ಸ್ಯಾಂಕಿ ಕೆರೆಗೆ ಲೋಕಾಯುಕ್ತ ತಂಡ ಭೇಟಿ: ಸಮಗ್ರ ವರದಿ ಸಲ್ಲಿಸಲು ತೀರ್ಮಾನ

ವಾಯ್ಸ್ ಆಫ್ ಸದಾಶಿವನಗರ (Voice of Sadashivanagar) ಸಂಘಟನೆಯ “ಸೇವ್ ಸ್ಯಾಂಕಿ ಟ್ಯಾಂಕ್ ಇನಿಶಿಯೇಟಿವ್”  (Save Sankey Tank) ಹೋರಾಟಕ್ಕೆ ಸ್ಪಂದನೆ
“ಸೇವ್ ಸ್ಯಾಂಕಿ ಟ್ಯಾಂಕ್ ಇನಿಶಿಯೇಟಿವ್” ಕಾರ್ಯಕ್ರಮದಡಿ ವಾಯ್ಸ್ ಆಫ್ ಸದಾಶಿವನಗರ ಸಂಘಟನೆಯಿಂದ ಸ್ಯಾಂಕಿಕೆರೆ ಉಳಿಸಿ ಅಭಿಯಾನ ಕೈಗೊಂಡು ಕೆರೆ ಮಾಲೀನ್ಯ ನಿಯಂತ್ರಣಕ್ಕಾಗಿ ನಿರಂತರ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಕೆರೆ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.ಲೋಕಾಯುಕ್ತ ಎಸ್.ಪಿ, ಮಹಾಂತೇಶ್ವರ ಎಸ್ ಜಿದ್ದಿ, ಮುಖ್ಯ ಅಭಿಂತರರಾದ ಬಿ.ವಿ. ರಮೇಶ್ ನೇತೃತ್ವದ ಮಾಲೀನ್ಯಕ್ಕೆ ಕಾರಣಗಳು, ಅಧಿಕಾರಿಗಳ ನಿರ್ಲಕ್ಷ್ಯ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮತ್ತಿತರೆ ವಿಷಯಗಳನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕಿದರು.

ಬಳಿಕ ಮಾತನಾಡಿದ ಮುಖ್ಯ ಅಭಿಯಂತರರಾದ ಬಿ.ವಿ. ರಮೇಶ್‌, ಕೆರೆ ಮಾಲೀನ್ಯ ಸಮಸ್ಯೆ ಕುರಿತು ಖುದ್ದಾಗಿ ಪರಿಶೀಲಿಸಲಾಗಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ವಾಯ್ಸ್ ಆಫ್ ಸದಾಶಿವನಗರ ಸಂಘದ ಸದಸ್ಯರಾದ ಶಿಲ್ಪಾ ಜತ್ತಿ ಮಾತನಾಡಿ, ಕೆರೆ ಒಳಚರಂಡಿ ನೀರು ಹರಿಯುವುದನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿ ಸೂಕ್ತ ರೀತಿಯಲ್ಲಿ ಪ್ರಯತ್ನ ಕೈಗೊಂಡಿದ್ದು, ಇದು ಮತ್ತೆ ಪುನರಾರ್ತನೆಯಾಗಬಾರದು. ಕೆರೆ ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಳಿಸಿದ್ದು, ಇಲ್ಲಿ ನೀರು ಇಂಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೆರೆ ಅಭಿವೃದ್ಧಿ ಕುರಿತ ತಜ್ಞರ ತಂಡದ ಅಭಿಪ್ರಾಯ ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆ ಪುನಶ್ಚೇತನಕ್ಕೆ ನೂರಾರು ಕೋಟಿ ರೂ ವೆಚ್ಚ ಮಾಡಿದ್ದು, ಕಾಂಕ್ರಿಟೀಕರಣ ಬಿಟ್ಟರೆ ಬೇರೆ ಅಭಿವೃದ್ಧಿಯಾಗಿಲ್ಲ. ಈ ಕಾಮಗಾರಿಯನ್ನು ಯಾರಿಗೆ ವಹಿಸಿದ್ದರೂ ಸಹ ಕಾಮಗಾರಿ ಹಣ ಪಾವತಿ ಮಾಡಬಾರದು. ತನಿಖೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.

ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ಸ್ಯಾಂಕಿ ಕೆರೆ ಮಲ್ಲೇಶ್ವರಂ, ಯಶವಂತಪುರ, ಹೆಬ್ಬಾಳ ಭಾಗದ ಪ್ರಮುಖ ಜಲ ಮೂಲವಾಗಿದ್ದು, ಕೆರೆ ಉಳಿಸಿದರೆ ಜಲ ಮೂಲ ಉಳಿಸಲು ಸಾಧ್ಯ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಕೆರೆ ಸೇರುತ್ತಿಲ್ಲ. ಎಲ್ಲಾ ಕಾಲುವೆಗಳು ಮುಚ್ಚಿದ್ದು, ಹೂಳು ತೆಗೆದಿಲ್ಲ. ಹೀಗಾಗಿ ಕೆರೆ ನೀರು ನಿಂತಲ್ಲೇ ಕೊಳೆಯುತ್ತಿದ್ದು, ಈ ಬಗ್ಗೆ ಕೆರೆ ಪ್ರಾಧಿಕಾರದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿಯಾನದ ಸ್ವಯಂ ಸೇವಕ ಡಾ. ಮನು ಮತ್ತಿತರರು ಪಾಲ್ಗೊಂಡಿದ್ದರು.

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles