ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ 517ನೇ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಮತ್ತು ಭವ್ಯ ರಥಯಾತ್ರೆ ಕಾರ್ಯಕ್ರಮ.
ಅದಿಚುಂಚನಗಿರಿ ಶಾಖ ಮಠದ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರು,(Sri Sri Sri Sumyanatha Swamiji of Adichunchanagiri Shakha Math) ಶಾಸಕರಾದ ಎಸ್.ಸುರೇಶ್ ಕುಮಾರ್ (S. Suresh kumar) ರವರು ದೀಪ ಬೆಳಗಿಸಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭವ್ಯ ರಥಯಾತ್ರೆಗೆ ಚಾಲನೆ ನೀಡಿದರು.
ಕಾರ್ಯಪಾಲಕ ಅಭಿಯಂತರಾದ ಮಂಜುನಾಥ್ , ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಶೈಲಾ, ಶ್ರೀಧರ್ ಕೊಟ್ಟರೆರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಸೌಮ್ಯನಾಥಸ್ವಾಮೀಜಿರವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ದಿನಾಚರಣೆ ರಾಜ್ಯ ಸರ್ಕಾರ, ಪಾಲಿಕೆ ಮತ್ತು ಸಂಘ, ಸಂಸ್ಥೆಗಳು ಅದ್ದೂರಿಯಾಗಿ ಅಚರಣೆ ಮಾಡುತ್ತಿದ್ದಾರೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರುನಲ್ಲಿ ದೇಶಾದ್ಯಂತ ಎಲ್ಲ ನಾಗರಿಕರು ಇಲ್ಲಿ ವಾಸ ಮಾಡುತ್ತಿದ್ದಾರೆ, ಉತ್ತಮ ವಾತವರಣ, ಪರಿಸರ, ಆರೋಗ್ಯ ಶಿಕ್ಷಣದಲ್ಲಿ ಮುಂದುವರೆದಿದೆ, ಕೆಂಪೇಗೌಡ ಆಡಳಿತದಲ್ಲಿ ಬೆಂಗಳೂರುನಗರ 12ಡಿಗ್ರಿ ವಾತವರಣವಿತ್ತು.
ಕೆಂಪೇಗೌಡರ ಜಾತಿ ಭೇದವಿಲ್ಲದೇ ಪ್ರಜೆಗಳನ್ನು ಸರಿಸಮಾನವಾಗಿ ಕಂಡರು. ಬರಿ ಕೈಯಲ್ಲಿ ಬಂದರು ಬೆಂಗಳೂರುನಗರದಲ್ಲಿ ಜೀವನ ಮಾಡಬಹುದು. ಒಳ್ಳೆಯ ಕೆಲಸ, ಸಹಾಯ ಮಾಡಿದವರಿಗೆ ನಾವು ಕೃತಜ್ಞತಾರಾಗಿ ಇರಬೇಕು .ನಾಡಪ್ರಭು ಕೆಂಪೇಗೌಡರಿಗೆ ನಿರ್ಮಾಣ ಮಾಡಿದ ಬೆಂಗಳೂರು ಉಳಿಸಿ, ಬೆಳಸಬೇಕು ಎಂದು ಹೇಳಿದರು.
ಎಸ್.ಸುರೇಶ್ ಕುಮಾರ್ ರವರು ನಾವು ಹುಟ್ಟಿ ಬೆಳದ, ಊರು ನಮಗೆ ಆಶ್ರಯ ಕೊಟ್ಟ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು ಒಬ್ಬ ದಾರ್ಶನಿಕ ಅಂತಃಕರಣದಿಂದ ಆಡಳಿತ ಮಾಡಿದರು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಇಂದು ಬೆಂಗಳೂರು ವಿಶ್ವದಲ್ಲಿ ಅತ್ಯಂತ ನಗರ ಎಂಬ ಕೀರ್ತಿಗಳಿಸಿದೆ, ನಗರದ ನಿವಾಸಿಗಳು ನಾವು ಎಂಬ ಹೆಮ್ಮೆಯ ಸಂಗತಿಯಾಗಿದೆ.
ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಪುಷ್ಪಲತಾ ರಾಜಣ್ಣ, ವಿಜಯಕುಮಾರ್, ಹೆಚ್.ಕೃಷ್ಣಪ್ಪ, ದೀಪ ನಾಗೇಶ್, ಪ್ರತಿಮಾರವರು ಮತ್ತು ಸ್ಥಳೀಯ ಬಿಜೆಪಿ ಮುಖಂಡರುಗಳು ಭಾಗವಹಿಸಿದ್

