RSS ಚಟುವಟಿಕೆಗಳನ್ನು ನಿಷೇಧಿಸುವ ಯತ್ನ ಖಂಡನೀಯ – ಹಿಂದೂ ಜನಜಾಗೃತಿ ಸಮಿತಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಟುವಟಿಕೆಗಳನ್ನು ನಿಷೇಧಿಸುವ ಯತ್ನ ಖಂಡನೀಯ – ಹಿಂದೂ ಜನಜಾಗೃತಿ ಸಮಿತಿ
ಹಿಂದೂ ಜನಜಾಗೃತಿ ಸಮಿತಿ (Hindu Jana Jagruthi Samithi) ಯು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಪ್ರಿಯಾಂಕ ಖರ್ಗೆ (Priyanka Kharge) ಯವರು ಮಾನ್ಯ ಮುಖ್ಯಮಂತ್ರಿಯವರಿಗೆ ಕಳುಹಿಸಿರುವ ಪತ್ರವನ್ನು ತೀವ್ರವಾಗಿ ಖಂಡಿಸುತ್ತದೆ. RSS ಸಂಘದ ಚಟುವಟಿಕೆಗಳನ್ನು ಸರ್ಕಾರಿ ಶಾಲೆ (Government Schools) ಗಳು, ಅನುದಾನಿತ ಶಾಲೆಗಳು, ಮೈದಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ನಿಷೇಧಿಸಬೇಕೆಂದು ಹೇಳಿರುವುದು ಸಂಪೂರ್ಣ ಖಂಡನೀಯವಾಗಿದೆ.
ಪ್ರತಿಷ್ಠಿತ ಸಂಸ್ಥೆಯಾಗಿರುವ RSS ದೇಶಾದ್ಯಂತ ವಿವಿಧ ಸ್ವಯಂಸೇವಕರ ಮೂಲಕ ಪ್ರಕೃತಿ ವಿಕೋಪ ಮತ್ತು ದುರಂತಗಳ ಸಂದರ್ಭದಲ್ಲಿ ಪ್ರಥಮವಾಗಿ ಸಹಾಯ ಕಾರ್ಯವನ್ನು ಮಾಡುತ್ತದೆ. ಇದನ್ನು ಪರಿಗಣಿಸಿ, 1963 ರಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು RSS ಗೆ ಗಣವೇಶಧಾರಿಗಳಾಗಿ ಭಾಗವಹಿಸಲು ಆಹ್ವಾನ ನೀಡಿದ್ದರು. ಹಾಗೆಯೇ, 2024 ರಲ್ಲಿ ಕೇಂದ್ರ ಸರ್ಕಾರವು RSS ಅನ್ನು ಸಾಮಾಜಿಕ ಸಂಘಟನೆ ಎಂದು ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಆಡಳಿತವು ಹಿಂದೆ ಹಾಕಿದ್ದ ನಿಷೇಧವನ್ನು ತೆಗೆದು, ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಬಹುದೆಂದು ಆದೇಶ ಹೊರಡಿಸಿದೆ. ಇಂತಹ ರಾಷ್ಟ್ರ ಪ್ರೇಮವನ್ನು ಬೆಳಸುವ ಸಂಘಟನೆಯ ಚಟುವಟಿಕೆಗಳನ್ನು ನಿಷೇಧ ಮಾಡುವುದು ಖಂಡನೀಯ
ವಾಸ್ತವದಲ್ಲಿ, ದೇಶದಲ್ಲಿ ವಿಭಜನೆ ಮತ್ತು ದ್ವೇಷ ಬಿತ್ತುವ ಕಾರ್ಯವನ್ನು ಕಾಂಗ್ರೆಸ್ ಪಕ್ಷವೇ ಮಾಡುತ್ತಿದೆ. ಕರ್ನಾಟಕದಲ್ಲಿ ಜಾತಿ ಸಮೀಕ್ಷೆಗಳನ್ನು ನಡೆಸಿ ಸಮಾಜವನ್ನು ವಿಭಜಿಸುವುದು, ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಕೀರ್ ನಾಯ್ಕ್ ಸೇರಿದಂತೆ PFI, SDPI ಮುಂತಾದ ವಿಭಜಕ ಶಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ, ಸಂಘದ ಚಟುವಟಿಕೆಯನ್ನು ನಿಷೇಧಿಸುವ ಯತ್ನವು ಹಿಂದೂ ಧರ್ಮವನ್ನು ನಿಷೇಧಿಸುವ ಷಡ್ಯಂತ್ರದ ಭಾಗವಾಗಿದೆ.
ಹಿಂದೂ ಜನಜಾಗೃತಿ ಸಮಿತಿ ಈ ನಿಷೇಧದ ಯತ್ನವನ್ನು ತೀವ್ರವಾಗಿ ಖಂಡಿಸುತ್ತದೆ.
ಶ್ರೀ ಮೋಹನ ಗೌಡ
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

Hot this week

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

Topics

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

Related Articles