ಭಾರತದ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ – ಮಹಿಳೆಯರ ವಸ್ತ್ರ-ವೈಭವ ಹಬ್ಬ, ಮುದುವೆ ವಸ್ತ್ರಗಳ ಪ್ರದರ್ಶನ

ಭಾರತದ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ(Garment Fair) ಅರಮನೆ ಮೈದಾನ (Palace Grounds) ದಲ್ಲಿ ಜು.28 ರಿಂದ 30 ರವರೆಗೆ 31 ನೇ ಸಿಗಾ ಗಾರ್ಮೆಂಟ್ಸ್ ಮೇಳ:  ಅನಾವರಣಗೊಳ್ಳಲಿರುವ ಮಹಿಳೆಯರ ವಸ್ತ್ರ ವೈಭವ ಹಬ್ಬ, ಮುದುವೆ ವಸ್ತ್ರಗಳು ಸೇರಿ 150ಕ್ಕೂ ಅಧಿಕ ಬ್ರ್ಯಾಂಡ್ ಗಳ ಪ್ರದರ್ಶನ
ಬೆಂಗಳೂರು: ಸೌತ್ ಇಂಡಿಯಾ (Sಗಾರ್ಮೆಂಟ್ಸ್ ಅಸೋಸಿಯೇಷನ್(South India Garments Association) ನಿಂದ ಇದೇ ಮೊದಲ ಬಾರಿಗೆ ಮಹಿಳೆಯರ ವಸ್ತ್ರ-ವೈಭವವನ್ನು ಅದ್ದೂರಿಯಾಗಿ ಅನಾವರಣಗೊಳಿಸುವ 31 ನೇ B2B ವ್ಯಾಪಾರಿ ಮೇಳ ಸಿಗಾ ಗಾರ್ಮೆಂಟ್ಸ್ ಫೇರ್ -2026 ನಗರದ ಅರಮನೆ ಮೈದಾನದಲ್ಲಿ ಜುಲೈ 28 ರಿಂದ 30 ರವರೆಗೆ ಯೋಜಿಸಲಾಗಿದೆ ಎಂದು ಅಸೋಷಿಯೇಷನ್ ಅಧ್ಯಕ್ಷ ಅನುರಾಗ್ ಸಿಂಗ್ಲಾ(Anuragh Singh) ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ಆವೃತ್ತಿಗಳಿಂದ ಈ ಬಾರಿಯ ಗಾರ್ಮೆಂಟ್ಸ್ ಮೇಳ ಅತ್ಯಂತ ವಿನೂತನವಾಗಿರಲಿದ್ದು, ಮೇಳದಲ್ಲಿ ಮಹಿಳೆಯರ ವಸ್ತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ಹಬ್ಬ, ಮದುವೆ ಸಂಭ್ರಮಗಳಿಗೆ ಮತ್ತಷ್ಟು ಮೆರಗು ನೀಡುವ ವಿಶೇಷತೆಗಳಿಗೆ ಒತ್ತು ನೀಡಲಾಗಿದೆ. ಕ್ಯಾಶುಯಲ್, ಫಾರ್ಮಲ್ ಬಟ್ಟೆಗಳು, ಚಳಿಗಾಲದ ವಸ್ತ್ರಗಳು,ಪ್ಯಾಷನ್ ವಸ್ತ್ರಗಳು ಸೇರಿ 150 ಕ್ಕೂ ಹೆಚ್ಚಿನ ಬ್ರ್ಯಾಂಡ್ ಗಳು ಪ್ರದರ್ಶನವಾಗುತ್ತಿವೆ. ದಕ್ಷಿಣ ಭಾರತ, ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಜವಳಿ ವ್ಯಾಪಾರಿಗಳಿಗೆ ಇದು ಅತ್ಯಂತ ವಿನೂತನ ವೇದಿಕೆಯಾಗಿದೆ ಎಂದರು. ಜು.28 ರಂದು ಬೆಳಿಗ್ಗೆ ಅರಮನೆ ಮೈದಾನದ ಫ್ರಿನ್ಸ್ ಶ್ರೈನ್ ನ(Prince’s Shrine) 9ನೇ ದ್ವಾರದ ಸಭಾಂಗಣದಲ್ಲಿ ಪ್ರಸಿದ್ಧ ಜವಳಿ ಉದ್ಯಮಿ ಚೆನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕರಾದ ಬಿ.ಸಿ.ಶಿವಕುಮಾರ್ (B.C.Shivakumar) ಮೇಳಕ್ಕೆ ಚಾಲನೆ ನೀಡಲಿದ್ದಾರೆ.
CMAI ಸಂಘನೆಯ ಕಾರ್ಯದರ್ಶಿ ನವೀನ್ ಸಿನ್ಹಾ, ಜಿಜಿಎಂಎ ಅಧ್ಯಕ್ಷ ವಿಜಯ್ ಪುರೋಹಿತ್, ಡಿ.ಎಲ್.ವೈ ಡಿಸೈನಿಂಗ್ ಸ್ಟುಡಿಯೋದ ಸಂಸ್ಥಾಪಕ ದಿನೇಶ್ ಜ್ಹಲಾನಿ ಅವರು ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 2900 ವ್ಯಾಪಾರಿಗಳು ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಐದು ಸಾವಿರಕ್ಕೂ ಅಧಿಕ ಮಂದಿ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ವ್ಯಾಪಾರ ವಹಿವಾಟಿಗೆ ವೇದಿಕೆ ಸಜ್ಜಾಗಿದೆ ಎಂದು ಅನುರಾಗ್ ಸಿಂಗ್ಲಾ ಹೇಳಿದರು. ರಾಜ್ಯದ ಜವಳಿ ಉದ್ಯಮ ಅತಿ ಹೆಚ್ಚು ಉದ್ಯೋಗ ದೊರಕಿಸಿಕೊಟ್ಟಿದ್ದು, ಇದೀಗ ಕೃತಕ ಬುದ್ದಿಮತ್ತೆ ಸೇರಿದಂತೆ ಅತ್ಯಾಧ್ಯುನಿಕ ತಂತ್ರಜ್ಞಾನ ಮತ್ತು ಆನ್ ಲೈನ್ ಮಾರಾಟ ಹೆಚ್ಚಾಗುತ್ತಿರುವುದರಿಂದ ಅಧಿಕ ಪ್ರಮಾನದಲ್ಲಿ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಜವಳಿ ಉದ್ಯಮ ವಲಯಕ್ಕೆ ಟಾಟಾ, ಬಿರ್ಲಾ ಸೇರಿದಂತೆ ಬೃಹತ್ ಕಂಪೆನಿಗಳು ಲಗ್ಗೆ ಇಟ್ಟಿದ್ದು, ಸಣ್ಣ ವ್ಯಾಪಾರಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ ಎಂದರು. ಸಿಗಾ ಉಪಾಧ್ಯಕ್ಷ ನರೇಶ್ ಲಖನ್ ಪಾಲ್ ಮಾತನಾಡಿ, ಈ ಬಾರಿಯ ಸಿಗಾ ಮೇಳೆ ಹಿಂದೆಂದಿಗಿಂತಲೂ ವಿನೂತನವಾಗಿರಲಿದೆ. ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ 31ನೇ ಸಿಗಾ(SIGA) ಮೇಳದ ಆಯೋಜನೆಗಾಗಿ ಅಧ್ಯಕ್ಷರಾಗಿ ಶ್ರೀ ಗೋವಿಂದ್ ಮುಂದ್ರಾ, ಸಿಗಾ ಉಪಾಧ್ಯಕ್ಷರಾದ ರಾಜೇಶ್ ಚಾವತ್, ಕಾರ್ಯದರ್ಶಿ ತೇಜಸ್ ಮೆಹ್ತಾ ಉಪಸ್ಥಿತರಿದ್ದರು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles