ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ

 ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ ಎದ್ದು ಕಾಣುತ್ತವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ. ಎಸ್.ಎಚ್. ಭುವನೇಶ್ವರ ಹೇಳಿದರು.

ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ  ನಡೆದ ಅಂಬಿಗರ ಚೌಡಯ್ಯನವರ ಕುರಿತ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದಲಾವಣೆ ಜಗದ ನಿಯಮವಾದರೂ, ಹಳೆಯ ಬೇರಿನೊಂದಿಗೆ ಹೊಸ ಚಿಗುರು ಬೆಸೆಯುವಂತಹ ಬದಲಾವಣೆ ಅಗತ್ಯ. ಕ್ಷಣಿಕವಾದ ಸಂಗತಿಗಳ ಹಿಂದೆ ಹೋಗದೆ, ಶಾಶ್ವತ ಮೌಲ್ಯಗಳ ಜ್ಞಾನವನ್ನು ಅರಸಬೇಕು ಎಂದರು.

ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ನಾವಿಕರಾಗಿದ್ದರೂ ಅನುಭಾವಿ ಹಾಗೂ ಸಮಾಜಮುಖಿ ಚಿಂತಕರಾಗಿದ್ದರು. ತೀಕ್ಷ್ಣವಾದ ಭಾಷೆಯ ಮೂಲಕ ಸಮಾಜವನ್ನು ಎಚ್ಚರಿಸಿದ ಅವರು, ಅಸಮಾನತೆ ಹಾಗೂ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದರು. ಶರಣ ಚಳವಳಿ ಮತ್ತು ಅನುಭವ ಮಂಟಪದ ಆಶಯಗಳು ಅವರ ವಚನಗಳಲ್ಲಿ ಪ್ರತಿಬಿಂಬಿಸುತ್ತವೆ ಎಂದರು.

ಕೃತಿಯ ಕುರಿತು ಮಾತನಾಡಿದ ಡಾ. ಆರ್. ವಾದಿರಾಜು, ಕಾಯಕತತ್ವ, ಅಂತರಂಗ–ಬಹಿರಂಗ ಶುದ್ಧತೆ, ಮಾನವೀಯತೆ ಹಾಗೂ ಪರಸ್ಪರ ಗೌರವದಂತಹ ಮೌಲ್ಯಗಳನ್ನು ಕೃತಿ ಒಳಗೊಂಡಿದೆ. ಇದು ವಿಮರ್ಶಾತ್ಮಕ ದೃಷ್ಟಿಯಿಂದ ಉತ್ತಮ ಕೃತಿಯಾಗಿದೆ ಎಂದರು.

ಕೃತಿಕಾರ ಡಾ. ಚೌಡಯ್ಯ ಮಾತನಾಡಿ, ಅಂಬಿಗರ ಚೌಡಯ್ಯನವರು ಕಾಯಕನಿಷ್ಠೆಯೊಂದಿಗೆ ಬದುಕಿ, ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಸಾಹಿತ್ಯದ ಮೂಲಕ ಪ್ರತಿಭಟಿಸಿದರು. ಸಮಸಮಾಜ ನಿರ್ಮಾಣವೇ ಅವರ ಆಶಯವಾಗಿತ್ತು. ಅವರ ಮೌಲ್ಯಯುತ ಜೀವನ, ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕು ಎಂದರು.

ವಿ. ಗೋವಿಂದರಾಜು, ಡಾ. ಎಚ್. ತುಕಾರಾಂ, ಡಾ. ಗಿರಿಯಪ್ಪ, ಡಾ. ಎಂ. ಶಿವಸ್ವಾಮಿ ಸೇರಿದಂತೆ ಪ್ರಾಧ್ಯಾಪಕರು, ಟ್ರಸ್ಟ್‌ನ ಪದಾಧಿಕಾರಿಗಳು, ಕವಿಗಳು, ಗಾಯಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Hot this week

ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ

ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...

ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ...

ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ

ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...

ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...

ಮತದಾರರ ಪಟ್ಟಿ ಬದಲಾವಣೆ ವಿರೋಧಿಸಿ ದೆಹಲಿ, ಮುಂಬೈನಲ್ಲಿ ಪ್ರತಿಭಟನೆ

ದೆಹಲಿ(Delhi) ಮತ್ತು ಮುಂಬೈನಲ್ಲಿ(Mumbai) ಸಾವಿರಾರು ಯುವಕರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು...

Topics

ಮಾರುಕಟ್ಟೆ ಮತ್ತು ವ್ಯವಹಾರ ನವೀಕರಣಗಳು

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (PSU Banks) ಷೇರುಗಳು...

ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ...

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ರಜೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರು

ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಪ್ರತಿ ತಿಂಗಳು ನೀಡಲಾಗುವ ಒಂದು...

Related Articles