ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank Colony) ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸೆಪ್ಟೆಂಬರ್ 14 ರಿಂದ 18ರ ವರೆಗೆ ಗಣೇಶೋತ್ಸವ ಸಂಭ್ರಮವನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ದಿನಗಳಲ್ಲೂ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, (Pooja) ದಿನಕ್ಕೊಂದು ಅಲಂಕಾರ ಮಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು :
ಪ್ರತಿ ದಿನ ಸಂಜೆ 6-30ಕ್ಕೆ ಏರ್ಪಡಿಸಿದ್ದು, ವಿವರಗಳು ಹೀಗಿವೆ :
ಸೆಪ್ಟೆಂಬರ್ 14, ಸೋಮವಾರ-ವಿದ್ವಾನ್ ಶ್ರೀ ವಿಷ್ಣುವೆಂಕಟೇಶ್ ಮತ್ತು ಸಂಗಡಿಗರಿಂದ “ಮ್ಯಾಂಡೋಲಿನ್ ವಾದನ”,
ಸೆಪ್ಟೆಂಬರ್ 15, ಮಂಗಳವಾರ-ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ “ದಾಸವಾಣಿ”,
ಸೆಪ್ಟೆಂಬರ್ 16, ಬುಧವಾರ-ವಿದ್ವಾನ್ ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತು ಸಂಗಡಿಗರಿಂದ “ಭಕ್ತಿಗೀತೆ” ಮತ್ತು “ಭಾವಗೀತೆ”,
ಸೆಪ್ಟೆಂಬರ್ 17, ಗುರುವಾರ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಕಲಾವಿದರಿಂದ “ನೃತ್ಯ ಸಂಭ್ರಮ”.
ಸೆಪ್ಟೆಂಬರ್ 18, ಶುಕ್ರವಾರ-ಶ್ರೀ ವರಸಿದ್ಧಿ ವಿನಾಯಕ ವಿಸರ್ಜನಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಕಾಲೋನಿಯಲ್ಲಿ ಶ್ರೀ ವಿನಾಯಕ ಮೂರ್ತಿಯ ಶೋಭಾಯಾತ್ರೆ ತದನಂತರ ವಿಸರ್ಜನೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿಗಳು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ – VK Digital News
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

