ಟಾಟಾ ಪವರ್ ಅರ್ಜಿ ವಾಪಸು-ವಿದ್ಯುತ್ ಖಾಸಗೀಕರಣ ವಿರೋಧಿ ಹೋರಾಟಕ್ಕೆ ಬಲ

ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣೆಯ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಕ್ಕೆ  ಟಾಟಾ ಪವರ್(TATA Power) ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು(Applicationj) ವಾಪಸ್ ಪಡೆದಿರುವುದು ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿ ಹೋರಾಟಕ್ಕೆ ಬಲ ತಂದುಕೊಟ್ಟಿದ್ದು, ವಿದ್ಯುತ್ ವಿತರಣೆ ಖಾಸಗೀಕರಣದ ವಿರುದ್ದ ಧ್ವನಿ ಎತ್ತಿದ ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ರೀತಿಯ ವಿದ್ಯುತ್ ಗ್ರಾಹಕರನ್ನು(Electricity Consumer)  ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ  ಅಭಿನಂದಿಸುತ್ತದೆ.

ಟಾಟಾ ಪವರ್(TATA Power) ಕಂಪನಿ ಅರ್ಜಿ ಸಲ್ಲಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ರೈತರು, ವಿದ್ಯುತ್ ಇಲಾಖೆ ನೌಕರರು ಹಾಗೂ ಎಲ್ಲಾ ರೀತಿಯ ಗ್ರಾಹಕರು ಅಲ್ಲದೇ ಸಾರ್ವಜನಿಕ ವಿದ್ಯುತ್ ನಿಗಮಗಳು ಕೂಡ ಆಕ್ಷೇಪಣೆ(Objection) ಸಲ್ಲಿಸಿದವು.  ಕೇವಲ ಒಂದು ತಿಂಗಳಿಗೂ ಕಡಿಮೆ ಅವಕಾಶದಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದು  ಅಭೂತಪೂರ್ವ(Unprecedented) ದಾಖಲೆಯಾಗಿದೆ. ನವ ಉದಾರವಾದಿ ಧೋರಣೆಗಳಿಗೆ ರಾಜ್ಯದ ಜನರಲ್ಲಿ ಇರುವ ಆಕ್ರೋಶಕ್ಕೆ ಇದು ಸಾಕ್ಷಿಯಾಗಿದೆ. ಇಂತಹ ದಾಖಲೆ ಪ್ರಮಾಣದಲ್ಲಿ ಆಕ್ಷೇಪಣೆ ಸಲ್ಲಿಕೆಯಾಗುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಸೇರಿದಂತೆ ರಾಜ್ಯದ ಎಲ್ಲಾ ರೈತ ಸಂಘಗಳು( Farmers’ Associations) ಹಾಗೂ ವಿದ್ಯುತ್ ಇಲಾಖೆ ನೌಕರರು ಮತ್ತು ಇಂಜಿನಿಯರ್ ಗಳ ಸಂಘಟನೆಗಳು ಶ್ರಮಿಸಿದ್ದವು ಸಾವಿರಾರು ಜಾಗೃತಿ ಸಭೆಗಳು-ಸಮಾವೇಶಗಳು-ಪ್ರತಿಭಟನೆಗಳನ್ನು ಸಂಘಟಿಸಿದ್ದವು. ಇಷ್ಟೊಂದು ಪ್ರಮಾಣದ ಆಕ್ಷೇಪಣೆ ಅರ್ಜಿಗಳನ್ನು ಕಂಡು ಬೆದರಿರುವ, TATA Power ಕಂಪನಿಯು ಮುಂಬರುವ ಪ್ರತಿರೋಧವನ್ನು(Resistance) ಊಹಿಸಿ ಬಂದ ದಾರಿಗೆ ಸುಂಕ ಇಲ್ಲದಂತೆ ಕಾಲ್ಕಿತ್ತಿದೆ. ಈ ಐತಿಹಾಸಿಕ ಗೆಲುವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಖಾಸಗೀಕರಣ ಪರ ಧೋರಣೆಗೆ ಎಚ್ಚರಿಕೆ ಗಂಟೆಯಾಗಿದೆ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡನೆ ಮಾಡಿರುವ ವಿದ್ಯುತ್ ತಿದ್ದುಪಡಿ ಕಾಯ್ದೆ 2025 ಅನ್ನು ವಾಪಸು ಪಡೆಯುವಂತೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗೆ ಬಹಳ ದೊಡ್ಡ ಸ್ಪೂರ್ತಿಯನ್ನು ಒದಗಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ.

ಪ್ರಾರಂಭದಲ್ಲಿ ಖಾಸಗೀಕರಣದ ಪರ ವಕಾಲತ್ತು ವಹಿಸಿದ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದ ಪ್ರತಿರೋಧದ ಹಿನ್ನೆಲೆಯಲ್ಲಿ ಅಂತಿಮವಾಗಿ ತನ್ನ ವಿದ್ಯುತ್ ವಿತರಣಾ ನಿಗಮಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು.  ವಿದ್ಯುತ್ ಕ್ಷೇತ್ರ ಒಂದು ಆಯಕಟ್ಟಿನ ವಲಯವಾಗಿದ್ದು, ಈ ಕ್ಷೇತ್ರದ ಯಾವುದೇ ಹಂತದಲ್ಲಿ ಖಾಸಗೀಕರಣ ಒಪ್ಪುವಂತಹದ್ದಲ್ಲ, ವಿದ್ಯುತ್ ವಲಯದ ಖಾಸಗೀಕರಣವು  ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನ ಕಲ್ಯಾಣಕ್ಕೆ ವಿರುದ್ದವಾಗಿದೆ. ವಿದ್ಯುತ್ ವಲಯದ ಸಂಪೂರ್ಣ ಖಾಸಗೀಕರಣವನ್ನು ಬೆಂಬಲಿಸುವ ಕಾರ್ಪೊರೇಟ್(Corporate) ಹಿತಾಸಕ್ತಿಯ ವಿದ್ಯುತ್ ತಿದ್ದುಪಡಿ ಕಾಯ್ದೆ 2025 ಅನ್ನು ಸಂಸತ್ತಿನಿಂದ ವಾಪಸು ಪಡೆಯುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು. ರಾಜ್ಯದಲ್ಲಿ ಈ ಜನ ವಿರೋಧಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಘೋಷಿಸಬೇಕು.  ರೈತರು ಸೇರಿದಂತೆ ಎಲ್ಲಾ ಗ್ರಾಹಕರಿಗೆ ಬಲವಂತವಾಗಿ ಹೇರಿಕೆ ಮಾಡುತ್ತಿರುವ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.

Hot this week

ಸರ್ಕಾರಿ ಎಸ್‍ಕೆಎಸ್‍ಜೆಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜುಲೈ 22 ರಂದು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು

ಬೆಂಗಳೂರು, ಜುಲೈ 04 : ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ...

ಕೆಪಿಎಸ್‍ಸಿ(KPSC) ವಿವಿಧ ಗ್ರೂಪ್ ‘ಸಿ'(Group -c) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಬೆಂಗಳೂರು, ಜುಲೈ 04 :ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿನ...

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ(Central Election) ಆಯೋಗಕ್ಕೆ ಮನವಿ ಎಸ್‍ಐಆರ್(SIR) ದುರ್ಬಳಕೆಗೆ...

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ ಮಕ್ಕಳ ಮೇಲಿನ ದೈಹಿಕ ಹಿಂಸೆ ಪ್ರಕರಣ – ಆರೋಪಿಗಳ ಬಂಧನ

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ(Day care Centre) ಮಕ್ಕಳ ಮೇಲಿನ ದೈಹಿಕ ಹಿಂಸೆ...

ಅಕ್ರಮ ಗಣಿಗಾರಿಕೆಗೆ ಕಡಿವಾಣ- ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಫ್ರೀಡಂ ಪಾರ್ಕ್‌ನಲ್ಲಿ...

Topics

ವೆಲ್ಲೂರು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಷೇಶ ಪೂಜೆ ಸಲ್ಲಿಸಿದ ರಾಜ್ಯಪಾಲರು

ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ , ರಾಜ್ಯಪಾಲರಾದ ಶ್ರೀ...

Related Articles