Home Blog Page 51

ಕಾಲಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸಲು ವಾಣಿಜ್ಯ ತೆರಿಗೆ ಇಲಾಖೆಯಿಂದ ವರ್ತಕರಿಗೆ ಸೂಚನೆ

ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸುಗಳ ಬಗ್ಗೆ ವರದಿಯಾಗಿದ್ದು, ಈ ಕುರಿತು ವಾಣಿಜ್ಯ ತೆರಿಗೆ ಇಲಾಖೆಯು ಈ ಕೆಳಕಂಡ ಮಾಹಿತಿಯನ್ನು ನೀಡಿರುತ್ತದೆ.

ಜುಲೈ 1,  2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿ.ಎಸ್.ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿರುತ್ತದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು & ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾದ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾದ್ಯತೆ ಇರುತ್ತದೆ).

ವಾಣಿಜ್ಯ ತೆರಿಗೆಗಳ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆ (ಯೂ.ಪಿ.ಐ) ಯ ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯೂ.ಪಿ.ಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿರುತ್ತದೆ. ವರ್ತಕರು ಮಾರಾಟದ ಹಣವನ್ನು (ಯೂ.ಪಿ.ಐ) ಮಾತ್ರವಲ್ಲದೇ ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯೂ.ಪಿ.ಐ ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ. ಸದರಿ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ – 2017 ರಡಿಯಲ್ಲಿ ನೋಂದಣಿಯನ್ನು ಮಾಡದ ಹಾಗೂ ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸನ್ನು ಜಾರಿಗೊಳಿಸಲಾಗಿರುತ್ತದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ.

ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕಾಗಿರುತ್ತದೆ. ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ. ಇನ್ನು ಮುಂದೆ 1% ತೆರಿಗೆ ಪಾವತಿಸಬಹುದಾಗಿರುತ್ತದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಮಾಹಿತಿಯನ್ನು ಇಲಾಖೆಯ ಜಾಲತಾಣ https://gst.kar.nic.in/ದಲ್ಲಿ ಪಡೆಯಬಹುದಾಗಿರುತ್ತದೆ ಎಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರೆ.

VK NEWS DIGITAL : HEADLINES

ಹೃದಯಾಘಾತ ಯಾಕಾಗುತ್ತದೆ? ಮುನ್ನೆಚ್ಚರಿಕೆ ಹಾಗೂ ಆರೋಗ್ಯ ತಪಾಸಣೆ ಬಗ್ಗೆ ಮಾಹಿತಿ

ದೆಹಲಿಯಲ್ಲಿ ಮತ್ತೆ ಅಲುಗಾಡಿದ ಭೂಮಿ; ಕಂಪನ ಅನುಭವ…!

ದೆಹಲಿ : ದೇಶದ ರಾಜಧಾನಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯ ಪ್ರದೇಶದಲ್ಲಿ ಶುಕ್ರವಾರ ಸಂಜೆ 7:49ಕ್ಕೆ ಭೂಕಂಪನವಾಗಿದೆ. ಕಳೆದ ಎರಡು ದಿನಗಳಲ್ಲಿ ಇದು ಎರಡನೇ ಬಾರಿಗೆ ದೆಹಲಿಯಲ್ಲಿ ಭೂಮಿ ಕಂಪಿಸಿದ ಘಟನೆಯಾಗಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 3.7 ರಷ್ಟು ದಾಖಲಾಗಿದ್ದು, ಇದರ ಕೇಂದ್ರಬಿAದು ಹರಿಯಾಣದ ಝಜ್ಜಾರ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ ತಿಳಿಸಿದೆ.
ಗುರುವಾರ (ಜುಲೈ 10, 2025) ಬೆಳಗ್ಗೆ 9:04ಕ್ಕೆ ದೆಹಲಿ ಮತ್ತು ಓಅಖ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪವಾಗಿತ್ತು. ಈ ಭೂಕಂಪದ ಕೇಂದ್ರಬಿAದುವೂ ಝಜ್ಜಾರ್‌ನ 3 ಕಿಲೋಮೀಟರ್ ಈಶಾನ್ಯದಲ್ಲಿ, 10 ಕಿಲೋಮೀಟರ್ ಆಳದಲ್ಲಿತ್ತು. ಈ ಎರಡೂ ಭೂಕಂಪಗಳು ಕಡಿಮೆ ತೀವ್ರತೆಯವು ಆಗಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಬಂದಿಲ್ಲ. ಆದರೆ, ಸತತ ಎರಡು ಬಾರಿ ಭೂಕಂಪ 48 ಗಂಟೆಗಳಲ್ಲಿ ಸಂಭವಿಸಿರುವುದು ದೆಹಲಿಯ ಜನರಲ್ಲಿ ಆತಂಕ ಮೂಡಿಸಿದೆ.
ಭೂಕಂಪನದ ಸಂದರ್ಭದಲ್ಲಿ ಕಟ್ಟಡಗಳು ಮತ್ತು ಮನೆಗಳಲ್ಲಿ ವಸ್ತುಗಳು ಅಲುಗಾಡಿದ ಅನುಭವವಾಗಿದೆ ಎಂದು ಸಾರ್ವಜನಿಕರು ತಮ್ಮ ಅನುಭವವನ್ನು ಹಂಚಿಕೊ0ಡಿದ್ದಾರೆ. ಕೆಲ ವಸ್ತುಗಳು ಕೆಳಗೆ ಬಿದ್ದಂತಹ ಘಟನೆಗಳೂ ದಾಖಲಾಗಿವೆ. ಭೂಕಂಪನ ಗೊಂಡ ತಕ್ಷಣವೇ ಮನೆಗಳು ಮತ್ತು ಕಚೇರಿಗಳಿಂದ ಜನರು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ಜನರು ತಮ್ಮ ಅನುಭವಗಳನ್ನು ಹಂಚಿಕೊ0ಡಿದ್ದಾರೆ.

ಭೂಕಂಪನ ಕಣ್ಣಾರೆ ಅನುಭವಿಸಿದೆ

ಕೆಲವರು ಭೂಕಂಪದ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಇನ್ನೂ ಕೆಲವರು ಈ ಘಟನೆಯನ್ನು ಟ್ರೋಲ್ ಮಾಡಿದ್ದಾರೆ. “ನಾನು ಭೂಕಂಪನ ಕಣ್ಣಾರೆ ಅನುಭವಿಸಿದೆ, ಆದರೆ ಇದು ನೈಸರ್ಗಿಕ ವಿಪತ್ತು, ಇದಕ್ಕೆ ನಾವು ಕೇವಲ ಮುನ್ನೆಚ್ಚರಿಕೆ ವಹಿಸಬಹುದು,” ಎಂದು ದೆಹಲಿಯ ಸ್ಥಳೀಯ ನಿವಾಸಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊ0ಡಿದ್ದಾರೆ.
ಭೂಕAಪಕ್ಕೆ ಒಳಗಾಗುವ ಅತ್ಯಂತ ಗಂಭೀರ ಪ್ರದೇಶಗಳಲ್ಲಿ ದೆಹಲಿಯು ಒಂದಾಗಿದೆ. ಈ ಪ್ರದೇಶದಲ್ಲಿ 5-6 ತೀವ್ರತೆಯ ಭೂಕಂಪಗಳು ಸಾಮಾನ್ಯವಾಗಿ ಸಂಭವಿಸುತ್ತವೆ, ಕೆಲವೊಮ್ಮೆ 6-7 ತೀವ್ರತೆಯ ಭೂಕಂಪಗಳು ಮತ್ತು ಅಪರೂಪಕ್ಕೆ 7-8 ತೀವ್ರತೆಯ ಭೂಕಂಪಗಳು ಸಂಭವಿಸಿರುವುದೂ ಉಂಟು. ಇಂತಹ ಹಲವು ಸರಣಿ ಭೂಕಂಪ ಸಂಭವಿಸುತ್ತಿರುವುದರಿ0ದ ದೆಹಲಿಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ, ಈ ಎರಡು ಭೂಕಂಪಗಳು ಕಡಿಮೆ ತೀವ್ರತೆ ಉಂಟಾಗಿದ್ದರಿ0ದ ಯಾವುದೇ ಗಂಭೀರ ಹಾನಿಯಾಗಿಲ್ಲ. ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರವು ಈ ಘಟನೆಯನ್ನು ನಿಕಟವಾಗಿ ಗಮನಿಸುತ್ತಿದ್ದು, ಜನರಿಗೆ ಶಾಂತವಾಗಿರಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ದೆಹಲಿಯಂತಹ ಭೂಕಂಪ-ಪೀಡಿತ ಪ್ರದೇಶದಲ್ಲಿ ವಾಸಿಸುವವರು ಭೂಕಂಪ ನಿರೋಧಕ ಕಟ್ಟಡಗಳನ್ನು ನಿರ್ಮಿಸುವುದು ಮತ್ತು ತುರ್ತು ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

VK NEWS DIGITAL : HEADLINES :

ಸರ್ಕಾರಿ ಶಾಲೆ ಮಕ್ಕಳಿಗೆ ನೆರವಾದ ರಾಜಮ್ಮಗೆ ಮೋಹನ್ ಕುಮಾರ್ ದಾನಪ್ಪರಿಂದ ಅಭಿನಂದನೆ!

ಕಂಪ್ಲಿ: 12, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ಮಂಗಳ ಮುಖಿ ಪಿ.ರಾಜಮ್ಮರವರು ಭೀಕ್ಷೆ ಬೇಡಿದ ಉಳಿತಾಯದ ಹಣದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಟಿ-ಶರ್ಟ್, ಪ್ಯಾಂಟ್‌, ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದ ಪರೋಪಕಾರಿ ಕಾರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಸನ್ಮಾನಿಸಿ ಅಭಿನಂದಿಸಿದ್ದಾರೆ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ಲಿಂಗತ್ವ ಅಲ್ಪಸಂಖ್ಯಾತರಾದ ರಾಜಮ್ಮನವರು ಜೀವನ ಸಾಗಿಸಲು ಭೀಕ್ಷಾಟನೆಯಲ್ಲಿ ತೊಡಗಿ ಭೀಕ್ಷೆ ಬೇಡಿದ ಉಳಿತಾಯದ ಹಣದಲ್ಲಿ ಸಾಮಾಜಿಕ ಕಾರ್ಯ ಮಾಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯ ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಓಟ್ಟು 150 ಮಕ್ಕಳಿಗೆ 60 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರ, ಟಿ-ಶರ್ಟ್, ಪ್ಯಾಂಟ್‌ಗಳನ್ನು ಮತ್ತು 2023ನೇ ಸಾಲಿನಲ್ಲಿ ಸದರಿ ಸುಗ್ಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳ ಮೌಲ್ಯದ ಬಟ್ಟೆಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿರುತ್ತಾರೆ,

ಪ್ರಸ್ತುತದ ದಿನಮಾನಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬದುಕುತ್ತಿರುವ ಜನಗಳ ಮಧ್ಯೆ ಲಿಂಗತ್ವ ಅಲ್ಪಸಂಖ್ಯಾತರಾದ ರಾಜಮ್ಮನವರು ತಮ್ಮ ಬಾಲ್ಯದ ಜೀವನದಲ್ಲಿದ್ದ ಬಡತನದ ಕಾರಣದಿಂದ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಆಸಾಧ್ಯವಾಯಿತೆಂಬುವ ಕಾರಣದಿಂದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಾದರೂ ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಅಂದ ಚಂದವಾಗಿ ಕಾಣಬೇಕೆನ್ನುವ ಹಿತಾದೃಷ್ಟಿಯಿಂದ ತಮ್ಮ ಭೀಕ್ಷಾಟನೆಯಿಂದ ಬಂದ ಹಣದಲ್ಲಿ ಒಂದಿಷ್ಟೂ ಹಣವನ್ನು ಉಳಿತಾಯ ಮಾಡಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವ ಇವರ ಪರೋಪಕಾರಿ ಕಾರ್ಯವು ತೃತೀಯ ಲಿಂಗಿಗಳನ್ನು ಅಸಹ್ಯವಾಗಿ ನೋಡುತ್ತಿದ್ದ ವರ್ಗವನ್ನೆ ನಾಚಿಸುವಂತೆ ಮಾಡಿದೆ, ಮಂಗಳಮುಖಿ ಸಮುದಾಯ ಸೇರಿದಂತೆ ರಾಜ್ಯಕ್ಕೆ ಯಾಗಿದ್ದಾರೆ, ಇಂತಹ ವಿಶಿಷ್ಟ ವ್ಯಕ್ತಿ ನನ್ನ ಮೂಲ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನವರೆಂದು ಹೇಳಲು ಗರ್ವಪಡುತ್ತಾ, ಸರ್ಕಾರಿ ಶಾಲೆ ಮಕ್ಕಳ ಮೇಲಿರುವ ಪ್ರೀತಿ, ಸೇವಾ ಮನೋಭಾವನೆ, ಪರೋಪಕಾರಿ ಗುಣವನ್ನು ಮತ್ತು ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿ ಮೋಹನ್ ಕುಮಾರ್ ದಾನಪ್ಪನವರು ಹಾರೈಸಿದ್ದಾರೆ,

ಶಿಕ್ಷಣ ಮಾರ್ಗದರ್ಶಿ

VK NEWS DIGITAL : HEADLINES :

ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ : ಹಳೆಯ ವಿದ್ಯಾರ್ಥಿ ನಾಗೇಶ್

ಶಿಡ್ಲಘಟ್ಟ : ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹೆಚ್ಚು ವಿದ್ಯಾವಂತರಾಗಿರುತ್ತಾರೆ. ನಾವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ನಮಗೆ ಅವರಿಗಿಂತ ಕಡಿಮೆ ವಿದ್ಯಾಭ್ಯಾಸ ಎಂದು ಯಾವತ್ತೂ ಹೋಲಿಕೆ ಮಾಡಿಕೊಳ್ಳಬಾರದು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೆ ಅನೇಕ ಸರ್ಕಾರಿ ಹುದ್ದೆಗಳನ್ನು ಪಡೆದು ಉನ್ನತ ಸ್ಥಾನದಲ್ಲಿ ಇರುತ್ತಾರೆ ಎಂದು ಬೀರಪ್ಪನಹಳ್ಳಿಯ ಹಳೆಯ ವಿದ್ಯಾರ್ಥಿ ನಾಗೇಶ್ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ವೈ ಹುಣಸೇನಹಳ್ಳಿ ಗೇಟ್ ಬಳಿ ಇರುವ ಕದಿರಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೀರಪ್ಪನಹಳ್ಳಿಯ ಹಳೆಯ ವಿದ್ಯಾರ್ಥಿ ನಾಗೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಲೇಖನ ಸಾಮಗ್ರಿ ವಿತರಸಿ ಮಾತನಾಡಿದರು.

ಇಂದಿನ ಮಕ್ಕಳು ದೃಢಸಂಕಲ್ಪ ಮಾಡಿ ನಿಖರವಾದ ಗುರಿಯನ್ನು ಹೊಂದಿ ವಿದ್ಯೆಯನ್ನು ಕಲಿಯಲೇ ಬೇಕೆಂಬ ಛಲವನ್ನ ಹೊಂದಿದ್ದರೆ ನಾವು ಎಲ್ಲಿ ಓದಿದರೂ ನಮ್ಮ ಛಲವನ್ನ ಸಾಧಿಸುವತ್ತ ಗಮನ ಹರಿಸಬೇಕು. ಇವತ್ತು ನಾನು ಈ ಹಂತಕ್ಕೆ ಬೆಳೆ ಬೇಕಾದರೆ ನನ್ನ ಕುಟುಂಬ ತೀರ ಬಡತನದಲ್ಲಿತ್ತು ಅಂದು ನಾನು ಸುಮಾರು ಮೂರು ಕಿಲೋಮೀಟರ್ ದೂರ ನಡೆದುಕೊಂಡು ಶಾಲೆಗೆ ಬರುತ್ತಿದ್ದೆ ಮತ್ತು ಹೋಗುತ್ತಿದ್ದೆ. ನನ್ನ ಬಡತನವನ್ನು ಮೆಟ್ಟಿ ನಿಂತು ನನ್ನ ಗುರಿಯನ್ನು ತಲುಪಿದ್ದೇನೆ. ನಾನು ಒಂದನೇ ತರಗತಿಯಿಂದ ನಾಟಕೋತರ ಪದವಿಯವರೆಗೂ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದು ಇಂದು ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ನಾನು ಸುಮಾರು ದೇಶಗಳ ಜನರ ಸಂಪರ್ಕವನ್ನು ಪಡೆದು ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ಅದೇ ರೀತಿ ಮುಂದಿನ ದಿನಗಳಲ್ಲಿ ನೀವು ಸಹ ನಿಮ್ಮ ಆಲೋಚನಾ ಶಕ್ತಿಯನ್ನು ಬಳಸಿಕೊಂಡು ನಿಮ್ಮ ಏಕಾಗ್ರತೆಯನ್ನ ಗ್ರಹಿಸಿ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯಶಿಕ್ಷಕಿ ಹಂಸವೇಣಿ ಮಾತನಾಡಿ, ನಮ್ಮೂರಿನ ಶಾಲೆಯ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಸಹಾಯ ಮಾಡುವ ಉದ್ದೇಶದಿಂದ ಹಳೇ ವಿದ್ಯಾರ್ಥಿ ನಾಗೇಶ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪುಸ್ತಕ, ಇತರ ಓದಿನ ಪರಿಕರಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳು ಇದನ್ನು ಬಳಸಿಕೊಂಡು ಚೆನ್ನಾಗಿ ಓದಿ ಸಾಧನೆ ಮಾಡಬೇಕು. ನಂತರ, ತಾವೂ ಮುಂದೆ ಬಡ ಮಕ್ಕಳ ಓದಿಗೆ ಸಹಾಯ ಮಾಡಬೇಕೆಂದು ಕಿವಿಮಾತು ಹೇಳಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ನಾಗೇಶ್ ಹಾಗೂ ಅವರ ತಾಯಿ ರುಕ್ಮಿಣಿಯಮ್ಮ ಲೇಖನ ಸಾಮಗ್ರಿ ಹಾಗೂ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ನಾಗೇಶ್ ಅವರ ತಾಯಿ ರುಕ್ಮಿಣಿಯಮ್ಮ, ಶಿಕ್ಷಕಿಯರಾದ ಕುಸುಮ,ಮಾಲಾಶ್ರೀ,ಗಾಯತ್ರಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ

VK NEWS DIGITAL : HEADLINES :

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ

ಪಾಟ್ನಾ: ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ ಎಂದು ಪಕ್ಷದ ವಕ್ತಾರ ರಾಜೇಶ್ ಭಟ್ ತಿಳಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಈ ಕರೆ ಬಂದಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷವು ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದೆ.
ಬAದಿರುವ ದೂರಿನ ಮಾಹಿತಿಯಂತೆ, `ಟೈಗರ್ ಮೆರಾಜ್ ಇಡಿಸಿ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಬೆದರಿಕೆ ಸಂದೇಶ ಬಂದಿದೆ. ಈ ಧಮಕಿಯ ಹಿಂದೆ ಚಿರಾಗ್ ಪಾಸ್ವಾನ್ ಅವರ ಜನಪ್ರಿಯತೆ ಹೆಚ್ಚಾಗುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ರಾಜೇಶ್ ಭಟ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಈ ಕೃತ್ಯವು ಕ್ರಿಮಿನಲ್ ಉದ್ದೇಶ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ವಿಷಯದ ಗಂಭೀರತೆಯನ್ನು ಅರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಯನ್ನು ಖಾತರಿಪಡಿಸಬೇಕು” ಎಂದು ರಾಜೇಶ್ ಭಟ್ ತಮ್ಮ ದೂರಿನಲ್ಲಿ ವಿನಂತಿಸಿಕೊAಡಿದ್ದಾರೆ.
ಘಟನೆಯು ಬಿಹಾರದ ರಾಜಕೀಯ ವಲಯದಲ್ಲಿ ಈಗಾಗಲೇ ಸಂಚಲನ ಮೂಡಿಸಿದ್ದು, ಚಿರಾಗ್ ಪಾಸ್ವಾನ್ ಅವರ ಚುನಾವಣಾ ಭಾಗವಹಿಸುವಿಕೆಯ ಘೋಷಣೆಯ ನಂತರ ಈ ಬೆದರಿಕೆ ಬಂದಿರುವುದು ಗಮನಾರ್ಹವಾಗಿದೆ ಎನ್ನಬಹುದು.

VK NEWS HEADLINES :

*ಮಹಿಳಾ ಉದ್ಯಮಿಗಳು ಡಿಜಿಟಲ್‌ ಕೌಶಲ್ಯವನ್ನು ಅರಿತರೆ ಭಾರತದ ಆರ್ಥಿಕತೆ ಅಭಿವೃದ್ಧಿಯಾಗಲಿದೆ*

ಬೆಂಗಳೂರು, ಜು.11:  ಉಬುಂಟು ನಿಯೋಗದ ವತಿಯಿಂದ LEXSHIP, UN ESCAP, ಹೆಚ್‌ಡಿಎ ಮೋಟಾರ್ಸ್‌ ಸಹಯೋಗದೊಂದಿಗೆ ಮಹಿಳಾ ಉದ್ಯಮಿಗಳ ಕೌಶಲ್ಯ ಅಭಿವೃದ್ಧಿ ಕುರಿತಾದ ರಾಷ್ಟ್ರೀಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ  ಶಾಸಕರ ಭವನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ ಅವರು ಮಾತನಾಡಿ, ಡಿಜಿಟಲ್‌ ತಂತ್ರಜ್ಞಾನದ ಕುರಿತು ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಹಿಳೆಯರು ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತಳಾಗಿಲ್ಲ ಟೈಲರಿಂಗ್‌, ಬ್ಯೂಟಿ ಪಾರ್ಲರ್‌, ಅಡುಗೆ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಅವರಿಗೂ ಡಿಜಿಟಲ್‌ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳನ್ನು ಮಹಿಳಾ ಉದ್ಯಮಿಗಳು ಉಪಯೋಗಿಸಿಕೊಳ್ಳಬೇಕು ಎಂದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ, ಮಹಾಲಕ್ಷ್ಮಿ ಲೇಔಟ್ ಟ್ರಸ್ಟ್‌ನ ಸದಸ್ಯರಾಗಿ 4,500 ಮಹಿಳಾ ಸಂಘಗಳನ್ನು ಹೊಂದಿದ್ದೇವೆ. ಅನೇಕರು ಟ್ರಸ್ಟ್ ಮೂಲಕ ಅಡುಗೆ, ಟೈಲರಿಂಗ್, ಹೆಣಿಗೆ ಮತ್ತು ಕಸೂತಿ ಕೆಲಸಗಳನ್ನು ಕೈಗೊಂಡಿದ್ದಾರೆ. ಈ ಮಹಿಳೆಯರು ಗಳಿಸುವುದರ ಜೊತೆಗೆ ಇತರರಿಗೂ ಕಲಿಸಿಕೊಡುತ್ತಾರೆ ಎಂದು ಹೇಮಲತಾ ಗೋಪಾಲಯ್ಯ  ತಿಳಿಸಿದರು.
ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ನಿಯೋಗದ ಸ್ಥಾಪಕರಾದ ಕೆ. ರತ್ನಪ್ರಭಾ ಮಾತನಾಡಿ, ಕೋವಿಡ್‌ ವೇಳೆ ಮಹಿಳಾ ಉದ್ಯಮಿಗಳಿಗೆ ದೊಡ್ಡ ಆಘಾತ ಎದುರಾಗಿತ್ತು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಆನ್‌ಲೈನ್‌ ಮೂಲಕ ತರಬೇತಿ ಆರಂಭಿಸಿದ್ದೆವು. 100ಕ್ಕೂ ಹೆಚ್ಚು ಮಹಿಳೆಯರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು, ನಂತರದಲ್ಲಿ  ಉದ್ಯಮದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡರು. ಈ ರೀತಿಯ ಯಶಸ್ಸಿನ ಮಹಿಳಾ ಉದ್ಯಮಿಗಳು ವಿದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಯಿತು. ಇದರಿಂದ ಇತರ ಮಹಿಳೆಯರೂ ಪ್ರೇರಿತರಾದರು. ಮಹಿಳೆಯರು ಆಧುನಿಕ ತಂತ್ರಜ್ಞಾನಗಳ ಕುರಿತಾದ ಕೌಶಲ್ಯದ ಕೊರತೆಯಿಂದಾಗಿ ಮುಂದುವರೆಯಲು ಹಿಂಜರಿಯುತ್ತಾರೆ. ಆದರೆ ಈ ರೀತಿಯ ಕಾರ್ಯಕ್ರಮಗಳು ಅವರಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತದೆ. ಈ ಕಾರ್ಯಗಾರವು ಮಹಿಳಾ ಉದ್ಯಮಿಗಳಿಗೆ ಹೂಡಿಕೆ ಇದ್ದಂತೆ, ಈ ವರೆಗೆ ನಾವು ಭಾರತದಾದ್ಯಂತ 3,300 ಮಹಿಳೆಯರಿಗೆ ತರಬೇತಿ ನೀಡಿದ್ದೇವೆ. ತರಬೇತಿ ಪಡೆದ ಮಹಿಳೆಯರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
2022 ರಿಂದ ಉಬುಂಟು- ಯುಎನ್ ಇಎಸ್‌ಸಿಎಪಿ ಸಹಯೋಗದೊಂದಿಗೆ ಭಾರತದಾದ್ಯಂತ 3,300ಕ್ಕೂ ಹೆಚ್ಚು ಮಹಿಳೆಯರು ಡಿಜಿಟಲ್ ತಂತ್ರಜ್ಞಾನದ ತರಬೇತಿಯನ್ನು ಪಡೆದಿದ್ದಾರೆ.  ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಮಹಿಳೆಯರು ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಆತ್ಮವಿಶ್ವಾಸವುಳ್ಳ ಉದ್ಯಮಿಗಳಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಂಬರುವ ನವೆಂಬರ್ 19 ರಂದು ‘ಟುಗೆದರ್ ವಿ ಗ್ರೋ’ ಎಂಬ ಪ್ರಮುಖ ಕಾರ್ಯಕ್ರಮ ಮತ್ತು ಆಗಸ್ಟ್ 1 ರಿಂದ 3ರ ವರೆಗೆ BIEC ನಲ್ಲಿ ಅಂತರರಾಷ್ಟ್ರೀಯ ಕೃಷಿ ತಂತ್ರಜ್ಞಾನ ಪ್ರದರ್ಶನವನ್ನು ನಡೆಸುತ್ತಿದ್ದೇವೆ ಎಂದು ಕೆ. ರತ್ನಪ್ರಭಾ ತಿಳಿಸಿದರು.
ಯುಎನ್‌ ಇಎಸ್‌ಸಿಎಪಿ ದಕ್ಷಿಣ ಮತ್ತು ನೈಋತ್ಯ ಏಷ್ಯಾ ಕಚೇರಿಯ ಮುಖ್ಯಸ್ಥರಾದ ಮಿಕಿಕೊ ತನಕಾ ಮಾತನಾಡಿ, ಸಮುದಾಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಭಾರತದಲ್ಲಿ ಕೇವಲ 14%ರಷ್ಟು ಮಹಿಳಾ ಉದ್ಯಮಿಗಳಿದ್ದಾರೆ. 58.5 ಮಿಲಿಯನ್‌ ಉದ್ಯಮಗಳಲ್ಲಿ ಸುಮಾರು 20%ರಷ್ಟು ಎಂಎಸ್‌ಎಂಇ ಗಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟೇ ಉನ್ನತ ಉದ್ಯಮಿಗಳಾಗಿದರೂ ಡಿಜಿಟಲ್‌ ತಂತ್ರಜ್ಞಾನಗಳ ಕೌಶಲ್ಯ ಕೊರತೆ, ಹಣಕಾಸು ಸೇರಿದಂತೆ ನಾನಾ ಸವಾಲುಗಳನ್ನು ಹೊಂದಿರುತ್ತಾರೆ. ಆದರೆ ಡಿಜಿಟಲ್‌ ಕೌಶಲ್ಯದ ಅರಿವಿನಿಂದ ಅವರು ಮುಂದೆ ಬರುವ ಸಾಧ್ಯತೆ ಮತ್ತು ಅದಕ್ಕೆ ನಾವು ಕಾರ್ಯನಿರತವಾಗಿದ್ದೇವೆ ಎಂದರು.
ಉಬುಂಟುನ ನೆಟ್‌ವರ್ಕ್ ಒಂದು ಪ್ರಮುಖ ವೇದಿಕೆಯಾಗಿದ್ದು, ಮಹಿಳಾ ಉದ್ಯಮಿಗಳಿಗೆ ನಾಯಕತ್ವ ಮನೋಭಾವದ ಜೊತೆಗೆ ಬೆಂಬಲವನ್ನು ಕೂಡ ನೀಡುತ್ತಿದೆ. ಎಐ ನಂತಹ ಆಧುನಿಕ ಆವಿಷ್ಕಾರಗಳ ಬಳಕೆಯಿಂದಾಗಿ ಮಹಿಳಾ ಉದ್ಯಮಿಗಳ ಬೆಳವಣಿಗಾಗಿ ಸುರಕ್ಷಿತವಾದ ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಮುಂದುವರೆಸಲಿದ್ದೇವೆ ಮಿಕಿಕೊ ತನಕಾ ಹೇಳಿದರು.
LEXSHIP ಸಿಇಒ ಮತ್ತು  ಸಂಸ್ಥಾಪಕರಾದ ಪದ್ಮನಾಭನ್ ಬಾಬು ಮಾತನಾಡಿ, ಯುಎನ್‌ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಮತ್ತು ರಫ್ತು ಕ್ಷೇತ್ರದಲ್ಲಿ ಮಹಿಳೆಯರನ್ನು ಒಳಗೊಂಡಿರುವ ಕುರಿತು ಹೇಳಿದರು. ಭಾರತದ ಜನಸಂಖ್ಯೆಯಲ್ಲಿ 49%ರಷ್ಟು ಮಹಿಳೆಯರಿದ್ದರೂ ಕೇವಲ ೮%ರಷ್ಟು ಮಹಿಳೆಯರು ರಫ್ತು ವ್ಯವಹಾರಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿ ಈ ರೀತಿಯ ಉದ್ಯಮದಲ್ಲಿ 40%ರಷ್ಟು ಮಹಿಳೆಯರು ಒಳಗೊಂಡಿರುತ್ತಾರೆ. ಆರ್ಥಿಕವಾಗಿ ನಾವು ಇನ್ನಷ್ಟು ಸದೃಢರಾಗಲು ಮಹಿಳೆಯರು ಹೆಚ್ಚು ಮುಂದೆ ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಉಬುಂಟುವಿನ ಕಾರ್ಯಕ್ಕೆ ಮೆಚ್ಚುಗೆ ಇದೆ. ಮಹಿಳೆಯರಲ್ಲಿ ಡಿಜಿಟಲ್‌ ಕೌಶಲ್ಯ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ DGFT ನವದೆಹಲಿಯ ಜಂಟಿ ನಿರ್ದೇಶಕರಾದ ಎಂಡಿ. ಮೊಯಿನ್ ಅಫಾಕ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರಿನ  ಜಂಟಿ ನಿರ್ದೇಶಕರಾದ ಸುನೀಲ್ ಕುಮಾರ್‌, ಯುಎನ್‌ ಇಎಸ್‌ಸಿಎಪಿ ಉಪ ಮುಖ್ಯಸ್ಥರು ಮತ್ತು ಹಿರಿಯ ಅರ್ಥಶಾಸ್ತ್ರ ವ್ಯವಹಾರ ಅಧಿಕಾರಿಗಳಾದ ಡಾ. ರಾಜನ್ ಸುದೇಶ್ ರತ್ನ, ಉಬುಂಟು ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಮಹಿಳಾ ಉದ್ಯಮಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

ಗುರುರಾಯರ ಸನ್ನಿಧಿಯಲ್ಲಿ ದಾಸಗಾನ ವೈಭವ

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಮತ್ತು ಗುರುಪೂರ್ಣಿಮೆ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, ಅನ್ನದಾನ ಸೇವೆಗಳು ಜರುಗಿದವು. ಸಂಜೆಯ ಕಾರ್ಯಕ್ರಮದಲ್ಲಿ ತೊಟ್ಟಿಲು ಸೇವೆ, ಅಷ್ಟಾವಧಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರ ಶಿಷ್ಯೆಯರಾದ ಕು|| ಮನಸ್ವಿ ಕಶ್ಯಪ್ ಮತ್ತು ಕು|| ವರ್ಣಶ್ರೀ ಮುರೂರ್ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಸುಶ್ರಾವ್ಯವಾಗಿ ಹಾಡಿದರು. ಕಿಕ್ಕಿರಿದು ನೆರೆದಿದ್ದ ಸಹಸ್ರಾರು ಪ್ರೇಕ್ಷಕರು ಎದ್ದುನಿಂತು ಕರತಾಂಡವ ಮಾಡಿ ಹರ್ಷ ವ್ಯಕ್ತಪಡಿಸಿದರು. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ವಿದ್ವಾನ್ ಶ್ರೀ ಜಯರಾಮಾಚಾರ್ ಮತ್ತು ತಬಲಾ ವಾದನದಲ್ಲಿ ಶ್ರೀ ಸತ್ಯಪ್ರಮೋದ ಸಾಥ್ ನೀಡಿದರು.

ರಿಪಬ್ಲಿಕ್ ಕನ್ನಡ ವಾಹಿನಿಯ ಹಿರಿಯ ವಾರ್ತಾ ನಿರೂಪಕರಾದ ಶ್ರೀ ಶ್ರೀಪಾದ ಪಾಟೀಲ್ ಕುಟುಂಬ ಸಮೇತ ರಾಯರ ದರ್ಶನ ಪಡೆದರು. ಈ ಎಲ್ಲಾ ಕಾರ್ಯಕ್ರಮಗಳು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಗುರುರಾಯರ ದರ್ಶನಕ್ಕೆ ಬೆಳಗ್ಗೆ 5-30 ರಿಂದ ರಾತ್ರಿ 11ರ ವರೆಗೆ ಜನಸಾಗರ ಹರಿದುಬರುತ್ತಿತ್ತು.

ಸಿಎಂ ಅವರ ಮಾತನ್ನು ಯಾರೂ ನಂಬುವುದಿಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರುತ್ತಾರೊ ಇಲ್ಲವೋ ಅನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಹೇಳಬೇಕು. ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯವರೆಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೂ ಈ ನಾಟಕ ನಡೆಯುತ್ತಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರು ಎಷ್ಟು ಬಾರಿ 5 ವರ್ಷ ಇರುತ್ತೇನೆ ಅಂತ ಹೇಳುತ್ತಾರೊ ಅಷ್ಟು ಬಾರಿ ಅವರ ಮುಂದುವರಿಕೆ ಬಗ್ಗೆ ಪ್ರಶ್ನೆ ಬರುತ್ತದೆ. ಈ‌ ವಿಚಾರದಲ್ಲಿ ಯಾರು ಮಾತನಾಡಬೇಕೋ ಅವರು ಸುಮ್ಮನೇ ಇದ್ದಾರೆ ಹೈಕಮಾಂಡ್ ಎಲ್ಲಿವರೆಗೂ ಈ ಬಗ್ಗೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಇದು ನಾಟಕ ನಡೆಯುತ್ತಲೇ ಇರುತ್ತದೆ ಎಂದರು.
ಸಿದ್ದರಾಮಯ್ಯ ಅವರು ಮುಂದುವರೆದರೂ ಅಷ್ಟೆ, ಬಿಟ್ಟರೂ ಅಷ್ಟೆ. ಆಡಳಿತ ಹದಗೆಡಲು ಅವಕಾಶ ಮಾಡಿಕೊಡಬಾರದು ಅಷ್ಟೆ. ಸಿದ್ದರಾಮಯ್ಯನವರು ನಾನು 5 ವರ್ಷ ಇರುತ್ತೇನೆ ಅಂತ ಹೇಳುವುದು. ಇಲ್ಲ ಅವರು 5 ವರ್ಷ ಇರಲ್ಲ ಅಂತ ಕೆಲವರು ಹೇಳುವುದು ಆಗುತ್ತಿದೆ. ಇದಕ್ಕೆ ಅಂತಿಮ ಯಾರು ಹಾಡಬೇಕು? ಹೈಕಮಾಂಡ್ ಯಾಕೆ ಅವರು ಮುಂದುವರೆಯುತ್ತಾರೆ ಅಂತ ಹೇಳಿಲ್ಲ? ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು ಹೇಳುವುದನ್ನು ಯಾರೂ ನಂಬುವುದಕ್ಕೆ ತಯಾರಿಲ್ಲ ಹೈಕಮಾಂಡ್ ಈ ಬಗ್ಗೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಲ್ಲಿ ಗುತ್ತಿಗೆ ನೌಕರರಿಗೂ ಸಂಬಳ ಕೊಡಲು ಹಣ ಇಲ್ಲ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೌಕರರಿಗೆ ಮೂರು ನಾಲ್ಕು ತಿಂಗಳಿಗೆ ಒಮ್ಮೆ ಒಂದು ತಿಂಗಳ ಸಂಬಳ ಹಾಕುತ್ತಿದ್ದಾರೆ ಎಂದು ಹೇಳಿದರು.

ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹ
ರಾಜ್ಯದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದೆ. ಗೊಬ್ಬರ ಪೂರೈಕೆ ಆಗುತ್ತಿಲ್ಲ. ಅತ್ಯಧಿಕ ಯೂರಿಯಾ ಅಗತ್ಯ ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಮತ್ತು ಗೊಬ್ಬರ ಪೂರೈಕೆ ಮಾಡುವುದು ಕೃಷಿ ಇಲಾಖೆ ಕರ್ತವ್ಯ. ಕೃಷಿ ಇಲಾಖೆ ಯಾವುದೇ ಮುಂದಾಲೋಚನೆ ಇಲ್ಲದೇ ಕೆಲಸ ಮಾಡುತ್ತಿದೆ. ಗೊಬ್ಬರದ ವಿಚಾರದಲ್ಲಿ ಬ್ಲಾಕ್ ಮಾರ್ಕೇಟ್ ಪ್ರಾರಂಭ ಆಗಿದೆ. ಡೀಲರ್ ಗಳು ಗೊಬ್ಬರವನ್ನು ಬ್ಲ್ಯಾಕ್ ಮಾರ್ಕೇಟ್ ನಲ್ಲಿ ಮಾರುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವಾರು ಬಾರಿ ಮನವಿ ಕೊಟ್ಟರೂ ಕೂಡಾ ಯಾವುದೇ ರೀತಿಯ ಗೊಬ್ಬರ ಒದಗಿಸುವ ಕೆಲಸ ಆಗುತ್ತಿಲ್ಲ. ಮಾರ್ಕೆಟಿಂಗ್ ಫೆಡೆರೇಷನ್ ನಿಂದ ಸೊಸೈಟಿಗಳಿಗೆ ಗೊಬ್ಬರ ಒದಗಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇವರು ಅದನ್ನೂ ತಮ್ಮ ವಶಕ್ಕೆ ಪಡೆದು ಸೊಸೈಟಿಗಳಿಗೂ ಗೊಬ್ಬರ ಸಿಗದಂತೆ ಮಾಡಿದ್ದಾರೆ. ಕೃಷಿ ಸಚಿವರು ಈ ವರ್ಷದ ಅಗತ್ಯತೆಯ ಅನುಗುಣವಾಗಿ ಹಾವೇರಿ ಜಿಲ್ಲೆಯ ರೈತರ ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹೆಣ್ಣು ಮಕ್ಕಳ ಮಾರಾಟ ಜಾಲ ದುರಂತ
ಹಾನಗಲ್ ತಾಲೂಕು ಬ್ಯಾಗವಾದಿ ಗ್ರಾಮದಲ್ಲಿ ಹೆಣ್ಣುಮಕ್ಕಳು ಮಾರಾಟ ಜಾಲ ಪತ್ತೆಯಾಗಿರುವುದು ದುರಂತ. ಒಟ್ಟಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಈ ತರದ ಚಟುವಟಿಕೆಗಳು ಸಮಾಜಕ್ಕೆ ಮಾರಕ. ಜಿಲ್ಲೆಯಲ್ಲಿ ಜೂಜು ಹೆಚ್ಚಾಗಿದೆ. ಮುಕ್ತವಾಗಿ ಆಗಿ‌ ಇಸ್ಪೀಟ್ ಆಡುತ್ತಾರೆ. ಚಿಕ್ಕ ಮಕ್ಕಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುವ ಜಾಲ ಪತ್ತೆಯಾಗಿರುವುದು ದುರಂತ. ಇಂಥ ಜಾಲ ನಮ್ಮ ಜಿಲ್ಲೆಯಲ್ಲಿ ಇದೆ ಅನ್ನುವುದು ನಂಬಲು ಆಗುತ್ತಿಲ್ಲ ಎಂದು ಹೇಳಿದರು.
ಪ್ರಕರಣದ ಆರೋಪಿ ಆ ಹೆಣ್ಣು ಮಗಳು ಹಾಗೂ ಅವಳ ಮಗಳು ಹಾಗೂ ಅವರ ಜೊತೆ ಇದ್ದವರನ್ನು ಇನ್ನೂ ಬಂಧನ ಮಾಡಿಲ್ಲ. ಯಾರು ಮುಖ್ಯವಾಗಿ ದಂಧೆ ನಡೆಸುತ್ತಿದ್ದಾರೋ ಅವರನ್ನು ಬಂಧನ ಮಾಡಿಲ್ಲ. ಈ ಪ್ರಕರಣದಲ್ಲಿ ಎಸ್. ಪಿ. ಮುತವರ್ಜಿ ವಹಿಸಬೇಕು. ಹೆಣ್ಣ ಮಕ್ಕಳ ಸುರಕ್ಷತೆ ಏನು? ಬ್ಯಾಗವಾದಿ ಗ್ರಾಮದಲ್ಲಿ ಆರೋಪಿ ಲಕ್ಕವ್ವ ಮನೆ ಎದುರಿಗೇ ಅಂಗನವಾಡಿ ಇದೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಲಗಿಕೊಂಡಿದಿಯಾ? ಇಲಾಖೆಯಿಂದ ದೂರು ಕೊಟ್ಟಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು  ಇಡೀ ಜಿಲ್ಲೆಯಲ್ಲಿ ಯಾರು ಕಳ್ಳರಿದ್ದಾರೆ ಅವರಿಗೆ ರಕ್ಷಣೆ ಇದೆ, ಗುಂಡಾಗಳು ಎರಡು ಮೂರು ತಾಸಿನಲ್ಲಿ‌ ಬಿಡುಗಡೆ ಆಗುತ್ತಾರೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರೇ ರಾಜಿ ಮಾಡುತ್ತಿದಾರೆ ಅಂತ ಸುದ್ದಿ ಇದೆ. ರಾಜೀ ಪ್ರಯತ್ನದ ಬಗ್ಗೆಯೂ ತನಿಖೆ ಆಗಬೇಕು.ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಸಚಿವರು, ಮುಖ್ಯಮಂತ್ರಿ ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಬಸವರಾಜ ಬೊಮ್ಮಾಯಿ

ಇಂದು ಹಾವೇರಿಯ ತಾಲೂಕು ಪಂಚಾಯತಿ ಆವರಣದಲ್ಲಿರುವ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.