‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ ಬರುತ್ತಿರುವ ಆಸ್ಟ್ರಲ್ ಪೇಜೆಂಟ್ಸ್ (Astral Pageants) ತನ್ನ 10ನೇ ಎಡಿಷನ್ ಅದ್ದೂರಿಯಾಗಿ ಪೂರ್ಣಗೊಳಿಸಿತು. ನಗರದ ಕಿಂಗ್ಸ್ ಮೆಡೋಸ್‌ನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮವು ಸೆ.8 ರಿಂದ ಸೆ.10ರ ವರೆಗೆ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಡೆಸಲಾಯಿತು. ಮಹಿಳೆಯರ ಸೌಂದರ್ಯ, ಆತ್ಮವಿಶ್ವಾಸ, ಪ್ರತಿಭೆ ಮತ್ತು ಸಬಲೀಕರಣವನ್ನು ಆಚರಿಸಿದ ಈ ಮೂರು ದಿನಗಳ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು ಗ್ರ್ಯಾಂಡ್ ಫಿನಾಲೆ (Grand Final) ಯೊಂದಿಗೆ ಮುಕ್ತಾಯಗೊಂಡಿತು.ಈ ವಿಶೇಷ ಆವೃತ್ತಿಯಲ್ಲಿ ಗ್ರೂಮಿಂಗ್, ವ್ಯಕ್ತಿತ್ವ ವಿಕಸನ, ಫ್ಯಾಶನ್, ರ್ಯಾಂಪ್-ವಾಕ್ ತರಬೇತಿ ಮತ್ತು ರಂಗದ ಅಭ್ಯಾಸದ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಾಲ್ಕು ಪ್ರಮುಖ ವಿಭಾಗಗಳು ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ವಿವಿಧ ವಯೋಮಾನದ ಮಹಿಳೆಯರನ್ನು ಒಂದೇ ವೇದಿಕೆಗೆ ತರಲು ಮಿಸ್ ಟೀನ್, ಮಿಸ್, ಲೇಡಿ ಮತ್ತು ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಭಾಗಗಳಾಗಿ ವಿಂಗಡಿಸಲಾಗಿತ್ತು. 25 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗಾಗಿ 2025ರಲ್ಲಿ ಪರಿಚಯಿಸಲಾದ ‘ಲೇಡಿ’ ವಿಭಾಗವು ಈ ಬಾರಿಯೂ ವಿಶೇಷ ಗಮನ ಸೆಳೆಯಿತು.

10ನೇ ಗ್ರ್ಯಾಂಡ್ ಎಡಿಷನ್‌ನಲ್ಲಿ 13ರಿಂದ 64 ವರ್ಷದವರೆಗಿನ 27 ಫೈನಲಿಸ್ಟ್‌ಗಳು ಭಾಗವಹಿಸಿದ್ದರು. ಭಾರತೀಯ ಪರಂಪರೆ, ಫ್ಯಾಷನ್ ಮತ್ತು ವೈಯಕ್ತಿಕ ಅಭಿವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಮೂರು ವಿಶಿಷ್ಟ ಸ್ಪರ್ಧಾತ್ಮಕ ಸುತ್ತುಗಳನ್ನು ಆಯೋಜಿಸಲಾಗಿತ್ತು.

10ನೇ ಗ್ರ್ಯಾಂಡ್ ಫಿನಾಲೆಯ ತೀರ್ಪುಗಾರರಾಗಿ ಆಸ್ಟ್ರಲ್ ಕುಟುಂಬದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಹಾಗೂ ತಮ್ಮದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಾಜಿ ಆಸ್ಟ್ರಲ್ ಕಿರೀಟಧಾರಿಣಿಯರು ಉಪಸ್ಥಿತರಿದ್ದರು.

ಜ್ಯೂರಿಯಲ್ಲಿ ಡಾ. ನಿಶಿತಾ ಶೆಟ್ಟಿಯನ್ ಫರ್ನಾಂಡಿಸ್, ಮೊನಿಮಿತಾ, ಸನ್ಮತಿ, ಅಕ್ಷತಾ, ಪ್ರಗತಿ ಅನೂನ್, ಯಶೋಧಾ ಮತ್ತು ವಿದ್ಯಾ ಸಂಪತ್ ಕರ್ಕೇರ ಇದ್ದರು.

ಮಾಜಿ ಸ್ಪರ್ಧಿಗಳು ಹಾಗೂ ಕಿರೀಟಧಾರಿಣಿಯರು ಇಂದು ಮಾರ್ಗದರ್ಶಕರು, ತೀರ್ಪುಗಾರರು ಮತ್ತು ಮುಂದಿನ ಪೀಳಿಗೆಗೆ ಮಾದರಿಗಳಾಗಿ ಮರಳಿರುವುದು ಆಸ್ಟ್ರಲ್‌ನ ದಶಕದ ಪಯಣದ ಪ್ರಮುಖ ಸಾಧನೆಯಾಗಿದೆ.

ಆಸ್ಟ್ರಲ್ ಕ್ವೀನ್ಸ್ ಲೆಗಸಿ ವಾಕ್

10ನೇ ಗ್ರ್ಯಾಂಡ್ ಎಡಿಷನ್‌ನ ಅತ್ಯಂತ ಭಾವುಕ ಮತ್ತು ಸ್ಮರಣೀಯ ಕ್ಷಣಗಳಲ್ಲಿ ಆಸ್ಟ್ರಲ್ ಕ್ವೀನ್ಸ್ ಲೆಗಸಿ ವಾಕ್ ಪ್ರಮುಖವಾಗಿತ್ತು.

2016ರಿಂದ 2025ರವರೆಗಿನ ವಿವಿಧ ಆವೃತ್ತಿಗಳ ಆಯ್ದ ಕಿರೀಟಧಾರಿಣಿಯರು ಮತ್ತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದು ಕೇವಲ ಫ್ಯಾಷನ್ ವಾಕ್ ಆಗಿರದೆ, ಒಂದು ದಶಕದ ನೆನಪುಗಳು, ಸಾಧನೆಗಳು, ಸ್ನೇಹ, ಸಹೋದರತ್ವದ ಭಾವನೆ ಮತ್ತು ಆಸ್ಟ್ರಲ್ ಕುಟುಂಬದೊಂದಿಗೆ ಬೆಸೆದುಕೊಂಡಿರುವ ಆತ್ಮೀಯ ಸಂಬಂಧಗಳ ಸಂಭ್ರಮವಾಗಿತ್ತು.

ಒಮ್ಮೆ ಆಸ್ಟ್ರಲ್ ವೇದಿಕೆಯಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೃತ್ತಿಪರರು, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು, ಮಾರ್ಗದರ್ಶಕರು ಮತ್ತು ಆಸ್ಟ್ರಲ್ ಕುಟುಂಬದ ಹೆಮ್ಮೆಯ ಸದಸ್ಯರಾಗಿ ಮರಳಿರುವುದು ಈ ಲೆಗಸಿ ವಾಕ್‌ನ ವಿಶೇಷತೆಯಾಗಿತ್ತು.

ದಶಕದ ಪಯಣ
2015ರ ಮಿಸೆಸ್ ಇಂಡಿಯಾ ವಿಜೇತೆ ಹಾಗೂ ‘ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಫೋಟೋಜೆನಿಕ್ 2015’ ಪ್ರಶಸ್ತಿ ಪುರಸ್ಕೃತರಾದ ಪ್ರತಿಭಾ ಸೌಂಶಿಮಠ್ ಅವರು 2016ರಲ್ಲಿ ‘ಮಿಸೆಸ್ ಇಂಡಿಯಾ ಕರ್ನಾಟಕ’ ಹೆಸರಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದರು.ಈ ಯಶಸ್ಸಿನ ಕುರಿತು ಮಾತನಾಡಿದ ಆಸ್ಟ್ರಲ್ ಪೇಜೆಂಟ್ಸ್ ಸಂಸ್ಥಾಪಕಿ ಪ್ರತಿಭಾ ಸೌಂಶಿಮಠ್, “10 ಆವೃತ್ತಿಗಳನ್ನು ಪೂರ್ಣಗೊಳಿಸಿರುವುದು ಅತ್ಯಂತ ಭಾವುಕ ಮತ್ತು ಹೆಮ್ಮೆಯ ಕ್ಷಣ. 2016ರಲ್ಲಿ ಸಣ್ಣ ಕನಸಾಗಿ ಆರಂಭವಾದದ್ದು, ಇಂದು ನೂರಾರು ಮಹಿಳೆಯರು ತಮ್ಮ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಕಂಡುಕೊಳ್ಳುವ ಬೃಹತ್ ವೇದಿಕೆಯಾಗಿ ಬೆಳೆದಿದೆ. ಈ ಯಶಸ್ಸು ಸಂಸ್ಥೆಯದ್ದು ಮಾತ್ರವಲ್ಲ, ಈ ಪಯಣದ ಭಾಗವಾದ ಪ್ರತಿಯೊಬ್ಬ ಮಹಿಳೆಯದ್ದು,” ಎಂದರು.

ಗ್ರ್ಯಾಂಡ್ ಫಿನಾಲೆಯಲ್ಲಿ ಮಹೇಶ್ ಕುಮಾರ್, ಶೀಲಾ ಶೆಟ್ಟಿ, ಡಾ. ಮನೋಹರ್, ಅಸ್ಲಾಂ ಸೂಪರ್‌ಸ್ಟಾರ್, ಅಮೃತ್ ರಾಜ್, ಸುನೇತ್ರಾ ಪಂಡಿತ್, ಎಂ. ಎನ್. ಸುರೇಶ್ ಮತ್ತು ಪ್ರಭು ಮೆತಿಮಠ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜೇತರ ವಿವರ

ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ಲಾವಣ್ಯ ಶೆಣೈ
• ಮೊದಲ ರನ್ನರ್-ಅಪ್: ರಮ್ನಿ ಉಪ್ಪಲ್
• ಎರಡನೇ ರನ್ನರ್-ಅಪ್: ರಶ್ಮಿ ಮಂಜುಶ್ರೀ
• ವಿವೇಷಿಯಸ್: ಸುನಂದಾ ಹೊಸಮನಿ
• ಗ್ರೇಸ್ಫುಲ್: ತೆಸ್ಲಿನಾ ಲೇರಿನಾ ರೋಡ್ರಿಗಸ್
• ರೀಗಲ್ ಸ್ಟಾರ್: ಅರ್ಚನಾ ಎಸ್. ಕುಮಾರ್
• ರೈಸಿಂಗ್ ಸ್ಟಾರ್: ಆರ್. ವಿ. ರಶ್ಮಿ
• ಶೈನಿಂಗ್ ಸ್ಟಾರ್: ಡಾ. ಕ್ರಿಸ್ಟಿನಾ

ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ಡಾ. ರಶ್ಮಿ ಮಣಿ
• ಮೊದಲ ರನ್ನರ್-ಅಪ್: ಸೋನಿಯಾ ಕೆ.
• ಎರಡನೇ ರನ್ನರ್-ಅಪ್: ವಿದ್ಯಾಶ್ರೀ
• ಶೈನಿಂಗ್ ಸ್ಟಾರ್: ನೆಲಮ್ಮ ಎನ್.

ಲೇಡಿ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ಪ್ರಾಚಿ ಮಲ್ಹೋತ್ರಾ
• ಮೊದಲ ರನ್ನರ್-ಅಪ್: ವರ್ಷಿಣಿ ಬಿ.

ಸೂಪರ್ ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ಯಾಸ್ಮಿನ್ ಸೇಟ್
• ಮೊದಲ ರನ್ನರ್-ಅಪ್: ತಾರಕೇಶ್ವರಿ ರಾಜು
• ಎರಡನೇ ರನ್ನರ್-ಅಪ್: ಮಿಲ್ಲಿ ಪಂಜಾಬಿ
• ರೀಗಲ್ ಸ್ಟಾರ್: ವರ್ಷಾ ನಾರಂಗ್

ಮಿಸ್ ಟೀನ್ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ವಿನಂತಿ ರಾವ್ ಜೋಶಿ
• ಮೊದಲ ರನ್ನರ್-ಅಪ್: ಆರಾಧ್ಯಾ ಪ್ರಧಾನ್

ಮಿಸ್ ಇಂಡಿಯಾ ಆಸ್ಟ್ರಲ್ ವಿಭಾಗ
• ವಿಜೇತೆ: ಸೃಷ್ಟಿ ಕುಮಾರ್ ಶಿರೂರ್ಕರ್
• ಮೊದಲ ರನ್ನರ್-ಅಪ್: ಮೌಲ್ಯ ಹೆಚ್. ಗೌಡ
• ಎರಡನೇ ರನ್ನರ್-ಅಪ್: ಕಾವ್ಯ ನಾಯಕ್
• ರೈಸಿಂಗ್ ಸ್ಟಾರ್: ನಂದಿನಿ ವಾಂಜರೆ
• ಶೈನಿಂಗ್ ಸ್ಟಾರ್: ವಿ. ಜಯಶ್ರೀ

ಅಂತರರಾಷ್ಟ್ರೀಯ ಹಂತಕ್ಕೆ ಆಯ್ಕೆ:
ಎಲೈಟ್ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2026: ಪ್ರಾಚಿ ಮಲ್ಹೋತ್ರಾ
ಲೇಡಿ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2026: ಲಾವಣ್ಯ ಶೆಣೈ

Hot this week

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

Topics

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

ಕಲಾ ಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ-2026

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆಯು ಆಯೋಜಿಸಿರುವ “ಕಲಾ ಸಂಗಮ”(Kala Sangama)...

Related Articles