“ಕಹಾನಿ” ಮೂವರು ಕಲಾವಿದೆಯರ ಚಿತ್ರಕಲಾ ಪ್ರದರ್ಶನ

ಸೃಜನಶೀಲ ಮೂವರು ಕಲಾವಿದೆಯರಾದ ಭಾರತಿ ದರ್ಶನ್ (Bharathi Darshan), ಅಂಜಲಿ ಹರ್ಲಾಲ್ಕಾ (Anjali Harlalka) ಮತ್ತು ಫರ್ಹಾನಾ ಖಾನ್ ಅವರು ವೈವಿಧ್ಯಮಯ ಕಲಾಕೃತಿಗಳನ್ನು “ಕಹಾನಿ-ಸ್ಟೋರೀಸ್ ಇನ್ ಕಲರ್ಸ್” (Kahani Stories in Colours) ಎಂಬ ಶೀರ್ಷಿಕೆಯಲ್ಲಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದಾರೆ.

ಇದೇ ಅಕ್ಟೋಬರ್ 3 ರಂದು ನಾಡಿನ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಉದ್ಘಾಟಿಸಿದ್ದಾರೆ. ತಂತ್ರದೊಂದಿಗೆ ಏಕಾಗ್ರತೆಗೆ ಸಂಬಂಧಿಸಿದ ಕೃತಿಗಳಿಂದ ಹಿಡಿದು ಹಲವು ಆಕಾರಗಳ, ಹಲವು ಶೈಲಿಯ, ವಿಭಿನ್ನ ಕುಸುರಿಕಲೆಯ, ಯಥಾವತ್ತಾದ ನಿಸರ್ಗಚಿತ್ರಗಳ, ಕಾಲ್ಪನಿಕ ಲೋಕದೊಳಗೆ ಒಯ್ಯುವ ಹಲವು ವೈವಿದ್ಯತೆಯ  ಕಲಾಕೃತಿಗಳನ್ನು ಮೆಚ್ಚಿ, ವಿಮರ್ಶಿಸಿ ಸಲಹೆ-ಸೂಚನೆಗಳನ್ನೂ ಕೊಟ್ಟಿದ್ದಾರೆ. ಅಲ್ಲದೇ ಕೆಲವು ಶೈಲಿಯ ಚಿತ್ರಗಳು ಸರಣಿ ಚಿತ್ರಗಳಿಗೂ ಸೂಕ್ತ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರು ಈ ಕಲಾಪ್ರದರ್ಶನಕ್ಜೆ ಭೇಟಿ ಕೊಟ್ಟು ಕಲಾಕೃತಿಗಳನ್ನು ವೀಕ್ಷಿಸಿದರು. ನಂತರ ಅಂಜಲಿ ಅವರ ಕಲಾಕೃತಿಯನ್ನು‌ ಕೊಂಡು‌ ಪ್ರೋತ್ಸಾಹಿಸಿದರು.

ಶಿರಸಿ ಮೂಲದ ಭಾರತಿ ದರ್ಶನ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಟೆಕ್ಸಟೈಲ್ ವಿನ್ಯಾಸದಲ್ಲಿ ಪದವೀಧರೆಯಾಗಿರುವ ಅಂಜಲಿ ಹರ್ಲಾಲ್ಕಾ, ವಾಣಿಜ್ಯ ಪದವೀಧರೆಯಾದ ಫರ್ಹಾನಾ ಖಾನ್ ಹೀಗೆ ಈ ಮೂವರು ಬೇರೆ ಬೇರೆ ಊರಿನವರಾದರೂ ಕಲೆಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಒಂದಾಗಿ ಒಟ್ಟಿಗೆ ಕಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಈ ಮೂವರೂ ಕಲಾವಿದೆಯರೂ ಒಂದು ದಶಕದಿಂದ ಒಟ್ಟಾಗಿ ಕಲಿತು, ಕಲೆತು, ಚರ್ಚಿಸಿ, ಹೊಸ ವಿಧಾನಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತಮ್ಮದೇ ವಿಭಿನ್ನ ದೃಷ್ಟಿಕೋನಗಳ, ಅನುಭವ, ಅನುಭಾವಗಳ ಕಲಾತ್ಮಕತೆಯನ್ನು ಅಭಿವ್ಯಕ್ತಿಸಿದ್ದಾರೆ. ಅವುಗಳಲ್ಲಿ ಆಯ್ದ ಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಇದು ಪ್ರದರ್ಶನಕ್ಕಿಂತ ಹೆಚ್ಚಾಗಿ ಸ್ನೇಹ ಹಾಗೂ ಸೃಜನಶೀಲತೆಯ ಆಚರಣೆಯಾಗಿದೆ ಎನ್ನುತ್ತಾರೆ.

ಹಲವು ಅಳತೆಯ ಹಲವು ಮಾಧ್ಯಮಗಳ ಕಲಾಕೃತಿಗಳು ಆಕರ್ಷಕವಾಗಿವೆ. ನೋಡುಗರನ್ನು ಸೆಳೆಯುತ್ತಿರುವ ಈ ಕಲಾಕೃತಿಗಳು ಕಲಾಸಕ್ತರು ಕೊಳ್ಳಲು ಯೋಗ್ಯವಾಗಿವೆ ಹಾಗೂ ಗೋಡೆಗಳ ಅಂದ ಹೆಚ್ಚಿಸಬಲ್ಲ ಕೃತಿಗಳಾಗಿವೆ.

ಈ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಅಕ್ಟೋಬರ್ 7 ರವರೆಗೂ ತೆರೆದಿರುತ್ತದೆ.

Hot this week

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ

 ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ...

ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ

ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...

ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ...

ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ

ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...

ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...

Topics

ಮತದಾರರ ಪಟ್ಟಿ ಬದಲಾವಣೆ ವಿರೋಧಿಸಿ ದೆಹಲಿ, ಮುಂಬೈನಲ್ಲಿ ಪ್ರತಿಭಟನೆ

ದೆಹಲಿ(Delhi) ಮತ್ತು ಮುಂಬೈನಲ್ಲಿ(Mumbai) ಸಾವಿರಾರು ಯುವಕರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು...

ಮಾರುಕಟ್ಟೆ ಮತ್ತು ವ್ಯವಹಾರ ನವೀಕರಣಗಳು

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (PSU Banks) ಷೇರುಗಳು...

ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ...

Related Articles