ವಿಧಾನ ಪರಿಷತ್ ಅಧಿವೇಶನ ಸಭಾಪತಿ ಪುಟ್ಟಣ್ಣ ಅವರಿಂದ ಅಗಲಿದ ಗಣ್ಯರಿಗೆ ಸಂತಾಪ

ಬೆಂಗಳೂರು: ಇಂದು ಕರ್ನಾಟಕ ವಿಧಾನ ಪರಿಷತ್ತಿ 159ನೇ ಅಧಿವೇಶನದ(Legislative Session) ಕಲಾಪದ ಆರಂಭದಲ್ಲಿ ಹಂಗಾಮಿ ಸಭಾಪತಿ ಪುಟ್ಟಣ್ಣ(Acting Chairman Puttanna) ಅವರು ಇತ್ತೀಚೆಗೆ ನಿಧನರಾದ ರಾಮಚಂದ್ರಗೌಡ, ಡಿ. ಸುಧಾಕರ್,  ವೆಂಕಟರಮಣಪ್ಪ,  ಸಿ. ವೀರಣ್ಣ,  ಹೆಚ್. ಹನುಮಂತಪ್ಪ, ಡಾ. ಎಸ್.ಆರ್. ರಾಮಸ್ವಾಮಿ, ಶ್ರೀಮತಿ ಆಶಾ ಬೊಂಸ್ಲೆ, ರಾಮಚಂದ್ರ ಬೈಕಂಪಾಡಿ, ಡಾ. ಗಿರೀಶ್ ಭಾರಧ್ವಜ್, ಡಾ. ಎಸ್. ಜಾನಕಿ, ಶ್ರೀಮತಿ ಸಿ.ಎನ್.ಮುಕ್ತಾ,  ಎ.ವಿ. ನರಸಿಂಹಮೂರ್ತಿ, ಶ್ರೀಮತಿ ಚನ್ನಮ್ಮ ಮತ್ತು ಹೆಚ್. ಚಂದ್ರಶೇಖರ್ ಇವರುಗಳಿಗೆ ಅವರು ತಮ್ಮದೇ ಆದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸದನದಲ್ಲಿ ತಿಳಿಸುತ್ತಾ, ಸಂತಾಪ(Condolenses) ವ್ಯಕ್ತಪಡಿಸಿದರು.
ರಾಮಚಂದ್ರಗೌಡ: ಬಿಜೆಪಿಯ ಹಿರಿಯ ನಾಯಕರು, ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಹಾಗೂ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರು. ಬೆಂಗಳೂರು ಪದವೀಧರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಧೀರ್ಘಕಾಲ parliamentary ಸೇವೆ ಸಲ್ಲಿಸಿದವರು.
 
ಡಿ. ಸುಧಾಕರ್: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಮಾಜಿ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರು. ಸಮಾಜಸೇವೆ ಮತ್ತು ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದವರು.
ವೆಂಕಟರಮಣಪ್ಪ: ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವರು. ಹಿಂದುಳಿದ ವರ್ಗಗಳ ಮತ್ತು ಗಡಿ ಭಾಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದ ರಾಜಕಾರಣಿ.
ಸಿ. ವೀರಣ್ಣ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಣ್ಣ ನೀರಾವರಿ ಮಾಜಿ ಸಚಿವರು. ಶೋಷಿತ ವರ್ಗಗಳ ಪರವಾಗಿ ಹಾಗೂ ನೀರಾವರಿ ಯೋಜನೆಗಳಿಗಾಗಿ ಧ್ವನಿ ಎತ್ತಿದವರು.
ಹೆಚ್. ಹನುಮಂತಪ್ಪ: ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು. ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (NCSCST) ಅಧ್ಯಕ್ಷರಾಗಿ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಿದವರು.
ಡಾ. ಎಸ್.ಆರ್. ರಾಮಸ್ವಾಮಿ: ಹಿರಿಯ ಪತ್ರಕರ್ತರು, ಪ್ರಖ್ಯಾತ ಸಾಹಿತಿ, ವಿಮರ್ಶಕರು ಹಾಗೂ ‘ಉತ್ಥಾನ’ ಮಾಸಪತ್ರಿಕೆಯ ಗೌರವ ಸಂಪಾದಕರು. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಆಪ್ತ ಶಿಷ್ಯರಾಗಿದ್ದು, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು.
 
ಶ್ರೀಮತಿ ಆಶಾ ಭೋಂಸ್ಲೆ: ಭಾರತೀಯ ಸಂಗೀತ ಲೋಕದ ದಂತಕಥೆ ಹಾಗೂ ಪದ್ಮವಿಭೂಷಣ ಪುರಸ್ಕೃತ ಪ್ರಸಿದ್ಧ ಹಿನ್ನೆಲೆ ಗಾಯಕಿ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಸಾರ್ವಕಾಲಿಕ ಹಿಟ್ ಗೀತೆಗಳನ್ನು ಹಾಡಿದವರು.
ರಾಮಚಂದ್ರ ಬೈಕಂಪಾಡಿ: ಕರಾವಳಿ ಭಾಗದ ಮೀನುಗಾರರ ಪ್ರಮುಖ ಧುರೀಣರು ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ (KFDC) ಮಾಜಿ ಅಧ್ಯಕ್ಷರು. ಮೀನುಗಾರರ ಹಕ್ಕುಗಳಿಗಾಗಿ ಹೋರಾಡಿದ ನಾಯಕ.
 
 ಡಾ. ಗಿರೀಶ್ ಭಾರದ್ವಾಜ್: ‘ಸೇತುವೆ ರಾಮ’ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಎಂಜಿನಿಯರ್. ಗ್ರಾಮೀಣ ಹಾಗೂ ಮಲೆನಾಡು ಭಾಗಗಳಲ್ಲಿ ವೆಚ್ಚ-ಕಡಿಮೆಯ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ ಸಂಪರ್ಕ ಕ್ರಾಂತಿ ಮಾಡಿದ ಸಾಮಾಜಿಕ ಕಾರ್ಯಕರ್ತ.
ಡಾ. ಎಸ್. ಜಾನಕಿ: ‘ದಕ್ಷಿಣ ಭಾರತದ ಗಾನಕೋಗಿಲೆ’ ಎಂದೇ ಪ್ರಸಿದ್ಧರಾದ ದಂತಕಥೆಯ ಹಿನ್ನೆಲೆ ಗಾಯಕಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ದಶಕಗಳ ಕಾಲ ಸಾವಿರಾರು ನೈಪುಣ್ಯಪೂರ್ಣ ಗೀತೆಗಳನ್ನು ಹಾಡಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದವರು.
ಸಿ.ಎನ್. ಮುಕ್ತಾ: ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಶ್ರಮಿಸಿದ ಗಣ್ಯರು.
ಪ್ರೊ. ಎ.ವಿ. ನರಸಿಂಹಮೂರ್ತಿ: ಖ್ಯಾತ ಇತಿಹಾಸಕಾರರು, ನಾಣ್ಯಶಾಸ್ತ್ರಜ್ಞರು (Numismatist) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪುರಾತತ್ತ್ವ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರು. ಕರ್ನಾಟಕದ ಇತಿಹಾಸ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದವರು.
ಶ್ರೀಮತಿ ಚನ್ನಮ್ಮ: ಸಮಾಜಸೇವೆ, ಮಹಿಳಾ ಕಲ್ಯಾಣ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿದ ಹಿರಿಯರು.
ಹೆಚ್. ಚಂದ್ರಶೇಖರ್: ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಕೊಡುಗೆಯ ಮೂಲಕ ಗುರುತಿಸಿಕೊಂಡಿದ್ದ ಗಣ್ಯರು.
ಇತ್ತೀಚೆಗೆ ಅಗಲಿದ ಈ ಎಲ್ಲಾ ಗಣ್ಯರುಗಳಿಗೆ ಸಭಾ ನಾಯಕಾರಾದ ಯತಿಂದ್ರ‌ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣ‌ ಸ್ವಾಮಿ, ಸದಸ್ಯರುಗಳಾದ ಸಿ‌ಟಿ.ರವಿ, ಟಿ.ಎ. ಶರವಣ, ಶ್ರೀಮತಿ ಬಲ್ಕೀಸ್ ಬಾನು, ಐವಾನ್ ಡಿಸೋಜಾ, ಎಸ್. ಎಲ್.ಭೋಜೆಗೌಡ, ತಿಪ್ಪಣ್ಣ ಕಮಕನೂರ, ಕೆ.ಎಸ್. ನವೀನ್, ಶ್ರೀಮತಿ ಉಮಾಶ್ರೀ, ಪಿ.ಹೆಚ್. ಪೂಜಾರ್, ಕಿಶೋರ್ ಕುಮಾರ್ ಪುತ್ತೂರು, ಎನ್. ರವಿಕುಮಾರ್ ಮತ್ತು ‌ ಡಿ.ಟಿ. ಶ್ರೀನಿವಾಸ್ ಅವರು ಸದನದಲ್ಲಿ ಅವರದೇ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ‌ಬಣ್ಣಿಸುತ್ತಾ, ಸಂತಾಪ ವ್ಯಕ್ತಪಡಿಸಿದರು.
ಮಾನ್ಯ ಸಭಾಪತಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಅಗಲಿಕೆಯಿಂದಾಗಿ ಕುಂಟುಂಬದವರಿಗೆ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ನಂತರ ಸದನದಲ್ಲಿ ಎಲ್ಲಾ ಸದಸ್ಯರು ಒಂದು ನಿಮಿಷದ ಕಾಲ ಎದ್ದು ನಿಂತು ಮೌನಾಚರಣೆಯೊಂದಿಗೆ‌ ಗೌರವ ನಮನಗಳನ್ನು ಸಲ್ಲಿಸಿದರು. ಸದನದಲ್ಲಿ ಮಂಡಿಸಿದ ಸಂತಾಪ ನಿರ್ಣಯದ ಪ್ರತಿಯನ್ನು ಮೃತರ ಕುಟುಂಬದವರಿಗೆ ಕಳುಹಿಸಿಕೊಡಲಾಯಿತು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles