ಗುರುವಾಗುವುದಕ್ಕಿಂತ ನರ್ತಕಿಯಾದರೆ ಮನೋಲ್ಲಾಸ ಹೆಚ್ಚುತ್ತದೆ: ಡಾ.ನರ್ತಕಿ ನಟರಾಜನ್

ಬೆಂಗಳೂರು : ಮಲ್ಲೇಶ್ವರದ (Malleswara) ಸೇವಾ ಸದನ (Sevasadan) ರಂಗಮಂದಿರದಲ್ಲಿ ಕಲಾಗ್ರಣಿ ಪ್ರತಿಷ್ಠಾನ (Kalagrani Prathishtana), ನೆಲಮಂಗಲ ಮತ್ತು ನಂದಿತಾಳವಾದ್ಯ ಅಕಾಡೆಮಿ, (Nanditala Vadya Academy) ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಳವಾದ್ಯ ಪ್ರಸ್ತುತಿ ಮತ್ತು ತಾಯಿ ಮಗಳ ಭರತನಾಟ್ಯ ಜುಗಲ್ ಬಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅಂತರರಾಷ್ಟ್ರೀಯ ಖ್ಯಾತ ನೃತ್ಯ ಗುರು ಡಾ. ನರ್ತಕಿ ನಟರಾಜನ್ ಮತ್ತು ವಿದ್ವಾನ್ ಎಸ್.ವಿ.ಗಿರಿಧರ್ ರವರು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು ಭರತನಾಟ್ಯವನ್ನು ಕಲಿತು ಗುರುವಾಗುವುದಕ್ಕಿಂತ ನರ್ತಕಿಯಾದರೆ ಮನೋಲ್ಲಾಸ ಹೆಚ್ಚುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಂತರ ವೇದಿಕೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ತಾಳವಾದ್ಯ ಗುರು ವಿದ್ವಾನ್ ಎಸ್.ವಿ. ಗಿರಿಧರ್ ಅವರ ಶಿಷ್ಯಂದಿರಾದ ನಂದಿ ತಾಳವಾದ್ಯ ಅಕಾಡೆಮಿಯ ಕಲಾವಿದರು ಬಹಳ ಅಮೋಘವಾಗಿ ಮೃದಂಗ, ಘಟಂ, ವೀಣೆ, ವಯಲೀನ್ ಕೊನ್ನಕ್ಕೋಲ್, ಮೋರ್ಚಿಂಗ್ , ಡೋಲಕ್, ಸಂಯೋಜನೆ ಪ್ರೇಕ್ಷಕರ ಕಣ್ಮನ ಸೆಳೆಯಿತು. ನಂತರ ತಾಯಿ ಗುರುವಾಗಿ ಮಗಳು ಶಿಷ್ಯೆಯಾಗಿ ವಿದುಷಿ ಸೋನಿಯಾ ಪೊದುವಾಳ್ ಮತ್ತು ಕುಮಾರಿ ನಕ್ಷತ್ರರವರ ನೃತ್ಯಬಂಧಗಳು ಅನಾವರಣ ಗೊಳ್ಳುತ್ತಿದ್ದರೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ನೋಡಿ ಇಡಿ ಸಭಾಂಗಣವೇ ಚಪ್ಪಾಳೆಯ ಮಳೆಗರಿದದ್ದು ಅದ್ಭುತವೆನಿಸಿತು. ತಾಯಿಯ ಗರ್ಭದಲ್ಲಿದ್ದಾಗಲೆ ತಟ್ಡುಮಣೆಯ ಸಪ್ಪಳವನ್ನು ಕೇಳುತ್ತಾ ಹೆಜ್ಜೆಯ ಗೆಜ್ಜೆ ನಾದವನ್ನು ಆಲಿಸುತ್ತಾ ಭುವಿಗೆ ಬಂದ ಕುಮಾರಿ ನಕ್ಷತ್ರ ಶ್ರೀ ಪ್ರವೀಣ್ ಕುಲಕರ್ಣಿ ಮತ್ತು ವಿದುಷಿ ಸೋನಿಯಾ ಪೊದುವಾಳ್ ರವರ ಏಕೈಕ ಪುತ್ರಿ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬ ನಾಣ್ಣುಡಿಯಂತೆ ಮಗುವಾಗಿದ್ದಾಗಲೇ ನಕ್ಷತ್ರ ತಾಯಿಯನ್ನೇ ಗುರುವಾಗಿ ಸ್ವೀಕರಿಸಿ ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದು ಪ್ರಸ್ತುತ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಭರತನಾಟ್ಯದ ಜೊತೆಗೆ ಸಂಗೀತ, ವೀಣೆ ಮತ್ತು ಮೃದಂಗವನ್ನು ಅಭ್ಯಾಸ ಮಾಡುತ್ತಿರುವ ಈಕೆ ಮುಂದೆ ನಾಡಿನ ಹೆಸರಾಂತ ನೃತ್ಯಗಾರ್ತಿ ಯಾಗಲಿದ್ದಾಳೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ನರ್ತಕಿ ನಟರಾಜನ್ ರವರು ಶುಭ ಹಾರೈಸಿದ್ದಾರೆ.

ಸ್ಯಾಂಕಿ ಕೆರೆಗೆ ಲೋಕಾಯುಕ್ತ ತಂಡ ಭೇಟಿ: ಸಮಗ್ರ ವರದಿ ಸಲ್ಲಿಸಲು ತೀರ್ಮಾನ 

ಸ್ಯಾಂಕಿ ಕೆರೆಗೆ ಲೋಕಾಯುಕ್ತ ತಂಡ ಭೇಟಿ: ಸಮಗ್ರ ವರದಿ ಸಲ್ಲಿಸಲು ತೀರ್ಮಾನ

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles