Home Blog Page 66

ಕೆಂಪೇಗೌಡರ ಆಡಳಿತವೇ ನಮಗೆ ಮಾದರಿ-ಸಿಎಂ

ಬೆಂಗಳೂರು: ಬೆಂಗಳುರು ನಗರ ಕಟ್ಟಿದ ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದ ಅದ್ಭುತ ಆಡಳಿತಗಾರರಾಗಿದ್ದರು, ಅವರು ನಮ್ಮ ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ,
ಕೆಂಪೇಗೌಡರ 516 ನೇ ಜಯಂತಿ
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡ ರವರ 516 ನೇ ಜಯಂತಿ ಯ ಅಂಗವಾಗಿ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಸರ್ಕಾರ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಚರ್ಚೆ ಮಾಡಿ ಜನ್ಮದಿನಾಂಕವನ್ನು ತಿಳಿದುಕೊಂಡಿದೆ, ಅಂದಿನಿಂದ ನಿರಂತರವಾಗಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ, ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ,
ಕೆಂಪೇಗೌಡರ ಆಡಳಿತ ನಮಗೆ ಮಾದರಿ
ಇನ್ನು ಬೆಂಗಳೂರಿನ ನಾಲ್ಕು ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಅವರು ಆಡಳಿತದ ಬಗ್ಗೆ ಬಹಳ ಉತ್ತಮವಾದ ತಿಳುವಳಿಕೆ ಇದ್ದ ವ್ಯಕ್ತಿ, ಹೀಗಾಗಿಯೇ ಚಿಕ್ಕಪೇಟೆ,ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ತಮ್ಮ ಆಡಳಿತದ ಸಮಯದಲ್ಲಿ ನಿರ್ಮಿಸಿದ್ದು, ಅವರ ಆಡಳಿತ ನಮಗೆ ಮಾದರಿಯಾಗಿದೆ, ಬೆಂಗಳೂರನ್ನು ಅಭಿವೃದ್ಧಿ ಮಾಡುವ ಅವರ ಕನಸನ್ನು ನಮ್ಮ ಸರ್ಕಾರ ನನಸು ಮಾಡುತ್ತಿದೆ ಎಂದಿದ್ದಾರೆ.

ನುಡಿ ತೋರಣ-  ತ್ರೈವಾರ್ಷಿಕ ಸಾಹಿತ್ಯ ಸಮಾವೇಶ 

*”ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ತನ್ನ ತ್ರೈವಾರ್ಷಿಕ ಸಾಹಿತ್ಯ ಸಮಾವೇಶವನ್ನು ದಿನಾಂಕ 29-06-2025, ಭಾನುವಾರದಂದು ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಇಲ್ಲಿ ಬೆಳಗ್ಗೆ 9-30 ರಿಂದ ಸಂಜೆ 5-00 ಗಂಟೆಯವರೆಗೆ ಆಯೋಜಿಸಿದೆ.
ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ,  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ರವರು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯದ ಸಮಕಾಲೀನ ಚಿಂತಕರು, ಬರಹಗಾರರು, ವಿಮರ್ಶಕರಾದ ಶ್ರೀ ಜಿ. ಬಿ. ಹರೀಶ್ ರೊಡನೆ ‘ಬರಹಗಾರ ಮತ್ತು ಓದುಗನ ನಡುವಿನ ಅನುಸಂಧಾನ’ ಕುರಿತು ಸಂವಾದ ಏರ್ಪಡಿಸಲಾಗಿದೆ. ವೇದಿಕೆಯು ಪ್ರತಿವರ್ಷ ಕೊಡಮಾಡುವ ‘ನುಡಿ ಭೂಷಣ’ ಪ್ರಶಸ್ತಿಯನ್ನು ಮಂಡ್ಯ ಖ್ಯಾತ ಸಾಹಿತಿ ತ.ನಾ.ಶಿವಕುಮಾರ್ (ತನಾಶಿ), ಕಲುಬುರ್ಗಿಯ ಖ್ಯಾತ ನೇತ್ರತಜ್ಞ ಡಾ. ಉದಯ ಪಾಟೀಲ ಹಾಗು ಬೆಂಗಳೂರಿನ ಖ್ಯಾತ ಸಾಹಿತಿ ಅನುಸೂಯ ಸಿದ್ಧರಾಮ ಅವರಿಗೆ ಪ್ರದಾನ ಮಾಡಲಾಗುವುದು. ಅಲ್ಲದೆ ಬಳಗದ ಸದಸ್ಯರಿಂದ ‘ಜಾನಪದ ಸಾಂಸ್ಕೃತಿಕ ವೈಭವ’, ‘ಆಶು ಕವಿಗೋಷ್ಠಿ’ ಇನ್ನಿತರ ಕಾರ್ಯಕ್ರಮಗಳನ್ನು ಸಮಾವೇಶದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್?

ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಹಿನ್ನೆಲೆಯಲ್ಲಿ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಬಿಜೆಪಿ ಹೈಕಮಾಂಡ್ ಜುಲೈ ಎರಡನೇ ವಾರದೊಳಗೆ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಿಸಲಿದೆ ಎಂದು ಖಚಿತವಾಗಿದೆ. ಈ ನಡುವೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ಅವರ ಬದಲಿಗೆ ಹೊಸ ಮುಖವನ್ನು ಆಯ್ಕೆ ಮಾಡುವ ಚಿಂತನೆಯ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ, ಕಳೆದ ಆರು ತಿಂಗಳಿಂದ ಬಿಜೆಪಿಯ ಒಳಗಿನ ಕೆಲವು ಬಣಗಳು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ತೀವ್ರ ಒತ್ತಡ ಹೇರಿವೆ. ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನದ ಜೊತೆಗೆ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನೂ ಒಪ್ಪಿಕೊಳ್ಳಲು ಸಿದ್ಧರಿದ್ದರು. ಆದರೆ, ಹೈಕಮಾಂಡ್ ಅವರಿಗೆ ಕೇಂದ್ರ ಸಚಿವರಾಗಿ ಗಮನ ಕೊಡುವಂತೆ ಸೂಚಿಸಿದ್ದರಿಂದ ಈ ಚರ್ಚೆ ತಾತ್ಕಾಲಿಕವಾಗಿ ಕೊನೆಗೊಂಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿಯೊಬ್ಬರು, ವಿಜಯೇಂದ್ರ ಅವರ ಬದಲಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹಿಂದುಳಿದ ವರ್ಗದ ವಿ. ಸುನೀಲ್ ಕುಮಾರ್, ಲಿಂಗಾಯತ-ಪಂಚಮಸಾಲಿ ಕೋಟಾದ ಅರವಿಂದ ಬೆಲ್ಲದ್, ಮತ್ತು ದಲಿತ ಕೋಟಾದ ಅರವಿಂದ ಲಿಂಬಾವಳಿ ಅವರ ಹೆಸರುಗಳನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಸುನೀಲ್ ಕುಮಾರ್ ಅವರೊಂದಿಗೆ ಹೈಕಮಾಂಡ್ ಈಗಾಗಲೇ ಚರ್ಚೆ ನಡೆಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಸುನೀಲ್ ಕುಮಾರ್ ಅವರು ಈ ಸ್ಥಾನಕ್ಕೆ ಸ್ಪಷ್ಟ ಒಪ್ಪಿಗೆಯನ್ನು ವ್ಯಕ್ತಪಡಿಸಿಲ್ಲ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಳೆದ ಮಂಗಳವಾರದಿಂದ ದೆಹಲಿಯಲ್ಲಿದ್ದಾರೆ. ಈ ಭೇಟಿಯಿಂದ ವಿಪಕ್ಷ ನಾಯಕ ಸ್ಥಾನದ ಬದಲಾವಣೆಯ ಕುತೂಹಲವೂ ಶುರುವಾಗಿದೆ. ಒಂದು ವೇಳೆ ಬದಲಾವಣೆಯಾದರೆ, ಸುನೀಲ್ ಕುಮಾರ್ ಅವರಿಗೆ ಈ ಜವಾಬ್ದಾರಿ ದೊರೆಯಬಹುದು ಎಂಬ ಊಹಾಪೋಹಗಳಿವೆ. ಆದರೆ, ಈ ಭೇಟಿಯ ನಿಜವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಆರ್. ಅಶೋಕ್ ಅವರ ದೆಹಲಿ ಭೇಟಿಯ ಬಗ್ಗೆ ಸ್ಪಷ್ಟೀಕರಣ ನೀಡಿ, “ಅಶೋಕ್ ಉತ್ತಮವಾಗಿ ಕೆಲಸ ಮಾಡಿದ್ದಾರೆ. ದೆಹಲಿಗೆ ಬೇರೆ ಕಾರಣಕ್ಕೆ ಹೋಗಿರಬಹುದು,” ಎಂದು ಹೇಳಿದ್ದಾರೆ. ತಮ್ಮ ಸ್ಥಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಥಯಾತ್ರೆಯ ವೇಳೆ ಅಡ್ಡಾದಿಡ್ಡಿ ಓಡಿದ ಆನೆ-ಭಕ್ತರಿಗೆ ಗಾಯ

ಅಹಮಾದಾಬಾದ್: 148 ನೇ ಭಗವಾನ್ ಜಗನ್ಯಾಥದ ಮಹಾ ರಥಯಾತ್ರೆಯ ಸಮಯದಲ್ಲಿ ಆನೆಯೊಂದು ಭಕ್ತರನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಜನರ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ,
ಇತಿಹಾಸ ಪ್ರಸಿದ್ಧ ಒಡಿಶಾಸ ಪುರಿ ಜಗನ್ನಾಥ ದೇಗುಲದ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಇದನ್ನು ನೋಡಲೆಂದು ದೇಶದಲ್ಲಿ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ, ಹೀಗೆ ಜಗನ್ನಾಥನ ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿದೆ,
ಬೆಳಗ್ಗೆ 10.15 ರ ವೇಳೆಗೆ ಜಗನ್ನಾತನ ರಥಯಾತ್ರೆ ಖದಿಯಾ ಪ್ರದೇಶದ ಮೂಲಕ ಹೋಗುತ್ತಿರುವಾಗ ಸಿಂಗಾರಗೊಂಡಿದ್ದ ಆನೆಯೊಂದು ಇದ್ದಕಿದ್ದಂತೆ ಅಡ್ಡಾದಿಡ್ಡಿ ಓಡಲು ಆರಂಭಿಸಿದೆ, ಇದನ್ನು ನೋಡಿದ ಉಳಿದ ಮತ್ತೆರಡು ಆನೆಗಳು ಅವುಗಳು ಕೂಡ ಓಡಿವೆ,
ಈ ಘಟನೆಯಲ್ಲಿ 9 ಭಕ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಬಳಿಕ ಮಾವುತ ಆನೆಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ,

ತುಮಕೂರನಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಕಿರಿಕ್!

ತುಮಕೂರು: ಕೆಂಪೇಗೌಡ ಜಯಂತಿಗೆ ಆಹ್ಮಾನಿಸಿಲ್ಲ ಎಂದು ಜೆಡಿಎಸ್ ಮುಖಂಡ ಎಸ್ ಆರ್ ಗೌಡ ಹಾಗೂ ಬೆಂಬಲಿಗರು ತಹಶೀಲ್ದಾರ್ ಸಚ್ಚಿದಾನಂದಗೆ ತೀವ್ರ ತರಾಟೆ ತೆಗೆದುಕೊಂಡ ತುಮಕೂರಿನಲ್ಲಿ ಶುಕ್ರವಾರ ಘಟನೆ ನಡೆದಿದೆ,
ಕಾರ್ಯಕ್ರಮ ಆರಂಭವಾಗುತ್ತಲೇ ವೇದಿಕೆಗೆ ಆಗಮಿಸಿದ ಎಸ್ ಆರ್ ಗೌಡ ತಹಶೀಲ್ದಾರ್ ರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೆಂಪೇಗೌಡ ಜಯಂತಿಯನ್ನು ಕೆಲವು ಪಕ್ಷದ ಕೆಲ ಮುಖಂಡರಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೀರಾ ಅಂತಾ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದ್ದಾರೆ,
ತುಮಕೂರಿನ ಸಿರಾ ತಲ್ಲಾಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ನ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅಧ್ಯಕ್ಷತೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿತ್ತು, ಈ ವೇಳೆ ವೇದಿಕೆಯ ಬಳಿ ಬಂದ ಜೆಡಿಎಸ್ ಮುಖಂಡರು ಈ ತಾರತಮ್ಯಕ್ಕೆ ಶಾಸಕ ಜಯಚಂದ್ರ ಅವರೇ ಸ್ಪಷ್ಟನೆ ಕೊಡಬೇಕು ಎಂದು ಮುಖಂಡರು ಪಟ್ಟು ಹಿಡಿದಿದ್ದು, ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ ಈ ವೇಳೆ ಗುಪ್-ಚುಪ್ ಆಗಿ ಕುಳಿತ ಘಟನೆಯೂ ನಡೆಯಿತು, ಬಳಿಕ ತಹಶೀಲ್ದಾರ್ ಸಾರ್ವಜನಿಕರ ಎದುರಿನಲ್ಲಿ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದರು,

ಸಚಿವರ ಬದಲಾವಣೇ ನಿಜವೇ?-ಉತ್ತರಿಸದೇ ಮುಂದ ಹೋದ ಡಿಕೆಶಿ!

ಬೆಂಗಳೂರು: ಸೆಪ್ಟೆಂಬರ್ ಒಳಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾಗಲಿದೆಯೇ? ಹೀಗೊಂದು ಸುದ್ದಿಯೊಂದು ರಾಜಕೀಯ ವಲಯದಲ್ಲಿ ಒಡಾಡುತ್ತಿದೆ, ಆದರೆ ಡಿಸಿಎಂ ಡಿಕೆಶಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ,
ಶುಕ್ರವಾರ ಕೆಂಪೇಗೌಡ ಜಯಂತಿ ಅಂಗವಾಗಿ ಬಿಬಿಎಂಪಿ ಆವರಣದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, ಈ ವೇಳೆ ಸೆಪ್ಟೆಂಬರ್ ನಲ್ಲಿ ಸರ್ಕಾರದ ಸಚಿವ ಸಂಪುಟ ಬದಲಾಗಲಿದೆಯೇ ಎಂಬ ಪ್ರಶ್ನೆ ಕೇಳಿದಾಗ ಉತ್ತರ ನೀಡದೇ ಅಲ್ಲಿಂದ ಹೊರಟಿದ್ದಾರೆ,
ಸಚಿವ ಕೆ.ಎನ್ ರಾಜಣ್ಣ ಗುರುವಾರ ಸೆಪ್ಟೆಂಬರ್ ನಂತರ ಪಕ್ಷದಲ್ಲಿ ಕ್ರಾಂತಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು, ಅಲ್ಲದೇ ನಾಯಕತ್ವವೂ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಹಲವು ಶಕ್ತಿಕೇಂದ್ರಗಳು ಇವೆ ಎಂದು ನಿಗೂಢ ಹೇಳಿಕೆ ನೀಡಿದ್ದರು,

ಬಗೆದಷ್ಟು ಬಯಲಾಗುತ್ತಿವೆ ವಸತಿ ಯೋಜನೆ ಹಗರಣ!

ಬೆಂಗಳೂರು: ರಾಜ್ಯ ವಸತಿ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ, ಕಮಿಷನ್ ಗಾಗಿ ವಸತಿ ಯೋಜನೆಯಲ್ಲಿ ಪ್ಯಾಕೇಜ್ ಟೆಂಡರ್ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಪಾಟೀಲ್, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್ ವಿರುದ್ಧ ದೂರು ನೀಡಿದ್ದಾರೆ,
ಪ್ಯಾಕೇಜ್ ಟೆಂಡರ್ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಆದೇಶಿಸಿದ್ದಾರೆ, ಹೀಗಿದ್ದರೂ ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಸಿಎಂ ಆದೇಶವನ್ನೇ ಅಧಿಕಾರಿಗಳು ಧಿಕ್ಕರಿಸಿದ್ದಾರೆ, ಕಮಿಷನ್ ಗಾಗಿ ತಮಗೆ ಬೇಕಾದವರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಪ್ಯಾಕೇಜ್ ಟೆಂಡರ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ,

ಕೆಪಿಸಿಸಿ ಅಧ್ಯಕ್ಷ ಕುರ್ಚಿಗೆ ಬಂತಾ ಕುತ್ತು? ಯರಿಗೆ ಪಟ್ಟಾಭಿಷೇಕ ಮಾಡ್ತಾರೆ ಖರ್ಗೆ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ಆಗುತ್ತಾ, ಅದರಲ್ಲೂ ಡಿಕೆ ಶಿವಕುಮಾರ್ ಗೆ ಶಾಕ್ ಕೊಡಲು ಹೈಕಮಾಂಡ್ ಸಿದ್ಧತೆ ಮಾಡಿಕೊಂಡಂತೆ ಕಾಣ್ತಿದೆ, ಅದಕ್ಕೆ ಕಾರಣ ಕೆ.ಎನ್.ರಾಜಣ್ಣ ಆಡಿದ ಮಾತುಗಳು.
ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಸಮರ ಸಾರಿ, ಪದೇ ಪದೇ ತೊಡೆ ತಟ್ಟುವ ಕೆ ಎನ್ ರಾಜಣ್ಣ ಯುದ್ಧ ಗೆಲ್ತಾರಾ ಎಂಬ ಚರ್ಚೆ ಶುರುವಾಗಿದೆ, ಒಬ್ಬರಿಗೆ ಒಂದೇ ಹುದೆ ಇರಬೇಕು ಎಂಬ ಮದುಗಿರಿ ನಾಯಕನ ಬೇಡಿಕೆಗೆ ಹೈಕಮಾಂಡ್ ಮಣಿಯೋದು ಪಕ್ಕಾ ಆಗಿದೆ, ಬೆಂಗಳೂರನಲ್ಲಿ ಮಾತನಾಡಿದ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಕಾಂಗ್ರೆಸ್ ಸಾರಥ್ಯ ನೀಡಿದ್ರೆ ನನಗೆ ಸಚಿವ ಸ್ಧಾನ ಬೇಡ ಎಂದಿದ್ದಾರೆ,

 

ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ

ಮೈಸೂರು: ನಗರದಲ್ಲಿ ಆಷಾಢ ಶುಕ್ರವಾರ  ಸಂಭ್ರಮ ಮನೆ ಮಾಡಿದೆ. ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ   ಅಪಾರ ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬಂದಿದೆ.

ಚಾಮುಂಡೇಶ್ವರಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿದೆ. ದೇವಾಲಯವನ್ನ ವಿಶೇಷ ಹೂಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು.

ಈ ಬಾರಿ 300 ರೂ., 2000 ರೂ. ಟಿಕೆಟ್ ಹಾಗೂ ಧರ್ಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 2000 ರೂ. ಟಿಕೆಟ್‌ಗೆ ಪ್ರಸಾದ ಕಿಟ್ ಸಹ ನೀಡಲಾಗುವುದು. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಆಗಿದೆ. ಲಲಿತ್ ಮಹಲ್ ಹೆಲಿಪ್ಯಾಡ್‌ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಟ್ಟಿಲು ಮೂಲಕ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ

ಅದ್ದೂರಿಯಾಗಿ ಸಾಗಿದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ

ಅದ್ದೂರಿಯಾಗಿ ಸಾಗಿದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ

ಬೆಂಗಳೂರು, ಜೂನ್ 26: ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಐತಿಹಾಸಿಕ ʼಬೆಂಗಳೂರು ಬಂಡಿದೇವರ ಉತ್ಸವʼ ವನ್ನು ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಉತ್ಸವದ ಎರಡನೇ ದಿನವಾದ ಇಂದು ನಗರದ ಹೃದಯಭಾಗದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಜೆ ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಇಂದಿನ ಉತ್ಸವ ಆರಂಭಿಸಲಾಯಿತು.  ಪುತ್ಥಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ನಂತರ ಮೆರವಣಿಗೆ ಕಾರ್ಯ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ರೈತಾಪಿ ವರ್ಗದವರನ್ನು ಪ್ರತಿನಿಧಿಸುವ ಬೆಂಗಳೂರಿನ ಸುತ್ತಮುತ್ತಲಿನಿಂದ ಸುಮಾರು 2೦ಕ್ಕೂ ಹೆಚ್ಚು ಅಲಂಕೃತವಾದ ಎತ್ತಿನಬಂಡಿಗಳು ಕಂಡುಬಂದಿತು. ಬಂಡಿಯಲ್ಲಿ ಕೆಂಪೇಗೌಡರ ಪೂರ್ವಿಕರಾದ ಕೆಂಪಣ್ಣಸ್ವಾಮಿ ಹಾಗೂ ಶ್ರೀ ವೀರಣ್ಣ ಸ್ವಾಮಿ ಉತ್ಸವ ಮೂರ್ತಿಗಳನ್ನಿಟ್ಟು ಪೂಜಿಸಿ, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೆರವಣಿಗೆಯು ಆರಂಭಗೊಂಡಿತು. ಹಡ್ಸನ್ ಸರ್ಕಲ್, ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿ, ಹೈಕೋರ್ಟ್ ಆವರಣ ಮತ್ತು ಗೋಪಾಲ್ ಗೌಡ ಸರ್ಕಲ್ ಮೂಲಕ ಸಾಗಿ, ವಿಧಾನಸೌಧದ ಬಳಿಯ ಕೆಂಪೇಗೌಡರ ಪ್ರತಿಮೆಯ ಬಳಿ ಮೆರವಣಿಗೆಯು ಸಾಗಿತು. ಸುಮಾರು 2000 ಜನ ಈ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿಧಾನಸೌಧದ ಆವರಣದ ಕೆಂಪೇಗೌಡರ ಪ್ರತಿಮೆಗೆ ನಮಸ್ಕರಿಸಿ ಬಳಿಕ  ದಿವ್ಯಸಾನಿಧ್ಯವಹಿಸಿದ್ದಂತಹ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬಂಡಿದೇವರ ಉತ್ಸವವು ನಮ್ಮ ಬೇರುಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಆಚರಣೆ. ಮುಂಚೆ ಹಳ್ಳಿಗಳಲ್ಲಿ ಈ ಆಚರಣೆಯಿತ್ತು. ಈಗ ನಗರ ಭಾಗದಲ್ಲಿ ಈ ಆಚರಣೆ ಆರಂಭಗೊಂಡಿರುವುದು ನಿಜಕ್ಕೂ ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸೋಣ ಎಂದರು.

ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮಾತನಾಡಿ, ರೈತ ಬಾಂಧವರೆಲ್ಲರೂ ಅತ್ಯಂತ ಸಂಭ್ರಮದಿಂದ ಬಂಡಿ ಉತ್ಸವವನ್ನು ಮಾಡಿದ್ದೀರಿ. ಈ ರೀತಿಯಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಪ್ರಯತ್ನವಾಗುತ್ತಿರುವುದು ನಿಜಕ್ಕೂ ಸಂತಸ. ನಾಳೆ ಸುಮ್ಮನಹಳ್ಳಿಯ ೫ ಎಕರೆ ಜಾಗದಲ್ಲಿ ಕೆಂಪೇಗೌಡರ ಭವನಕ್ಕೆ ಶಂಕುಸ್ಥಾಪನೆಯಾಗಲಿದೆ. ನಮ್ಮ ಕೆಂಪೇಗೌಡರ ಭವನಕ್ಕೆ ೧೦೦ ಕೋಟಿ ಮೀಸಲಿಟ್ಟಿದ್ದೇವೆ ಜೊತೆಗೆ ಅವರ ಹೆಸರಿನಲ್ಲಿ ಗ್ರಂಥಾಲಯಗಳನ್ನು ತೆರೆಯಲು ಯೋಜಿಸಿದ್ದೇವೆ ಎಂದರು.

ಬಳಿಕ ಗಣ್ಯರೆಲ್ಲರೂ ಸೇರಿ ಹಾಜರಿದ್ದವರೆಲ್ಲರಿಗೂ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿಪುರ ಶಾಸಕರಾದ ಗೋಪಾಲಯ್ಯ, ಹಿರಿಯ ಐಆರ್‌ಎಸ್‌ ಅಧಿಕಾರಿ ಹಾಗೂ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜಯರಾಮ್‌ ರಾಯಪುರ, ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅ‍ಧ್ಯಕ್ಷರಾದ ತಲಕಾಡು ಚಿಕ್ಕರಂಗೇಗೌಡ, ಕಾರ್ಯದರ್ಶಿ ಎಂ. ಅಮರೇಶ್‌, ಸಮಿತಿಯ ಉಪಾಧ್ಯಕ್ಷರಾದ ನಾಗರಾಜ್‌ (ನಿವೃತ್ತ ಎಸ್‌ಪಿ), ಹಿರಿಯ ಉಪಾಧ್ಯಕ್ಷರಾದ ಗೋವಿಂದೇಗೌಡರು, ಕೆಂಪೇಗೌಡ ಸಂಶೋಧನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿಯಾದ ಜೆ. ನಾಗರಾಜ್‌, ಮುಖೇಶ್‌, ಮುನಿರಾಜು, ಎನ್.ನಾಗರಾಜು, ಮಧು ಹಾಗೂ ಕಾರ್ಯಕಾರಿ ಸಮಿತಿಯ ಡಾ.ಬಿ.ಎಸ್. ಪುಟ್ಟಸ್ವಾಮಿ, ದಿವ್ಯಾ ರಂಗೇನಹಳ್ಳಿ, ಜೆ.ನಾಗರಾಜ್, ಡಾ.ಸುನಿತಾ, ದಿವ್ಯಾ ಹರ್ಷ, ಡಾ.ಬಿ.ಪಾಂಡುಕುಮಾರ್, ಎನ್.ಆರ್. ಧನಂಜಯ, ಮ್ಯಾಗೇರಿ ನಾರಾಯಣಸ್ವಾಮಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಪ್ರೊ.ಜಯಪ್ರಕಾಶಗೌಡ, ಎಸ್.ಎ.ಪುಟ್ಟರಾಜು, ಎಂ.ಎ.ಮದನ್ ಕುಮಾರ್, ಗೋವಿಂದೇಗೌಡ, ಹಳ್ಳಿಕಾರ್ ದೊಡ್ಡಗೌಡ, ಉಮಾ ಬಸವರಾಜ್‌,  ಭಾರತಿ ಜಯರಾಮ ಹಾಗೂ ಫಸ್ಟ್‌ ಸರ್ಕಲ್‌ ಸಂಘಟನೆಯವರು ಉಪಸ್ಥಿತರಿದ್ದರು.