ಬೆಂಗಳೂರು: ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ನವದೆಹಲಿ ವತಿಯಿಂದ ನೀಡಲಾಗುವ ‘ಸೆಂಟ್ರಲ್ ಸೆಕ್ಟರ್ ಸ್ಕೀಮ್ ಆಫ್ ಸ್ಕಾಲರ್‍ಶಿಪ್ಸ್ ಫಾರ್ ಕಾಲೇಜ್ ಅಂಡ್ ಯೂನಿವರ್ಸಿಟಿ ಸ್ಟೂಡೆಂಟ್ಸ್’ (Central Sector Scheme Of Scholarships For College And University Students) ಯೋಜನೆಯಡಿ 2026-27ನೇ ಸಾಲಿನ ಎಲ್ಲಾ ಹಂತದ ನವೀಕರಣ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಆರಂಭವಾಗಿದೆ.
ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್‍ಸೈಟ್ https:// scholarships.gov.in/Students ಮೂಲಕ 2026 ರ ಸೆಪ್ಟೆಂಬರ್ 30 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ರಾಜ್ಯದ ಎಲ್ಲಾ ಪದವಿ ಕಾಲೇಜುಗಳು ತಮ್ಮ ಹಂತದಲ್ಲಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಆಯಾ ಕಾಲೇಜುಗಳ ಇನ್‍ಸ್ಟಿಟ್ಯೂಟ್ ನೋಡಲ್ ಅಧಿಕಾರಿಗಳು (INO – L1 ಹಂತ) ನಿಗದಿತ ದಿನಾಂಕದೊಳಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಯಾವುದೇ ಅರ್ಜಿಗಳು ಪರಿಶೀಲನೆಯಾಗದೇ ಲಾಗಿನ್‍ನಲ್ಲಿ ಬಾಕಿ ಉಳಿಯದಂತೆ ಸೂಕ್ತ ಕ್ರಮ ವಹಿಸಬೇಕು.
ಅಲ್ಲದೆ, ರಾಜ್ಯ ನೋಡಲ್ ಅಧಿಕಾರಿಯಿಂದ ಬರುವ ಕರೆಗಳು, ಇ-ಮೇಲ್‍ಗಳು ಹಾಗೂ ಮಾರ್ಗದರ್ಶನಗಳಿಗೆ ತಕ್ಷಣ ಸ್ಪಂದಿಸಿ ಅರ್ಹ ವಿದ್ಯಾರ್ಥಿಗಳಿಗೆ ಸಹಕರಿಸಲು ಸೂಚಿಸಲಾಗಿದೆ.
ಪ್ರಸ್ತುತ ಶೈಕ್ಷಣಿಕ ಸಾಲಿನ ಹೊಸ ಅರ್ಜಿಗಳ ಸಲ್ಲಿಕೆಗೆ ಇದುವರೆಗೂ ದಿನಾಂಕ ನಿಗದಿಯಾಗಿಲ್ಲ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಗಾಗ್ಗೆ ಎನ್‍ಎಸ್‍ಪಿ ಪೋರ್ಟಲ್ (NSP Portal) ವೀಕ್ಷಿಸುವುದು.
ಹೆಚ್ಚಿನ ಮಾಹಿತಿಗೆ ಇ-ಮೇಲ್ ವಿಳಾಸ: mhrdscholarship302@
