ಮಕ್ಕಳ ಹಕ್ಕುಗಳನ್ನು ಗುರುತಿಸುವುದು, ಗೌರವಿಸುವುದು, ರಕ್ಷಿಸುವುದು ನಮ್ಮ ವರ್ತಮಾನ – ಭವಿಷ್ಯತ್ತನ್ನು ಕಾಪಾಡಿಕೊಂಡಂತೆ

ಮಕ್ಕಳ ಹಕ್ಕುಗಳನ್ನು ಗುರುತಿಸುವುದು, ಗೌರವಿಸುವುದು ಹಾಗೂ ರಕ್ಷಿಸುವುದು ನಮ್ಮ ವರ್ತಮಾನ ಹಾಗೂ ಭವಿಷ್ಯತ್ತನ್ನು ಕಾಪಾಡಿಕೊಂಡಂತೆ. ಇದನ್ನು ಸೇವೆ ಎಂದು ಪರಿಗಣಿಸಬೇಕಿಲ್ಲ. ಬದಲಿಗೆ ಪ್ರತಿಯೊಬ್ಬರೂ ಮಾಡಲೇ ಬೇಕಾದ ಅನಿವಾರ್ಯ ಕರ್ತವ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ (Dr. Thippeswamy) ಡಾ.ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.
ಅವರು ರೋಟರಿ ಸ್ಪಂದನ (Rotary Spandana) ವತಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ನೀಡಲಾದ ಸೇವಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಧಾರಣೆ ಪ್ರಕರಣಗಳು, ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮನೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸುರಕ್ಷಿತತೆ ಕಾಡುತ್ತಿದೆ. ಚಿಂದಿ ಆಯುವ ಮಕ್ಕಳು, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು, ಭಿಕ್ಷೆಯಲ್ಲಿ ತೊಡಗಿದ ಮಕ್ಕಳು, ಶಾಲೆಬಿಟ್ಟ ಮಕ್ಕಳು, ವಿಕಲಚೇತನ ಮಕ್ಕಳು, ಓದುವ ವಯಸ್ಸಿನಲ್ಲಿ ದುಡಿಯುತ್ತಿರುವ ಮಕ್ಕಳು ಹೀಗೆ ಮಕ್ಕಳು ಹಲವು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರ, ಸರ್ಕಾರೇತರ ಸಂಘಸಂಸ್ಥೆಗಳು ಹಾಗೂ ಸಮಾಜ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಕುಟುಂಬಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿದರೆ ಮಾತ್ರ ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಸಮರ್ಥವಾಗಿ ತಡೆಗಟ್ಟಬಹುದು ಎಂದರು.
ಸದರಿ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಡಾ.ತಿಪ್ಪೇಸ್ವಾಮಿ ಕೆ.ಟಿ ರವರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೆ ಸಮುದಾಯ ಅಭಿವೃದ್ಧಿಕ್ಷೇತ್ರದ ಸಾಧನೆಗಾಗಿ ಶ್ರೀ ಸಾಯಿ ವೆಂಕಟಚಲಂ, ರಸ್ತೆ ಸುರಕ್ಷತೆಗಾಗಿ ಶ್ರೀ ಪ್ರಕಾಶ್, ನಟನೆಗಾಗಿ  ಪ್ರಕಾಶ್ ಬೆಳವಡಿ ಹಾಗೂ ಸಮುದಾಯ ಅಭಿವೃದ್ಧಿಗಾಗಿ ಶ್ರೀಗಂಧ ಪೌಂಢೇಶನ್ ಸಂಸ್ಥೆಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಸ್ಪಂದನದ ಅಧ್ಯಕ್ಷರಾದ ಕಿಶೋರ್ ಮಾತನಾಡಿ, ಸೇವಾ ಚಟುವಟಿಕೆಯಲ್ಲಿ ತೊಡಗಿ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸುವುದು ಕೇವಲ ಅವರಿಗೆ ಕೊಡುವ ಗೌರವವಲ್ಲ ಬದಲಿಗೆ ಸಮಾಜದಲ್ಲಿ ಇತರರಿಗೂ ಪ್ರೇರಣೆ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ರೋಟರಿ ಸ್ಪಂದನ ವತಿಯಿಂದ ಇಂತಹ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸ್ಪಂದನದ ಅಧ್ಯಕ್ಷರಾದ ಶ್ರೀ ಕಿಶೋರ್ ರವರು, ಕಾರ್ಯದರ್ಶಿ ವಿನಯ್ ಸಾಲಿಯಾನ, ಹಾಗೂ ನಿರ್ದೇಶಕ ಯೋಗೇಶ್ ಲಕ್ಕಣ್ಣ, ಗುರುನಾಗೇಶ್ ಸೇರಿದಂತೆ ಹಲವಾರು ರೊಟೇರಿಯನ್ ರವರು ಭಾಗವಹಿಸಿದ್ದರು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles