ಅಕ್ರಮ ಗಣಿಗಾರಿಕೆಗೆ ಕಡಿವಾಣ- ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು, ಜುಲೈ 4: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ(Illegal Stone Mining) ತಕ್ಷಣ ಕಡಿವಾಣ ಹಾಕಬೇಕು, ಕ್ವಾರಿ ದುರಂತಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ(Strict action) ಕೈಗೊಳ್ಳಬೇಕು ಎಂದು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ವತಿಯಿಂದ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ(Freedom park) ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ(Protest) ಸುಮಾರು 300ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ(Outrage) ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನ.ಎಂ. ವಹಿಸಿದ್ದರು. ಯುವ ಘಟಕದ ರಾಜ್ಯಾಧ್ಯಕ್ಷ ಪ್ರಶಾಂತ್, ಶಂಕರ ರಾಮಲಿಂಗಯ್ಯ ಸೇರಿದಂತೆ ದಲಿತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಉದ್ದೇಶಿಸಿ ಮನವಿ ಪತ್ರವನ್ನು(Memorandom)
ಸಲ್ಲಿಸಲಾಯಿತು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಭವಿಸುತ್ತಿರುವ ದುರಂತಗಳಲ್ಲಿ ಏಳು ಮಂದಿ ಕಾರ್ಮಿಕರು(Workers) ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ವಿಷಾದನೀಯ(Regrettable)
. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿಯಲ್ಲಿ ಕ್ವಾರಿ ಕಾರ್ಮಿಕರ ಸಾವಿನ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಬೇಕು, ಮಾದಾಪಟ್ನ ಪ್ರದೇಶದ ಕ್ವಾರಿ ಮಾಲೀಕರು ಹಾಗೂ ಸಂಬಂಧಿತ ಗುತ್ತಿಗೆದಾರರನ್ನು ತಕ್ಷಣ ಬಂಧಿಸಬೇಕು, ಕರ್ತವ್ಯ ಲೋಪ ಎಸಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಿಸಬೇಕು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ಒದಗಿಸಬೇಕು ಮತ್ತು ಕ್ವಾರಿ ಕಾರ್ಮಿಕರ ಜೀವ ರಕ್ಷಣೆಗೆ ಕಠಿಣ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Hot this week

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ(Central Election) ಆಯೋಗಕ್ಕೆ ಮನವಿ ಎಸ್‍ಐಆರ್(SIR) ದುರ್ಬಳಕೆಗೆ...

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ ಮಕ್ಕಳ ಮೇಲಿನ ದೈಹಿಕ ಹಿಂಸೆ ಪ್ರಕರಣ – ಆರೋಪಿಗಳ ಬಂಧನ

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ(Day care Centre) ಮಕ್ಕಳ ಮೇಲಿನ ದೈಹಿಕ ಹಿಂಸೆ...

*ಶಾಸಕ ಬಿ.ಝಡ್ . ಜಮೀರ್ ಅಹಮದ್ ಖಾನ್ ಅವರಿಗೆ ಅಹಿಂದ ಕೋಟಾದಲ್ಲಿ ಸಚಿವ ಸ್ಥಾನ – ವಿನೂತನ ಪ್ರತಿಭಟನೆ*

*ಶಾಸಕ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಅಹಿಂದ ಕೋಟಾದಲ್ಲಿ ಸಚಿವ...

ಶ್ರೀ ಬಿ. ಗಜೇಂದ್ರ ಅವರ ನೇತೃತ್ವದ ಪ್ರತಿನಿಧಿ ಮಂಡಳಿಯು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರನ್ನು ಲೋಕಭವನದಲ್ಲಿ ಭೇಟಿ.

ಕರ್ನಾಟಕ ರಾಜ್ಯ ಜ್ಯೋತಿಷ್ಯರು ಹಾಗೂ ಜ್ಯೋತಿಷ್ಯ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ...

ವೆಲ್ಲೂರು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಷೇಶ ಪೂಜೆ ಸಲ್ಲಿಸಿದ ರಾಜ್ಯಪಾಲರು

ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ , ರಾಜ್ಯಪಾಲರಾದ ಶ್ರೀ...

Topics

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ(Central Election) ಆಯೋಗಕ್ಕೆ ಮನವಿ ಎಸ್‍ಐಆರ್(SIR) ದುರ್ಬಳಕೆಗೆ...

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ ಮಕ್ಕಳ ಮೇಲಿನ ದೈಹಿಕ ಹಿಂಸೆ ಪ್ರಕರಣ – ಆರೋಪಿಗಳ ಬಂಧನ

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ(Day care Centre) ಮಕ್ಕಳ ಮೇಲಿನ ದೈಹಿಕ ಹಿಂಸೆ...

ವೆಲ್ಲೂರು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಷೇಶ ಪೂಜೆ ಸಲ್ಲಿಸಿದ ರಾಜ್ಯಪಾಲರು

ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ , ರಾಜ್ಯಪಾಲರಾದ ಶ್ರೀ...

ನಾಡಪ್ರಭು ಕೆಂಪೇಗೌಡರ ದಿನಾಚರಣೆ : ರಾಜಾಜಿನಗರ ವಿಧಾನಸಭಾ ಕ್ಷೇತ್ರ

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ 517ನೇ ನಾಡಪ್ರಭು...

ಎಸ್‌ಐಆರ್‌ ಅರ್ಜಿಗಳು ಬೀದಿಯಲ್ಲಿ ವಿತರಣೆ – ಕಾಂಗ್ರೆಸ್‌ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಎಸ್‌ಐಆರ್‌ ಅರ್ಜಿಗಳು ಬೀದಿಯಲ್ಲಿ ವಿತರಣೆ, ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ...

ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು

ಜಿಬಿಎ ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ನಿಲ್ಲಿಸಲು ಶೋಭಾ ಕರಂದ್ಲಾಜೆ ಆಗ್ರಹಬೆಂಗಳೂರು: ಜಿಬಿಎ(GBA)...

Related Articles