ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು ಕೇಂದ್ರ ಕಾರಾಗೃಹದ, ಅಧೀಕ್ಷಕರು (ಪ್ರಭಾರ) ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಕೇಂದ್ರ ಕಾರಾಗೃಹದಲ್ಲಿ 04 ಮೊಬೈಲ್ (Mobile) ಪೋನ್‌ಗಳು, 02 ಸಿಮ್ ಕಾರ್ಡ್ಗಳು ಹಾಗೂ 01 ಚಾರ್ಜರ್ (Charger) ಪತ್ತೆಯಾಗಿರುವುದಾಗಿ ತಿಳಿಸಿರುತ್ತಾರೆ.

ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖಾ ಕಾಲದಲ್ಲಿ 02 ಏರ್ ಟೇಲ್ ಸಿಮ್‌ಗಳ ಮೇಲೆ ನಮೂದಿಸಿರುವ ನಂಬರ್ ಆಧಾರದ ಮೇರೆಗೆ ತನಿಖೆ ಕೈಗೊಂಡು ಮೊಬೈಲ್ ನಂಬರ್‌ಗಳನ್ನು ಪತ್ತೆ ಮಾಡಲಾಗಿರುತ್ತದೆ. ಸದರಿ ಮೊಬೈಲ್ ನಂಬರ್‌ಗಳು ಯಾವ ಮೊಬೈಲ್ ಪೋನ್‌ಗಳಲ್ಲಿ ಬಳಕೆಯಾಗಿವೆ ಎಂಬುದರ ಬಗ್ಗೆ ಸಿಇಐಆರ್ ಪೋರ್ಟಲ್ ಮೂಲಕ ತಾಂತ್ರಿಕ ಮಾಹಿತಿಯನ್ನು ಪಡೆದು, ಸಿಮ್ ಬಳಕೆಯಾಗಿರುವ ಮೊಬೈಲ್‌ಗಳ ಪೈಕಿ ಪತ್ತೆಯಾಗಿರುವ ನಿಷೇಧಿತ 02 ಮೊಬೈಲ್ ಪೋನ್‌ಗಳನ್ನು ಕೇಂದ್ರ ಕಾರಾಗೃಹದ ವೀಕ್ಷಕ ಸಿಬ್ಬಂದಿ ಶ್ರೀನಿವಾಸ್ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದು, ಈತ ಅಪರಿಚಿತ ರಾಹುಲ್ ಎಂಬ ಹೆಸರಿನಲ್ಲಿ ಖರೀದಿ ಮಾಡಿ , ಸುಮಾರು 12 ಮೊಬೈಲ್ ಖರೀದಿ ಮಾಡಿ, ತನ್ನ ವಶದಲ್ಲಿಟ್ಟುಕೊಂಡು ಅಕ್ರಮವಾಗಿ ಪರಪ್ಪನ ಕಾರಾಗೃಹಕ್ಕೆ ಸರಬರಾಜು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಪ್ರಕರಣದಲ್ಲಿ ಕೇಂದ್ರ ಕಾರಾಗೃಹದ ಒಳಗೆ ನಿಷೇಧಿತ ಮೊಬೈಲ್ ಪೋನ್‌ಗಳನ್ನು ಅಕ್ರಮವಾಗಿ ಪಡೆದುಕೊಂಡಿರುವ ಬಂದಿಗಳ ಪತ್ತೆಗೆ ತನಿಖೆ ಕೈಗೊಂಡಿರುತ್ತದೆ.

****
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದ, ಅಧೀಕ್ಷಕರು (ಪ್ರಭಾರ) ದೂರನ್ನು ಸಲ್ಲಿಸಿ, ಕಾರಾಗೃಹದಲ್ಲಿ 1 ಮೊಬೈಲ್, 1 ಸಿಮ್ ಕಾರ್ಡ್ ಪತ್ತೆಯಾಗಿರುವುದಾಗಿ ತಿಳಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಪ್ರಕರಣದ ತನಿಖಾ ಕಾಲದಲ್ಲಿ ಸಿಮ್ ನಂಬರ್ ಆಧಾರದ ಮೇರೆಗೆ ತನಿಖೆ ಕೈಗೊಂಡು, ಮೊಬೈಲ್ ಕಂಪನಿಯೊಂದಿಗೆ ಸಮಲೋಚನೆ ನಡೆಸಿ, ಮೊಬೈಲ್ ಯಾರಿಗೆ ಮಾರಾಟವಾಗಿರುತ್ತದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗಿ ಆಂದ್ರ ಪ್ರದೇಶ ರಾಜ್ಯದ ಎಜೆನ್ಸಿವೊಂದಕ್ಕೆ ಮಾರಾಟವಾಗಿದ್ದು, ನಂತರ ಮೊಬೈಲ್ ಮಾರಾಟದ ಸಂಪೂರ್ಣ ಮಾಹಿತಿಯನ್ನು ಪಡೆದು ಪರಿಶೀಲನೆ ಮಾಡಲಾಗಿ ಮೊಬೈಲ್ ಖರೀದಿ ಮಾಡಿರುವವನನ್ನು ಪತ್ತೆ ಮಾಡಿ ವಿಚಾರಣೆ ಮಾಡಲಾಗಿ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿರುವ ಭರತ್ ಸೂಚನೆಯಂತೆ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ವೀಕ್ಷಕ ವಿಜಯ್ ಕುಮಾರ್ ನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
****
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಸಿಸಿಬಿಯ ಪೊಲೀಸ್ ಇನ್ಸ್ಪೆಕ್ಟರ್ ರವರು ದೂರನ್ನು ಸಲ್ಲಿಸಿದ್ದು, ಕೇಂದ್ರ ಕಾರಾಗೃಹದ ಭದ್ರತಾ ವಿಭಾಗ ಬ್ಯಾರಕ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ಮಾಡಿದಾಗ, ವಿಚಾರಣಾ ಬಂದಿ ಪ್ರತಾಪ್ ರಾಯ್ ಹಾಗೂ ಶಿಕ್ಷಾ ಬಂದಿ ಪ್ರಜ್ವಲ್ ರೇವಣ್ಣ ಇವರುಗಳಿದ್ದ ಕೊಠಡಿಯಲ್ಲಿ ನಿಷೇಧಿತ 01 ಮೊಬೈಲ್ ಪೋನ್, 01 ಸಿಮ್, 01 ಚಾರ್ಜರ್, 01 ನೋಟ್‌ಬುಕ್ ಪತ್ತೆಯಾಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಮುಂದುವರೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಮೇರೆಗೆ ವಶಪಡಿಸಿಕೊಂಡಿರುವ ಮೊಬೈಲ್ ಪೋನ್ ಮತ್ತು ಸಿಮ್ ಅನ್ನು ಖರೀದಿ ಮಾಡಿ ಕೇಂದ್ರ ಕಾರಾಗೃಹಕ್ಕೆ ಸಾಗಾಣಿಕೆ ಮಾಡಿರುವ ಐವರು ವ್ಯಕ್ತಿಗಳನ್ನು ವಿವಿಧ ದಿನಾಂಕಗಳಂದು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಮೊಬೈಲ್ ಪೋನ್ ಅನ್ನು ಕೇಂದ್ರ ಕಾರಾಗೃಹದ ವಾರ್ಡರ್ ಸಿಬ್ಬಂದಿ ಮೂಲಕ ಮತ್ತು ಸಿಮ್ ಅನ್ನು ವಿಚಾರಣಾ ಬಂದಿ ಮೂಲಕ ಕೇಂದ್ರ ಕಾರಾಗೃಹಕ್ಕೆ ಸಾಗಾಟ ಮಾಡಿದ್ದು, ಸಾಗಾಟ ಮಾಡಿರುವ ನಿಷೇಧಿತ ಮೊಬೈಲ್ ಪೋನ್ ಮತ್ತು ಸಿಮ್ ಅನ್ನು ವಿಚಾರಣಾ ಬಂದಿ ಪ್ರತಾಪ್ ರಾಯ್ ಹಾಗೂ ಶಿಕ್ಷಾ ಬಂದಿ ಪ್ರಜ್ವಲ್ ರೇವಣ್ಣ ರವರು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ನವೀನ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

****
ಈ ಮೂರು ಕಾರ್ಯಾಚರಣೆಗಳನ್ನು ಎಲೆಕ್ಟಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ. ನಾರಾಯಣ. ಐ.ಪಿ.ಎಸ್., ರವರ ಮಾರ್ಗದರ್ಶನದಲ್ಲಿ, ಎಲೆಕ್ಟಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸತೀಶ್.ಕೆ.ಎಂ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡವು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

 

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

Topics

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

ಕಲಾ ಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ-2026

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆಯು ಆಯೋಜಿಸಿರುವ “ಕಲಾ ಸಂಗಮ”(Kala Sangama)...

Related Articles