ಬಣ್ಣದ ಕನಸುಗಳು ಚಿತ್ರಕ್ಕೆ ಡಬ್ಬಿಂಗ್‌ ಮುಕ್ತಾಯ. 

ಮಹದೇಶ್ವರ ಎಂಟರ್‌ಪ್ರೈಸಸ್‌ (Mahadeshwara Enterprises) ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಬಣ್ಣದ ಕನಸುಗಳು (Bannada Kanasugalu) ಚಿತ್ರಕ್ಕೆ ಓಂಪ್ರಕಾಶ್‌ ನಾಯಕ್‌ (Om Prakash Nayak) ನಿರ್ದೇಶಕರಾಗುವುದರ ಜೊತೆಗೆ ಇನ್ನೂ ಹಲವು ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ನಾಲ್ವರು ನಾಯಕರಲ್ಲಿ ಒಬ್ಬರಾಗಿರುವ ಓಂಪ್ರಕಾಶ್‌ ನಾಯಕ್‌ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತವನ್ನೂ ನೀಡಿ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳು ಕೇಳುಗರನ್ನು ಸೆಳೆಯುವಂತಿರುವುದು ವಿಶೇಷ.
ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಓಂಪ್ರಕಾಶ್‌ ನಾಯಕ್‌ ಚಿತ್ರದ ನಿರ್ಮಾಪಕರೂ ಹೌದು.
ಚಿತ್ರವು ಟಾಕಿ ಪೊಷನ್‌ ಮತ್ತು ಹಾಡುಗಳ ಚಿತ್ರೀಕರಣ, ಸಂಕಲನ ಹಾಗೂ ಡಬ್ಬಿಂಗ್‌ ಮುಗಿಸಿದೆ. ಚಿತ್ರದ ರಿರೆಕಾರ್ಡಿಂಗ್‌ ಬಾಕಿಯಿದ್ದು ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ಕಳುಹಿಸಲಾಗುವುದು ಎಂದು ನಿರ್ದೇಶಕ ಓಂಪ್ರಕಾಶ್‌ ನಾಯಕ್‌ ತಿಳಿಸಿದ್ದಾರೆ. ಚಿತ್ರದಲ್ಲಿ ಗ್ಯಾಂಗ್‌ ಗ್ಯಾಂಗ್‌ ನಮ್ದೊಂದು ಪೋಲಿ ಗ್ಯಾಂಕ್‌, ದುಡ್ಡು ದುಡ್ಡು ಇಲ್ಲಿ ಎಲ್ಲಾ ದುಡ್ಡು ಎನ್ನುವ ಎರಡು ಫ್ರೆಂಡ್‌ಶಿಪ್‌ ಹಾಡುಗಳಿವೆ.
ಎರಡು ಡ್ಯೂಯೆಟ್‌ ಹಾಡುಗಳಿದ್ದು, ಒಂದು ಪ್ಯಾಥಾಸ್‌ ಸಾಂಗ್‌ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಛಾಯಾಗ್ರಹಣ ರವಿ, ಮೋಹಿತ್‌ ಸಹನಿರ್ದೇಶನ  ಮೋಹಿತ್‌, ಮೇಕಪ್‌ ರುದ್ರೇಶ್‌, ಪತ್ರಿಕಾ ಸಂಪರ್ಕ  – ವಿ.ಎಂ.ಎಸ್.ಗೋಪಿ ಮಾಡಿದ್ದಾರೆ. ತಾರಾಗಣದಲ್ಲಿ ನಾಯಕರಾಗಿ ಓಂಪ್ರಕಾಶ್‌ ನಾಯಕ್‌, ಅಫ್ಜಲ್‌ ಸೂಪರ್‌ಸ್ಟಾರ್‌, ಗಣೇಶ ಹಾಗೂ ಭಾಸ್ಕರ್‌ ಜಿ ಇದ್ದಾರೆ. ಮಂಗಳ ನಾಯಕಿಯಾಗಿದ್ದಾರೆ.
ಉಳಿದ ತಾರಾಗಣದಲ್ಲಿ ರಂಗಭೂಮಿಯ ರಾಜಣ್ಣ, ವೆಂಕಟೇಶ್‌, ರಾಮ್‌ಜಿ, ಚಂದ್ರಕಾಂತ್‌, ಮುತ್ತುರಾಜ್‌, ಅಭಿಸಾರಿಕ, ಲಲಿತಾ, ಮತ್ತು ಸಹ ಕಲಾವಿದರು ನಟಿಸಿದ್ದಾರೆ.
          – ವಿ.ಎಂ.ಎಸ್.ಗೋಪಿ

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles