Home Blog Page 39

ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು  ಚಿಕ್ಕಮಗಳೂರು ಜಿಲ್ಲಾ ಘಟಕ ಸಹಯೋಗದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ರಾಜಾಧ್ಯಕ್ಷ ಮಧುನಾಯ್ಕ ಲಂಬಾಣಿ ಸಂಘವು ಪ್ರತಿ ಭಾನುವಾರ  ಆನ್ಲೈನ್ ನಲ್ಲಿ ಚಿತ್ರಗೀತೆ ಜಾನಪದ ಗೀತೆ, ಭಾವಗೀತೆ ಸ್ಪರ್ಧೆ ಏರ್ಪಡಿಸಿ 34 ಮಂದಿ ಗಾಯಕ ಗಾಯಕಿಯರನ್ನು ಮೊದಲ ಹಂತದಲ್ಲಿ ಚಿಕ್ಕಮಗಳೂರಿಗೆ ಆಯ್ಕೆ ಮಾಡಿ ಅವರಿಂದ ವೇದಿಕೆಯಲ್ಲಿ ಹಾಡಿಸಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಿದೆ.

ದಾಂಡೆಲಿಯಲ್ಲಿ 2ನೇ ಹಂತದ ಸ್ಫರ್ದೆ ನಡೆಸಿ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಗಾಯಕ ಗಾಯಕಿಯರನ್ನು ಮುಂದಿನ ವರ್ಷ ಜನವರಿಯಲ್ಲಿ ಬೆಳಗಾವಿಯಲ್ಲಿ ಅಲ್ಲಿಯ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆಯುವ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಸಂಘವು 2020ರಲ್ಲಿ ಸ್ಥಾಪನೆಗೊಂಡು ನಿರಂತರ ಸಾಹಿತ್ಯ ಸಾಂಸ್ಕøತಿಕ ನಡೆಸುತ್ತಿದೆ. ಜೊತೆಗೆ ಕೃಷಿ ತರಭೇತಿ ರೈತರಿಗೆ ಸಿಗುವ ಸೌಲಭ್ಯಗಳು, ಜೀವನೋತ್ಸಹ ಕಾರ್ಯಕ್ರಮದಲ್ಲಿ ವೈದ್ಯರಿಂದ ಆರೋಗ್ಯ ಸಲಹೆ, ಒಂದು ಲಕ್ಷ 10ನೇ ತರಗತಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಪರೀಕ್ಷಾಪೂರ್ವ ತಯಾರಿ, ಕೊರೋನ ಸಂದರ್ಭ ಕಲ್ಬುರ್ಗಿಯಲ್ಲಿ ಜಿಲ್ಲೆಯ ಬಡಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, ರಾಜ್ಯದ ರಂಗಕಲಾವಿದರಿಗೆ ರಂಗಗೀತೆ, ಜಾನಪದ ಗಾಯಕರ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ, ಬರಹಗಾರರಿಗೆ 1300 ವಿವಿಧ ಸಾಹಿತ್ಯ ಗೋಷ್ಟಿ, ಚಿತ್ರಕಲಾ ಸ್ಫರ್ಧೆ ಅಲ್ಲದೇ ಪ್ರತಿವರ್ಷ ರಾಜ್ಯಮಟ್ವದ ನುಡಿ ವೈಭವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘದ ಘಟಕಗಳು ಸ್ಥಾಪನೆಯಾಗಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತಿವೆ ಎಂದರು. ಮುಖ್ಯ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ ಬಾಗವಹಿಸಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು ಓರ್ವ ಕವಿ ಸಾಹಿತಿ ಬರೆದ ಕಾವ್ಯವನ್ನು ಶೋತೃಗಳ ಮನಮುಟ್ಟುವಂತೆ ಹಾಡುವ ಗಾಯಕ ಗಾಯಕಿಯರು ಕವಿ ಮತ್ತು ಶೋತೃ ನಡುವಿನ ರಾಯಬಾರಿಗಳು. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಹಾಡು ಸಂಗೀತವು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಆರೋಗ್ಯಕರ ಮನೋಚಿಕಿತ್ಸೆಯ ದಿವ್ಯಔಷಧಿ. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಗಾಯಕ ಗಾಯಕಿಯರು ಒಬ್ಬರಿಗಿಂತ ಒಬ್ಬರು ಮೇಲಾಗಿ ತಮ್ಮ ಗಾಯನ ಪ್ರತಿಭೆ ತೋರಿದ್ದಾರೆ ಎಂದು ಶ್ಲಾಘಿಸಿದರು.

ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ  ಅಧ್ಯಕ್ಷರು  ಡಾ. ವಿದ್ಯಾ ಕೆ ಅದ್ಯಕ್ಷತೆ ವಹಿಸಿದ್ದರು. ರಾಜ್ಯಾದ್ಯಂತ ಆನ್‍ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕ ಗಾಯಕಿಯರಲ್ಲಿ 34 ಉತ್ತಮ ಗಾಯಕರನ್ನು ತಾಳ್ಮೆಯಿಂದ ಆಯ್ಕೆ ಮಾಡಿದ್ದ ಸ್ವತ: ಗಾಯಕರು ಚಿಕ್ಕಮಗಳೂರು ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ಅವರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಕುರುವಂಜಿ ಕೆ.ಪಿ.ವೆಂಕಟೇಶ್ ಮಾಜಿ ರಾಜ್ಯಾಧ್ಯಕ್ಷರು ಸಫಾಯಿ ಕರ್ಮಚಾರಿ ನಿಗಮ ಮಂಡಳಿ, ಬಿ. ಎಲ್. ಪ್ರವೀಣ್ ಬೆಟ್ಟಗೇರಿ, ಜಯಣ್ಣ , ಎಂ ಎಸ್ ನಾಗರಾಜ್ ಗೌರವಾಧ್ಯಕ್ಷರು, ಎಚ್ ಎಂ ಜಗದೀಶ್, ಉಪಾಧ್ಯಕ್ಷರು,  ಹಸೖನಾರ್ ಬೆಳಗೊಳ, ಜಿಲ್ಲಾ ಕೋಶಾಧ್ಯಕ್ಷರು, ರಾಕೇಶ್ ಸಿಂಗ್ ನಿರ್ದೇಶಕರು, ಚಿಕ್ಕಮಗಳೂರು ತಾ. ಘಟಕ ಅಧ್ಯಕ್ಷರು ವಿಜಯಕುಮಾರ್ ಹೆಚ್.ಸಿ. ಮೂಡಿಗೆರೆ ತಾ. ಘಟಕ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ,   ವಿನೋದ್ ಗೌ. ಸಲಹೆಗಾರರು, ಇಂಪಾ ನಾಗರಾಜ್ ಗೌ. ಕಾಯ೯ದರ್ಶಿ,  ನವೀನ್ ಬಿ.ಆರ್. ರವಿ ಕುನ್ನಳ್ಳಿ ಗೌ. ಸಲಹೆಗಾರರು, ಮಧುಚಂದ್ರ, ಮಜಾಭಾರತ ಕಲಾವಿದರು, ರಮೇಶ ಯಾದವ್ ಕಾಮಿಡಿ ಕಿಲಾಡಿಗಳು ಕಲಾವಿದರು ಇದ್ದರು.

ಸುಮಂಗಲಿ ದೇಸಾಯಿ ಜೋಯಿಡಾ,  ಹೊಸಪೇಟೆಯ ಲಕ್ಷ್ಮಿ, ಜೂಟೂರು ರಾಘವೇಂದ್ರ, ವಿಜಯಕುಮಾರ್,  ಜಿ.ನೀಲಗಂಗಮ್ಮ,  ಆರ್. ಪ್ರಿಯಾಂಕ, ರೀನಾ ನಂದನ್,  ವಾಲ್ಯ ನಾಯ್ಕ. ಎಲ್ ವಿಜಯನಗರ, ಚಿಕ್ಕಮಗಳೂರಿನ ವಿಜಯ್ ಕುಮಾರ್ ಸಿ.ಆರ್, ರಾಕೇಶ್ ಸಿಂಗ್, ಡಾ. ವಿದ್ಯಾ ಕೆ.ಪಿ. ದಾವಣಗೆರೆಯ ಪಿ. ಮಲ್ಲಿಕಾರ್ಜುನ  ಬಿ.ಎನ್. ನಾಗೇಶ್, ಉಮೇಶ್ ಕುಮಾರ್ ಎಚ್ ಎನ್. ರಾಮನಾಥ ಜೆ ನಾಯಕ ಅಂಕೋಲಾ,  ಹನುಮಂತ ನಾಯಕ್ ಸಿ ಸಾಗರಕಟ್ಟೆ ತಾಂಡ, ಗೌರಿ ಅರಸು ಮಂಡ್ಯ,  ವೀಣಾ ನಟರಾಜ ಅಜ್ಜಂಪುರ, ಸ್ನೇಹ ತೀರ್ಥಳ್ಳಿ, ಎಲ್ ನಾಗೇಶ್  ತುಂಬಿನಕೇರಿ ದೊಡ್ಡ ತಾಂಡ,  ಟಿ.ದೀಪಾ ವಿಜಯನಗರ, ಪ್ರಸಾದ್ ಕುಲಕರ್ಣಿ ದಾಂಡೇಲಿ,  ಶಶಿಧರ್ ಹಿರೇಮಠ್  ಸೊಂಡೂರು,  ಶ್ರೀದೇವಿ ತೇರದಾಳ ಮಹಾಲಿಂಗಪುರ,  ವಿಜಯಶಾಂತಿ. ಕೆ ಕಮಲಾಪುರ, ಡಾ. ಅಶೋಕ್ ಬಾಬು ಎ. ಆರ್, ಚಿಕ್ಕಬಳ್ಳಾಪುರ,  ಹೆಚ್. ಶ್ರೀನಿವಾಸ,  ತಿಮ್ಮನಾಯ್ಕ ಸಿ.ಮುದ್ಲಾಪುರ, ಭಾಗ್ಯ ಎಸ್.ಶಿವಮೊಗ್ಗ, ಕವಿತಾ ಬಾಯಿ ಪೈ ಭದ್ರಾವತಿ, ಸುರೇಶ್ ರಾವ್ ತುಮಕೂರು,  ಮಹಾನಂದ ಮಠಪತಿ ಕೊಲ್ಲೂರು ಗಾಯಕ ಗಾಯಕಿಯರು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ಹಾಡಿ ಇವರಿಗೆ ಕರುನಾಡು ಕೋಗಿಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ದರ್ಶನ ಅಭಿಮಾನಿಗಳ ವಿರುದ್ಧ ಕೊಲೆ ಬೆದರಿಕೆ ಆರೋಪ: ನಟ ಪ್ರಥಮ್, ನಟಿ ರಮ್ಯಾ ಗಂಭೀರ ಆರೋಪ

ಬೆಂಗಳೂರು, ಜುಲೈ 27 – ಕೊಲೆ ಪ್ರಕರಣದಿಂದ ಈಗಷ್ಟೇ ಹೊರಬಂದಿರುವ ನಟ ದರ್ಶನ ತೂಗುದೀಪ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿ ಅವರ ಅಭಿಮಾನಿಗಳ ಮೂಲಕ. ನಟ ಪ್ರಥಮ್ ಹಾಗೂ ನಟಿ ರಮ್ಯಾ ಅವರು ದರ್ಶನ ಅಭಿಮಾನಿಗಳ ವಿರುದ್ಧ ಕೊಲೆ ಬೆದರಿಕೆ ಹಾಗೂ ಅಶ್ಲೀಲ ಸಂದೇಶಗಳ ಆರೋಪ ಹೊರಿಸಿದ್ದಾರೆ.


⚠️ ನಟ ಪ್ರಥಮ್ ವಿರುದ್ಧದ ಬೆದರಿಕೆ ಆರೋಪ:

ಪ್ರಥಮ್ ಹೇಳುವಂತೆ, ಅವರು ದೊಡ್ಡಬಳ್ಳಾಪುರದ ರಾಮಸ್ವಾಮಿಪಾಳ್ಯದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ, ಕೆಲವರು ‘ಬಾಸ್ ಕರೆಯುತ್ತಿದ್ದಾರೆ’ ಎಂದು ಕರೆಯುತ್ತಾ, ಸುತ್ತುವರಿದು ಆಯುಧ (ಡ್ರಾಗರ್) ತೋರಿಸಿ, “ಹೊಟ್ಟೆಗೆ ಚುಚ್ಚುತ್ತೇನೆ” ಎಂಬಂತಾದ ಗಂಭೀರ ಬೆದರಿಕೆ ನೀಡಿದ್ದಾರೆ.

ನಾನು ದರ್ಶನ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಕ್ಕೆ ಅವರನ್ನು ಅವಮಾನಿಸಿದ್ದು, ಅದರಿಂದಾಗಿ ಈ ಕ್ರಮಕೈಗೊಂಡಿದ್ದಾರೆ” ಎಂದು ಪ್ರಥಮ್ ಸ್ಪಷ್ಟಪಡಿಸಿದರು. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್‌ಪಿ ಬಳಿ ದೂರು ನೀಡಿದ್ದಾಗಿ ಅವರು ತಿಳಿಸಿದ್ದಾರೆ.


👩‍🎤 ನಟಿ ರಮ್ಯಾ ಕೂಡ ಕಿಡಿಕಾರಿಕೆ:

ದರ್ಶನ ಅಭಿಮಾನಿಗಳ ಕಿಡುಕೊ멘್ಟ್‌ಗಳ ವಿರುದ್ಧ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ನೋವನ್ನು ಮಲ್ಲಿಕಾರ್ಜುನ ಖರ್ಗೆ ಹೊರಹಾಕಿದ ಕ್ಷಣ – ಬಿಎಲ್‌ಡಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾವೋದ್ಗಾರ

ವಿಜಯಪುರ, ಜುಲೈ 27 – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಎಲ್‌ಡಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡುವಾಗ, ತಮ್ಮ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಅವಕಾಶ ಕೈ ತಪ್ಪಿದ ದುಃಖವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

1999 ರಲ್ಲಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದಾಗ ಅದು ಕೈ ತಪ್ಪಿದ್ದು, “ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತಿದ್ದೆ. ಆದರೆ ಕೇವಲ ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಆಯ್ಕೆಯಾದರು,” ಎಂದು ಅವರು ಹೇಳಿದರು.

“ನನ್ನ ಸೇವೆ ನೀರಲ್ಲಿ ಹೋಯಿತು” ಎಂಬ ಖರ್ಗೆಯ ವಾಕ್ಯ:

ಖರ್ಗೆ ಮುಂದುವರೆದು, “ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅಪಾರ ಶ್ರಮಪಟ್ಟೆ. ಆದರೆ ನನ್ನ ಸೇವೆ ನೀರಲ್ಲಿ ಹೋಯಿತು,” ಎಂದು ಸ್ವಾಮೀಜಿಗಳ ಸಮ್ಮುಖದಲ್ಲಿ ಭಾವುಕರಾಗಿ ಹೇಳಿದರು. “ನಾನು ಬ್ಲಾಕ್ ಅಧ್ಯಕ್ಷನಿಂದ ಆರಂಭಿಸಿ ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರದ ಬೆನ್ನು ಹತ್ತಿ ಓಡಲಿಲ್ಲ, ಅದು ನನ್ನ ಬಳಿಗೆ ಸ್ವತಃ ಬಂದಿದೆ. ಇದು ನನ್ನ ಶ್ರಮದ ಫಲ,” ಎಂದರು.

ರಜಾಕರ ಹಾವಳಿಯ ಹಿನ್ನಲೆ ನೆನೆಸಿದ ಖರ್ಗೆ:

ಖರ್ಗೆ ಅವರು ತಮ್ಮ ಬಾಲ್ಯದ ಭೀತಿದಾಯಕ ಅನುಭವವನ್ನೂ ಹಂಚಿಕೊಂಡರು. “ರಜಾಕರ ಹಾವಳಿಯ ಸಮಯದಲ್ಲಿ ನನ್ನ ತಾಯಿ, ತಂಗಿ ಮತ್ತು ದೊಡ್ಡಪ್ಪ ಅವರನ್ನು ಕಳೆದುಕೊಂಡೆ. ನಮ್ಮ ತಂದೆ ನನ್ನನ್ನು ಪಣೆ ಇಲ್ಲಿನ ಪುಣೆಯ ಮಹಾರ್ ರೆಜಿಮೆಂಟ್‌ನಲ್ಲಿದ್ದ ಚಿಕ್ಕಪ್ಪನ ಮನೆಗೆ ಕಳುಹಿಸಿದರು. ಸ್ವಾತಂತ್ರ್ಯ ನಂತರ ಅವರು ಅಲ್ಲಿಂದ ತೆರಳಿದಾಗ ನಾವು ಗುಲ್ಬರ್ಗಾಕ್ಕೆ ಬಂದು ನೆಲೆಸಬೇಕಾಯಿತು,” ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ್ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಆರೋಗ್ಯ ಗಂಭೀರ – ಖಾಸಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು, ಜುಲೈ 27 – ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಮಿಲಿಂದ್ ಖರ್ಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತೀವ್ರ ನಿಗಾ ಚಿಕಿತ್ಸೆ:

ವೈದ್ಯಕೀಯ ಮೂಲಗಳ ಪ್ರಕಾರ, ಮಿಲಿಂದ್ ಖರ್ಗೆ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದರೂ ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಲಭ್ಯವಿವೆ.

ಕುಟುಂಬ ಅಥವಾ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಇಲ್ಲ:

ಈ ಕುರಿತು ಇನ್ನೂ ಖರ್ಗೆ ಕುಟುಂಬ ಅಥವಾ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ತಜ್ಞ ವೈದ್ಯರ ತಂಡหนึ่ง ಮಿಲಿಂದ್ ಅವರ ಆರೈಕೆ ನಿರ್ವಹಿಸುತ್ತಿರುವುದು ತಿಳಿದುಬಂದಿದೆ.

ಮೆಡಿಕಲ್ ಅಪ್‌ಡೇಟಿಗಾಗಿ ಕಾದು ನೋಡಬೇಕಿದೆ:

ಸದ್ಯ ಎಲ್ಲರ ದೃಷ್ಟಿ ಮಿಲಿಂದ್ ಖರ್ಗೆಯ ಆರೋಗ್ಯದ ಮೇಲಿದ್ದು, ವೈದ್ಯರು ಮುಂದಿನ 몇 ದಿನಗಳು ನಿರ್ಣಾಯಕವಾಗಿರಬಹುದು ಎಂದು ಹೇಳಿದ್ದಾರೆ. ಮಿಲಿಂದ್ ಖರ್ಗೆ ಅವರು ಹಿಂದೆ ಪಕ್ಷದ ಕಾರ್ಯಕರ್ತರೊಡನೆ ನಿಕಟ ಸಂಪರ್ಕದಲ್ಲಿದ್ದು, ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೂ ರಾಜಕೀಯದಲ್ಲಿಯೆಲ್ಲಾ ದೂರವಿದ್ದವರು.

ನಾವು ದೃಷ್ಟಿಹೀನರಾದರೆ ಕುರುಡರನ್ನು, ಕಿವುಡರನ್ನು ಸೃಷ್ಟಿಸುತ್ತೇವೆ: ಕೆ.ವಿ.ಪ್ರಭಾಕರ್

*ನೊಂದವರ ರಾಯಭಾರಿಗಳಾಗಿ ಸಮಾಜದ ಋಣ ತೀರಿಸೋಣ: ಪತ್ರಕರ್ತರ ಮಕ್ಕಳಿಗೆ ಕೆ.ವಿ.ಪಿ ಕರೆ*

ಕೊಡಗು ಜು 28: ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಸಮಾಜ ವಿಶೇಷ ಗೌರವ ನೀಡುತ್ತದೆ ಮತ್ತು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸುತ್ತದೆ. ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತಾರೆ ಮತ್ತು ಸಮಾಜದ ನೋವುಗಳಿಗೆ ಕನ್ನಡಿ ಹಿಡಿಯುತ್ತಾರೆ ಎನ್ನುವ ಕಾರಣದಿಂದ ಈ ವಿಶೇಷ ಗೌರವ ಮತ್ತು ಸವಲತ್ತು ಸಿಗುತ್ತಿದೆ ಎಂದು ವಿವರಿಸಿದರು.

ಈ ಒಳ ದೃಷ್ಟಿ ಪತ್ರಕರ್ತರಿಗೆ ಇರಬೇಕು. ಈ ಸಮಾಜಮುಖಿ ದೃಷ್ಟಿಯನ್ನು ನಾವು ಕಳೆದುಕೊಂಡರೆ ನಾವು ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುವ ಜೊತೆಗೆ ನಾವೂ ಹಾಗೇ ಬಿಡುವ ಅಪಾಯವಿದೆ ಎಂದರು.

ಇಂದು ಪತ್ರಿಕಾ ವೃತ್ತಿಯ ಬಗ್ಗೆ ಎರಡು ರೀತಿಯ ಬೇಸರದ ಮಾತುಗಳನ್ನು ಸ್ನೇಹಿತರು ನನ್ನ ಜೊತೆ ಹಂಚಿಕೊಳ್ಳುತ್ತಾರೆ. ಒಂದು, ಈ ವೃತ್ತಿ ಬದುಕು ಸಾಕಾಗಿದೆ ಸರ್. ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಅಂತ ನಮ್ಮ ಉಸಿರು ಕಟ್ಟುತಾ ಇದೆ ಎನ್ನುವ ಬೇಸರ ಒಂದು ಕಡೆಗಿದೆ. ಮತ್ತೊಂದು ಕಡೆ ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಬರುತ್ತಿರುವ ಅಸತ್ಯ ಮತ್ತು ಅರ್ಧ ಸತ್ಯದ ಸುದ್ದಿಗಳಿಂದ ಸಮಾಜದ ಉಸಿರು ಕಟ್ಟುತ್ತಿದೆ ಎನ್ನುವ ಬೇಸರವೂ ಮತ್ತೊಂದು ಕಡೆಗಿದೆ. ಈ ಎರಡೂ ಬೇಸರಕ್ಕೂ ಬೇರೆ ಯಾರೂ ಕಾರಣರಲ್ಲ. ಪತ್ರಿಕೋದ್ಯಮದ ತೇರನ್ನು ಎಳೆಯುತ್ತಿರುವ ನಾವೇ ಕಾರಣಕರ್ತರು ಎನ್ನುವುದನ್ನು ನಾವು ಮರೆಯಬಾರದು ಎಂದರು.

ಏಕೆಂದರೆ ಸಮಾಜದ ಕಷ್ಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಪತ್ರಿಕೋದ್ಯಮ, ಈಗ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಮತ್ತು ಕಾರ್ಪೋರೇಟ್ ಉದ್ಯಮಿಗಳಿಗೆ ಪರವಾಗಿ ಕನ್ನಡಿ ಹಿಡಿಯುತ್ತಿದೆ. ಇಂದು ವ್ಯಕ್ತಿಗತ ದ್ವೇಷ ಮತ್ತು ವೈಯುಕ್ತಿಕ ಬದುಕಿನ ಖಾಸಗಿತನವನ್ನು ಕೆದಕಿ ಕೆದಕಿ ಕಸವನ್ನೇ ಬ್ರೇಕಿಂಗ್ ಸುದ್ದಿಗಳನ್ನಾಗಿಸುತ್ತಿದ್ದೇವೆ.

ನಾವು ಕಸವನ್ನು ಕೆದಕುವಾಗ ನಮಗೆ ಕಸವೇ ಸಿಗುತ್ತದೆ. ನಾವು ಏನನ್ನು ಹುಡುಕುತ್ತೀವೋ ಅದೇ ನಮಗೆ ಸಿಗುತ್ತದೆ. ಇದೇ ಕಸ ಕಣ್ಣಿಗೆ, ಕಿವಿಗೆ ಬಿದ್ದರೆ ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸಿದಂತಾಗುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಮಾತ್ರವಲ್ಲ, ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳೂ ಕೇಳಿಕೊಳ್ಳಬೇಕಿದೆ ಎಂದರು.

ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳು ಒಂದು ಮಾತನ್ನು ನೆನಪಿಡಬೇಕು. ನಿಮ್ಮಷ್ಟೇ ಪ್ರತಿಭೆ ಇರುವ, ನಿಮಗಿಂತ ಪ್ರತಿಭೆ ಇರುವ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಮಕ್ಕಳು ಹೊರಗಿದ್ದಾರೆ. ಹೆಚ್ಚಿನವರಿಗೆ ಈ ಅವಕಾಶ ಮತ್ತು ಗೌರವ ಪ್ರಾಪ್ತಿ ಆಗುವುದಿಲ್ಲ. ಇಂಥಾ ಅವಕಾಶ ವಂಚಿತ ಮಕ್ಕಳ, ಅವಕಾಶ ವಂಚಿತ ಸಮಾಜದ ರಾಯಭಾರಿಗಳಾಗಿ ನೀವುಗಳು ಬೆಳೆಯಬೇಕಿದೆ ಎಂದು ಕರೆ ನೀಡಿದರು.

ಈ ರೀತಿಯ ಸಮಾಜಮುಖಿ ದೃಷ್ಟಿಕೋನವನ್ನು ನಾವು ಬೆಳೆಸಿಕೊಂಡಾಗ ನಮ್ಮ ಸಾಮಾಜಿಕ ಪ್ರಜ್ಞೆ ಬೆಳಯುತ್ತದೆ. ಈ ಪ್ರಜ್ಞೆ ಬೆಳೆದಾಗ ನೀವು ಸಮಾಜದ ಆಸ್ತಿ ಆಗುತ್ತೀರಿ. ಆಗ ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದರು.

*ಅಮ್ಮನ‌ ಮಡಿಲು-ಮನುಷ್ಯ ಸಂಬಂಧ ಅಳಿಯಬಾರದು*

ತಂತ್ರಜ್ಞಾನ ಬೆಳೆದಂತೆ, ಅವಕಾಶಗಳು ದೊರೆತಂತೆ ಮನುಷ್ಯ ಸಂಬಂಧಗಳು ದುರ್ಬಲವಾಗುತ್ತಿವೆ. ತಾಯಿಯ ಮಡಿಲು, ಅಮ್ಮನ‌ ಕೈ ತುತ್ತು, ಹಳ್ಳಿ ಮನೆ, ಹಸು-ಕುರಿ-ಕೋಳಿ ಸಾಕಾಣೆ ಎಲ್ಲವೂ ದೂರವಾಗುತ್ತಿದೆ. ಕೊನೆಗೆ ಪೋಷಕರ ಜೊತೆಯ ಒಡನಾಟವೂ ಮೊಬೈಲ್ ಗೆ ಸೀಮಿತವಾಗಿ ಮಕ್ಕಳು ವಿದೇಶಕ್ಕೆ ಹೋಗಿ ಕುಳಿತಿರುವ ಪರಿಣಾಮ ಇಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇವೆಲ್ಲಾ ಆರೋಗ್ಯಕರ ಸಮಾಜದ ಲಕ್ಷಣವೇ ಯೋಚಿಸಿ ಎಂದು ಕರೆ ನೀಡಿದರು.

*ಪತ್ರಕರ್ತರ ವಸತಿಗೆ ಯೋಜನೆ*

ಈಗಾಗಲೇ ರಾಜ್ಯದ ಪತ್ರಕರ್ತರಿಗೆ ವಸತಿ ಸವಲತ್ತು ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಯೋಜನೆ ರೂಪಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮೇಶ್ ಕುಟ್ಟಪ್ಪ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು

  • ” ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು “

” ನಾಗನಲ್ಲಿ ಸುಬ್ರಹ್ಮಣ್ಯ ಸನ್ನಿಧಾನ ”

ಶ್ರೀ ಶೇಷದೇವರು – 5ನೇ ಕಕ್ಷೆ.

ಶ್ರೀ ಸುಬ್ರಹ್ಮಣ್ಯದೇವರು – 8ನೇ ಕಕ್ಷೆ.

ಪುರಾಣ ವಚನದಂತೆ ಶ್ರೀ ಇಂದ್ರ ಸಮನಾದ ಶ್ರೀ ಸುಬ್ರಹ್ಮಣ್ಯ ದೇವತೆಗಳ ಸೇನಾಧಿಪನಾದ.

ಆದ ಆತನಲ್ಲಿ ದೇವ ಯೋನಿ ಜಾತರೆಲ್ಲಾ ಆಸರೆ ಪಡೆದರು.

ಅಲ್ಲಿ ನಾಗಗಳೂ ಶ್ರೀ ಸ್ಕಂಧನ ಸ್ವಾಮಿತ್ವದಲ್ಲಿ ನೆಲೆ ನಿಂತವು.

ಇದರಿಂದ ನಾಗಗಳಿಗೆ ಶ್ರೀ ಸುಬ್ರಹ್ಮಣ್ಯ ವಿಶೇಷವಾದ ಆಸರೆ ನೀಡಿದ್ದರಿಂದ ನಾಗಗಳಲ್ಲಿ ಸುಬ್ರಹ್ಮಣ್ಯನ ಸನ್ನಿಧಾನ ಬಂತು.

” ಶ್ರೀ ಸುಬ್ರಹ್ಮಣ್ಯನಿಗಿಂತ ಎಷ್ಟೋ ಕಡಿಮೆ ಯೋಗ್ಯತೆ ನಾಗಗಳಿರುವುದು.

” ಶ್ರೀ ನಾಗರಾಜ ” ನೆನಿಸಿದ ” ಶ್ರೀ ಶೇಷ ” ನಾಗನೊಬ್ಬ ಮಾತ್ರ ಶ್ರೀ ಸುಬ್ರಹ್ಮಣ್ಯನ ತಂದೆ ಶ್ರೀ ಶಿವನಿಗೆ ಸಮನಾಗಿ ಸುಬ್ರಹ್ಮಣ್ಯನಿಂದಲೂ ಆರಾಧ್ಯನಾಗಿರುವನು.

ಉಳಿದ ನಾಗಗಳೆಲ್ಲ ಶ್ರೀ ಸುಬ್ರಹ್ಮಣ್ಯನ ಆರಾಧಕರು ”

ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಿದ ಸ್ಕಾಂದ ವಚನದಂತೆ ವಾಸುಕಿಯಲ್ಲಿ ಸ್ಕಂದನ ವಿಶೇಷ ಸನ್ನಿಧಾನವಿದೆ.

ಈ ಮಾತಿನಿಂದ ಎಲ್ಲೆಡೆ ಸ್ಕಂದ ಸನ್ನಿಧಾನ ಹೇಳುವಂತಿಲ್ಲ.

ಕುಕ್ಕೆಯಲ್ಲಿ ಮಾತ್ರ ಶ್ರೀ ವಾಸುಕಿಯೊಡನೆ ಶ್ರೀ ಸ್ಕಂದನ ಆರಾಧನೆ.

ಇಲ್ಲಿ ” ಒಡನೆ ” ಎಂದಿದ್ದರಿಂದ Sr ವಾಸುಕೀ ಬೇರೇ ಶ್ರೀ ಸ್ಕಂದನೇ ಬೇರೆ ಎಂದು ತಿಳಿಯಬೇಕು.

ಗುರುವಿನೊಡನೆ ಶಿಷ್ಯನೂ ಮಠದಲ್ಲಿರುವನೆಂದಾಗ ಶಿಷ್ಯನೇ ಗುರುವಾಗನು ತಾನೇ?

ಕುಕ್ಕೆಯಲ್ಲಿ ನೆಲೆನಿಂತ ಶ್ರೀ ಸುಬ್ರಹ್ಮಣ್ಯನ ಕುರಿತು ಶ್ರೀ ಪ್ರಾಣೇಶದಾಸರು…

ರಾಗ : ಮೋಹನ ತಾಳ : ಆದಿ

ಶರಣು ಶರಣು ರತಿನಾಥಾ ।
ಸುರವರ ಅನಿರುದ್ಧನ ತಾತಾ ।
ಕರುಣಾ ಪಯೋನಿಧಿ
ರುಗ್ಮಿಣೀ ಜಾತಾ ।। ಪಲ್ಲವಿ ।।

ತ್ವರದಿಂ ಲಾಲಿಸು ಮಾತಾ ।
ಭರತನೆ ಸನತ್ಕುಮಾರಾ ।
ಸುದರುಶನ
ಪರಮೋದಾರಾ ।।
ಹರನಂದನ ನತ
ಬಂದು ಕುಮಾರಾ ।
ಕರ ಪಿಡಿ ಕೃಷ್ಣ ಕುಮಾರಾ ।। ಚರಣ ।।

ಗುರು ಮೊರೆ
ಇಡಲೈತಂದೂ ।
ದಿವಿ । ಜರರಿಗೆ
ಮನಸಿಗೆ ತಂದೂ ।
ತರುಣಿಯ ಬಿನ್ನಪ
ಶಿವನಲ್ಲಿ ಬಂದು ।
ಶರೀರವ ಕರಗಿಸಿದೆಂದೂ । ಚರಣ ।।

ಮೀನಿನ ಬಸರೊಳು ಪೊಕ್ಕೆ ।
ಆ ಮಾನವರ ಕೈಗೆ ಸಿಕ್ಕೆ ।
ದಾನವನನ್ನು
ಬಿಸುಟಿದೆ ಕುಕ್ಕೆ ।
ಆ ನೊರಣಿಸಲಿಕ್ಕಿದುಶಕ್ಕೆ ।। ಚರಣ ।।

ಭುವನದ ಅಶೋಕ
ಚೂತಾ ।
ನವ ಮಲ್ಲಿಕುತ್ಪಲ
ಧರಿತಾ ।
ಪವನ ಉಡುಗಣಪ
ವಸಂತ ಮಿಳಿತಾ ।
ಸುವಿಶಾಲ ಅದ್ಭುತ ಚರಿತಾ ।। ಚರಣ ।।

ಅಕಳಂಕನಂಗ ಮಾರಾ ।
ಮಕರ ಧ್ವಜ ಶುಕದೇರಾ ।
ಅಕುಟಿಲ ಪ್ರಾಣೇಶ
ವಿಠಲನುದಾರಾ ।
ಸುಕಥೆ ಅರುಪು ಗಂಭೀರಾ ।। ಚರಣ ।।

ಶ್ರೀ ಕಾಮದೇವರು ಶ್ರೀ ವೈಚಾರಿಕ ರುದ್ರದೇವರ ದೆಸೆಯಿಂದ ರಜ ಮತ್ತು ಸತ್ವ ಗುಣದಿಂದ ಜನಿಸಿದರು.

ಇಚ್ಛಾ ರೂಪವಾದ ಮನಸ್ಸಿಗೆ ಅಭಿಮಾನಿಯೂ, ಸ್ತ್ರೀ ಸುಖ – ರತಿ ಕ್ರೀಡಾ ಇತ್ಯಾದಿ ಸುಖಪ್ರದನು.

ಕೇತುಮಾಲಾ ಖಂಡದಲ್ಲಿರುವ ಕೃತಿ ಪತಿ ಪ್ರದ್ಯುಮ್ನ ರೂಪಿ ಶ್ರೀ ಹರಿಯನ್ನು ನಿತ್ಯೋಪಾಸನೆ ಮಾಡುತ್ತಿರುವುದರಿಂದ ಶ್ರೀ ಕಾಮನಿಗೆ ಶ್ರೀ ಪ್ರದ್ಯುಮ್ನ ಎಂದು ಹೆಸರು ಬಂದಿತು.

ಪರಮ ಕಾಂತಿಯುಕ್ತನಾದ ಶ್ರೀ ಪ್ರದ್ಯುಮ್ನ ನಾಮಕ ಶ್ರೀ ಹರಿಯ ವರ ಪ್ರಸಾದದಿಂದ ಮನ್ಮಥನು ಜಗನ್ಮೋಹಕ ಲಾವಣ್ಯವನ್ನು ಪಡೆದನು.

ಒಂದು ಬ್ರಹ್ಮ ಕಲ್ಪದಲ್ಲಿ ಕಾಮ ಪದವಿ ಜೀವರು 40 ಮಂದಿ ಇರುತ್ತಾರೆ. ಇವರಲ್ಲಿ ಒಬ್ಬನು ಮಾತ್ರ ಕಾಮ ಪದವಿಯಲ್ಲಿರುತ್ತಾನೆ.

ಇಂದ್ರ ಪದ ಜೀವರಂತೆ ಇವರಿಗೂ ಸಹ 40 ಕಲ್ಪ ಅಪರೋಕ್ಷ ಪೂರ್ವ ಸಾಧನ; ಸಾಧನಾ ನಂತರ 40 ಕಲ್ಪ ಸಾಧನ.

ಕಾಮದೇವನ ಪುತ್ರನೇ ಅನಿರುದ್ಧನು.

ಬಾಣಾಸುರನ ಮಗಳಾದ ಉಷಾಪತಿ ಅನಿರುದ್ಧನು.

10ನೇ ಕಕ್ಷದ ದೇವತೆ.

ಕಾಮದೇವನ ವರ ಪ್ರಸಾದದಿಂದ ” ಪಾಂಚಜನ್ಯ ” ವೆಂಬ ಶ್ರೀ ಹರಿಯ ಶಂಖಕ್ಕೆ ಅಭಿಮಾನಿ, ಬ್ರಹ್ಮಾವೇಶಯುಕ್ತನು.

ಅನಿರುದ್ಧ ರೂಪಿ ಭಗವಂತನ ಉಪಾಸಕನು.

ಅನಿರುದ್ಧನು ಶತ್ರುಘ್ನನ ಅವತಾರನು!!

ಸುಬ್ರಹ್ಮಣ್ಯದಲ್ಲಿ ವಾಸುಕಿ ನೆಲೆಸಿರುವನು.

ನಮ್ಮಲ್ಲಿ ಹರಿಯೊಬ್ಬನನ್ನು ಬಿಟ್ಟರೆ ಇನ್ನೆಲ್ಲರೂ ಹರಿದಾಸರಲ್ಲವೇ?

ಈ ನಿಟ್ಟಿನಲ್ಲಿ ವೈಷ್ಣವ ನಾಗಾರಾಧನೆಯನ್ನು ( ಸರ್ಪೋಪಾಸನೆ ) ಸರಿಯಾಗಿ ತಿಳಿದು ಉಪಾಸನೆ ಮಾಡಿದರೆ, ಸರ್ಪ ದೋಷದ ನಿವೃತ್ತಿಯಾಗಿ ಧನ – ಸಂತಾನ ಪ್ರಾಪ್ತಿ ಮುಂತಾದವುಗಳ ಜೊತೆಗೆ ದುರ್ಲಭವಾದ ತತ್ತ್ವಜ್ಞಾನ ಪ್ರಾಪ್ತವಾಗುವುದು!!

” ವಿಶೇಷ ವಿಚಾರ ”

ಈ ಫೋಟೋದಲ್ಲಿ ಇರುವ ರಜತ ( ಬೆಳ್ಳಿ ) ಮತ್ತು ಸ್ವರ್ಣ ( ಬಂಗಾರ ) ಒಂದು ಹೆಡೆಯ ನಾಗರಹಾವಿನ ಪದಕ ಮತ್ತು ಮೂರ್ತಿಯನ್ನು – ನನ್ನ ತಂದೆಯವರಾದ ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರು ತಮ್ಮ ಸ್ವ ಹಸ್ತಗಳಿಂದ ತಯಾರಿಸಿ ಪ್ರೀತಿಯಿಂದ ನನಗೆ ಕೊಟ್ಟಿದ್ದು – ಪ್ರತಿನಿತ್ಯ ನನ್ನ ಮನೆಯಲ್ಲಿ ಪೂಜೆಗೊಳ್ಳುತ್ತಿವೆ.

ನಮ್ಮ ಮನೆದೇವರು ಶ್ರೀ ಕುಕ್ಕೆ ಸುಬ್ರಹ್ಮಣ್ಯದೇವರು.

” ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು ”

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

ಜುಲೈ 29ರಿಂದ 100ಕ್ಕೂ ಹೆಚ್ಚು ಸಿದ್ಧ ಉಡುಪು ಕಂಪೆನಿಗಳ ಪ್ರದರ್ಶನ ಮೇಳ


ಬೆಂಗಳೂರು,ಜು.27: ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ನಗರದ ಅರಮನೆ ಮೈದಾನದ ಪ್ರಿನ್ಸಸ್ ಶೀರಿನ್ ಸಭಾಂಗಣದಲ್ಲಿ ಇದೇ ಜುಲೈ 29, 30, 31 ನೇ ಮೂರು ದಿನಗಳ ಕಾಲ ನೂರಕ್ಕೂ ಅಧಿಕ ಸಿದ್ಧ ಉಡುಪು ಕಂಪೆನಿಗಳ 30ನೇ “ಸಿಗಾ ಫೇರ್” ಬಿ ಟು ಬಿ ಪ್ರದರ್ಶನ ಮೇಳ ಆಯೋಜಿಸಲಾಗಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಜವಳಿ ಸಚಿವ ಶಿವಾನಂದ ಪಾಟೀಲ್ ಮೇಳ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
ಜವಳಿ ಉದ್ಯಮದ ಶ್ರೇಯೋಭಿವೃದ್ಧಿಗಾಗಿ ಈ ಮೇಳ ಆಯೋಜಿಸಲಾಗಿದೆ. ವ್ಯಾಪಾರ ವಹಿವಾಟು ನಡೆಸಲು ಇದು ಸೂಕ್ತ ವೇದಿಕೆಯಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಗಾರ್ಮೆಂಟ್ಸ್ ಉದ್ಯಮದ ಜೊತೆಗೆ ನಮ್ಮ ಅಸೋಸಿಯೇಷನ್ ಕೈಜೋಡಿಸಿದೆ. ದಕ್ಷಿಣ, ಉತ್ತರ ಭಾರತ ಗಾರ್ಮೆಂಟ್ಸ್ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಇದು ಉತ್ತಮ ವೇದಿಕೆಯಾಗಿದೆ. “ಸಿಗಾಫೇರ್” ಪ್ರದರ್ಶನ ಮೇಳ ಉದ್ಯಮದಲ್ಲಿ ಲಾಭಗಳಿಸಲು ಸಹಕಾರಿಯಾಗಿದೆ ಎಂದರು.
ಈ ಮೇಳದಲ್ಲಿ ಸರಿ ಸುಮಾರು 200ಕೋಟಿ ರೂಪಾಯಿ ವಹಿವಾಟು ನಡೆಯಲಿದೆ. ಮಹಿಳಾ ಉದ್ಯಮಿಗಳಿಗೆ ಗಾರ್ಮೆಂಟ್ಸ್ ಉದ್ಯಮಕ್ಕೆ ತೊಡಗಲು ಅನುಕೂಲ ವಾತವರಣ ನಿರ್ಮಿಸಲಾಗಿದೆ. ಬೆಂಗಳೂರು, ಬಳ್ಳಾರಿ ನಗರದಲ್ಲಿ ಗಾರ್ಮೆಂಟ್ಸ್ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ. ಇಡಿ ವಿಶ್ವಕ್ಕೆ ಬ್ರಾಂಡೆಡ್ ಬಟ್ಟೆಗಳು ನಮ್ಮಲ್ಲಿ ತಯಾರಿಕೆಯಾಗುತ್ತಿದೆ. ಕಾರ್ಮಿಕ ಕಾನೂನು ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉದ್ಯಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಾರ್ಮೆಂಟ್ಸ್ ಉದ್ಯಮಕ್ಕೆ ಸಹಕಾರ ನೀಡಬೇಕು ಎಂದರು.

ಪುರುಷರು, ಮಹಿಳೆಯರು ಮತ್ತು ಮಕ್ಕಳು – ಮದುವೆಯ ಉಡುಪುಗಳು, ಸಾಂಪ್ರದಾಯಿಕ ಉಡುಪುಗಳು, ಕ್ಯಾಶುಯಲ್ ವೇರ್ ಗಳು, ಡೆನಿಮ್ಗಳು, ಪಾಶ್ಚಾತ್ಯ ಉಡುಪುಗಳು, ಲೌಂಜ್ ಉಡುಪುಗಳು, ಚಳಿಗಾಲದ ಉಡುಪುಗಳು ಮತ್ತು ಪರಿಕರಗಳು ಲಭ್ಯವಿದೆ. ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನರೇಶ್ ಲಕನ್ ಪಾಲ್, ಕಾರ್ಯದರ್ಶಿ ರಾಜೇಶ್ ಚಾವತ್, ಖಜಾಂಚಿ ತೇಜಸ್ ಮೆಹ್ತಾ, ಗೋವಿಂದ ಮುಂದ್ರ, ನಿರ್ದೇಶಕ ರಾಜ್ ಟೇಕಡಿವಾಲ್ ಭಾಗವಹಿಸಿದ್ದರು.

ಬಾಂಧವ ಕೌನ್ಸಿಲರ್ ಕಪ್-2025 ವಾಲಿಬಾಲ್ ಟೂರ್ನಿಗೆ ಅಭೂತಪೂರ್ವ ಸ್ಪಂದನೆ

ಬೆಂಗಳೂರು.ಜು.27; ರಾಜ್ಯದಲ್ಲಿ 200 ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ 28 ನೇ ಬಾಂಧವ ಕೌನ್ಸಿಲರ್ ಕಪ್-2025 ವಾಲಿಬಾಲ್ ಟೂರ್ನಿಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಪ್ರಾರ್ಥನ, ಕಾರ್ಮೆಲ್ ಕಾನ್ವೆಂಟ್ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿದರು.
 ಗೆದ್ದ ತಂಡಗಳಿಗೆ ವಾಲಿಬಾಲ್ ಬೆಟ್ಟೇಗೌಡ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಮತ್ತು ಬಾಂಧವ ಸಂಸ್ಥೆಯ ಸಂಸ್ಥಾಪಕ ಎನ್.ನಾಗರಾಜು ಬಹುಮಾನ ವಿತರಿಸಿದರು. ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಕಾರ್ಮೆಲ್ ಕಾನ್ವೆಂಟ್ ದ್ವಿತೀಯ, ಪ್ರಸಿಡೆನ್ಸಿ ತೃತೀಯ ಸ್ಥಾನ ಪಡೆಯಿತು. ಪ್ರೌಢ ಶಾಲೆಯ ಬಾಲಕರ ವಿಭಾಗದಲ್ಲಿ ಬ್ಲ್ಯೂ ಬೆಲ್ ಕ್ರಮವಾಗಿ ಪ್ರಥಮ, ಸಂವೇದ, ಸಾಧನ ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದುಕೊಂಡಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಚಿತ್ರಕೂಟ ದ್ವಿತೀಯ ಮತ್ತು ವಿಐಪಿ ತೃತೀಯ ಸ್ಥಾನ, ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರಥಮ, ಲಿಟಲ್ ಫ್ಲವರ್ ದ್ವಿತೀಯ ಮತ್ತು ಎಂ.ಎಸ್.ಎಸ್ ತೃತೀಯ ಬಹುಮಾನ ವಿತರಿಸಿದಸಿದರು.
 ನಂತರ ಮಾತನಾಡಿದ ಎನ್. ನಾಗರಾಜು, ಶಿಕ್ಷಣ, ಕ್ರೀಡೆ, ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಪ್ರೇರಣೆಯಾಗಿದೆ. ಬಾಂಧವ ಸಂಸ್ಥೆಯ ಜನರ ಒಡನಾಡಿಯಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಬೇಕು, ರಾಷ್ಟ್ರ, ರಾಜ್ಯ ಹಾಗೂ ತಂದೆ, ತಾಯಿಗಳಿಗೆ ಉತ್ತಮ ಮಕ್ಕಳಾಗಿ ಬೆಳಯಬೇಕು. ಈ ನಿಟ್ಟಿನಲ್ಲಿ ಬಾಂಧವ ಸಂಸ್ಥೆ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪಗೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ವಿನಾಯಕ್ ಮಾರ್ಬಲ್ ಎಂಪೋರಿಯಂನ ಡಿವೈನ್ ಗ್ಯಾಲರಿ

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಲ್ಲಿ ವಿನಾಯಕ್ ಮಾರ್ಬಲ್ ಎಂಪೋರಿಯಂನ ಡಿವೈನ್ ಗ್ಯಾಲರಿಯನ್ನು ಉದ್ಘಾಟಿಸಿದರು. ಬಿಜೆಪಿ ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಸಿರೋಯಾ, ಮುರಾರಿ ಶರ್ಮಾ ಮತ್ತು ಗಣ್ಯರು ಉಪಸ್ಥಿತರಿದ್ದರು.

ವ್ಯಾಸ ಪೂರ್ಣಿಮೆ: ಸೌಂದರ್ಯ ಶೈಕ್ಷಣಿಕ ಸಂಸ್ಥೆಯಿಂದ “ಗುರು ವಂದನಾ” ಕಾರ್ಯಕ್ರಮ

ವ್ಯಾಸ ಪೂರ್ಣಿಮೆಯ ಸಂದರ್ಭದಲ್ಲಿ ಸೌಂದರ್ಯ ಶೈಕ್ಷಣಿಕ ಸಂಸ್ಥೆಯು ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಶಾಖೆಯ ಸಹಯೋಗದಲ್ಲಿ ಭವ್ಯ “ಗುರು ವಂದನಾ” ಕಾರ್ಯಕ್ರಮ ಆಯೋಜಿಸಿತ್ತು. ಶಿಕ್ಷಣ ತಜ್ಞರುವಿವಿ ಕುಲಪತಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಲೇಜಿನ ಸೌಂದರ್ಯ ಸೀತಾ ಸಭಾಂಗಣದಲ್ಲಿ ಭಾರತದ ಶ್ರೀಮಂತ ಗುರು-ಶಿಷ್ಯ ಪರಂಪರೆಯ ಗೌರವ ಸೂಚಿಸುವ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. 

ಭಾರತೀಯ ಶಿಕ್ಷಣ ಮಂಡಳಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ್ ಜಿ ಮಾತನಾಡಿಗುರುಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯಾವಾಗಲೂ ಪ್ರೇರಣಾದಾಯಕವಾಗಿದ್ದು,  ಮಹತ್ವದ ಸುಧಾರಣೆಗೆ ಕಾರಣರಾಗಿದ್ದಾರೆ. ಗುರು ಪರಂಪರೆ ಇಲ್ಲವಾಗಿದ್ದಲ್ಲಿ ಜ್ಞಾನದ ಕೋಶ ಖಾಲಿ ಇರುತ್ತಿತ್ತು. ಪ್ರತಿಯೊಂದು ಬೆಳವಣಿಗೆಗೆ ಗುರುಗಳ ಕೊಡುಗೆ ಅನನ್ಯ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಿರಂಜನ ವಾನಳ್ಳಿಮೈಸೂರಿನ ಕೆ.ಎಸ್.ಓ.ಯು ಉಪಕುಲಪತಿ ಪ್ರೊ.  ಶರಣಪ್ಪ ವಿ ಹಾಲ್ಸೆಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಎಸ್ ಅಲೂರುಹಾಸನ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಟಿ ಸಿ ತಾರಣಾಥ್ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ. ಆರ್. ಗಂಗಾಧರ್ ಹಾಗೂ ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಪ್ರೊ. ಸತೀಶ ವಿ ಕೈಲಾಸ್ ಉಪಸ್ಥಿತರಿದ್ದರು.

ಸೌಂದರ್ಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಸೌಂದರ್ಯ ಪಿ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸುನೀತಾ ಮಂಜಪ್ಪಸಿಇಒ ಕೀರ್ತನ್ ಕುಮಾರ್ ಎಂಹಾಗೂ ನಿರ್ದೇಶಕ ವರುಣ್ ಕುಮಾರ್ ಎಂ ಭಾಗಿಯಾಗಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಐಐಟಿ-ಮೆಡ್ರಾಸ್ ಹಾಗೂ ಐಐಎಸ್ಸಿ ಸಂಯುಕ್ತವಾಗಿ ಸ್ಥಾಪಿಸಿದ “ಸ್ಮಾರ್ಟ್ ಏರ್ ಪ್ಯೂರಿಫೈಯರ್” ಅನ್ನು ಉದ್ಘಾಟಿಸಿದರು. ಇದು ಶುದ್ಧವಾಯು ಹಾಗೂ ಚತುರ ಶೈಕ್ಷಣಿಕ ವಾತಾವರಣದತ್ತ ಇಟ್ಟ ಹೆಜ್ಜೆಯಾಗಿದೆ.

ಶಿಕ್ಷಣಜ್ಞರನ್ನು ಗೌರವಿಸುವ ಮತ್ತು ಗುರು ಪೂರ್ಣಿಮೆಯ ಅನನ್ಯ  ಅರ್ಥವನ್ನು ಉಳಿಸಿಕೊಂಡು ಬೆಳಗಿಸುವ ನಿಟ್ಟಿನಲ್ಲಿ ಹಲವು ಪ್ರಾಧ್ಯಾಪಕರುಶಿಕ್ಷಣ ಕ್ಷೇತ್ರದ ಸದಸ್ಯರು ಒಟ್ಟಾಗಿ ಸೇರಿದ ಮಹತ್ವದ ವೇದಿಕೆ ಇದಾಗಿತ್ತು. ಈ ಸಂಭ್ರಮವು ಪರಂಪರೆಯ ಮೌಲ್ಯಗಳನ್ನು ಆಧುನಿಕ ಕನಸುಗಳೊಂದಿಗೆ ಒಗ್ಗಟ್ಟಾಗಿ ಹೆಜ್ಜೆ ಇಟ್ಟು ಸಾಗಿತು.

ವಿನಾಯಕ್ ಮಾರ್ಬಲ್ ಎಂಪೋರಿಯಂನ ಡಿವೈನ್ ಗ್ಯಾಲರಿ