ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ ನೋಡದೆ, ಅದರ ಹಿಂದಿರುವ ಶಾಸ್ತ್ರೀಯ, ಧಾರ್ಮಿಕ ಹಾಗೂ ತಾತ್ತ್ವಿಕ ಆಶಯಗಳನ್ನು ಅರಿತು ಆಚರಿಸುವುದು ಅಗತ್ಯ ಎಂದು ರಾಮಕೃಷ್ಣ–ವಿವೇಕಾನಂದ ಆಶ್ರಮ, ತುಮಕೂರಿನ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ(Sree Veereshaananda Saraswathi) ಹೇಳಿದರು.

ಮಲ್ಲೇಶ್ವರಂನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ‘ತರ್ಪಣ ವಿಧಿ ವಿವೇಕ’ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪಿತೃಗಳನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿಯ ವಿಶಿಷ್ಟ ಪರಂಪರೆ. ಪಿತೃಕಾರ್ಯಗಳ ಹಿಂದೆ ಕೃತಜ್ಞತೆ, ಸ್ಮರಣೆ ಹಾಗೂ ಕುಟುಂಬ ಪರಂಪರೆಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಮೌಲ್ಯಗಳಿವೆ. ಇಂತಹ ಆಚರಣೆಗಳ ಉದ್ದೇಶ ಮತ್ತು ವಿಧಾನಗಳನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ತಿಳಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ತರ್ಪಣ ವಿಧಿ ವಿವೇಕ’ಕೃತಿ ಉಪಯುಕ್ತವಾಗಿದೆ ಎಂದು ಅವರು ಹೇಳಿದರು. ಲೋಕೋಪಯೋಗೀ ಕಾರ್ಯಗಳು ಮಕ್ಕಳು ಮಾಡಬೇಕಾದರೇ ಅದರಲ್ಲಿ ತಾಯಿಯ ಮಹತ್ವ ಬಹಳ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಪಿತೃಗಳನ್ನ ನೆನೆಯುವ ವಿಷಯದಲ್ಲಿ ಒಂದು ಆತ್ಮಾವಲೋಕನ ಮಾಡಿಕೊಳ್ಳುವಂತಹದು ಆಗಬೇಕು ಈ ದಿನದ ಕಾರ್ಯಕ್ರಮ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ ಶರ್ಮ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾಸ್ತ್ರ–ಪರಂಪರೆಯ ವಿಚಾರಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ದಾಖಲಿಸುವುದು ಇಂದಿನ ಅಗತ್ಯವಾಗಿದೆ. ತರ್ಪಣ ವಿಧಿಯಂತಹ ಆಚರಣೆಗಳ ಕುರಿತು ಇರುವ ಸಂದೇಹಗಳಿಗೆ ಶಾಸ್ತ್ರೀಯ ಆಧಾರದಲ್ಲಿ ಸ್ಪಷ್ಟತೆ ನೀಡುವ ಕೃತಿಗಳು ಹೆಚ್ಚು ಬರಬೇಕು ಎಂದರು.
ಫ್ಲೈ ದುಬೈ ನ ಘಟನೆಯನ್ನು ಈ ಸಂದರ್ಭದಲ್ಲಿ ನೆನೆಸಿದರು. ಪಿತೃಗಳ ಬಗ್ಗೆ ಉಪಕಾರ ಸ್ಮರಣೆಯನ್ನ ಎಲ್ಲರಲ್ಲೂ ಇರಬೇಕು ಎಂದರು.  ಹಾಗೂ ಆಯುರ್ವೇದದ ರೀತ್ಯಾ ಮನುಷ್ಯನ ಹುಟ್ಟಿನ ಬಗ್ಗೆ ಚರಕಸಂಹಿತೆಯನ್ನು ಉಲ್ಲೇಖಿಸಿದರು.

ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ವೇ.ಬ್ರ. ಶ್ರೀ ವೆಂಕಟರಾಮ ಶಾಸ್ತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಮುಖ್ಯಸ್ಥರಾದ ಡಾ. ವಿನಯಾಚಾರ್ಯ ಪಿ. ಹಾಗೂ ಜ್ಯೋತಿಷಿ ವೇ.ಬ್ರ. ಶ್ರೀ ತುಮಕೂರು ಕರಣೀಕ ನರಹರಿ ಶರ್ಮ ಉಪಸ್ಥಿತರಿದ್ದರು.

ಅನಂತರಾಮ ಪ್ರಕಾಶನ ವತಿಯಿಂದ ಪ್ರಕಟವಾಗಿರುವ ‘ತರ್ಪಣ ವಿಧಿ ವಿವೇಕ’ ಕೃತಿಯು ತರ್ಪಣ ವಿಧಿಯ ಉದ್ದೇಶ, ಪಿತೃಕಾರ್ಯದ ಮಹತ್ವ, ಅದರ ಧಾರ್ಮಿಕ–ತಾತ್ತ್ವಿಕ ಹಿನ್ನೆಲೆ ಹಾಗೂ ಶಾಸ್ತ್ರೋಕ್ತ ಆಚರಣಾ ಕ್ರಮಗಳನ್ನು ಪರಿಚಯಿಸುತ್ತದೆ.

ಗ್ರಂಥಕರ್ತ ಡಾ. ಅಜಿತ್ ನಿರಂಜನ್ ವೈ.ಎ. ಮಾತನಾಡಿ, ಪಿತೃಕಾರ್ಯಗಳಿಗೆ ಸಂಬಂಧಿಸಿದ ಶಾಸ್ತ್ರೀಯ ವಿಚಾರಗಳು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಕೃತಿಯನ್ನು ರೂಪಿಸಲಾಗಿದೆ. ತರ್ಪಣ ವಿಧಿಯ ಕುರಿತು ಜನರಲ್ಲಿ ಇರುವ ಗೊಂದಲ ಹಾಗೂ ಸಂದೇಹಗಳಿಗೆ ಶಾಸ್ತ್ರಾಧಾರಿತವಾಗಿ ಉತ್ತರ ನೀಡುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಎಸ್.ಎಲ್.ಎನ್. ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಸಹಕಾರ ನೀಡಿತ್ತು. ಗಣ್ಯರು, ವಿದ್ವಾಂಸರು, ಆಧ್ಯಾತ್ಮಿಕಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

Hot this week

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ

 ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ...

ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ

ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...

ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ

ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...

ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...

ಮತದಾರರ ಪಟ್ಟಿ ಬದಲಾವಣೆ ವಿರೋಧಿಸಿ ದೆಹಲಿ, ಮುಂಬೈನಲ್ಲಿ ಪ್ರತಿಭಟನೆ

ದೆಹಲಿ(Delhi) ಮತ್ತು ಮುಂಬೈನಲ್ಲಿ(Mumbai) ಸಾವಿರಾರು ಯುವಕರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು...

Topics

ಮಾರುಕಟ್ಟೆ ಮತ್ತು ವ್ಯವಹಾರ ನವೀಕರಣಗಳು

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (PSU Banks) ಷೇರುಗಳು...

ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ...

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ರಜೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರು

ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಪ್ರತಿ ತಿಂಗಳು ನೀಡಲಾಗುವ ಒಂದು...

Related Articles