ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ವತಿಯಿಂದ “ಆಹಾರ ಮತ್ತು ನೀರಿನಲ್ಲಿರುವ ಫರ್-ಪೋಲಿಫ್ಲೋರೋ ಆಲ್ಕೈಲ್ ಪದಾರ್ಥಗಳು ಹಾಗೂ ಮೈಕ್ರೋಪ್ಲಾಸ್ಟಿಕ್‌ಗಳು” (Poly-And Perfluoroalkyl Substances and Microplastics in Food and Water) ಎಂಬ ವಿಷಯದ ಕುರಿತು ಎರಡು ದಿನಗಳ ಪಾಲುದಾರರ ಸಮಾಲೋಚನಾ ರಾಷ್ಟ್ರೀಯ ಸಮ್ಮೇಳನವನ್ನು 2026ರ ಅಕ್ಟೋಬರ್ 29 ಮತ್ತು 30 ರಂದು ಬೆಂಗಳೂರಿನ ವಿದ್ಯಾರಣ್ಯಪುರ ಪೋಸ್ಟ್‌ನಲ್ಲಿರುವ ಅಕಾಡೆಮಿಯ ಕಛೇರಿಯಲ್ಲಿ (ಪ್ರೊ. ಯು.ಆರ್. ರಾವ್ ವಿಜ್ಞಾನ ಭವನ) ಆಯೋಜಿಸಲಾಗಿದೆ.
ಸಮ್ಮೇಳನದ ಪ್ರಮುಖ ವಿವರಗಳು:
ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಹಾಗೂ ಯುವ ಉದ್ಯಮದಾರರು ಭಾಗವಹಿಸಬಹುದಾಗಿದೆ.
ಪೋಸ್ಟರ್ ಪ್ರಬಂಧ ಮಂಡನೆ: ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಬಂಧವನ್ನು (Poster Research Paper) ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾದ ಅತ್ಯುತ್ತಮ ಸಂಶೋಧನಾ ಪ್ರಬಂಧಕ್ಕೆ ನಗದು ಬಹುಮಾನವನ್ನು ನೀಡಲಾಗುತ್ತದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು 2026 ನೇ ಅಕ್ಟೋಬರ್ 20 ರ ಒಳಗಾಗಿ https://forms.gle/G8jzPBRczYY5jYXWA  ರಿಜಿಸ್ಟ್ರೆಷನ್ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ 9620767819 ಅಥವಾ 974308419 ನ್ನು ಸಂಪರ್ಕಿಸಬಹುದು ಅಥವಾ ವೆಬ್‌ಸೈಟ್  https://kstacademy.in ನ್ನು ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಕರ್ನಾಟಕದ ಸರ್ಕಾರಿ ಸೇವೆಗಳಿಗೆ ಬಹುಭಾಷಾ ಮತ್ತು ಧ್ವನಿ ಆಧಾರಿತ ಪ್ರವೇಶದ ಯೋಜನೆ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಜನರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ...

ಕೆನಡಾದ ಲೇಖಕಿ ಆನ್ ಕಾರ್ಸನ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

ಕೆನಡಾದ ಕವಯಿತ್ರಿ, ಪ್ರಬಂಧಕಾರ್ತಿ ಮತ್ತು ಅನುವಾದಕಿ ಆನ್ ಕಾರ್ಸನ್ ಅವರಿಗೆ ಸಾಹಿತ್ಯ...

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ

ಕರ್ನಾಟಕದಲ್ಲಿ ಬರ ಪರಿಹಾರದ ವೆಚ್ಚ ಹೆಚ್ಚಳ: ಸರ್ಕಾರದ ಹಣಕಾಸಿಗೆ ಒತ್ತಡ ಕರ್ನಾಟಕದಲ್ಲಿ ಬರ...

ಆಂಧ್ರಪ್ರದೇಶದಲ್ಲಿ ತೀವ್ರ ಬರ: 21 ಜಿಲ್ಲೆಗಳ 388 ಮಂಡಲಗಳು ಬಾಧಿತ

ಆಂಧ್ರಪ್ರದೇಶ ಸರ್ಕಾರವು 21 ಜಿಲ್ಲೆಗಳ 388 ಮಂಡಲಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ...

ಹಿರಿಯ ನಟ ನಾನಾ ಪಾಟೇಕರ್ ನಿಧನ: ಚಿತ್ರರಂಗದಲ್ಲಿ ಶೋಕ

ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ಐಕಾನ್...

Topics

ಜಿಎಸ್‌ಟಿ ಅಧಿಕಾರಿಗಳ ಬಂಧನಾಧಿಕಾರ ರದ್ದು; ಪ್ರಾಸಿಕ್ಯೂಷನ್ ಮಿತಿ ₹1 ಕೋಟಿಯಿಂದ ₹5 ಕೋಟಿಗೆ ಏರಿಕೆ!

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ...

ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.10.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA.. ಆಯಣ: ದಕ್ಷಿಣಾಯನ AYANA:...

ಕೆಆರ್‌ಎಸ್ ಬೃಂದಾವನದಲ್ಲಿ ಕಾವೇರಿ ಆರತಿ ಕಾರ್ಯಕ್ರಮ – ಅ.16ರಿಂದ 21ರವರೆಗೆ ಆಯೋಜನೆ

ಮಂಡ್ಯ : ಶ್ರೀರಂಗಪಟ್ಟಣ(Sree Rangapatna) ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಬೃಂದಾವನ ಗಾರ್ಡನ್‌ನಲ್ಲಿ...

Related Articles