69ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಕೆ.ವಿ.ಎ.ಎಫ್.ಎಸ್.ಯು ಗೌರವಾನ್ವಿತ ಕುಲಪತಿ ಪ್ರೊ. ಕೆ. ಸಿ. ವೀರಣ್ಣ ಭಾಷಣ
ಹೆಬ್ಬಾಳದ (Hebbal) ಕೆ.ವಿ.ಎ.ಎಫ್.ಎಸ್.ಯು ಪಶುವೈದ್ಯಕೀಯ ಕಾಲೇಜಿನ 69ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಬೀದರ್‌ನ ಕೆ.ವಿ.ಎ.ಎಫ್.ಎಸ್.ಯು (KVAFSU) ಗೌರವಾನ್ವಿತ ಕುಲಪತಿ ಪ್ರೊ. (ಡಾ.) ಕೆ. ಸಿ. ವೀರಣ್ಣ (Dr.K.C. Veeranna) ಅವರು, ಪಶುವೈದ್ಯಕೀಯ ತಜ್ಞರುಕೇವಲ ಪ್ರಾಣಿಗಳ ಚಿಕಿತ್ಸೆಗೆ ಮಾತ್ರ ಸೀಮಿತಗೊಳ್ಳದೆ, ಪ್ರಾಣಿಜನ್ಯ ರೋಗಗಳತಡೆಗಟ್ಟುವಿಕೆ, ಸಾರ್ವಜನಿಕಆರೋಗ್ಯರಕ್ಷಣೆಮತ್ತು ಪರಿಸರ ಸಮತೋಲನವನ್ನುಕಾಪಾಡುವಕಡೆಗಮನವರಿಸಬೇಕುಎಂದುಅಭಿಪ್ರಾಯಪಟ್ಟರು. ಕ್ಯಾಂಪಸ್‌ಅಭಿವೃದ್ಧಿಗೆ, ವಿಶೇಷವಾಗಿಔಷಧಶಾಸ್ತ್ರ ಮತ್ತುರೋಗಶಾಸ್ತ್ರ ಪ್ರಯೋಗಾಲಯಗಳು ಹಾಗೂ ವಿಶ್ರಾಂತಿ ಕೊಠಡಿಗಳ ನವೀಕರಣಕ್ಕೆಯುರೋಫಿನ್ಸ್ಆಡ್ವಿನಸ್ ಲಿಮಿಟೆಡ್‌ನಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದಡಾ. ಕೃಷ್ಣಪ್ಪಎಚ್. ಅವರ ಬೆಂಬಲ ಸೇರಿದಂತೆ ಹಳೆಯ ವಿದ್ಯಾರ್ಥಿಗಳ ನಿರಂತರ ಸೇವೆಯನ್ನುಅವರು ಸ್ಮರಿಸಿದರು. ಕ್ಯಾಂಪಸ್ ನಿರ್ವಹಣೆ, ಭದ್ರತೆ ಹೆಚ್ಚಳ ಮತ್ತುಇತರ ನೂತನ ಉಪಕ್ರಮಗಳಿಗಾಗಿ ಡೀನ್‌ಡಾ. ಆರ್. ನಾಗರಾಜಅವರ ಶ್ರಮವನ್ನುಅವರು ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಜೆ. ರಾಧಾಕೃಷ್ಣನ್, ಐ.ಎ.ಎಸ್. ಅವರುಕರ್ನಾಟಕದಲ್ಲಿ ‘ಒನ್ ಹೆಲ್ತ್’ ಅತ್ಯುತ್ತಮಕೇಂದ್ರವನ್ನು (Centre of Excellence) ಸ್ಥಾಪಿಸಲು ಕರೆ ನೀಡಿದರು. ಆಧುನಿಕ ರೂಪಾಂತರಗೊಳ್ಳುತ್ತಿರುವ ಆರೋಗ್ಯರಕ್ಷಣಾ ವ್ಯವಸ್ಥೆಯಲ್ಲಿ ಪಶುವೈದ್ಯರ ನಿರ್ಣಾಯಕ ಪಾತ್ರವನ್ನುಅವರುಎತ್ತಿ ತೋರಿಸಿದರು. ಪಶುವೈದ್ಯರು “ರೋಗ ಪತ್ತೆದಾರರಾಗಿ” (Disease Detectives) ಕಾರ್ಯನಿರ್ವಹಿಸಬೇಕು ಎಂದುಒತ್ತಿಹೇಳಿದ ಅವರು, ಸಾರ್ವಜನಿಕಆರೋಗ್ಯ, ಜೀವವೈವಿಧ್ಯತೆ, ನಿಖರ ಜಾನುವಾರು ಸಾಕಣೆ, ಜೆನೋಮಿಕ್ಸ್ ಮತ್ತುಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMAR) ತಡೆಗಟ್ಟುವಲ್ಲಿ ಪಶುವೈದ್ಯರು ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೀದರ್‌ನ ಕೆ.ವಿ.ಎ.ಎಫ್.ಎಸ್.ಯು ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರುಗಳಾದ ಶ್ರೀಮತಿ ಲತಾ ಡಿ. ಎಚ್., ಡಾ. ವೆಂಕಟಾಚಲ ವಿ. ಎಸ್., ಡಾ. ಎಚ್. ಎಂ. ಜಯಪ್ರಕಾಶ್, ಶ್ರೀ ಬಸವರಾಜ್ ಪಿ. ಭತಮುರ್ಗೆ, ಶ್ರೀ ಸಂಗಪ್ಪಡಿ. ವಾಲಿಕಾರ, ಮತ್ತುಡಾ. ಸುಶಾಂತ್‌ರೈ, ಬೆಳ್ಳಿಪ್ಪಾಡಿ, ಕೆ.ವಿ.ಎ.ಎಫ್.ಎಸ್.ಯು ಕುಲಸಚಿವ ಪ್ರೊ. ಪಿ. ಟಿ. ರಮೇಶ್, ಬೆಂಗಳೂರು ಪಶುವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ವಸಂತ ಎಂ. ಶೆಟ್ಟಿ ಹಾಗೂ ಯುರೋಫಿನ್ಸ್ಅಧ್ಯಕ್ಷಡಾ. ಎಚ್. ಕೃಷ್ಣಪ್ಪ ಉಪಸ್ಥಿತರಿದ್ದರು.
ಐತಿಹಾಸಿಕ ನಡೆಯಾಗಿ, ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿಗೆ 1958 ರಲ್ಲಿದಾಖಲಾದ ಪ್ರಥಮ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಮಾಜಿ ಡೀನ್‌ಗಳು ಮತ್ತು ಆಡಳಿತಾಧಿಕಾರಿಗಳನ್ನು ಅವರ ಆಡಳಿತಾತ್ಮಕ ನಾಯಕತ್ವಕ್ಕಾಗಿಗೌರವಿಸಲಾಯಿತು, ಜೊತೆಗೆಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರಮುಖ ಪ್ರಾಯೋಜಕರು ಮತ್ತುಕೊಡುಗೆದಾರರನ್ನು ಗೌರವಿಸಲಾಯಿತು. 69ನೇ ಸಂಸ್ಥಾಪನಾ ದಿನಾಚರಣೆ, ತಾಂತ್ರಿಕ ವಿಚಾರ ಸಂಕಿರಣ ಮತ್ತುಓಪನ್ ಹೌಸ್‌ನ ಸಾರವನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನುಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಡೀನ್ ಪ್ರೊ. (ಡಾ.) ಆರ್. ನಾಗರಾಜಅವರು ಬೋಧನೆ, ಸಂಶೋಧನೆ ಮತ್ತು ವಿಸ್ತರಣಾಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಕಾಲೇಜಿನ ಸರ್ವತೋಮುಖಅಭಿವೃದ್ಧಿಗೆ ಸೂಕ್ತವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲು ಆಡಳಿತ ಮಂಡಳಿಯು ಶ್ರಮಿಸಲಿದೆಎಂದುಅವರು ಸಭೆಗೆ ಭರವಸೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಡಾ. ಶ್ರೀಕೃಷ್ಣ ಇಸ್ಲೂರ್‌ಅವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತುಡಾ. ಟಿ. ಎನ್. ಕೃಷ್ಣಮೂರ್ತಿಅವರು ವಂದನಾರ್ಪಣೆ ಮಾಡಿದರು. ಇಡೀಕಾರ್ಯಕ್ರಮವನ್ನುಡಾ. ಬಿ. ಪಿ. ಮಂಜುನಾಥ್, ಡಾ. ವಿ. ಜಗದೀಶ್ವರಿ ಮತ್ತುಡಾ. ಎಚ್. ಎಸ್. ಮಧುಸೂದನ್ ನಿರೂಪಿಸಿದರು. ಸಂಘಟನಾ ಬೆಂಬಲ: ಈ ಕಾರ್ಯಕ್ರಮವನ್ನುಡೀನ್, ಫ್ಯಾಕಲ್ಟಿ ಫೋರಂ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು—ಮುಖ್ಯವಾಗಿ ‘ರೆವೆರಿ’ (B.V.Sc.’92 / VH 7th Series) ತಂಡದೊAದಿಗೆ ಅನೇಕನಿಷ್ಠಾವಂತಹಳೆಯವಿದ್ಯಾರ್ಥಿಗಳುಜAಟಿಯಾಗಿ ಆಯೋಜಿಸಿದ್ದರು. ಕಾರ್ಯಕ್ರಮದನಂತರತಾAತ್ರಿಕ ಗೋಷ್ಠಿ, ಓಪನ್ ಹೌಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
***

