ಫಸಲ್ ಬಿಮಾ ಯೋಜನೆ :ಬೆಳೆ ವಿಮೆ ಪ್ರಸ್ತಾವನೆಗಳಿಗೆ ಬೆಳೆ ಹೊಂದಾಣಿಕೆ ಮಾಡಲು ಅನುಮತಿ ನೀಡಿ ಆದೇಶ

ಬೆಂಗಳೂರು : 2026-27ನೇ ಸಾಲಿನಿಂದ ಅನ್ವಯವಾಗುವಂತೆ ಕೆಲವು ವಿನಾಯಿತಿಗಳು ಹಾಗೂ ಷರತ್ತುಗಳನ್ನು ಅಳವಡಿಸಿಕೊಂಡು ಆಯಾ ಹಂಗಾಮುಗಳ ಬೆಳೆ ಸಮೀಕ್ಷೆ ವರದಿಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ(Pradhan Mantri Fasal BimYojana) ಆಯಾ ಹಂಗಾಮುಗಳಲ್ಲಿ ನೋಂದಣಿಯಾದ ಬೆಳೆ ವಿಮೆ ಪ್ರಸ್ತಾವನೆಗಳಿಗೆ ಬೆಳೆ ಹೊಂದಾಣಿಕೆ ಮಾಡಲು ಅನುಮತಿ ನೀಡಿ ಕೃಷಿ ಇಲಾಖೆಯು ಆದೇಶಿಸಿದೆ.
ಪಾಳು/ಕಟಾವು ಪ್ರದೇಶ ಎಂದು ಬೆಳೆ ಸಮೀಕ್ಷೆಯ ವರದಿಯಲ್ಲಿ ಕಂಡು ಬಂದ ಸರ್ವೆ ನಂಬರ್ ಗಳ ಬೆಳೆ ವಿಮೆಯಡಿ ನೋಂದಾಯಿಸಿದ ಪ್ರಸ್ತಾವನೆಗಳಿಗೆ ವಿನಾಯಿತಿ ಇರುವುದಿಲ್ಲ.

ಬೆಳೆ ಸಮೀಕ್ಷೆಯ ವರದಿಯಲ್ಲಿ ದಾಖಲಾದ ಬೆಳೆಯ ಹೆಸರಿನ ಜೊತೆಗೆ ಬೆಳೆ ಸಮೀಕ್ಷೆಯ ವರದಿಯಲ್ಲಿ ದಾಖಲಾದ ಬೆಳೆಯ ವಿಸ್ತೀರ್ಣವನ್ನೂ ಪರಿಗಣಿಸಿ ಹೊಂದಾಣಿಕೆ ಮಾಡಲಾಗುವುದು. ವಿಮೆ ಮಾಡಿಸಲಾದ ವಿಸ್ತೀರ್ಣಕ್ಕಿಂತ ಬೆಳೆ ಸಮೀಕ್ಷೆಯ ಪ್ರಕಾರ ಬಿತ್ತನೆ ಮಾಡಿದ ವಿಸ್ತೀರ್ಣವು ಕಡಿಮೆಯಿದ್ದಲ್ಲಿ ಗರಿಷ್ಠ 25% ಅಥವಾ 1 ಎಕರೆ ಹೆಚ್ಚುವರಿ ಪ್ರದೇಶದವರಿಗೆ ಮಾತ್ರ ವಿನಾಯಿತಿಯಿರುತ್ತದೆ.

ಬೆಳೆ ವಿಮೆ ಪ್ರಸ್ತಾವನೆಗಳಲ್ಲಿ ಯಾವುದಾದರೂ ಒಂದು ಹಿಸ್ಸಾದಲ್ಲಿ ವಿಮೆಗೆ ನೊಂದಾಯಿಸಿದ್ದು, ಬೆಳೆ ಸಮೀಕ್ಷೆ ಪ್ರಕಾರ ಅದೇ ಹಿಸ್ಸಾದಲ್ಲಿ ಬೆಳೆ ಬೆಳೆದಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು. ಒಂದು ವೇಳೆ ನೋಂದಾಯಿತ ಬೆಳೆಯು ಅದೇ ಸರ್ವೆ ನಂಬರ್ ಇತರೆ ಹಿಸ್ಸಾಗಳಲ್ಲಿ ಕಂಡು ಬಂದಲ್ಲಿ, ಅಂತಹ ಪ್ರಸ್ತಾವನೆಗಳಿಗೆ ವಿನಾಯಿತಿ ಇರುವುದಿಲ್ಲ.

ಬೆಳೆ ವಿಮೆಯಡಿ ಒಂದು ಪ್ರಸ್ತಾವನೆಯಲ್ಲಿ ಒಂದಕ್ಕಿಂತ ಹೆಚ್ಚು ಸರ್ವೇ ನಂಬರ್ ಗಳು ಇದ್ದಲ್ಲಿ, ಬೆಳೆ ವಿಮೆಯಡಿ ನೊಂದಾಯಿಸಲ್ಪಟ್ಟ ಎಲ್ಲಾ ಸರ್ವೆ ನಂಬರ್ ಗಳಲ್ಲೂ ಸಹ ಬೆಳೆ ಸಮೀಕ್ಷೆ ಪ್ರಕಾರ ಬೆಳೆ ದಾಖಲಾದಲ್ಲಿ ಮಾತ್ರ ಪರಿಗಣಿಸಲಾಗುವುದು. ಒಂದು ವೇಳೆ ಯಾವುದೇ ಒಂದು ಸರ್ವೆ ನಂಬರ್ ನಲ್ಲಿ ನೋಂದಾಯಿಸಿದ ಬೆಳೆಯು ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಯೊಂದಿಗೆ ತಾಳೆಯಾಗದಿದ್ದಲ್ಲಿ ಅಂತಹ ಸರ್ವೇ ನಂಬರ್ ಗಳನ್ನು ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಹವಲ್ಲವೆಂದು ಪರಿಗಣಿಸತಕ್ಕದ್ದು.

ಯಾವುದೇ ಗ್ರಾಮದ ಗಣಕೀಕೃತ ಗ್ರಾಮ ನಕ್ಷೆ ಲಭ್ಯತೆ ಇಲ್ಲದಿದ್ದಲ್ಲಿ / Geo-referenced map  ಇಲ್ಲದಿದ್ದಲ್ಲಿ/ ಗ್ರಾಮ ನಕ್ಷೆ ಬೆಳೆ ಸಮೀಕ್ಷೆಗೆ ಬಳಕೆ ಮಾಡದಿದ್ದಲ್ಲಿ, ವಿಮೆಗೆ ನೋಂದಾಯಿಸಿದ ಬೆಳೆಯನ್ನು ಬೆಳೆ ಸಮೀಕ್ಷೆ ವರದಿಯೊಂದಿಗೆ ಹೋಲಿಸಿ ಪರಿಗಣಿಸಲು ಸಾಧ್ಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ಅಂತಹ ಗ್ರಾಮಗಳ ಎಲ್ಲಾ ಪ್ರಸ್ತಾವನೆಗಳನ್ನು ಸಂಪೂರ್ಣವಾಗಿ ಸಿಂಧುವೆಂದು ಪರಿಗಣಿಸತಕ್ಕದ್ದು.
ಬೆಳೆ ಸಮೀಕ್ಷೆಯಲ್ಲಿ ಒಂದು ಭಾಗದಲ್ಲಿ “ಕೃಷಿಯೇತರ ಭೂಮಿ” ಇದ್ದು ಉಳಿದ ಭಾಗಗಳಲ್ಲಿ ಬೆಳೆ ಬೆಳೆದಿದ್ದರೆ ಅಂತಹ ಪ್ರಸ್ತಾವನೆಗಳಲ್ಲಿನ ಬೆಳೆಗಳು ಯಾವುದಾದರು ವಿನಾಯತಿಗಳ ಅಡಿಯಲ್ಲಿ ಬಂದಲ್ಲಿ ಅಂತಹ ಪ್ರಸ್ತಾವನೆಗಳನ್ನು ಸಿಂಧುವೆಂದು ಪರಿಗಣಿಸತಕ್ಕದ್ದು.

ಬೆಳೆ ಸಮೀಕ್ಷೆ ವರದಿಯಲ್ಲಿರುವ ಬೆಳೆ ಹಾಗೂ ವಿಮೆಗೆ ನೋಂದಾಯಿಸಿದ ಬೆಳೆಯನ್ನು ಹೋಲಿಕೆ ಮಾಡಿದಾಗ ನೀರಾವರಿ ಪ್ರಕಾರವನ್ನು (ಮಳೆಯಾಶ್ರಿತ ಅಥವಾ ನೀರಾವರಿ) ಪರಿಗಣಿಸಲಾಗುವುದಿಲ್ಲ.

ಬಿತ್ತನೆ ವೈಫಲ್ಯದಿಂದ Prevented Sowing risk  ಘೋಷಿಸಿದಲ್ಲಿ, ಸದರಿ ವಿಮಾ ಘಟಕದಲ್ಲಿ ಬೆಳೆ ಬಿತ್ತನೆಯಾಗಿರುವುದಿಲ್ಲ ಮತ್ತು ವಿಮೆಗೆ ನೋಂದಾಯಿಸಿದ ಬೆಳೆಯನ್ನು ಬಿತ್ತನೆ ಮಾಡುವ ಯಾವುದೇ ಸಾಧ್ಯತೆಗಳಿರುವುದಿಲ್ಲ. ಇದಲ್ಲದೆ ಅಂತಹ ಪ್ರಸ್ತಾವನೆಗಳಿಗೆ ಬೆಳೆ ಹಂಗಾಮಿಗಿಂತ ಮುಂಚಿತವಾಗಿಯೇ ವಿಮೆ ಇತ್ಯರ್ಥಪಡಿಸಲಾಗಿರುತ್ತದೆ.

ವಿಮಾ ಘಟಕದಡಿ ವಿಮೆಗೆ ನೋಂದಾಯಿಸಿದ ಬೆಳೆಯನ್ನು “ಮಧ್ಯಂತರ ಪ್ರತಿಕೂಲತೆಗಳು/ವಿಪತ್ತುಗಳು” ಅಡಿ ಬೆಳೆ ವಿಮೆ ಪರಿಹಾರಕ್ಕಾಗಿ ಪರಿಗಣಿಸಿದ್ದಲ್ಲಿ ಅಂತಹ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ಮಾಹಿತಿಯೊಂದಿಗೆ ಹೋಲಿಕೆ ಮಾಡದೆ ಸಿಂಧುವೆಂದು ಪರಿಗಣಿಸತಕ್ಕದ್ದು.
ಮಧ್ಯಂತರ ಪ್ರತಿಕೂಲ ಬಂದಂತಹ/ ಅನುಭವಿಸುವಂತಹ ಪ್ರಕರಣಗಳಿಗೆ ವಿನಾಯಿತಿ ನೀಡಿದಂತೆ Localized calamity  ಮತ್ತು ಕೊಯ್ಲಿನೋತ್ತರ ಪ್ರತಿಕೂಲಗಳಡಿ (Post harvest Loss)  ಪರಿಗಣಿಸಲಾಗುವ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ಮಾಹಿತಿಯೊಂದಿಗೆ ಹೋಲಿಕೆ ಮಾಡದೆ ಸಿಂಧುವೆಂದು ಪರಿಗಣಿಸತಕ್ಕದ್ದು. ಬಹುವಾರ್ಷಿಕ ಬೆಳೆಗಳಿಗೆ ಸಂಬಂಧಿಸಿದಂತೆ, ನೋಂದಣಿ ಸಮಯದಲ್ಲಿಯೇ ಬೆಳೆ ವಿಮೆಯಡಿ ನೋಂದಾಯಿತ ಬೆಳೆಯನ್ನು ಬೆಳೆ ಸಮೀಕ್ಷೆ ವರದಿಯೊಂದಿಗೆ ತಾಳಮಾಡಿಕೊಳ್ಳಲಾಗುವುದು. 

 ಬೆಳೆ ಸಮೀಕ್ಷೆಯೊಂದಿಗೆ ತಾಳೆಯಾಗದ ಹಾಗೂ ಯಾವುದೇ ವಿನಾಯಿತಿ ದೊರಕದ ಪ್ರಸ್ತಾವನೆಗಳನ್ನು ಪರಿಶೀಲನೆಗೆ ಒಳಪಡಿಸಬೇಕಾಗಿದ್ದು, ಸದರಿ ಪ್ರಕ್ರಿಯೆಯ ಪ್ರಮಾಣಿತ ಕಾರ್ಯವಿಧಾನಗಳು (SOP)  :

ಸಾಲ ಪಡೆದ ರೈತರ ಪ್ರಕರಣಗಳನ್ನು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳು ಹಾಗೂ ಸಾಲ ಪಡೆಯದ ರೈತರ ಪ್ರಕರಣಗಳನ್ನು ಕೃಷಿ ಬೆಳೆಗಳಿಗೆ ತಾಲ್ಲೂಕು ಕೃಷಿ ಅಧಿಕಾರಿಗಳು ಮತ್ತು ತೋಟಗಾರಿಕೆ ಬೆಳೆಗಳಿಗೆ ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳು ಪರಿಶೀಲನೆ ಮಾಡುವುದು. ಪರಿಶೀಲನಾ ಅಧಿಕಾರಿಗಳು ಬೆಳೆ ಸಮೀಕ್ಷೆ ವಿವರ ಮತ್ತು ಛಾಯಾಚಿತ್ರವನ್ನು ಪರಿಶೀಲಿಸಿ ಒಂದು ವೇಳೆ ವಿಮೆಗೆ ನೋಂದಾಯಿಸಿದ ಬೆಳೆ ಛಾಯಾಚಿತ್ರದಲ್ಲಿ ಕಂಡುಬಂದಲ್ಲಿ, ಅಂತಹ ಪ್ರಸ್ತಾವನೆಗಳನ್ನು ಸಿಂಧುವೆಂದು ಪರಿಗಣಿಸಿ ಸ್ವೀಕರಿಸಲು ವಿಮಾ ಸಂಸ್ಥೆಯವರಿಗೆ ಶಿಫಾರಸ್ಸು ಮಾಡುವುದು.

ಒಂದು ವೇಳೆ ಬೆಳೆ ಸಮೀಕ್ಷೆ ಛಾಯಾಚಿತ್ರದಲ್ಲಿ ವಿಮೆಗೆ ಒಳಪಟ್ಟ ಬೆಳೆ ಕಾಣಿಸದೆ ಇದ್ದಲ್ಲಿ ಹಾಗೂ ವಿಮೆಗೆ ನೋಂದಾಯಿಸಿದ ಬೆಳೆ ಋತುಮಾನಿಕ ಬೆಳೆಯಾಗಿದ್ದಲ್ಲಿ ತಿರಸ್ಕರಿಸಲು ಶಿಫಾರಸ್ಸು ಮಾಡುವುದು ಮತ್ತು ವಿಮೆಗೆ ನೋಂದಾಯಿಸಿದ ಬೆಳೆ ಬಹು ವಾರ್ಷಿಕ ಬೆಳೆಯಾದಲ್ಲಿ Mobile App  ಮೂಲಕ ಕ್ಷೇತ್ರ ಪರಿಶೀಲನೆ ಕೈಗೊಂಡು ವಿಮಾ ಬೆಳೆ ಬೆಳೆದಿದ್ದಲ್ಲಿ ಸಿಂಧುವೆಂದು ಪರಿಗಣಿಸಲು ಶಿಫಾರಸ್ಸು ಮಾಡುವುದು ಇಲ್ಲದಿದ್ದಲ್ಲಿ ತಿರಸ್ಕರಸಲು ಶಿಫಾರಸ್ಸು ಮಾಡುವುದು.

ಬೆಳೆ ಸಮೀಕ್ಷೆಯೊಂದಿಗೆ ತಾಳೆಯಾಗದ ಹಾಗೂ ಯಾವುದೇ ವಿನಾಯಿತಿ ದೊರಕದ ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಿ ಅಂತಹ ಪ್ರಕರಣಗಳನ್ನು ಈ ಕೆಳಕಂಡ ಕಾಲಾವಧಿಯಲ್ಲಿ ಇತ್ಯರ್ಥಪಡಿಸುವುದು:

ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಸಂಸ್ಥೆಯವರ  login  ನಿಂದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು (ಸಾಲ ಪಡೆದ ರೈತರ ಪ್ರಸ್ತಾವನೆಗಳು) ಹಾಗೂ ಕೃಷಿ ಅಧಿಕಾರಿಗಳ (ಸಾಲ ಪಡೆಯದ ರೈತರ ಪ್ರಸ್ತಾವನೆಗಳು)  login  ಗೆ ವರ್ಗಾವಣೆಯಾದ ದಿನಾಂಕದಿಂದ 15 ದಿನಗಳ ಕಾಲವಕಾಶ ಹಾಗೂ ಬಹುವಾರ್ಷಿಕ ಬೆಳೆಗಳಲ್ಲಿ ಪರಿಶೀಲನಾಧಿಕಾರಿ  login  (ಬ್ಯಾಂಕ್/ ತೋಟಗಾರಿಕೆ ಅಧಿಕಾರಿ) ಗೆ ವರ್ಗಾವಣೆಯಾದ ದಿನಾಂಕದಿಂದ 45 ದಿನಗಳ ಕಾಲಾವಕಾಶ.

ಪರಿಶೀಲಿಸಿದ ಪ್ರಸ್ತಾವನೆಗಳನ್ನು ವಿಮಾ ಸಂಸ್ಥೆಗಳಿಗೆ ವರ್ಗಾಯಿಸಿದ ದಿನಾಂಕದಿಂದ ವಿಮಾ ಸಂಸ್ಥೆಯು ಪ್ರಸ್ತಾವನೆಗಳನ್ನು ಅಂಗೀಕರಿಸಲು / ತಿರಸ್ಕರಿಸಲು ವಾರ್ಷಿಕ ಬೆಳೆಗಳಿಗೆ 7 ದಿನದ ಕಾಲಾವಕಾಶ ಮತ್ತು ಬಹುವಾರ್ಷಿಕ ಬೆಳೆಗಳಿಗೆ 7 ದಿನಗಳ ಕಾಲಾವಕಾಶ. ವಿಮಾ ಸಂಸ್ಥೆಯು ಅಂಗೀಕರಿಸಿದ ಪ್ರಸ್ತಾವನೆಗಳಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ವಿಮೆ ವಿಭಾಗದ ಅಧಿಕಾರಿಗಳಿಂದ claim initiate  ಮಾಡಲು 15 ದಿನಗಳ ಕಾಲಾವಕಾಶ. Claim initiate  ಮಾಡಿದ ಪ್ರಸ್ತಾವನೆಗಳಿಗೆ ವಿಮಾ ಸಂಸ್ಥೆಯು ಬೆಳೆ ವಿಮೆ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿಸಲು 15 ದಿನಗಳ ಕಾಲವಕಾಶ. ವಿಮಾ ಸಂಸ್ಥೆಯು ತಿರಸ್ಕರಿಸಿದ ಪ್ರಸ್ತಾವನೆಗಳ ಪಟ್ಟಿಯನ್ನು ಪ್ರಕಟಿಸಿದ ನಂತರ ರೈತರು ದೂರನ್ನು ಸಲ್ಲಿಸಲು  15 ದಿನಗಳ ಕಾಲವಕಾಶ.

ರೈತರು ದೂರನ್ನು ಸಲ್ಲಿಸಿದ ನಂತರ ಪರಿಶೀಲನಾ ಸಮಿತಿ ಪ್ರಕರಣಗಳನ್ನು ತೀರ್ಮಾನಿಸಲು 15 ದಿನಗಳ ಕಾಲವಕಾಶ.  ಪರಿಶೀಲನಾ ಸಮಿತಿಯು ಪ್ರಕರಣದ ತೀರ್ಮಾನವನ್ನು ವರದಿ ಮಾಡಿದ ದಿನಾಂಕದಿಂದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಲು 7 ದಿನಗಳ ಕಾಲವಕಾಶ. ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಿದ ನಂತರ ಪ್ರಸ್ತಾವನೆಯನ್ನು ಪರಿಶೀಲಿಸಿ ಇತ್ಯರ್ಥಪಡಿಸಲು 15 ದಿನಗಳ ಕಾಲವಕಾಶ.

ಮೇಲ್ಮನವಿ ಸಮಿತಿಯ ನಿರ್ಧಾರವು ಅಂತಿಮವಾಗಿದ್ದು, ಎಲ್ಲಾ ಸಂಬಂಧಿತ ಪಾಲುದಾರರು/ ಮಧ್ಯಸ್ಮದಾರರು ಇದಕ್ಕೆ ಬದ್ಧರಾಗಿರತಕ್ಕದ್ದು. ಬೆಳೆ ಸಮೀಕ್ಷೆ ವರದಿಯನ್ವಯ ಹಾಗೂ ಮೇಲೆ ತಿಳಿಸಿದ ಯಾವುದೇ ವಿನಾಯಿತಿಯಡಿ ಒಳಪಡಲಾರದ ಪ್ರಸ್ತಾವನೆಗಳಿಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ಹಾಗೂ ಬೆಳೆ ವಿಮೆಯಡಿ ನೊಂದಾಯಿತ ಬೆಳೆಯು ತಾಳೆಯಾಗದ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರೈತರ ವಂತಿಗೆಯನ್ನು ಈ ಹಿಂದೆ ರೈತರಿಗೆ ಮರುಪಾವತಿಸಲಾಗುತ್ತಿದ್ದು, ಇನ್ನು ಮುಂದೆ ಕೇಂದ್ರ ಸರ್ಕಾರದ ಆದೇಶದನ್ವಯ ಮುಟ್ಟುಗೋಲು ಹಾಕಿಕೊಂಡು ಕೇಂದ್ರ ಸರ್ಕಾರದ Technology Fund  ನಲ್ಲಿ ಜಮೆ ಮಾಡಿಕೊಳ್ಳಲಾಗುವುದು.

ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ತಾಳೆ ಮಾಡುವುದರಲ್ಲಿ ಯಾವುದಾದರೂ ವಿಶೇಷ ವರದಿ ಸ್ವೀಕೃತವಾದಲ್ಲಿ ಅದರನ್ವಯ crop survey integration  ಮಾರ್ಪಾಡುಗಳನ್ನು ಕೈಗೊಳ್ಳುವುದು ಎಂದು ಕೃಷಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Hot this week

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು

ತಿರುಪತಿ : ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ (Tirumala Venkaeswara of...

ವಾರ್ತಾ ಇಲಾಖೆಗೆ ನವ ತಂತ್ರಜ್ಞಾನ ಅಳವಡಿಸುವ ಚಿಂತನೆ

ಬೆಂಗಳೂರು : ಸರಕಾರದ ಯೋಜನೆಗಳನ್ನು ಜನ-ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರ್ತಾ...

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಣಕು ತುರ್ತು ಪರಿಸ್ಥಿತಿ ಅಭ್ಯಾಸ

ಬೆಂಗಳೂರು : ಸಾರ್ವಜನಿಕರ ತುರ್ತು ಪರಿಸ್ಥಿತಿ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ...

ನಿತ್ಯ ಪಂಚಾಂಗ ೦೩ – ೦೭ – ೨೦೨೬ – 3-7-2026 Friday

ಶ್ರೀ ವಿಠಲ ಕೃಷ್ಣೋ ವಿಜಯತೆಶ್ರೀ ಮನೃಪ ಶಾಲಿವಾಹನ ಶಕೆ ೧೯೪೮ ನೇ...

ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಷಯದ ವಿಶೇಷ ಉಪನ್ಯಾಸ

ಹಾಸನ ಟೈಮ್ಸ್ ಪಿಯು ಕಾಲೇಜಿನಲ್ಲಿ ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ...

Topics

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು

ತಿರುಪತಿ : ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ (Tirumala Venkaeswara of...

ವಾರ್ತಾ ಇಲಾಖೆಗೆ ನವ ತಂತ್ರಜ್ಞಾನ ಅಳವಡಿಸುವ ಚಿಂತನೆ

ಬೆಂಗಳೂರು : ಸರಕಾರದ ಯೋಜನೆಗಳನ್ನು ಜನ-ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರ್ತಾ...

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಣಕು ತುರ್ತು ಪರಿಸ್ಥಿತಿ ಅಭ್ಯಾಸ

ಬೆಂಗಳೂರು : ಸಾರ್ವಜನಿಕರ ತುರ್ತು ಪರಿಸ್ಥಿತಿ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ...

ನಿತ್ಯ ಪಂಚಾಂಗ ೦೩ – ೦೭ – ೨೦೨೬ – 3-7-2026 Friday

ಶ್ರೀ ವಿಠಲ ಕೃಷ್ಣೋ ವಿಜಯತೆಶ್ರೀ ಮನೃಪ ಶಾಲಿವಾಹನ ಶಕೆ ೧೯೪೮ ನೇ...

ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಷಯದ ವಿಶೇಷ ಉಪನ್ಯಾಸ

ಹಾಸನ ಟೈಮ್ಸ್ ಪಿಯು ಕಾಲೇಜಿನಲ್ಲಿ ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ...

ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣ ಕಾರ್ಯಕ್ರಮ : ಡಾ. ಮಾನಸ

ಒಳಿತನ್ನು ನಾವು ಎಲ್ಲಾ ಕಡೆಗಳಿಂದಲೂ ಸ್ವೀಕರಿಸಬೇಕು. ಮನೆಗೊಂದು ಗ್ರಂಥಾಲಯ ಅನುಷ್ಠಾನವು(Implementation) ಬಹು...

ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣ ಕಾರ್ಯಕ್ರಮ : ಡಾ. ಮಾನಸ

ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣ(Meaningful) ಕಾರ್ಯಕ್ರಮ: ಡಾ. ಮಾನಸಒಳಿತನ್ನು ನಾವು ಎಲ್ಲಾ...

ರಾಜಾಜಿನಗರ ಕ್ಷೇತ್ರದಲ್ಲಿ ಟೆಂಡರ್ ಹಗರಣ: ಶಾಸಕ ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

*ರಾಜಾಜಿನಗರ ಕ್ಷೇತ್ರದಲ್ಲಿ 300 ಕೋಟಿ ರೂಗೂ ಅಧಿಕ ಮೊತ್ತದ ಟೆಂಡರ್ ಹಗರಣ(Tender...

Related Articles