ನವರಾತ್ರೋತ್ಸವದ ನಿಮಿತ್ತ ಹಿಂದೂ ಯುವತಿಯರಿಗಾಗಿ ‘ಮೈ ಹೂಂ ದುರ್ಗಾ’ ಅಭಿಯಾನ;

ದೇಶಾದ್ಯಂತ ಹಲವೆಡೆ ಹಿಂದೂ ಯುವತಿಯರಿಗೆ ಉಚಿತ ಆತ್ಮರಕ್ಷಣಾ ತರಬೇತಿ ಶಿಬಿರಗಳ ಆಯೋಜನೆ !

ದೇವಿಯ ಉಪಾಸನೆ ಮಾಡುತ್ತಾ ನಿಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸಿ

ಮತ್ತು ಆತ್ಮರಕ್ಷಣಾ ತರಬೇತಿ ಪಡೆಯಿರಿ ! – ಹಿಂದೂ ಜನಜಾಗೃತಿ ಸಮಿತಿಯ ಕರೆ

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ‘ಮೈ ಹೂಂ ದುರ್ಗಾ’ ಅಭಿಯಾನವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿಯಲ್ಲಿ ವಿವಿಧ ನಗರಗಳಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರಿಗಾಗಿ ಉಚಿತ ಆತ್ಮರಕ್ಷಣಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳು ಹಾಗೂ ಪ್ರೇರಣಾದಾಯಿ ಶೌರ್ಯಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ(Shree Ramesha Sindhe) ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಶ್ರೀ ರಮೇಶ ಶಿಂದೆ, “ಇಂದು ಯುವತಿಯರು ಚುಡಾಯಿಸುವಿಕೆ, ಹಿಂಬಾಲಿಸುವುದು, ಆನ್‌ಲೈನ್ ಕಿರುಕುಳ, ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಹಾಗೂ ಹಿಂಸಾತ್ಮಕ ದಾಳಿಗಳಂತಹ ಹಲವು ಅಪಾಯಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲ ಅನ್ಯಧರ್ಮೀಯರು ಸುಳ್ಳು ಹೆಸರು ಮತ್ತು ನಕಲಿ ಗುರುತನ್ನು ನೀಡಿ ಹಿಂದೂ ಹೆಣ್ಣುಮಕ್ಕಳನ್ನು ಪ್ರೇಮದ ಬಲೆಗೆ ಬೀಳಿಸಿ ‘ಲವ್ ಜಿಹಾದ್’ ಮೂಲಕ ಅವರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆ. ನಂತರದ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಬ್ಲ್ಯಾಕ್‌ಮೇಲ್ ಅಥವಾ ಮತಾಂತರಕ್ಕಾಗಿ ಒತ್ತಡ ಹೇರಲಾಗುತ್ತದೆ. ಈ ಕುರಿತು ಯುವತಿಯರಲ್ಲಿ ಜಾಗೃತಿ ಮೂಡುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಯಪಡದೆ, ಜಾಗೃತಿ, ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕೌಶಲ್ಯವನ್ನು ಬೆಳೆಸಿಕೊಳ್ಳಲು ‘ಮೈ ಹೂಂ ದುರ್ಗಾ’ ಅಭಿಯಾನವನ್ನು ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಈ ಆತ್ಮರಕ್ಷಣಾ ತರಬೇತಿ ಶಿಬಿರಗಳಲ್ಲಿ ದೈಹಿಕ ಪ್ರತಿರೋಧದ ತಂತ್ರಗಳನ್ನು ಕಲಿಸುವುದರ ಜೊತೆಗೆ, ಅಪಾಯದ ಸುಳಿವನ್ನು ಗುರುತಿಸುವುದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢರಾಗಿರಲು ಮಾರ್ಗದರ್ಶನ ನೀಡಲಾಗುವುದು. ಈ ತರಬೇತಿ ಶಿಬಿರಗಳಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಯುವತಿಯರಿಗೆ ಪ್ರವೇಶ ಕಲ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಯುವತಿಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಆತ್ಮರಕ್ಷಣಾ ತರಬೇತಿ ಪಡೆದುಕೊಳ್ಳಬೇಕು ಎಂದು ಸಮಿತಿಯು ಕರೆ ನೀಡಿದೆ. ತಮ್ಮ ನಗರದಲ್ಲಿ ನಡೆಯುವ ‘ಮೈ ಹೂಂ ದುರ್ಗಾ’ ಅಭಿಯಾನದ ಆತ್ಮರಕ್ಷಣಾ ತರಬೇತಿಯಲ್ಲಿ ನೋಂದಾಯಿಸಿಕೊಳ್ಳಲು ಜೊತೆಗಿರುವ ಕ್ಯೂ-ಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಅಥವಾ ಕೆಳಗಿನ ಲಿಂಕ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ – www.hindujagruti.org/hindi/navratri-festival

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ನಾವೀನ್ಯತೆ, ಶ್ರೇಷ್ಠತೆ ಅಳವಡಿಸಲು ನಿರ್ಧಾರ

Hot this week

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

Topics

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

Related Articles