ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿ ಆರಂಭ

ಬೆಂಗಳೂರು, ಜುಲೈ 03: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ 2026-27ನೇ  ಶೈಕ್ಷಣಿಕ ಸಾಲಿಗೆ ಜುಲೈ ಆವೃತ್ತಿ ಪ್ರವೇಶಾತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸ್ನಾತಕ ಕೋರ್ಸ್‍ಗಳಾದ BA, B.com, B.Sc., BBA, BCA, BSW, ಬಿ.ಲಿಬ್.ಐ.ಎಸ್.ಸಿ, ಸ್ನಾತಕೋತ್ತರ ಕೋರ್ಸ್‍ಗಳಾದ M.A., M.Com., M.Sc., MBA, ಎಂ.ಲಿಬ್.ಐ.ಎಸ್.ಸಿ, M.Sc., M.Sw.,  ಸರ್ಟಿಫಿಕೇಟ್,  ಡಿಪ್ಲೋಮಾ,  ಮತ್ತು ಸ್ನಾತಕ ಪೂರ್ವ ಸರ್ಟಿಫಿಕೇಟ್ ಶಿಕ್ಷಣಗಳಿಗೆ ಜೂನ್ 30 ರಿಂದ ಪ್ರವೇಶಾತಿ ಪ್ರಾರಂಭಿಸಲಾಗಿದೆ.

B.P.L.card ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್(Defence) ಅಥವಾ ಮಾಜಿ ಸೈನಿಕ ವಿದ್ಯಾರ್ಥಿಗಳು, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ KSRTC, BMTC, NWKRTC, KKRTC  ನೌಕರರುಗಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸೌಲಭ್ಯವಿರುತ್ತದೆ. ಕೋವಿಡ್‍ನಿಂದ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ (ಜಿ.ಎಡ್ ಮತ್ತು ಎಂ.ಬಿ.ಎ. ಕೋರ್ಸ್‍ಗಳನ್ನು ಹೊರತುಪಡಿಸಿ) ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ(full fee waiver) ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.ksoumysuru.ac.in ನಲ್ಲಿ  KSOU Admission Portal ಮೂಲಕ ಈ ಪದವಿಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಪರಿಶೀಲಿಸಿದ ನಂತರ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ, ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ-04, ನಂ.121, 2ನೇ ಮಹಡಿ, ಹೊಸೂರು ಮುಖ್ಯ ರಸ್ತೆ, ಮಡಿವಾಳ, ಬೆಂಗಳೂರು – 560068 ಅಥವಾ  ದೂರವಾಣಿ ಸಂಖ್ಯೆಗಳಾದ 080-23158888, 8904036090, 6363390600  ಅನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ವಾಟರ್ ಮಾಫಿಯದಲ್ಲಿ ಭಾಗಿ ಕಂದಾಯ ವಸೂಲಿಗಾರ ಶಶಿಕಾಂತ್ ಬೆಳ್ಳೂರು ಅಮಾನತ್ತು ಮಾಡಿ-ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಒತ್ತಾಯ

ಬೆಂಗಳೂರು: ಶಶಿಕಾಂತ್ ಬೆಳ್ಳೂರ ಕಂದಾಯ(Revenue) ವಸೂಲಿಗಾರರಾಗಿ ವಾರ್ಡ್ -41ರಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇವರ...

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 03 :ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ (Higher Education)...

ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆ

ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಬೆಂಗಳೂರು, ಜುಲೈ 03...

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಬೆಂಗಳೂರು, ಜುಲೈ 03 : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಕರ್ನಾಟಕ...

ಆದಿತ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅದ್ಧೂರಿಯಾಗಿ ಗುರು ವಂದನಾ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ

ಆದಿತ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅದ್ಧೂರಿಯಾಗಿ ಗುರು ವಂದನಾ(Salutation to the...

Topics

ಇಸ್ರೋ ಕೇಂದ್ರ ಕಛೇರಿಗೆ ಬಂದಿರುವ ಹುಸಿ ಬಾಂಬ್ ಬೆದರಿಕೆ ಸಂದೇಶದ ಪರಿಶೀಲನೆ

ಇಸ್ರೋ ಕೇಂದ್ರ ಕಛೇರಿಗೆ ಬಂದಿರುವ ಹುಸಿ ಬಾಂಬ್ ಬೆದರಿಕೆ(|Threat) ಸಂದೇಶದ ಪರಿಶೀಲನೆಸಂಜಯನಗರ...

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು

ತಿರುಪತಿ : ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ (Tirumala Venkaeswara of...

ಫಸಲ್ ಬಿಮಾ ಯೋಜನೆ :ಬೆಳೆ ವಿಮೆ ಪ್ರಸ್ತಾವನೆಗಳಿಗೆ ಬೆಳೆ ಹೊಂದಾಣಿಕೆ ಮಾಡಲು ಅನುಮತಿ ನೀಡಿ ಆದೇಶ

ಬೆಂಗಳೂರು : 2026-27ನೇ ಸಾಲಿನಿಂದ ಅನ್ವಯವಾಗುವಂತೆ ಕೆಲವು ವಿನಾಯಿತಿಗಳು ಹಾಗೂ ಷರತ್ತುಗಳನ್ನು...

Related Articles