ಸರ್ಕಾರಿ ಎಸ್‍ಕೆಎಸ್‍ಜೆಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜುಲೈ 22 ರಂದು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು

ಬೆಂಗಳೂರು, ಜುಲೈ 04 : ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯುಬಿಲಿ(Government Sree Krishnarajendra Silver Jubilee) ತಾಂತ್ರಿಕ ಮಹಾವಿದ್ಯಾಲಯದ (KSSJT) ಆವರಣದಲ್ಲಿ ಸಂಸ್ಥೆಯ ಹಳೆಯ ಮತ್ತು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು(Auction) ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯಲ್ಲಿ ಬಳಕೆಯಲ್ಲಿಲ್ಲದ ಹಳೇ ಯಂತ್ರೋಪಕರಣಗಳು, ಪೀಠೋಪಕರಣಗಳು, ಗಣಕಯಂತ್ರಗಳು, ಬ್ಯಾಟರಿಗಳು ಹಾಗೂ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು “ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿರುವಂತೆ” (As is where is basis) ನಿಯಮಾನುಸಾರ ವಿಲೇವಾರಿ ಮಾಡಲು 2026ನೇ ಜುಲೈ 22 ರಂದು ಬೆಳಿಗ್ಗೆ 11.00 ಗಂಟೆಗೆ ಬಹಿರಂಗ ಹರಾಜು ನಡೆಯಲಿದೆ.

ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅರ್ಹ ಬಿಡ್‍ದಾರರು ತಮ್ಮ ಅರ್ಹತೆಯ ದಾಖಲೆಗಳನ್ನು 2026ನೇ ಜುಲೈ 20ರ  ಮಧ್ಯಾಹ್ನ  02.00 ಗಂಟೆಯೊಳಗೆ ಕಾಲೇಜಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಭಾಗವಹಿಸುವವರು ಮುಂಗಡ ಠೇವಣಿ ಹಣ (EMD) ರೂ. 10,000/- (ಹತ್ತು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ಸಂಸ್ಥೆಯ ನಗದು ವಿಭಾಗದಲ್ಲಿ ಪಾವತಿಸಬೇಕಿರುತ್ತದೆ. ಹರಾಜಿನಲ್ಲಿ ಬಿಡ್ ಸಿಗದೇ ಇದ್ದಂತಹ ಬಿಡ್‍ದಾರರಿಗೆ ನಿಯಮಾನುಸಾರ ಮುಂಗಡ ಠೇವಣಿಯನ್ನು ಹಿಂದಿರುಗಿಸಲಾಗುವುದು.

ಅನುಪಯುಕ್ತ ಬ್ಯಾಟರಿಗಳಿಗೆ ಬಿಡ್ ಮಾಡುವ ಆಸಕ್ತರು ಕಡ್ಡಾಯವಾಗಿ ಭಾರತ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಇವರಿಂದ ಮಾನ್ಯತೆ ಪಡೆದ ಅಧಿಕೃತ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಹರಾಜಿನ ಕುರಿತಾದ ಹೆಚ್ಚಿನ ವಿವರವಾದ ಮಾಹಿತಿಯನ್ನು ಸಂಸ್ಥೆಯ ಅಧಿಕೃತ ಸೂಚನಾಫಲಕದಲ್ಲಿ (Notice Board) ವೀಕ್ಷಿಸಬಹುದಾಗಿದೆ ಎಂದು ಸರ್ಕಾರಿ ಎಸ್‍ಕೆಎಸ್‍ಜೆಟಿ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಕೆಪಿಎಸ್‍ಸಿ(KPSC) ವಿವಿಧ ಗ್ರೂಪ್ ‘ಸಿ'(Group -c) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಬೆಂಗಳೂರು, ಜುಲೈ 04 :ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿನ...

ಟಾಟಾ ಪವರ್ ಅರ್ಜಿ ವಾಪಸು-ವಿದ್ಯುತ್ ಖಾಸಗೀಕರಣ ವಿರೋಧಿ ಹೋರಾಟಕ್ಕೆ ಬಲ

ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣೆಯ ಪರವಾನಗಿ ಕೋರಿ...

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ(Central Election) ಆಯೋಗಕ್ಕೆ ಮನವಿ ಎಸ್‍ಐಆರ್(SIR) ದುರ್ಬಳಕೆಗೆ...

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ ಮಕ್ಕಳ ಮೇಲಿನ ದೈಹಿಕ ಹಿಂಸೆ ಪ್ರಕರಣ – ಆರೋಪಿಗಳ ಬಂಧನ

ಬೆಂಗಳೂರಿನ ಡೇ-ಕೇರ್ ಸೆಂಟರ್‍ನಲ್ಲಿ(Day care Centre) ಮಕ್ಕಳ ಮೇಲಿನ ದೈಹಿಕ ಹಿಂಸೆ...

ಅಕ್ರಮ ಗಣಿಗಾರಿಕೆಗೆ ಕಡಿವಾಣ- ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಫ್ರೀಡಂ ಪಾರ್ಕ್‌ನಲ್ಲಿ...

Topics

ವೆಲ್ಲೂರು ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಷೇಶ ಪೂಜೆ ಸಲ್ಲಿಸಿದ ರಾಜ್ಯಪಾಲರು

ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ , ರಾಜ್ಯಪಾಲರಾದ ಶ್ರೀ...

Related Articles