುವಾಂಗ ನಿರ್ವಹಣೆಯಲ್ಲಿ ವಿದ್ವಾನ್ ಭರತ್ ನಾರಾಯಣ್, ಸುಶ್ರಾವ್ಯ ಗಾಯನದಲ್ಲಿ ವಿದುಷಿ ಅನಂದಿತಾ ಕುಲೂರು, ಮೃದಂಗದಲ್ಲಿ ವಿದ್ವಾನ್ ವಿದ್ಯಾ ಶಂಕರ್, ಕೊಳಲು ವಾದನದಲ್ಲಿ, ವಿದ್ವಾನ್ ವರುಣ್ ಭಾರೀಘಾಟ್ ಇದ್ದದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತ್ತು. “ವರ್ಣ ” ಎನ್ನುವುದು ಭರತನಾಟ್ಯ ಮಾರ್ಗದಲ್ಲಿ ಘನ ಪ್ರಸ್ತುತಿ. ಇದನ್ನು ಕಿರಿಯರಿಂದ ಹಿರಿಯರವರೆಗೂ ಮನಮುಟ್ಟುವಂತೆ ಪ್ರದರ್ಶಿಸಿ, ನಂತರ ಪುರಂದರದಾಸರ “ಜಗದೋದ್ದಾರನ” ಮತ್ತು “ಇನ್ನು ದಯಬಾರದೆ” ಎಂಬ ದೇವರನಾಮದಲ್ಲಿ ನವವಿಧ ಭಕ್ತಿಯನ್ನು ತೋರಿಸಿ ಕಲಾರಸಿಕರ ಕಣ್ಣಂಚಿನಲ್ಲಿ ಆನಂದದ ಭಾಷ್ಪ ಬರುವಂತೆ ಮೂಡಿತ್ತು ಪ್ರದರ್ಶನ. ಧನ್ಯತಾ ಭಾವದಿಂದ ದಂಪತಿಗಳಿಬ್ಬರೂ ಸಂತೋಷವನ್ನು ವ್ಯಕ್ತ ಪಡಿಸಿ ನಟರಾಜನ, ಗುರುಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ದಾವಣಗೆರೆ: ಬುದ್ಧ, ಸಿದ್ಧಾರ್ಥ ಅಂತೆಲ್ಲಾ ಟ್ರಸ್ಟ್‌ಗಳನ್ನು ಮಾಡಿಕೊಂಡು, ನೀವೇ ಕೆಐಎಡಿಬಿ ಭೂಮಿಯನ್ನೆಲ್ಲಾ ಹೊಡೆಯಬೇಡಿ ಸರ್, ಕಂಪನಿಗಳಿಗೆ ಕೆಐಎಡಿಬಿ ಭೂಮಿ ಕೊಡಿಸಿ, ವಿದ್ಯಾವಂತ ಯುವಕರಿಗೆ ಕೆಲಸ ಸಿಗುವಂತೆ ಮಾಡಿ ಪ್ರಿಯಾಂಕ್ ಖರ್ಗೆ ಸರ್ ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ವ್ಯಂಗಭರಿತವಾಗಿ ಕಟುಕಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸರ್, ನಿಮ್ಮ ರೀತಿಯ ಅದೃಷ್ಟವಂತರು ಯಾರೂ ಇರೊಲ್ಲ. ಹತ್ತು, ಹನ್ನೆರಡನೇ ತರಗತಿಯನ್ನಷ್ಟೇ ಓದಿ, ಸಾವಿರಾರು ಕೋಟಿ ಆಸ್ತಿ, ಒಂದೇ ನೋಂದಣಿ ಸಂಖ್ಯೆಯಲ್ಲಿ ಹತ್ತಾರು ಐಷಾರಾಮಿ ಆಸ್ತಿ ಖರೀದಿಸುವ ಶಕ್ತಿಯೂ ಎಲ್ಲರಿಗೂ ಸಿಗೊಲ್ಲ ಎಂದರು.
ಬಡವರಿಗೂ ಬದುಕಲು ಒಂದಿಷ್ಟು ದಾರಿ ಮಾಡಿಕೊಡಿ ಸರ್. ನನ್ನನ್ನು ಬೇಕಾದರೆ ದಿನಾಲೂ ಬೈಯ್ರಿ. ನಮ್ಮ ಹುಡುಗರಿಗೆ ಕೆಲಸ ಕೊಡಿ ಸರ್. ಪ್ರಿಯಾಂಕ ಖರ್ಗೆ ಸಾಹೇಬ್ರೆ ನೀವು ನನ್ನನ್ನು ಯಾವುದೇ ಪ್ರಾಣಿಗೆ ಹೋಲಿಸಿಕೊಳ್ಳಿ. ನಿಮ್ಮ ಪದಕೋಶದಲ್ಲಿದ್ದಷ್ಟು ಪದಗಳನ್ನು ಬಳಸಿಕೊಂಡು, ನನ್ನು ಬೈಯ್ಯಿರಿ. ಆದರೆ, ನಮ್ಮ ವಿದ್ಯಾವಂತ ಯುವಜನರಿಗೆ ಉದ್ಯೋಗವನ್ನು ಮೊದಲು ಕೊಡಿಸಿ ಸರ್ ಎಂದು ವ್ಯಂಗ್ಯವಾಡಿದರು.
ಪ್ರತಿನಿತ್ಯ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ನೀವು ಮಾತನಾಡುತ್ತೀರಿ. ಪ್ರತಾಪ ಸಿಂಹನಿಗೂ ಬೈಯ್ಯಿರಿ. ನನ್ನನ್ನು ಬೇಕಾದರೆ ನಿಂದಿಸಿ. ಇಲಾಖೆ ಏಜೆನ್ಸಿಗಳನ್ನು ಮಾಡಿದ್ದೀರಿ. ನನ್ನನ್ನು ಬೈದರೆ ನಿಮಗೆ ಅಷ್ಟೊಂದು ಖುಷಿ ಸಿಗುತ್ತದೆಂದರೆ ಅದಕ್ಕೂ ನಾನು ಕಲ್ಲು ಹಾಕುವುದಿಲ್ಲ. ಸರ್ ನಿರುದ್ಯೋಗ ಭತ್ಯೆ ಕೊಡುತ್ತೇವೆ ಅಂತಲೇ ಅಧಿಕಾರಕ್ಕೆ ಬಂದಿದ್ದೀರಿ. ಎರಡು ವರ್ಷವಾದರೂ ಯುವನಿಧಿ ಜಾರಿಯಾಗಲಿಲ್ಲ. ಯಾರಿಗೂ ಯುವನಿಧಿ ಭತ್ಯೆ ಬರುತ್ತಿಲ್ಲವಲ್ಲ ಎಂದು ಹೇಳಿದರು.
ಪ್ರತಿವರ್ಷ ಸುಮಾರು 1.5 ಲಕ್ಷದಷ್ಟು ಇಂಜಿನಿಯರಿಂಗ್ ಪದವೀಧರರು ಬರುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿದವರಿಗೂ ಈಗ ಬಿಎ ಕಲಿತವರ ಪರಿಸ್ಥಿತಿಯೇ ಬಂದಿದೆ. ಸರ್ ನಿಮ್ಮ ಇಲಾಖೆಯ ಬಗ್ಗೆಯೂ ಒಂದಿಷ್ಟು ಮಾತನಾಡಿ. ನಿಮ್ಮ ಇಲಾಖೆಯಲ್ಲಿ ನಿಮ್ಮ ಸಾಧನೆಯ ಕುರಿತು ಸಹ ಒಂದಿಷ್ಟು ಮಾತನಾಡಿ ಸರ್, ಆದರೂ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ ಬಿಡಿ ಎಂದರು
ಶಿಡ್ಲಘಟ್ಟ : ಎಂ ಆರ್ ಪಿ ಎಸ್ ಸಂಸ್ಥಾಪಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂದಕೃಷ್ಣ ಮಾದಿಗ ಅವರ 60 ನೇಯ ಹುಟ್ಟು ಹಬ್ಬವನ್ನು ತಾಲೂಕಿನ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ, ನಂತರ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ಎಂ ಆರ್ ಪಿ ಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆಎಂ ದೇವರಾಜ್ ಮಾತನಾಡಿ, ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಮಹಾನ್ ವ್ಯಕ್ತಿ ಮಂದಕೃಷ್ಣ ಮಾದಿಗ ಅವರು ನಮಗೆ ಸದಾ ಪ್ರೇರಣೆ. ಅವರು ಸಾರ್ವಜನಿಕ ಪ್ರದರ್ಶನಗಳ ಮೂಲಕ ಮಾದಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸಿ ಮಾದಿಗ ಸಮುದಾಯ ಎದುರಿಸುತ್ತಿರುವ ಅನ್ಯಾಯಗಳನ್ನು ನಿರಂತರವಾಗಿ ಎದುರಿಸುತ್ತಾ ಬಂದಿದ್ದಾರೆ. ಆರ್ಥಿಕ ಮತ್ತು ಶೈಕ್ಷಣಿಕ ಉದ್ಯೋಗಾವಕಾಶಗಳಿಗೆ ಮಂದ ಕೃಷ್ಣ ಮಾದಿಗ ಅವರ ಸಮರ್ಪಣೆ ಮತ್ತು ನಾಯಕತ್ವವು ಅನೇಕರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ತಿಳಿಸಿದರು.
ದಲಿತ ಮುಖಂಡ ನಾಗಸರಸಿಂಹ ಮಾತನಾಡಿ,ಮಂದಕೃಷ್ಣ ಮಾದಿಗ ಅವರ ಪ್ರಮುಖವಾಗಿ ದಲಿತ ಜಾತಿಯ ಅಂಚಿನಲ್ಲಿರುವ ಮಾದಿಗ ಸಮುದಾಯದ ಹಕ್ಕುಗಳಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಹಾಗೆಯೇ ಮಕ್ಕಳ ಮತ್ತು ಅಂಗ ವಿಕಲರ ಪರ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಸವಲತ್ತುಗಳ ಸಮಾನ ವಿತರಣೆಗಾಗಿ ಹೋರಾಡಲು ಮೀಸಲಾಗಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ ಆರ್ ಪಿ ಎಸ್) ಸ್ಥಾಪನೆ ಅವರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಹ ಇತ್ತೀಚಿಗೆ ಪಡೆದಿದ್ದಾರೆ ಎಂದು ಅವರಿಗೆ 60ನೇ ವರ್ಷದ ಶುಭಾಶಯಗಳು ಕೋರಿದರು.
ಮಾದಿಗ ದಂಡೋರ ಕೃಷ್ಣಪ್ಪ ಮಾತನಾಡಿ ಮಾದಿಗ ಸಮುದಾಯದೊಳಗಿನ ಉದ್ದೇಶಿತ ಫಲಾನುಭವಿಗಳಿಗೆ ಮೀಸಲಾತಿ ನೀತಿಗಳ ಪ್ರಯೋಜನಗಳನ್ನು ನ್ಯಾಯಯುತವಾಗಿ ಒದಗಿಸಲು ಹಗಲಿರುಳು ಹೋರಾಟ ಎಲ್ಲಾ ಮಾದಿಗ ಸಮಾಜದವರಿಗೆ ಫಲ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಗವಂತಪ್ಪ,ಡಿ ಕೃಷ್ಣಪ್ಪ, ತಾತಹಳ್ಳಿ ಚಲಪತಿ, ಕೆ ನಾರಾಯಣಸ್ವಾಮಿ, ಮಂಜುನಾಥ್ ಅಲಸೂರು,ಭಕ್ತರಹಳ್ಳಿ ಡಾ. ವಿಶ್ವನಾಥ್, ಹಲಸೂರುದಿನ್ನೆ ಆಂಜಿ,ಚನ್ನಹಳ್ಳಿ ದೇವರಾಜ್, ಲೋಕೇಶ್, ವೇಣುಗೋಪಾಲ್, ಗೋಕುಲ್, ನರಸಿಂಹಪ್ಪ, ನಾರಾಯಣಸ್ವಾಮಿ, ಪ್ರಕಾಶ್, ಅಶೋಕ್, ರಾಮರಾಜ್, ಗುರುಮೂರ್ತಿ, ರವಿಶಂಕರ್, ಚನ್ನಕೃಷ್ಣ, ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು.
ಶಿಡ್ಲಘಟ್ಟ : ಉಸ್ತುವಾರಿ ಸಚಿವರೇನು ನಿಮ್ಮ ಹಾಗೆ ಹಿಂಭಾಗಲಿನಿಂದ ರಾಜಕಾರಣ ಮಾಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಏನು ಮಾಡಿದ್ದೀರಿ ನಿಮ್ಮ ಗ್ರಾಮದಲ್ಲಿ ಡೈರಿ ಚುನಾವಣೆಯಲ್ಲಿ ನೀವು ಏನು ಮಾಡಿದ್ದೀರಿ ಕಾಂಗ್ರೆಸ್ ಪಕ್ಷದವರನ್ನ ಪಕ್ಕಕ್ಕೆ ಇಟ್ಟು ಜೆಡಿಎಸ್ ಪಕ್ಷದವರ ಜೊತೆ ಸೇರಿ ನಿರ್ದೇಶಕ ರಾಗಿದ್ದೀರಿ ಬೇರೆಯವರನ್ನ ಯಾಕೆ ದಾರಿ ತಪ್ಪಿಸುತ್ತೀರಿ ಮಾಜಿ ಗ್ರಾಪ ಅಧ್ಯಕ್ಷ ಡಿ ವಿ ಆಂಜನೇಯರೆಡ್ಡಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಎಚ್ ಕೆ ಸಂತೋಷ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜಣ್ಣ ಅವರಿಗೆ ಎರಡು ವರ್ಷಗಳಿಂದ ಇಲ್ಲದೆ ಇರುವ ಕಾಂಗ್ರೆಸ್ ಪಕ್ಷದ ಪ್ರೀತಿ ಇತ್ತೀಚಿಗೆ ಒಂದು ತಿಂಗಳಿಂದೀಚೆಗೆ ಪಕ್ಷದ ಮೇಲೆ ಹೆಚ್ಚು ಕಾಳಜಿ ವಹಿಸಿದಂತಾಗಿದೆ. ಕಳೆದ ಎರಡು ವರ್ಷದ ಹಿಂದೆ ರಾಜೀವ್ ಗೌಡ ಅವರು ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾದಾಗ ನಾವು ಅವರ ಪರವಾಗಿ ನಿಂತು ಅವರ ಪರವಾಗಿಯೇ ಚುನಾವಣೆ ಎದುರಿಸಿದ್ದೇವೆ. ಆದರೆ ದುರಾದೃಷ್ಟ ನಮ್ಮಲ್ಲಿ ಮತ್ತೊಬ್ಬರು ಪುಟ್ಟು ಆಂಜಿನಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸಿ ಅವರು ಎರಡನೇ ಸ್ಥಾನಕ್ಕೆ ಜಿಗಿದರು. ನಾವು ಮೂರನೇ ಸ್ಥಾನ ಪಡಬೇಕಾಯಿತು. ಅದನ್ನ ಮನಗಂಡು ಚುನಾವಣೆ ಮುಗಿದ ಐದು ತಿಂಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು ನೀವು ಹೀಗೆ ಇದ್ದರೆ ನಿಮ್ಮ ಕ್ಷೇತ್ರದಲ್ಲಿ ತುಂಬಾ ಕಷ್ಟ ಆಗುತ್ತದೆ. ಅವರಿಬ್ಬರಲ್ಲಿ ಒಬ್ಬರನ್ನ ಮಾತ್ರ ಆಯ್ಕೆ ಮಾಡಿಕೊಂಡು, ಯಾರಲ್ಲಿ ಇಬ್ಬರಾದರೆ ಎಲ್ಲರೂ ಸೇರಿ ಎಲ್ಲರೂ ಸೇರಿ ತಾಲೂಕಿನಾದ್ಯಂತ ಓಡಾಡಿ ಕಾಂಗ್ರೆಸ್ ಪಕ್ಷದ ಸಭೆಯನ್ನ ಸೇರಿಸಲಾಯಿತು. ಆ ಸಭೆಯಲ್ಲಿ ನಾಗರಾಜಣ್ಣ ಅವರು ಇದ್ದರು. ಹಲವು ನಾಯಕರು ಭಾಷಣ ಮಾಡಿ ಎಲ್ಲರನ್ನ ಒಗ್ಗೂಡಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಬೇಕು ಎಂದರೆ ಒಬ್ಬರೇ ನಾಯಕರಾಗಬೇಕು ಎಂದು ಚರ್ಚಿಸಿದರು .ಆ ಸಮಯದಲ್ಲಿ ಕಾಂಗ್ರೆಸ್ ಭವನದಲ್ಲಿ ಎರಡು ಗುಂಪುಗಳಾಗಿ ವಿಂಗಡಣೆಯಾಯಿತು. ಗಲಾಟೆಯು ನಡೆಯಿತು. ಮರು ದಿನವೇ ನಮ್ಮ ನಾಯಕ ರಾಜೀವ್ ಗೌಡ ಅವರು ಅಷ್ಟೊಂದು ಕಷ್ಟಪಟ್ಟು ಪಕ್ಷಕ್ಕೆ ದುಡಿದಿದ್ದರು ನಮ್ಮನ್ನ ಒಂದೇ ಮಾತಿನಲ್ಲಿ ಕಿಡಿಗೇಡಿಗಳು ಎಂದು ಮಾತನಾಡಿದರು ಮತ ಹಾಕಿಸಿದ ತಪ್ಪಿಗೆ ನಮ್ಮನ್ನ ಕಿಡಿಗೇಡಿಗಳೆಂದರು ಆಗ ಅದರ ಬಗ್ಗೆ ಯಾರು ಚಕಾರ ಎತ್ತಲಿಲ್ಲ. ಆ ಸ್ಥಳದಲ್ಲಿ ನಮ್ಮ ನಾಗರಾಜಣ್ಣ ಅವರು ಇದ್ದರು ಅವರು ಬಾಯಿ ಬಿಚ್ಚಿಲ್ಲ ಯಾಕೆ ಇತರ ಮಾತನಾಡುತ್ತಿದ್ದೀರಿ ಇವರೆಲ್ಲರೂ ನಮ್ಮ ಪಕ್ಷದ ಕಾರ್ಯಕರ್ತರೇ ಎಂದು ಅವತ್ತು ಒಂದು ಮಾತು ಹೇಳದೆ ಮೌನ ವಹಿಸಿದ್ದೇಕೆ. ನಾವು ಅವತ್ತೇ ಕಾಂಗ್ರೆಸ್ ಭವನಕ್ಕೆ ಕೊನೆಯ ಹೆಜ್ಜೆಯನ್ನ ಇಟ್ಟಿದ್ದು ಇಲ್ಲಿಯವರೆಗೂ ನಾವು ಆ ಕಾಂಗ್ರೆಸ್ ಭವನಕ್ಕೆ ಹೋಗಿಲ್ಲ.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜಣ್ಣ ಅವರು ಪಕ್ಷವನ್ನು ಮರೆತಿದ್ದರು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ನಮ್ಮ ನಾಗರಾಜಣ್ಣ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಲು ಅಲ್ಲೊಬ್ಬ ನಾಯಕ ಇಲ್ಲೊಬ್ಬ ನಾಯಕ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿ ಅವರ ಬೆಳೆ ಬೇಯಿಸಿಕೊಂಡರು. ಆದರೆ ಇವತ್ತು ಅವರಿಗೆ ಕಾರ್ಯಕರ್ತರು ನೆನಪಾಗಿದ್ದಾರೆ. ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲಿಲ್ಲ ಉಸ್ತುವಾರಿ ಸಚಿವರು ಎಂದು ಹೇಳುತ್ತಾರೆ. ನಾಮನಿರ್ದೇಶನ ಮಾಡುವುದು ಜನಪ್ರತಿನಿಧಿಗಳ ಅಥವಾ ಸಚಿವರು ಮಾಡಬೇಕಾ. ಚುನಾವಣೆ ಮುಗಿದ ನಂತರ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ ಅವರ ಇಬ್ಬರು ಕುಳಿತು ಒಂದು ನಿರ್ಧಾರಕ್ಕೆ ಬಂದು ನಮಗೆ ಇಂತಹ ವ್ಯಕ್ತಿ ನಾಮನಿರ್ದೇಶನ ಬೇಕು ಎಂದು ಜಿಲ್ಲಾ ಉಸ್ತುವಾರಿಗಳನ್ನ ಕೇಳಿದ್ದರೆ ಅವರು ಇಲ್ಲ ಎನ್ನುತ್ತಿದ್ದರೆ ನಾಗರಾಜಣ್ಣವರೇ. ಆ ಕೆಲಸ ಮಾಡಿ ನಾಗರಾಜಣ್ಣವರೇ. ನಮ್ಮನೆಗೆ ಮೂರು ಬಾಗಿಲಾಗಿದೆ. ಉಸ್ತುವಾರಿ ಸಚಿವರು ಹೇಳಿದರೆ ಅವರಿಗೆ ಏನು ಮಾಡುವವರು. ಸಚಿವರ ಅಭಿವೃದ್ಧಿ ಅವ್ರ್ ಮಾಡ್ತಾ ಇದ್ದಾರೆ ಯಾವುದೇ ಕೆಲಸ ನಿಲ್ಲಿಸಿಲ್ಲ. ಉಸ್ತುವಾರಿ ಸಚಿವರೇನು ನಿಮ್ಮ ಹಾಗೆ ಹಿಂಭಾಗಲಿನಿಂದ ರಾಜಕಾರಣ ಮಾಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಏನು ಮಾಡಿದ್ದೀರಿ ನಿಮ್ಮ ಗ್ರಾಮದಲ್ಲಿ ಡೈರಿ ಚುನಾವಣೆಯಲ್ಲಿ ನೀವು ಏನು ಮಾಡಿದ್ದೀರಿ ಕಾಂಗ್ರೆಸ್ ಪಕ್ಷದವರನ್ನ ಪಕ್ಕಕ್ಕೆ ಇಟ್ಟು ಜೆಡಿಎಸ್ ಪಕ್ಷದವರ ಜೊತೆ ಸೇರಿ ನಿರ್ದೇಶಕ ರಾಗಿದ್ದೀರಿ ಬೇರೆಯವರನ್ನ ಯಾಕೆ ದಾರಿ ತಪ್ಪಿಸುತ್ತೀರಿ ಪಕ್ಷದ ಮೇಲೆ ಅಭಿಪ್ರಾಯ ಇರಲಿ ಒಪ್ಪಿಕೊಳ್ಳೋಣ ಸೇರಿಸಿ ಎಲ್ಲರನ್ನು ಒಂದು ಕಡೆ ಸೇರಿಸುವ ಪ್ರಯತ್ನ ಮಾಡಿ. ಪಾರ್ಟಿ ಉಳಿಯಬೇಕಾದರೆ ನಾಳೆ ಎಲ್ಲರನ್ನು ಸೇರಿಸಿ ಪುಟ್ಟು ಆಂಜಿನಪ್ಪ ಅವರನ್ನು ಸೇರಿಸಿ ರಾಜೀವ್ ಗೌಡ ಅವರನ್ನು ಸೇರಿಸಿ ಎಲ್ಲ ಕಾರ್ಯಕರ್ತರನ್ನು ಸೇರಿಸಿ ಎಂದರು. ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು ಎಲ್ಲರನ್ನ ಒಗ್ಗೂಡಿಸಿ ಚುನಾವಣೆ ಮಾಡಿ ಒಂದು ವೇಳೆ ಈ ರೀತಿ ಗುಂಪುಗಾರಿಕೆ ಮಾಡಿದರೆ ಒಂದು ಸ್ಥಾನ ಗೆಲ್ಲುವುದಕ್ಕೆ ಕಷ್ಟವಾಗುತ್ತದೆ ಎಂದರು.
ಯುವ ಮುಖಂಡ ಹೆಚ್.ಕೆ ಸಂತೋಷ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾಂಗಣಗಳ ವಿಚಾರವಾಗಿ ಕಳೆದ ಹತ್ತು ದಿನಗಳ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಕರೆದು ಕ್ರೀಡಾಂಗಣಗಳ ಅಭಿವೃದ್ಧಿ ಬಗ್ಗೆ ಈಗಾಗಲೇ ಯೋಚಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಯಾವ ತಾಲೂಕಿನ ಕ್ರೀಡಾಂಗಣ ಅಭಿವೃದ್ಧಿ ಕುಂಠಿತಗೊಂಡಿದೆ
ಅಂತಹ ಕ್ರೀಡಾಂಗಣಗಳನ್ನು ಪಟ್ಟಿ ಮಾಡಿ ಅದಕ್ಕೆ ಬೇಕಾಗುವ ಡಿಪಿಆರ್ ಸಿದ್ಧತೆ ಮಾಡಿಕೊಂಡು ಬನ್ನಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ 70 ಕೋಟಿ ಅನುದಾನವನ್ನ ಡಿಪಿಆರ್ ಮಾಡಿಸಿದ್ದಾರೆ. ಅದರಲ್ಲಿ ನಮ್ಮ ತಾಲೂಕಿನ ಕ್ರೀಡಾಂಗಣವು ಸಹ ಸೇರಿದೆ. ಅವರ ಸ್ವಂತ ಅನುದಾನವನ್ನು ನಾಲ್ಕು ಕೋಟಿ ನೀಡಿದ್ದು ಅದರ ಭೂಮಿ ಪೂಜೆಗೆ ಸಚಿವರ ಜೊತೆಯಲ್ಲಿ ನೀವು ಸಹ ಆಗಮಿಸಿದ್ದೀರಿ. ಇನ್ನು ಆಸ್ಪತ್ರೆಯ ಗುದ್ದಲಿ ಪೂಜೆಗೆ ಮತ್ತು ಹೈಟೆಕ್ ರೇಷ್ಮೆ ಮಾರುಕಟ್ಟೆಗೂ ಸಹ ಹೆಚ್ಚಿನ ಅನುದಾನವನ್ನ ಕೊಡಿಸಿರುತ್ತಾರೆ. ಅಮರಾವತಿ ಕ್ಯಾಂಪಸ್ ಗೆ ಎರಡನೇ ಹಂತವಾಗಿ133 ಕೋಟಿ ಬಜೆಟ್ ನಲ್ಲಿ ಮಂಡನೆ ಮಾಡಿಸಿದ್ದಾರೆ. ಇತರೆ ಹಲವು ಯೋಜನೆಗಳಿಗೆ ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಎಸ್.ಬಿ ಬಸವರಾಜ್ ಮಾತನಾಡಿ, ನಾಗರಾಜಣ್ಣ ಹಿಂದುಳಿದ ವರ್ಗದವರಿಗೆ ಏನು ಮಾನ್ಯತೆ ನೀಡಿದ್ದಾರೆ ಎಂದು ಕೇಳಿದ್ದೀರಿ. ಎಲ್ಲಾ ಮುಂದುವರೆದವರೆ ಇದ್ದರೂ, ಆದರೂ ಎಸ್ ಎಫ್ ಸಿ ಎಸ್ ಮತ್ತು ಡೈರಿಗಳಲ್ಲಿ ಎರಡು ಬಾರಿಯೂ ಹಿಂದುಳಿದ ವರ್ಗದವರಿಗೆ ಅಧಿಕಾರವನ್ನು ನೀಡಿದ್ದೇವೆ. ಮೊದಲನೇ ಬಾರಿಯೂ ನೀವೇ ಈ ಬಾರಿಯೂ ಹಿಂದುಳಿದ ವರ್ಗದವರೇ ಇದ್ದಾರೆ. ಸುಬ್ರಮಣಿಯವರಿಗೆ ಜಿಲ್ಲಾ ಪರಿಷತ್ ಸದಸ್ಯರಾಗಿ ನಂತರ ಅಧ್ಯಕ್ಷರನ್ನಾಗಿ ಮಾಡಲಿಲ್ಲವೇ, ಹಾಗೆಯೇ ನಮ್ಮ ನಿರಂಜನ್ ಸ್ವಾಮಿ ಅವರನ್ನು ಗೆಲ್ಲಿಸಿಲಿಲ್ಲವೇ, ಪಿಎಲ್‌ಡಿ ಬ್ಯಾಂಕ್ ನಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಡಿವಿ ವೆಂಕಟೇಶ್ ಅವರನ್ನ ಗೆಲ್ಲಿಸಿ ಕಳಿಸಿಕೊಡಲಿಲ್ಲವೇ. ಇಷ್ಟೆಲ್ಲಾ ಗೆಲ್ಲಿಸಿಕೊಟ್ಟಿದ್ದರು ಹಿಂದುಳಿದವರ ವರ್ಗದವರಿಗೆ ಏನು ಕೊಟ್ಟಿದ್ದೀರಿ ಎಂದು ಮಾತನಾಡುತ್ತೀರಿ ಅಲ್ಲವೇ. ಎಲ್ಲವೂ ಅವರಿಗೆ ನೀಡಿದ್ದೇವೆ ನಮ್ಮಲ್ಲಿ ಇರಲಿಲ್ಲವೇ ಆದರೂ ಅವರಿಗೆ ಹೆಚ್ಚು ಮಾನ್ಯತೆ ನೀಡಿದ್ದೇವೆ. ಅದು ನಮ್ಮ ಪಾರ್ಟಿ ನಮ್ಮವರೇ ಎಂದು ಅವರಿಗೆ ನಾವು ನೀಡಿದ್ದೇವೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀವು ಜಿಲ್ಲಾ ವ್ಯಕ್ತಿಗಳನ್ನು ಸೂಚಿಸಿದ್ದೀರಿ, ಯಾಕೆ ನಮ್ಮ ಕ್ಷೇತ್ರದಲ್ಲಿ ಶಶಿಧರ್ ಮುನಿಯಪ್ಪ ಅವರು ಸಮಾಜ ಸೇವಕರು ಅಲ್ಲವೇ, ಅವರು ಅಭ್ಯರ್ಥಿ ಸ್ಥಾನದಲ್ಲಿ ಇದ್ದಾರೆ ಅವರನ್ನು ಸೂಚಿಸಬಹುದಲ್ಲವೇ, ನಮ್ಮ ತಾಲೂಕು ಶಶಿಧರ್ ಮುನಿಯಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನು ಮಾಡಿ ಎಂದು ಕೇಳಲಿ, ಮಾಜಿ ಶಾಸಕರು ಮಾಜಿ ಸಚಿವರು ಅವರು 35 ವರ್ಷಗಳ ಕಾಲ ಸುದೀರ್ಘ ರಾಜಕೀಯ ಸೇವೆಯಲ್ಲಿ ತೊಡಗಿದ್ದ ವ್ಯಕ್ತಿ ಅವರ ಮಗ ಶಶಿಧರ್ ಮುನಿಯಪ್ಪ ಅವರು ವಿದ್ಯಾವಂತರು ಅವರಿಗಾಗಿ ಇವರು ಟಿಕೆಟ್ ಕೇಳಲಿ. ಅದನ್ನು ಬಿಟ್ಟು ಯಾರೋ ಚಿಕ್ಕಬಳ್ಳಾಪುರಕ್ಕೆ ನೀಡಿ ಅಂತ ಕೇಳಿದ್ರಲ್ಲ ಇದು ತಪ್ಪಲ್ವಾ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಇಲ್ಲಿಯವರೆಗೂ ನಮ್ಮ ತಾಲೂಕಿನಿಂದ ಯಾರು ಆಗಿಲ್ಲ ಯಾಕೆ ಮುನಿಯಪ್ಪ ಅವರಿಗೆ ಬೆಂಬಲ ನೀಡಬಾರದು. ನೀವು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಬೇಕಾದರೆ ಆಗ ನಿಮಗೆ ಒಂದು ಮಾತು ಸಚಿವರು ಬೇಡ ಅಂದಿದ್ದರೆ ನೀವು ನಿರ್ದೇಶಕರಾಗುತ್ತಿದ್ದೀರಾ! ಯಾರ ಮಾತನ್ನು ಕೇಳದೆ ಅವರು ನೇರವಾಗಿ ನಿಮ್ಮನ್ನೇ ಅವರು ಸರಿ ಎಂದು ನಿಮಗೆ ಬೆಂಬಲ ನೀಡಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರು. ಕ್ಷೇತ್ರದಲ್ಲಿ ಎರಡು ಬಣ ಇದೆ ನಿಜ ಆದರೆ ಸೇರಿಸಿ ಎಲ್ಲರನ್ನೂ ಒಗ್ಗಟ್ಟಿಗೆ ಸೇರಿಸಿ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ಕೊಡುತ್ತಾರೋ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಪಾರ್ಟಿ ಚಿನ್ನೆ ತಗೊಂಡು ಬಂದು ಯಾರನ್ನಾದರೂ ನಿಲ್ಲಿಸಲಿ ನಾವು ಅವರಿಗೆ ದುಡಿಯುತ್ತೇವೆ. ನಾಗರಾಜಣ್ಣ ನೀವು ಪತ್ರಿಕಾಗೋಷ್ಠಿ ನಡೆಸಬೇಕಾದರೆ ಕೇವಲ ನಾಲ್ಕು ಜನ ಹಿಂದೆ ಇಟ್ಕೊಂಡು ಪತ್ರಿಕಾಗೋಷ್ಠಿ ನಡೆಸಬೇಡಿ ನಮ್ಮನ್ನ ಕರೆಯಿರಿ ನಾವು ಬಂದು ಸಹಕರಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೇವರಾಜ್ ಕೆ, ಮಾಜಿ ಗ್ರಾಪಂ ಅಧ್ಯಕ್ಷ ಹೆಚ್ ಎಂ ಕ್ಯಾತಪ್ಪ, ಎಸ್ ಎಫ್ ಸಿಎಸ್ ಅಧ್ಯಕ್ಷ ವಿ ಬಸವರಾಜ್, ಗ್ರಾಪ ಅಧ್ಯಕ್ಷ ಜಿ ಎಂ ಮುರಳಿ, ಮಾಜಿ ಗ್ರಾ ಪ ಅಧ್ಯಕ್ಷ ಜಿ ಕೆ ಮಂಜುನಾಥ್, ಮಾಜಿ ಗ್ರಾ ಪಂ ಅಧ್ಯಕ್ಷ ಶೀಗೆಹಳ್ಳಿ ರಾಮರೆಡ್ಡಿ , ರಾಕೇಶ್,ಚಂದ್ರಶೇಖರ,ವೆಂಕಟೇಶ್ ಹುಣಸೇನಹಳ್ಳಿ, ಶೀಗೆಹಳ್ಳಿ ದ್ಯಾವಪ್ಪ ಸೇರಿದಂತೆ ಮತ್ತಿತರರು ಇದ್ದರು.
KOKINO SHITO RYU KARATE SCHOOL OF INDIA CONDUCTED GRADING CEREMONY AT KOKINO KINGS ACADEMY YEAR June 2025 ..
Student’s Trained under Shihan M.Lourd Swamy Karnataka State Chief Instructor 6th Dan Black Belt AIKF 5th Dan
Chief guest PRSHANTH REDDY.K SIR. SECRETARY HENNUR BANASWADI COSMOPOLITAN CLUB and Chief guest VARDHAMAN KALSUR SIR, PRESIDENT NAMOKARA ACADEMY SOUTH ZONE YOGA ASSOCIATION Were Present.
Sensei L.Komal Felix Asst Karnataka State Chief Instructor 3rd Dan Black Belt..
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿ ವತಿಯಿಂದ ವಿತರಿಸುತ್ತಿರುವ ಬಿಸಿಯೂಟ ವಿತರಣಾ ಕೇಂದ್ರಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳವಾರ ಭೇಟಿಕೊಟ್ಟು, ವಿದ್ಯಾರ್ಥಿಗಳಿಗೆ ತಾವೇ ಊಟ ಬಡಿಸುವ ಮೂಲಕ ಯೋಜನೆಗೆ ಮೆಚ್ಚುಗೆ ಸೂಚಿಸಿದರು.
ಪಾವಗಡ ರಾಮಕೃಷ್ಣ ಸೇವಾಶ್ರಮ ಹಾಗೂ ಶಿರಡಿ ಸಾಯಿಮಂದಿರ ಆದರ್ಶನಗರ ತುಮಕೂರು ಸಹಯೋಗದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಮಾಡುತ್ತಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿ ಎಂದು ಶ್ಲಾಘಿಸಿದ ರಾಜ್ಯಪಾಲರು, ತಮ್ಮ ಘಟಿಕೋತ್ಸವ ಭಾಷಣದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿ ರಾಜ್ಯದಲ್ಲಿ ಬೇರೆ ಯಾವ ವಿವಿಯಲ್ಲೂ ಇಂತಹ ಯೋಜನೆ ಕಂಡಿಲ್ಲ. ತುಮಕೂರು ವಿವಿಯಲ್ಲಿ ಕೇವಲ ೫ ರೂಪಾಯಿಗೆ ಮಕ್ಕಳಿಗೆ ಊಟ ಕೊಡುತ್ತಿರುವುದು ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಈ ವೇಳೆ ಯೋಜನೆ ಕುರಿತು ರಾಜ್ಯಪಾಲರಿಗೆ ವಿವರಿಸಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ ಹಾಗೂ ಕುಲಪತಿ ಪ್ರೊ.ಎಂ.ವೆoಕಟೇಶ್ವರಲು ಅವರು ಕಳೆದ ಮೂರು ವರ್ಷಗಳಿಂದ ದಾನಿಗಳ ಸಹಕಾರ, ಸಮಿತಿ ಸದಸ್ಯರ ನಿಸ್ಪೃಹ ಕಾರ್ಯ ಬದ್ಧತೆಯಿಂದಾಗಿ ಯೋಜನೆ ಅನೂಚಾನವಾಗಿ ನಡೆದುಬಂದಿದ್ದು, ಪ್ರಸಕ್ತ ಊಟದ ಯೋಜನೆ ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೪೦೦೦ಕ್ಕೆ ವಿಸ್ತರಣೆಯಾಗಿದೆ. ವಿವಿಯ ನೂತನ ಜ್ಞಾನಸಿರಿ ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೂ ಊಟ ವಿತರಿಸುತ್ತಿದ್ದು, ದೂರದ ಊರುಗಳಿಂದ ಬೆಳಿಗ್ಗೆ ಹಸಿದು ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಅನುಕೂಲವಾಗಿದೆ ಎಂದರು.
ಅನ್ನಪೂರ್ಣೆಶ್ವರಿ ಆಹಾರ ಸಮಿತಿ ಸದಸ್ಯರಾದ ಡಾ. ಎಸ್.ನಾಗಣ್ಣ , ಡಾ.ಎಚ್.ಜಿ.ಚಂದ್ರಶೇಖರ್, ಡಾ.ರಮೇಶ್‌ಬಾಬು, ನಟರಾಜಶೆಟ್ಟಿ, ಕುಲಸಚಿವರುಗಳು, ಕಾಲೇಜಿನ ಪ್ರಾಂಶುಪಾಲೆ ಪ್ರೊ.ದ್ರಾಕ್ಷಾಯಿಣಿ, ಹಾಜರಿದ್ದರು.