ದಿನಾಂಕ: 12/09/2026 ರಂದು ಬೆಳಗ್ಗೆ 10:51 ಗಂಟೆಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಂಬೂಸವಾರಿ ದಿಣ್ಣೆ ಸಮೀಪದ ಅಪಾರ್ಟ್ಮೆಂಟ್ವೊoದರಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ನಲ್ಲಿ ಓರ್ವ ಡೆಲಿವರಿ ವ್ಯಕ್ತಿಯು ಸಿಲುಕಿಕೊಂಡಿರುವ ಕುರಿತು ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿರುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ-112 ಸಿಬ್ಬಂದಿಯವರು ತಲಘಟ್ಟಪುರ ಪೊಲೀಸ್ ಠಾಣೆಯ ಹೊಯ್ಸಳ-೧೫೮ರಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ, ಎಲ್. ಪ್ರಕಾಶ್ ಹಾಗೂ ಪಿಸಿ, ಸಂಜೀವ್ ಕುಮಾರ್.ಎಂ.ಬಿ. ರವರಿಗೆ ಮಾಹಿತಿಯನ್ನು ರವಾನಿಸಿದ್ದು, ಕೇವಲ 04 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿಯವರು ಪರಿಸ್ಥಿತಿಯನ್ನು ಪರಿಶೀಲಿಸಿ, ಲಿಫ್ಟ್ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸಮೀಪದ ಸ್ಥಳೀಯರ ಸಹಾಯದೊಂದಿಗೆ ಲಿಫ್ಟ್ನ್ನು ತೆರೆದು, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಮನ್ವಯದ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಈ ಘಟನೆಯು ತುರ್ತು ಸಂದರ್ಭಗಳಲ್ಲಿ ನಮ್ಮ-112 ಸಹಾಯವಾಣಿಯನ್ನು ಸಂಪರ್ಕಿಸುವ ಮಹತ್ವವನ್ನು ಹಾಗೂ ಬೆಂಗಳೂರು ನಗರ ಪೊಲೀಸರ ತ್ವರಿತ ಮತ್ತು ಪರಿಣಾಮಕಾರಿ ಸ್ಪಂದನೆಯನ್ನು ತೋರಿಸುತ್ತದೆ.
ಮಾರತ್ತಹಳ್ಳಿ ಪೊಲೀಸರ ತ್ವರಿತ ಕಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ರಕ್ಷಣೆ.

