Home Blog Page 63

ಒಟ್ಟಾಗಿಯೇ ಇದ್ದೇವೆ ಎಂದು ಹೇಳಿ ಡಿಕೆಶಿಯ ಕೈ ಎತ್ತಿದ ಸಿಎಂ

ಮೈಸೂರು: ಸೆಪ್ಟೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂಬ ಬಿರುಗಾಳಿ ಎದ್ದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಾನು ಮತ್ತು ಡಿಕೆ ಶಿವಕುಮಾರ್‌ ಒಟ್ಟಾಗಿಯೇ ಇದ್ದೇವೆ. ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಇರಲಿದೆ ಎಂದು ಹೇಳಿದರು.    ಮಾಧ್ಯಮಗಳ ಜೊತೆ ಡಿಕೆಶಿ ಕೈ ಹಿಡಿದು ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ತಂದಿಡುವ ಪ್ರಯತ್ನವನ್ನು ಮಾಡಿದರೂ ಅದು ಆಗುವುದಿಲ್ಲ. ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಚುನಾವಣೆ ಸೋತಿದ್ದಾನೆ ಹೇಳಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದರು,

ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದು ಹೇಳುವ ಮೂಲಕ ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡುವುದಿಲ್ಲ ಎಂದಿದ್ದ ಅಶೋಕ್‌ಗೆ ತಿರುಗೇಟು ನೀಡಿದರು.

ಸುರ್ಜೇವಾಲಾ ಅವರು ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಕಾಂಗ್ರೆಸ್ ಶಾಸಕರ ಕಷ್ಟ ಸುಖ ಕೇಳುತ್ತಾರೆ. ಪಕ್ಷ ಸಂಘಟನೆ ಬಗ್ಗೆ ಸಲಹೆ ಕೊಡುತ್ತಾರೆ. ಅದು ಅವರ ಕೆಲಸ, ಇದರಲ್ಲಿ ಬೇರೆ ಏನು ವಿಶೇಷ ಇಲ್ಲ ಎಂದರು

ಗಿಗ್ ಕಾರ್ಮಿಕರಿಗೆ ಬಂಪರ್-ತೆಲಂಗಾಣ ಸರ್ಕಾರದಿಂದ ಹೊಸ ಮಸೂದೆ!

ಹೈದರಾಬಾದ್: ವೈಟ್ ಬೋರ್ಡ್ ವಾಹನಗಳನ್ನು ಸರಕು ಸಾಗಣೆ ಮತ್ತು ಬಾಡಿಗೆ ಪ್ರಯಾಣಕ್ಕೆ ಬಳಸಬಾರದು ಎನ್ನುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್, ಗಿಗ್ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ, ಈ ಬೆನ್ನಲ್ಲೇ ತೆಲಂಗಾಣ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ,
ತೆಲಂಗಾಣ ಸರ್ಕಾರವು ರಾಜ್ಯದ 4.2 ಲಕ್ಷ ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಬೆಂಬಲಿಸುವ ಮಸೂದೆಯನ್ನು ಪರಿಚಯಿಸಲು ಸಜ್ಜಾಗಿದೆ,
ಈ ಮಸೂದೆ ಗಿಗ್ ಕಾರ್ಮಿಕರನ್ನು ಅಗ್ರಿಗೇಟರ್ ಗಳಿಂದ ಕಡ್ಡಾಯವಾಗಿ ನೋಂದಾಯಿಸುವುದು, ಗಿಗ್ ಕೆಲಸಗಾರರ ಕಲ್ಯಾಣ ನಿಧಿ ಮೇಲ್ವಿಚಾರಣೆ ಮಾಡುವ ಕಾರ್ಮಿಕರು, ಅಗ್ರಿಗೇಟರ್ ಗಳು ಮತ್ತು ಸರ್ಕಾರವನ್ನು ಒಳಗೊಂಡ ತ್ರಿಪಿಕ್ಷೀಯ ಮಂಡಳಿಯ ರಚನೆ ಸೇರಿದಂತೆ ಪ್ರಮುಖ ನಿಬಂಧನೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ,
ಈ ಮಸೂದೆಯ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಎರಡನ್ನು ಅರ್ಥಪೂರ್ಣ ರೀತಿಯಲ್ಲಿ ಉತ್ತೇಜಿಸುತ್ತದೆ, ರಾಜಸ್ಧಾನ ಮತ್ತು ಕರ್ನಾಟಕವನ್ನು ಅನುಸರಿಸಿ ಈ ವಿಷಯದ ಬಗ್ಗೆ ಕಾನೂನು ರಚಿಸಿದ ಮೂರನೇ ರಾಜ್ಯ ತೆಲಂಗಾಣ ಪ್ರತಿಯೊಂದು ರಾಜ್ಯದಲ್ಲಿಯೂ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ನ್ಯಾಯ ಮತ್ತು ನ್ಯಾಯಯುತ ಕೆಲಸದ ಪರಿಸ್ಧಿತಿ ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ,

ಬೆಂಗಳೂರು: ಕಾಂಗ್ರೆಸ್‌ನ  ರಾಷ್ಟ್ರೀಯ ಮಾಧ್ಯಮ ಸಮಿತಿ ಸದಸ್ಯೆ ಐಶ್ವರ್ಯಾ ಮಹಾದೇವ್ (Aishwarya Mahadev) ಅವರನ್ನು ಕೆಪಿಸಿಸಿಯ  ಸಾಮಾಜಿಕ ಮಾಧ್ಯಮ  ವಿಭಾಗದ ಅಧ್ಯಕ್ಷರನ್ನಾಗಿ ಭಾನುವಾರ ನೇಮಿಸಲಾಗಿದೆ.‌ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆಯಾಗಿ ಐಶ್ವರ್ಯಾ ಮಹಾದೇವ್ ಅವರನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ಎಐಸಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಶ್ವರ್ಯಾ ಅವರು ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹಾದೇವ್ ಅವರ ಪುತ್ರಿಯಾಗಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯ ಕೆಆರ್​​ ನಗರದವರು. ಮಂಚನಹಳ್ಳಿ ಮಹಾದೇವ್ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಅತ್ಯಾಪ್ತರಾಗಿದ್ದರು. ಮಂಚನಹಳ್ಳಿ ಮಹಾದೇವ್ 14 ವರ್ಷ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಹುದ್ದೆಗೇರಿದ್ದ ಐಶ್ವರ್ಯಾ, ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆಯಾಗಿ ಕಾರ್ಯನಿರ್ವಹಿಸಿದ್ದೂ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ವಸತಿ ಬುಕಿಂಗ್ ನಂಬಿದವರಿಗೆ ನಾಮ!

ರಾಯಚೂರು: ದೇವರ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ, ಹಣದಾಹಕ್ಕೆ ಕಿಡಿಗೇಡಿಗಳು ಅಮಾಯಕ ಭಕ್ತರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ,
ಗುರುರಾಯ ಸನ್ನಿಧಿ ಮಂತ್ರಾಲಯದಲ್ಲಿ ಓರ್ವ ಭಕ್ತರಿಗೆ ಕಿಡಿಗೇಡಿಗಳು ವಂಚಿಸಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ, ಮಂತ್ರಾಲಯ ಮಠದ ವಿಜಯೇಂದ್ರ ವಸತಿ ಗೃಹದ ಹೆಸರಿನಲ್ಲಿ ಅನ್‍ಲೈನ್ ಬುಕಿಂಗ್ ಮೂಲಕ ಮುಂಗಡವಾಗಿ ಎರಡು ಸಾವಿರ ರೂ ಪಡೆದು ವಂಚಿಸಲಾಗಿದೆ,
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಅನ್ ಲೈನ್ ಬುಕ್ಕಿಂಗ್ ಹೆಸರಲ್ಲಿ ಮುಂಗಡವಾಗಿ 2000 ರೂ ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡಿದ ವಂಚಿಸಲಾಗಿದೆ,
ಘಟನೆ ಬಗ್ಗೆ ಆಡಳಿತ ಮಂಡಳಿ ಕಳವಳ ವ್ಯಕ್ತ ಪಡಿಸಿದೆ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ, ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್ ಗೆ ww.srsmata.org ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ,

ಮನೆಯ ಹತ್ತಿರ ಬರ್ಬೇಡಿ-ಫ್ಯಾನ್ಸ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಮನವಿ!

ಬೆಂಗಳೂರು: ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಜು.2 ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ, ಈ ಬಾರಿ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಗಣೇಶ್ ಅವರೇ ವಿಷಾದದಿಂದ ಹೇಳಿಕೊಂಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಸಂದೇಶ ಹಂಚಿಕೊಂಡಿರುವ ಗಣೇಶ್, ಸಹಜವಾಗಿಯೇ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಿಮಿಸುವ ದಿನ, ಅದರೆ ಈ ಬಾರಿ ನಾನು ಪಿನಾಕ ಮತ್ತು Your Sincerly ರಾಮ್ ಸಿನಿಮಾಗಳ ಹೊರಾಂಗಣ ಚಿತ್ರದಲ್ಲಿ ಭಾಗವಹಿಸಬೇಕಿರುವುದರಿಂದ ಭೇಟಿಯಾಗಲು ಸಾಧ್ಯವಾಗುತ್ತಲ್ಲ ಎಂದಿದ್ದಾರೆ,

ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

ಮುಂಬೈ: ಮೊದಲ ಬಾರಿಗೆ ಭಾರತದ ಕೇಂದ್ರೀಯ ಬ್ಯಾಂಕ್ ಆರ್‌ಬಿಐ  ಸಾಕ್ಷ್ಯಚಿತ್ರವೊಂದನ್ನು ಹೊರತಂದಿದೆ. ಈ ಮೂಲಕ ತನ್ನ ಚಿನ್ನದ ಖಜಾನೆಯೊಂದನ್ನು ಅನಾವರಣಗೊಳಿಸಿದೆ, ಇಲ್ಲಿಯವರೆಗೆ ಸಾರ್ವಜನಿಕರಿಗೆ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ  ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗಗೊಳಿಸಿದೆ, ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ 5  ಭಾಗಗಳಲ್ಲಿ ಪ್ರಸಾರವಾಗುತ್ತಿರುವ `ಆರ್‌ಬಿಐ ಅನ್‌ಲಾಕ್ಡ್‌: ಬಿಯಾಂಡ್ ದ ರುಪಿ’ ಎಂಬ ಡಾಕ್ಯುಮೆಂಟರಿಯ ಮೂಲಕ ಆರ್‌ಬಿಐ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಸದ್ಯ 4 ಭಾಗಗಳು ರಿಲೀಸ್ ಆಗಿದ್ದು, ಇನ್ನೂ ಒಂದು ಭಾಗ ರಿಲೀಸ್ ಆಗಬೇಕಷ್ಟೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.

ಚಾಕ್‌ಬೋರ್ಡ್ ಎಂಟರ್‌ಟೇನ್‌ಮೆಂಟ್ (Chalkboard Entertainment) ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗಪಡಿಸಿದೆ.

ಸಾರ್ವಜನಿಕ ವಲಯ ಉದ್ಯಮಗಳನ್ನು ಆಂಧ್ರ ಕ್ಕೆ ಸ್ಥಳಾಂತರಿಸುವ ಕೇಂದ್ರದ ಕ್ರಮವನ್ನು ರಾಜ್ಯ ವಿರೋಧಿಸುತ್ತದೆ

ಸಾರ್ವಜನಿಕ ವಲಯ ಉದ್ಯಮಗಳನ್ನು(PSUs) ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವ ಕೇಂದ್ರದ ಕ್ರಮವನ್ನು ಕರ್ನಾಟಕ ವಿರೋಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಹೊರವಲಯ ಡಾಬಸ್ ಪೇಟೆಯಲ್ಲಿಂದು ಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್, ಕರ್ನಾಟಕದಿಂದ ಕೈಗಾರಿಕೆಗಳನ್ನು ಇತರ ರಾಜ್ಯಗಳಿಗೆ, ವಿಶೇಷವಾಗಿ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವ ಯಾವುದೇ ಕ್ರಮವನ್ನು ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ. ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ, ಕೇಂದ್ರವು ಅನೇಕ ಜನರ ಜೀವನದ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರದೊಂದಿಗೆ ಚರ್ಚಿಸಲು ಕೇಳಿಕೊಳ್ಳುವುದಾಗಿ ಹೇಳಿದ ಉಪ ಮುಖ್ಯಮಂತ್ರಿಗಳು, ಈ ಬಗ್ಗೆ ಮೂಲಭೂತ ವಾಸ್ತವಗಳ ಬಗ್ಗೆ ತಿಳಿದುಕೊಳ್ಳಲು ದೆಹಲಿಯಲ್ಲಿ ಸಂಪುಟ ಮಂತ್ರಿಗಳನ್ನು ನಿಯೋಗ ಭೇಟಿ ಮಾಡಲು ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ (ಏಂSSIಂ)ವನ್ನು ಕೇಳಿಕೊಂಡರು.
“ನಮ್ಮಲ್ಲಿ ಹಲವಾರು ಕೈಗಾರಿಕೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಅವರು ವಲಸೆ ಹೋಗಲು ಬಯಸುವುದಿಲ್ಲ. ಅನೇಕ ಉದ್ಯೋಗಿಗಳು ಗುತ್ತಿಗೆ ಆಧಾರದ ನೌಕರರಾಗಿದ್ದಾರೆ. ಅವರೆಲ್ಲರಿಗೂ ಸರ್ಕಾರ ಉದ್ಯೋಗ ಕೊಡಲು ಸಾಧ್ಯವಿಲ್ಲ. ತಾತ್ಕಾಲಿಕ ಉದ್ಯೋಗ ಎಂದು ಅವರು ವಲಸೆ ಹೋಗಬಾರದು, ಅದನ್ನು ನಾವು ತಪ್ಪಿಸಬೇಕು ಎಂದರು.
ಕರ್ನಾಟಕವು ಐಟಿ ವಲಯದಲ್ಲಿ ಹೂಡಿಕೆಗೆ ಮಾತ್ರವಲ್ಲದೆ ಕೈಗಾರಿಕೆಗಳಿಗೆ ಸಹ ಪ್ರಮುಖ ತಾಣವಾಗಿದೆ ಎಂದು ಬಲವಾದ ವಾದವನ್ನು ಮಂಡಿಸಿದ ಅವರು, ಕಾಂಗ್ರೆಸ್ ಸರ್ಕಾರದ ಹೂಡಿಕೆ ಸ್ನೇಹಿ ನೀತಿಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು. ಕರ್ನಾಟಕಕ್ಕೆ ಬರುವ ಕೈಗಾರಿಕೆಗಳಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಪ್ರಸ್ತುತ ಅಡಚಣೆಯಾಗಿರುವ ಸಂಚಾರ ದಟ್ಟಣೆಯನ್ನು ತಗ್ಗಿಸಲು ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಫ್ಲೈ ಓವರ್‍ಗಳು, ಡಬಲ್ ಡೆಕ್ಕರ್ ಮೆಟ್ರೋ ಮತ್ತು ಸರ್ಕಾರವು ಪರಿಗಣಿಸುತ್ತಿರುವ ಇತರ ಚಲನಶೀಲ ಯೋಜನೆಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಉಲ್ಲೇಖಿಸಿದರು.
ಕರ್ನಾಟಕದಲ್ಲಿ ಅತ್ಯುತ್ತಮ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳಿವೆ. ಮಹೀಂದ್ರಾ, ಜಿಂದಾಲ್ ಮೊದಲಾದ ಖ್ಯಾತ ಉದ್ಯಮಿಗಳು ಬೆಂಗಳೂರಿನಲ್ಲಿ ಅಧ್ಯಯನ ಮಾಡಿ ದೇಶಾದ್ಯಂತ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಕರ್ನಾಟಕದಲ್ಲಿ ಪ್ರತಿಭಾನ್ವಿತರ ಗುಂಪು ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಆಸ್ತಿಯಾಗಿದ್ದು, ಅಂಥವರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರದ ಸ್ಥಾಪನೆಯು ಕೈಗಾರಿಕೋದ್ಯಮದ ಶ್ಲಾಘನೀಯ ಉಪಕ್ರಮವಾಗಿದೆ. ರಾಜ್ಯ ಸರ್ಕಾರವು, ಕಾಸಿಯಾ ಕೇಂದ್ರಕ್ಕೆ ಬೆಂಬಲ ಒದಗಿಸುವುದು ಮಾತ್ರವಲ್ಲದೆ ಸಚಿವಾಲಯ ಸ್ಥಾಪಿಸಬೇಕೆಂಬ ಅದರ ಬೇಡಿಕೆಗೆ ಸಹ ಉತ್ತೇಜನ ನೀಡುತ್ತದೆ ಎಂದರು.
ಬ್ಯಾಂಕ್‍ಗಳು ಹೊಸಬರಿಗೆ ಮನ್ನಣೆ ಕೊಡಬೇಕು
ಬ್ಯಾಂಕಿಂಗ್ ವಲಯ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಹೊಸ ಉದ್ಯಮಿಗಳಿಗೆ ಬ್ಯಾಂಕುಗಳಿಂದ ಅಗತ್ಯವಾದ ಬೆಂಬಲ ಸಿಗುತ್ತಿಲ್ಲ, ಈಗ ಇರುವ ಉದ್ಯಮಿಗಳು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಸಾಲಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಹೊಸ ಉದ್ಯಮಿಗಳಿಗೆ ಸಹಾಯ ಮಾಡುವಂತೆ ಮತ್ತು ಸಾಲ ತೆಗೆದುಕೊಳ್ಳುವವರಿಗೆ ಮೇಲಾಧಾರ ನೀಡುವವರಿಗೆ ತೊಂದರೆ ನೀಡದಂತೆ ಅವರು ಬ್ಯಾಂಕುಗಳಿಗೆ ಕರೆ ನೀಡಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(ಒSಒಇ) ವಲಯವು ಸ್ಥಳೀಯ ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸುವಂತೆ ಒತ್ತಾಯಿಸಿದರು. ತರಬೇತಿ ಕೇಂದ್ರವು ಶೇಕಡಾ 100 ರಷ್ಟು ಉದ್ಯೋಗಾವಕಾಶವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಉತ್ಪನ್ನಗಳ ರಫ್ತಿಗೆ ಸಹಾಯ ಮಾಡಬೇಕು ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಭಾರತೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ಎಂಎಸ್‍ಎಂಇ ವಲಯದಲ್ಲಿ ತಂತ್ರಜ್ಞಾನಗಳು, ತರಬೇತಿ ಇತ್ಯಾದಿಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಸರ್ಕಾರ ಬೆಂಬಲಿಸುತ್ತದೆ ಎಂದು ಭರವಸೆ ನೀಡಿದರು.
ಕೆಎಎಸ್‍ಐಎ, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಅತಿಥಿಗಳನ್ನು ಸ್ವಾಗತಿಸಿದರು.

 ನಗರ ಹಸಿರಾಗಿರಿಸಲು ಇವಿ ಬೈಕ್ ರ್ಯಾಲಿ ಜೊತೆಗೆ ಸಸಿ ನೆಡುವ ಮೂಲಕ ಜಾಗೃತಿ

ಬೆಂಗಳೂರು, ಜೂ. 29: ನಗರವು ಹಸಿರುಮಯವಾಗಿರಬೇಕು, ಶುದ್ಧ ಗಾಳಿ ಸಿಗುವಂತೆ ಹಾಗೂ ನಗರವನ್ನು ಸುಸ್ಥಿರವಾಗಿಟ್ಟುಕೊಳ್ಳುವಲ್ಲಿ ನಾವೆಲ್ಲರೂ ಪಣ ತೊಡಬೇಕು ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸತೀಶ್‌ ರೆಡ್ಡಿ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ನಗರದಲ್ಲಿ ಹಸಿರೋತ್ಸವ ಫೋರಂ,  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್ ಸಹಯೋಗದೊಂದಿಗೆ “ಗೋ ಗ್ರೀನ್, ಗೋ ಇವಿ” (Go Green, Go EV) ಎಂಬ ವಿಷಯದಡಿಯಲ್ಲಿ ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ  ಹಾಗೂ 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ  ʼಹಸಿರು ಸಂಕಲ್ಪ 2025ʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ಪುರಾತನ ಗ್ರಾಮವೆಂದೇ ಹೆಸರಾಗಿರುವ ಹುಳಿಮಾವು ಕೆರೆ ಅನೇಕ ಕೆರೆಗಳಿಗೆ ಸಂಪರ್ಕ ಹೊಂದಿದೆ. ಕೆಂಪೇಗೌಡರ ಆಲೋಚನೆ ತುಂಬಾ ಚೆನ್ನಾಗಿತ್ತು, ಹಾಗಾಗಿ ಕೆರೆಗಳೇ ಬೆಂಗಳೂರಿಗೆ ಜೀವನಾಡಿಯಾಗಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೆರೆಗಳೇ ಇಲ್ಲದಿದ್ದರೆ ಬೆಂಗಳೂರಿನಲ್ಲಿ ನಾವಿಷ್ಟು ಸುಂದರ ಬದುಕನ್ನು ಕಾಣಲು ಸಾಧ್ಯವಿರಲಿಲ್ಲ. ಗಲ್ಫ್‌ ರಾಷ್ಟ್ರಗಳಲ್ಲಿ ಬರೀ ಮರಳುಗಾಡು ವಾತಾವರಣ ಇದೆ. ಈಗ ಅವರಿಗೆ ಪರಿಸರದ ಮಹತ್ವ ಅರ್ಥವಾಗಿದೆ.  ಆದ್ರೆ ನಾವು ಪರಿಸರದ ಮಧ್ಯೆಯೇ ಇರುವುದರಿಂದ ಪರಿಸರದ ಬಗೆಗೆ ಕೆಲವು ನಿರ್ಲಕ್ಷ್ಯ ತೋರುತ್ತಿದ್ದೇವೆ. ಹಾಗಾಗಿ ನಾವೆಲ್ಲ ಗಿಡ ಮರಗಳನ್ನು ಬೆಳೆಸೋಣ, ಕೆರೆ ಕಾಲುವೆಗಳನ್ನು ಉಳಿಸೋಣ. ಈ ನಿಟ್ಟಿನಲ್ಲಿ ಹುಳಿಮಾವು ಕೆರೆಗೆ 14 ಕೋಟಿ ಮೀಸಲಿಟ್ಟಿದ್ದೇವೆ ಹಾಗೆ ಉಳಿಮಾವು ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಸತೀಶ್‌ ರೆಡ್ಡಿ ಅವರು ತಿಳಿಸಿದರು.

ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಚೇರ್‌ಮೆನ್‌ ಎಸ್‌.ಇ ಸುಧೀಂದ್ರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದು ಅನೇಕ ರಾಜ್ಯದ ಜನರು ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ, ಅದಕ್ಕೆ ಮುಖ್ಯ ಕಾರಣ ಬೆಂಗಳೂರಿನ ಈ ಸುಂದರ ವಾತಾವರಣ. ಮುಂದಿನ ದಿನಗಳಲ್ಲಿಯೂ ಕೂಡ ಉತ್ತಮ ಪರಿಸರ ನಮ್ಮದಾಗಬೇಕು, ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡುವ ಅಗತ್ಯ ನಮ್ಮ ಮುಂದಿದೆ ಅದಕ್ಕಾಗಿ ನಾವೆಲ್ಲರೂ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಬಿ.ಆರ್.‌ ಬಾಲಗಂಗಾಧರ್‌ ಮಾತನಾಡಿ,
ವಾಹನಗಳ ಬಳಕೆ ಹೆಚ್ಚಾಗಿದೆ ಇದ್ರಿಂದ ವಾಯು ಮಾಲಿನ್ಯಗೊಳ್ಳುತ್ತಿದ್ದು, ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚಾಗ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇವಿ ಚಾಲಿತ ವಾಹನಗಳನ್ನು ನಾವು ಬಳಕೆ ಮಾಡುವುದು ಒಳಿತು. ಇದರಿಂದ ನಗರದಲ್ಲಿ ಆಮ್ಲಜನಕವು ಹೆಚ್ಚಾಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಅಭಿಯಾನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು  ಹೇಳಿದರು.

ಬೆಂಗಳೂರು ನಗರದಲ್ಲಿ ಎಲ್ಲಿಯಾದರೂ ಸಸಿ ನೆಡಲು ಸಹಾಯ ಬೇಕಿದ್ದಲ್ಲಿ 9916596396 ಗೆ ಕರೆ ಮಾಡಬಹುದು. ಹಸಿರೋತ್ಸವ ಫೋರಂ ನವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಸಿಗಳನ್ನು ನೆಡುವ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ ಎಂದು ಹಸಿರೋತ್ಸವ ಫೋರಂ ನ ನಿರ್ದೇಶಕರಾದ ಆರತಿ ಆರ್‌ ಹೇಳಿದರು.

ಇವಿ ಬೈಕ್‌ ರ್ಯಾಲಿಯಲ್ಲಿ 40ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಪಾಲ್ಗೊಂಡಿದ್ದವು, ಜೊತೆಗೆ ಹುಳಿಮಾವು ಕೆರೆಯಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಫೋರಂ ನ‌ ನಿರ್ದೇಶಕರಾದ ನೀತು ರೈನಾ, ಮಾಜಿ ಕಾರ್ಪೋರೇಟರ್‌ ಭಾಗ್ಯಲಕ್ಷ್ಮಿ ಮುರಳಿ, ಮಾಜಿ ಕಾರ್ಪೊರೇಟರ್‌ ಮುರಳಿ (ಅರಕೆರೆ ವಾರ್ಡ್‌), ಬೊಮ್ಮನಹಳ್ಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯಾದ ಅಶೋಕ್‌ ಕುಮಾರ್‌ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಬಿಬಿಎಂಪಿ, ಸ್ಪರ್ಶ್ ಫೌಂಡೇಶನ್, ಮೀಡಿಯಾ ಕನೆಕ್ಟ್, ಬಯೋಕಾನ್ ಬಯೋಲಾಜಿಕ್ಸ್, ನೆಕ್ಸಸ್ ವೇಗಾ ಸಿಟಿ ಮಾಲ್, ಫೋರಮ್ ಮಾಲ್, ಅಪೊಲೊ ಕ್ರೇಡಲ್ & ಚಿಲ್ಡ್ರನ್ ಹಾಸ್ಪಿಟಲ್ಸ್‌, ಈಜೋನ್ ಇವಿ ಬೈಕ್‌ಗಳು, ರೆಂಟೆಲೊ ಇವಿ ಬೈಕ್‌ಗಳು, ನೇಚರ್ ಕ್ರಾಫ್ಟ್ಸ್ ಎಸ್ಟೇಟ್ ಸ್ಟೇ ಮತ್ತು ಇತರರು ಕೈಜೋಡಿಸಿದ್ದರು

“ಶಿಕ್ಷಣ ಮತ್ತು ಕೈಗಾರಿಕೆ ವ್ಯವಸ್ಥೆಗಳು ಸೇರಿ ಯುವಜನತೆಗಾಗಿ ಜಾಗತಿಕ ವೇದಿಕೆ ಸಿದ್ಧಪಡಿಸಬೇಕು”: ರಾಜ್ಯಪಾಲರು

ಬೆಂಗಳೂರು 29.06.2025: ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕೈಗಾರಿಕೆಗಳು ಒಟ್ಟಾಗಿ ಸೇರಿ ಯುವಜನರನ್ನು ಜಾಗತಿಕ ವೇದಿಕೆಗೆ ಸಿದ್ಧಪಡಿಸುವ ಅವಶ್ಯಕತೆಯಿದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.

“ಬನ್ಸಾಲ್ & ಎಲ್‌ಎನ್‌ಸಿಟಿ ಗ್ರೂಪ್” ವತಿಯಿಂದ ಆಯೋಜಿಸಿದ್ದ ಪಂಖ್-2025 ಉದ್ಯಮ-ಶೈಕ್ಷಣಿಕ ಸಹಯೋಗದಲ್ಲಿ ಭಾರತ ನಿರ್ಮಾಣ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ” ಶಿಕ್ಷಣ ಮತ್ತು ಕೈಗಾರಿಕೆಗಳು ಎರಡು ಶಕ್ತಿಶಾಲಿ ಸ್ತಂಭಗಳಾಗಿವೆ. ಶಿಕ್ಷಣವು ಒಬ್ಬ ವ್ಯಕ್ತಿಗೆ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ನೀಡುವ ಪ್ರಕ್ರಿಯೆಯಾಗಿದೆ. ಕೈಗಾರಿಕೆಯು ಉತ್ಪಾದಕತೆ, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿರುವ ವಲಯವಾಗಿದೆ. ಈ ಎರಡೂ ವಲಯಗಳು ಒಂದಕ್ಕೊಂದು ಪೂರಕವಾದಾಗ, ಶಿಕ್ಷಣವು ಪ್ರಾಯೋಗಿಕವಾಗುತ್ತದೆ ಮತ್ತು ಉದ್ಯಮವು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಪಡೆಯುತ್ತದೆ.” ಎಂದರು.
” ಇಂದಿನ ಜಾಗತಿಕ ಕೆಲಸದ ಸಂಸ್ಕೃತಿಯು ಹಿಂದಿನ ಎಲ್ಲದಕ್ಕಿಂತ ಭಿನ್ನವಾಗಿದೆ. ಕೆಲಸದ ಸ್ಥಳದ ವಿನ್ಯಾಸ, ನಿರೀಕ್ಷೆಗಳು, ತಂತ್ರಜ್ಞಾನ ಬಳಕೆ ಮತ್ತು ತಂಡದ ಕೆಲಸದ ಸ್ವರೂಪವು ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. ಇಂದು, ಸಾಂಪ್ರದಾಯಿಕ ಜ್ಞಾನದ ಜೊತೆಗೆ, ಸೃಜನಶೀಲತೆ, ಡಿಜಿಟಲ್ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ, ತಂಡದ ಕೆಲಸ ಮತ್ತು ಅಂತರರಾಷ್ಟ್ರೀಯ ಸಹಯೋಗದ ಅಗತ್ಯ ಹೆಚ್ಚುತ್ತಿದೆ. ಮನೆಯಿಂದ ಕೆಲಸ, ದೂರಸ್ಥ ಉದ್ಯೋಗಗಳು, ಗಿಗ್ ಆರ್ಥಿಕತೆ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ದತ್ತಾಂಶ ವಿಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಿಷಯಗಳು ಉದ್ಯೋಗದ ದಿಕ್ಕನ್ನು ಮರು ವ್ಯಾಖ್ಯಾನಿಸುತ್ತಿವೆ. ಅಲ್ಲದೆ, ನೀತಿಶಾಸ್ತ್ರ, ಸಮಯ ನಿರ್ವಹಣೆ, ಬಹುಭಾಷಾ ಸಂವಹನ ಕೌಶಲ್ಯ ಮತ್ತು ಉದ್ಯಮಶೀಲತೆಯಂತಹ ಮಾನವೀಯ ಮೌಲ್ಯಗಳು ಸಹ ಅತ್ಯಗತ್ಯವಾಗಿವೆ” ಎಂದು ಅವರು ಹೇಳಿದರು.”ಇಂದಿಗೂ ಭಾರತದ ಹೆಚ್ಚಿನ ಜನಸಂಖ್ಯೆಯು ಉನ್ನತ ಶಿಕ್ಷಣವನ್ನು ಪಡೆಯುತ್ತಿದೆ. ಆದರೆ ಅವರಲ್ಲಿ ಅನೇಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ “ಕೌಶಲ್ಯ ಅಂತರ”. ಅಂದರೆ, ಅವರು ಅಧ್ಯಯನ ಮಾಡುತ್ತಿರುವ ವಿಷಯವು ಉದ್ಯಮದ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ನಾವು ಶಿಕ್ಷಣದ ಪ್ರಾಯೋಗಿಕೀಕರಣ, ಇಂಟರ್ನ್‌ಶಿಪ್‌ಗಳು, ಯೋಜನೆ ಆಧಾರಿತ ಕಲಿಕೆ ಮತ್ತು ಪಠ್ಯಕ್ರಮದಲ್ಲಿ ಸೈದ್ಧಾಂತಿಕ ಜ್ಞಾನದ ಜೊತೆಗೆ ಲೈವ್ ಕೇಸ್ ಸ್ಟಡೀಸ್‌ಗಳನ್ನು ಸೇರಿಸುವ ಬಗ್ಗೆ ಕೆಲಸ ಮಾಡಬೇಕು. ಕೈಗಾರಿಕೆ-ಸಂಸ್ಥೆಗಳ ಸಹಯೋಗಕ್ಕಾಗಿ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕೈಗಾರಿಕೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು, ಇದರಿಂದ ವಿದ್ಯಾರ್ಥಿಗಳು ನೇರ ಉದ್ಯಮ ಅನುಭವವನ್ನು ಪಡೆಯುತ್ತಾರೆ. ಅಧ್ಯಾಪಕರ ಅಭಿವೃದ್ಧಿಯ ದೃಷ್ಟಿಕೋನದಿಂದ, ಶಿಕ್ಷಕರಿಗೆ ಉದ್ಯಮದ ಹೊಸ ಪ್ರವೃತ್ತಿಗಳನ್ನು ಪರಿಚಯಿಸಲು ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು ಮತ್ತು ಕೈಗಾರಿಕಾ ತರಬೇತಿಯ ಅಗತ್ಯಕ್ಕೆ ಒತ್ತು ನೀಡಬೇಕು. ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳು ಅಲ್, ರೊಬೊಟಿಕ್ಸ್, ಐಒಟಿ, ಸೈಬರ್ ಭದ್ರತೆ, ಡೇಟಾ ಅನಾಲಿಟಿಕ್ಸ್, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಮಾನ್ಯ ಕೋರ್ಸ್‌ಗಳು, ಜಂಟಿ ಪ್ರಯೋಗಾಲಯಗಳು ಮತ್ತು ಕೌಶಲ್ಯ ಉದ್ಯಾನವನಗಳನ್ನು ಸ್ಥಾಪಿಸುವತ್ತ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

“ಭಾರತ ಸರ್ಕಾರವು ಈ ದಿಕ್ಕಿನಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ – “ಕೌಶಲ್ಯ ಭಾರತ ಮಿಷನ್”, “ಪಿಎಂಕೆವಿವೈ” ಮತ್ತು “ಭವಿಷ್ಯದ ಕೌಶಲ್ಯ ಕೇಂದ್ರಗಳು” ನಂತಹ ಯೋಜನೆಗಳು ಯುವಕರಿಗೆ ಹೊಸ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿವೆ. “ರಾಷ್ಟ್ರೀಯ ಶಿಕ್ಷಣ ನೀತಿ – 2020” ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ, ಇದು ಬಹು ಪ್ರವೇಶ-ನಿರ್ಗಮನ ವ್ಯವಸ್ಥೆ, ಕೌಶಲ್ಯ ಅಭಿವೃದ್ಧಿ ಮತ್ತು ಇಂಟರ್ನ್‌ಶಿಪ್ ಆಧಾರಿತ ಕಲಿಕೆಯನ್ನು ಉತ್ತೇಜಿಸುತ್ತದೆ. ಕಾರ್ಪೋರೇಟ್ ವಲಯದ ಕಂಪನಿಗಳು ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳೊಂದಿಗೆ ಜಂಟಿ ಕೋರ್ಸ್‌ಗಳನ್ನು ನಡೆಸುತ್ತಿವೆ. “IIT ಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳು”, “ದೆಹಲಿ ವಿಶ್ವವಿದ್ಯಾಲಯದಲ್ಲಿ ಉದ್ಯಮ ಪ್ರಾಯೋಜಿತ ಯೋಜನೆಗಳು” ಮತ್ತು “IIITS ನಲ್ಲಿ ಲೈವ್ ಪ್ರಾಜೆಕ್ಟ್ ಇಂಟರ್ನ್‌ಶಿಪ್” ನಂತಹ ಮಾದರಿಗಳು ಇತರ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಉದಾಹರಣೆಗಳಾಗಿರಬಹುದು” ಎಂದು ಹೇಳಿದರು.

“ಡ್ಯುಯಲ್ ಡಿಗ್ರಿ ಸಿಸ್ಟಮ್” ಮತ್ತು “ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್” ನಂತಹ ಜರ್ಮನಿ, ಸಿಂಗಾಪುರ ಮತ್ತು ಕೊರಿಯಾದ ಮಾದರಿಗಳನ್ನು ಭಾರತದಲ್ಲೂ ಅಳವಡಿಸಿಕೊಳ್ಳಬಹುದು. ಯುವಕರ ಸಾಮರ್ಥ್ಯವು ಭಾರತದ ಅತಿದೊಡ್ಡ ಆಸ್ತಿಯಾಗಿದೆ. ಅವರಿಗೆ ಸರಿಯಾದ ಮಾರ್ಗದರ್ಶನ, ವೃತ್ತಿಪರ ಕೌಶಲ್ಯ ಮತ್ತು ನಾವೀನ್ಯತೆಗಾಗಿ ಸ್ಫೂರ್ತಿ ಸಿಕ್ಕರೆ, ಅವರು ಉದ್ಯೋಗಾಕಾಂಕ್ಷಿಗಳಲ್ಲ, ಉದ್ಯೋಗ ಒದಗಿಸುವವರಾಗಬಹುದು. ಅವರು ಗ್ರಾಹಕರಾಗಲು ಮಾತ್ರವಲ್ಲ, ಉತ್ಪಾದಕರು ಮತ್ತು ರಫ್ತುದಾರರಾಗಲು ಸಾಧ್ಯವಾಗುತ್ತದೆ. ಅವರು ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರತಿನಿಧಿಸಬಹುದು” ಎಂದು ತಿಳಿಸಿದರು.

“ಬನ್ಸಾಲ್ ಗ್ರೂಪ್ ಮತ್ತು ಎಲ್‌ಎನ್‌ಸಿಟಿ ಗ್ರೂಪ್ ಈ ದಿಕ್ಕಿನಲ್ಲಿ ಗಮನಾರ್ಹ ಯೋಜನೆಯನ್ನು ಕೈಗೊಂಡಿವೆ. ಕೇವಲ ಬೋಧನೆಗೆ ಸೀಮಿತವಾಗಿರದೆ, ಅವರು ಕೈಗಾರಿಕೆಗಳೊಂದಿಗೆ ನಿಕಟ ಸಮನ್ವಯವನ್ನು ಸ್ಥಾಪಿಸಿದ್ದಾರೆ, ಇದರಿಂದಾಗಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮಾತ್ರವಲ್ಲದೆ ಘನ ಉದ್ಯೋಗಾವಕಾಶಗಳನ್ನು ಸಹ ಪಡೆಯುತ್ತಿದ್ದಾರೆ. ಈ ವೇದಿಕೆಯಲ್ಲಿ ಉಪಸ್ಥಿತರಿರುವ ಉದ್ಯಮ ಮತ್ತು ಕಾರ್ಪೊರೇಟ್ ಜಗತ್ತಿನ ಪ್ರತಿನಿಧಿಗಳು ಹಲವು ವರ್ಷಗಳಿಂದ ಕ್ಯಾಂಪಸ್ ಡ್ರೈವ್‌ಗಳು, ಇಂಟರ್ನ್‌ಶಿಪ್ ಕಾರ್ಯಕ್ರಮಗಳು, ಅತಿಥಿ ಉಪನ್ಯಾಸಗಳು ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದ ವಾಸ್ತವತೆಯನ್ನು ನಿರಂತರವಾಗಿ ಪರಿಚಯಿಸುತ್ತಿದ್ದಾರೆ. ಅವರ ಅಮೂಲ್ಯ ಬೆಂಬಲವಿಲ್ಲದಿದ್ದರೆ, ಈ ವಿಕಟ ಪ್ರಯತ್ನ ಅಪೂರ್ಣವಾಗಿ ಉಳಿಯುತ್ತಿತ್ತು. ಪಂಖ್ ನಂತಹ ವೇದಿಕೆಯು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಾಗಿ ಒಂದು ಚಳುವಳಿಯಾಗಿದೆ, ವಿದ್ಯಾರ್ಥಿಗಳಿಗೆ ರೆಕ್ಕೆಗಳನ್ನು ನೀಡಲು ಮತ್ತು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಲು” ಬಲವಾದ ನೆಲೆಯನ್ನು ಸೃಷ್ಟಿಸುವ ಚಳುವಳಿಯಾಗಿದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪಾರ್ಥ್ ಬನ್ಸಾಲ್, ಶ್ರೀ ಡಾ. ಅನುಪಮ್ ಚೌಕ್ಸೆ ಮುಂತಾದ ಗಣ್ಯರು ಉಪಸ್ಥಿತರಿದ್ದರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವೀಕ್ಷಿಸಿದ ಯಡಿಯೂರಪ್ಪ ಮತ್ತಿತರರು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಗೃಹ ಕಚೇರಿಯಲ್ಲಿ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತಿತರರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವೀಕ್ಷಿಸಿದರು. ಶಾಸಕ ಬಸವರಾಜ್ ಮತ್ತಿಮೂಡ್, ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸುಭಾμï ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.