ಬೆಂಗಳೂರು, ಜುಲೈ 04 :ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಪದವಿ ಪೂರ್ವ ಮಟ್ಟದ ಹೈದ್ರಾಬಾದ್ ಕರ್ನಾಟಕ(Hyderbad-Karnataka) ವೃಂದದ ಗ್ರೂಪ್ ‘ಸಿ'(Group-c) ಹುದ್ದೆಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಟ್-ಆಫ್(Cut off) ಅಂಕಗಳನ್ನು ಪ್ರಕಟಿಸಿದೆ.
ದಿನಾಂಕ 15-03-2024 ರ ಅಧಿಸೂಚನೆ ಸಂಖ್ಯೆ: ಇ(2)/2023-24/3495 ರ ಅನ್ವಯ, ವಿವಿಧ ಇಲಾಖೆಯ ಹುದ್ದೆಗಳಿಗೆ 02.07.2026 ರಂದು ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಿ ಆಯೋಗದ ಅಧಿಕೃತ ವೆಬ್‍ಸೈಟ್(Website) http://kpsc.kar.nic.in/Listsನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಅಂತರ್ಜಲ(Internet) ನಿರ್ದೇಶನಾಲಯದಲ್ಲಿ ಕಿರಿಯ ಇಂಜಿನಿಯರ್ 05 ಹುದ್ದೆಗಳು, ಪೌರಾಡಳಿತ(Municipal Administration) ನಿರ್ದೇಶನಾಲಯ – ಮಹಾನಗರ ಪಾಲಿಕೆಯಲ್ಲಿನ (ನಗರ/ಸ್ಥಳೀಯ ಸಂಸ್ಥೆ ಮತ್ತು BBMP ಹೊರತುಪಡಿಸಿ) ಕಿರಿಯ ಇಂಜಿನಿಯರ್ – CIVIL 07 ಹುದ್ದೆಗಳು, ಕಿರಿಯ ಇಂಜಿನಿಯರ್ (Electrical) 01 ಹುದ್ದೆ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು 11 ಹುದ್ದೆಗಳು, ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸಭೆ/ಪುರ ಸಭೆ/ಪಟ್ಟಣ ಪಂಚಾಯಿತಿ) ಕಿರಿಯ ಇಂಜಿನಿಯರ್ – ಸಿವಿಲ್ 08 ಹುದ್ದೆಗಳು, ಸಹಾಯಕ ನೀರು ಸರಬರಾಜು ಆಪರೇಟರ್ 05 ಹುದ್ದೆಗಳು, ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು 28 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ 20 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಈ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಆಯ್ಕೆಪಟ್ಟಿ ಪ್ರಕಟಗೊಂಡ ದಿನಾಂಕದಿಂದ 07 ದಿನಗಳೊಳಗಾಗಿ ಸಂಬಂಧಿತ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ, ಲಿಖಿತ ರೂಪದಲ್ಲಿ ಆಧಾರ ಸಹಿತವಾಗಿ “ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001” ಇವರಿಗೆ ಸಲ್ಲಿಸಬೇಕು.
ಈ ಹುದ್ದೆಗಳಿಗೆ ಆಯ್ಕೆಯಾಗಲು ಇಚ್ಛಿಸದ ಅಭ್ಯರ್ಥಿಗಳು ತಮ್ಮ ಸ್ವ-ಇಚ್ಛಾ ಹೇಳಿಕೆಯನ್ನು(Voluntary Statement) ಸಹ ಇದೇ 07 ದಿನಗಳ ಅವಧಿಯೊಳಗೆ ಆಯೋಗದ ಕಾರ್ಯದರ್ಶಿಯವರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
ನಿಗದಿತ ಕಾಲಾವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳು ಅಥವಾ ಸ್ವ-ಇಚ್ಛಾ ಹೇಳಿಕೆಗಳನ್ನು ಆಯೋಗವು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
